Back

ⓘ ಕೇಟ್‌ ವಿನ್ಸ್ಲೆಟ್‌. ಕೇಟ್‌ ಎಲಿಜಬೆತ್ ವಿನ್ಸ್ಲೆಟ್‌ ಒಬ್ಬ ಇಂಗ್ಲಿಷ್‌ ನಟಿ ಮತ್ತು ಸಾಂದರ್ಭಿಕ ಗಾಯಕಿ. ಕೇಟ್‌ ವಿನ್ಸ್ಲೆಟ್‌ ಅವರು ತಮ್ಮ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಪೀಟರ್‌ ಜ್ಯಾಕ್ಸನ್‌ರ ..ಕೇಟ್‌ ವಿನ್ಸ್ಲೆಟ್‌
                                     

ⓘ ಕೇಟ್‌ ವಿನ್ಸ್ಲೆಟ್‌

ಕೇಟ್‌ ಎಲಿಜಬೆತ್ ವಿನ್ಸ್ಲೆಟ್‌ ಒಬ್ಬ ಇಂಗ್ಲಿಷ್‌ ನಟಿ ಮತ್ತು ಸಾಂದರ್ಭಿಕ ಗಾಯಕಿ. ಕೇಟ್‌ ವಿನ್ಸ್ಲೆಟ್‌ ಅವರು ತಮ್ಮ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಪೀಟರ್‌ ಜ್ಯಾಕ್ಸನ್‌ರವರ ಹೆವೆನ್ಲಿ ಕ್ರಿಯೇಚರ್ಸ್‌ ನಲ್ಲಿ ನಟಿಸುವುದರೊಂದಿಗೆ ಚಿತ್ರರಂಗಕ್ಕೆ ಕಾಲಿರಿಸಿದರು. ಆಂಗ್‌ ಲೀ ನಿರ್ದೇಶನದ, 1995ಲ್ಲಿ ತೆರೆಕಂಡ ಸೆನ್ಸ್‌ ಅಂಡ್‌ ಸೆನ್ಸಿಬಿಲಿಟಿ ಕಾದಂಬರಿ ಆಧರಿತ ಚಲನಚಿತ್ರದಲ್ಲಿ ಪೋಷಕ ಪಾತ್ರ; ಹಾಗೂ 1997ರಲ್ಲಿ ತೆರೆಕಂಡ ಟೈಟಾನಿಕ್‌ ಚಲನಚಿತ್ರದಲ್ಲಿ ರೋಸ್‌ ಡಿವಿಟ್‌ ಬಕೇಟರ್‌ ಪಾತ್ರ ನಿರ್ವಹಿಸಿ ಕೇಟ್‌ ವಿನ್ಸ್ಲೆಟ್‌ ಖ್ಯಾತಿಯನ್ನು ಪಡೆದರು.

ಐರಿಷ್‌ ಮರ್ಡಾಕ್‌ರ ಜೀವನಾಧಾರಿತ ಐರಿಸ್‌ 2001, ನವ್ಯ-ಅತಿವಾಸ್ತವಿಕತೆಯ ನಿಯೊಸರ್ರಿಯಲ್‌ ಕುರಿತಾದ ಇಟರ್ನಲ್‌ ಸನ್‌ಷೈನ್‌ ಆಫ್ ದಿ ಸ್ಪಾಟ್ಲೆಸ್‌ ಮೈಂಡ್‌ 2003, ಟಾಡ್‌ ಫೀಲ್ಡ್‌ರ 2006ರ ನಾಟಕ ಲಿಟ್ಲ್‌ ಚಿಲ್ಡ್ರನ್‌ 2006, ಪ್ರಣಯ-ಹಾಸ್ಯ ಮಿಶ್ರಿತ ಕಥೆಯುಳ್ಳ ದಿ ಹಾಲಿಡೇ 2006 ಮತ್ತು ತೆರೆಗಾಗಿ ರೂಪಾಂತರಗೊಂಡ ರೆವೊಲ್ಯೂಷನರಿ ರೋಡ್‌ 2008 - ಈ ಚಲನಚಿತ್ರಗಳಲ್ಲಿ ಕೇಟ್ ವಿನ್ಸ್ಲೆಟ್‌ ನಟಿಸಿದ್ದಾರೆ. ಆರು ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶಿತರಾದ ಕೇಟ್‌ ವಿನ್ಸ್ಲೆಟ್‌, ದಿ ರೀಡರ್‌ ಚಲನಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ನಟಿಯರ ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿ ಯನ್ನು ಗಳಿಸಿದರು. ಸ್ಕ್ರೀನ್‌ ಪ್ರಶಸ್ತಿಗಳು ಗಿಲ್ಡ್‌, ಬ್ರಿಟಿಷ್‌ ಅಕಾಡೆಮಿ ಆಫ್‌ ಫಿಲ್ಮ್‌ ಅಂಡ್‌ ಟೆಲಿವಿಷನ್‌ ಅರ್ಟ್ಸ್‌ ಮತ್ತು ಹಾಲಿವುಡ್‌ ಫಾರೀನ್‌ ಪ್ರೆಸ್‌ ಅಸೋಷಿಯೇಷನ್‌‌ಗಳಿಂದ ಪ್ರಶಸ್ತಿಗಳನ್ನು ಪಡೆದಿರುವ ವಿನ್ಸ್ಲೆಟ್, ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನವನ್ನೂ ಗಳಿಸಿದ್ದಾರೆ.

ವಿನ್ಸ್ಲೆಟ್ ತಮ್ಮ 22ನೆಯ ವಯಸ್ಸಿನಲ್ಲಿ ಎರಡು ಆಸ್ಕರ್ ನಾಮನಿರ್ದೇಶನಗಳನ್ನು ಪಡೆದ ಅತಿ ಕಿರಿಯ ನಟಿಯೆನಿಸಿಕೊಂಡರು; 33ನೆಯ ವಯಸ್ಸಿನಲ್ಲಿ, ಆರು ನಾಮನಿರ್ದೇಶನಗಳನ್ನು ಪಡೆದ ಅತಿ ಕಿರಿಯ ನಟಿಯೆಂಬ ಮತ್ತೊಂದು ದಾಖಲೆಗೆ ಭಾಜನರಾದರು. 2009ರಲ್ಲಿ ನ್ಯೂಯಾರ್ಕ್‌ ಮ್ಯಾಗಜೀನ್‌ ನ ಡೇವಿಡ್ ಎಡಲ್‌ಸ್ಟೀನ್‌ ಅವರು "ತಮ್ಮ ಪೀಳಿಗೆಯ ಅತ್ಯುತ್ತಮ ಇಂಗ್ಲಿಷ್‌-ಭಾಷಿಕ ನಟಿ"ಯೆಂದು ಕೇಟ್‌ ವಿನ್ಸ್ಲೆಟ್‌ ಅವರನ್ನು ಹೊಗಳಿದರು.

                                     

1. ಆರಂಭಿಕ ಜೀವನ

ಪಾನಗೃಹದ ಪರಿಚಾರಕಿ ಬಾರ್‌ಮೇಯ್ಡ್‌ ಸ್ಯಾಲಿ ಆನ್‌ ಪೂರ್ವಾಶ್ರಮದ ಹೆಸರು ಬ್ರಿಡ್ಜೆಸ್‌ ಮತ್ತು ಈಜುಕೊಳದ ಗುತ್ತಿಗೆದಾರ ರಿಜರ್ಡ್‌ ಜಾನ್‌ ವಿನ್ಸ್ಲೆಟ್‌ ದಂಪತಿಯ ಮಗಳಾಗಿ ಕೇಟ್‌ ವಿನ್ಸ್ಲೆಟ್‌ ಅವರು ಯನೈಟೆಡ್ ಕಿಂಗ್ಡಂನ ಇಂಗ್ಲೆಂಡ್‌ ದೇಶದ ಬರ್ಕ್‌ಷೈರ್ ಕೌಂಟಿಯ ರೀಡಿಂಗ್‌ನಲ್ಲಿ ಜನಿಸಿದರು. ಅವರ ಹೆತ್ತವರು "ಚಿಲ್ಲರೆ ಕಲಾವಿದ"ರಾಗಿದ್ದು ಜಾಬಿಂಗ್ ಆಕ್ಟರ್ಸ್‌, ಇದಕ್ಕೆ ಕೈಗನ್ನಡಿಯೆಂಬಂತೆ ಯಾವುದೇ ವಿಶೇಷ ಸವಲತ್ತುಗಳಿಲ್ಲದೆ ತಾವು ಬೆಳೆದಿದ್ದಾಗಿ ಕೇಟ್ ವಿನ್ಸ್ಲೆಟ್‌ ಹೇಳಿದ್ದಾರೆ, ಆರ್ಥಿಕ ಸಮಸ್ಯೆಗಳಿಂದಾಗಿ ಅವರ ದೈನಂದಿನ ಜೀವನದ ಗುಣಮಟ್ಟವು ಅಗತ್ಯಕ್ಕಷ್ಟೇ ಸೀಮಿತವಾಗಿತ್ತು. ಕೇಟ್‌ ವಿನ್ಲ್ಲೆಟ್‌ರ ತಾಯಿ ಕಡೆಯ ಅಜ್ಜಿ ಲಿಂಡಾ ಪೂರ್ವಾಶ್ರಮದ ಹೆಸರು ಪ್ಲಂಬ್‌ ಮತ್ತು ತಾತ ಆರ್ಚಿಬಾಲ್ಡ್‌ ಆಲಿವರ್‌ ಬ್ರಿಡ್ಜೆಸ್‌ ಅವರು ರೀಡಿಂಗ್‌ ರೆಪರ್ಟರಿ ಥಿಯೆಟರ್‌ನ್ನು ಸ್ಥಾಪಿಸಿ ನಡೆಸುತ್ತಿದ್ದರು. ಕೇಟ್‌ ವಿನ್ಸ್ಲೆಟ್‌ರ ಸೋದರಮಾವ ರಾಬರ್ಟ್‌ ಬ್ರಿಡ್ಜೆಸ್‌ ಅವರು ವೆಸ್ಟ್‌ ಎಂಡ್‌ನಿರ್ಮಾಣದ ಮೂಲ ಚಲನಚಿತ್ರ ಆಲಿವರ್‌! ನಲ್ಲಿ ಕಾಣಿಸಿಕೊಂಡಿದ್ದರು. ಅವರ ಸಹೋದರಿಯರಾದ ಬೆತ್‌ ವಿನ್ಸ್ಲೆಟ್‌ ಮತ್ತು ಆನಾ ವಿನ್ಸ್ಲೆಟ್‌ ಸಹ ನಟಿಯರಾಗಿದ್ದಾರೆ.

ಆಂಗ್ಲಿಕನ್‌ ಆಗಿ ಬೆಳೆದ ಕೇಟ್‌ ವಿನ್ಸ್ಲೆಟ್‌, ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ಬರ್ಕ್‌ಷೈರ್ ಕೌಂಟಿಯ ಮೇಡನ್‌ಹೆಡ್‌ನಲ್ಲಿರುವ ರೆಡ್‌ರೂಫ್ಸ್‌ ಥಿಯೆಟರ್‌ ಸ್ಕೂಲ್‌ ಎಂಬ ಸಹ-ಶಿಕ್ಷಣದ ಸ್ವತಂತ್ರ ಶಾಲೆಯಲ್ಲಿ ನಾಟಕಗಳ ಅಧ್ಯಯನ ಆರಂಭಿಸಿದರು. ಅಲ್ಲಿ ಅವರು ಹೆಡ್ ಗರ್ಲ್‌ ಆಗಿದ್ದಾಗ ಸುಗರ್‌ ಪಫ್ಸ್‌ದವರ ತಿಂಡಿ ಸಿರಿಯಲ್‌ಗಾಗಿ ಟಿಮ್‌ ಪೋಪ್‌ ನಿರ್ದೇಶಿಸಿದ ದೂರದರ್ಶನ ಜಾಹೀರಾತಿನಲ್ಲಿ ಕಾಣಿಸಿಕೊಂಡರು.

                                     

2.1. ವೃತ್ತಿ ಆರಂಭಿಕ ಕೆಲಸ-ಕಾರ್ಯಗಳು

1991ರಲ್ಲಿ BBCಯಲ್ಲಿ ಪ್ರಸಾರಗೊಂಡ ಡಾರ್ಕ್‌ ಸೀಸನ್‌ ಎಂಬ ವೈಜ್ಞಾನಿಕ ಕಾದಂಬರಿಯನ್ನಾಧರಿಸಿದ ಮಕ್ಕಳ ಧಾರಾವಾಹಿಯಲ್ಲಿ ನಟಿಸುವುದರೊಂದಿಗೆ ಕೇಟ್‌ ವಿನ್ಸ್ಲೆಟ್‌ರ ವೃತ್ತಿ ಜೀವನ ಕಿರುತೆರೆ ಮೂಲಕ ಆರಂಭವಾಯಿತು. ಇದರ ನಂತರ 1992ರಲ್ಲಿ ದೂರದರ್ಶನಕ್ಕಾಗಿ ನಿರ್ಮಿಸಲಾದ ಚಲನಚಿತ್ರ ಆಂಗ್ಲೊ-ಸ್ಯಾಕ್ಸಾನ್‌ ಅಟಿಟ್ಯೂಡ್ಸ್‌, ITVಗಾಗಿ ಹಾಸ್ಯ ಧಾರಾವಾಹಿ ಗೆಟ್‌ ಬ್ಯಾಕ್‌ ಮತ್ತು 1993ರಲ್ಲಿ BBCಗಾಗಿ ವೈದ್ಯಕೀಯ ನಾಟಕ ಕ್ಯಾಸ್ಯುವಾಲಿಟಿ ಯ ಒಂದು ಕಂತಿನಲ್ಲಿ ಅವರು ಕಾಣಿಸಿಕೊಂಡರು.

                                     

2.2. ವೃತ್ತಿ 1992 - 1997

1992ರಲ್ಲಿ ಪೀಟರ್‌ ಜ್ಯಾಕ್ಸನ್‌ರ ಹೆವೆನ್ಲಿ ಕ್ರಿಯೇಚರ್ಸ್‌ ಎಂಬ ಚಲನಚಿತ್ರಕ್ಕಾಗಿ ಕೇಟ್‌ ವಿನ್ಸ್ಲೆಟ್‌ ಅವರು ಲಂಡನ್‌ನಲ್ಲಿ ಪಾತ್ರ ನಿರ್ಣಯ ಸಭೆಗೆ ಹಾಜರಾದರು. ಈ ಚಿತ್ರದ ಜೂಲಿಯೆಟ್‌ ಹ್ಯೂಮ್‌ ಎಂಬ ಉತ್ಸಾಹಿ ಮತ್ತು ಪ್ರತಿಭೆಯುಳ್ಳ ಹದಿಹರೆಯದ ಹುಡುಗಿಯ ಪಾತ್ರಕ್ಕೆ ಕೇಟ್ ಅವರ ಅಭಿನಯ ಪರೀಕ್ಷೆ ನಡೆಸಲಾಯಿತು, ಇಲ್ಲಿ ತನ್ನ ಆಪ್ತ ಗೆಳತಿ ಪಾಲೀನ್‌ ಪಾರ್ಕರ್‌ಳ ತಾಯಿಯ ಕೊಲೆ ಪ್ರಕರಣದ ತನಿಖೆಯಲ್ಲಿ ನೆರವು ನೀಡುವ ಪಾತ್ರ ಕೇಟ್ ರದ್ದು, ಪಾಲೀನ್‌ ಪಾರ್ಕರ್‌ಳ ಪಾತ್ರವನ್ನು ಮೆಲಾನೀ ಲಿನ್ಸ್ಕಿನಿರ್ವಹಿಸಿದ್ದಾರೆ. ಪಾತ್ರ ನಿರ್ಣಯದ ವೇಳೆ ಕೇಟ್ ಅವರು 175 ಇತರ ಮಹಿಳಾ ಅಭ್ಯರ್ಥಿಗಳನ್ನು ಹಿಂದಿಕ್ಕಿ ಈ ಪಾತ್ರವನ್ನು ತಮ್ಮದಾಗಿಸಿಕೊಂಡರು. ಈ ಚಿತ್ರ 1994ರಲ್ಲಿ ಬಿಡುಗಡೆಗೊಂಡು ಉತ್ತಮ ವಿಮರ್ಶೆಗಳನ್ನು ಗಳಿಸಿದ್ದೇ ಅಲ್ಲದೆ, ಪೀಟರ್‌ ಜ್ಯಾಕ್ಸನ್‌ ಮತ್ತು ಅವರ ಸಹಭಾಗಿ ಫ್ರ್ಯಾನ್‌ ವಾಲ್ಷ್‌ ಅವರು ಅತ್ಯುತ್ತಮ ಮೂಲ ಚಿತ್ರಕಥೆಗಾಗಿ ಅಕಾಡೆಮಿ ಪ್ರಶಸ್ತಿ‌ಗೆ ನಾಮನಿರ್ದೇಶನಗೊಂಡರು. ನಟನೆಗಾಗಿ ಕೇಟ್ ವಿನ್ಸ್ಲೆಟ್‌ ಎಂಪೈರ್‌ ಪ್ರಶಸ್ತಿ ಮತ್ತು ಲಂಡನ್‌ ಕ್ರಿಟಿಕ್ಸ್‌‌ ಸರ್ಕಲ್‌ ಫಿಲ್ಮ್‌ ಪ್ರಶಸ್ತಿ ಗಳನ್ನು ಪಡೆದರು ; ಕೇಟ್ ಅಭಿನಯ ಕುರಿತು ವಾಷಿಂಗ್ಟನ್‌ ಪೋಸ್ಟ್‌ ಬರಹಗಾರ ಡೆಸನ್‌ ಥಾಮ್ಸನ್‌ ಅವರು ಹೇಳಿದ್ದು ಹೀಗೆ, "ಕೇಟ್‌ ವಿನ್ಸ್ಲೆಟ್ ಜೂಲಿಯೆಟ್‌ ಪಾತ್ರವನ್ನು ನಿರ್ವಹಿಸುವಾಗ ಅವರು ಹೊಳಪಿನ ಕಣ್ಣುಗಳು ಬೆಂಕಿ ಚೆಂಡಿನಂತಿದ್ದು, ತಾವು ನಿರ್ವಹಿಸುವ ಪ್ರತಿಯೊಂದು ಸನ್ನಿವೇಶಕ್ಕೂ ಜೀವ ತುಂಬಿದ್ದಾರೆ. ಇದಕ್ಕೆ ಸರಿಸಾಟಿಯಾಗಿ ಮೆಲಾನೀ ಲಿನ್ಸ್ಕಿ ನಿರ್ವಹಿಸಿದ ಒಳಗೊಳಗೇ ಕುದಿಯುತ್ತಿರುವ ಪಾಲೀನ್‌ ಪಾತ್ರದ ನಿಶ್ಶಬ್ದವಾಗಿ ಈ ಅಪಾಯಕಾರಿ ಸಹಭಾಗಿತ್ವವನ್ನು ಪರಿಪೂರ್ಣಗೊಳಿಸುತ್ತದೆ." ತಮ್ಮ ಚೊಚ್ಚಲ ಚಲನಚಿತ್ರದ ಸೆಟ್‌ ಮೇಲಿನ ಅನುಭವವನ್ನು ಕೇಟ್‌ ವಿನ್ಸ್ಲೆಟ್‌ ಹಂಚಿಕೊಂಡಿದ್ದು ಹೀಗೆ: ಹೆವೆನ್ಲಿ ಕ್ರಿಯೇಚರ್ಸ್‌ ಚಿತ್ರದಲ್ಲಿ ಸಂಪೂರ್ಣವಾಗಿ ಆ ಪಾತ್ರವಾಗುವುದೊಂದೇ ನನ್ನ ಕರ್ತವ್ಯ ಎಂಬುದಷ್ಟೇ ನನಗೆ ತಿಳಿದಿತ್ತು. ಚಲನಚಿತ್ರದ ಬಗ್ಗೆ ಏನೂ ಅರಿವಿಲ್ಲದೆ ನಟಿಸುವುದು ಒಂದು ರೀತಿಯಲ್ಲಿ ಒಳ್ಳೆಯ ಅನುಭವ."

ಮರು ವರ್ಷ, ಜೇನ್‌ ಆಸ್ಟೆನ್‌ರವರ ಕಾದಂಬರಿ ಸೆನ್ಸ್ ಅಂಡ್‌ ಸೆನ್ಸಿಬಿಲಿಟಿ ಯ ರೂಪಾಂತರದ ಚಲನಚಿತ್ರದಲ್ಲಿ, ಕಿರಿದಾದ ಪಾತ್ರವಾಗಿದ್ದರೂ ಮಹತ್ವದ ಲೂಸಿ ಸ್ಟೀಲ್‌ ಪಾತ್ರಕ್ಕಾಗಿ ಕೇಟ್‌ ವಿನ್ಸ್ಲೆಟ್‌ ಅಭಿನಯ ಪರೀಕ್ಷೆಗೆ ಒಳಪಟ್ಟರು. ಈ ಚಲನಚಿತ್ರದಲ್ಲಿ ಎಮ್ಮಾ ಥಾಂಪ್ಸನ್‌, ಹಗ್ ಗ್ರ್ಯಾಂಟ್‌ ಮತ್ತು ಅಲಾನ್‌ ರಿಕ್ಮನ್‌ ಸಹ ನಟಿಸಿದ್ದಾರೆ. ಆದರೆ, ಕೇಟ್‌ ವಿನ್ಸ್ಲೆಟ್‌ ಅವರನ್ನು ಮಾರಿಯಾನ್‌ ಡ್ಯಾಷ್‌ವುಡ್‌ ಎಂಬ ಎರಡನೆಯ ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ಹೆವೆನ್ಲಿ ಕ್ರಿಯೇಚರ್ಸ್‌ ನಲ್ಲಿ ಕೇಟ್‌ ವಿನ್ಸ್ಲೆಟ್‌ ಅಕ್ರಮಣಕಾರಿಯಾಗಿ ಪಾತ್ರ ನಿರ್ವಹಿಸಿದ ರೀತಿಯನ್ನು ನೋಡಿ ಒಬ್ಬ ನಿರ್ದೇಶಕನಾಗಿ ಆರಂಭದಲ್ಲಿ ತಳಮಳಗೊಂಡಿದ್ದೆ ಎಂದು ಆಂಗ್‌ ಲೀ ಒಪ್ಪಿಕೊಂಡಿದ್ದರು, ಮತ್ತು ಆ ಪಾತ್ರಕ್ಕೆ ಹೊಂದಿಕೊಳ್ಳಲು, ಕೇಟ್ ವಿನ್ಸ್ಲೆಟ್‌ ಅವರು ತೈ ಚಿ ವ್ಯಾಯಾಮ, ಆಸ್ಟೆನ್‌-ಯುಗದ ಗೋಥಿಕ್‌ ಕಾದಂಬರಿಗಳು-ಕವಿತೆಗಳನ್ನು ಓದುವುದು ಮತ್ತು ಪಿಯಾನೊ ಕಲಿಯುವುದು ಅಗತ್ಯವಾಯಿತು. $16.500,೦೦೦ ಬಂಡವಾಳದಲ್ಲಿ ತೆಗೆದಿದ್ದ ಈ ಚಲನಚಿತ್ರ ಆರ್ಥಿಕವಾಗಿ ಮತ್ತು ವಿಮರ್ಶಾತ್ಮಕವಾಗಿ ಯಶಸ್ಸು ಗಳಿಸಿತಲ್ಲದೆ, ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ $135 ದಶಲಕ್ಷ ಹಣ ಗಳಿಸಿತು, ಇದರ ಜೊತೆಗೆ ಕೇಟ್‌ ವಿನ್ಸ್ಲೆಟ್‌ರಿಗೆ ಹಲವು ಪ್ರಶಸ್ತಿಗಳನ್ನೂ ತಂದುಕೊಟ್ಟಿತು. BAFTA ಮತ್ರು ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಟ್‌ ಪ್ರಶಸ್ತಿ ‌ಗಳೆರಡನ್ನೂ ಪಡೆದ ಕೇಟ್ ‌, ಅಕಾಡೆಮಿ ಪ್ರಶಸ್ತಿ ಮತ್ತು ಗೋಲ್ಡನ್ ಗ್ಲೋಬ್‌ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಪಡೆದರು.

1996ರಲ್ಲಿ ಜೂಡ್‌ ಮತ್ತು ಹ್ಯಾಮ್ಲೆಟ್‌ ಚಲನಚಿತ್ರಗಳಲ್ಲಿ ಕೇಟ್‌ ವಿನ್ಸ್ಲೆಟ್‌ ನಟಿಸಿದರು. ಥಾಮಸ್‌ ಹಾರ್ಡಿಯವರ ವಿಕ್ಟೋರಿಯಾ ಕಾಲದ ಕಾದಂಬರಿಯಾದ ಜೂಡ್‌ ದಿ ಅಬ್ಸ್ಕರ್‌ ಆಧಾರಿತ, ಮೈಕೆಲ್‌ ವಿಂಟರ್ಬಾಟಮ್‌ ನಿರ್ದೇಶಿಸಿದ ಜೂಡ್‌ ಚಲನಚಿತ್ರದಲ್ಲಿ ಕೇಟ್‌ ವಿನ್ಸ್ಲೆಟ್‌ ಅವರು ಸ್ತ್ರೀಯರಿಗೂ ಮತದಾನ ಹಕ್ಕನ್ನು ಪ್ರತಿಪಾದಿಸುವ, ತನ್ನ ಸೋದರ ಸಂಬಂಧಿಯನ್ನು ಪ್ರೀತಿಸುವ ಸೂ ಬ್ರೈಡ್‌ಹೆಡ್‌ ಎಂಬ ಯುವತಿಯ ಪಾತ್ರವನ್ನು ನಿರ್ವಹಿಸಿದರು, ಈ ಚಿತ್ರದಲ್ಲಿ ಕ್ರಿಸ್ಟೊಫರ್‌ ಎಕ್ಲೆಸ್ಟನ್‌ ಅವರು ಸೋದರ ಸಂಬಂಧಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ವಿಮರ್ಶಕರ ಪ್ರಶಂಸೆಯನ್ನು ಪಡೆದರೂ ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ, ವಿಶ್ವಾದ್ಯಂತ ಕೇವಲ $2 ದಶಲಕ್ಷ ಹಣವನ್ನು ಗಳಿಸಿತು. ಟೈಮ್‌ ಪತ್ರಿಕೆಯ ರಿಚರ್ಡ್‌ ಕಾರ್ಲಿಸ್‌ ಅವರ ಪ್ರಕಾರ, "ಸಣ್ಣ-ಪುಟ್ಟ ಕುಂದುಕೊರತೆಗಳನ್ನೂ ಉಪೇಕ್ಷಿಸದ ಕೇಟ್‌ ವಿನ್ಸ್ಲೆಟ್‌ ಕ್ಯಾಮೆರಾದ ಪ್ರೀತ್ಯಾದರಗಳಿಗೆ ಪಾತ್ರಗಳೊಂದಿಗೆ ಭಾವನಾತ್ಮಕವಾಗಿ ಒಳಗೊಳ್ಳಲು ಒಂದು ಕ್ಷಣವೂ ದೊರೆಯಲಿಲ್ಲ, ಈ ಚಲನಚಿತ್ರ ಸತ್ತುಹೋಗಿ ಹುಟ್ಟಿದಂತಿದ್ದು, ಚುನಾವಣಾ ವರ್ಷದಲ್ಲೂ ಸಹ ಸಾರ್ವಜನಿಕರ ಕುತೂಹಲವನ್ನು ಎಬ್ಬಿಸುವ ಸಾಧ್ಯತೆ ಬಹಳ ಕಡಿಮೆ," ಎಂದು ವರೈಟಿಯ ಟಾಡ್‌ ಮೆಕಾರ್ತಿ ಬಣ್ಣಿಸಿದರು.

ಕೇಟ್‌ ವಿನ್ಸ್ಲೆಟ್‌ರ ಮುಂದಿನ ಚಲನಚಿತ್ರ, ಟಾಡ್‌ ಫೀಲ್ಡ್‌ರ ಲಿಟ್ಲ್‌ ಚಿಲ್ಡ್ರನ್ ‌ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯಿತು. ಇದರಲ್ಲಿ ಅವರು ವಿವಾಹಿತ ನೆರೆಯವನೊಂದಿಗೆ ಭಾವೋದ್ರೇಕದ ಸಂಬಂಧಕ್ಕಿಳಿದ ಸಾರಾ ಪಿಯರ್ಸ್‌ ಎಂಬ ಒಬ್ಬ ಬೇಸರಗೊಂಡಿರುವ ಗೃಹಿಣಿಯ ಪಾತ್ರವನ್ನು ನಿರ್ವಹಿಸಿದರು, ವಿವಾಹಿತ ನೆರೆಯವನಾಗಿ ಪ್ಯಾಟ್ರಿಕ್ ವಿಲ್ಸನ್‌ ಅಭಿನಯಿಸಿದ್ದಾರೆ. ಕೇಟ್‌ ವಿನ್ಸ್ಲೆಟ್‌ರ ನಟನೆ ಮತ್ತು ಚಲನಚಿತ್ರ ಅತಿ ಪ್ರಶಂಸೆಯ ವಿಮರ್ಶೆಗಳನ್ನು ಪಡೆದವು. ನ್ಯೂ ಯಾರ್ಕ್‌ ಟೈಮ್ಸ್‌ ನ A.O. ಸ್ಕಾಟ್‌ ಈ ರೀತಿ ಟಿಪ್ಪಣಿ ಬರೆದರು: "ಇತ್ತೀಚೆಗಿನ ಹಲವು ಚಲನಚಿತ್ರಗಳಲ್ಲಿ ಬುದ್ಧಿಮತ್ತೆಯು ಶೋಚನೀಯವಾಗಿ ಕಡಗಣಿಸಲಾಗಿದೆ. ಅದರ ಗಮನಾರ್ಹ ಸೌಂದರ್ಯಕ್ಕಿಂತಲೂ ಹೆಚ್ಚಾಗಿ ಗುಣಮಟ್ಟವೇ ಲಿಟ್ಲ್‌ ಚಿಲ್ಡ್ರನ್‌ ಚಲನಚಿತ್ರವನ್ನು ಅದರ ಸಮಕಾಲೀನ ಚಿತ್ರಗಳಿಗಿಂತ ಭಿನ್ನವಾಗಿಸಿದೆ. ಇದರ ಫಲವಾಗಿ ಸವಾಲಾಗಬಲ್ಲ, ಅರ್ಥವಾಗಬಲ್ಲ ಮತ್ತು ಅದರ ಬಗ್ಗೆ ಯೋಚಿಸದೇ ಇರಲು ಕಷ್ಟವಾಗುವ ಚಲನಚಿತ್ರವೊಂದು ಮೂಡಿಬಂದಿದೆ. ಇಂದಿನ ಚಲನಚಿತ್ರಗಳಲ್ಲಿ ನಟಿಸುವ ಶ್ರೇಷ್ಠ ಅಭಿನೇತ್ರಿಯರಲ್ಲಿ ಕೇಟ್‌ ವಿನ್ಸ್ಲೆಟ್‌ ಸಹ ಒಬ್ಬರು. ಸಾರಾ ಪಾತ್ರಳ ಪ್ರತಿಷ್ಠೆ, ಆತ್ಮಸಂಶಯ ಮತ್ತು ಬಯಕೆಗಳ ಪ್ರತಿಯೊಂದು ಮಿಣುಕಾಟಗಳನ್ನು ಅವರು ಹಾವಭಾವಗಳಿಂದ ಸೂಚಿಸಿದ್ದಾರೆ. ಈ ಪಾತ್ರದತ್ತ ಪ್ರತಿಕ್ರಿಯೆಯು ಮನ್ನಣೆ, ಮರುಕ ಮತ್ತು ಚಿಂತೆಗಳ ಮಿಶ್ರಣವಾಗಿ, ಚಲನಚಿತ್ರವು ಅಂತ್ಯಗೊಳ್ಳುವಷ್ಟರಲ್ಲಿ ಪ್ರೀತಿಯಂತಹ ಭಾವನೆಗಳಿಗೆ ಎಡೆಮಾಡಿಕೊಡುತ್ತದೆ. ಕೇಟ್‌ ವಿನ್ಸ್ಲೆಟ್‌ ಎಲ್ಲರಿಗೂ ಇಷ್ಟವಾದರೆ, ಸಾರಾಳ ಜೀವನದಲ್ಲಿರುವ ಪ್ರೀತಿಯ ಕೊರತೆಯು ಇನ್ನಷ್ಟು ಯಾತನಮಯವಾಗಿಸುತ್ತದೆ." ಈ ಚಿತ್ರದಲ್ಲಿನ ನಟನೆಗಾಗಿ ಕೇಟ್‌ ವಿನ್ಸ್ಲೆಟ್‌ BAFTA ಬ್ರಿಟನಿಯಾ ಪ್ರಶಸ್ತಿ‌ ಪಡೆದರು, ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗಾಗಿ ಅಕಾಡೆಮಿ ಪ್ರಶಸ್ತಿ‌ಗೆ ನಾಮನಿರ್ದೇಶನ ಕೂಡ ಪಡೆದರು, ಜೊತೆಗೆ 31ನೆ ವಯಸ್ಸಿನಲ್ಲೇ ಐದು ಆಸ್ಕರ್ ನಾಮನಿರ್ದೇಶನಗಳನ್ನು ಪಡೆದ ಅತಿ ಕಿರಿಯ ನಟಿಯೆಂಬ ಹೆಗ್ಗಳಿಕೆ ಅವರದ್ದಾಯಿತು.

ಇದರ ನಂತರ, ನ್ಯಾನ್ಸಿ ಮೆಯರ್ಸ್‌ರ ಪ್ರಣಯ-ಹಾಸ್ಯ ಕಥೆಯುಳ್ಳ ದಿ ಹಾಲಿಡೇ ಚಲನಚಿತ್ರದಲ್ಲಿ, ಕ್ಯಾಮೆರಾನ್ ಡಯಾಸ್‌, ಜೂಡ್‌ ಲಾ ಮತ್ತು ಜ್ಯಾಕ್‌ ಬ್ಲ್ಯಾಕ್‌ರೊಂದಿಗೆ ಪಾತ್ರವೊಂದರಲ್ಲಿ ನಟಿಸಿದರು. ಇದರಲ್ಲಿ, ಅವರು ಕ್ಯಾಮೆರಾನ್‌ ಡಯಾಸ್‌ ನಿರ್ವಹಿಸಿದ ಪಾತ್ರವಾದ ಅಮೆರಿಕನ್‌ ಹೆಣ್ಣಿನೊಂದಿಗೆ ತಾತ್ಕಾಲಿಕವಾಗಿ ಮನೆಗಳನ್ನು ವಿನಿಮಯ ಮಾಡಿಕೊಳ್ಳುವ ಐರಿಸ್‌ ಎಂಬ ಬ್ರಿಟಿಷ್‌ ಮಹಿಳೆಯ ಪಾತ್ರವನ್ನು ನಿರ್ವಹಿಸಿದರು. ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದರೂ, ಕೇಟ್‌ ವಿನ್ಸ್ಲೆಟ್‌ರ ಪಾಲಿಗೆ ಒಂಬತ್ತು ವರ್ಷಗಳಲ್ಲೇ ಅತಿ ಹೆಚ್ಚು ವಾಣಿಜ್ಯ ಯಶಸ್ಸು ಕಂಡ ಚಲನಚಿತ್ರವಾಯಿತು. ಈ ಚಿತ್ರ ವಿಶ್ವಾದ್ಯಂತ $205 ದಶಲಕ್ಷ ಹಣ ಗಳಿಸಿತು. 2006ರಲ್ಲಿಯೇ, ಹಲವು ಕಿರುಪ್ರಮಾಣದ ಚಲನಚಿತ್ರಗಳಿಗಾಗಿ ಕೇಟ್‌ ವಿನ್ಸ್ಲೆಟ್‌ ತಮ್ಮ ಧ್ವನಿದಾನ ಮಾಡಿದರು. CG-ಆನಿಮೇಟೆಡ್‌ ಚಲನಚಿತ್ರ ಫ್ಲಷ್ಡ್‌ ಅವೇ ನಲ್ಲಿ ರಾಡ್ಡಿ ಹಗ್‌ ಜ್ಯಾಕ್ಮನ್ ರಾಟ್ರೊಪೊಲಿಸ್‌ ನಗರದಿಂದ ಪಾರಾಗಿ ತನ್ನ ಐಷಾರಾಮಿ ಕೆನ್ಸಿಂಗ್ಟನ್‌ ಮೂಲಗಳಿಗೆ ಮರಳಲು ಸಹಾಯ ಮಾಡುವ ರೀಟಾ ಎಂಬ ಹೊಲಸು-ಭಕ್ಷಿಸುವ ಚರಂಡಿ ಇಲಿಗಾಗಿ ಕೇಟ್‌ ವಿನ್ಸ್ಲೆಟ್‌ ದ್ವನಿದಾನ ಮಾಡಿದರು. ವಿಮರ್ಶಾತ್ಮಕ ಮತ್ತು ವಾಣಿಜ್ಯ ಕಮರ್ಷಿಯಲ್‌ ಯಶಸ್ಸನ್ನು ಕಂಡ ಈ ಚಲನಚಿತ್ರವು ಅಂತಾರಾಷ್ಟ್ರೀಯ ಗಲ್ಲಾಪೆಟ್ಟಿಗೆಯಲ್ಲಿ $177.665.672 ಹಣವನ್ನು ಗಳಿಸಿತು.                                     

2.3. ವೃತ್ತಿ 2007 - ಇಂದಿನವರೆಗೆ

2007ರಲ್ಲಿ, 2008ರಲ್ಲಿ ಬಿಡುಗಡೆಯಾದ ರೆವಲ್ಯುಷನರಿ ರೋಡ್‌ ಚಲನಚಿತ್ರದ ಚಿತ್ರೀಕರಣಕ್ಕಾಗಿ ಲಿಯೊನಾರ್ಡೊ ಡಿಕ್ಯಾಪ್ರಿಯೊರ ಜೊತೆಗೂಡಿದರು. ಈ ಚಲನಚಿತ್ರವನ್ನು ಅವರ ಪತಿ ಸ್ಯಾಮ್‌ ಮೆಂಡೆಸ್‌ ನಿರ್ದೇಶಿಸಿದರು. ರಿಚರ್ಡ್‌ ಯೇಟ್ಸ್‌ 1961ರಲ್ಲಿ ಬರೆದ ಇದೇ ಹೆಸರಿನ ಕೃತಿಯನ್ನಾಧರಿಸಿ ನಿರ್ಮಾಣವಾದ ಚಿತ್ರವಿದು. ಜಸ್ಟಿನ್‌ ಹೇಯ್ತ್‌ರ ಚಿತ್ರಕಥೆಯನ್ನು ಓದಿದ ಕೇಟ್‌ ವಿನ್ಸ್ಲೆಟ್‌,ಲಿಯೊನಾರ್ಡೊ ಮತ್ತು ಸ್ಯಾಮ್‌ ಮೆಂಡೆಸ್‌ ಇಬ್ಬರೂ ತಮ್ಮೊಂದಿಗೆ ಪಾಲ್ಗೊಳ್ಳುವಂತೆ ಸಲಹೆ ನೀಡಿದರು. ಇದು ಒಂದು ರೀತಿಯ "ಒಳ್ಳೆಯ ಅವಕಾಶ, ಜೊತೆಗೆ ಹೆಚ್ಚಿನ ಒತ್ತಡ", ಏಕೆಂದರೆ ಕೇಟ್‌ ವಿನ್ಸ್ಲೆಟ್‌ ತಮ್ಮ ಪತಿ ಸ್ಯಾಮ್‌ ಮೆಂಡೆಸ್‌ರೊಂದಿಗೆ ಕೆಲಸ ಮಾಡುತ್ರಿರುವುದು ಇದೇ ಮೊದಲ ಬಾರಿ. ಲಿಯೊನಾರ್ಡೊ ಡಿಕ್ಯಾಪ್ರಿಯೋ ಮತ್ತು ಕೇಟ್‌ ವಿನ್ಸ್ಲೆಟ್‌, 1950ರ ದಶಕದಲ್ಲಿ ವೈಫಲ್ಯ ಕಾಣುತ್ತಿರುವ ವಿವಾಹಿತ ಜೀವನದಲ್ಲಿದ್ದ ಜೋಡಿಯ ಪಾತ್ರ ನಿರ್ವಹಿಸಿದರು. ಈ ಚಲನಚಿತ್ರಕ್ಕಾಗಿ ಸಿದ್ಧತೆ ನಡೆಸಲು ಇವರಿಬ್ಬರೂ ನಗರದ ಹೊರವಲಯಗಳಲ್ಲಿನ ಜೀವನವನ್ನು ಪ್ರೋತ್ಸಾಹಿಸುವಂತಹ ವಿಡಿಯೋಗಳನ್ನು ವೀಕ್ಷಿಸಿದರು. ಈ ಚಲನಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು. ಈ ಚಲನಚಿತ್ರದಲ್ಲಿ ಅವರ ನಟನೆಗಾಗಿ ಕೇಟ್‌ ವಿನ್ಸ್ಲೆಟ್‌ ಏಳನೆಯ ನಾಮನಿರ್ದೇಶನವನ್ನು ಗಳಿಸಿ, ಅಂತಿಮವಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ‌ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡರು.

2008ರ ಶರತ್ಕಾಲದಲ್ಲಿ ಬಿಡುಗಡೆಯಾದ ಈ ಚಲನಚಿತ್ರವು, ಕೇಟ್‌ ವಿನ್ಸ್ಲೆಟ್‌ರ ಇನ್ನೊಂದು ಚಲನಚಿತ್ರ ದಿ ರೀಡರ್‌ ನ ವಿರುದ್ಧ ಪೈಪೋಟಿಯಲ್ಲಿತ್ತು, ಇದು 1995ರಲ್ಲಿ ಬರ್ನಾರ್ಡ್‌ ಷ್ಲಿಂಕ್‌ಬರೆದ ಇದೇ ಹೆಸರಿನ ಕಾದಂಬರಿಯ ಚಲನಚಿತ್ರ ರೂಪಾಂತರವಾಗಿದೆ. ಸ್ಟೀಫನ್‌ ಡ್ಯಾಲ್ಡ್ರಿ ಅವರ ನಿರ್ದೇಶನದಡಿ, ಕೇಟ್‌ ವಿನ್ಸ್ಲೆಟ್‌ರೊಂದಿಗೆ ರಾಲ್ಫ್‌ ಫಿಯೆನ್ಸ್‌ ಮತ್ತು ಡೇವಿಡ್‌ ಕ್ರಾಸ್‌ ಪೋಷಕ ನಟರ ಪಾತ್ರಗಳಲ್ಲಿ ಕಾಣಿಸಿಕೊಂಡರು. ಈ ಪಾತ್ರಕ್ಕಾಗಿ ಕೇಟ್‌ ವಿನ್ಸ್ಲೆಟ್‌ ಮೊದಲ ಆಯ್ಕೆಯಾಗಿದ್ದರೂ, ರೆವಲ್ಯೂಷನರಿ ರೋಡ್‌ ಚಿತ್ರೀಕರಣದ ವೇಳಾಪಟ್ಟಿಯೊಂದಿಗೆ ಘರ್ಷಣೆಯಾಗುತ್ತಿದ್ದ ಕಾರಣ, ಆರಂಭದಲ್ಲಿ ಅವರಿಗೆ ಈ ಪಾತ್ರವನ್ನು ನಿರ್ವಹಿಸುವುದು ಅಸಾಧ್ಯವಾಗಿತ್ತು. ಹಾಗಾಗಿ, ದಿ ರೀಡರ್‌ನಲ್ಲಿ ಕೇಟ್‌ ವಿನ್ಸ್ಲೆಟ್‌ ಸ್ಥಾನದಲ್ಲಿ ನಿಕೋಲ್‌ ಕಿಡ್ಮನ್‌ರನ್ನು ಸೇರಿಸಿಕೊಳ್ಳಲಾಯಿತು. ಚಿತ್ರೀಕರಣ ಆರಂಭವಾಗಿ ಒಂದು ತಿಂಗಳಲ್ಲೇ, ನಿಕೋಲ್‌ ಕಿಡ್ಮನ್‌ ಗರ್ಭಿಣಿಯಾದ ಕಾರಣ ಈ ಪಾತ್ರದಿಂದ ಅವರು ಹಿಂದೆ ಸರಿದರು. ಕೇಟ್‌ ವಿನ್ಸ್ಲೆಟ್‌ ಈ ಚಲನಚಿತ್ರಕ್ಕೆ ಮತ್ತೆ ಸೇರ್ಪಡೆಯಾದರು. ಜರ್ಮನ್‌ ಉಚ್ಚಾರಣಾ ಶೈಲಿಯನ್ನು ಸೋಗುಹಾಕುವಂತೆ ನಟಿಸಿ, ಒಬ್ಬ ಯುವಕನೊಂದಿಗೆ ಪ್ರಣಯ ಪ್ರಸಂಗದಲ್ಲಿ ಸಿಲುಕಿದ ಮಾಜಿ ನಾಜಿ ಸೆರೆಶಿಬಿರದ ಪಹರೆಯಗಾರ್ತಿಯ ಪಾತ್ರವನ್ನು ಕೇಟ್ ನಿರ್ವಿಹಿಸಿದರು. ಚಿತ್ರದಲ್ಲಿ ಯವಕನು ಬಳಿಕ ಪಹರೆಯಗಾರ್ತಿಯ ಯುದ್ಧಾಪರಾಧ ವಿಚಾರಣೆಯಲ್ಲಿ ಸಾಕ್ಷಿಯಾಗುತ್ತಾನೆ. ತಮ್ಮ ಪಾತ್ರವಾದ "SS ಪಹರೆಯಗಾರ್ತಿಯೊಂದಿಗೆ ಸಹಾನುಭೂತಿ ವ್ಯಕ್ತಪಡಿಸಲು" ಕಷ್ಟವಾದ್ದರಿಂದ ಈ ಪಾತ್ರವನ್ನ ನಿರ್ವಹಿಸುವುದು ದುಸ್ತರವಾಯಿತೆಂದು ಕೇಟ್‌ ವಿನ್ಸ್ಲೆಟ್‌ ಹೇಳಿದ್ದಾರೆ. ದಿ ರೀಡರ್‌ ಒಟ್ಟಾರೆ ಮಿಶ್ರ ವಿಮರ್ಶೆಗಳನ್ನು ಪಡೆದರೆ, ಕೇಟ್‌ ವಿನ್ಸ್ಲೆಟ್‌ ತಮ್ಮ ನಟನೆಗಾಗಿ ಅತಿ ಪ್ರಶಂಸೆ ಗಳಿಸಿದರು. ನಂತರದ ವರ್ಷ, ಅವರು ತಮ್ಮ ಆರನೆಯ ಅಕಾಡೆಮಿ ಪ್ರಶಸ್ತಿಗೆ‌ ನಾಮನಿರ್ದೇಶನವನ್ನು ಗಳಿಸಿ, ಅಂತಿಮವಾಗಿ ಅತ್ಯುತ್ತಮ ನಟಿ ಪ್ರಶಸ್ತಿ, ಅತ್ಯುತ್ತಮ ನಟನೆಗಾಗಿ BAFTA ಪ್ರಶಸ್ತಿ‌, ಅತ್ಯುತ್ತಮ ಪೋಷಕ ನಟಿಗಾಗಿ ಸ್ಕ್ರೀನ್ ಆಕ್ಟರ್ಸ್‌ ಗಿಲ್ಟ್‌ ಪ್ರಶಸ್ತಿ ಮತ್ತು ಅತ್ಯುತ್ತಮ ಪೋಷಕ ನಟಿಗಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ‌ ಗಳನ್ನು ಪಡೆದರು.

                                     

3. ಸಂಗೀತ

ಒಬ್ಬ ಗಾಯಕಿಯಾಗಿ ಕೇಟ್‌ ವಿನ್ಸ್ಲೆಟ್‌ ಅಲ್ಪಕಾಲಿಕ ಯಶಸ್ಸನ್ನು ಕಂಡಿದ್ದಾರೆ. ಕ್ರಿಸ್ಮಸ್‌ ಕ್ಯಾರಲ್‌: ದಿ ಮೂವೀ ಚಲನಚಿತ್ರದಲ್ಲಿ ಅವರು ಒಂಟಿಯಾಗಿ ಹಾಡಿದ ವಾಟ್‌ ಇಫ್‌ ಎಂಬ ಹಾಡು ಐರ್ಲೆಂಡ್‌ನಲ್ಲಿ #1 ಸ್ಥಾನ ಮತ್ತು UKದಲ್ಲಿ #6 ಸ್ಥಾನವನ್ನು ಗಳಿಸಿ, 2002ರಲ್ಲಿ OGAE ಸಾಂಗ್‌ ಕಾಂಟೆಸ್ಟ್‌ ಪ್ರಶಸ್ತಿ ಗಳಿಸಿತು. ಈ ಹಾಡಿನ ಮ್ಯುಸಿಕ್‌ ವಿಡಿಯೋಗಾಗಿ ಚಿತ್ರೀಕರಣದಲ್ಲೂ ಪಾಲ್ಗೊಂಡರು. ಸ್ಯಾಂಡ್ರಾ ಬಾಯ್ನ್‌ಟನ್‌ ಸಿಡಿ ಡಾಗ್‌ ಟ್ರೇನ್‌ ಗಾಗಿ "ವೇರ್ಡ್‌ ಆಲ್‌" ಯಾಂಕೊವಿಕ್‌ರೊಂದಿಗೆ ಯುಗಳ ಗೀತೆಯನ್ನುಹಾಡಿದರು. ಇದಲ್ಲದೆ, 2006ರಲ್ಲಿ ತೆರೆಕಂಡ ರೊಮೆನ್ಸ್‌ ಅಂಡ್‌ ಸಿಗರೆಟ್ಸ್‌ ಚಲನಚಿತ್ರದಲ್ಲಿಯೂ ಹಾಡಿದರು. ಅವರ ಚಲನಚಿತ್ರ ಹೆವೆನ್ಲಿ ಕ್ರಿಯೇಚರ್ಸ್‌ ನಲ್ಲಿ ಲಾ ಬೊಹೆಮಿ ಯಿಂದ ಸೊನೊ ಅಂಡಾಟಿ ಎಂಬ ನೀಳಗೀತೆಯನ್ನು ಹಾಡಿದರು. ಈ ಹಾಡು ಚಲನಚಿತ್ರದ ಧ್ವನಿಪಥದಲ್ಲಿ ಲಭ್ಯವಿದೆ. ಮೌಲಿನ್‌ ರೌಜ್‌! ಚಲನಚಿತ್ರದ ನಾಯಕಿಯ ಪಾತ್ರಕ್ಕಾಗಿ ಕೇಟ್‌ ವಿನ್ಸ್ಲೆಟ್‌ರನ್ನು ಪರಿಗಣಿಸಲಾಗಿತ್ತು. ಇದು ಅಂತಿಮವಾಗಿ ನಿಕೋಲ್‌ ಕಿಡ್ಮನ್‌ ಪಾಲಾಯಿತು. ಒಂದು ವೇಳೆ ಕೇಟ್‌ ವಿನ್ಸ್ಲೆಟ್‌ ಈ ಚಲನಚಿತ್ರದಲ್ಲಿ ನಟಿಸಿದ್ದಲ್ಲಿ, ಪೂರ್ಣ ಧ್ವನಿಪಥವನ್ನು ಹಾಡಿರುತ್ತಿದ್ದರು.

                                     

4. ವೈಯಕ್ತಿಕ ಜೀವನ

ಡಾರ್ಕ್‌ ಸೀಸನ್‌ ಚಿತ್ರೀಕರಿಸುವ ಸಮಯದಲ್ಲಿ ಕೇಟ್‌ ವಿನ್ಸ್ಲೆಟ್‌ ಮತ್ತು ನಟ-ಲೇಖಕ ಸ್ಟೀಫೆನ್‌ ಟ್ರೆಡ್ರ್‌ ನಡುವೆ ಪ್ರೇಮಾಂಕುರವಾಗಿ ಐದು ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಟೈಟಾನಿಕ್‌ ಚಿತ್ರೀಕರಣವು ಸಂಪೂರ್ಣಗೊಂಡ ನಂತರ ಸ್ಟೀಫೆನ್‌ ಮೂಳೆಯ ಕ್ಯಾನ್ಸರ್‌ಗೆ ತುತ್ತಾಗಿ ಸಾವನ್ನಪ್ಪಿದರು. ಹಾಗಾಗಿ, ಲಂಡನ್‌ನಲ್ಲಿ ಅವರ ಅಂತ್ಯಸಂಸ್ಕಾರಕ್ಕೆ ಹಾಜರಾಗಿದ್ದ ಕಾರಣ ಟೈಟಾನಿಕ್‌ ಚಲನಚಿತ್ರದ ಪ್ರಥಮ ಪ್ರದರ್ಶನಕ್ಕೆ ಕೇಟ್‌ ವಿನ್ಸ್ಲೆಟ್‌ ಗೈರುಹಾಜರಾಗಿದ್ದರು. ಚಿತ್ರೀಕರಣದ ಸಮಯದಿಂದಲೂ ಕೇಟ್‌ ಮತ್ತು ಅವರ ಟೈಟಾನಿಕ್‌ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೋ ನಿಕಟ ಸ್ನೇಹಿತರಾಗುಳಿದಿದ್ದಾರೆ.

ಆ ನಂತರ ಕೇಟ್‌ ವಿನ್ಸ್ಲೆಟ್‌ ರಫಸ್‌ ಸೆವೆಲ್‌ರೊಂದಿಗೆ ಸಂಬಂಧ ಬೆಳಿಸಿಕೊಂಡಿದ್ದರು. ಆದರೆ, 1998ರ ನವೆಂಬರ್‌ 22ರಂದು ನಿರ್ದೇಶಕ ಜಿಮ್‌ ಥ್ರೆಪಲ್ಟನ್‌ರವರನ್ನು ವಿವಾಹವಾದರು. ಈ ಜೋಡಿಗೆ 2000ದ ಅಕ್ಟೋಬರ್‌ 12ರಂದು ಲಂಡನ್‌ನಲ್ಲಿ ಮಿಯಾ ಹನಿ ಎಂಬ ಪುತ್ರಿ ಜನಿಸಿದಳು. 2001ರಲ್ಲಿ ವಿಚ್ಚೇದನಾ ನಂತರ, ತಮ್ಮ ಹುಟ್ಟೂರು ರೀಡಿಂಗ್‌ನವರೇ ಆದ ನಿರ್ದೇಶಕ ಸ್ಯಾಮ್‌ ಮೆಂಡೆಸ್‌ರೊಂದಿಗೆ ಸಂಬಂಧ ಬೆಳೆಸಿಕೊಂಡು, 2003ರ ಮೇ 24ರಂದು ಕೆರಿಬಿಯನ್‌ನ ಅಂಗ್ವಿಲಾದಲ್ಲಿ ವಿವಾಹವಾದರು. ಈ ಜೋಡಿಗೆ ನ್ಯೂಯಾರ್ಕ್‌ ನಗರದಲ್ಲಿ 2003ರ ಡಿಸೆಂಬರ್‌ 22ರಂದು ಜೋ ಆಲ್ಫೀ ವಿನ್ಸ್ಲೆಟ್‌-ಮೆಂಡೆಸ್‌ ಎಂಬ ಪುತ್ರನ ಜನನವಾಯಿತು.

ದೀರ್ಘಕಾಲದಿಂದಲೂ ನೆನೆಗುದಿಗೆ ಬಿದ್ದಿದ್ದ ಸರ್ಕಸ್‌ ಹುಲಿ ತರಬೇತುದಾರ ಮಾಬೆಲ್‌ ಸ್ಟಾರ್ಕ್‌ರ ಜೀವನಚರಿತ್ರೆಯ ಚಲನಚಿತ್ರ ಹಕ್ಕುಗಳನ್ನು ಸ್ಯಾಮ್‌ ಮೆಂಡೆಸ್‌ ಮತ್ತು ನೀಲ್‌ ಸ್ಟ್ರೀಟ್‌ ಪ್ರೊಡಕ್ಷನ್ಸ್‌ ಎಂಬ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ ಖರೀದಿಸಿತು. ಜೋಡಿಯ ವಕ್ತಾರರು ಹೇಳಿದ್ದು ಹೀಗೆ: "ಇದು ಒಂದು ಮಹತ್ವದ ಕಥೆ. ಇವರಿಗೆ ಇದರ ಬಗ್ಗೆ ಬಹಳ ಕಾಲದಿಂದಲೂ ಆಸಕ್ತಿಯಿತ್ತು. ಅವರು ಚಿತ್ರಕಥೆಯನ್ನು ಸರಿಯಾಗಿ ಸಿದ್ಧಪಡಿಸಿಕೊಂಡಲ್ಲಿ, ಅದು ಒಂದು ಒಳ್ಳೆಯ ಚಲನಚಿತ್ರವಾಗಬಲ್ಲದು."

ಹಲವು ವರ್ಷಗಳಿಂದ ಮಾಧ್ಯಮಗಳು ಕೇಟ್‌ ವಿನ್ಸ್ಲೆಟ್‌ರ ತೂಕದ ಏರುಪೇರುಗಳನ್ನು ಗಮನಿಸುತ್ತಿದ್ದವು. ಈ ನಡುವೆ ಕೇಟ್‌ ವಿನ್ಸ್ಲೆಟ್‌ ಅವರು, ತಮ್ಮ ತೂಕದ ವಿಚಾರದಲ್ಲಿ ಹಾಲಿವುಡ್ ಯಾವುದೇ ಸಲಹೆ ಕೊಡುವ ಅಗತ್ಯವಿಲ್ಲ ಎಂದು ಮುಚ್ಚುಮರೆಯಿಲ್ಲದೇ ಹೇಳಿದರು. 2003ರ ಫೆಬ್ರುವರಿ ತಿಂಗಳಲ್ಲಿ, ಜೆಂಟ್ಲ್‌ಮೆನ್ಸ್‌ ಕ್ವಾರ್ಟರ್ಲಿ ಪತ್ರಿಕೆಯ ಬ್ರಿಟಿಷ್ ಆವೃತ್ತಿಯು, ಕೇಟ್ ವಿನ್ಸ್ಲೆಟ್‌ ಸಹಜಕ್ಕಿಂತಲೂ ತೆಳ್ಳಗಾಗಿ ಕಾಣುವಂತೆ ಡಿಜಿಟಲ್‌ ರೀತ್ಯಾ ವರ್ಧಿಸಲಾದ ಚಿತ್ರಗಳನ್ನು ಪ್ರಕಟಿಸಿತ್ತು. ತಮ್ಮ ಅನುಮತಿಯಿಲ್ಲದೆ ಚಿತ್ರಗಳಿಗೆ ಈ ಮಾರ್ಪಾಡುಗಳನ್ನು ಮಾಡಲಾಯಿತು ಎಂದು ಕೇಟ್‌ ವಿನ್ಸ್ಲೆಟ್‌ ಹೇಳಿಕೆ ನೀಡಿದರು. ತಮ್ಮ ಮುಂದಿನ ಸಂಚಿಕೆಯಲ್ಲಿ GQ ಕ್ಷಮೆಯಾಚನೆಯನ್ನು ಪ್ರಕಟಿಸಿತು.

ಕೇಟ್‌ ವಿನ್ಸ್ಲೆಟ್‌ ಮತ್ತು ಅವರ ಪತಿ ಸ್ಯಾಮ್‌ ಮೆಂಡೆಸ್‌ ಸದ್ಯಕ್ಕೆ ನ್ಯೂಯಾರ್ಕ ನಗರದಲ್ಲಿನ ಗ್ರೀನ್ವಿಚ್‌ ವಿಲೇಜ್‌ನಲ್ಲಿ ವಾಸಿಸುತ್ತಿದ್ದಾರೆ. ಇಂಗ್ಲೆಂಡ್‌ನ ಗ್ಲೌಸೆಸ್ಟರ್ಷೈರ್ ಕೌಂಟಿಯಲ್ಲಿರುವ ಚರ್ಚ್‌ ವೆಸ್ಟ್‌ಕೋಟ್‌ನಲ್ಲಿ ಒಂದು ಮ್ಯಾನರ್ ಮನೆಯನ್ನೂ ಸಹ ಹೊಂದಿದ್ದಾರೆ. 22 ಎಕರೆ ಜಮೀನಿನಲ್ಲಿ ನಿರ್ಮಿಸಲಾದ, ಗ್ರೇಡ್‌ II ಪಟ್ಟಿಯಲ್ಲಿರುವ ವೆಸ್ಟ್‌ಕೋಟ್‌ ಮ್ಯಾನರ್‌ ಎಂಬ ಈ ಮನೆ ಎಂಟು ವಿಶ್ರಾಂತಿ ಕೋಣೆಗಳನ್ನು ಹೊಂದಿದೆ, ಏಕಾಂತ ಪ್ರದೇಶದಲ್ಲಿರುವ ಈ ಮನೆಯನ್ನು ನಿರ್ಮಿಸಲು £3 ದಶಲಕ್ಷ ಹಣ ಖರ್ಚು ಮಾಡಲಾಗಿದೆ. ಒಳಾಂಗಣ ನವೀಕರಣ ಮತ್ತು ಮೂಲತಃ ನೀರಿನ ತೋಟ, ಉಪ್ಪುನೇರಳೆ ಮಲ್ಬೆರಿ ತೋಟ ಮತ್ತು ಹಣ್ಣುತೋಟದ ಪುನಃಸ್ಥಾಪನೆಗಾಗಿ ಕೇಟ್ ದಂಪತಿಗಳು £1 ದಶಲಕ್ಷಕ್ಕಿಂತಲೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆಂದು ವರದಿಯಾಗಿದೆ. ಮುಂಚಿನ ಮಾಲೀಕ, ಕುದುರೆ ಸವಾರಿ ಇಕ್ವೆಸ್ಟ್ರಿಯನ್‌ ಪಟು ರಾವುಲ್‌ ಮಿಲೈಸ್‌ 1999ರಲ್ಲಿ ನಿಧನರಾದಾಗ ಈ ತೋಟಗಳು ಪಾಳುಬಿದ್ದವು.

ಈ ಜೋಡಿ ಒಟ್ಟಿಗೆ ಇದ್ದ ಸಂದರ್ಭಗಳಲ್ಲಿ ಕೆಲವು ಅಹಿತಕರ ವಿಮಾನ ಘಟನೆಗಳು ಸಂಭವಿಸಿದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆಯಾಗಿ ತಮ್ಮ ಮಕ್ಕಳು ತಬ್ಬಲಿಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಟ್ ವಿನ್ಸ್ಲೆಟ್‌ ಮತ್ತು ಸ್ಯಾಮ್‌ ಮೆಂಡೆಸ್‌ ಎಂದಿಗೂ ಒಂದೇ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ. ಈ ಮುನ್ನೆಚ್ಚರಿಕೆ ಕ್ರಮಗಳಿಗೆ ಕಾಕತಾಳೀಯವೆಂಬಂತೆ, 2001ರ ಸೆಪ್ಟೆಂಬರ್‌ 11ರಂದು ಅಪಹರಣಕ್ಕೀಡಾಗಿ ಪೆಂಟಗನ್‌ ಕಟ್ಟಡಕ್ಕೆ ಅಪ್ಪಳಿಸಿದ ಅಮೆರಿಕನ್‌ ಏರ್ಲೈನ್ಸ್‌ 77ರಲ್ಲಿ ಸ್ಯಾಮ್‌ ಮೆಂಡೆಸ್‌ ಪ್ರಯಾಣಿಸಲಿದ್ದರು. ಅಂತೆಯೇ, ಅಕ್ಟೋಬರ್‌ 2001ರಲ್ಲಿ ಕೇಟ್‌ ವಿನ್ಸ್ಲೆಟ್‌ ತಮ್ಮ ಮಗಳು ಮಿಯಾಳೊಂದಿಗೆ ವಿಮಾನದಲ್ಲಿ ಲಂಡನ್‌ನಿಂದ ಡಲ್ಲಾಸ್‌ಗೆ ಪ್ರಯಾಣಿಸುತ್ತಿರುವಾಗ ಪ್ರಯಾಣಿಕನೊಬ್ಬ ಎದ್ದು ನಿಂತು, ತಾನು ಇಸ್ಲಾಮಿಕ್‌ ಆತಂಕವಾದಿಯೆಂದು ಹೇಳಿಕೊಂಡು "ನಾವೆಲ್ಲರೂ ಮಡಿಯುತ್ತೇವೆ" ಎಂದು ಕಿರುಚಿದ್ದ. ಆ ನಂತರ ಆತನನ್ನು ಬಂಧಿಸಿ, ಕಿಡಿಗೇಡಿತನದ ಆರೋಪವನ್ನು ಹೊರಿಸಲಾಗಿತ್ತು.                                     

5. ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ದಿ ರೀಡರ್‌ ಚಲನಚಿತ್ರದಲ್ಲಿನ ನಟನೆಗಾಗಿ ಕೇಟ್‌ ವಿನ್ಸ್ಲೆಟ್‌ ಅವರು ಅತ್ಯುತ್ತಮ ನಟಿಗಾಗಿನ ಅಕಾಡೆಮಿ ಪ್ರಶಸ್ತಿ‌ ; ಮತ್ತು ಎರಡು ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳನ್ನು ಪಡೆದರು, ಇದರಲ್ಲಿ ಒಂದು ರೆವಲ್ಯೂಷನರಿ ರೋಡ್‌ ಚಲನಚಿತ್ರದಲ್ಲಿ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಟಕ-ಕಥೆ ಸಂದಿದೆ ಮತ್ತು ದಿ ರೀಡರ್‌ ಚಲನಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟಿ) ಪ್ರಶಸ್ತಿ ಕೂಡ ಅವರ ಮುಡಿಗೇರಿತು. ಅವರು ಎರಡು BAFTA ಪ್ರಶಸ್ತಿ‌ಗಳನ್ನು ಗಳಿಸಿದ್ದಾರೆ: ದಿ ರೀಡರ್‌ ಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಸೆನ್ಸ್‌ ಅಂಡ್‌ ಸೆನ್ಸಿಬಿಲಿಟಿ ಗಾಗಿ ಅತ್ಯುತ್ತಮ ಪೋಷಕ ನಟಿ 1995. ಕೇಟ್‌ ವಿನ್ಸ್ಲೆಟ್‌ ಇದುವರೆಗೂ ಒಟ್ಟು ಇಪ್ಪತ್ತು ನಾಮನಿರ್ದೇಶನಗಳನ್ನು ಗಳಿಸಿದ್ದಾರೆ - ಅಕಾಡೆಮಿ ಪ್ರಶಸ್ತಿ‌ ಆರು; ಗೋಲ್ಡನ್‌ ಗ್ಲೋಬ್‌ ಏಳು ಮತ್ತು BAFTA ಏಳು.

ಐರಿಸ್‌ 2001 ಚಲನಚಿತ್ರದಲ್ಲಿನ ಅತ್ಯುತ್ತಮ ನಟಿಗಾಗಿ ಲಾಸ್‌ ಏಂಜೆಲಿಸ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ LAFCA ಪ್ರಶಸ್ತಿ‌; ಹಾಗೂ ಸೆನ್ಸ್ ಅಂಡ್‌ ಸೆನ್ಸಿಬಿಲಿಟಿ 1995 ಮತ್ತು ದಿ ರೀಡರ್‌ 2008 ಚಲನಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌ ಸೇರಿದಂತೆ ಇತರೆ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೋಲಿ ಸ್ಮೋಕ್‌! 1999 ಚಲನಚಿತ್ರದಲ್ಲಿನ ನಟನೆಗಾಗಿ ಕೇಟ್‌ ವಿನ್ಸ್ಲೆಟ್‌ ನ್ಯೂ ಯಾರ್ಕ್‌ ಫಿಲ್ಮ್‌ ಕ್ರಿಟಿಕ್ಸ್‌ ಸರ್ಕಲ್ NYFCC ಮತ್ತು ನ್ಯಾಷನಲ್‌ ಸೊಸೈಟಿ ಆಫ್‌ ಫಿಲ್ಮ್‌ ಕ್ರಿಟಿಕ್ಸ್‌ ಸರ್ಕಲ್‌ NSFC - ಎರಡರಲ್ಲೂ ಅತ್ಯುತ್ತಮ ನಟಿ ರನರ್ಸ್‌-ಅಪ್‌ ಎಂದು ಘೋಷಿತರಾದರು. 2004ರಲ್ಲಿ ಬಿಡುಗಡೆಯಾದ ಎಟರ್ನಲ್‌ ಸನ್‌ಷೈನ್‌ ಆಫ್‌ ದಿ ಸ್ಪಾಟ್‌ಲೆಸ್‌ ಮೈಂಡ್‌ ಚಲನಚಿತ್ರದಲ್ಲಿನ ನಟನೆಗಾಗಿ ಕೇಟ್‌ ವಿನ್ಸ್ಲೆಟ್‌ NYFCCಯ ದ್ವಿತೀಯ ಅತ್ಯುತ್ತಮ ನಟಿ ಎಂದು ಘೋಷಿತರಾದರು. ಎಟರ್ನಲ್‌ ಸನ್‌ಷೈನ್‌ ಆಫ್‌ ದಿ ಸ್ಪಾಟ್‌ಲೆಸ್‌ ಮೈಂಡ್‌ ಚಲನಚಿತ್ರದಲ್ಲಿ, ಕೇಟ್‌ ವಿನ್ಸ್ಲೆಟ್‌ ಅವರ ಕ್ಲೆಮೆಂಟೀನ್‌ ಕ್ರುಕ್ಜಿನ್ಸ್ಕಿ ಪಾತ್ರ ನಿರ್ವಹಣೆಯು 81ನೆಯ ಅತ್ಯುತ್ತಮ ಚಲನಚಿತ್ರ ಅಭಿನಯವೆಂದು ಪ್ರೀಮಿಯರ್‌ ಪತ್ರಿಕೆ ಬಣ್ಣಿಸಿದೆ.

                                     

5.1. ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ಅಕಾಡೆಮಿ ಪ್ರಶಸ್ತಿ‌ ನಾಮನಿರ್ದೇಶನ ಮೈಲಿಗಲ್ಲುಗಳು

ದಿ ರೀಡರ್‌ ಚಲನಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ನಾಮನಿರ್ದೇಶನದೊಂದಿಗೆ, ಕೇಟ್‌ ವಿನ್ಸ್ಲೆಟ್‌ ಆರು ಆಸ್ಕರ್‌ ನಾಮನಿರ್ದೇಶನಗಳನ್ನು ಪಡೆದ ಅತ್ಯಂತ ಕಿರಿಯ ನಟಿಯೆನಿಸಿಕೊಂಡರು. ಇದಕ್ಕೂ ಮುನ್ನ, ಬೆಟ್‌ ಡೇವಿಸ್‌ ತಮ್ಮ 34ನೆಯ ವಯಸ್ಸಿನಲ್ಲಿ, ನೌ, ವೊಯೆಜರ್‌ 1942 ಚಲನಚಿತ್ರದಲ್ಲಿನ ನಟನೆಗಾಗಿ ನಾಮನಿರ್ದೇಶನವನ್ನು ಪಡೆದಿದ್ದರು. ಕೇಟ್‌ ವಿನ್ಸ್ಲೆಟ್‌ ತಮ್ಮ 33ನೆಯ ವಯಸ್ಸಿನಲ್ಲಿ ನಾಮನಿರ್ದೇಶನಗಳನ್ನು ಪಡೆದು ಬೆಟ್‌ ಡೇವಿಸ್‌ರ ದಾಖಲೆಯನ್ನು ಮೀರಿಸಿದರು. ಇದಕ್ಕೂ ಮುನ್ನ, ಕೇಟ್‌ ವಿನ್ಸ್ಲೆಟ್‌ ಟೈಟಾನಿಕ್‌ 1997 ಚಲನಚಿತ್ರದಲ್ಲಿನ ನಟನೆಗಾಗಿ ಎರಡು ನಾಮನಿರ್ದೇಶನಗಳನ್ನು ಪಡೆದ ಅತಿ ಕಿರಿಯ ನಟಿಯೆನಿಸಿಕೊಂಡಿದ್ದರು. ಇದಲ್ಲದೆ, ಎಟರ್ನಲ್‌ ಸನ್‌ಷೈನ್‌ ಆಫ್‌ ದಿ ಸ್ಪಾಟ್‌ಲೆಸ್‌ ಮೈಂಡ್‌ ಮತ್ತು ಲಿಟ್ಲ್‌ ಚಿಲ್ಡ್ರೆನ್‌ 2008 ಗಾಗಿ ಕ್ರಮವಾಗಿ ನಾಲ್ಕು ಮತ್ತು ಐದು ನಾಮನಿರ್ದೇಶನಗಳನ್ನು ಪಡೆದು ಪುರುಷ/ಮಹಿಳೆಯರಲ್ಲಿ ಈ ಸಾಧನೆ ಮಾಡಿಜ ಅತ್ಯಂತ ಕಿರಿಯ ತಾರೆಯೆನಿಸಿಕೊಂಡರು. ಐರಿಸ್‌ ಚಲನಚಿತ್ರಕ್ಕಾಗಿ ನಾಮನಿರ್ದೇಶನ ಗಳಿಸುವಾಗ ಕೇಟ್‌ ವಿನ್ಸ್ಲೆಟ್‌ರಿಗೆ 26 ವರ್ಷ ವಯಸ್ಸಾಗಿದ್ದ ಕಾರಣ, ದಾಖಲೆ ಸ್ವಲ್ಪದರಲ್ಲಿಯೇ ತಪ್ಪಿ ಹೋಯಿತು. ಏಕೆಂದರೆ, ನಟಲೀ ವುಡ್‌ ಅವರು ತಮ್ಮ 25ನೆಯ ವಯಸ್ಸಿನಲ್ಲೇ ಮೂರನೆಯ ನಾಮನಿರ್ದೇಶನವನ್ನು ಗಳಿಸಿ ದಾಖಲೆಯನ್ನು ನಿರ್ಮಿಸಿದ್ದರು.

ಒಂದೇ ಚಲನಚಿತ್ರದಲ್ಲಿ ಇನ್ನೊಬ್ಬ ನಾಮನಿರ್ದೇಶಿತರ ಕಿರಿಯ ಆವೃತ್ತಿಯನ್ನು ನಿರ್ವಹಿಸಿದ್ದಕ್ಕಾಗಿ ಎರಡು ಅಕಾಡೆಮಿ ಪ್ರಶಸ್ತಿ‌ ನಾಮನಿರ್ದೇಶನಗಳನ್ನು ಗಳಿಸಿದರು. ಒಂದೇ ಚಿತ್ರದ ಒಂದೇ ಪಾತ್ರವನ್ನು ಇಬ್ಬರು ನಟಿಯರು ನಿರ್ವಹಿಸಿ, ಇಬ್ಬರಿಗೂ ಆಸ್ಕರ್‌ ನಾಮನಿರ್ದೇಶನ ಲಭಿಸಿರುವುದು ಎರಡೇ ಬಾರಿ. ಟೈಟಾನಿಕ್‌ ನಲ್ಲಿ ಗ್ಲೊರಿಯಾ ಸ್ಟುವಾರ್ಟ್‌ ಮತ್ತು ಐರಿಸ್‌ ನಲ್ಲಿ ಜೂಡಿ ಡೆಂಚ್‌ ನಿರ್ವಹಿಸಿದ ಪಾತ್ರಗಳ ಕಿರಿಯ ಆವೃತ್ತಿಗಳನ್ನು ಕೇಟ್‌ ವಿನ್ಸ್ಲೆಟ್‌ ನಿರ್ವಹಿಸಿದರು.

ರೆವೊಲ್ಯೂಷನರಿ ರೋಡ್‌ ನಲ್ಲಿನ ತಮ್ಮ ನಟನೆಗಾಗಿ ನಾಮನಿರ್ದೇಶಿತರಾಗದೆ ಇದ್ದಾಗ, ಕೆಟ್‌ ವಿನ್ಸ್ಲೆಟ್‌ ಇದೇ ಪಾತ್ರಕ್ಕೆ ಆಸ್ಕರ್‌ ನಾಮನಿರ್ದೇಶನವನ್ನೂ ಪಡೆಯದೆ ಗೋಲ್ಡನ್‌ ಗ್ಲೋಬ್‌ ಅತ್ಯುತ್ತಮ ನಟಿ ನಾಟಕ ಪ್ರಶಸ್ತಿಯನ್ನು ಗಳಿಸಿದ ಕೇವಲ ಎರಡನೆಯ ನಟಿಯೆನಿಸಿಕೊಂಡರು. ಇದಕ್ಕೂ ಮುಂಚೆ ಮ್ಯಾಡಮ್‌ ಸೌಸಸ್ಕಾ 1988 ಚಲನಚಿತ್ರಕ್ಕಾಗಿ ಜೋಡೀ ಫೊಸ್ಟರ್‌ ಮತ್ತು ಸಿಗರ್ನಿ ವೀವರ್‌ ಅವರೊಂದಿಗೆ ಮೂರು ಜನರ ಸ್ಪರ್ಧೆಯಲ್ಲಿದ್ದ ಷರ್ಲಿ ಮೆಕ್ಲೇನ್‌ ಅಂತಿಮವಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಗಳಿಸಿದರು) ಅಕಾಡೆಮಿ ನಿಯಮಗಳ ಪ್ರಕಾರ ಒಬ್ಬ ನಟ ಒಂದೇ ವರ್ಗದಲ್ಲಿ ಒಂದಕ್ಕಿಂತಲೂ ಹೆಚ್ಚು ನಾಮನಿರ್ದೇಶನಗಳನ್ನು ಪಡೆಯುವಂತಿಲ್ಲ, ಏಕೆಂದರೆ, ದಿ ರೀಡರ್‌ ನಲ್ಲಿ ನಟನೆಗಾಗಿ ಕೇಟ್‌ ವಿನ್ಸ್ಲೆಟ್‌ರನ್ನು ನಾಯಕಿ ನಟಿಯೆಂದು ಪರಿಗಣಿಸಲಾಗಿದ್ದರೆ, ಗೋಲ್ಡನ್‌ ಗ್ಲೋಬ್‌ ಈ ನಟನೆಯನ್ನು ಪೋಷಕ ನಟನೆಯೆಂದು ಪರಿಗಣಿಸಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಚಿತ್ರಗಳಿಗೆ ಅವರನ್ನು ನಾಮನಿರ್ದೇಶಿತಗೊಳಿಸಲಾಗದು ಎಂಬುದು ಆಕಾಡೆಮಿಯ ನಾಮನಿರ್ದೇಶನ ಪ್ರಕ್ರಿಯೆಯ ವಾದವಾಗಿತ್ತು.

                                     

5.2. ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ಚಲನಚಿತ್ರೇತರ ಕಾರ್ಯಗಳಿಗಾಗಿ ಪ್ರಶಸ್ತಿಗಳು

2000ರಲ್ಲಿ, ಲಿಸೆನ್‌ ಟು ದಿ ಸ್ಟೊರಿಟೆಲರ್‌ ಎಂಬ ಕೃತಿಗಾಗಿ ಕೇಟ್‌ ವಿನ್ಸ್ಲೆಟ್‌ರಿಗೆ ಅತ್ಯುತ್ತಮ ಸ್ಪೊಕೆನ್‌ ವರ್ಡ್ ಅಲ್ಬಮ್‌ ಫಾರ್‌ ಚಿಲ್ಡ್ರೆನ್‌ ಗ್ರ್ಯಾಮಿ ಪ್ರಶಸ್ತಿ ಸಂದಿತು. ಎಕ್ಸ್ಟ್ರಾಸ್‌ ಸರಣಿಯ ಕಂತೊಂದರಲ್ಲಿ ತಾವಾಗಿಯೇ ನಟಿಸಿದ್ದಕ್ಕಾಗಿ ಅವರಿಗೆ ಹಾಸ್ಯ ಸರಣಿಯಲ್ಲಿ ಅತ್ಯುತ್ತಮ ಅತಿಥಿ ನಟಿ ಎಮ್ಮಿ ಪ್ರಶಸ್ತಿ‌ಗೆ ನಾಮನಿರ್ದೇಶನ ಸಂದಿತು.

                                     

6. ಹೊರಗಿನ ಕೊಂಡಿಗಳು

ಸಾಮಾನ್ಯ

 • ಟೆಂಪ್ಲೇಟು:Tvtome person
 • ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ವಿನ್ಸ್ಲೆಟ್‌
 • ಪಥ್ಯ ಕತೆ ಕುರಿತು ಮಾನಹಾನಿ ಮೊಕದ್ದಮೆ ಗೆದ್ದ ಕೇಟ್‌ ವಿನ್ಸ್ಲೆಟ್‌
 • ಟಾಮ್‌ ಪೆರೊಟ್ಟಾರಿಂದ ನ್ಯೂ ಯಾರ್ಕ್‌ ಟೈಮ್ಸ್‌ ಆಸ್ಕರ್ ಸಂಚಿಕೆ, 9 ಫೆಬ್ರುವರಿ 2009

ಸಂದರ್ಶನಗಳು

 • ದಿ ಬ್ಲರ್ಬ್‌ ಸಂದರ್ಶನ ಏಪ್ರಿಲ್‌, 2004
 • ಕೇಟ್‌ ವಿನ್ಸ್ಲೆಟ್‌ ಸಂದರ್ಶನ 16 October 2004
 • ಅನಾನೊವಾದಲ್ಲಿ ಕೇಟ್‌ ವಿನ್ಸ್ಲೆಟ್‌ ಸಂದರ್ಶನ 2007
 • USA ವೀಕೆಂಡ್‌ ಸಂದರ್ಶನ 24 ಫೆಬ್ರುವರಿ 2002
 • "Kate Winslet video interview with stv.tv, December 2006". Archived from the original on 2007-10-12.
 • BBC ನ್ಯೂಸ್‌ ಇಂಗ್ಲೆಂಡ್‌ನಲ್ಲಿ ಕೇಟ್‌ ವಿನ್ಸ್ಲೆಟ್‌ ಸಂದರ್ಶನ ಶುಕ್ರವಾರ, 2004
 • ದಿ ಅರ್ಲಿ ಷೋ ಸಂದರ್ಶನ 20 ಫೆಬ್ರುವರಿ 2003
 • ಟಿಸ್ಕೆಲಿ ಸಂದರ್ಶನ ಫೆಬ್ರುವರಿ 2006
 • ಇಂಡೆಕ್ಸ್‌ ಮ್ಯಾಗಜೀನ್‌ ಸಂದರ್ಶನ 2004

ಟೆಂಪ್ಲೇಟು:AcademyAwardBestActress 2001-2020

 • REDIRECT Template:GoldenGlobeBestSuppActressMotionPicture 2001–2020
 • REDIRECT Template:ScreenActorsGuildAward FemaleSupportMotionPicture
 • REDIRECT Template:GoldenGlobeBestActressMotionPictureDrama 2001–2020
Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →