Back

ⓘ ಬೆಳ್ಳಿತೆರೆ ಬೆಳಗಿದವರು ಅ.ನಾ.ಪ್ರಹ್ಲಾದ ರಾವ್ ಬರೆದಿರುವ ೨೦೦೭ರಲ್ಲಿ ಬಿಡುಗಡೆ ಆದ ೨೨೦ ಪುಟಗಳ ಪುಸ್ತಕ. ಇದು ಕನ್ನಡ ಚಲನಚಿತ್ರ ರಂಗದ ಸರ್ವತೋಮುಖ ಅಭಿವೃದ್ಡಿಗೆ ಕೊಡುಗೆ ನೀಡಿದ ೧೧೫ ಮಂದಿ ಮಹಾನ ..                                               

ಎ.ಎನ್. ಪ್ರಹ್ಲಾದ ರಾವ್

ಅ.ನಾ.ಪ್ರಹ್ಲಾದ ರಾವ್‌ರವರು, ಕನ್ನಡದ ಪದಬಂಧ ಲೇಖಕರಲ್ಲಿ ಪ್ರಮುಖರು. ಇವರು ಕನ್ನಡದಲ್ಲಿ ಸುಮಾರು ೨೨,೦೦೦ ಪದಬಂಧಗಳನ್ನು ರಚಿಸಿದ್ದಾರೆ. ಇದುವರೆವಿಗೂ ಇವರು ರಚಿಸಿರುವ ಪದಬಂಧಗಳಿಗಾಗಿ ಆರು ಲಕ್ಷ ಸುಳುಹುಗಳನ್ನು ನೀಡಿದ್ದಾರೆ. ಇವರ ಪದಬಂಧಗಳು ಕನ್ನದದ ಪ್ರಮುಖ ಪ್ರತ್ರಿಕೆಗಳು ಹಾಗು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಪದಬಂಧ ರಚನೆಯಲ್ಲಿ ಭಾರತದಲ್ಲೇ ಇವರು ಅಗ್ರಗಣ್ಯರು ಎಂದು ಹೇಳಲಾಗಿದೆ. ಜೀವನ ಜುಲೈ ೨೪,೧೯೫೩ರಂದು ಕನಾ೯ಟಕ ರಾಜ್ಯದ ಕೋಲಾರ ಜಿಲ್ಲೆಯ ಅಬ್ಬಣಿ ಗ್ರಾಮದಲ್ಲಿ ಜನಿಸಿದರು. ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ೧೯೭೫ರಲ್ಲಿ ಆರಂಭಿಸಿದರು. ೧೯೮೩ರಲ್ಲಿ ಕರ್ನಾಟಕ ಸರ್ಕಾರದ ಮಾಹಿತಿ ಇಲಾಖೆಗೆ ಸೇರಿಕೊಂಡರು. ಸಾಧನೆ ೧೯೮೪ರಲ್ಲಿ ಪತ್ರಿಕೆಗಳಿಗೆ ಪದಬಂಧಗಳನ್ನು ರಚಿಸಲು ಆರಂಭಿಸಿದ ಇವರು, ಚಲನಚಿತ್ರ, ಕ್ರೀಡೆ, ಸಾಮಾನ್ಯ ಜ ...

                                     

ⓘ ಬೆಳ್ಳಿತೆರೆ ಬೆಳಗಿದವರು

ಬೆಳ್ಳಿತೆರೆ ಬೆಳಗಿದವರು ಅ.ನಾ.ಪ್ರಹ್ಲಾದ ರಾವ್ ಬರೆದಿರುವ ೨೦೦೭ರಲ್ಲಿ ಬಿಡುಗಡೆ ಆದ ೨೨೦ ಪುಟಗಳ ಪುಸ್ತಕ. ಇದು ಕನ್ನಡ ಚಲನಚಿತ್ರ ರಂಗದ ಸರ್ವತೋಮುಖ ಅಭಿವೃದ್ಡಿಗೆ ಕೊಡುಗೆ ನೀಡಿದ ೧೧೫ ಮಂದಿ ಮಹಾನುಭಾವರ ಬಗ್ಗೆ ಈ ಪುಸ್ತಕದಲ್ಲಿ ಲೇಖನಗಳಿವೆ.ಕನ್ನಡ ಚಲನಚಿತ್ರರಂಗದ ಆದ್ಯ ಪಿತಾಮಹ ಗುಬ್ಬಿ ವೀರಣ್ಣ, ಕನ್ನಡದ ಮೊದಲ ಚಲನಚಿತ್ರ ಸತಿ ಸುಲೋಚನ ನಾಯಕ ಸುಬ್ಬಯ್ಯ ನಾಯ್ಡು, ಮೇರು ನಟ ಡಾ.ರಾಜ್‌ಕುಮಾರ್ ಸೇರಿದಂತೆ ಹಿರಿಯ ನಟ ನಟಿಯರು, ಸಂಗೀತ ನಿರ್ದೇಶಕರು, ತಂತ್ರಜ್ಙರು, ಹಿನ್ನೆಲೆ ಗಾಯಕರೇ ಮುಂತಾದವರ ಬಗ್ಗೆ ಪರಿಚಯ ಲೇಖನಗಳನ್ನು ಈ ಪುಸ್ತಕ ಒಳಗೊಂಡಿದೆ. ಖ್ಯಾತ ನಿದೇ೯ಶಕ ಗಿರೀಶ್ ಕಾಸರವಳ್ಳಿ ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಪುಸ್ತಕವನ್ನು ಹಿರಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಬಿಡುಗಡೆ ಮಾಡಿದರು. "ಯಾವುದೇ ಉತ್ಪ್ರೇಕ್ಷೆ ಇಲ್ಲದೆ, ಕೇವಲ ಅಂಕಿ-ಅಂಶಗಳ ಆಧಾರದ ಮೇಲೆ ವಿವರ ಕಟ್ಟುತ್ತಾ ಹೋಗುವ ಈ ಲೇಖನಗಳನ್ನು ಒಂದು ಒಳ್ಳೆಯ ಆಕರ ಸಾಮಾಗ್ರಿಯಾಗಿ ನೋಡಬಹುದು. ಲೇಖಕನ ವೈಯಕ್ತಿಕ ಅನಿಸಿಕೆಗಳನ್ನು ಇಲ್ಲಿ ಸೇರಿಸಿಲ್ಲವಾದ್ದರಿಂದ ವಿಷಯದ ಮೇಲ್ಮೈ ದಾಟಿ ಒಳನುಗ್ಗಿ ನೋಡುವವರಿಗೆ ಸ್ವಲ್ಪ ನಿರಾಶೆಯಾಗಬಹುದು. ಆದರೆ ಒಂದು ವಿಷಯ ಸೂಚಿ ಗ್ರಂಥ ಏನನ್ನು ಸಾಧಿಸಲು ಹೊರಟಿರುತ್ತದೆ ಅದು ಇಲ್ಲಿ ಪೂರ್ಣಗೊಂಡಿದೆ" ಎಂದು ಮುನ್ನುಡಿಯಲ್ಲಿ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →