Back

ⓘ ಜಯಮಾಲಾ. ತುಳುನಾಡು ಕಡಲತಡಿಯ ಪಣಂಬೂರು ಎಂಬ ಪುಟ್ಟ ಊರಿನಲ್ಲಿ ಜಯಮಾಲಾ ಅವರು ಫೆಬ್ರವರಿ 28, 1959 ರಂದು ಜನಿಸಿದರು. ಆ ಊರಿನಿಂದ ಬಾಲ್ಯದಲ್ಲೇ ಅಪ್ಪ– ಅಮ್ಮನ ಜತೆಗೆ ೧೯೬೩ ರಲ್ಲಿ ಚಿಕ್ಕಮಗಳೂರಿಗೆ ..                                               

ಉಜ್ವಾಡು (ಚಲನಚಿತ್ರ)

ಉಜ್ವಾಡು ೨೦೧೧ ರಲ್ಲಿ ಬಿಡುಗಡೆಯಾದ ಒಂದು ಕೊಂಕಣಿ ಚಲನಚಿತ್ರ. ಇದನ್ನು ಕಾಸರಗೋಡು ಚಿನ್ನಾ ಅವರು ನಿರ್ದೇಶಿಸಿದ್ದು, ಕೆ ಜೆ ಧನಂಜಯ ಮತ್ತು ಅನುರಾಧ ಪಡಿಯಾರ್ ಅವರು ನಿರ್ಮಾಪಕರಾಗಿದ್ದಾರೆ. ಈ ಚಿತ್ರವು ಜಿ ಎಸ್ ಬಿ ಕೊಂಕಣಿಯ ಮೂರನೇ ಚಲನಚಿತ್ರವಾಗಿದ್ದು, ಕೊಂಕಣಿ ಸಾರಸ್ವತ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ. ೧೪ ಅಕ್ಟೋಬರ್ ೨೦೧೧ ರಂದು ಬಿಡುಗಡೆಯಾಗಿದ್ದು, ವಿ ಮನೋಹರ್ ಅವರ ಸಂಗೀತವಿದೆ. ಶಿವಧ್ವಜ್, ನೀತು, ಸದಾಶಿವ್ ಬ್ರಹ್ಮಾವರ್, ಸಂಧ್ಯಾ ಪೈ, ಪ್ರಮಿಳಾ ನೇಸರ್ಗಿ, ಡಾ. ಅನಂತ್ ಪ್ರಭು, ಉಮಾಶ್ರೀ ಮುಂತಾದವರು ನಟಿಸಿದ್ದಾರೆ.

                                               

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೨೦೦೧–೨೦೧೦

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.

                                     

ⓘ ಜಯಮಾಲಾ

 • ತುಳುನಾಡು ಕಡಲತಡಿಯ ಪಣಂಬೂರು ಎಂಬ ಪುಟ್ಟ ಊರಿನಲ್ಲಿ ಜಯಮಾಲಾ ಅವರು ಫೆಬ್ರವರಿ 28, 1959 ರಂದು ಜನಿಸಿದರು. ಆ ಊರಿನಿಂದ ಬಾಲ್ಯದಲ್ಲೇ ಅಪ್ಪ– ಅಮ್ಮನ ಜತೆಗೆ ೧೯೬೩ ರಲ್ಲಿ ಚಿಕ್ಕಮಗಳೂರಿಗೆ ವಲಸೆ ಹೋದರು. ಅವರದು ಹಿಂದುಳಿದ ಬಿಲ್ಲವ ಜಾತಿಯ ಬಡ ಕುಟುಂಬ. ಚಿಕ್ಕಮಗಳೂರಿಗೆ ಬಂದು ನೆಲಸಿದರು. ಆಗ ಜಯಮಾಲಾಗೆ ಮೂರೂವರೆ ವರ್ಷ. ಚಿಕ್ಕಮಗಳೂರಿನಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ನಡೆಯಿತು.ಅವರು ಮೊದಲು ಕನ್ನಡ ಚಲನಚಿತ್ರ ನಟ ಟೈಗರ್ ಪ್ರಭಾಕರ್ ಅವರನ್ನು ಮದುವೆಯಾದರು. ನಂತರ ಅವರು ಸಿನಿಮಾಟೋಗ್ರಾಫರ್ ಎಚ್. ಎಂ. ರಾಮಚಂದ್ರರನ್ನು ಮದುವೆಯಾಗಿದ್ದಾರೆ. ಆಕೆಯು ಮಗಳು ಸೌಂದರ್ಯಾ ನಟಿ.
                                     

1. ಸಿನೇಮಾ ನಂಟು

 • ಅವರು ಸಿನಿಮಾ ವೃತ್ತಿಯಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಆಯ್ಕೆಯಾದರು. ಜತೆಗೆ, ಕನ್ನಡ ಚಿತ್ರಗಳ ಸಬ್ಸಿಡಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಪ್ರದರ್ಶನ– ಹೀಗೆ ಹತ್ತಾರು ಜವಾಬ್ದಾರಿಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದರು.
 • ಅವರು ಐದು ಭಾಷೆಗಳ ಚಿತ್ರಗಳಲ್ಲಿ ನಟಿಸಿದರು. ನಿರ್ಮಾಪಕಿಯಾಗಿಯೂ ಜಯಮಾಲ ಜಯಗಳಿಸಿರು. ಅವರು ನಿರ್ಮಾಪಕಿಯಾಗಿ ನಾಲ್ಕನೇ ಚಿತ್ರ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ತಾಯಿಸಾಹೇಬ’ ರಾಷ್ಟ್ರಮಟ್ಟದಲ್ಲಿ ಸ್ವರ್ಣಕಮಲ ಪ್ರಶಸ್ತಿ ಗೆದ್ದಿತು. ಅದರಲ್ಲಿ ಅವರ ಪಾತ್ರಕ್ಕೂ ಜ್ಯೂರಿಗಳ ವಿಶೇಷ ಮೆಚ್ಚುಗೆ ಪ್ರಶಸ್ತಿ ಲಭಿಸಿತು.
 • ಹೈಸ್ಕೂಲ್‌ನಲ್ಲಿದ್ದಾಗಲೇ ತುಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಕೆ.ಎನ್‌.ಟೈಲರ್‌ ಅವರ ಮೂಲಕ ತುಳು ಚಿತ್ರರಂಗದ ನಂಟು ಬೆಳೆಯಿತು. ಎಸ್ಸೆಸೆಲ್ಸಿ ಮುಗಿಸುವ ಹೊತ್ತಿಗೆ ನಾಲ್ಕು ತುಳು ಸಿನಿಮಾಗಳಲ್ಲಿ ನಟಿಸಿಯಾಗಿತ್ತು. ಗಾಂಧಿನಗರದಿಂದ ಮೊದಲು ‘ಬೂತಯ್ಯನ ಮಗ ಅಯ್ಯು’ ಚಿತ್ರದ ಪುಟ್ಟ ಪೋಷಕ ಪಾತ್ರವೊಂದಕ್ಕೆ ಕರೆಬಂದಿತು. ಆ ಚಿತ್ರ ಶತದಿನೋತ್ಸವ ಆಚರಿಸಿತು. ಆ ಸಮಾರಂಭದಲ್ಲಿ ಫಲಕ ಸ್ವೀಕರಿಸಲು ಅಮ್ಮ ಮತ್ತು ಅಕ್ಕನ ಜತೆಗೆ ಮೊತ್ತಮೊದಲಿಗೆ ಬೆಂಗಳೂರಿಗೆ ಬಂದರು ಜಯಮಾಲ. ಅಲ್ಲಿ ವರದಪ್ಪನವರ ಕಣ್ಣಿಗೆ ಬಿದ್ದರು. ‘ಪ್ರೇಮದ ಕಾಣಿಕೆ’ಯಲ್ಲಿ ಡಾ.ರಾಜ್‌ ಅವರಿಗೆ ನಾಯಕಿಯಾಗುವ ಅವಕಾಶ ಸಿಕ್ಕಿತು. ಆಗ ಜಯಮಾಲಾ 16ರ ಬಾಲೆ. ಅಲ್ಲಿ ಸ್ವತಃ ರಾಜ್‌ಕುಮಾರ್ ಅಕ್ಕರೆಯಿಂದ, ನಟಿಯೊಬ್ಬಳಿಗೆ ಇರಬೇಕಾದ ಪಾತ್ರದ ತನ್ಮಯತೆಯ ಅಕ್ಷರಮಾಲೆಯನ್ನು ಬಿಡಿಸಿ ಹೇಳಿಕೊಟ್ಟರು. ಅಲ್ಲಿಂದ ಮುಂದೆ ಸಿನಿಮಾ ರಂಗದಲ್ಲಿ, ತ್ರಿಮೂರ್ತಿ, ಗಿರಿಕನ್ಯೆ, ಶಂಕರ್‌ಗುರು– ಹೀಗೆ ಸಾಲಾಗಿ ರಾಜ್‌ ಪ್ರಪಂಚದ ಸೂಪರ್‌ಹಿಟ್‌ ಚಿತ್ರಗಳು ಬಂದವು. ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಅವರು ಜನಪ್ರಿಯರಾಗಿದ್ದರು. ಕನ್ನಡ ಚಿತ್ರರಂಗದ ಆ ಕಾಲದ ಬಹುತೇಕ ಪ್ರಮುಖ ನಾಯಕ ನಟರ ಜೊತೆ ಅಭಿನಯಿಸಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಯ ಚಲನಚಿತ್ರಗಳಲ್ಲೂ ನಟಿಸಿದ್ದಾರೆ.
                                     

2. ಸಾಧನೆಗಳು

 • ಹದಿಮೂರನೆ ವಯಸ್ಸಿನಲ್ಲಿ ‘ಕಾಸ್‍ದಾಯೆ ಕಂಡನಿ’ ತುಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶ. ತನ್ನ ಮೊದಲ ತುಳು ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ. ದಕ್ಷಿಣ ಭಾರತದ ಐದು ಭಾಷೆಗಳನ್ನೊಳಗೊಂಡು ಒಟ್ಟು 75 ಚಿತ್ರಗಳಲ್ಲಿ ಅಭಿನಯ.
 • 1986ರಲ್ಲಿ ನಿರ್ಮಾಪಕಿಯಾಗಿ ‘ಅಗ್ನಿಪರೀಕ್ಷೆ’ ಚಿತ್ರವನ್ನು ನಿರ್ಮಿಸಿದ್ದಲ್ಲದೆ, ನಾಲ್ಕನೆಯ ನಿರ್ಮಾಣದ ‘ತಾಯಿಸಾಹೇಬ’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದು ಇತಿಹಾಸವನ್ನೇ ನಿರ್ಮಿಸಿತು. *ರಾಷ್ಟ್ರಪತಿಯವರ ಸ್ವರ್ಣಕಮಲ ಪ್ರಶಸ್ತಿಯ ಜೊತೆಗೆ ಈ ಚಿತ್ರಕ್ಕೆ ಒಟ್ಟು 24 ಪ್ರಶಸ್ತಿಗಳು ಬಂದಿದೆ.
 • ಐದನೆಯ ನಿರ್ಮಾಣದ ಚಿತ್ರವಾದ ‘ತುತ್ತೂರಿ’ ಚಿತ್ರಕ್ಕೆ "ಅತ್ಯುತ್ತಮ ಪರಿಸರ ಮಕ್ಕಳ ಚಿತ್ರ" ರಾಷ್ಟ್ರಪ್ರಶಸ್ತಿ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ.
                                     

3. ಸೇವೆ

ಕರ್ನಾಟಕದಲ್ಲಿ ಮೊದಲ ಬಾರಿಗೆ ಸ್ಥಾಪಿಸಿದ ಬೀದಿ ಮಹಿಳೆಯರ ಪುನರ್ವಸತಿ ಕೇಂದ್ರ ಮೈಸೂರಿನ "ಶಕ್ತಿಧಾಮ"ದಲ್ಲಿ ವ್ಯವಸ್ಥಾಪಕ ನಿರ್ದೇಶಕಿ. ಏಡ್ಸ್ ಪೀಡಿತರ ನೆರವು,ಪ್ರೋತ್ಸಾಹ ಮತ್ತು ಅಭಿವೃದ್ಧಿಗಾಗಿ ನಿರ್ಮಿಸಿದಂತಹ "ಭವಿಷತ್ ಬೆಳಕು" ಎಂಬ ಸಂಸ್ಥೆಯಲ್ಲಿ ಧರ್ಮದರ್ಶಿಯಾಗಿ ಸೇವೆ. ಕರ್ನಾಟಕದಲ್ಲಿ "ರಂಗಮಂದಿರ"ಗಳನ್ನು ಕುಟುಂಬ ಮತ್ತು ಭೂಕಂಪವಾದಾಗ ಪರಿಹಾರ ನಿಧಿಸಂಗ್ರಹಣೆಗಾಗಿ ಹಮ್ಮಿಕೊಂಡ "ಸಂಗೀತ ಸಂಜೆ" ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.

                                     

4. ಹುದ್ದೆಗಳು

 • ಸದಸ್ಯರು – ಕರ್ನಾಟಕ ವಿಧಾನ ಪರಿಷತ್
 • ಸ್ಥಾಪಕ ನಿರ್ದೇಶಕರು, ಕರ್ನಾಟಕ ಚಲನಚಿತ್ರೋದ್ಯಮ ಕೈಗಾರಿಕಾ ಸಹಕಾರಸಂಘನಿ
 • ವ್ಯವಸ್ಥಾಪಕ ಧರ್ಮದರ್ಶಿ - ಶಕ್ತಿಧಾಮ ನಿರಾಶ್ರಿತ ಮಹಿಳೆಯರ ಪುನರ್ವಸತಿ ಕೇಂದ್ರ, ಮೈಸೂರು.
 • ಅಧ್ಯಕ್ಷರು - ಚಲನಚಿತ್ರ ಸಹಾಯಧನ ಆಯ್ಕೆ ಸಮಿತಿ
 • ಅಧ್ಯಕ್ಷರು - ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ
 • ಅಧ್ಯಕ್ಷರು - ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
 • ಭಾರತೀಯ ಪನೋರಮ -2000, ಕೇಂದ್ರ ಸರ್ಕಾರ ಚಲನಚಿತ್ರ ಆಯ್ಕೆ ಸಮಿತಿ ಸದಸ್ಯರು ಜ್ಯೂರಿ
 • ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಹ್ವಾನಿತ ಪ್ರತಿನಿಧಿಯಾಗಿ ಭಾಗವಹಿಸುವಿಕೆ.
                                     

5. ಸಾಹಿತ್ಯಾಸಕಿ

 • ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವಿಕೆ.
 • ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರ ಕುರಿತಂತೆ ರಾಷ್ಟ್ರ, ರಾಜ್ಯಮಟ್ಟದ ಪ್ರಬಂಧ ಮಂಡನೆ.
 • ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯ ಹೊರತಂದ `ನಮ್ಮ ಮಹಿಳೆ, ನಮ್ಮ ಹೆಮ್ಮೆ’ ಕೃತಿ ಶ್ರೇಣಿಗೆ `ಸಿನಿಮಾ ಸಾಧಕಿಯರು’ ಪುಸ್ತಕದ ಸಂಪಾದಕಿ
 • ಕನ್ನಡ ವಾಕ್ಚಿತ್ರ ಅಮೃತಮಹೋತ್ಸವ ಸಂದರ್ಭದಲ್ಲಿ ಹಿರಿಯ ತಾರೆ ಪಂಡರಿಬಾಯಿ ಕುರಿತ ಪುಸ್ತಕ.
                                     

6. ಪ್ರಶಸ್ತಿಗಳ ವಿವರ

 • ಸಿನಿ ಎಕ್ಸ್‍ಪ್ರೆಸ್ ಅತ್ಯುತ್ತಮ ಚಿತ್ರ ಪ್ರಶಸ್ತಿ-1999- "ತಾಯಿಸಾಹೇಬ"
 • ವಿ.ಶಾಂತಾರಾಂ -ಬಂಗಾರದ ಪದಕ ಪ್ರಶಸ್ತಿ-2001
 • ಕನ್ನಡ ಚಿತ್ರ ಪ್ರೇಮಿಗಳ ಸಂಘ- ಅತ್ಯುತ್ತಮ ಕಲಾವಿದೆ – 1999-"ತಾಯಿಸಾಹೇಬ"
 • ಅತ್ಯುತ್ತಮ ಕಲಾವಿದೆ ಪ್ರಶಸ್ತಿ,1973, ತುಳುಚಿತ್ರ- "ಕಾಸದಾಯೆ ಕಂಡನಿ"
 • 15ನೇ ಟೋಕಿಯೋ ಅರ್ತ್‍ವಿಷನ್‍ನ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಚಿತ್ರ-ಪ್ರಶಸ್ತಿ 2006,"ತುತ್ತೂರಿ"
 • ಆರ್ಯಭಟ ಪ್ರಶಸ್ತಿ-ಅತ್ಯುತ್ತಮ ಕಲಾವಿದೆ-1995
 • ಗ್ಲೋಬಲ್‍ಮ್ಯಾನ್ ಪ್ರಶಸ್ತಿ-ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ- 2004-ಯು.ಎ.ಇ.
 • ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯದ ಹಲವಾರು ಸಂಘ-ಸಂಸ್ಥೆಗಳಿಂದ ಗೌರವ
 • ಅತ್ಯುತ್ತಮ ನಟಿ-ರಾಜ್ಯ ಪ್ರಶಸ್ತಿ- 1999- ತಾಯಿಸಾಹೇಬ"
 • ಅತ್ಯುತ್ತಮ ಕಲಾವಿದೆ-ಚೆನ್ನೈ ಫ್ಯಾನ್ಸ್ ಅಸೋಸಿಯೇಷನ್- 1999-"ತಾಯಿಸಾಹೇಬ"
 • ಅಂತರರಾಷ್ಟ್ರೀಯ ಸಮಗ್ರತಾ ಪ್ರಶಸ್ತಿ-ಸ್ನೇಹ ಮತ್ತು ಶಾಂತಿ-1994
 • ಅತ್ಯುತ್ತಮ ಪರಿಸರ ಮಕ್ಕಳ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ2006-"ತುತ್ತೂರಿ"
 • ಕನ್ನಡ ಚಿತ್ರ ಪ್ರೇಮಿಗಳ ಸಂಘ- ಅತ್ಯುತ್ತಮ ಚಿತ್ರ– 1999-"ತಾಯಿಸಾಹೇಬ"
 • ಅಭಿನಯಕ್ಕಾಗಿ ತೀರ್ಪುಗಾರರ ವಿಶೇಷ ರಾಷ್ಟ್ರ ಪ್ರಶಸ್ತಿ1998-"ತಾಯಿಸಾಹೇಬ"
 • . ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ -1999 – ‘ತಾಯಿಸಾಹೇಬ"
 • ಕನ್ನಡ ರಾಜ್ಯೋತ್ಸವ ಪ್ರಶಸ್ತಿ -2001
 • ಅತ್ಯುತ್ತಮ ನಟಿ-ಫಿಲಂಫೇರ್ ಪ್ರಶಸ್ತಿ-1999- "ತಾಯಿಸಾಹೇಬ"
 • 8ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾಗಿ ಕಾರ್ಯನಿರ್ವಹಣೆ
 • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- "ಕಿತ್ತೂರುರಾಣಿ ಚೆನ್ನಮ್ಮ" ಪ್ರಶಸ್ತಿ
 • ರಾಜೀವ್‍ಗಾಂಧಿ ರಾಷ್ಟ್ರೀಯ ಸೌಹಾರ್ಧ ಪ್ರಶಸ್ತಿ-1995
 • ವರ್ಷದ ಅತ್ಯುತ್ತಮ ಚಿತ್ರಕ್ಕಿರುವ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ–1998- "ತಾಯಿಸಾಹೇಬ"
 • ಫಿಲಂಫೇರ್ ಪ್ರಶಸ್ತಿ- ಅತ್ಯುತ್ತಮ ಚಿತ್ರ-1999- "ತಾಯಿಸಾಹೇಬ"
 • ಢಾಕಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರೇಕ್ಷಕ ಪ್ರಶಸ್ತಿ- 2006-"ತುತ್ತೂರಿ"
 • ಚೆನ್ನೈ ಫ್ಯಾನ್ಸ್ ಅಸೋಸಿಯೇಷನ್-ಅತ್ಯುತ್ತಮ ಚಿತ್ರ- 1999-"ತಾಯಿಸಾಹೇಬ"


                                     

7. ರಾಜಕೀಯ ಮತ್ತು ಸಮಾಜ ಸೇವೆ

 • 2016ರಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಕುರಿತಂತೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ನೇಮಿಸಿದ ಸಮಿತಿಯ ಅಧ್ಯಕ್ಷತೆ; ನಿಗದಿತ ಅವಧಿಯಲ್ಲಿ ವರದಿ ಸಲ್ಲಿಕೆ.
 • ಅವರು ವಿಧಾನ ಪರಿಷತ್ತಿನ ಸದಸ್ಯೆಯಾಗಿ ನೇಮಿಸಲ್ಪಟ್ಟರು. ಭಾರತೀಯ ಚಿತ್ರರಂಗದಲ್ಲೇ ನಟಿಯೊಬ್ಬರ ಅದ್ವಿತೀಯ ಸಾಧನೆಯದು. ‘ಲೈಂಗಿಕ ವೃತ್ತಿನಿರತರ ಸ್ಥಿತಿಗತಿಗಳ ಅಧ್ಯಯನ ಸಮಿತಿ’ ಅಧ್ಯಕ್ಷೆಯಾಗಿ ರಾಜ್ಯದಾದ್ಯಂತ ಓಡಾಡಿ ಅತ್ಯುತ್ತಮ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದರು. ಇದೆಲ್ಲವೂ ಸಮಾಜ ಮತ್ತು ಬದುಕಿನ ಕುರಿತ ಅವರ ಶ್ರಮ ಮತ್ತು ಶ್ರದ್ಧೆಗೆ ಸಾಕ್ಷಿ.
 • ವಿಧಾನಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ವೇಳೆ ವೀಕ್ಷಕಿಯಾಗಿ ಕಾರ್ಯನಿರ್ವಹಣೆ
 • 2018ರ ವಿಧಾನ ಸಭ ಚುನಾವಣೆಯ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪಕ್ಷದ ವೀಕ್ಷಕರಾಗಿ ಕಾರ್ಯನಿರ್ವಹಣೆ.
 • 2018, ಮೇ. ಸಮ್ಮಿಶ್ರ ಸರ್ಕಾರದ ರಾಜ್ಯ ಸಂಪುಟದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿ ಪದಗ್ರಹಣ.
                                     

8. ಡಾಕ್ಟರೇಟ್

 • ಕರ್ನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸತಿ: ಆಡಳಿತ ವ್ಯವಸ್ಥೆಯ ಅಧ್ಯಯನ’ ಎಂಬ ವಿಷಯಕ್ಕೆ ಸಂಬಂಧಿಸಿ ಸುದೀರ್ಘ ಪ್ರಬಂಧ ಮಂಡಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು.
                                     

9. ಸಚಿವೆ

 • ಕಾಂಗ್ರೆಸ್‌ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯೆಯಾಗಿ, ಜಯಮಾಲ ಅವರು 2018 ರ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ನೇಮಕವಾಗಿದ್ದಾರೆ. ಸಚಿವೆ ಮಾತ್ರವಲ್ಲ, ಅವರೀಗ ಮೇಲ್ಮನೆಯ ಸಭಾನಾಯಕಿಯೂ ಆಗಿದ್ದಾರೆ.ಹೀಗೆ, ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ‘ಸಭಾನಾಯಕಿ’ ಆಗುತ್ತಿರುವ ಕರ್ನಾಟಕದ ಮೊದಲ ಮಹಿಳೆಯೂ ಆಗಿದ್ದಾರೆ.
                                               

ಗಿರಿಕನ್ಯೆ (ಚಲನಚಿತ್ರ)

ಗಿರಿಕನ್ಯೆ - ೧೯೭೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ದೊರೆ - ಭಗವಾನ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎ.ದ್ವಾರಕನಾಥ್. ಈ ಚಿತ್ರವು ಭರತೀಸುತರವರು ಬರೆದ ಗಿರಿಕನ್ಯೆ ಕಾದಂಬರಿಯಿಂದ ಆಧಾರವಾಗಿದೆ. ಈ ಚಿತ್ರದಲ್ಲಿ ರಾಜಕುಮಾರ್, ಜಯಮಾಲ ಹಾಗೂ ವಜ್ರಮುನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜನ್-ನಾಗೇಂದ್ರರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →