Back

ⓘ ಚಿತ್ರಕಲೆ ಬಣ್ಣಗಳನ್ನು ಉಪಯೋಗಿಸಿ ಕಲಾತ್ಮಕ ಚಿತ್ರಗಳನ್ನು ರಚಿಸುವುದು. ಈ ರಚನೆಗಳನ್ನೂ ಕೂಡ ಚಿತ್ರಕಲೆಗಳೆಂದು ಕರೆಯಲಾಗುತ್ತಿತ್ತು. ಆದರೆ ಇಪ್ಪತ್ತನೆಯ ಶತಮಾನದಾದ್ಯಂತ ಚಿತ್ರಕಲೆ ಎಂಬ ಪದಕ್ಕೆ ದ ..
                                               

ಕರ್ನಾಟಕದ ಚಿತ್ರಕಲೆ

ಕನ್ನಡ ನಾಡಿನ ಚಿತ್ರಕಲೆಯ ಬಹುಭಾಗ ದೇವಾಲಯಗಳಿಗೆ ಸಂಬಂಧಿಸಿದ್ದು. ಮರದಲ್ಲಿ ದೇವಾಲಯಗಳನ್ನು ನಿರ್ಮಿಸುತ್ತಿದ್ದಾಗ, ಮರದಲ್ಲಿಯೇ ಮೂರ್ತಿಗಳನ್ನು ಕಡೆಯುತ್ತಿದ್ದಾಗ, ರಮ್ಯತೆಗಾಗಿ ಅವುಗಳ ಮೇಲೆ ಬಣ್ಣ ಮೂಡಿಸುತ್ತಿದ್ದರು. ಹಿಂದಿನ ದೇವಾಲಯಗಳಲ್ಲಿ ಉತ್ಸವಮೂರ್ತಿಯಲ್ಲದೆ ಮರದ ಮೂಲಮೂರ್ತಿಯಲ್ಲೇ ಎರಡು ಬಗೆ ಇರುತ್ತಿದ್ದುವು. ಧ್ರುವಬೇರ ಎನಿಸಿಕೊಳ್ಳುವ ಮೂಲದೇವರಿಗೆ ಅಭಿಷೇಕವಿಲ್ಲ; ಅದರ ಮೇಲೆ ಸ್ಟಕ್ಕೋ ಲೇಪನ ಬಳಿದು ಬಣ್ಣಗಳಿಂದ ಅಲಂಕರಿಸುತ್ತಿದ್ದರು. ನಿತ್ಯದ ಅಭಿಷೇಕಕ್ರಿಯೆಗಳಿಗೆ ಸ್ನಪನಬೇರ ಎನಿಸಿಕೊಳ್ಳುವ ಮೂರ್ತಿಗಳು ಇರುತ್ತಿದ್ದುವು. ವರ್ಣಚಿತ್ರಕಲೆಯ ಉಗಮ ಧ್ರುವಬೇರ ಮೂರ್ತಿಗಳಲ್ಲಿ ಆಯಿತು. ಪ್ರಾಚೀನ ಚಿತ್ರಕಲೆ ದೇವಾಲಯದಲ್ಲೇ ಆರಂಭವಾಗಿ ಬಹುಕಾಲ ಶಿಲ್ಪಕ್ಕೆ ಸಹಕಾರಿ ಮಾತ್ರ ಆಗಿದ್ದಿತು. ಆದರೆ ಎಂಟನೆಯ ಶತಮಾನದ ವೇಳೆಗೆ ಈ ಕಲೆ ಪ್ರತ ...

                                               

ಆಸ್ಕರ್ ಶೆಮ್ಮರ್

ಆಸ್ಕರ್ ಶೆಮ್ಮರ್ ಜರ್ಮನಿಯ ಬಹುಮುಖಿ ಕಲಾವಿದ.ಚಿತ್ರಕಲೆ, ಶಿಲ್ಪಕಲೆ, ಬೊಂಬೆಯಾಟ, ನಾಟಕ, ನೃತ್ಯ, ಹೀಗೆ ಹಲವು ಕಲಾಪ್ರಕಾರಗಳಲ್ಲಿ ಸೈ ಎನ್ನಿಸಿಕೊಂಡ ಕಲಾವಿದ.ಬೌಹೌಸ್ ಕಲಾ-ಶಾಲೆಯ ಪ್ರತಿಪಾದಕ.

                                               

ಕೂರ್ಮಾವತಾರ

ಹಿಂದೂಧರ್ಮದಲ್ಲಿ, ಕೂರ್ಮಾವತಾರ ವು ಮತ್ಸ್ಯಾವತಾರದ ನಂತರ ಬರುವ ಮತ್ತು ವರಾಹಾವತಾರದ ಮೊದಲು ಬರುವ ವಿಷ್ಣುವಿನ ಎರಡನೇ ಅವತಾರ. ಮತ್ಸ್ಯಾವತಾರದಂತೆ ಈ ಅವತಾರವೂ ಸತ್ಯಯುಗದಲ್ಲಿ ಸಂಭವಿಸಿತ್ತು. ಕೂರ್ಮಾವತಾರಕ್ಕೆ ಸಮರ್ಪಿತ ದೇವಾಲಯಗಳು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ಕೂರ್ಮಾಯಿ ಮತ್ತು ಶ್ರೀಕೂರ್ಮಂ ನಲ್ಲಿ ನೆಲೆಗೊಂಡಿವೆ.

                                               

ಮಕ್ಕಳ ದಿನಾಚರಣೆ

ಮಕ್ಕಳ ಹಕ್ಕು, ಹಿತರಕ್ಷಣೆ ಮತ್ತು ಯೋಗಕ್ಷೇಮದ ಉದ್ದೇಶದೊಂದಿಗೆ ಜಗತ್ತಿನಾದ್ಯಂತ ಮಕ್ಕಳ ದಿನಾಚರಣೆಯನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸುತ್ತಿದ್ದಾರೆ. ನವೆಂಬರ್ 20ರಂದು ‘ಯುನಿವರ್ಸಲ್ ಚಿಲ್ಡ್ರನ್ಸ್ ಡೇ’ ಎಂದಾದರೆ, ಜೂನ್ 1ರಂದು ‘ಇಂಟರ್‌ ನ್ಯಾಷನಲ್‌ ಚಿಲ್ಡ್ರನ್ಸ್ ಡೇ’ ಆಚರಣೆಯಲ್ಲಿದೆ. ಇಂದು ಬಹಳಷ್ಟು ದೇಶಗಳು, ತಮ್ಮ ಮಕ್ಕಳಪ್ರೇಮಿ ರಾಷ್ಟ್ರನಾಯಕರೊಬ್ಬರ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ ರೂಪದಲ್ಲಿ ಆಚರಿಸುತ್ತಿವೆ.BB ಆದರೆ ಚಾಚಾ ನೆಹರೂ ಅವರಿಗೆ ಮಕ್ಕಳ ಮೇಲಿನ ಮಮತೆ ಎಷ್ಟಿತ್ತೆಂದರೆ ಅವರು ಮಕ್ಕಳಿಗಾಗಿ ಏನು ಮಾಡಲೂ ಸಿದ್ಧವಿದ್ದರು. ಮುಜುಗರ ಬದಿಗಿಟ್ಟು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ಯೆಂದು ಆಚರಿಸಲು ಒಪ್ಪಿಕೊಂಡರು. ಈ ರೀತಿ 1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ ‘ಮಕ್ಕಳ ದಿನಾಚರಣೆ’ ...

                                               

ಕದಿರು (ನೂಲು ತಯಾರಿಕೆ)

ಕದಿರು ಎಂದರೆ ಉಣ್ಣೆ, ಅಗಸೆ, ಸೆಣಬು, ಹತ್ತಿ ನಾರುಗಳನ್ನು ನೂಲುಗಳಾಗಿ ನೂಲುವುದಕ್ಕೆ, ಹೊಸೆಯುವುದಕ್ಕೆ ಬಳಸಲಾದ ಸಾಮಾನ್ಯವಾಗಿ ಕಟ್ಟಿಗೆಯಿಂದ ತಯಾರಿಸಲಾದ ನೇರವಾದ ಚೂಪು ತುದಿಯ ವಸ್ತು. ಇದಕ್ಕೆ ಹಲವುವೇಳೆ ಕೆಳಗೆ, ಮಧ್ಯದಲ್ಲಿ, ಅಥವಾ ಮೇಲೆ, ಸಾಮಾನ್ಯವಾಗಿ ಕದಿರು ಬಿಲ್ಲೆ ಎಂದು ಕರೆಯಲ್ಪಡುವ ದುಂಡು ಬಿಲ್ಲೆ ಅಥವಾ ಗೋಳಾಕಾರದ ವಸ್ತುವಿನ ಭಾರ ಲಗತ್ತಿಸಲಾಗುತ್ತದೆ. ಆದರೆ ಕದಿರು ಬಿಲ್ಲೆಯ ಭಾರವನ್ನು ಲಗತ್ತಿಸಲಾಗದ ಅನೇಕ ಕದಿರುಗಳು ಇವೆ. ಇವುಗಳ ಆಕಾರವನ್ನು ಕೆಳಗಡೆಗೆ ದಪ್ಪವಾಗಿಸಲಾಗುತ್ತದೆ, ಉದಾಹರಣೆಗೆ ಆರೆನ್‍ಬರ್ಗ್ ಮತ್ತು ಫ಼್ರೆಂಚ್ ಕದಿರುಗಳು. ನೂಲಿಗೆ ಮಾರ್ಗ ತೋರಿಸಲು ಕದಿರು ಮೇಲ್ಗಡೆ ಕೊಕ್ಕೆ, ಜಾಡು, ಅಥವಾ ಕಚ್ಚನ್ನು ಕೂಡ ಹೊಂದಿರಬಹುದು. ಒಬ್ಬರು ನೂಲಲು ಬಯಸುವ ನೂಲಿನ ದಪ್ಪವನ್ನು ಆಧರಿಸಿ ಕದಿರುಗಳು ಅನೇಕ ಭಿನ್ನ ಗಾತ್ರಗಳ ...

                                               

ಈಜಿಪ್ಟಿನ ಪುರಾತತ್ವ

ಪ್ರಾಚೀನ ಈಜಿಪ್ಟಿನಲ್ಲಿ ಸಮಕಾಲೀನ ನಾಗರಿಕತೆಗಳಲ್ಲೆಲ್ಲ ಔನ್ನತ್ಯ ಸ್ಥಾಪಿಸಿಕೊಂಡು ಸಾವಿರಾರು ವರ್ಷಗಳ ಕಾಲ ಅವಿರತವಾಗಿ ಬಂದ ನಾಗರಿಕತೆ ಇತ್ತು. ಆ ಕಾಲದ ಅವಶೇಷಗಳಾದ ಪಿರಮಿಡ್ಡುಗಳು, ಗೋರಿಗಳು, ದೇವಾಲಯಗಳು ಮತ್ತು ಶಿಲ್ಪಗಳು ಲೋಕಪ್ರಸಿದ್ಧ. ಅಲ್ಲದೆ, ಪುರಾತನ ಕಾಲದ ಎಲ್ಲ ತರಹದ ವಸ್ತುಗಳನ್ನೂ ಹೆಚ್ಚು ಕೆಡದಂತೆ ರಕ್ಷಿಸುವ ಒಣಹವೆ ಇಲ್ಲಿರುವುದರಿಂದ, ಪ್ರಾಚೀನ ಸಂಸ್ಕøತಿಗಳ ಅಭ್ಯಾಸಿಗೆ ಬೇರೆ ಯಾವುದೇ ದೇಶದಲ್ಲೂ ಸಿಗದಷ್ಟು ಸಾಮಾಗ್ರಿಗಳು ಇಲ್ಲಿ ಸಿಗುತ್ತವೆ. 1938ರಲ್ಲಿ ಸಕಾರ ಎಂಬಲ್ಲಿ ಕಂಡುಬಂದ ಸುಮಾರು ಕ್ರಿ. ಪೂ. 3000ದ ಗೋರಿಯೊಂದರಲ್ಲಿ ಮೃತನಿಗಾಗಿ ಅಂದು ಇಟ್ಟಿದ್ದ ಮೀನು, ಮಾಂಸ, ಹಣ್ಣು, ರೊಟ್ಟಿ, ಮುಂತಾದುವೆಲ್ಲ ಇನ್ನೂ ಉಳಿದಿದ್ದುವು. ಸುಮಾರು 5.000 ವರ್ಷಗಳ ಹಿಂದೆ ಆ ಗೋರಿಗೆ ಹೆಣ ಸಾಗಿಸಿ ಇರಿಸಿದ ಜನರ ಹೆಜ್ಜೆ ಗುರುತುಗಳ ...

                                               

ಅಕಿರಾ ತೊರಿಯಾಮಾ

ಅಕಿರ ತೊರಿಯಾಮಾರವರು ತಮ್ಮ ಬಾಲ್ಯದಿಂದಲು ಅನಿಮೆಗಳನ್ನು ನೋಡುತ್ತಿದ್ದರು.ಅಕಿರಾ ತೊರಿಯಾಮಾರವರು ಪ್ರಾಥಮಿಕ ಶಾಲೆಯಲ್ಲಿ ಇರುವಾಗ ಅಷ್ಟೊಂದು ಮನರಂಜನೆ ಇಲ್ಲವಾದ್ದರಿಂದ ಅವರ ಸ್ನೇಹಿತರು ಅನಿಮೆ ಮತ್ತು ಕಾರ್ಟೂನ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದರು.ಅಕಿರ ತೊರಿಯಾಮಾರವರು ಅವರ ಸ್ನೇಹಿತರಿಗಿಂತ ಅವರು ಚೆನ್ನಾಗಿ ಚಿತ್ರ ಬಿಡಿಸಲು ಶುರು ಮಾಡಿದರು.ಇವರು ತಮ್ಮ ಬಾಲ್ಯದಲ್ಲಿ ಚಿತ್ರಕಲೆ ತರಗತಿಗಯಲ್ಲಿ ಒಮ್ಮೆ ಹಂಡ್ರೆಡ್ ಅಂಡ್ ಒನ್ ಡಾಲ್ಮೇಟಿಯನ್ಸ್ ಚಿತ್ರವನ್ನು ಬರೆದು ಪ್ರಶಸ್ತಿ ಪಡೆದಿದ್ದರು,ಇದು ಅವರು ಕಾರ್ಟೂನ್ ಲೋಕಕ್ಕೆ ಇಟ್ಟ ಮೊದಲ ಹೆಜ್ಜೆ ಆಗಿತ್ತು.ಅಕಿರ ತೊರಿಯಾಮಾರವರಿಗೆ ಕಾರ ಮತ್ತು ಮೋಟಾರ್ ಸೈಕಲ್ ಬಗ್ಗೆ ತುಂಬ ಆಸಕ್ತಿ ಇದೆ,ಈ ಆಸಕ್ತಿಯು ಅವರಿಗೆ ತಮ್ಮ ಅಪ್ಪರವರಿಂದ ಬಂದಿದೆ.

                                               

ಭಾವನಾ ಕಾಂತ್

ಭಾವನಾ ಕಾಂತ್ ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್‌. ಮೋಹನ ಸಿಂಗ್, ಅವನಿ ಚತುರ್ವೇದಿ ಮತ್ತು ಇವರನ್ನು ಜೂನ್ ೨೦೧೬ ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಕ್ವಾಡ್ರನ್‌ಗೆ ಸೇರಿಸಲಾಯಿತು. ಪ್ರಾಯೋಗಿಕ ಆಧಾರದ ಮೇಲೆ ಭಾರತ ವಾಯುಸೇನೆಯಲ್ಲಿ ಮಹಿಳೆಯರಿಗೆ ಫೈಟರ್ ಸ್ಟ್ರೀಮ್ ತೆರೆಯಲು ಭಾರತ ಸರ್ಕಾರ ನಿರ್ಧರಿಸಿದ ನಂತರ, ಈ ಮೂವರು ಮಹಿಳೆಯರನ್ನು ಮೊದಲು ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಯಿತು. ಮೇ ೨೦೧೯ ರಲ್ಲಿ, ಯುದ್ಧ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್ ಎನಿಸಿಕೊಂಡರು.

                                               

ಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿ

ಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಯು ಮನಃಶಾಸ್ತ್ರದ ಒಂದು ಸಿದ್ಧಾಂತ, ಇದನ್ನು ಅಬ್ರಹಾಂ ಮ್ಯಾಸ್ಲೊ ೧೯೪೩ರಲ್ಲಿ ತಮ್ಮ "ಅ ಥಿಯರಿ ಆಫ಼್ಹ ಹ್ಯುಮನ್ ಮೋಟಿವೇಶನ್" ಎಂಬ ಪತ್ರಿಕೆಯಲ್ಲಿ ಪ್ರಸ್ತಾಪಿಸಿದರು. ಮ್ಯಾಸ್ಲೊ ರವರು ತರುವಾಯ ತಮ್ಮ ಆಲೋಚನೆಗಳನ್ನು,ತಮ್ಮ ಭಾವನೆಗಳನ್ನು ಮಾನವನ ಜನಸಿದ್ಧಾಂತದ ಕುತುಹಲದ ವಿಕ್ಷಣೆಗೆ ನಿಸ್ತರಿಸಲಾಗುತ್ತದೆ. ಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಯ ಸಿದ್ಧಾಂತ ಇನ್ನಿತರ ಮಾನವನ ಮನಃಶಾಸ್ತ್ರ ಬೆಳವಣಿಗೆಯ ಸಿದ್ಧಾಂತಗಳನ್ನು ಹೋಲುತ್ತದೆ. ಆ ಸಿದ್ಧಾಂತಗಳಲ್ಲಿ ಕೆಲವೊಂದು ಮಾನವನ ಅಭಿವೃದ್ಧಿಯ ಹಂತಗಳನ್ನು ವರ್ಣಿಸುತ್ತದೆ. ಮ್ಯಾಸ್ಲೊ ತನ್ನ ಸಿದ್ಧಾಂತದಲ್ಲಿ ಶಾರೀರಿಕ, ಸುರಕ್ಷತೆ, ಆತ್ಮೀಯತೆ, ಪ್ರೀತಿ, ಗೌರವ, ಸ್ವಯಂ-ವಾಸ್ಥವೀಕರಣ, ಸ್ವಯಂ-ಉತ್ಕೃಷ್ಟತೆ"ಯನ್ನು ಬಳಸಲಾಗಿದೆ. ಮ್ಯಾಸ್ಲೊ ರವರು ಅಸ್ವಸ್ಥ ಅಥವಾ ನರ ...

                                               

ಶಕುಂತಲೆ

ಶಕುಂತಲೆ ಮಹಾಭಾರತದಲ್ಲಿ ಬರುವ ಒಂದು ಕಥೆಯ ಪಾತ್ರ. ಶಕುಂತಲೆ ದುಶ್ಯಂತ ಮಹಾರಾಜನ ಪತ್ನಿ ಮತ್ತು ಚಕ್ರವರ್ತಿ ಭರತನ ತಾಯಿ. ಮಹಾಭಾರತದಲ್ಲಿ ಈ ಕಥೆಯ ಉಲ್ಲೇಖವಿದೆ. ಕಾಳಿದಾಸನು ಅಭಿಜ್ಞಾನ ಶಾಕುಂತಲಮ್ ಎಂಬ ನಾಟಕವನ್ನು ಬರೆದಿದ್ದಾನೆ. ಇಲ್ಲಿ ಬರುವ ಶಕುಂತಲೆಯ ಪಾತ್ರವು ಬರಹಗಾರರಿಂದ ನಾಟಕೀಯವಾಗಿ ನಿರೂಪಿಸಲ್ಪಟ್ಟಿದೆ.

ಚಿತ್ರಕಲೆ
                                     

ⓘ ಚಿತ್ರಕಲೆ

ಚಿತ್ರಕಲೆ ಬಣ್ಣಗಳನ್ನು ಉಪಯೋಗಿಸಿ ಕಲಾತ್ಮಕ ಚಿತ್ರಗಳನ್ನು ರಚಿಸುವುದು. ಈ ರಚನೆಗಳನ್ನೂ ಕೂಡ ಚಿತ್ರಕಲೆಗಳೆಂದು ಕರೆಯಲಾಗುತ್ತಿತ್ತು. ಆದರೆ ಇಪ್ಪತ್ತನೆಯ ಶತಮಾನದಾದ್ಯಂತ ಚಿತ್ರಕಲೆ ಎಂಬ ಪದಕ್ಕೆ ದೃಶ್ಯಕಲೆ ಎಂಬ ಅರ್ಥವನ್ನೂ ಆರೋಪಿಸಲ್ಪಟ್ಟಿದೆ. ಉದಾಹರಣೆಗೆ ’ಚಿತ್ರಕಲೆ’ ಎಂಬುದು ವರ್ಣಗಳನ್ನು ಬಳಸಿ, ಕಾಗದ ಅಥವಾ ಕ್ಯಾನ್ವಾಸಿನ ಮೇಲೆ ಮಾನವಜೀವಿ ಮೂರ್ತ ಅಥವಾ ಅಮೂರ್ತ ದೃಶ್ಯವನ್ನು ’ಅರ್ಥವತ್ತಾಗಿ ಮೂಡಿಸುವುದೇ ಆಗಿದೆ. ಈ ಹಿಂದಿನ ವಾಕ್ಯದಲ್ಲಿ ಸಹಜವೆನಿಸುವ ಅನೇಕ ಐತಿಹಾಸಿಕ ಅರ್ಥಗಳಿವೆ. ಉದಾಹರಣೆಗೆ ಮಾನವನನ್ನು ಹೊರತುಪಡಿಸಿದವರು ಸೃಷ್ಟಿಸುವುದನ್ನು ನಿಸರ್ಗಸೃಷ್ಟಿ ಎನ್ನುತ್ತೇವೆ. ಅಂದರೆ ಮಾನವನನ್ನು ಹೊರತುಪಡಿಸಿದವರು ಚಿತ್ರರಚಿಸಲಾರರು, ಮಾನವರಾದ ಕಲಾವಿಮರ್ಶಕರ ಪ್ರಕಾರ. ಎರಡನೆಯದಾಗಿ, ಮೊದಲೆಲ್ಲ, ಅಂದರೆ ಸುಮಾರು ಹದಿನೈದನೇ ಶತಮಾನದ ಯುರೋಪಿನ ರೆನಾಯಸಾನ್ಸ್ ಕಾಲಕ್ಕೆ ತೈಲವರ್ಣದ ಚಿತ್ರಕಲೆ ಹುಟ್ಟಿಕೊಂಡಾಗ, ಅವುಗಳು ದೈವೀಕ ಭಕ್ತಿಗೆ ’ಪೂರಕವಾಗಿ’ ಮಾತ್ರ ಬಳಕೆಗೊಳ್ಳುತ್ತಿತ್ತು. ತನ್ನದಲ್ಲದ ಉದ್ದೇಶವನ್ನು ಪೂರೈಸಿದ ಅಂತಹ ಚಿತ್ರಕಲೆಯನ್ನು ಇಂದು ’ಪೂರಕಚಿತ್ರ’ ಅಥವಾ ’ಇಲ್ಲಸ್ಟ್ರೇಷನ್’ ಎಂದು ಕರೆಯಲಾಗುತ್ತದೆ.

ಚಿತ್ರಕಲೆ ಚಿತ್ರಕಲೆಯ ಬಗ್ಗೆ ತಿಳಿಯುವ ಪ್ರಯತ್ನ ಮಾಡುತ್ತಿರುವ ತಮಗೆ ಹೃತ್ಪೂರ್ವಕ ವಂದನೆಗಳು. `ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ ಚಿತ್ರಕಲೆಯ ಸವಿಯು ಸವಿದವನಿಗೇ ಗೊತ್ತು. ಚಿತ್ರಕಲೆಯ ಬಗ್ಗೆ ತಿಳಿಯುವ ಮುನ್ನ ನಾವು ಕಲೆಯ ಬಗ್ಗೆ ಅರಿತುಕೊಳ್ಳಲೇಬೇಕು. ಕಲೆ ಎಂದರೇನು? ಎಂಬುದನ್ನು ತಿಳಿಯುವುದರೊಂದಿಗೆ `ಕಲೆ, `ಚಿತ್ರ ಹಾಗೂ ಚಿತ್ರಕಲೆ ಬಗ್ಗೆ ಅರಿತುಕೊಳ್ಳಬೇಕಾಗಿದೆ. ಕಲೆ ಎಂದರೇನು? ಈ ಪ್ರಶ್ನೆಗೆ ಉತ್ತರಿಸುವುದು ಸುಲಭ ಅಲ್ಲ. ಸಮುದ್ರದ ದಡದಲ್ಲಿ ನಿಂತು. ಒಂದು ಬೊಗಸೆ ಸಮುದ್ರದ ನೀರನ್ನು ಎತ್ತಿ ಹಿಡಿದು ` ನೋಡಿ ನನ್ನ ಬೊಗಸೆಯಲ್ಲ್ಲಿರುವುದೇ ಇದೇ ಸಮುದ್ರ ಎಂದು ಕೂಗಿಕೊಂಡಂತೆ. ಹೀಗಿದ್ದರೂ ಸಹ ತಮ್ಮ್ಮ ತಮ್ಮ ಪೂರ್ವಾನುಭವಗಳ ಆಧಾರಗಳಿಂದ ಅಥವಾಾ ಕಲೆಯ ಒಂದಂಶವನ್ನು ಸ್ಪರ್ಶಿಸಿ ಇಡೀ ಕಲೆಯ ಚಿಕ್ಕ ಪರಿಚಯ ಅಥವಾಾ ಪ್ರಯತ್ನವನ್ನು ಮಾಡುವ ನಿಟ್ಟಿನಲ್ಲಿ ಚಿಂತಿಸಿ ಹೇಳುವುದಾದರೆ.ಮಾನವನ ವಿಶಿಷ್ಟ ಚೞುವಟಿಕೆಯೇ ಕಲೆ ಎಂಬ ಅಭಿಪ್ರಾಯ ಸರಳ ರೂಪವಾಗಿ ಕಂಡುಬರುತ್ತ ದೆ.

                                               

ಮಹಾನಟಿ ಸಾವಿತ್ರಿ

ಶಕುಂತಲಾರಾಜಾ ರವಿ ವರ್ಮನು ಬಿಡಿಸಿದಂತಹ ಚಿತ್ರಕಲೆ.ಹಿಂದೂ ಧರ್ಮದಲ್ಲಿ ಶಕುಂತಲಾ ದುಶ್ಯಂತನ ಪತ್ನಿ. ಮತ್ತು ಚಕ್ರವರ್ತಿ ಭರತನ ತಾಯಿ. ಮಹಾಭಾರತದಲ್ಲಿ ಈಕೆಯ ಕಥೆಯನ್ನು ಹೇಳಲಾಗಿದೆ ಮತ್ತು ಅನೇಕ ಬರಹಗಾರರಿಂದ ನಾಟಕೀಯವಾಗಿ ನಿರೂಪಿಸಲ್ಪಟ್ಟಿದೆ

                                               

ಕಾನನ (ಮಾಸಪತ್ರಿಕೆ)

ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿಸುವುದು. ಪರಿಸರಕ್ಕೆ ಸಂಬಂದಿಸಿದ ವನ್ಯವಿಜ್ಞಾನಿಗಳ ಹೊಸ ಆವಿಷ್ಕಾರಗಳನ್ನು ಕರುನಾಡ ಜನತೆಗೆ ಕನ್ನಡದಲ್ಲಿ ತಿಳಿಸಲು ಯತ್ನಿಸುವುದು. ಪರಿಸರಕ್ಕೆ ಸಂಬಂದಪಟ್ಟ ಎಲ್ಲಾ ವಿಷಯಗಳನ್ನು ಕನ್ನಡದಲ್ಲಿಯೇ ಸಿಗುವಂತೆ ಮಾಡುವುದು. ಪರಿಸರ ಆಸಕ್ತಿಯುಳ್ಳ ಯುವಕರಿಗೆ ಪರಿಸರಕ್ಕೆ ಸಂಬಂಧಪಟ್ಟ ಅವರ ಛಾಯಾಚಿತ್ರಗಳನ್ನು, ಲೇಖನಗಳನ್ನು ಪ್ರಕಟಿಸಲು ವೇದಿಕೆ ಕಲ್ಪಿಸಿಕೊಡುವುದು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಬಂಡೀಪುರ ಅಭಯಾರಣ್ಯ ಕಾಡುಗಳ ಒಂದು ಕಿ.ಮೀ ಪ್ರದೇಶದಲ್ಲಿನ ಎಲ್ಲಾ ಶಾಲೆಗಳಿಗೆ ಕಾನನ ಮುದ್ರಣ ಪ್ರತಿಯನ್ನು ತಲುಪಿಸುವುದು.