Back

ⓘ ಸ್ಥಳ. ಭೂಗೋಳ ಶಾಸ್ತ್ರದಲ್ಲಿ ಸ್ಥಳ ಅಥವಾ ಜಾಗ ಪದಗಳನ್ನು ಭೂಮಿಯ ಮೇಲ್ಮೈ ಮೇಲಿನ ಅಥವಾ ಬೇರೆಡೆಯ ಒಂದು ಬಿಂದು ಅಥವಾ ಪ್ರದೇಶವನ್ನು ಗುರುತಿಸಲು ಬಳಸಲಾಗುತ್ತದೆ. ಸ್ಥಳ ಪದವು ಸಾಮಾನ್ಯವಾಗಿ ಹೆಚ್ಚಿ ..                                               

ಹಳೇಬೀಡು

ಹೊಯ್ಸಳರ ಕಾಲದಲ್ಲಿ ಈ ಪ್ರಾಂತ್ಯವು ದಟ್ಟವಾದ ಮಲೆನಾಡಾಗಿದ್ದು ಕಾಡಿನ ಉತ್ಪನ್ನಗಳು ಹೆಚ್ಚಾಗಿ ಬಳಕೆಯಲ್ಲಿತ್ತು. ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಮತ್ತು ಹುರುಳಿ, ರಾಗಿ ಮುಂತಾದ ಧಾನ್ಯಗಳನ್ನೂ ಬೆಳೆಯುತ್ತಿದ್ದರು. ಕೃಷ್ಯುತ್ಪನ್ನಗಳನ್ನು ಸ್ಥಳೀಯವಾಗಿಯೇ ವಿನಿಮಯ ಮಾಡಿಕೊಳ್ಳುತ್ತಿದ್ದುದರಿಂದ ಹಣಕ್ಕೆ ಹೆಚ್ಚಿನ ಆದ್ಯತೆ ದೊರೆತಿರಲಿಲ್ಲ. ಬಂಗಾರ ಮುಂತಾದ ಬೆಲೆಬಾಳುವ ವಸ್ತುಗಳ ಬಳಕೆಯೂ ಕಡಿಮೆಯೇ ಇದ್ದೀತೆಂದು ಹೇಳಬಹುದು. ಆದರೆ, ಒಡವೆಗಳ ರಚನಾ ಚಾತುರ್ಯ ಮತ್ತು ತಾಂತ್ರಿಕತೆಯು ಉನ್ನತಮಟ್ಟದಾಗಿತ್ತೆಂಬುದು ಹೊಯ್ಸಳರ ಶಿಲ್ಪಕಲೆಯಿಂದಲೇ ತಿಳಿದುಬರುತ್ತದೆ. ಹೊಯ್ಸಳರ ಕಾಲದ ನಾಣ್ಯಗಳು ಹೆಚ್ಚು ದೊರೆತಿಲ್ಲವಾದರೂ ಸಿಕ್ಕಿರುವ ಕೆಲವಷ್ಟನ್ನು ಇಲ್ಲಿಯ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದೆ. ಇಂದು ಈ ಪ್ರಾಂತ್ಯವು ಅರೆಮಲೆನ ...

                                               

ಕುಣಿಗಲ್

ಈ ಪಟ್ಟಣದ ಅಕ್ಷಾಂಶ 13° 01′ 32″ ಹಾಗೂ ರೇಖಾಂಶ 77° 01′ 31″. ಹಳೆಯ ರಾಷ್ಟ್ರೀಯ ಹೆದ್ದಾರಿಯ ಕಿಮೀ 72 ರಲ್ಲಿ ಸ್ಥಿತಿಗೊಂಡಿರುವ ಈ ಪಟ್ಟಣವು ಬಿತ್ತನೆ ರೇಷ್ಮೆ ಗೂಡುಗಳ ಮಾರುಕಟ್ಟೆಗೆ ಪ್ರಖ್ಯಾತಿಯಾಗಿದೆ. ಕುಣಿಗಲ್ ತಾಲ್ಲೂಕಿನ ಇತಿಹಾಸವನ್ನು ಗಮನಿಸಿದಾಗ ಶಿಲಾಯುಗದ ನೆಲೆಗಳನ್ನು ಸಹ ನಾವು ಕಾಣಬಹುದಾಗಿದೆ.ಹುಲಿಯೂರುದುರ್ಗದ ಹೇಮಗಿರಿ ತಪ್ಪಲು, ತಿಪ್ಪಸಂದ್ರಗಳಲ್ಲಿ ಶಿಲಾಯುಗದ ಅವಶೇಷಗಳು ಕಾಣಬರುತ್ತವೆ. ಕುಣಿಗಲ್ ತಾಲೋಕಿನ ಹೊಡಾಘಟ್ಟ ಗ್ರಾಮದಲ್ಲಿ ಹೊಯ್ಸಳರ ಶಾಸನವಿದೆ ಅವುಗಳನ್ನು ಓದುವ,ಸಂರಕ್ಷಿಸುವ,ಉತ್ಕಲನದ ಕೆಲಸ ನಡೆಯ ಬೇಕಿದೆ. ಗಂಗರು, ಕದಂಬರ ಆಳ್ವಿಕೆಗೂ ಸೇರಿರಬಹುದಾದ ಸಾಧ್ಯತೆಯನ್ನು ಎಸ್.ಶ್ರೀಕಂಠಶಾಸ್ತ್ರಿಯವರು ದಾಖಲಿಸಿದ್ದಾರೆ. ನಮಗೆ ನೇರವಾಗಿ ಆಳಿದ ಬಗ್ಗೆ ನಿಖರ ದಾಖಲೆಗಳು ಕಂಡುಬರುವುದು ಗಂಗರ ಕಾಲದಿಂದ. ಗಂಗವಾಡಿ ೯೬೦ ...

                                               

ಬ್ರಹ್ಮಗಿರಿ ಪುರಾತತ್ವ ಸ್ಥಳ

ಬ್ರಹ್ಮಗಿರಿ ಭಾರತದ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಪುರಾತತ್ವ ಸ್ಥಳವಾಗಿದೆ. ಪುರಾಣದ ಪ್ರಕಾರ ಇದು ಗೌತಮ ಮಹರ್ಷಿಯನ್ನು ಮತ್ತು ಅವರ ಹೆಂಡತಿ ಅಹಲ್ಯ ವಾಸಿಸುತ್ತಿದ್ದ ಸ್ಥಳವಾಗಿದೆ.ಅವರು ಏಳು ಪ್ರಸಿದ್ಧ ಹಿಂದೂ ಸಂತರು ದಲ್ಲಿ ಒಬ್ಬರಾಗಿದ್ದರು.ಈ ಸ್ಥಳ ಮೊದಲು 1891 ರಲ್ಲಿ ಬೆಂಜಮಿನ್ ಎಲ್ ರೈಸ್ ಅವರಿಂದ ಪರಿಶೋಧಿಸಲ್ಪಟ್ಟಿತು, ಅವರು ಚಕ್ರವರ್ತಿ ಅಶೋಕನ ಶಿಲಾ ಶಾಸನಗಳನ್ನು ಇಲ್ಲಿ ಕಂಡುಹಿಡಿದರು.ಈ ರಾಕ್ ಶಾಸನಗಳು ಈ ಪ್ರದೇಶವನ್ನು ಐಸಿಲಾ ಎಂದು ಕರೆಯಲಾಗುತ್ತಿತ್ತು ಮತ್ತು ಮೌರ್ಯ ಸಾಮ್ರಾಜ್ಯದ ದಕ್ಷಿಣದ ವ್ಯಾಪ್ತಿಯನ್ನು ಸೂಚಿಸಿವೆ ಎಂದು ಸೂಚಿಸುತ್ತದೆ. ಬ್ರಹ್ಮಗಿರಿ ಪ್ರದೇಶವು 180 ಮೀಟರ್ ಎತ್ತರದ ಗ್ರಾನೈಟ್ ಹೊರನಾಡು. ಸುಮಾರು ಸುತ್ತಮುತ್ತಲಿನ ಬಯಲು ಮತ್ತು 500 ಮೀಟರ್ ಪೂರ್ವ-ಪಶ್ಚಿಮ ಮತ್ತು 100 ಮೀ ಉತ್ತರ-ದಕ್ಷಿಣಕ್ಕೆ ಕಂಡುಬ ...

                                               

ಹೆಸರು

ಹೆಸರು, ಸಾಮಾನ್ಯವಾಗಿ ಒಂದನ್ನು ಮತ್ತೊಂದರಿಂದ ಭೇದ ಮಾಡಲು ಬಳಸಲಾಗುವ, ಒಂದು ನಾಮಪದಕ್ಕೆ ಕೊಡುವ ಶೀರ್ಷಿಕೆ. ಹೆಸರುಗಳು ಪದಾರ್ಥಗಳ ಒಂದು ತರಗತಿ ಅಥವಾ ವರ್ಗ, ಅಥವಾ ಒಂದು ಒಂrameshಟಿ ವಸ್ತುವನ್ನು, ಅದ್ವಿತೀಯವಾಗಿ ಅಥವಾ ಒಂದು ನಿಶ್ಚಿತ ಪ್ರಸಂಗದಲ್ಲಿ ಗುರುತಿಸಬಲ್ಲವು. ವೈಯಕ್ತಿಕ ಹೆಸರು ಒಬ್ಬ ನಿರ್ದಿಷ್ಟ ಅದ್ವಿತೀಯ ಮತ್ತು ಗುರುತುಹಿಡಿಯಬಲ್ಲ ವಿವಿಕ್ತ ವ್ಯಕ್ತಿಯನ್ನು ಗುರುತಿಸುತ್ತದೆ.

                                               

ತೀರ್ಥಹಳ್ಳಿ

{{#if:| ತೀರ್ಥಹಳ್ಳಿ - ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳಲ್ಲಿ ಒಂದು ಹಾಗೂ ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ. ಶಿವಮೊಗ್ಗ ಜಿಲ್ಲೆಯ ನೈಋತ್ಯ ತುದಿಯಲ್ಲಿದೆ ತೀರ್ಥಹಳ್ಳಿ, ಅಗ್ರಹಾರ, ಆಗುಂಬೆ, ಮುತ್ತೂರು, ಮಂಡಗದ್ದೆ ಇವು ತಾಲ್ಲೂಕಿನ ಹೋಬಳಿಗಳು. ತಾಲ್ಲೂಕಿನಲ್ಲಿ ಒಟ್ಟು 247 ಗ್ರಾಮಗಳಿವೆ. 1.247 ಚ.ಕಿಮೀ. ಜನಸಂಖ್ಯೆ 1.43.209 2001. ತುಂಗಾ ನದಿಯ ತೀರದಲ್ಲಿರುವ ತೀರ್ಥಹಳ್ಳಿ ಪಟ್ಟಣವು ಶಿವಮೊಗ್ಗದಿಂದ ೬೧ ಕಿಮಿ ದೂರದಲ್ಲಿದೆ. ಸಂಪೂರ್ಣವಾಗಿ ಮಲೆನಾಡಿನ ಮಡಿಲಿನಲ್ಲಿರುವ ತೀರ್ಥಹಳ್ಳಿ ತಾಲೂಕು ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದು ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಸಹ್ಯಾದ್ರಿಯ ನಿತ್ಯಹರಿದ್ವರ್ಣ ದಟ್ಟ ಕಾಡು ಇದೆ. ಅಡಿಕೆ ಇಲ್ಲಿನ ಮುಖ್ಯ ಬೆಳೆಗಳಲ್ಲೊಂದು. ಅಡಿಕೆ ತೋಟಗಳಲ್ಲಿ ಉಪಬ ...

                                               

ಮಲ್ಪೆ

ಸುಪ್ರಸಿದ್ದ ಧಾರ್ಮಿಕ ಕ್ಷೇತ್ರ ಉಡುಪಿಯಿಂದ ಕೇವಲ ೬ ಕಿ.ಮೀ ದೂರದಲ್ಲಿರುವ ಒಂದು ಸುಂದರ ಸಮುದ್ರ ತೀರದ ಪಟ್ಟಣ ಮಲ್ಪೆ. ಇದುವೇ ನೈಸರ್ಗಿಕ ಬಂದರು ಹಾಗೂ ಕರ್ನಾಟಕದ ಕರಾವಳಿಯ ಪ್ರಮುಖ ಮತ್ಸ್ಯ ಕೈಗಾರಿಕಾ ತಾಣ. ಅಲ್ಲದೆ ಇದು ಉದ್ಯಾವರ ನದಿಯ ದಂಡೆಯ ಮೇಲೆ ಇರುವುದರಿಂದ ಇದು ಬೆರಗುಗೊಳಿಸುವಷ್ಟು ಸುಂದರವಾದ ಪ್ರವಾಸಿ ಸ್ಥಳ

                                     

ⓘ ಸ್ಥಳ

ಭೂಗೋಳ ಶಾಸ್ತ್ರದಲ್ಲಿ ಸ್ಥಳ ಅಥವಾ ಜಾಗ ಪದಗಳನ್ನು ಭೂಮಿಯ ಮೇಲ್ಮೈ ಮೇಲಿನ ಅಥವಾ ಬೇರೆಡೆಯ ಒಂದು ಬಿಂದು ಅಥವಾ ಪ್ರದೇಶವನ್ನು ಗುರುತಿಸಲು ಬಳಸಲಾಗುತ್ತದೆ. ಸ್ಥಳ ಪದವು ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ನಿಶ್ಚಿತತೆಯನ್ನು ಸೂಚಿಸುತ್ತದೆ. ಹಲವುವೇಳೆ ಜಾಗ ಪದವು ಅಸ್ಪಷ್ಟ ಗಡಿರೇಖೆಯಿರುವ ಘಟಕವನ್ನು ಸೂಚಿಸುತ್ತದೆ ಮತ್ತು ಜ್ಯಾಮಿತಿಗಿಂತ ಹೆಚ್ಚಾಗಿ ಸ್ಥಳ ಗುರುತು ಮತ್ತು ಸ್ಥಳಭಾವದ ಮಾನವ ಅಥವಾ ಸಾಮಾಜಿಕ ಲಕ್ಷಣಗಳ ಮೇಲೆ ಅವಲಂಬಿಸುತ್ತದೆ.

ಸಾಪೇಕ್ಷ ಸ್ಥಳವನ್ನು ಮತ್ತೊಂದು ಸ್ಥಾನದಿಂದ ಸ್ಥಳಾಂತರ ಎಂದು ವಿವರಿಸಲಾಗುತ್ತದೆ. ಒಂದು ಉದಾಹರಣೆ ಎಂದರೆ "ಸಿಯಾಟಲ್‍ನಿಂದ ೩ ಮೈಲಿ ವಾಯವ್ಯಕ್ಕೆ". ಒಂದು ಸ್ಥಳ, ವಾಸಸ್ಥಳ, ಅಥವಾ ಜನರಿರುವ ಪ್ರದೇಶವು ಸುನಿರ್ದಿಷ್ಟ ಹೆಸರನ್ನು ಹೊಂದಿರುವ ಸಾಧ್ಯತೆ ಇರುತ್ತದೆ ಆದರೆ ಸುನಿರ್ದಿಷ್ಟವಲ್ಲದ ಗಡಿಯು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ. ಉದಾಹರಣೆಗೆ, ಲಂಡನ್ ಒಂದು ಕಾನೂನುಬದ್ಧ ಗಡಿಯನ್ನು ಹೊಂದಿದೆ, ಆದರೆ ಇದು ಸಾಮಾನ್ಯ ಬಳಕೆಯೊಂದಿಗೆ ಸಂಪೂರ್ಣವಾಗಿ ಹೊಂದುವ ಸಾಧ್ಯತೆಯಿರುವುದಿಲ್ಲ. ಒಂದು ಪಟ್ಟದೊಳಗಿನ ಒಂದು ಪ್ರದೇಶ, ಉದಾಹರಣೆಗೆ ಲಂಡನ್‍ನಲ್ಲಿ ಕೋವೆಂಟ್ ಗಾರ್ಡನ್ ಕೂಡ ಅದರ ವಿಸ್ತಾರದ ಸಂಬಂಧ, ಬಹುತೇಕ ಯಾವಾಗಲೂ ಸ್ವಲ್ಪ ಅಸ್ಪಷ್ಟತೆಯನ್ನು ಹೊಂದಿರುತ್ತದೆ. ನಿರ್ದಿಷ್ಟ ಸ್ಥಳವನ್ನು ಕಾರ್ಟೇಸಿಯನ್ ನಿರ್ದೇಶಾಂಕ ವ್ಯವಸ್ಥೆಯಲ್ಲಿ ಅಕ್ಷಾಂಶ ಮತ್ತು ರೇಖಾಂಶದ ನಿರ್ದಿಷ್ಟ ಜೋಡಿಯನ್ನು ಬಳಸಿ ಹೆಸರಿಸಲಾಗುತ್ತದೆ - ಉದಾಹರಣೆಗೆ, ಗೋಳಾಕಾರದ ನಿರ್ದೇಶಾಂಕ ವ್ಯವಸ್ಥೆ ಅಥವಾ ಅಂಡಾಭ ಆಧಾರಿತ ವ್ಯವಸ್ಥೆಯಲ್ಲಿ. ಉದಾಹರಣೆಗೆ, ವೆನೆಜ಼ುಯೇಲಾದಲ್ಲಿನ ಮಾರಾಕಾಯ್ಬೊ ಸರೋವರದ ಸ್ಥಾನವನ್ನು ಸರಿಸುಮಾರಾಗಿ 9.80°N ಅಕ್ಷಾಂಶ, 71.56°W ರೇಖಾಂಶ ಸ್ಥಳ ಎಂದು ವ್ಯಕ್ತಪಡಿಸಬಹುದು. ಆದರೆ, ಇದು ಕೇವಲ ಒಂದು ರೀತಿಯಾಗಿದೆ. ಪರ್ಯಾಯ ರೀತಿಗಳೂ ಇವೆ ಉದಾಹರಣಗೆ ಜಿಯೊ ಹ್ಯಾಕ್.

ಆದರೆ ನಿರ್ದಿಷ್ಟ ಸ್ಥಳವು ಬಹಳ ಸ್ವಲ್ಪವೇ ನೈಜ ಅರ್ಥದ ಪದವಾಗಿದೆ, ಏಕೆಂದರೆ ಯಾವುದೇ ಸ್ಥಳವನ್ನು ಬೇರೆ ಯಾವುದಕ್ಕಾದರೂ ಸಾಪೇಕ್ಷವಾಗಿ ವ್ಯಕ್ತಪಡಿಸಬೇಕಾಗುತ್ತದೆ. ಉದಾಹರಣೆಗೆ, ರೇಖಾಂಶವೆಂದರೆ ಪ್ರಧಾನ ಮಧ್ಯಾಹ್ನ ರೇಖೆಯ ಪೂರ್ವದ ಅಥವಾ ಪಶ್ಚಿಮದ ಕೋನಮಾನಗಳ ಸಂಖ್ಯೆಯಾಗಿದೆ. ಪ್ರಧಾನ ಮಧ್ಯಾಹ್ನರೇಖೆಯು ಗ್ರೀನ್‍ವಿಚ್, ಲಂಡನ್ ಮೂಲಕ ಸಾಗಲು ಯಾದೃಚ್ಛಿಕವಾಗಿ ಆರಿಸಲಾಗುವ ಒಂದು ರೇಖೆ. ಹಾಗೆಯೇ, ಅಕ್ಷಾಂಶವೆಂದರೆ ಸಮಭಾಜಕ ರೇಖೆಯ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಇರುವ ಕೋನಮಾನಗಳ ಸಂಖ್ಯೆಯಾಗಿದೆ. ಅಕ್ಷಾಂಶ ಮತ್ತು ರೇಖಾಂಶಗಳನ್ನು ಈ ರೇಖೆಗಳಿಗೆ ಸಾಪೇಕ್ಷವಾಗಿ ವ್ಯಕ್ತಪಡಿಸಲಾಗುವುದರಿಂದ, ಅಕ್ಷಾಂಶ ಮತ್ತು ರೇಖಾಂಶದಲ್ಲಿ ವ್ಯಕ್ತಪಡಿಸಲಾಗುವ ಸ್ಥಳವು ವಾಸ್ತವವಾಗಿ ಒಂದು ಸಾಪೇಕ್ಷ ಸ್ಥಳವಾಗಿದೆ.

ಕುರುಕ್ಷೇತ್ರ ಯುದ್ಧ
                                               

ಕುರುಕ್ಷೇತ್ರ ಯುದ್ಧ

ಭಾರತೀಯ ಮಹಾಕಾವ್ಯ ಮಹಾಭಾರತದ ಪ್ರಕಾರ ಕುರುಕ್ಷೇತ್ರ ಯುದ್ಧ ವು ಕುರು ಎಂದು ಕರೆಯಲಾದ ಒಂದು ಇಂಡೊ-ಆರ್ಯನ್ ರಾಜ್ಯದ ಸೋದರಸಂಬಂಧಿಗಳ ಎರಡು ಗುಂಪುಗಳು ಅಂದರೆ ಕೌರವರು ಹಾಗು ಪಾಂಡವರ ನಡುವೆ ಹಸ್ತಿನಾಪುರದ ಸಿಂಹಾಸನಕ್ಕಾಗಿ ರಾಜವಂಶೀಯ ಉತ್ತರಾಧಿಕಾರ ಹೋರಾಟದಿಂದ ಹುಟ್ಟಿಕೊಂಡ ಒಂದು ಸಂಘರ್ಷವಾಗಿತ್ತು. ಅದು ಪ್ರತಿಸ್ಪರ್ಧಿ ಗುಂಪುಗಳ ಮೈತ್ರಿಕೂಟಗಳಾಗಿ ಭಾಗವಹಿಸಿದ ಅನೇಕ ಪ್ರಾಚೀನ ರಾಜ್ಯಗಳನ್ನು ಒಳಗೊಂಡಿತ್ತು. ಯುದ್ಧದ ಸ್ಥಳ ಭಾರತದ ಆಧುನಿಕ ರಾಜ್ಯ ಹರಿಯಾಣಾದ ಕುರುಕ್ಷೇತ್ರವಾಗಿತ್ತು.

                                               

ಗೇರಸೊಪ್ಪಾ

ಗೇರಸೊಪ್ಪಾ ಒಂದು ಐತಿಹಾಸಿಕ ಹಿನ್ನೆಲೆ ಹೊಂದಿರುವ ಸ್ಥಳ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿಗೆ ಸೇರಿದ ಒಂದು ಗ್ರಾಮ. ಹೊನ್ನಾವರದಿಂದ ೩೨ ಕಿಲೋ ಮೀಟರ ಜೋಗದ ಮಾರ್ಗವಾಗಿ ಚಲಿಸಿದರೆ ಗೇರುಸೊಪ್ಪಾ ಸಿಗುತ್ತದೆ. ಅಲ್ಲಿಂದ ಶರಾವತಿ ವಿದ್ಯುದ್ಗಾರದಿಂದ ೬ ಕಿಲೊ ಮೀಟರ್ ಕಾಡುದಾರಿಯಲ್ಲಿ ಚಲಿಸಿದರೆ ನಿರ್ಸಗದ ಮಡಿಲಲ್ಲಿ ಚತುರ್ಮುಖ ಬಸದಿ ಸಿಗುತ್ತದೆ. ಇದೊಂದು ಐತಿಹಾಸಿಕ ಹಾಗೂ ಪ್ರೇಕ್ಷಣಿಯ ಸ್ಥಳವಾಗಿದೆ.

ರೇವು
                                               

ರೇವು

ರೇವು ಹಡಗುಗಳು ಬಂದುಹೋಗಬಹುದಾದಂಥ ಮತ್ತು ಜನ ಅಥವಾ ಸರಕನ್ನು ನೆಲಕ್ಕೆ ಅಥವಾ ನೆಲದಿಂದ ವರ್ಗಾಯಿಸಬಹುದಾದಂಥ ಒಂದು ಅಥವಾ ಹೆಚ್ಚು ಬಂದರುಗಳನ್ನು ಹೊಂದಿರುವ ತೀರ ಅಥವಾ ಕಿನಾರೆಯ ಮೇಲಿನ ಸ್ಥಳ. ರೇವು ನೆಲೆಗಳನ್ನು ಭೂಮಿ ಮತ್ತು ನೌಕಾಸಂಚಾರ ಯೋಗ್ಯ ನೀರಿಗೆ ಪ್ರವೇಶವನ್ನು ಉತ್ತಮಗೊಳಿಸುವಂತೆ, ವಾಣಿಜ್ಯ ಬೇಡಿಕೆಗಾಗಿ, ಮತ್ತು ಗಾಳಿ ಹಾಗು ಅಲೆಗಳಿಂದ ಆಶ್ರಯಕ್ಕಾಗಿ ಆಯ್ಕೆಮಾಡಲಾಗುತ್ತದೆ. ಹೆಚ್ಚು ಆಳವಾದ ನೀರಿರುವ ರೇವುಗಳು ವಿರಳ, ಆದರೆ ಅಂಥವು ಹೆಚ್ಚು ದೊಡ್ಡ, ಹೆಚ್ಚು ಮಿತವ್ಯಯಕರ ಹಡಗುಗಳನ್ನು ನಿರ್ವಹಿಸಬಹುದು.

ಶಾವರ್
                                               

ಶಾವರ್

ಶಾವರ್ ಒಬ್ಬ ವ್ಯಕ್ತಿಯು ನೀರಿನ ಸೀರ್ಪನಿಯ ಕೆಳಗೆ ಸ್ನಾನಮಾಡುವ ಒಂದು ಸ್ಥಳ. ಆಮೇಲೆ ನೀರನ್ನು ಶಾವರ್ ತಳಹದಿಯಲ್ಲಿರುವ ಮೋರಿಯ ಮೂಲಕ ಹೊರಹಾಕಲಾಗುತ್ತದೆ. ಆಧುನಿಕ ಶಾವರ್ ಸಂರಚಿಸಬಲ್ಲ ಉಷ್ಣಾಂಶ ಮತ್ತು ಸೀರ್ಪನಿ ಒತ್ತಡ ನಿಯಂತ್ರಕ, ಜೊತೆಗೆ ಹೊಂದಿಸಬಲ್ಲ ಶಾವರ್‍ಶಿರ ಅಂಜುಳಿ ನಿಯಂತ್ರಕದೊಂದಿಗೆ ಬರುತ್ತದೆ.

                                               

ಜಾಲ್ಸೂರು-ಸುಬ್ರಹ್ಮಣ್ಯ

ಜಾಲ್ಸೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯು ಕೇರಳ ರಾಜ್ಯದ ಕಾಸರಗೋಡು ಮತ್ತು ಕರ್ನಾಟಕ ರಾಜ್ಯದ ಸುಳ್ಯ ತಾಲೂಕನ್ನು ಬೆಸೆಯುತ್ತದೆ. ಇದು ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯವನ್ನು ಪಂಜಿಕಲ್ಲು-ಜಾಲ್ಸೂರು-ಸೋಣಂಗೇರಿ-ದೊಡ್ಡತೋಟ-ಎಲಿಮಲೆ-ಗುತ್ತಿಗಾರಿನ ಮೂಲಕ ಸಂಪರ್ಕಿಸುತ್ತದೆ.

ಹಿರೇಕೊಳಲೆ ಕೆರೆ
                                               

ಹಿರೇಕೊಳಲೆ ಕೆರೆ

ಹಿರೇಕೊಳಲೆ ಕೆರೆ ಯು ಚಿಕ್ಕಮಗಳೂರಿನಿಂದ ಸುಮಾರು ೮ ಕಿ.ಮೀ ದೂರವಿರುವ ಒಂದು ಕೆರೆ ಹಾಗು ಒಂದು ಸುಂದರವಾದ ಪ್ರವಾಸಿ ಸ್ಥಳ. ಈ ಕೆರೆಯಿಂದ ಮೊದಲು ಚಿಕ್ಕಮಗಳೂರಿಗೆ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಈ ಕೆರೆಯು ಸುತ್ತ ಮುತ್ತ ದಟ್ಟವಾದ ಕಾಡು, ಕಾಫಿ ತೋಟ, ಬೆಟ್ಟ-ಗುಡ್ಡಗಳಿಂದ ಸುತ್ತುವರೆದಿದೆ. ಇಲ್ಲಿಂದ ಮುಳ್ಳಯ್ಯನಗಿರಿ ಬೆಟ್ಟದ ನೋಟ ಬಹು ಸುಂದರ ಹಾಗು ಸೂರ್ಯಾಸ್ಥ ವೀಕ್ಷಣೆಗೆ ಹೇಳಿ ಮಾಡಿಸಿದ ಜಾಗ. ಪ್ರಕೃತಿ ಪ್ರಿಯರಿಗಂತೂ ಅಚ್ಚು ಮೆಚ್ಚಿನ ತಾಣ.

                                               

ಅಂಗಳದಲ್ಲಿನ ವರ್ಗಾವಣೆ

ಸ್ಥಳದಲ್ಲಿಯೆ ಖರೀದಿಮಾಡುವವನಿಗೇ ನೇರವಾಗಿ ಪದಾರ್ಥಗಳನ್ನು ಒದಗಿಸುವುದು. ಸಾಕ್ಷಾತ್ ಮಾರುಕಟ್ಟೆಯಲ್ಲಿಯೇ ನಡೆಯುವ ಸ್ಥಳ ವ್ಯವಹಾರಗಳಲ್ಲಿ ಮಾತ್ರ ಈ ರೀತಿಯ ವರ್ಗಾವಣೆ ನಡೆಯುತ್ತದೆ. ನಿರ್ದಿಷ್ಟ ವಸ್ತುವಿನ ನಿರ್ದಿಷ್ಟ ಪ್ರಮಾಣಕ್ಕೆ ಮಾತ್ರ ವರ್ಗಾವಣೆಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ಇದು ಉತ್ಪಾದಕರ ಮತ್ತು ಸರಕು ವ್ಯಾಪಾರಿಗಳ ಆ ಕ್ಷಣದ ಅಗತ್ಯಗಳನ್ನು ಪುರೈಸುತ್ತದೆ. ಇಂಥ ವರ್ಗಾವಣೆಗಳು ಹೆಚ್ಚುತ್ತಿರುವುದು ಸ್ಥಳಪೇಟೆಯ ಬೆಳೆವಣಿಗೆಯನ್ನೇ ಅಲ್ಲದೆ ಮುಂಮಾರಿಕೆ ಪೇಟೆಯ ಪ್ರಗತಿಯನ್ನೂ ಸೂಚಿಸುತ್ತದೆ.

                                               

ಅಂಬಿಕಾನಗರ

ಅಂಬಿಕಾನಗರ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನಲ್ಲಿ ನಿರ್ಮಿತವಾದ ಒಂದು ಪಟ್ಟಣ.ದಾಂಡೇಲಿಯಿಂದ ೧೬ ಕಿ.ಮೀ.ದೂರದಲ್ಲಿದೆ. ಕರ್ನಾಟಕ ವಿದ್ಯುತ್ ನಿಗಮದಿಂದಲೇ ಮೊದಲಿಗೆ ಅಮಗಾ ಜಮಗಾ ಹಳ್ಳಿಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಈ ಸ್ಥಳ ಇಂದು ಬೆಳೆಯುತ್ತಿರುವ ಒಂದು ಪಟ್ಟಣವಾಗಿದೆ. ಇಲ್ಲಿನ ಕಾಳಿ ನದಿ ಜಲವಿದ್ಯುತ್ ಯೋಜನೆಯು ರಾಜ್ಯದಲ್ಲಿಯೇ ಅತಿ ದೊಡ್ಡದಾದ ವಿದ್ಯುತ್ ಉತ್ಪಾದನಾ ಸ್ಥಾವರ. ಕವಳೆಗುಹೆ, ಸೈಕ್ಸ್‍ಪಾಯಿಂಟ್ ಮತ್ತು ದಾಂಡೇಲಿ ಮೃಗಧಾಮಗಳಿಗೆ ಹೋಗುವ ಪ್ರವಾಸಿಗಳಿಗೆ ಇದು ಕೇಂದ್ರವಾಗಿದೆ. ಇಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಸುಂದರ ಪ್ರವಾಸಿಮಂದಿರವಿದೆ.

                                               

ಆಖ್ಯೆ

ಆಖ್ಯೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ವ್ಯಕ್ತಿಗಳಿಗೆ ಅಥವಾ ಗುಂಪುಗಳಿಗೆ ಅಥವಾ, ಕೆಲವೊಮ್ಮೆ ಪ್ರಾಣಿಗಳಿಗೆ ಸಮೂಹ ಮಾಧ್ಯಮಗಳು ನೀಡುವ ಕೀರ್ತಿ/ಖ್ಯಾತಿ ಮತ್ತು ಸಾರ್ವಜನಿಕ ಮರ್ಯಾದೆಯನ್ನು ಸೂಚಿಸುವ ಪದವಾದ ಪ್ರಸಿದ್ಧಿ ಸಾಮಾನ್ಯವಾಗಿ ಒಂದನ್ನು ಮತ್ತೊಂದರಿಂದ ಭೇದ ಮಾಡಲು ಬಳಸಲಾಗುವ, ಒಂದು ನಾಮಪದಕ್ಕೆ ಕೊಡುವ ಶೀರ್ಷಿಕೆಯಾದ ಹೆಸರು

ಜಾಲಿಹಾಳ
                                               

ಜಾಲಿಹಾಳ

ಜಾಲಿಹಾಳ ವು ಕರ್ನಾಟಕರಾಜ್ಯದ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನಲ್ಲಿದೆ. ಇದು ಶ್ರೀ ಲಕ್ಷ್ಮಿ ವೆಂಕಟೇಶ್ವರ ನೆಲೆಸಿರುವ ಪವಿತ್ರ ಸ್ಥಳ ಮತ್ತು ಶ್ರೀ ಶ್ರೀ ಚಿದಂಬರ ಮಹಾರಾಜರು ಆಶ್ರಯಿಸಿದ ಪುಣ್ಯ ಭೂಮಿ ಹಾಗು ಶ್ರೀ ಶ್ರೀ ಪುಣಾ೯ನಂದಾಶ್ರಮ ಇರುವ ಧಾಮಿ೯ಕ ನೆಲೆಯಾಗಿದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →