Back

ⓘ ದೂರವಾಣಿ ಯಾವುದೇ ಶಬ್ದವನ್ನು ಕಳಿಸುವ ಮತ್ತು ಸ್ವೀಕರಿಸುವ ಸಂಪರ್ಕ ಸಾಧನ. ಗೃಹಬಳಕೆಯಲ್ಲಿರುವ ಸಾಮಾನ್ಯ ಯಂತ್ರಗಳಲ್ಲಿ ದೂರವಾಣಿಯೂ ಒಂದು. ೨೦೦೬ ರ ಅಂತ್ಯದ ಹೊತ್ತಿಗೆ ಪ್ರಪಂಚದಲ್ಲಿ ಒಟ್ಟು ೪೦೦ ಕ ..
                                               

ದೂರವಾಣಿ ಮಾರಾಟಗಾರಿಕೆ

ದೂರವಾಣಿ ಮಾರಾಟಗಾರಿಕೆ ಇದೊಂದು ನೇರ ಮಾರಾಟಗಾರಿಕೆ ಇದರಲ್ಲಿ ಮಾರಾಟ ಮಾಡುವವನು ಗ್ರಾಹಕ ರಿಗೆ ಉತ್ಪನ್ನಗಳನ್ನು ಕೊಂಡುಕೊಳ್ಳಲು ಮನವಿ ಮಾಡಿಕೊಳ್ಳುತ್ತಾನೆ ಅಥವಾ ಸೇವೆಗಳನ್ನು ಪಡೆಯಲೂ ಮನವಿ ಮಾಡಿಕೊಳ್ಳುತ್ತಾನೆ, ಇದನ್ನು ದೂರವಾಣಿಯಿಂದಲ್ಲಾದರೂ ಮಾಡುತ್ತಾನೆ ಅಥವಾ ದೂರವಾಣಿಯಲ್ಲಿ ಸಮಯ ನಿಗದಿಪಡಿಸಿಕೊಂಡು ವೆಬ್ ಕಾನ್ಫರೆನ್ಸಿಂಗ್ ಮುಖಾಂತರ ಮುಖಾಮುಖಿಯಾಗಿ ಮಾತುಕತೆ ನಡೆಸಿ ಮಾಡುತ್ತಾನೆ. ದೂರವಾಣಿ ಮಾರಾಟಗಾರಿಕೆಯನ್ನು, ಸ್ವಯಂಚಾಲಿತ ಡಯಲಿಂಗ್ ಮುಖೇನ ಧ್ವನಿ ಮುದ್ರಿತ ಮನವಿಯನ್ನು ಕೇಳಿಸುವ ಮೂಲಕವೂ ಮಾಡಲಾಗುತ್ತದೆ. ದೂರವಾಣಿ ಮಾರಾಟಗಾರಿಕೆಯು ಇತ್ತೀಚಿನ ವರ್ಷಗಳಲ್ಲಿ ಅದು ಮಾಡುವ ಉಪಟಳದಿಂದ ಕಟು ಟೀಕೆಗೆ ಒಳಗಾಗಿದೆ.

                                               

ಹೋಟೆಲ್

ಹೋಟೆಲ್ ಅಲ್ಪ ಅವಧಿಗೆ ಸಂದಾಯಿತ ವಸತಿಯನ್ನು ಒದಗಿಸುವ ಒಂದು ನೆಲೆ. ಹಿಂದೆ ಒದಗಿಸಲಾಗುತ್ತಿದ್ದ ಒಂದು ಹಾಸಿಗೆ, ಒಂದು ಬೀರು, ಒಂದು ಸಣ್ಣ ಮೇಜು ಮತ್ತು ಒಂದು ವಾಶ್ ಬೇಸಿನ್ ಇರುವ ಕೇವಲ ಒಂದು ಕೋಣೆಯನ್ನು ಒಳಗೊಂಡ ಮೂಲ ವಸತಿ ಸೌಕರ್ಯದ ವ್ಯವಸ್ಥೆಯನ್ನು ಸ್ನಾನಗೃಹಗಳು ಮತ್ತು ಹವಾನಿಯಂತ್ರಣ ಅಥವಾ ವಾಯುಗುಣ ನಿಯಂತ್ರಣವನ್ನು ಒಳಗೊಂಡ ಆಧುನಿಕ ಸೌಲಭ್ಯಗಳಿರುವ ಕೋಣೆಗಳಿಂದ ಬದಲಿಸಲಾಗಿದೆ. ದೂರವಾಣಿ, ಅಲಾರಂ ಗಡಿಯಾರ, ಟೀವಿ, ತಿಜೋರಿ, ಲಘು ಆಹಾರ ಮತ್ತು ಪಾನೀಯಗಳಿರುವ ಮಿನಿ-ಬಾರ್, ಮತ್ತು ಚಹಾ ಹಾಗು ಕಾಫ಼ಿ ತಯಾರಿಸಲು ಇರುವ ಸೌಲಭ್ಯಗಳು ಹೋಟೆಲ್ ಕೋಣೆಗಳಲ್ಲಿ ಕಾಣುವ ಹೆಚ್ಚುವರಿ ಸಾಮಾನ್ಯ ವಸ್ತುಗಳಾಗಿವೆ.ಈಗಿನ ಕಾಲದ ಗಣನೀಯ ಹೋಟೆಲ್‍ಗಳಲ್ಲಿ ಈಜು ಕೊಳಗಳನ್ನು ಸಹ ಕಾಣಬಹುದು.ಅದಲ್ಲದೆ ಈ ನಡುವೆ ಅಧಿಕೃತ ಸಭೆಗಳನ್ನು ಹೋಟೆಲ್‍ಗಳಲ್ಲಿಯೇ ನಡೆಸು ...

                                               

ಭಾರತದಲ್ಲಿ ಮೊಬೈಲ್ ಚಂದಾದಾರರ ಸಂಖ್ಯೆ

ಭಾರತದಲ್ಲಿ ೨ಜಿ ಸೇವೆ ಆರಂಭವಾದಗಿನಿಂದ ಭಾರತೀಯರ ಪರಸ್ಪರ ಸಂಪರ್ಕದಲ್ಲಿ ದೊಡ್ಡ ಕ್ರಾಂತಿಯೇ ಅಗಿದೆ. ಅತ್ಯಂತ ಕಡಿಮೆ ದರದಲ್ಲಿ ಮೊಬೈಲ್/ಚರ ದೂರವಾಣಿಯ ಮೂಲಕ ಪರಸ್ಪರ ಸಂಪರ್ಕ ಮಾಡಲು ಎಲ್ಲರಿಗೂ ಸಾಧ್ಯವಾಗಿದೆ. ೩ಜಿ, ೪ಜಿ ಸೇವೆಯೂ ಒದಗಿದರೆ ಎಲ್ಲರಿಗೂ ಸಹ ಸಂಪರ್ಕ ಶೀಘ್ರಸೇವೆ ಒದಗಿಸಿದಂತಾಗುವುದು. ಒಬ್ಬ ಸಾಮಾನ್ಯ ಕೂಲಿಕಾರನೂ ಸಹ ಈಗ ಮೊಬೈಲ್`/ಚರ ದೂರವಾಣಿಯನ್ನು ಹೊಂದಿದ್ದಾನೆ. ಅದರಿಂದ ಅವನು ಕೆಲಸ / ಕೂಲಿಯನ್ನು ಹುಡುಕಿಕೊಂಡು ಹೋಗವ ಅಗತ್ಯ ಕಡಿಮೆಯಾಗಿದೆ ; ಅವನಿಗೇ ಫೋನ್ ಮಾಡಿ ಅಗತ್ಯವಿರುವವರು ಕರೆಸಿಕೊಳ್ಳವ ಸೌಲಬ್ಯದೊರಕಿದೆ. ಬಾಲಕರು, ಹೆಣ್ಣುಮಕ್ಕಳು, ದೂರದ ಊರಿಗೆ ಹೋದವರು,ಶುಭಸಮಾಚಾರ ತಿಳಿಸುವವರು, ತೊಂದರೆಗೆ ಸಿಲಕಿರುವವರು ಕೂಡಲೆ ಸಂಪರ್ಕ ಮಾಡಬಹುದು ಈಗ ಭಾರತದಲ್ಲಿ ಚರ ದೂರವಾಣಿಯುಳ್ಳವರ ಸಂಖ್ಯೆ ಈ ರೀತಿ ಇದೆ: ಭಾರತದಲ್ಲಿ ...

                                               

ಅಂಬರಪುರ, ಗುಬ್ಬಿ

ಅಂಬರಪುರ ಗ್ರಾಮ ತುಮಕೂರುಜಿಲ್ಲೆಯಗುಬ್ಬಿ ತಾಲೂಕಿನಲ್ಲಿ ೯೬.೩೬ ಹೆಕ್ಟೇರ ಕ್ಷೇತ್ರದ ಒಂದು ಗ್ರಾಮವಾಗಿದೆ. ೨೦೧೧ರ ಜನಗಣತಿ ಪ್ರಕಾರ ಈ ಗ್ರಾಮದಲ್ಲಿ ೧೦೫ ಕುಟುಂಬಗಳು ಮತ್ತು ಒಟ್ಟು ಜನಸಂಖ್ಯೆ ೩೮೮ ಇವೆ. ಇದರ ಅತ್ಯಂತ ಹತ್ತಿರದ ಪಟ್ಟಣ ಗುಬ್ಬಿ ೭ ಕಿಲೋಮೀಟರ ಅಂತರದಲ್ಲಿದೆ. ಇಲ್ಲಿ ೧೯೯ ಪುರುಷರು ಮತ್ತು ೧೮೯ ಮಹಿಳೆಯರು ಇದ್ದಾರೆ. ಇಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ೦ ಇದ್ದು ಪರಿಶಿಷ್ಟ ಪಂಗಡ ಜನಸಂಖ್ಯೆ ೦ ಇವೆ. ಈ ಗ್ರಾಮದ ಜನಗಣತಿ ಸ್ಥಳ ನಿರ್ದೇಶನ ಸಂಖ್ಯೆ ೬೧೧೮೮೨ ಆಗಿದೆ. ೨೦೧೧ ಜನಗಣತಿ ಪಟ್ತಿ

                                               

ಕಾಖಾ೯ನೆ ಪರಿಸರ

ಕಾಖಾ೯ನೆ ಪರಿಸರದಲ್ಲಿ ಪಾಲಿಸಬೇಕಾದ ಸೂಚನೆಗಳು ಸೂಕ್ತವಾದ ನಿದೇ೯ಶಿತ ಉಡುಪುಗಳನ್ನು ಧರಿಸಿಯೇ ಉತ್ಪಾದನಾ ಘಟಕಗಳನ್ನು ಪ್ರವೇಶಿಸಬೇಕು. ಉತ್ಪಾದನಾ ಘಟಕಗಳನ್ನು ಪ್ರವೇಸಿಸುವ ಮುನ್ನ ಕಡ್ಡಾಯವಾಗಿ ಶಿರಸ್ತ್ರಾಣವನ್ನು ಧರಿಸಿರಬೇಕು. ಉತ್ಪಾದನಾ ಘಟಕದಲ್ಲಿ ಯಾವುದೇ ಯಂತ್ರಗಳ ಸಮೀಪದಲ್ಲಿ ಸುಳಿದಾಡುವುದನ್ನು ತಪ್ಪಿಸಿ. ಅಪಘಾತವಾಗುವುದನ್ನು ಆದಷ್ಟು ತಡೆಯಿರಿ. ಬೆಂಕಿಪೆಟ್ಟಿಗೆ, ಸಿಗರೇಟ್, ಬೀಡಿ, ಲೈಟರ್ ಮುಂತಾದ like ದಹನಕಾರಿ ವಸ್ತುಗಳನ್ನು ಕಾಖಾ೯ನೆ ಆವರಣದಲ್ಲಿ ನಿಷೇದಿಸಲಾಗಿದೆ. ಒಂದುವೇಳೆ ನಿಮ್ಮಲ್ಲಿ ಇಂಥ ವಸ್ತುಗಳೇನಾದರೂ ಇದ್ದಲ್ಲಿ ಭದ್ರತಾ ಸಿಬ್ಬಂದಿ ಸುಪದಿ೯ಗೆ ಒಪ್ಪಿಸುವುದು. ಈ ಕೆಳಗಿನ ಫಲಕಗಳಿರುವ ಪ್ರದೇಶದಲ್ಲಿ ಪ್ರವೇಶಿಸಬೇಡಿ. HAZARDOUS AREA OR CHEMICAL STORAGE AREA ಸಂದಶ೯ಕರು, ಹೊರಗಿನ ವ್ಯಕ್ತಿಗಳು ಕಾಖಾ೯ನೆ ಪರಿಸ ...

                                               

ಅಮರಾವತಿ (ಮಧುಗಿರಿ ತಾಲ್ಲೂಕು)

ಅಮರಾವತಿ ಇದು ತುಮಕೂರುಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ೨೬೫.೬೩ ಹೆಕ್ಟೇರ ಕ್ಷೇತ್ರದ ಒಂದು ಗ್ರಾಮವಾಗಿದೆ. ೨೦೧೧ರ ಜನಗಣತಿ ಪ್ರಕಾರ ಈ ಗ್ರಾಮದಲ್ಲಿ ೧೨೩ ಕುಟುಂಬಗಳು ಮತ್ತು ಒಟ್ಟು ಜನಸಂಖ್ಯೆ ೫೩೯ ಇವೆ. ಇದರ ಅತ್ಯಂತ ಹತ್ತಿರದ ಪಟ್ಟಣ ಮಧುಗಿರಿ ೧೧ ಕಿಲೋಮೀಟರ ಅಂತರದಲ್ಲಿದೆ. ಇಲ್ಲಿ ೨೫೭ ಪುರುಷರು ಮತ್ತು ೨೮೨ ಮಹಿಳೆಯರು ಇದ್ದಾರೆ. ಇಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ೩೫ ಇದ್ದು ಪರಿಶಿಷ್ಟ ಪಂಗಡ ಜನಸಂಖ್ಯೆ ೧೫ ಇವೆ. ಈ ಗ್ರಾಮದ ಜನಗಣತಿ ಸ್ಥಳ ನಿರ್ದೇಶನ ಸಂಖ್ಯೆ ೬೧೦೮೧೩ ಆಗಿದೆ. ೨೦೧೧ ಜನಗಣತಿ ಪಟ್ಟಿ

ದೂರವಾಣಿ
                                     

ⓘ ದೂರವಾಣಿ

ದೂರವಾಣಿ ಯಾವುದೇ ಶಬ್ದವನ್ನು ಕಳಿಸುವ ಮತ್ತು ಸ್ವೀಕರಿಸುವ ಸಂಪರ್ಕ ಸಾಧನ. ಗೃಹಬಳಕೆಯಲ್ಲಿರುವ ಸಾಮಾನ್ಯ ಯಂತ್ರಗಳಲ್ಲಿ ದೂರವಾಣಿಯೂ ಒಂದು. ೨೦೦೬ ರ ಅಂತ್ಯದ ಹೊತ್ತಿಗೆ ಪ್ರಪಂಚದಲ್ಲಿ ಒಟ್ಟು ೪೦೦ ಕೋಟಿ ಜನರು ದೂರವಾಣಿಯನ್ನು ಉಪಯೋಗಿಸುತ್ತಿದ್ದರು. ಬಹುಪಾಲು ದೂರವಾಣಿ ಯಂತ್ರಗಳು ಧ್ವನಿಯನ್ನು ವಿದ್ಯುತ್ ಸಂಕೇತಗಳಾಗಿ ಮಾರ್ಪಡಿಸಿ ಇವುಗಳನ್ನು ದೂರವಾಣಿ ಜಾಲದ ಮೂಲಕ ಕಳಿಸುತ್ತವೆ.

ದೂರವಾಣಿಯ ಆವಿಷ್ಕರ್ತರು ಯಾರು ಎಂಬುದರ ಬಗ್ಗೆ ಅನೇಕ ವಿವಾದಗಳಿವೆ. ೧೯ ನೆ ಯ ಶತಮಾನದಲ್ಲಿ ಈ ಯಂತ್ರದ ಬಗ್ಗೆ ಯೋಚಿಸಿ, ಅದನ್ನು ತಯಾರಿಸುವ ನಿಟ್ಟಿನಲ್ಲಿ ಅನೇಕರು ಸ್ವತಂತ್ರವಾಗಿ ಕೆಲಸ ಮಾಡಿದ್ದಾರೆ. ಇವರಲ್ಲಿ ಪ್ರಮುಖರಾದವರು ಅಲೆಕ್ಸಾಂಡರ್ ಗ್ರಹಾಮ್ ಬೆಲ್, ಥಾಮಸ್ ಎಡಿಸನ್, ಎಲಿಷಾ ಗ್ರೇ ಮೊದಲಾದವರು.

                                     

1. ಆರಂಭಿಕ ಬೆಳವಣಿಗೆ

  • ೧೮೪೪: ಇನ್ನೊಸೆನ್ಜೊ ಮಾನ್ಜೆಟ್ಟಿ "ಮಾತನಾಡುವ ತಂತಿ ಯಂತ್ರ" ದ ಪ್ರಸ್ತಾಪವನ್ನು ಮುಂದಿಟ್ಟನು.
  • ಮಾರ್ಚ್ ೧೦, ೧೮೭೬: ಮೊದಲ ಯಶಸ್ವಿ ದೂರವಾಣಿ ಸಂಭಾಷಣೆ. ಅಲೆಕ್ಸಾಂಡರ್ ಗ್ರಹಾಮ್ ಬೆಲ್ ತಮ್ಮ ದೂರವಾಣಿ ಯಂತ್ರದ ಮೂಲಕ ಮಾತನಾಡಿದ ಪದಗಳು ಇನ್ನೊಂದು ತುದಿಯಲ್ಲಿ ಸ್ಪಷ್ಟವಾಗಿ ಕೇಳಿ ಬಂದವು.
  • ೧೮೭೧-೧೮೭೬: ಅನೇಕ ಆವಿಷ್ಕರ್ತರು ದೂರವಾಣಿ ಯಂತ್ರದ ವಿನ್ಯಾಸದ ಬಗ್ಗೆ ಪ್ರಸ್ತಾಪಗಳನ್ನು ಮುಂದಿಟ್ಟರು. ಹಲವರು ತಮ್ಮ ವಿನ್ಯಾಸಗಳಿಗೆ ಪೇಟೆಂಟ್ ಪಡೆದರು.
  • ೧೮೫೪: ಫ್ರಾನ್ಸ್ ನ ಚಾರ್ಲ್ಸ್ ಬೋರ್ಸೀಲ್ "ವಿದ್ಯುತ್ ಶಕ್ತಿಯ ಮೂಲಕ ಧ್ವನಿಯ ರವಾನೆ" ಎಂಬ ಲೇಖನ ಪ್ರಕಟಿಸಿದನು.
  • ೧೮೮೩: ಮೊದಲ ಬಾರಿಗೆ ಎರಡು ನಗರ ಮಧ್ಯೆ ಸಂಪರ್ಕ ಏರ್ಪಡಿಸುವ ದೂರವಾಣಿ ಜಾಲ ಸ್ಥಾಪನೆ ಅಮೆರಿಕದ ನ್ಯೂ ಯಾರ್ಕ್ ಮತ್ತು ಬಾಸ್ಟನ್ ನಗರಗಳ ಮಧ್ಯೆ.
                                     

2. ತಾಂತ್ರಿಕ ಸುಧಾರಣೆಗಳು

೧೮೭೭ ರಲ್ಲಿ ಮೊದಲ ದೂರವಾಣಿ ಎಕ್ಸ್ ಚೇಂಜ್ ಸ್ಥಾಪನೆಯಾಯಿತು. ಮೊದಲಿನ ಎಕ್ಸ್ ಚೇಂಜ್ ಗಳಲ್ಲಿ ಪ್ರತಿ ಕರೆಯನ್ನು ಒಬ್ಬರು ಆಪರೇಟರ್ ಸರಿಯಾದ ಸಂಪರ್ಕ ತಂತುವಿಗೆ ಜೋಡಿಸುವ ಮೂಲಕ ಸಂಪರ್ಕವನ್ನು ಸಾಧಿಸಬೇಕಾಗುತ್ತಿತ್ತು. ಸ್ವಯಂಚಾಲಿತ ಎಕ್ಸ್ ಚೇಂಜ್ ಗಳು ೧೮೯೨ ರಿಂದ ಮುಂದಕ್ಕೆ ಬಳಕೆಗೆ ಬಂದವು. ಆದರೂ ಮಾನವಚಾಲಿತ ಎಕ್ಸ್ ಚೇಂಜ್ ಗಳ ಉಪಯೋಗ ಇಪ್ಪತ್ತನೆಯ ಶತಮಾನದ ಮಧ್ಯದ ವರೆಗೆ ಮುಂದುವರಿದಿತು. ನಾಣ್ಯವನ್ನು ಹಾಕಿ ಉಪಯೋಗಿಸಬಹುದಾದಂಥ ಪೇ ಫೋನ್ ಗಳು ೧೮೮೯ ರಿಂದ ಬಳಕೆಗೆ ಬಂದವು. ಡಯಲ್ ಮಾಡಬೇಕಾದ ಸಂಖ್ಯೆಯನ್ನು ತಿಳಿಸಲು ತಿರುಗಿಸುವ "ರೋಟರಿ ಡಯಲ್" ೧೯೨೩ ರಿಂದ ಬಳಕೆಗೆ ಬಂದಿತು. ಈಗಿನ ಲಕಾಲದ ಯಂತ್ರಗಳಲ್ಲಿ ಸಾಮಾನ್ಯವಾಗಿ ಈ ಡಯಲ್ ಮಾಯವಾಗಿ ಗುಂಡಿಗಳನ್ನು ಒತ್ತುವ ಮೂಲಕ ಕರೆ ಮಾಡಲಾಗುತ್ತದೆ - ಈ ರೀತಿಯ ಯಂತ್ರಗಳು ೧೯೪೧ ರಲ್ಲಿ ಕೆಲವೆಡೆ ಚಾಲನೆಗೆ ಬಂದಿದ್ದವು.

                                     

3. ಮೊಬೈಲ್ ಫೋನ್ ಗಳು

ಬೆಲ್ ದೂರವಾಣಿ ಸಂಸ್ಥೆ ೧೯೨೪ ರಲ್ಲಿಯೇ ಪೊಲೀಸರು ಬಳಸುವುದಕ್ಕಾಗಿ ಮೊಬೈಲ್ ಯಂತ್ರಗಳನ್ನು ತಯಾರಿಸುವ ಪ್ರಯತ್ನ ಮಾಡಿತು. ೧೯೪೬ ರಲ್ಲಿ ಅಮೆರಿಕದ ಮಿಸ್ಸೋರಿ ರಾಜ್ಯದಲ್ಲಿ ಮೊಬೈಲ್ ದೂರವಾಣಿ ಸೇವೆ ಆರಂಭವಾದರೂ ಸಹ ಜನಪ್ರಿಯವಾಗಲಿಲ್ಲ. ಮೊಬೈಲ್ ಫೋನ್ ಗಳ ಬಳಕೆ ೧೯೮೦ ರ ದಶಕದ ನಂತರವಷ್ಟೇ ಜನಪ್ರಿಯವಾದದ್ದು. ಈಗ ಪ್ರಪಂಚದ ಎಲ್ಲೆಡೆ ಮೊಬೈಲ್ ಫೋನ್ ಗಳು ಜನಪ್ರಿಯವಾಗಿವೆ.

                                     

4. ದೂರವಾಣಿ ಮತ್ತು ಅಂತರ್ಜಾಲ

ಇತ್ತೀಚಿನ ದಿನಗಳಲ್ಲಿ ದೂರವಾಣಿ ಜಾಲಗಳ ಜೊತೆಗೆ, ಅಂತರಜಾಲದ ಮೂಲಕ ಧ್ವನಿ ಸಂಕೇತಗಳನ್ನು ರವಾನಿಸುವ "ಅಂತರ್ಜಾಲ ದೂರವಾಣಿ ಯಂತ್ರಗಳು" IP telephony ಬಳಕೆಗೆ ಬಂದಿವೆ. ಈ ತಂತ್ರಜ್ಞಾನಕ್ಕೆ "Voice over IP VoIP" ಎಂದು ಕರೆಯಲಾಗುತ್ತದೆ.

ವಟ್ಟಾಪುರ
                                               

ವಟ್ಟಾಪುರ

{{#if:| ವಟ್ಟಾಪುರವು ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ಒಂದು ಹಳ್ಳಿಯಾಗಿದೆ., ಕಟ್ಟಡ ಸಾಮಗ್ರಿಗಳನ್ನು ಹೊರತೆಗೆಯಲು ಸಾಮಾನ್ಯವಾಗಿ ಬಳಸುವ ಕಲ್ಲುಗಣಿಗಳೊಂದಿಗೆ ಭೌಗೋಳಿಕ ವಿಶಿಷ್ಟತೆಗಳಿಗೆ ಹೆಸರುವಾಸಿಯಾಗಿದೆ.ಈ ಪಟ್ಟಣವು ತಿರುವನಂತಪುರ ಮತ್ತು ಕೊಟ್ಟಾಯಂ ಅನ್ನು ಸಂಪರ್ಕಿಸುವ MC ರಸ್ತೆಯ ಬದಿಯಿಂದ ಮತ್ತು ತ್ರಿವೇಂಡ್ರಮ್ ನಗರದಿಂದ 14 ಕಿ.ಮೀ ದೂರದಲ್ಲಿದೆ. ನೆಡುಮಾಂಗಡ್ ಹತ್ತಿರದ ಪಟ್ಟಣವಾಗಿದೆ. ಈ ಸ್ಥಳದ ಮೂಲದ ಬಗ್ಗೆ ಯಾವುದೇ ದಾಖಲೆಯಿಲ್ಲ. ವಟ್ಟಪ್ಪರದಲ್ಲಿನ ಪ್ರಮುಖ ಉದ್ಯೋಗ ಕೃಷಿಯಾಗಿದೆ.