Back

ⓘ ಪರ್ಸಿಸ್ ಖಂಬಾಟ ೫೦ ರ ದಶಕದಲ್ಲಿನ ಮಹಾಸುಂದರಿಯರಲ್ಲೊಬ್ಬರೆಂದು ಪ್ರಿಸಿದ್ಧಿಪಡೆದ ಒಬ್ಬ ಭಾರತೀಯ ರೂಪದರ್ಶಿ, ಬಾಲಿವುಡ್ ನಟಿ ಮತ್ತು ಹಾಲಿವುಡ್ ನ ಜನಪ್ರಿಯ ನಟಿ, ಲೇಖಕಿ ಮತ್ತು ಭಾರತದ ಮೊಟ್ಟಮೊದಲ ..                                     

ⓘ ಪರ್ಸಿಸ್ ಖಂಬಾಟ

ಪರ್ಸಿಸ್ ಖಂಬಾಟ ೫೦ ರ ದಶಕದಲ್ಲಿನ ಮಹಾಸುಂದರಿಯರಲ್ಲೊಬ್ಬರೆಂದು ಪ್ರಿಸಿದ್ಧಿಪಡೆದ ಒಬ್ಬ ಭಾರತೀಯ ರೂಪದರ್ಶಿ, ಬಾಲಿವುಡ್ ನಟಿ ಮತ್ತು ಹಾಲಿವುಡ್ ನ ಜನಪ್ರಿಯ ನಟಿ, ಲೇಖಕಿ ಮತ್ತು ಭಾರತದ ಮೊಟ್ಟಮೊದಲ ಸೆಲೆಬ್ರಿಟಿಯಾಗಿ ಮಿಂಚಿದ ಮಹಿಳೆಯಾಗಿದ್ದರು.

                                     

1. ಜನನ ಹಾಗೂ ಬಾಲ್ಯ

ಬೆಡಗಿ ಪರ್ಸಿಸ್ ಖಂಬಾಟ, ಬೊಂಬಾಯಿನ ಜೊರಾಸ್ಟ್ರಿಯನ್ ಮತ ದ ಪಾರ್ಸಿ ಪಂಥೀಯ, ರ ಪರಿವಾರವೊಂದರಲ್ಲಿ ಜನಿಸಿದರು. ತಮಗೆ ಮೊದಲಿನಿಂದಲೂ ಪ್ರಿಯವಾದ ಮಾಡೆಲಿಂಗ್ ಶುರುಮಾಡಿದ್ದು ತಮ್ಮ ೧೩ ನೇ ವಯಸ್ಸಿನಲ್ಲೆ. ೧೫ ನೇ ವಯಸ್ಸಿನ ಹೊತ್ತಿಗೇ, ಮಿಸ್ ಇಂಡಿಯಾ ಆಗಿ ೧೯೬೫ ರಲ್ಲಿ ಆರಿಸಲ್ಪಟ್ಟರು. ತಮ್ಮ ಗಡಿ-ಬಿಡಿಯ ದಿನಚರಿಯಲ್ಲಿ ಕಿರು-ಫ್ಯಾಶನ್ ಉಡುಪುಗಳನ್ನು ದಿನದ ಕೊನೆಯಲ್ಲಿ ಬಿರಿಸುನಿಂದ ಖರೀದಿಸುತ್ತಿದ್ದವರ ಪೈಕೆ ಅವರೊಬ್ಬ ಪ್ರಮುಖರು. ೧೯೬೫ ರಲ್ಲಿ, ಪರ್ಸಿಸ್ ಖಂಬಾಟ, ಮಿಸ್ ಯೂನಿವರ್ಸ್ ಪೆಜೆಂಟ್ ಪ್ರಶಸ್ತಿಗೆ ಹಕ್ಕುದಾರರಾದರು. ಬಾಲಿವುಡ್ ಚಿತ್ರರಂಗದಲ್ಲಿ ಪಾದಾರ್ಪಣೆಮಾಡಿದರು. ಆದರೆ ಬಾಲಿವುಡ್ ಹಿಂದಿ ಚಿತ್ರರಂಗದಲ್ಲಿ ಅವರು ಅಪೇಕ್ಷಿಸಿದಷ್ಟು ಹೆಚ್ಚಿನ ಯಶಸ್ಸು ದೊರೆಯಲಿಲ್ಲ. ಅದಲ್ಲದೆ ಅವರು ಬೇರೆ ಭಾರತೀಯ ಭಾಷೆಗಳ ಚಿತ್ರಗಳಲ್ಲಿ ಮಾಡಿದ ಪ್ರಯತ್ನ ವಿಫಲವಾಯಿತು. ಕಾರಣಗಳು ಅವರಿಗೇ ಗೊತ್ತಿದ್ದಂತೆ, ಪಾಶ್ಚಿಮಾತ್ಯ ಮುಖಚರ್ಯೆ, ಹಾಗೂ ಪಾರಂಪರಿಕ ಸಂಪ್ರದಾಯದ ಮನೆತನದ ಪಾತ್ರಗಳಾದ ಮಗಳು, ಅಕ್ಕ -ತಂಗಿ, ತಾಯಿ ಮುಂತಾದ ಪಾತ್ರಗಳಿಗೆ, ಅವರ ವ್ಯಕ್ತಿತ್ವ, ಸರಿಹೋಗುತ್ತಿರಲಿಲ್ಲ. ಇದರಿಂದ ಹೆಚ್ಚಿನ ಭಾರತೀಯ ಚಿತ್ರ-ವೀಕ್ಷಕರಿಗೆ ಬೇಸರವಾಯಿತು. ಇದನ್ನು ಸೂಕ್ಷ್ಮವಾಗಿ ಅರಿತ, ಪರ್ಸಿಸ್ ಖಂಬಾಟ, ಅಂತಾರಾಷ್ಟ್ರೀಯ, ಅಥವಾ ವಿದೇಶೀ ವಲಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು.

                                     

2. ನಟಿಸಿದ ಕೆಲವು ಚಿತ್ರಗಳು

 • The Wilby Conspiracy
 • Conduct Unbecoming

ಪರ್ಸಿಸ್ ಖಂಬಾಟ, ಚಲನ-ಚಿತ್ರದ ಕೆರಿಯರ್ ನ್ನು ಅತಿ ಹೆಚ್ಚಿನ ಆಸಕ್ತಿಯನ್ನು ತೋರಿಸಲಾರಂಬಿಸಿದರು. ಅವರ ಕೆಲವು ಮರೆಯಲಾರದ ಅನುಪಮ ನಟನೆಯ ಪ್ರಭಾವದಿಂದಾಗಿ ಚಿತ್ರವಲಯದಲ್ಲಿ ಎಲ್ಲರಿಗೂ ಜನಪ್ರಿಯತೆಯನ್ನು ಹಾಸಲು ಮಾಡಿದರು. ಸ್ಟಾರ್ ಟ್ರ್ಯಾಕ್ ಚಿತ್ರದಲ್ಲಿ ಅವರು ಮಾಡಿದ ಅಮೋಘ ಪಾತ್ರದಿಂದ ವಿಶ್ವದಾದ್ಯಂತ ಪ್ರಸಿದ್ದರಾದರು. ಇದರಿಂದ ಸಿಕ್ಕ ಬ್ರೇಕ್ ಅವರ ಜೀವನದಲ್ಲಿ ಮಾಡಿದ ಹೊಸ ತಿರುವು, ಅತ್ಯಂತ ಮಹತ್ವದ್ದಾಗಿತ್ತು.

 • Nighthawks 1981,
 • navigator Lieutenant Ilia,
 • Warrior of the Lost World 1985,
 • The Motion Picture, 1979
 • Megaforce 1982,

ಪರ್ಸಿಸ್ ಖಂಬಾಟರವರು, ಹಾಲೀವುಡ್ ನ ಸ್ಟಾರ್ ಟ್ರ್ಯಾಕ್, ನಲ್ಲಿ ನಟಿಸಿದಾಗ ದೊರೆತ ನಟನೆಯ ಅದ್ಭುತ ಅನುಭವಗಳು ಬೇರೆ ಯಾವ ಚಿತ್ರದಲ್ಲಿ ನಟಿಸಿದಾಗಲೂ ದೊರೆಯಲಿಲ್ಲವೆಂಬ ಅಭಿಪ್ರಾಯಪಟ್ಟಿದ್ದರು. ಕೆಲವು ಭಾರತೀಯ ವಲಯಗಳ ವಕ್ತಾರರ ಹೇಳಿಕೆಯ ಪ್ರಕಾರ, ಸ್ಟಾರ್ ಟ್ಯಾಕ್, ನಂತರ, ಪ್ಲೇಬಾಯ್ ಚಿತ್ರದ ಮ್ಯಾಗಝೈನ್ ನಲ್ಲಿ ಮಾಡೆಲಿಂಗ್ ಮಾಡಬೇಕಾದ ಸಮಯದಲ್ಲಿ ಬಟ್ಟೆಯಿಲ್ಲದೆ ನಗ್ನ ಚಿತ್ರಗಳಿಗೆ ಪೋಸ್ ಕೊಡಬೇಕಾದ ಅಗತ್ಯವಿತ್ತು. ಪರ್ಸಿಸ್ ಖಂಬಾಟ ಅದನ್ನು ತಿರಸ್ಕರಿಸಿದ್ದರು. ಬಹುಶಃ ಅವರ ಜನಪ್ರಿಯತೆಯ ರೇಖೆ ಕೆಳಗಿಳಿಯಲು ಅದೇ ಕಾರಣವಿರಬಹುದೆಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ೧೯೭೯, ರಲ್ಲಿ ಪರ್ಸಿಸ್ ಖಂಬಾಟ ರವರು ಅಕ್ಯಾಡಮಿ ಅವಾರ್ಡ್, ಪಡೆದ ಭಾರತದ ಮೊಟ್ಟಮೊದಲ ಮಹಿಳಾ-ಪ್ರಜೆಯೆಂದು ಪರಿಗಣಿಸಲ್ಪಟ್ಟರು.

೧೯೮೫ರಲ್ಲಿ ಪರ್ಸಿಸ್ ಖಂಬಾಟ ಭಾರತಕ್ಕೆ ವಾಪಸ್ ಬಂದರು. ಬಾಲೀವುಡ್ ಹಿಂದಿ-ಚಿತ್ರರಂಗದಲ್ಲಿ ತಮ್ಮನ್ನು ಸ್ಥಾಪಿಸಿಕೊಳ್ಳಲು ಪ್ರಯತ್ನಪಟ್ಟರು. ಅವರು ನಟಿಸಿದ, ಶಿಂಗೊರ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ತಳವೂರಿತು. ಇದರಿಂದ ಖಿನ್ನರಾದ ಪರ್ಸಿಸ್ ಖಂಬಾಟ ರು, ಬಾಲೀವುಡ್ ಗೆ ಬೈ ಹೇಳಿ, ಹಾಲಿವುಡ್ ಗೆ ಮತ್ತೆ ಮರಳಿದರು. ಮೈಕ್ ಹ್ಯಾಮರ್ ಮತ್ತು ಮ್ಯಾಕ್ ಗ್ಯೇವರ್ ನಡೆಸಿಕೊಟ್ಟ ವಿವಿಧ ಲೈವ್ ಟೆಲಿವಿಶನ್ ಪ್ರದರ್ಶನ-ಮಾಲೆ ಗಳಲ್ಲಿ ಅತಿಥಿಪಾತ್ರಗಳನ್ನು ಪಡೆದರು. Mike Hammer and MacGyver.

೧೯೮೦ ರಲ್ಲಿ ಅವರು ಜರ್ಮನಿಯಲ್ಲಿದ್ದಾಗ, ಕಾರ್ ದುರ್ಘಟನೆಯಲ್ಲಿ ಆದ ಅಪಘಾತದಲ್ಲಿ ಪರ್ಸಿಸ್ ಖಂಬಾಟರವರಿಗೆ ತಲೆಗೆ ಭಾರಿ ಪೆಟ್ಟುಬಿದ್ದು, ತೀವ್ರವಾದ ಗಾಯವಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆಯನಂತರವೂ ನೆತ್ತಿಯಮೇಲೆ ಆಗಿದ್ದ ದೊಡ್ಡ ಕಲೆ, ಹಾಗೆಯೇ ಉಳಿಯಿತು. ೧೯೮೩ ರಲ್ಲಿ ಬೈಪಾಸ್ ಸರ್ಜರಿ ಯನ್ನು ಮಾಡಿಸಿಕೊಳ್ಳಬೇಕಾದ ಪ್ರಮೇಯ ಬಂತು. ೧೯೯೭ ರಲ್ಲಿ ಪರ್ಸಿಸ್ ಖಂಬಾಟ, Pride of India, (a coffee table book ಎಂಬ ಪುಸ್ತಕ ಬರೆದು ಪ್ರಕಟಿಸಿದರು. ಆ ಸಚಿತ್ರ-ಪುಸ್ತಕದಲ್ಲಿ ಭಾರತದ, ಹಿಂದಿನ ಅನೇಕ ಮಿಸ್ ಇಂಡಿಯ ಸೆಲೆಬ್ರಿಟಿ, ಗಳ ವಿವರ ಗಳನ್ನು ದಾಖಲಿಸಿದ್ದಾರೆ. ಆ ಪುಸ್ತಕವನ್ನು ಅವರ ಮೆಚ್ಚಿನ ಮದರ್ ಟೆರೆಸ ರವರಿಗೆ ಸಮರ್ಪಿಸಿದ್ದರು. ಪರ್ಸಿಸ್ ಖಂಬಾಟ ಅವರಿಗೆ ಆ ಪುಸ್ತಕದ ಮಾರಾಟದ ನಂತರ ಬರಬೇಕಾಗಿದ್ದ ರಾಯಲ್ಟಿಯಲ್ಲಿ ಸ್ವಲ್ಪ ಹಣ The Missionaries of Charity ಯವರಿಗೆ ಸಮರ್ಪಿತವಾಗುತ್ತಿತ್ತು. ಪರ್ಸಿಸ್ ಖಂಬಾಟ, ಕೊನೆಯ ಬಾರಿ ಕಾಣಿಸಿಕೊಂಡಿದ್ದು ಟೆಲೆವಿಶನ್ ಮತ್ತು ಟೀವಿ ಸೀರಿಯಲ್, ಗಳಲ್ಲಿ ನಟಿಸಿದ ಚಿತ್ರ, ಭಾರತೀಯ ರಾಯಭಾರಿಯಾಗಿ ಪ್ರಮುಖ ಎಪಿಸೋಡ್, ಲೂಯಿಸ್ ಮತ್ತು ಕ್ಲರ್ಕ್, ಎಂಬ ಚಿತ್ರದಲ್ಲಿ. The New Adventures of Superman ಚಿತ್ರಕೂಡಾ ಸೇರಿತ್ತು.

                                     

3. ವೈಯಕ್ತಿಕ ಜೀವನ

ಆಗಿನಕಾಲದ ಹಾಲಿವುಡ್ ನ ಬೇಡಿಕೆಯ, ಮೇರು-ನಟ, ಸಿಲ್ವೆಸ್ಟರ್ ಸ್ಟಾಲೋನ್ ಜೊತೆಗೆ ಸಾಮಾನ್ಯವಾಗಿ ಡೇಟಿಂಗ್, ಹೋಗುತ್ತಿದ್ದರು. ಮತ್ತಿತರ, ಹೆಸರಾಂತ ಸೆಲೆಬ್ರಿಟಿಗಳಾಗಿದ್ದ, ಹೆನ್ರಿ ಕಿಸಿಂಜರ್, ಟೆಡ್ ಕೆನೆಡಿ, ರುಟ್ ಗರ್ ಹಾವರ್, ಮತ್ತು ಎಡ್ವರ್ಡ್ ಲೋಝಿ ಯವರ ಸ್ನೇಹದಲ್ಲಿ ಸುಮಾರಾಗಿ ಜೊತೆ-ಜೊತೆಗೆ ಓಡಾಡುತ್ತಿದ್ದರು.

                                     

4. ನಿಧನ

೧೯೯೮, ರಲ್ಲಿ ದಕ್ಷಿಣ ಬೊಂಬಾಯಿನ ಮೆರೀನ್ ಆಸ್ಪತ್ರೆ, ಯಲ್ಲಿ ಭರ್ತಿಯಾದರು. ತೀವ್ರವಾದ ಎದೆ ನೋವಿನಿಂದ ನರಳುತ್ತಿದ್ದ, ಪರ್ಸಿಸ್ ಖಂಬಾಟರವರು, ಹೃದಯಾಘಾತದಿಂದ ಬುಧವಾರ, ೧೯ ಆಗಸ್ಟ್, ೧೯೯೮, ರಂದು ನಿಧನರಾದರು. ಅದೇ ದಿನದಂದು ಖಂಬಾಟರವರ ಶವಸಂಸ್ಕಾರ ನಡೆಯಿತು. ಆಗ ಅವರಿಗೆ ೪೯ ವರ್ಷ ವಯಸ್ಸಾಗಿತ್ತು. ಅವರ ಮರಣದ ಸನ್ನಿವೇಷವನ್ನು ಹತ್ತಿರದಿಂದ ವೀಕ್ಷಿಸಿದ ಗೆಳತಿಯರಿಗೆ ಅದು ಸ್ವಾಭಾವಿಕವಾದದ್ದೆಂಬ ನಂಬಿಕೆ ಬರಲಿಲ್ಲ. ಖಂಭಾಟರ ಹಳೆಯ ಬಾಯ್ ಫ್ರೆಂಡ್,ಎಡ್ವರ್ಡ್ ಲೋಝಿ, ಹಾಲಿವುಡ್ ನ ಬೆವೆರ್ಲಿ ಹಿಲ್ ನ ಸಂಪರ್ಕ ಅಧಿಕಾರಿ, ಯ ಹೇಳಿಕೆಯಂತೆ, ೧೯೮೫-೮೬, ರಲ್ಲಿಯೇ ಒಂದು ಪತ್ರ ಬರೆದಿದ್ದು ಅದರಲ್ಲಿ ತಮ್ಮ ಕಳವಳ ಹಾಗೂ ಸಂವೇದನೆಗಳನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ ಪರ್ಸಿಸ್ ರವರ ಮನೆಯವರಿಗೆ, ಜೀವಕ್ಕೆ ಅಪಾಯವಿರುವ ಸಾಧ್ಯತೆಗಳ ಬಗ್ಗೆ ಅವರಿಗೆ ಸುದ್ದಿ ಬಂದಿರುವುದಾಗಿ ಅಮೆರಿಕದಿಂದ ತಿಳಿಸಿದ್ದರು. ಭಾರತದ ಮಾಜೀ ಪ್ರಧಾನಿ, ಶ್ರೀಮತಿ, ಇಂದಿರಾ ಗಾಂಧಿಯವರು ಚುನಾವಣೆಗೆ ನಿಂತಸಮಯದಲ್ಲಿ ಪರ್ಸಿಸ್ ಖಂಬಾಟ ಅವರಿಗೆ ಪ್ರಚಾರಮಾಡಿ, ಓಟು ಕೊಡಲು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದರು. ಲೋಝಿ ಯವರು ಒಬ್ಬ ಖಾಸಗಿ ಪತ್ತೆದಾರರನ್ನು ಗುರುತುಮಾಡಿಕೊಂಡು ಬೊಂಬಾಯಿನಲ್ಲಿ ಆಟೋಪ್ಸಿಯ ವರದಿಯನ್ನು ತನಿಖೆಗೆ ಒಳಪಡಿಸಿದರು. ಪರ್ಸಿಸ್ ಮರಣಿಸಿದ ಸ್ಥಳದಲ್ಲಿ ಆಸ್ಪತ್ರೆಯ ಸಿಬ್ಬಂದಿ-ವರ್ಗದವರೊಡನೆ ಸಂವಾದಮಾಡಿ, ಮರಣದ ದಾಖಲೆಪತ್ರ,ವನ್ನು ಪಡೆದರು. ಕೊನೆಗೆ, ಇವ್ಯಾವುದನ್ನೂ ಜನರಿಗೆ ತಿಳಿಯ ಪಡಿಸದೆ, ಅವರ ದೇಹವನ್ನು ಅಂತ್ಯಕ್ರಿಯೆಗೆ ಒಳಪಡಿಸಿದರು. ಲೋಝಿಯವರ ಮೀಡಿಯ ಕಂ. ಒಂದು ವಿಜ್ಞಪ್ತಿಯಲ್ಲಿ ಹೊರಡಿಸಿದ ವರದಿಯಲ್ಲಿ, ಪರ್ಸಿಸ್ ಖಂಬಾಟರವರ ಮರಣ ನೈಜವಾಗಿರದೆ, ಕೆಲವರ ಕೈವಾಡ ಅದರಲ್ಲಿರಬಹುದೆಂಬ ಶಂಕೆಯನ್ನು ಘೋಶಿಸುವುದರ ಮೂಲಕ ಪರ್ಸಿಸ್ ರವರ ನಿಗೂಢ ಸಾವಿನ ಚಿತ್ರಣವನ್ನು ಪ್ರಿಯ ಆಸಕ್ತರ ಮುಂದಿಟ್ಟಿದ್ದಾರೆ.                                     

5. ಹೆಚ್ಚಿನ ಮಾಹಿತಿ

 • Ageless, timeless women, Ashok Banker, in Rediff, February 26, 2000
 • Welcome to rediff.com: Take the Movies Quiz!
 • The Globe 1998 November 10th New York Post October 20th, 1998 Beverly Hills 213 Magazine November 1998
 • a b c d Associated Press obituary, Wednesday 19 August 1998 01:51 AM EDT
Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →