Back

ⓘ ಗದಗ. {{#if:| ಗದಗ ಉತ್ತರ ಕರ್ನಾಟಕದ ಒಂದು ಜಿಲ್ಲೆ. ಗದಗ ಪಟ್ಟಣ ಈ ಜಿಲ್ಲೆಯ ಕೇಂದ್ರ. ಕೆಲವು ವರ್ಷಗಳ ಹಿಂದಿನವರೆಗೂ ಗದಗ, ಧಾರವಾಡ ಜಿಲ್ಲೆಯ ಭಾಗವಾಗಿದ್ದಿತು. ಈ ಜಿಲ್ಲೆಯ ಜನಸಂಖ್ಯೆ ಸುಮಾರು ೧ ..
                                               

ವೀರೇಶ್ವರನಗರ,ಗದಗ

ವಿರೇಶ್ವರ ನಗರ ಗದಗ ದಕ್ಷಿಣ ಭಾಗದಲ್ಲಿರುವ ಒಂದು ಬಡಾವಣೆ.ಇದು ಶ್ರೀ ಸಿದ್ದಲಿಂಗನಗರಮತ್ತು ಬ್ಯಾಂಕ ಕಾಲೂನಿ ಸುತ್ತುವರೆದಿದೆ. ಈ ಪ್ರದೇಶವು ಮುಳಗುಂದ ಬೆಂಗಳೂರ ರಸ್ತೆಗಳಿಂದ ಸುತ್ತುವರೆದಿದೆ. ಹೆಚ್ಚಾಗಿ ಮಧ್ಯಮ ವರ್ಗದ ಜನರಿರುವ ಈ ಪ್ರದೇಶದಲ್ಲಿ ೧೯೮೫ರ ದಶಕದಲ್ಲಿ ಮೊದಲು ಜನರು ವಾಸಿಸಲು ಪ್ರಾರಂಭಿಸಿದರು. ಈಶ್ವರ ದೇವಸ್ಥಾನ ಹಾಗೂ ಅಂಬಾಭವಾನಿ ದೇವಸ್ಥಾ ಇಲ್ಲಿನ ಪ್ರಮುಖ ದೇವಾಲಯಗಳು. ವಿರೇಶ್ವರ ನಗರ ಹತ್ತಿರದಿಂದ ಹಾದು ಹೋಗುವ ಮುಳಗುಂದ ರಸ್ತೆ ಬೆಂಗಳೂರ ರಸ್ತೆ ಎನ್ನುತ್ತಾರೆ. ಇದು ನಗರದ ಹೋಟೆಲ್‌ಗಳ ಸ್ಥಾಪನೆಗೆ ಸೂಕ್ತ ಪ್ರದೇಶ ಕೂಡ ಆಗಿದೆ. ವಿರೇಶ್ವರ ನಗರ ಹೆಸರನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮ ಹೆಸರ ಮೇಲೆ ಇಡಲಾಗಿದೆ.

                                               

ಕಣಗಿನಹಾಳ

ಕಣಗಿನಹಾಳ ಕರ್ನಾಟಕದ ಗದಗ ಜಿಲ್ಲೆ ಯ ಗದಗ ತಾಲೂಕಿನ ಒಂದು ಹಳ್ಳಿ. ಕಣಗಿನಹಾಳ ಗ್ರಾಮದಲ್ಲಿ ಸನ್ 1905 ಇಸವಿಯಲ್ಲಿ ಏಷ್ಯಾ ಖಂಡದಲ್ಲೇ ಪ್ರಪ್ರಥಮ ಸಹಕಾರಿ ಸಂಘ ಸ್ತಾಪನೆಯಾಯಿತು. ಶ್ರೀ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ್ ಇವರ ನೇತೃತ್ವದಲ್ಲಿ ಸನ್ 1905 ಇಸವಿಯ ಜುಲೈ 08ನೇ ತಾರೀಖಿನಂದು ಕಣಗಿನಹಾಳ ಕೃಷಿ ಸಹಕಾರಿ ಸಂಘ ಸ್ಥಾಪನೆಯಾಯಿತು. ಸ್ಥಾಪನೆಯಾದಾಗ ಜಮಾ ಆದ ಎರಡು ಸಾವಿರ ರೂಪಾಯಿಗಳನ್ನು ಗ್ರಾಮದಲ್ಲಿ ರೈಲ್ವೆ ನಿಲ್ದಾಣವನ್ನು ನಿರ್ಮಿಸಲು ಹಾಗೂ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ಬಳಸಲಾಯಿತು. ಕಣಗಿನಹಾಳ ಗ್ರಾಮವು ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದ್ದು ಜಿಲ್ಲಾ ಕೇಂದ್ರವಾದ ಗದಗದಿಂದ 10 ಕಿಲೋ ಮೀಟರ್ ದೂರದಲ್ಲಿದೆ.

                                               

ಶಿರಹಟ್ಟಿ

ಶಿರಹಟ್ಟಿ - ಗದಗ ಜಿಲ್ಲೆಯ ತಾಲೂಕುಗಳಲ್ಲೊಂದು. ಈ ತಾಲೂಕಿನ ಪುಲಿಗೆರೆಯಲ್ಲಿ ಖ್ಯಾತ ಹಳಗನ್ನಡ ಕವಿ ಆದಯ್ಯನು ಜೀವಿಸಿದ್ದನು. ಇಲ್ಲಿಯ ಸೋಮನಾಥ ದೇವಸ್ಥಾನ ಹೆಸರುವಾಸಿ.ಆಗಿನ ಪುಲಿಗೆರೆಯೇ ಈಗಿನ ಲಕ್ಷ್ಮೇಶ್ವರ. ಶಿರಹಟ್ಟಿಯ ಲಕ್ಷ್ಮೇಶ್ವರದಲ್ಲಿ ಸೋಮನಾಥ ದೇವಸ್ಥಾನ ಸೇರಿದಂತೆ ಮಹತ್ವದ ಸ್ಥಳಗಳಿವೆ. ಆದಯ್ಯ, ಪದ್ಮಾವತಿ ಕತೆ ಇತಿಹಾಸದಲ್ಲಿ ಸೇರಿದೆ.

                                               

ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩

ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩ ಕರ್ನಾಟಕ ಸರ್ಕಾರ ಆಗಸ್ಟ್ ೨ ೧೯೯೭ರಂದು ಬೆಂಗಳೂರಿನಲ್ಲಿ ಹೊರಡಿಸಿದ ಒಂದು ಪ್ರಕಟಣೆಯ ಭಾಗವಾಗಿತ್ತು ಮತ್ತು ಇದು ಕರ್ನಾಟಕದಲ್ಲಿ ಏಳು ಹೊಸ ಜಿಲ್ಲೆಗಳ ರಚನೆಯಾಗುವಲ್ಲಿ ಪರಿಣಮಿಸಿತು. ರಚನೆಯಾದ ಹೊಸ ಜಿಲ್ಲೆಗಳು ಕೊಪ್ಪಳ ಜಿಲ್ಲೆ ರಾಯಚೂರು ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆ ಮೈಸೂರು ಜಿಲ್ಲೆಯಿಂದ ಗದಗ ಜಿಲ್ಲೆ ಮತ್ತು ಹಾವೇರಿ ಜಿಲ್ಲೆಗಳು ಧಾರವಾಡ ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆ ಬಿಜಾಪುರ ಜಿಲ್ಲೆಯಿಂದ ದಾವಣಗೆರೆ ಜಿಲ್ಲೆ ಚಿತ್ರದುರ್ಗ, ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ಉಡುಪಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಕಟಣೆಯಿಂದಾಗಿ ಕರ್ನಾಟಕವು ೨೭ ಅಧಿಕೃತ ಜಿಲ್ಲೆಗಳಲ್ಲಿ ರಾಜಕೀಯವಾಗಿ ವಿಭಜಿತವಾಗುವಲ್ಲಿ ಪರಿಣಮಿಸಿತು.

ಗದಗ
                                     

ⓘ ಗದಗ

{{#if:|

ಗದಗ ಉತ್ತರ ಕರ್ನಾಟಕದ ಒಂದು ಜಿಲ್ಲೆ. ಗದಗ ಪಟ್ಟಣ ಈ ಜಿಲ್ಲೆಯ ಕೇಂದ್ರ. ಕೆಲವು ವರ್ಷಗಳ ಹಿಂದಿನವರೆಗೂ ಗದಗ, ಧಾರವಾಡ ಜಿಲ್ಲೆಯ ಭಾಗವಾಗಿದ್ದಿತು. ಈ ಜಿಲ್ಲೆಯ ಜನಸಂಖ್ಯೆ ಸುಮಾರು ೧೦ ಲಕ್ಷ. marked by Ornate pillars with intricate sculpture

                                     

1. ಇತಿವೃತ್ತ

 • ಭೀಷ್ಮ ಕೆರೆ ಇಲ್ಲಿನ ಅತ್ಯಂತ ದೊಡ್ಡದಾದ ಮತ್ತು ಪುರಾತನ ಕೆರೆಯಾಗಿದೆ. ಗದಗ ಪುರಾತನ ಕಾಲದಲ್ಲಿ "ಕೃತಪುರ" ಎಂದು ಖ್ಯಾತಿಗಳಿಸಿತ್ತು. ಭಾರತ ರತ್ನ ಭೀಮಸೇನ ಜೋಶಿ ಇಲ್ಲಿಯವರೇ. ಗದುಗಿನ ಅನೇಕ ಜನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.
 • ಗದಗ ಪಟ್ಟಣದಲ್ಲಿ ಎರಡು ಮುಖ್ಯ ಜೈನ ದೇವಾಲಯಗಳು ಸಹ ಇದ್ದು ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರನಿಗೆ ಅರ್ಪಿತವಾಗಿವೆ.ಇದರ ಜೊತೆಗೆ ಇತಿಹಾಸ ಪ್ರಸಿದ್ಧ ಲಕ್ಕುಂಡಿ ದೇವಾಲಯಗಲಿರುವುದೂ ಗದಗ ಜಿಲ್ಲೆಯಲ್ಲಿಯೇ. ಗದಗ ಪಟ್ಟಣದಲ್ಲಿ ಅತೀ ಹೆಚ್ಚಿನ ಮುದ್ರಣಾಲಯಗಳಿದ್ದವು. ಮುದ್ರಣಾಲಯಗಒಂದು ಕಾಲದಲ್ಲಿ ಗದಗ ಶಹರದಲ್ಲಿ ಎಲ್ಲೇ ನಿಂತು ಕಲ್ಲು ತೂರಿದರೂ ಅದು ಯಾವದಾದರೊಂದು ಪ್ರಿಂಟಿಂಗ್ ಪ್ರೆಸ್ ಗೆ ಹೋಗಿ ಬೀಳುತ್ತದೆಂಬ ಪ್ರತೀತಿ ಇತ್ತು.ಅಷ್ಟೊಂದು ಮುದ್ರಣಾಲಯಗಳು ಗದಗನಲ್ಲಿದ್ದವು. ಮುದ್ರಣ ಕ್ಷೇತ್ರದಲ್ಲಿ ಕರ್ನಾಟಕದಲ್ಲೇ ಗದಗನ್ನು ಮೀರಿಸಿದವರಿರಲಿಲ್ಲ. ಗದಗ ಪಟ್ಟಣ ಬದನೇಕಾಯಿ ಬಜಿ,ಒಗ್ಗರಣೆ ಗಿರ್ಮಿಟ್ ಮತ್ತು ಮೆಣಸಿನಕಾಯಿ ಮಿರ್ಚಿಗೆ ತುಂಬ ಖ್ಯಾತಿಪಡೆದುಕೊಂಡಿದೆ.
 • ಗದಗ ಜಿಲ್ಲೆಯು ಪುರಾತನ ಕವಿಗಳಿಗೆ ಪ್ರಸಿದ್ಧ. ಕುಮಾರವ್ಯಾಸ, ಪಂಪ, ಲಕ್ಷ್ಮೀಶ ಮೂಲತಃ ಗದಗದವರು. ಆಧುನಿಕ ಕವಿಗಳಾದ ಆಲೂರು ವೆಂಕಟರಾಯ, ಚೆನ್ನವೀರ ಕಣವಿ ಕೂಡ ಇದೇ ಜಿಲ್ಲೆಗೆ ಸೇರಿದವರು. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ರಾಗಿ, ಬೇಳೆಗಳು, ನೆಲಗಡಲೆ, ಸೂರ್ಯಕಾಂತಿ, ಹತ್ತಿ, ಈರುಳ್ಳಿ ಮತ್ತು ಮೆಣಸಿನಕಾಯಿ. ಧಾರ್ಮಿಕ ಪ್ರಾಮುಖ್ಯತೆಯುಳ್ಳ ಇಲ್ಲಿನ ಎರಡು ಮುಖ್ಯ ದೇವಸ್ಥಾನಗಳೆ೦ದರೆ ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನ.
                                     

2. ಗದಗ ಮತ್ತು ಬೆಟಗೇರಿ ಅವಳಿ ನಗರಗಳು

ಗದಗ ಜಿಲ್ಲೆಯ ಗದಗ ತಾಲೂಕಿನ ಕಣಗಿನಹಾಳದಲ್ಲಿ ಸನ್ 1905 ಇಸವಿಯಲ್ಲಿ ಏಷ್ಯಾ ಖಂಡದಲ್ಲೇ ಪ್ರಪ್ರಥಮ ಬಾರಿಗೆ ಸ್ಥಾಪನೆಯಾದ ಸಹಕಾರ ಸಂಘವಿದೆ. ಗದಗನ ಮೂಲ ಹೆಸರುಗಳು ಕೃತುಕ, ಕೃತುಪುರ, ಕರಡುಗು ನಂತರ ಗಲದುಗು, ಗದುಗು ಮತ್ತು ಈಗ ಗದಗ ಎಂದು ಕರೆಯಲಾಗುತ್ತದೆ. ಕಪ್ಪತ ಗುಡ್ಡ ಸಹ ಇದರ ಸುತ್ತಮುತ್ತಲಲ್ಲೇ ಇವೆ.

                                     

3. ಭೂಗೋಳ

ಗದಗ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ ನದಿಗಳೆಂದರೆ ಮಲಪ್ರಭಾ ಮತ್ತು ತುಂಗಭದ್ರಾ. ಗದಗ ಪಟ್ಟಣ ಬೆಂಗಳೂರಿನಿಂದ ೪೩೧ ಕಿಮೀ ದೂರದಲ್ಲಿದ್ದು ಧಾರವಾಡದಿಂದ ೮೦ ಕಿಮೀ ದೂರದಲ್ಲಿದೆ. ಗದಗ ಕರ್ನಾಟಕದ ೨೯ ನೇ ಜಿಲ್ಲೆ ಆಗಿರುತ್ತದೆ.

                                     

4. ಪ್ರಮುಖ ವ್ಯಕ್ತಿಗಳು

 • ಶ್ರೀ ಬಿ.ಜಿ.ಅಣ್ಣಿಗೇರಿ ಗುರುಗಳು.ಇವರು ಗದಗ ನಗರದಲ್ಲಿ ಸುಮಾರು 60 ವರ್ಷಗಳ ಕಾಲ ಹತ್ತಾರು ಸಾವಿರ ವಿದ್ಯಾರ್ಥಿಗಳಿಗೆ ಯಾವುದೇ ಪಲಾಪೇಕ್ಷೆ ಇಲ್ಲದೆ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿದ್ದ ಇವರು ಸೆಪ್ಟೆಂಬರ್ 5 2019 ಶಿಕ್ಷಕರ ದಿನಾಚರಣೆಯಂದೆ ನಿಧನರಾದರು.
 • ಕವಿ ಹುಯಿಲಗೋಳ ನಾರಾಯಣರಾಯರು
 • ಬಿ.ಎಸ್.ಎಫ್. ಜವಾನ್, ಬಸವರಾಜ ಯರಗಟ್ಟಿ ಕೇದಾರಪ್ರಕೃತಿ ವಿಕೋಪದಲ್ಲಿ ರಕ್ಷಣಾ ಕಾರ್ಯದಲ್ಲಿ -ಹುತಾತ್ಮ ಯೋಧ
 • ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರು.
 • ಭಾರತರತ್ನ ಭೀಮಸೇನ ಜೋಶಿ
 • ಸೈಕ್ಲಿಂಗ್‌ ನೀಲಮ್ಮಾ ಮಲ್ಲಿಗವಾಡ ರಾಜ್ಯೋತ್ಸವ ಪ್ರಶಸ್ತಿ ವಿಜೀತ (ನೀಲಗುಂದ
 • ಪ್ರಸಿದ್ಧ ಗಾಯಕರಾದ ಗಾನಯೋಗಿ ಪಂಚಾಕ್ಷರಿಗವಾಯಿ
 • ಕ್ರಿಕೆಟ್ ಸುನಿಲ್‌ ಜೋಷಿ
 • ಕನ್ನಡದ ಮಹಾಕವಿ ಕುಮಾರವ್ಯಾಸ
                                     

5. ಕೈಗಾರಿಕೆ

ಗದಗಿನ ಬಹಳ ಮುಖ್ಯವಾದ ಕೈಗಾರಿಕೆ ಗದಗ ಪ್ರಿಂಟಿಂಗ್ ಪ್ರೆಸ್ ಹಾಗು ಸುಮಾರು ೧೦೦ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿವೆ. ಸಂಕೇಶ್ವರ, ಶಾಬಾದಿಮಠ, ಹೊಂಬಾಳಿ, ವಿದ್ಯಾವಿಕಾಸ, ವಿದ್ಯಾನಿಧಿ, ಪಾರು ಪ್ರಕಾಶನ ಮುಂತಾದ ಪ್ರಸಿದ್ಧ ಪ್ರಿಂಟಿಂಗ್ ಪ್ರೆಸ್ ಗಳು ಇವೆ. ಕೈಮಗ್ಗ ಹಾಗೂ ಬಣ್ಣ ಬಣ್ಣದ ಆಕರ್ಷಕ ಸೀರೆಗಳನ್ನು ನೇಯುವ ಹತ್ತಾರು ಮಂದಿ ನೇಕಾರರು ಇಲ್ಲಿದ್ದಾರೆ ಇದು ಗದಗ ಮತ್ತು ಬೆಟಗೇರಿಯ ಇನ್ನೊಂದು ಆಕರ್ಷಣೆ.

ಪವನ ವಿದ್ಯುತ್

ಗದಗ ಜಿಲ್ಲೆಯ ೪೦&೫೦ ಕಿಮೀ ಉದ್ದಗಲದ ಕೃಷಿಭೂಮಿಯು ಹೆಚ್ಚು ಗಾಳಿ ಬೀಸುವ ಪ್ರದೇಶವೆಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಕೆ.ಆರ್ ಇ.ಡಿ.ಎಲ್ ಗುರುತಿಸಿದೆ. ಪವನ ವಿದ್ಯುತ್ ಶಕ್ತಿ ಉತ್ಪಾದನೆಗೆ ಯೋಗ್ಯ ಸ್ಥಳಗಳೆಂದೂ ಈ ಸಂಸ್ಥೆ ಪಟ್ಟಿ ಮಾಡಿದೆ.

                                     

6. ಗಂಗಾಪೂರ ಸಕ್ಕರೆ ಕಾರ್ಖಾನೆ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಗಂಗಾಪೂರ ಗ್ರಾಮದಲ್ಲಿ ಮಾಜಿ ಸಚಿವ ಎಸ್. ಎಸ್. ಪಾಟೀಲ್ ಇವರ ನೇತೃತ್ವದಲ್ಲಿ ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಎಂದು ರೈತರ ಸಹಕಾರದೊಂದಿಗೆ ಕಾರ್ಖಾನೆ ಸ್ಥಾಪಿಸಿದ್ದು ಇರುತ್ತದೆ. ನಂತರ ಕೆಲವು ಆಡಳಿತಾತ್ಮಕ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ಸದರಿ ಕಾರ್ಖಾನೆಯನ್ನು ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಒಡತನದ ಸಂಸ್ಥೆಗೆ ೩೦ ವರ್ಷಗಳ ಗುತ್ತಿಗೆ ಆಧಾರದಲ್ಲಿ ಕೊಟ್ಟಿದ್ದು ಇಂದು ಅದು ವಿಜಯ ನಗರ ಸಕ್ಕರೆ ಕಾರ್ಖಾನೆ ನಿಗಮ ನಿಯಮಿತ, ಗಂಗಾಪೂರ ಎಂಬ ಹೆಸರಿನಲ್ಲಿ ನಡೆಯುತ್ತಿದೆ. ಇದು ಗದಗ ಜಿಲ್ಲೆಯಲ್ಲಿಯೇ ಬೃಹತ್ ಕೈಗಾರಿಕ ಪ್ರದೇಶವಾಗಿದ್ದು ಸಾವಿರಾರು ಉದ್ಯೋಗವನ್ನು ಒದಗಿಸಿದೆ. ಸಕ್ಕರೆ ತಯಾರಿಕೆ ಜೊತೆಗೆ ತ್ಯಾಜ್ಯಗಳನ್ನು ಉಪಯೋಗಿಸಿಕೊಂಡು ಸ್ಪಿರಿಟ್ ಮತ್ತು ಗೊಬ್ಬರ ತಯಾರಿಕ ಘಟಕಗಳನ್ನು ಸ್ಥಾಪಿಸಲಾಗಿದೆ.

                                     

7. ಧಾರ್ಮಿಕ

ಧಾರ್ಮಿಕ ಪ್ರಾಮುಖ್ಯತೆಯುಳ್ಳ ಇಲ್ಲಿನ ಎರಡು ಮುಖ್ಯ ದೇವಸ್ಥಾನಗಳೆ೦ದರೆ ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನ. ಗದಗ ಪಟ್ಟಣದಲ್ಲಿ ಎರಡು ಮುಖ್ಯ ಜೈನ ದೇವಾಲಯಗಳು ಸಹ ಇದ್ದು ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರನಿಗೆ ಅರ್ಪಿತವಾಗಿವೆ.ಶ್ರೀ ತೊಂಟದಾರ್ಯ ಮಠ ಕೂಡ ಇಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಲಿದೆ.

 • ಶ್ರೀ ತೊಂಟದಾರ್ಯ ಮಠ
 • ಹಾಲಕೆರೆ ಅನ್ನದಾನೇಶ್ವರ ಮಠ
 • ವೀರೇಶ್ವರ ಪುಣ್ಯಾಶ್ರಮ
 • ಶಿವಾನಂದ ಮಠ
                                     

8. ಶೈಕ್ಷಣಿಕ

ಗದಗ ಪಟ್ಟಣ ಅನೇಕ ವಿದ್ಯಾಲಯ, ಮಹಾವಿದ್ಯಾಲಯಗಳಿವೆ. ಒಂದು ಆಯುರ್ವೇದ ಮತ್ತು ತಾಂತ್ರಿಕ ವಿದ್ಯಾಲಯಗಳಿವೆ.

ಪ್ರಮುಖ ವಿದ್ಯಾಸಂಸ್ಥೆಗಳು

 • ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು,ಗದಗ ಸರ್ಕಾರಿ
 • ಕೆ. ಎಸ್. ಎಸ್, ಕಾಲೇಜು, ನರೇಗಲ್ಲ
 • ಸರಕಾರಿ ಪ್ರಥಮ ದಜೆ೯ ಕಾಲೇಜು, ಮುಳಗುಂದ.
 • ಸರಕಾರಿ ಪ್ರಥಮ ದಜೆ೯ ಕಾಲೇಜು, ನರೇಗಲ್ಲ.
 • ಸರಕಾರಿ ಪ್ರಥಮ ದಜೆ೯ ಕಾಲೇಜು, ಗದಗ.
 • ಸರ್ಕಾರಿ ಪದವಿ ಪೂರ್ವ ಕಾಲೇಜು,ಗದಗ: ಇತ್ತೀಚೆಗೆ ಈ ಕಾಲೇಜು,ಮುಳಗುಂದ ರಸ್ತೆಯಲ್ಲಿರುವ ನೂತನ ಕಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.
 • ಶ್ರೀ ಅನ್ನದಾನೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ನರೇಗಲ್ಲ.
 • ಸರಕಾರಿ ಪ್ರಥಮ ದಜೆ೯ ಕಾಲೇಜು, ಶಿರಹಟ್ಟಿ.
 • ಸರಕಾರಿ ಪ್ರಥಮ ದಜೆ೯ ಕಾಲೇಜು, ಮುಂಡರಗಿ.
 • ಸರಕಾರಿ ಪ್ರಥಮ ದಜೆ೯ ಕಾಲೇಜು, ಹುಲಕೋಟಿ.
 • ಸರಕಾರಿ ಪ್ರಥಮ ದಜೆ೯ ಕಾಲೇಜು, ಗಜೇಂದ್ರಗಡ.
 • ಸರಕಾರಿ ಪ್ರಥಮ ದಜೆ೯ ಕಾಲೇಜು, ನರಗುಂದ.
 • ಸರಕಾರಿ ಪ್ರಥಮ ದಜೆ೯ ಕಾಲೇಜು,ರೋಣ.

ಕೆ ಎಲ್ ಇ ಕಾಲೇಜು.ಗದಗ

                                     

9. ಶಿಲ್ಪಕಲೆ

ಗದಗ ಜಿಲ್ಲೆ ಶಿಲ್ಪಕಲೆಯ ಬೀಡೂ ಹೌದು. ಗದುಗಿನ ವೀರನಾರಾಯಣ, ತ್ರಿಕುಟೇಶ್ವರ ಹಾಗೂ ಸೋಮನಾಥ, ಸರಸ್ವತಿ ದೇವಾಲಯ ಪ್ರಸಿದ್ಧಿ ಪಡೆದಿವೆ. ಕ್ರಿ.ಪೂ. 950 ರಲ್ಲಿ ಪದ್ಮಬ್ಬರಸಿ ಕಟ್ಟಿಸಿದ ನರೇಗಲ್ಲದ ನಾರಾಯಣ ದೇವಾಲಯ, ರಾಷ್ಟ್ರಕೂಟರು ಕಟ್ಟಿಸಿದ ಜೈನ ದೇವಾಲಯ ಗಳಲ್ಲಿಯೇ ಅತಿ ದೊಡ್ಡದು ಆಗಿದೆ. ಶ್ರೀ ಅನ್ನದಾನೇಶ್ವ್ಹರ ಮಠ ಪ್ರಸಿದ್ಢವಾಗಿವೆ. ಲಕ್ಕುಂಡಿ ನೂರೊಂದು ಗುಡಿಗಳು ಆಕರ್ಷಣೀಯ. ಇಲ್ಲಿನ ಸೂರ್ಯ ದೇವಾಲಯ, ಬ್ರಹ್ಮ ಜೀನಾಲಯ ಗಮನ ಸೆಳೆಯುತ್ತವೆ. ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯ ರಾಷ್ಟ್ರೀಯ ಸಂರಕ್ಷಣಾ ಸ್ಮಾರಕವಾಗಿ ರೂಪುಗೊಂಡಿದೆ. ಜಿಲ್ಲೆಯಲ್ಲಿ ಶಿಲ್ಪಕಲೆಗೆ ಜೀವ ತುಂಬಿದವರು ರಾಜವಂಶಸ್ಥರು. ಅನೇಕ ರಾಜಮಹಾರಾಜರು ಈ ಭಾಗದಲ್ಲಿ ಆಳಿದ್ದರೆಂಬುದು ಗಮನಾರ್ಹ. ಇನ್ನು ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಶಾಸನಗಳಿವೆ.

                                     

10. ಸಾಂಸ್ಕೃತಿಕ

ಪರಂಪರೆ

 • ನಮ್ಮೂರ ಜಾತ್ರೆ: ಇಲ್ಲಿ ನಡೆಯುವ ವಾರ್ಷಿಕ ಶ್ರೀ ತೊಂಟದಾರ್ಯ ಮಠದ ಜಾತ್ರೆ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತದೆ. ಹಾಗೂ ಈ ಜಾತ್ರೆ ೧ ತಿ೦ಗಳವರೆಗೆ ನಡೆಯುತ್ತದೆ. ಮುಖ್ಯ ಭಾಷೆ ಕನ್ನಡ

ಸಂಗೀತ ಮತ್ತು ಕಲೆ

 • ಪಂಡಿತ ವೀರೆಶ್ವರ ಹಿರೇಮಠರಾಜ್ಯೋತ್ಸವ ಪ್ರಶಸ್ತಿ ೨೦೦೫
 • ಪಂಡಿತ ರುದ್ರಮುನಿ ಹಿರೇಮಠ
 • ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ
 • ಶ್ರೀಮತಿ ಪಾರ್ವತಿ ಮಾಳೆಕೊಪ್ಪಮಠ

ವಾಯಲಿನ್:

 • ಶ್ರೀ ನಾರಾಯನ ಹಿರೆಕೊಲಚೆ

ವೊಕಲ್:

 • ಶ್ರೀ ರವೀಂದ್ರ ಜಕಾತಿ

ವೃತ್ತಿರಂಗಭೂಮಿ ಕಂಪನಿಗಳು

 • ಯರಾಸಿ ಭರಮಪ್ಪನ ವಾಣಿ ವಿಲಾಸ ನಾಟಕ ಕಂಪನಿ- ನಾಟಕ
 • ಕಲಾ ವಿಕಾಸ ಪರಿಷತ್ತು
 • ಶ್ರೀ ಕುಮಾರೇಶ್ವರ ಕೃಪಾ ಕಟಾಕ್ಷ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ - ನಾಟಕ
 • ಗದಗ ದತ್ತಾತ್ರೇಯ ನಾಟಕ ಮಂಡಳಿ - ನಾಟಕ

ಸಾಧನೆ

 • ಫ. ಸಿ. ಭಾಂಡಗೆ - ನಾಟಕ
 • ಪಂಡಿತ ಡಾ.ಪುಟ್ಟರಾಜ ಗವಾಯಿಗಳ - ಸಂಗೀತ
 • ಹುಯಿಲಗೋಳ ನಾರಾಯಣರಾಯ - ನಾಡ ಗೀತೆ: ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಜಾನಪದ ಕಲೆ

 • ಶ್ರೀ ಹೊಸಗರಡಿ ಜಾನಪದ ಕಲಾ ಮೇಳ ರಿ ಗದಗ -ಬೆಟಗೇರಿ - ದೊಡ್ಡಾಟ

ಸ್ವತಂತ್ರ ಹೋರಾಟಗಾರರು ಮತ್ತು ಗಾಂಧೀವಾದಿಗಳು

 • ಶ್ರೀ. ಶಂಕ್ರಪ್ಪ ಕಂಪ್ಲಿ- ಆಝಾದ ಹಿಂದ ಸೇವಾ ದಳ ಮತ್ತು ಕ್ಷತ್ರೀಯ ಮರಾಠ ಸಮಾಜ ಸ್ಥಾಪಕರು.


                                     

11. ಪ್ರಮುಖ ಬೆಳೆಗಳು

ಜೋಳ, ಸಜ್ಜೆ, ಸೇಂಗಾ, ಸೂರ್ಯಪಾನ, ಉಳ್ಳಾಗಡ್ಡಿಈರುಳ್ಳೆ. ಪ್ರಮುಖ ಆಹಾರ ಧಾನ್ಯ ಜೋಳ.ಜೊತೆಗೆ ಗೋಧಿ, ಬೇಳೆಕಾಳುಗಳು.

ಸೇವಂತಿಗೆ ಮತ್ತಿತರ ಹೂ ಬೆಳೆ

ಹೂವಿನ ಕಣಜ: ಜಮೀನಿನಲ್ಲಿ ಸೇವಂತಿಗೆ, ಮಲ್ಲಿಗೆ, ಸುಗಂಧರಾಜ, ಗುಲಾಬಿ, ಚೆಂಡು ಹೂ ಬೆಳೆದಿದ್ದಾರೆ. ವಿಶೇಷವಾಗಿ ಸೇವಂತಿಗೆ ಹೂವನ್ನೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ವಿಶೇಷವಾಗಿ ದಸರಾ, ದೀಪಾವಳಿಗೆ ಹೂವಿಗೆ ಬೇಡಿಕೆ

ಹವಾಮಾನ

 • ಮಳೆ - ಪ್ರತಿ ವರ್ಷ ಮಳೆ ಸರಾಸರಿ ೧೬.೬ ಮಿಮಿ ಗಳಸ್ಟು ಆಗಿರುತ್ತದೆ.
 • ಬೆಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ౪೧.೭ ಡಿಗ್ರಿವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ ೯.೫ ಡಿಗ್ರಿವರೆಗೆ ಡಿಸೆಂಬರನಲ್ಲಿ ಉಷ್ಣತೆ ಇರುತ್ತದೆ. ಬೆಸಿಗೆ - ೩೦ °C-೩೯ °C, ಚಳಿಗಾಲ - ೧೮ °C-೨೮ °C
 • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ ಜೂನ, ೧೯.೬ ಕಿಮಿ/ಗಂ ಜುಲೈಹಾಗೂ ೧೭.೫ ಕಿಮಿ/ಗಂ ಅಗಸ್ಟ ಇರುತ್ತದೆ.
                                     

12. ಪ್ರವಾಸ

ಪ್ರವಾಸ ಮಾರ್ಗ ೧

ಗದಗದಿಂದ ಪ್ರವಾಸ ಪ್ರಾರಂಭವಾಗಿ ಲಕ್ಕುಂಡಿ, ಗದುಗಿನ ತ್ರಿಕೂಟೇಶ್ವರ,ವೀರನಾರಾಯಣ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ಸಾಯಿಬಾಬಾ ಮಂದಿರ, ರಾಮಕೃಷ್ಣಾಶ್ರಮ, ಜಿಲ್ಲಾ ಆಡಳಿತ ಭವನ ನಂತರ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ, ನವಲಗುಂದ ನಾಗಲಿಂಗಮಠ, ಇಟಗಿಯ ಭೀಮಾಂಬಿಕಾ ದೇವಸ್ಥಾನ, ಸೂಡಿ ಹಾಗೂ ಕಾಲಕಾಲೇಶ್ವರ ದೇವಸ್ಥಾನ ಮತ್ತು ಕುಕನೂರ ಬಳಿಯ ಇಟಗಿ ಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ. ಪ್ರವಾಸಕ್ಕೆ ಅಂದಾಜು ೧೯೫ ಕಿ.ಮೀಗಳು.

ಪ್ರವಾಸ ಮಾರ್ಗ ೨

ಗದಗದಿಂದ ಪ್ರವಾಸ ಪ್ರಾರಂಭವಾಗಿ ಲಕ್ಕುಂಡಿ, ಗದುಗಿನ ತ್ರಿಕೂಟೇಶ್ವರ, ವೀರನಾರಾಯಣ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ಸಾಯಿಬಾಬಾ ಮಂದಿರ, ರಾಮಕೃಷ್ಟಾಶ್ರಮ, ಜಿಲ್ಲಾ ಆಡಳಿತ ಭವನ ನಂತರ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ, ಮುಳಗುಂದ ದಾವುಲಮಲಿಕ ದರ್ಗಾ, ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ಜೈನ್ ಬಸದಿ, ಮಾಗಡಿ ಪಕ್ಷಿಧಾಮಗದುಗಿನ ಪಕ್ಷಿಕಾಶಿ, ಶಿರಹಟ್ಟಿ ಫಕೀರೇಶ್ವರ ಮಠ, ವೆಂಕಟಾಪುರದ ವೆಂಕಟೇಶ ದೇವಸ್ಥಾನ ಹಾಗೂ ಡಂಬಳದ ದೊಡ್ಡ ಬಸಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ. ಪ್ರವಾಸಕ್ಕೆ ಅಂದಾಜು ೧೬೫ ಕಿ.ಮೀಗಳು.

                                     

13. ರಸ್ತೆ ಸಾರಿಗೆ

ವಾಯವ್ಯ.ಕ.ರಾ.ಸಾ.ಸಂಸ್ಥೆ ವಿಭಾಗ. ಗದಗ ಪಟ್ಟಣ ಸಾರಿಗೆ ಮತ್ತು ರೈಲು ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು ಬಸ್ ಗಳು ಜಿಲ್ಲೆಯಾದ್ಯಂತ ಸಂಚರಿಸುತ್ತವೆ. ಗದಗದಿಂದ ಮುಂಬಯಿ, ಪೂನಾ, ಹೈದರಾಬಾದ, ತಿರುಪತಿ,ಬೆಂಗಳೂರು, ಮೈಸೂರಗಳಿಗೆ ಐಷಾರಾಮಿ ಬಸ್ಸುಗಳಿವೆ, ಹಾಗು ಹೈದರಾಬಾದ, ತಿರುಪತಿ,ಬೆಂಗಳೂರ, ಮುಂಬಯಿ ರೈಲುಗಳು ಓಡುತ್ತವೆ.

                                     

14. ನಗರ ಆಡಳಿತ

ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಪದ್ಧತಿ ವಾರ್ಡ್ ಗಳು ನಗರದಲ್ಲಿ ಒಟ್ಟು ೩೫ ವಾರ್ಡ್ ಗಳು ಇರುತ್ತವೆ.

ಗದಗನ ಪ್ರಮುಖ ಬಡಾವಣೆಗಳು ಹೊಸ ಬಡಾವಣೆಗಳು, ಮಸಾರಿ,ಸಿದ್ದಲಿಂಗ ನಗರ, ವಿರೇಶ್ವರ ನಗರ ಊರಿನ ಸರ್ವತೋಮುಖ ಬೆಳವಣಿಗೆಯಾಗಿದೆ.

 • ವಿರೇಶ್ವರ ನಗರ
 • ಸಿದ್ದಲಿಂಗ ನಗರ
 • ಮಸಾರಿ
 • ಗ೦ಗಾಪೂರ ಪೇಟ

ಸಿನಿಮಾ ಚಿತ್ರ ಮಂದಿರಗಳು ನಗರದಲ್ಲಿ ೬ ಸುಂದರ ಚಿತ್ರ ಮಂದಿರಗಳು ಇರುತ್ತವೆ, ಅವುಗಳು ಮಹಾಲಕ್ಷ್ಮಿ, ಶ್ರೀ ಕೃಷ್ಣ, ಚಿತ್ರಾ, ಕರ್ನಾಟಕ, ವೆಂಕಟೇಶ, ಮತ್ತು ಶಾಂತಿ ಚಿತ್ರ ಮಂದಿರಗಳು.

ಖಾದ್ಯ ಗದಗ ಪಟ್ಟಣ ಬದನೇಕಾಯಿ ಬಜಿ,ಒಗ್ಗರಣೆ ಗಿರ್ಮಿಟ್ ಮತ್ತು ಮೆಣಸಿನಕಾಯಿ ಮಿರ್ಚಿಗೆಮಿರ್ಚಿ ಭಜಿ ತುಂಬ ಪ್ರಸಿದ್ಧ.

                                     

15. ಚಿತ್ರ ಗ್ಯಾಲರಿ

ಪುರಾತನ ದೇವಾಲಯಗಳು

ಹಿಂದು ದೇವಾಲಯಗಳು

ಮುಸ್ಲಿಮ್ ದೇವಾಲಯಗಳು

ಕ್ರೈಸ್ತ ದೇವಾಲಯಗಳು

ಗದಗ ಜಿಲ್ಲೆಯ ದೇವಾಲಯಗಳು

ಲಕ್ಕುಂಡಿ ದೇವಾಲಯಳು

ಸೂಡಿ ದೇವಾಲಯಳು

ಡಂಬಳ ದೇವಾಲಯಳು

ಪ್ರಮುಖ ವ್ಯಕ್ತಿಗಳು

ಗದಗ ಕಾಲೇಜಗಳು

ಪ್ರಮುಖ ಸ್ಥಳ

ದೇವಾಲಯಳು ಗದಗ ಜಿಲ್ಲೆ

ಲಕ್ಷ್ಮೇಶ್ವರ ದೇವಾಲಯಳು

ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ

ಮಾಗಡಿ ಪಕ್ಷಿಧಾಮ

                                               

ಸಿಂಗಟಾಲೂರು

೧೯೮೦ ದಶಕದಲ್ಲಿ ಸಿಂಗಟಾಲೂರು ಬಳಿ ತುಂಗಭದ್ರಾ ನದಿಗೆ ತಡೆಕಟ್ಟೆ ಕಟ್ಟಿ ಸ್ವಲ್ಪ ನೀರು ನಿಲ್ಲಿಸಿ ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದ ಹೂವಿನ ಹಡಗಲಿ ತಾಲೂಕಿನ ಕೆಲವು ಹಳ್ಳಿಗಳಿಗೆ ನೀರು ಮತ್ತು ಸ್ವಲ್ಪ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದ ‘ಹುಲಿಗುಡ್ಡ ಏತ ನೀರಾವರಿ ಯೋಜನೆ

                                               

ಗ೦ಗಾಪೂರ ಪೇಟ,ಗದಗ

ಗ೦ಗಾಪೂರ ಪೇಟ ಗದಗನ ಒಂದು ಪುರಾತನ ಬಡಾವಣೆ. ರೈತಾಪಿ ಜನತೆ ಮತ್ತು ಗ್ರಾಮೀಣ ಬದುಕು ಇಲ್ಲಿ ಇನ್ನೂ ಉಸಿರಾಡುತ್ತಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಇಲ್ಲಿನ ದುರ್ಗಮ್ಮ ದೇವತೆಯ ರಥೋತ್ಸವ ಜರಗುತ್ತದೆ.ಇದೇ ಬಡಾವಣೆಯ ಕುಂಬಾರ ಓಣಿಯಲ್ಲಿ ರಸ್ತೆಯುದ್ದಕ್ಕೂ ಸಗಣಿ ಎರಚಾಟದ ಆಟೋಟವನ್ನು ಕಾಣಬಹುದಾಗಿದೆ.

ಶ್ರೀ ತೊಂಟದಾರ್ಯ ಮಠ,ಗದಗ
                                               

ಶ್ರೀ ತೊಂಟದಾರ್ಯ ಮಠ,ಗದಗ

ಶ್ರೀ ತೊಂಟದಾರ್ಯ ಮಠ ಶ್ರೀ ತೊಂಟದಾರ್ಯ ಮಠ ಕೂಡ ಇಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಲಿದೆ. ಗದಗದ ಯಡಿಯೂರು ಶ್ರೀ ಜಗದ್ಗುರು ತೊಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದಾರ್ಯ ಮಹಾಸ್ವಾಮಿಗಳು.