Back

ⓘ ಚಿಕ್ಕೋಡಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಚಿಕ್ಕೋಡಿ ಕರ್ನಾಟಕ ರಾಜ್ಯದ ಮಹಾರಾಷ್ಷ್ರ ಗಡಿಯಲ್ಲಿರುವ ಒಂದು ಸುಂದರ ನಗರ. ಸುತ್ತಲು ಬೆಟ್ಟ ಗುಡ್ಡಗಳಿಂದ ಆವೃತವಾದ ಸೃಷ್ಟಿ ಸೊಬಗನು ಚೆಲುವ ..




ಚಿಕ್ಕೋಡಿ
                                     

ⓘ ಚಿಕ್ಕೋಡಿ

ಚಿಕ್ಕೋಡಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಚಿಕ್ಕೋಡಿ ಕರ್ನಾಟಕ ರಾಜ್ಯದ ಮಹಾರಾಷ್ಷ್ರ ಗಡಿಯಲ್ಲಿರುವ ಒಂದು ಸುಂದರ ನಗರ. ಸುತ್ತಲು ಬೆಟ್ಟ ಗುಡ್ಡಗಳಿಂದ ಆವೃತವಾದ ಸೃಷ್ಟಿ ಸೊಬಗನು ಚೆಲುವಿನ ಚಿತ್ತಾರದಂತೆ ಮೈನರಳಿಸಿಕೊಂಡು ಮಲಗಿರುವ ನಿಸಗ೯ದ ಸೌಂದರ್ಯ ಸಿರಿ ನೋಡುವುದೆ ಒಂದು ಭಾಗ್ಯ.ಇನ್ನು ಹೊಲ ಗದ್ದೆಗಳತ್ತ ಕಣ್ಣು ಹಾಯಿಸಿದರೆ ಸಾಕು ಹಚ್ಚು ಹಸಿರಾಗಿ ಕಾಣುವ ಕಬ್ಬಿನ ಗದ್ದೆಗಳು ಅಲ್ಲೊಂದು ಇಲ್ಲೊಂದು ಕಾಣುವ ವೀಳ್ಯದೆಲೆ ತೋಟಗಳನ್ನು ನೋಡಿ ಮನ ತನಿಸದೆ ಇರಲಾರದು. ಇನ್ನು ನಗರ ವೈಭವ ನಗರದ ಆಗ್ನೇಯ ದಿಕ್ಕನು ಪ್ರವೇಶಿಸುತ್ತಿದ್ದಂತೆ ಕಾಣುವ ಸುಂದರ ಹಾಗೂ ಭವ್ಯವಾದ ಮಿನಿ ವಿಧಾನ ಸೌಧವಿದೆ. ಚಿಕ್ಕೋಡಿ ನಗರ ಜಿಲ್ಲಾ ಕೇಂದ್ರದ ಎಲ್ಲ ಅರ್ಹತೆ ಸ್ಠಾನಮಾನವನ್ನು ಹೊಂದಿದರೂ ಕೂಡಾ ಇನ್ನುವರಿಗೂ ರಾಜ್ಯ ಸರಕಾರ ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡದೇ ಇರುವುದು ಒಂದು ವಿಪರ್ಯಾಸವೇ ಸರಿ. ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಅನ್ನುವುದು ಇಲ್ಲಿನ ಜನರ ಬಹುದಿನದ ಬೇಡಿಕೆಯಾಗಿದೆ. ಇಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳಿವೆ.

                                     

1. ಭೂಗೋಳ

೨೦೦೧ ಭಾರತದ ಜನಗಣತಿಯ ಪ್ರಕಾರ ಚಿಕ್ಕೋಡಿಯು ೫೧% ಪುರುಷರು ಮತ್ತು ೪೯% ಮಹಿಳೆಯರೊಂದಿಗೆ ೩೨,೮೨೦ ಜನಸಂಖ್ಯೆಯನ್ನು ಹೊಂದಿತ್ತು. ಇಲ್ಲಿ ಜೈನ ಸಮುದಾಯ, ಲಿಂಗಾಯತರು, ಮರಾಠಾ, ಮುಸ್ಲಿಮರು ಹಾಗು ಇತರ ಸಮುದಾಯಗಳು ಇವೆ. ಈ ತಾಲುಕಿನ ಬಹಳಷ್ಟು ಜನರು ಕೃಷಿ ಮೇಲೆ ಅವಲಂಬಿತವಾಗಿದ್ದಾರೆ, ಕಬ್ಬು ಇಲ್ಲಿನ ಪ್ರಮುಖ ಬೆಳೆ. ವೇದಗಂಗಾ, ದೂಧಗಂಗಾ, ಕೃಷ್ಣಾ ನದಿಗಳು ತಾಲುಕಿನ ಪ್ರಮುಖ ನದಿಗಳು. ಒಕ್ಕಲುತನ ಇಲ್ಲಿಯ ಮುಖ್ಯ ಕಸಬು; ಕಬ್ಬು, ತಂಬಾಕು, ಸೋಯಾಬಿನ್, ಜೋಳ, ಕಡಲೆ ಮತ್ತು ಇನ್ನಿತರ ವಾನಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ.

                                     

2. ಸಂಸ್ಕೃತಿ

ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಂತೆ ಚಿಕ್ಕೋಡಿ ಕೂಡ ಹಲವು ಭಾಷಿಕರ ಹಾಗು ಹಲವು ಧರ್ಮೀಯರ ನೆಲೆಬೀಡು. ಕನ್ನಡ ಆಡಳಿತ ಭಾಷೆ, ಹಿಂದಿ, ಮರಾಠಿ ಇಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆಗಳು. ಉತ್ತರ ಕರ್ನಾಟಕದ ಸೊಗಡು ಇಲ್ಲಿಯ ಜೀವನ ಶೈಲಿಯ ವಿಶೇಷತೆ.

                                     

3. ರಸ್ತೆ ಹಾಗೂ ಸಾರಿಗೆ

ರಾಜ್ಯ ಹೆದ್ದಾರಿ ಸಂಖ್ಯೆ ೧೨ ಮತ್ತು ೧೮ ಸಂಪರ್ಕಿಸುತ್ತವೆ. ವಾಯುವ್ಯ ಸಾರಿಗೆ ಸಂಸ್ಠೆ ಬಸ್ಸುಗಳು ಇಲ್ಲಿನ ಮೂಲ ರಸ್ತೆ ಸಾರಿಗೆ. ನಿಪ್ಪಾಣಿಯಿಂದ ೨೪ ಕಿಮಿ ದೂರದಲ್ಲಿದೆ ರಾಷ್ಟ್ರಿಯ ಹೆದ್ದಾರಿ - ೪.