Back

ⓘ ಟೋಕ್ಯೊ, ಅಧಿಕೃತವಾಗಿ ಟೋಕ್ಯೊ ಮಹಾನಗರ, ಜಪಾನ್ ದೇಶದ ರಾಜಧಾನಿ ಮತ್ತು ಜಪಾನಿನ ೪೭ ರಾಜ್ಯ ಗಳಲ್ಲಿ ಅತೀದೊಡ್ಡದಾದದ್ದು. ಜಪಾನಿನ ಮುಖ್ಯ ದ್ವೀಪವಾಗಿರವ ಹೋಂಶು ವಿನ ಪೂರ್ವಭಗದಲ್ಲಿರುವ ಕಾನ್ತೋ ಉಪರ ..ಟೋಕ್ಯೊ
                                     

ⓘ ಟೋಕ್ಯೊ

ಟೋಕ್ಯೊ, ಅಧಿಕೃತವಾಗಿ ಟೋಕ್ಯೊ ಮಹಾನಗರ, ಜಪಾನ್ ದೇಶದ ರಾಜಧಾನಿ ಮತ್ತು ಜಪಾನಿನ ೪೭ ರಾಜ್ಯ ಗಳಲ್ಲಿ ಅತೀದೊಡ್ಡದಾದದ್ದು. ಜಪಾನಿನ ಮುಖ್ಯ ದ್ವೀಪವಾಗಿರವ ಹೋಂಶು ವಿನ ಪೂರ್ವಭಗದಲ್ಲಿರುವ ಕಾನ್ತೋ ಉಪರಾಜ್ಯದಲ್ಲಿ ಟೋಕ್ಯೊ ಸ್ಥಿತವಾಗಿದೆ. ಟೋಕ್ಯೊ ನಗರದ ೨೩ ವಿಶೇಷ ವಾರ್ಡ್ ಗಳಲ್ಲಿ ೧೪ ದಶಲಕ್ಷಕಿಂತಲೂ ಹೆಚ್ಚು ಜನರು ವಾಸವಾಗಿದ್ದು, ನಗರದ ಹೊರಭಾಗಗಳನ್ನು ಸೇರಿಸಿ ಒಟ್ಟು ೩೮ ದಶಲಕ್ಷಕಿಂತಲೂ ಹೆಚ್ಚು ಜನರು ಟೋಕ್ಯೋ ರಾಜ್ಯದಲ್ಲಿ ವಾಸವಾಗಿದ್ದಾರೆ.

                                     

1. ಹೆಸರು

ಟೋಕ್ಯೊವು ಮೆಯ್ಜಿ 明治 ಪುನಃಸ್ಥಾಪನೆಯ ಮೊದಲು ಎದೊ 江戸 ಎಂದು ಹೆಸರಾಗಿತ್ತು. ಎದೊ江戸 ಎಂಬ ಪದವು 江ಎ, ಖಾರಿ ಮತ್ತು 戸ತೊ, ಬಾಗಿಲು ಕಾನ್ಜಿಗಳ ಸಂಧಿಯಿಂದ ಬಂದಿರುವುದಾಗಿದ್ದು ಇದರ ಅರ್ಥವು ಟೋಕ್ಯೊ ಖಾರಿಯಲ್ಲಿ ಪೆಸಿಫಿಕ್ ಮಹಾಸಾಗರಕ್ಕೆ ಸೇರುವ ಸುಮಿದ ನದೀಯ 隅田川, ಸುಮಿದ ಕವ ನದೀಮುಖವನ್ನು ಸೂಚಿಸುತ್ತದೆ. ವರ್ಷ ೧೮೬೮ ರ ಮೆಯ್ಜಿ ಪುನಃಸ್ಥಾಪನೆಯಾದ ಮೇಲೆ ನಿಹೋನಿನ ರಾಜಮನೆತನವು ಕ್ಯೋತೊವನ್ನು ಬಿಟ್ಟು ಅಂದಿನ ತೋಕುಗಾವ-ರಾಜಧಾನಿಯಾಗಿದ್ದ ಎದೊವಿನಲ್ಲಿ ನೆಲೆಯನ್ನು ಹೂಡಿದರು; ಇದರ ನಂತರ ಎದೊವಿನ ಹೆಸರನ್ನು ತೋಕ್ಯೋವಿಗೆ ಬದಲಾಯಿಸಲಾಯಿತು. ಮೆಯ್ಜಿ ಕಾಲದ ಹೊಸತರಲ್ಲಿ 東京 ಪದದ ಉಚ್ಛಾರಣೆಯನ್ನು ತೋಕೆಯಿ ಎಂದು ಕೂಡ ಮಾಡಲಾಗುತ್ತಿತ್ತು; ಆ ಕಾಲದ ಹಲವು ಆಂಗ್ಲ ದಾಖಲೆಗಳಲಿ Tokei ಎಂಬ ಬಳಿಕೆಯೂ ಇತ್ತು; ಆದರೆ ಈ ಉಚ್ಛಾರಣೆಯು ಇಂದು ಬಳಿಕೆಯಲ್ಲಿಲ್ಲ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →