Back

ⓘ ಅನಿಮೇಶನ್. ಚಲನೆಯ ಭ್ರಮೆ ಸೃಷ್ಟಿಗೆ ಆಕೃತಿಯೊಂದರ ಸ್ಥಾನಗಳ ಅಥವಾ 2-D ಇಲ್ಲವೇ 3-D ಚಿತ್ರಗಳ ದೃಶ್ಯ ಸರಣಿಯನ್ನು ಒಂದು ಅನುಕ್ರಮದ ಮಾದರಿಯಲ್ಲಿ ಕ್ಷಿಪ್ರವಾಗಿ ಪ್ರದರ್ಶನವಾಗುವಂತೆ ಮಾಡುವುದೇ ಅನಿ ..




                                               

ಡ್ರಾಗನ್ ಬಾಲ್

Dragon Ball ಅಕಿರಾ ತೊರಿಯಾಮಾ ಮತ್ತು ಸಚಿತ್ರ ಬರೆದ ಜಪಾನಿನ ಮಂಗಾ ಸರಣಿ ಕಾರ್ಯಕ್ರಮ. ಇದು ಮೂಲತಃ ಷುಯೆಷಾ 42 ಟ್ಯಾಂಕೊಬಾನ್ ಸಂಪುಟಗಳಾಗಿ ಪ್ರಕಟಿಸಿದ್ದಾರೆ 519 ಪ್ರತ್ಯೇಕ ಅಧ್ಯಾಯಗಳು 1984 ರಿಂದ 1995 ರ ಅವಧಿಯಲ್ಲಿ ವೀಕ್ಲಿ ಷೋನೆನ್ ಜಂಪ್ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. Dragon Ball ಆರಂಭದಲ್ಲಿ ಪಶ್ಚಿಮ ಶಾಸ್ತ್ರೀಯ ಚೀನೀ ಕಾದಂಬರಿ ಜರ್ನಿ ಸ್ಫೂರ್ತಿ. ಅವರು ಸಮರ ಕಲೆಗಳ ತರಬೇತಿ ಮತ್ತು ಒಟ್ಟುಗೂಡಿದರು ವಿಷ್ ನೀಡುವ ಡ್ರ್ಯಾಗನ್ ಕರೆಕಳುಹಿಸುವಂತಾಯಿತು ಡ್ರ್ಯಾಗನ್ ಬಾಲ್ಸ್ ಎಂಬ ಹೆಸರಿನಲ್ಲಿ ಏಳು ಎಸೆತಗಳಲ್ಲಿ ಹುಡುಕಿಕೊಂಡು ವಿಶ್ವದ ಪರಿಶೋಧಿಸುತ್ತದೆ ಸರಣಿ ಪ್ರೌಢಾವಸ್ಥೆಯಲ್ಲಿ ಮೂಲಕ ತನ್ನ ಬಾಲ್ಯದ ನಾಯಕ, ಗೊಕು, ಸಾಹಸಗಳನ್ನು ಅನುಸರಿಸುತ್ತದೆ. ತನ್ನ ಪ್ರಯಾಣದ ಉದ್ದಕ್ಕೂ, ಗೊಕು ಹಲವಾರು ಸ್ನೇಹಿತರು ಮಾಡುತ್ತದೆ ಮತ್ತು ...

                                               

ನ್ಯಾರುಟೋ ಉಜುಮಕಿ

ಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux che ...

                                               

ಅಡೋಬ್ ಫ್ಲ್ಯಾಶ್

ಅಡೋಬ್‌ ಫ್ಲ್ಯಾಶ್ ಎಂಬುದು ಒಂದು ಮಲ್ಟಿಮೀಡಿಯಾ ವೇದಿಕೆಯಾಗಿದ್ದು, ವೆಬ್‌ ಪುಟಗಳಿಗೆ ಅನಿಮೇಷನ್‌, ದೃಶ್ಯಭಾಗ, ಮತ್ತು ಪಾರಸ್ಪರಿಕ ಪಟುತ್ವವನ್ನು ಸೇರಿಸಲು ಇದನ್ನು ಬಳಸಲಾಗುತ್ತದೆ. ಜಾಹೀರಾತುಗಳು ಮತ್ತು ಆಟಗಳಿಗೆ ಸಂಬಂಧಿಸಿದಂತೆ ಫ್ಲ್ಯಾಶ್‌‌‌ ಆಗಿಂದಾಗ್ಗೆ ಬಳಸಲ್ಪಡುತ್ತದೆ. ತೀರಾ ಇತ್ತೀಚಿಗೆ, "ಸಮೃದ್ಧ ಅಂತರ್ಜಾಲ ಅನ್ವಯಿಕೆಗಳಿಗೆ" ಸಂಬಂಧಿಸಿದ ಒಂದು ಸಲಕರಣೆಯಾಗಿ ಇದು ಸ್ಥಾನವನ್ನು ಪಡೆದುಕೊಂಡಿದೆ. ಪಠ್ಯದ ಅನಿಮೇಷನ್‌, ರೇಖಾಕೃತಿಗಳು, ಮತ್ತು ಸ್ಥಿರ ಚಿತ್ರಗಳನ್ನು ಒದಗಿಸುವುದಕ್ಕಾಗಿ ಸದಿಶ ಪ್ರಮಾಣ ಮತ್ತು ರ್ಯಾಸ್ಟರ್‌‌ ರೇಖಾಚಿತ್ರಗಳನ್ನು ಫ್ಲ್ಯಾಶ್‌‌‌ ಕುಶಲತೆಯಿಂದ ನಿರ್ವಹಿಸುತ್ತದೆ. ಶ್ರವ್ಯಾಂಶ ಮತ್ತು ದೃಶ್ಯಭಾಗದ ಎರಡು ದಿಕ್ಕಿನ ಪ್ರವಹಿಸುವಿಕೆಯನ್ನು ಇದು ಬೆಂಬಲಿಸುತ್ತದೆ, ಮತ್ತು ಮೌಸು, ಕೀಲಿಮಣೆ, ಧ್ವನಿವರ್ಧಕ, ಹಾಗ ...

ಅನಿಮೇಶನ್
                                     

ⓘ ಅನಿಮೇಶನ್

ಚಲನೆಯ ಭ್ರಮೆ ಸೃಷ್ಟಿಗೆ ಆಕೃತಿಯೊಂದರ ಸ್ಥಾನಗಳ ಅಥವಾ 2-D ಇಲ್ಲವೇ 3-D ಚಿತ್ರಗಳ ದೃಶ್ಯ ಸರಣಿಯನ್ನು ಒಂದು ಅನುಕ್ರಮದ ಮಾದರಿಯಲ್ಲಿ ಕ್ಷಿಪ್ರವಾಗಿ ಪ್ರದರ್ಶನವಾಗುವಂತೆ ಮಾಡುವುದೇ ಅನಿಮೇಶನ್‌ ಅಥವಾ ಚಿತ್ರಸಂಚಲನೆ. ಇದು ದೃಷ್ಟಿಯ ನಿರಂತರತೆಯಿಂದ ಉಂಟಾಗುವ ಚಲನೆಯ ದೃಶ್ಯದ ಭ್ರಮೆ ಹಾಗೂ ಇದನ್ನು ಅಂಸಂಖ್ಯಾತ ವಿಧಾನಗಳಲ್ಲಿ ಸೃಷ್ಟಿಸಬಹುದು ಮತ್ತು ಪ್ರದರ್ಶಿಸಲೂಬಹುದು. ಅನಿಮೇಶನ್‌ ಪ್ರದರ್ಶಿಸಲು ಹಲವು ಇತರೆ ಪದ್ಧತಿಗಳು ಅಸ್ಥಿತ್ವದಲ್ಲಿವೆ, ಅನಿಮೇಶನ್‌ ಪ್ರದರ್ಶಿಸುವ ಅತ್ಯಂತ ಸಾಮಾನ್ಯ ವಿಧಾನವೆಂದರೆ, ಚಲಿಸುವ ಚಿತ್ರ ಅಥವಾ ವಿಡಿಯೋ ಪ್ರೋಗ್ರಾಮ್‌.

                                     

1. ಆರಂಭಿಕ ಉದಾಹರಣೆಗಳು

ಆದಿಕಾಲದಲ್ಲಿ ಚಲನೆಯನ್ನು ಹಿಡಿಯಲು ನಡೆಸಿರುವ ಪ್ರಯತ್ನಗಳನ್ನು ಪೇಲಿಯೋಲಿಥಿಕ್‌ ಗುಹಾಂತರ ಚಿತ್ರಗಳಲ್ಲಿ ಕಾಣಬಹುದು. ಇಲ್ಲಿ ಪ್ರಾಣಿಗಳನ್ನು ಹಲವು ಕಾಲುಗಳನ್ನು ಹೊಂದಿರುವಂತೆ ಹಾಗೂ ಅವುಗಳನ್ನು ತಿರುಗು-ಮುರುಗು ಸ್ಥಿತಿಯಲ್ಲಿ ಚಿತ್ರಿಸಲಾಗಿದೆ. ಇದು ಚಲನೆಯ ಅನುಭವವನ್ನು ಗ್ರಹಿಸಲು ನಡೆಸಿರುವ ಪ್ರಯತ್ನವೆಂದು ಸ್ಪಷ್ಟವಾಗಿ ಗೋಚರಿಸುತ್ತದೆ. ಇರಾನ್‌ನ ಶಾಹರ್‌-ಇ ಸೋಖ್ತಾ ಎಂಬಲ್ಲಿ 5.200 ವರ್ಷಗಳಷ್ಟು ಹಳೆಯದಾದ ಒಂದು ಮಣ್ಣಿನ ಪಾತ್ರೆ =ಕುಡಿಕೆ ದೊರೆತಿದ್ದು, ಇದರ ಸುತ್ತಲೂ ಮೇಕೆಯ ಐದು ಚಿತ್ರಗಳನ್ನು ಚಿತ್ರಿಸಲಾಗಿದೆ.

ಇದನ್ನು ಆರಂಭಿಕ ಕಾಲದ ಅನಿಮೇಶನ್‌ ಪ್ರಯತ್ನಕ್ಕೆ ಉದಾಹರಣೆಯೆಂದು ಪರಿಗಣಿಸಲಾಗಿದೆ. ಆದರೂ ಚಿತ್ರಗಳ ಚಲನೆ ಮತ್ತು ನಿರಂತರತೆಯನ್ನು ತೋರಿಸಲು ಯಾವುದೇ ಉಪಕರಣಗಳು ಆಗಿನ ಕಾಲದಲ್ಲಿ ಇರಲಿಲ್ಲ, ಆದ್ದರಿಂದ ಅನಿಮೇಶನ್‌ ಪದ ನೀಡುವ ನಿಜ ಅರ್ಥದಲ್ಲಿ ಇದನ್ನು ಅನಿಮೇಶನ್‌ ಎಂದು ಕರೆಯಲು ಸಾಧ್ಯವಿಲ್ಲ.ಫಿನಾಕಿಸ್ಟೋಸ್ಕೋಪ್‌, ಪ್ರಾಕ್ಸಿನೋಸ್ಕೋಪ್‌, ಇವುಗಳ ಜೊತೆಗೆ ಫ್ಲಿಪ್‌ ಬುಕ್‌ಗಳು ಆರಂಭಿಕ ಅನಿಮೇಶನ್‌ನ ಜನಪ್ರಿಯ ಸಾಧನಗಳಾಗಿದ್ದವು. ಇವುಗಳನ್ನು 1800ರ ಸುಮಾರಿಗೆ ಆವಿಷ್ಕರಿಸಲಾಗಿತ್ತು. ಚೀನಿಯರು ಝೋಟ್ರೋಪ್‌-ವಿಧಾನವನ್ನು 180ಕ್ರಿ.ಪೂ ADಯ ಅವಧಿಗಾಗಲೇ ರೂಪಿಸಿದ್ದರು. ಅನುಕ್ರಮ ಚಿತ್ರ ಸರಣಿಯನ್ನು ತಾಂತ್ರಿಕ ರೀತಿಯಲ್ಲಿ ಬಳಸಿಕೊಂಡು ಈ ಪದ್ಧತಿಗಳು ಚಲನೆಯನ್ನು ಸೃಷ್ಟಿಸುತ್ತಿದ್ದವು. ಆದರೆ ಸಿನಿಮಾಟೋಗ್ರಫಿ ತಂತ್ರಜ್ಞಾನ ಉದಯವಾಗುವವರೆಗೂ ಅನಿಮೇಶನ್‌ ಹೆಚ್ಚೇನೂ ಅಭಿವೃದ್ಧಿ ಕಂಡಿರಲಿಲ್ಲ. ಹಲವಾರು ವಿಧದ ಯೋಜನೆಗಳ ಮೂಲಕ ವಿಭಿನ್ನ ಬಗೆಯ ಅನಿಮೇಶನ್‌ ತಂತ್ರಗಳನ್ನು ಒಂದೇ ಕಾಲದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಚಲನಚಿತ್ರ ಅನಿಮೇಶನ್‌ ಅಥವಾ ಚಲಿಸುವ ಚಿತ್ರಗಳನ್ನು ರಚಿಸುವ ಈ ಕಲೆಗೆ ಒಬ್ಬನೇ "ಸೃಷ್ಟಿಕರ್ತ"ನಿಲ್ಲ. ಸ್ಪೆಷಲ್‌-ಎಫೆಕ್ಟ್‌ =ವಿಶಿಷ್ಟ ಪರಿಣಾಮದಚಲಿಸುವ ಚಿತ್ರಗಳ ತಯಾರಕನಾಗಿದ್ದ ಜಾರ್ಜೆಸ್‌ ಮೆಲೀಸ್‌ ತನ್ನದೇ ತಂತ್ರಗಳ ಮೂಲಕ ಅನಿಮೇಶನ್‌ ವಿಧಾನವನ್ನು ಬಳಸಿದ ಮೊದಲ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ.

ಆತನದು ಆಕಸ್ಮಿಕ ಆವಿಷ್ಕಾರ.ದೃಶ್ಯಗಳಲ್ಲಿ ಬದಲಾವಣೆಗೆ ಕ್ಯಾಮರಾದಲ್ಲಿ ತಡೆ ಉಂಟಾಗುತ್ತಿತ್ತು.ನಂತರ ಫಿಲ್ಮ್‌ ಸುತ್ತುವಿಕೆಗೆ ಚಾಲನೆ ದೊರೆಯುತ್ತಿತ್ತು. ಇದೇ ತಂತ್ರ ಮುಂದೆ ಸ್ಪಾಪ್‌-ಮೋಷನ್‌ ಅನಿಮೇಶನ್‌ಸ್ಥಿರ ಚಿತ್ರಚಲನೆಯ ಪದ್ದತಿ ಎಂದು ಜನಪ್ರಿಯವಾಯಿತು. ಮೆಲೀಸ್‌ ಒಮ್ಮೆ ಬಸ್‌ ಚಾಲನಾ ಚಿತ್ರೀಕರಣದಲ್ಲಿ ತೊಡಗಿದ್ದಾಗ ಕ್ಯಾಮೆರಾ ಒಡೆದು ಹೋದ ಸಂದರ್ಭದಲ್ಲಿ ಅಕಸ್ಮಿಕವಾಗಿ ಈ ತಂತ್ರವನ್ನು ಕಂಡುಕೊಂಡಿದ್ದ. ಮೆಲೀಸ್‌ ತನ್ನ ಭಗ್ನಗೊಂಡ ಕ್ಯಾಮೆರಾವನ್ನು ಸರಿಪಡಿಸಿಕೊಂಡು ಮರು ಚಿತ್ರೀಕರಿಸಲು ಆರಂಭಿಸಿದಾಗ ಒಂದು ಶವವಾಹನ ಹಾದು ಹೋದಂತಾಯಿತು. ಇದರ ಅಂತಿಮ ಪರಿಣಾಮ ಇವನಿದ್ದ ಬಸ್ಸೇ ಶವವಾಹನವಾಗಿ ಪರಿವರ್ತನೆಯಾದಂತಾಗಿತ್ತು! ಇದೇ ಆತನಿಗೆ ಅನಿಮೇಶನನ್ ಆವಿಷ್ಕಾರಕ್ಕೆ ಸ್ಪೂರ್ತಿಯಾಯಿತು. ಆರಂಭಿಕ ವರ್ಷಗಳಲ್ಲಿ ಅನಿಮೇಶನ್‌ ಬೆಳವಣಿಗೆಗೆ ಮಹತ್ತರ ಕೊಡುಗೆ ಸಲ್ಲಿಸಲು ಕಾರಣವಾದ ಹಲವು ಘಟನೆಗಳಲ್ಲಿ ಇದೂ ಒಂದಾಗಿತ್ತು. ತೀರ ಆರಂಭ ಕಾಲದಲ್ಲಿ ಅರ್ಥರ್‌ ಮೆಲ್ಬೋರ್ನ್-ಕೂಪರ್‌ ನಿರ್ಮಿಸಿದ್ದ ಮ್ಯಾಚೆಸ್‌: ಯ್ಯಾನ್‌ ಅಪ್ಪೀಲ್ 1899 ಎಂಬ ಹೆಸರಿನ ಸ್ಥಿರ ಚಿತ್ರಣದ ಜಾಹಿರಾತು ಚಿತ್ರ ಇಂಗ್ಲಿಷ್‌ನಲ್ಲಿತ್ತು. ಇದನ್ನು ಬ್ರಿಯಾಂಟ್‌ ಅಂಡ್ ಮೇ ಎಂಬಹೆಸರಿನ ಬೆಂಕಿಪೊಟ್ಟಣ ತಯಾರಿಕಾ ಕಂಪನಿಗಾಗಿ ಕೂಪರ್‌ ನಿರ್ಮಿಸಿದ್ದರು. ಈ ಅನಿಮೇಶನ್‌, ಕಪ್ಪುಹಲಗೆಯ ಮೇಲೆ ಏಕರೂಪದ ಬೆಂಕಿಕಡ್ಡಿಗಳು ಒಟ್ಟಿಗೆ ದೇಶಪ್ರೇಮಕ್ಕಾಗಿ ಕರೆಯನ್ನು ಬರೆಯುತ್ತಿದ್ದ ಸ್ಟಾಪ್‌-ಮೋಷನ್‌ಸ್ಥಿರ ಚಿತ್ರಣದ ತಂತ್ರವನ್ನು ಒಳಗೊಂಡಿತ್ತು. J. ಸ್ಟುವರ್ಟ್ ಬ್ಯ್ಲಾಕ್‌ಟನ್‌ ಸ್ಟಾಪ್‌-ಮೋಷನ್‌ ಮತ್ತು ಹ್ಯಾಂಡ್‌-ಡ್ರಾನ್‌ =ಕೈಯಿಂದ ಬಿಡಿಸಿದ ರೇಖಾ ಚಿತ್ರ ತಂತ್ರಗಳನ್ನು ಅನಿಮೇಶನ್‌ನಲ್ಲಿ ಬಳಸಿಕೊಂಡ ಮೊದಲ ಅಮೆರಿಕನ್‌ ಚಲನಚಿತ್ರ ನಿರ್ಮಾಪಕನಾಗಿದ್ದ. ಆದರೆ ಚಲನಚಿತ್ರ ನಿರ್ಮಾಣದಲ್ಲಿ ಈ ತಂತ್ರ ಪರಿಚಯಿಸಿದ ಎಡಿಸನ್‌. 20ನೇ ಶತಮಾನದ ಉತ್ತರಾರ್ಧದಲ್ಲಿ ಈ ಪರಿಕಲ್ಪನೆಗಳನ್ನು 1900ರಲ್ಲಿ ತನ್ನ ಮೊದಲ ಹಕ್ಕುಸ್ವಾಮ್ಯದ ಚಿತ್ರದಲ್ಲಿ ಬಳಸಿ ಈ ಪರಿಕಲ್ಪನೆಗಳಿಗೆ ಹೊಸ ಆಯಾಮ ನೀಡಿದ. ಈತನ ಚಿತ್ರಗಳು ದಿ ಎನ್‌ಚಾಂಟೆಡ್‌ ಡ್ರಾಯಿಂಗ್‌ 1900 ಮತ್ತು ಹ್ಯೂಮರಸ್‌ ಪೇಸಸ್‌ ಆಫ್‌ ಫನ್ನಿ ಫೇಸಸ್‌ 1906 ಬ್ಯ್ಲಾಕ್‌ಟನ್‌ನ "ಲೈಟಿಂಗ್‌ ಆರ್ಟಿಸ್ಟ್‌" ದಿನಚರಿಯ ಚಲನಚಿತ್ರ ಆವೃತ್ತಿಗಳಾಗಿದ್ದವು. ಆರಂಭದಲ್ಲಿ ಮೆಲೀಸ್‌ ಕಪ್ಪುಹಲಗೆಮೇಲೆ ಬಿಡಿಸಿದ ಆಕೃತಿಗಳು ಚಲಿಸಿದಂತೆ ಮಾಡಲು ಮತ್ತು ತಮಗೆ ತಾವೇ ಆಕಾರ ಬದಲಿಸಿಕೊಳ್ಳಲು ಬಳಸಿದ ಸ್ಟಾಪ್‌-ಮೋಷನ್‌ ತಂತ್ರಗಳ ಪರಿವರ್ತಿತ ರೂಪಗಳಾಗಿದ್ದವು. ಹ್ಯೂಮರಸ್‌ ಪೇಸಸ್‌ ಆಫ್‌ ಫನ್ನಿ ಫೇಸಸ್ ಚಿತ್ರ ಅನಿಮೇಶನ್‌ ತಂತ್ರವನ್ನು ಬಳಸಿಕೊಂಡ ನೈಜ ಅನಿಮೇಟೆಡ್‌ ಚಿತ್ರವೆಂದು ಕರೆಸಿಕೊಂಡರೆ, ಬ್ಯ್ಲಾಕ್‌ಟನ್‌ ಮೊದಲ ನಿಜವಾದ ಅನಿಮೇಟರ್‌ ಎನಿಸಿಕೊಂಡರು.

ಮತ್ತೊಬ್ಬ ಫ್ರೆಂಚ್‌ ಕಲಾವಿದ ಇಮೈಲ್ ಕೋಹ್ಲ್‌ ವ್ಯಂಗ್ಯ ರೇಖಾ ಚಿತ್ರಗಳ ಪಟ್ಟೆಯನ್ನು ಬರೆಯುದರೊಂದಿಗೆ 1908ರಲ್ಲಿ ಫ್ಯಾಂಟಸ್ಮಾಗೋರಿ ಹೆಸರಿನ ಚಿತ್ರವನ್ನು ಸಿದ್ದಪಡಿಸಿದ.ಕಡ್ಡಿ ಆಕೃತಿ ಚಿತ್ರಗಳು ಮಾದಕ ವಸ್ತುಗಳನ್ನು ಎಂದರೆ ಮದ್ಯದ ಬಾಟಲಿಗಳನ್ನು ಹಿಡಿದುಕೊಂಡಂತೆಯೇ ಅವುಗಳನ್ನು ಹೂವಾಗಿ ಪರಿವರ್ತಿಸಿ ಚಲಿಸುವ ವಿಧಾನವನ್ನು ಈ ಚಿತ್ರ ದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡಿತ್ತು. ಅನಿಮೇಟರ್‌ನ ಕೈಗಳು ದೃಶ್ಯದಲ್ಲಿ ಪ್ರವೇಶಿಸುತ್ತಿದ್ದ ನೈಜ ದೃಶ್ಯಗಳ ಸನ್ನಿವೇಶಗಳೂ ಈ ಚಿತ್ರದಲ್ಲಿದ್ದವು. ಮೊದಲು ಕಾಗದದ ಮೇಲೆ ಪ್ರತಿಯೊಂದು ಛಾಯಾ ಆಕೃತಿ ಬಿಡಿಸಿ ನಂತರ ಒಂದೊಂದೂ ಚೌಕಟ್ಟನ್ನು ನೆಗೆಟಿವ್‌ ಫಿಲ್ಮ್‌ನಲ್ಲಿ ಚಿತ್ರೀಕರಿಸಿ ಈ ಚಿತ್ರಸರಣಿ ರೂಪಿಸಲಾಗಿತ್ತು. ಇದರಿಂದಾಗಿ ಚಿತ್ರ ಕಪ್ಪು ಹಲಗೆಯ ರೂಪಕ್ಕೆ ತಿರುಗಿತ್ತು. ಇದರಿಂದ ಫ್ಯಾಂಟಸ್ಮಾಗೋರಿ ಚಿತ್ರ, ಸಾಂಪ್ರದಾಯಿಕ ಶೈಲಿಯ ಕೈಯಿಂದ ಬಿಡಿಸಿದಟ್ರೆಡಿಷನಲ್‌ ಅನಿಮೇಷನ್‌ ಹ್ಯಾಂಡ್-ಡ್ರಾನ್) ಎಂದು ಹೆಸರಾಗಿರುವ ತಂತ್ರವನ್ನು ಬಳಸಿದ ಮೊದಲ ಅನಿಮೇಟೆಡ್‌ ಚಿತ್ರ ಎಂದು ಕರೆಸಿಕೊಂಡಿತು. ಬ್ಯ್ಲಾಕ್‌ಟನ್‌ ಮತ್ತು ಕೋಹ್ಲ್‌ ಅವರ ಯಶಸ್ಸಿನ ನಂತರ, ಇತರೆ ವಿಭ್ಹಾಗದ ಹಲವು ಕಲಾವಿದರು ಅನಿಮೇಶನ್‌ನಲ್ಲಿ ಪ್ರಯೋಗ ಮಾಡಲಾರಂಭಿಸಿದರು. ಯಶಸ್ವಿ ಪತ್ರಿಕಾ ವ್ಯಂಗ ಚಿತ್ರಕಾರ ವಿನ್ಸರ್‌ ಮ್ಯಾಕ್‌ಕೆ ಇವರಲ್ಲಿ ಒಬ್ಬರು. ಚಿತ್ರದ ಒಂದೊಂದೂ ವಿವರವನ್ನು ಬಹಳ ಜಾಗರೂಕತೆಯಿಂದ ಸೇರ್ಪಡೆ ಮಾಡಿದ್ದಾರೆ ಕಲಾವಿದರ ಒಂದು ತಂಡವೇ ಇದರಲ್ಲಿ ದುಡಿದಿದೆ. ಹೀಗಾಗಿ ವಿಸ್ತೃತವಾದ ಅನಿಮೇಷನ್‌ ಅನ್ನು ಇವರು ರೂಪಿಸಿದರು. ಇದರ ಪ್ರತಿ ಚೌಕಟ್ಟನ್ನು ಕಾಗದಲ್ಲಿ ಒಡಮೂಡಿಸಲಾಗಿತ್ತು. ಇವೇ ಪಾತ್ರಗಳನ್ನು ಯಾವುದೇ ಬದಲಾವಣೆಯಿಲ್ಲದೆ ಮತ್ತೆ ಬರೆದು ಅದಕ್ಕೆ ಅನಿಮೇಶನ್‌ ರೂಪ ನೀಡಲಾಗಿತ್ತು. ಮ್ಯಾಕ್‌ಕೆನ ಹೆಚ್ಚು ಜನಪ್ರಿಯವಾದ ಚಿತ್ರಗಳಲ್ಲಿ ಲಿಟಲ್‌ ನೆಮೋ 1911, ಗರ್ಟೀ ದಿ ಡೈನೋಸಾರ್‌ 1914 ಮತ್ತು ದಿ ಸಿಂಕಿಂಗ್ ಆಫ್ ದಿ ಲೂಸಿತಾನಿಯಾ 1918 ಪ್ರಮುಖವಾದವು. ಸಾಮಾನ್ಯವಾಗಿ "ಕಾರ್ಟೂನ್ಸ್‌" ಎಂದು ಕರೆಯುವ ಅನಿಮೇಟೆಡ್‌ ಕಿರು ಚಿತ್ರಗಳ ನಿರ್ಮಾಣ 1910ರ ಅವಧಿಯಲ್ಲಿ ಸ್ವಾಯತ್ತ ಉದ್ಯಮವಾಗಿ ಬೆಳೆಯಿತು, ಇಂತಹ ತಮಾಷೆಯ ವಸ್ತುವನ್ನೊಳಗೊಂಡ ಕಿರುಚಿತ್ರಗಳು ಚಲನಚಿತ್ರ ಮಂದಿರಗಳಲ್ಲೂ ಪ್ರದರ್ಶನಗೊಳ್ಳಲು ಆರಂಭಿಸದವು. ಆರಂಭಿಕ ವರ್ಷಗಳಲ್ಲಿ ಯಶಶ್ವಿ ಅನಿಮೇಶನ್‌ ಸೃಷ್ಟಿಕರ್ತರೆಂದರೆ ಜಾನ್‌ ರಾಂಡಾಲ್ಫ್‌ ಬ್ರೆ; ಇವರು ಮತ್ತೊಬ್ಬ ಅನಿಮೇಟರ್‌ ಎರ್ಲ್‌ ಹರ್ಡ್‌ರೊಡನೆ ಸೇರಿ ಸೆಲ್‌ ಅನಿಮೇಶನ್‌ಪ್ರಕ್ರಿಯೆಗೆ ಹಕ್ಕು ಸ್ವಾಮ್ಯ ಪಡೆದರು. ದಶಕದ ಉತ್ತರಾರ್ಧದಲ್ಲಿ ಅನಿಮೇಷನ್‌ ಉದ್ಯಮ ತನ್ನ ಪ್ರಾಬಲ್ಯ ಮೆರೆಯಿತು.

                                     

2.1. ತಂತ್ರಗಳು ಸಾಂಪ್ರದಾಯಿಕ ಅನಿಮೇಶನ್

ಟ್ರೆಡಿಷನಲ್‌ ಅನಿಮೇಶನ್‌ ಇದು ಸೆಲ್‌ ಅನಿಮೇಶನ್‌ ಅಥವಾ ಹ್ಯಾಂಡ್‌-ಡ್ರಾನ್‌ ಅನಿಮೇಶನ್‌ ಎಂದೂ ಕರೆಯಲ್ಪಡುತ್ತದೆ.ರೇಖಾ ನಕ್ಸೆಗಳ ಮೂಲಕ ಚಿತ್ತ್ರಕೋಶ ರಚನೆ ಎನ್ನುವುದು 20ನೇ ಶತಮಾನದ ಬಹುತೇಕ ಅನಿಮೇಶನ್ ಚಿತ್ರಗಳಲ್ಲಿ ಬಳಸಲಾದ ತಂತ್ರಗಾರಿಕೆ.

ಟ್ರೆಡಿಷನಲ್‌ ಅನಿಮೇಶನ್‌ ಚಿತ್ರದಲ್ಲಿ ಪ್ರತಿಯೊಂದಕ್ಕೂ ಚೌಕಟ್ಟುಗಳನ್ನು ನಿರ್ಮಿಸಲಾಗುತ್ತದೆ. ಮೊದಲು ಕಾಗದದ ಮೇಲೆ ಬಿಡಿಸಿದ ಚಿತ್ರಗಳ ಛಾಯಾ ಚಿತ್ರ ಅಥವಾ ಛಾಯಾ ಪ್ರತಿಗಳನ್ನು ಬಳಸಲಾಗುತ್ತದೆ. ಚಲನೆಯ ಭ್ರಮೆಯನ್ನು ಉಂಟುಮಾಡಲು ಪ್ರತಿಯೊಂದೂ ಚಿತ್ರ ಬರಹವು ತನ್ನ ಹಿಂದಿನ ಫ್ರೇಮ್‌ಗಿಂತ ಸ್ವಲ್ಪ ಭಿನ್ನವಾಗಿರುತ್ತವೆ. ಅನಿಮೇಟರ್‌ಗಳು ಬಿಡಿಸಿದ ಚಿತ್ರಗಳನ್ನು ಸೆಲ್‌ ಎಂದು ಕರೆಯುವ ಪಾರದರ್ಶಕ ಅಸಿಟೇಟ್‌ ಹಾಳೆಗಳ ಮೇಲೆ ನೆರಳಚ್ಚುಝರಾಕ್ಸ್ಪ್ರತಿ ತೆಗೆಯಲಾಗುತ್ತದೆ. ನಂತರ ಚಿತ್ರಿಸಲಾದ ರೇಖೆಗಳ ಒಳಗೆ ಈಗಾಗಲೇ ನಿರ್ಧರಿಸಿರುವ ಬಣ್ಣ ಅಥವಾ ಧ್ವನಿ ತುಂಬಲಾಗುತ್ತದೆ.

ಪಾರದರ್ಶಕ ಅಸಿಟೇಟ್ ಹಾಳೆಗಳಲ್ಲಿನ ಚಿತ್ರಕೋಶಗಳ ಛಾಯಾಗ್ರಹಣದ ನಂತರ ಅವುಗಳ ಆಕಾರಕ್ಕೆ ಹೋಲಿಕೆಯಾಗುವ ಹಿನ್ನಲೆ ವರ್ಣದ ವೇದಿಕೆಯಲ್ಲಿ ಚಿತ್ರಿಸಲಾಗುತದೆ.ಇದರಲ್ಲಿ ತಿರುಗುವ ಇಲ್ಲವೆ ಕೊಕ್ಕೆ ಆಕಾರದ ಕ್ಯಾಮರಾ ಬಳಸಿಕೊಳ್ಳಲಾಗುವುದು. ರೇಖಾ ಚಿತ್ರಗಳ ಬಳಕೆ ಟ್ರೆಡಿಷನಲ್‌ ಸೆಲ್‌ ಅನಿಮೇಶನ್‌ ಪದ್ಧತಿಯು 21ನೇ ಶತಮಾನದ ಆರಂಭದೊಂದಿಗೆ ಗತಿಸಿಹೋಯಿತು. ಇಂದಿನ ಅನಿಮೇಶನ್ ಚಿತ್ರ ಮತ್ತು ಹಿನ್ನೆಲೆಗಳನ್ನು ಪರಿಷ್ಕರಿಸಿ ಕಂಪ್ಯೂಟರ್‌ಗಳಲ್ಲಿ ದಾಖಲಿಸಲಾಗುತ್ತದೆ, ಇಲ್ಲವೇ ಉಪಕರಣಗಳ ನೆರವಿನಿಂದ ನೇರವಾಗಿ ಕಂಪ್ಯೂಟರ್‌ನಲ್ಲೇ ಚಿತ್ರ ಬಿಡಿಸಲಾಗುತ್ತದೆ. ಕ್ಯಾಮೆರಾ ಚಲನೆ ಮತ್ತು, ವಿಶೇಷ ಪ್ರಭಾವ ಒದಗಿಸಲು ಚಿತ್ರಗಳಿಗೆ ಬಣ್ಣ ತುಂಬಲು ವೈವಿಧ್ಯಮಯತಂತ್ರಜ್ಞಾನ ಸಾಫ್ಟ್‌ವೇರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪೂರ್ಣಗೊಂಡ ಅನಿಮೇಶನ್‌ ಕೃತಿ ವಿವಿಧ ಪ್ರಕಾರದ ಮಾಧ್ಯಮಗಳಲ್ಲಿ ಮೂಡಿಬರುತ್ತದೆ, ಎಂದರೆ ಪಾರಂಪರಿಕ 35 mm ಫಿಲ್ಮ್‌ ಮತ್ತು ಹೊಸ ತಂತ್ರಜ್ಞಾನದ ಡಿಜಿಟಲ್‌ ವಿಡಿಯೋಗಳಲ್ಲಿ ಕಾಣಬರುತ್ತದೆ. ಟ್ರೆಡಿಷನಲ್‌ ಸೆಲ್‌ ಅನಿಮೇಶನ್‌ನ ಆ "ಛಾಯೆ" ಈಗಲೂ ಉಳಿದುಕೊಂಡಿದೆ. ಅಲ್ಲದೆ ಕ್ಯಾರೆಕ್ಟರ್‌ ಅನಿಮೇಟರ್‌ನ ಕೆಲಸಕಾರ್ಯ ಸುಮಾರು 70ಕ್ಕೂ ಹೆಚ್ಚು ವರ್ಷಗಳಿಂದ ಅದೇ ಸ್ವರೂಪ ಉಳಿಸಿಕೊಂಡಿದೆ. ಅಸಿಟೇಟ್ ಪಾರದರ್ಶಕ ಹಾಳೆಗಳ ಉಪಯೋಗ ಇನ್ನ ಆಚರಣೆಯಲ್ಲಿದೆ. ಕೆಲವು ಅನಿಮೇಶನ್‌ ನಿರ್ಮಾಪಕರು ಸೆಲ್‌ ಅನಿಮೇಶನ್‌ ಅನ್ನು ವಿವರಿಸಲು "ಟ್ರೇಡಿಜಿಟಲ್‌" ಎಂಬ ಪದ ಬಳಸಿದ್ದಾರೆ. ಇದರಲ್ಲಿ ಕಂಪ್ಯೂಟರ್‌ ತಂತ್ರಜ್ಞಾನದ ಅತಿ ಹೆಚ್ಚು ಬಳಕೆಯಿರುತ್ತದೆ. ಟ್ರೆಡಿಷನಲ್‌ ಅನಿಮೇಶನ್‌ ಪೀಚರ್‌ ಫಿಲ್ಮ್‌ಗಳಿಗೆ ಉದಾಹರಣೆಗಳೆಂದರೆ, ಪಿನೋಚ್ಚಿಯೋ ಯುನೈಟೆಡ್‌ ಸ್ಟೇಟ್ಸ್‌, 1940, ಅನಿಮಲ್‌ ಫಾರ್ಮ್‌ ಯುನೈಟೆಡ್‌ ಕಿಂಗ್‌ಡಮ್, 1954, ಮತ್ತು ಅಕಿರಾ ಜಪಾನ್‌, 1988. ಕಂಪ್ಯೂಟರ್‌ ತಂತ್ರಜ್ಞಾನ ಬಳಸಿಕೊಂಡು ನಿರ್ಮಾಣಗೊಂಡ ಟ್ರೆಡಿಷನಲ್‌ ಅನಿಮೇಶನ್‌ ಫಿಲ್ಮ್‌ಗಳೆಂದರೆ, ದಿ ಲಯನ್‌ ಕಿಂಗ್ US, 1994 ಸೆನ್‌ ಟು ಚಿಚಿರೋ ನೋ ಕಾಮಿಕಾಕುಶಿ ಸ್ಪಿರಿಟೆಡ್‌ ಅವೇ ಜಪಾನ್‌, 2001, ಟ್ರೆಷರ್‌ ಪ್ಲಾನೆಟ್‌ USA, 2002 ಮತ್ತು ಲೆಸ್‌ ಟ್ರಿಪ್ಲೆಟ್ಸ್ ಡಿ ಬೆಲ್ಲೆವಿಲ್ಲೆ 2003.

  • ಲೈವ್‌-ಆಕ್ಷನ್‌/ಅನಿಮೇಶನ್‌ ನೈಜ-ಕಾರ್ಯ ಅನಿಮೇಶನ್‌ ತಂತ್ರಗಾರಿಕೆಯು ಕೈಯಲ್ಲಿ ಬಿಡಿಸಿದ ಚಿತ್ರ ಅಥವಾ ಪಾತ್ರಗಳನ್ನು ಸಹಜ ಕ್ರಿಯಾತ್ಮಕ ಪಾತ್ರಗಳೊಂದಿಗೆ ಸಂಯೋಜಿಸಲು ಬಳಕೆಯಾಗುತ್ತದೆ. ಇದನ್ನು ಎಡಿಟಿಂಗ್ ಎಂಬ ಅರ್ಥದಲ್ಲೂ ಬಳಸಬಹುದಾಗಿದೆ. ಕೋಕೋ ದಿ ಕ್ಲಾನ್‌ ಎಂಬ ಪಾತ್ರವನ್ನು ನೈಜ ದೃಶ್ಯದ ಮೇಲೆ ಚಿತ್ರಿಸುವುದರೊಂದಿಗೆ ಈ ತಂತ್ರ ಆರಂಭ ಕಂಡಿತ್ತು. ಇದಕ್ಕೆ ಮತ್ತಷ್ಟು ಉದಾಹರಣೆಗಳೆಂದರೆ, ಹೂ ಫ್ರೇಮ್ಡ್‌ ರೋಜರ್‌ ರಾಬಿಟ್?, USA, 1988, ಸ್ಪೇಸ್‌ ಜಾಮ್‌ USA, 1996 ಮತ್ತು ಓಸ್ಮೋಸಿಸ್‌ ಜೋನ್ಸ್‌ USA, 2002 ಎಂಬ ಚಿತ್ರಗಳು.
  • ಸೀಮಿತ ಅನಿಮೇಶನ್‌ ಕಡಿಮೆ ವಿಸ್ತೃತ ಮತ್ತು ಹೆಚ್ಚು ವಿಶಿಷ್ಟ ಶೈಲಿಯ ಚಿತ್ರಗಳ ಬಳಕೆಯನ್ನು ಒಳಗೊಂಡಿರುತ್ತದೆ, ಜೊತೆಗೆ ಚಲನೆಯ ವಿವಿಧ ಮಾದರಿಗಳನ್ನು ಇದು ಅಗತ್ಯ ಪ್ರಮಾಣದಲ್ಲಿ ಬಳಸುತ್ತದೆ. ಅಮೆರಿಕದ ಯುನೈಟೆಡ್‌ ಪ್ರೊಡಕ್ಷನ್ಸ್‌ ಆಫ್ ಅಮೆರಿಕ ಸಂಸ್ಥೆಯ ಕಲಾವಿದರು ಇದರ ಪ್ರವರ್ತಕರು. ವಿಶಿಷ್ಟ ಶೈಲಿಯ ಕಲಾತ್ಮಕ ಅಭಿವ್ಯಕ್ತಿಯ ವಿಧಾನವಾಗಿ ಸೀಮಿತ ಅನಿಮೇಶನ್‌ ಬಳಕೆಯಾಗುತ್ತದೆ. ಗೆರಾಲ್ಡ್ ಮ್ಯಾಕ್‌ಬೋಯಿಂಗ್‌ US, 1951, ಯೆಲ್ಲೋ ಸಬ್‌ಮರೀನ್ ‌UK, 1968 ಮತ್ತು ಜಪಾನ್‌ ನಿರ್ಮಾಣದ ಅನೀಮ್‌ ಚಿತ್ರ ಸರಣಿಯ ಬಹುತೇಕ ಭಾಗಗಳಲ್ಲಿ ಈ ತಂತ್ರಜ್ಞಾನ ಬಳಕೆಯಾಗಿದೆ. ಟೆಲಿವಿಷನ್‌ನಂತಹ ವಿದ್ಯುನ್ಮಾನದ ಮಾಧ್ಯಮಗಳಿಗೆ ಕಡಿಮೆ ವೆಚ್ಚದ ಅನಿಮೇಶನ್‌ ಚಿತ್ರಗಳನ್ನು ನಿರ್ಮಿಸುವಲ್ಲಿ ಇದು ಪ್ರಮುಖವಾಗಿ ಬಳಕೆಯಾಗುತ್ತದೆ. ಈ ಮೂಲಕ ಇಂಟರ್ನೆಟ್‌ನಲ್ಲೂ ವೆಬ್‌ ಕಾರ್ಟೂ‌ನ್‌ ಬಳಕೆಗೆ ಬಂತು. ಕೆಲವು ಉದಾಹರಣೆಗಳೆಂದರೆ, ಸ್ಪಾಂಗೆಬಾಬ್‌ ಸ್ಕ್ವೇರ್‌ಪ್ಯಾಂಟ್ಸ್‌ USA, 1999-ಪ್ರಸ್ತುತಿ, ದಿ ಫೇರ್‌ಲಿ ಆಡ್‌ ಪೇರೆಂಟ್ಸ್‌USA, 2001-ಪ್ರಸ್ತುತಿ ಮತ್ತು ಇನ್‌ವ್ಯಾಡರ್‌ ಝಿಮ್‌ USA, 2001-2006
  • ಪೂರ್ಣಪ್ರಮಾಣದ ಅನಿಮೇಶನ್‌ ಎಂದರೆ ಅತ್ಯುತ್ತಮ ಗುಣಮಟ್ಟದ ಸಾಂಪ್ರದಾಯಿಕ ಶೈಲಿಯ ಅನಿಮೇಶನ್‌ ಚಿತ್ರ ನಿರ್ಮಾಣವನ್ನು ಸೂಚಿಸುತ್ತದೆ. ಇದರಲ್ಲಿ ವಿವರವಾದ ರೇಖಾ ನಕ್ಷೆಗಳ ಸಾಂಧರ್ಭಿಕ ಚಲನೆಯನ್ನು ಬಿಂಬಿಸಲಾಗುತ್ತದೆ. ಪೂರ್ಣ ಪ್ರಮಾಣದ ಅನಿಮೇಶನ್‌ ಚಿತ್ರಗಳ ನಿರ್ಮಾಣದಲ್ಲಿ ವಿಭಿನ್ನ ಶೈಲಿಗಳಿವೆ. ವಾಲ್ಟ್‌ ಡಿಸ್ನಿ ಸ್ಟುಡಿಯೋ ನಿರ್ಮಿಸಿದ ಇತ್ಯಾದಿ. ನೈಜವಾಗಿ ವಿನ್ಯಾಸಗೊಳಿಸಿದ ಚಿತ್ರಗಳಿಂದ ಹಿಡಿದು ವಾರ್ನರ್‌ ಬ್ರದರ್ಸ್ ಅನಿಮೇಶನ್ ಸ್ಟುಡಿಯೋ ನಿರ್ಮಿಸಿದ ಹೆಚ್ಚು "ಕಾರ್ಟೂನ್‌" ಶೈಲಿಯ ಚಿತ್ರಗಳವರೆಗೆ ವಿಭಿನ್ನತೆ ಇದೆ. ಡಿಸ್ನಿ ಅನಿಮೇಟೆಡ್ ಫೀಚರ್ಸ್‌ ನಿರ್ಮಿಸಿದ ಹಲವು ಚಿತ್ರಗಳು ಹಾಗೂ ಡಿಸ್ನಿ ಅನಿಮೇಶನ್‌ ಸ್ಟುಡಿಯೋದ ಹೊರಗೆ ಚಿತ್ರಿತ ಇತರರ ಚಿತ್ರಗಳು ಎಂದರೆ, ದಿ ಸೀಕ್ರೆಟ್‌ ಆಫ್‌ NIMH US, 1982, ದಿ ಐರನ್‌ ಜೇಂಟ್ US, 1999, ನೋಕ್ಟುರ್ನಾ ಸ್ಪೇನ್‌, 2007, ಸಂಪೂರ್ಣ ಅನಿಮೇಶನ್‌ ತಂತ್ರಕ್ಕೆ ಉದಾಹರಣೆಗಳಾಗಿವೆ.
  • ರೋಟೋಸ್ಕೋಪಿಂಗ್‌ ಎನ್ನುವುದು ಅನಿಮೇಶನ್ ನಿರ್ಮಾಣದಲ್ಲಿ ಒಂದು ತಂತ್ರ. ಇದನ್ನು ಮ್ಯಾಕ್ಸ್‌ ಫ್ಲೀಷರ್‌ 1917ರಲ್ಲಿ ಹಕ್ಕು ಸ್ವಾಮ್ಯ ಪಡೆದುಕೊಂಡಿದ್ದಾರೆ. ಇದರಲ್ಲಿ ಅನಿಮೇಟರ್‌ಗಳು ಫ್ರೇಮ್‌ನಿಂದ ಫ್ರೇಮ್‌ಗೆ ನೈಜ ಚಲನೆಯನ್ನು ಚಿತ್ರಿಸುತ್ತಾರೆ. ಮೂಲ ಚಿತ್ರವನ್ನು ನೇರವಾಗಿ ಬಟ್ಟಿ ಇಳಿಸಿ ಅನಿಮೇಟೆಡ್‌ ಚಿತ್ರಗಳಾಗಿ ಪರಿವರ್ತಿಸಬಹುದು. ಉದಾಹರಣೆಗೆ ದಿ ಲಾರ್ಡ್ ಆಫ್ ದಿ ರಿಂಗ್ಸ್‌. ಅನಿಮೇಶನ್‌ಗೆ ತಳಹದಿ ಮತ್ತು ಸ್ಪೂರ್ತಿ ಬಳಸಿಕೊಂಡ ಬಹುತೇಕ ಡಿಸ್ನಿ ಚಿತ್ರ. ಅಥವಾ ವಾಕಿಂಗ್‌ ಲೈಫ್‌ US, 2001 ಮತ್ತು ಅ ಸ್ಕ್ಯಾನರ್‌ ಡಾರ್ಕ್‌ಲಿ US, 2006 ಚಿತ್ರಗಳಲ್ಲಿ ವಿಶಿಷ್ಟ ಶೈಲಿಯ ಮತ್ತು ಅಭಿವ್ಯಕ್ತಿಗೆ ಹೆಚ್ಚು ಒತ್ತು ನೀಡುವ ವಿಧಾನ ಬಳಕೆಯಾಗಿದೆ. ಇದಕ್ಕೆ ಮತ್ತಷ್ಟು ಉದಾಹರಣೆಗಳೆಂದರೆ, ರಾಲ್ಫ್‌ ಬಕ್ಷಿಯವರ ದಿ ಲಾರ್ಡ್ ಆಫ್‌ ದಿ ರಿಂಗ್ಸ್‌USA, 1978, ಫೈಯರ್‌ ಅಂಡ್‌ ಐಸ್‌USA, 1983, ಮತ್ತು ಹೆವಿ ಮೆಟಲ್‌1981
  • ಅನೀಮ್‌ ಎನ್ನುವ ತಂತ್ರದ ಮೂಲ USA ಆದರೂ ಪ್ರಮುಖವಾಗಿ ಬಳಕೆಯಾಗಿದ್ದು ಜಪಾನ್‌ನಲ್ಲಿ. ಸಾಮಾನ್ಯವಾಗಿ ವಿಸ್ತೃತ ಪಾತ್ರಗಳನ್ನು ಒಳಗೊಂಡಿದ್ದರೂ, ಇದು ಹೆಚ್ಚು ಸ್ಟಿಫ್‌ ಜಡ-ಜಟಿಲ ಅನಿಮೇಶನ್‌ಗೆ ಸಂಬಂಧಿಸಿದ್ದು. ಇದರಲ್ಲಿ ಬಾಯಿಯ ಚಲನೆಗೆ ಮುಖ್ಯವಾಗಿ 2-3 ಫ್ರೇಮ್‌ಗಳನ್ನು, ಕಾಲಿನ ಚಲನೆಗೆ ಸುಮಾರು 6ರಿಂದ 10 ಫ್ರೇಮ್‌ಗಳನ್ನು ಬಳಸುತ್ತಾರೆ. ಸಾಕಷ್ಟು ವೇಳೆ ಈ ತಂತ್ರದಲ್ಲಿ ಪಾತ್ರಗಳ ಕಣ್ಣುಗಳ ಚಲನೆಗೆ ಹೆಚ್ಚು ಮಹತ್ವ ಇರುವುದರಿಂದ ಅವುಗಳನ್ನು ಕೂಲಂಕುಷವಾಗಿ ಬಿಡಿಸಲಾಗಿರುತ್ತದೆ. ಆದ್ದರಿಂದ ಕೆಲವೊಮ್ಮೆ ಪ್ರತಿ ಫ್ರೇಮ್‌ಗಳ ಮೇಲೆ ಅವುಗಳನ್ನು ಚಿತ್ರಿಸುವುದಕ್ಕೆ ಬದಲು ಎರಡು ಕಣ್ಣುಗಳನ್ನು 5ರಿಂದ 6 ಕೋನಗಳಲ್ಲಿ ಚಿತ್ರಿಸಿ ಅವನ್ನು ಪ್ರತಿ ಫ್ರೇಮ್‌ಗೂ ಅಂಟಿಸಲಾಗುತ್ತದೆ.ಆಧುನಿಕ ಕಾಲದಲ್ಲಿ ಇದಕ್ಕೆ ಕಂಪ್ಯೂಟರ್‌ ಬಳಸುತ್ತಾರೆ. ಅನಿಮ್‌ ತಂತ್ರವನ್ನು ಬಳಸಿಕೊಂಡ ಕೆಲವು ಚಲನಚಿತ್ರಗಳೆಂದರೆ; ಸ್ಪಿರಿಟೆಡ್‌ ಅವೇಜಪಾನ, 2001, ಅಕೀರಾಜಪಾನ್‌, 1988 ಮತ್ತು ಪ್ರಿನ್ಸೆಸ್‌ ಮೊನೋನೋಕೆ
                                     

2.2. ತಂತ್ರಗಳು ಕಂಪ್ಯೂಟರ್‌ ಅನಿಮೇಷನ್‌

ಕಂಪ್ಯೂಟರ್‌ ಅನಿಮೇಶನ್‌ ವಿಭಿನ್ನ ಬಗೆಯ ತಂತ್ರಗಳನ್ನು ಒಳಗೊಂಡಿರುತ್ತದೆ. ಎಲ್ಲ ತಂತ್ರಗಳಲ್ಲಿರುವ ಏಕರೂಪದ ಅಂಶವೆಂದರೆ, ಅನಿಮೇಶನ್‌ ಇಲ್ಲಿ ಡಿಜಿಟಲ್‌ ರೂಪದಲ್ಲಿ ನಿರ್ಮಾ ಣವಾಗುತ್ತದೆ ಎನ್ನುವುದು.

                                     

2.3. ತಂತ್ರಗಳು 2D ಅನಿಮೇಶನ್‌

2D ಅನಿಮೇಶನ್‌ನಲ್ಲಿ ಆಕೃತಿಗಳನ್ನು ಕಂಪ್ಯೂಟರ್‌ನಲ್ಲಿ 2D ಬಿಟ್‌ಮ್ಯಾಪ್‌ ಗ್ಯ್ರಾಫಿಕ್ಸ್‌ ಅಥವಾ 2D ವೆಕ್ಟರ‍್ ಗ್ಯ್ರಾಫಿಕ್ಸ್‌ ತಂತ್ರಜ್ಞಾನದ ಸಹಾಯದಿಂದ ಪರಿಷ್ಕರಿಸಿ ಸಿದ್ದಪಡಿಸುತ್ತಾರೆ. ಟ್ರೆಡಿಶನಲ್‌ ಅನಿಮೇಶನಲ್ಲಿ ಸ್ವಯಂ ಕಂಪ್ಯೂಟರೀಕೃತ ರೂಪಗಳನ್ನು ಎಂದರೆ ಟ್ವೀನಿಂಗ್‌, ಮಾರ್ಫಿಂಗ್‌, ಆನಿಯನ್‌ ಸ್ಕಿನ್ನಿಂಗ್‌ ಮತ್ತು ಪ್ರಕ್ಷಿಪ್ತ ರೋಟೋಸ್ಕೋಪಿಂಗ್‌ನಂತಹ ತಂತ್ರಗಳು ಬಳಕೆಯಾಗುತ್ತವೆ. ಉದಾಹರಣಗೆ: ಫೋಸ್ಟರ್ಸ್ ಹೋಮ್‌ ಫಾರ್‌ ಇಮೇಜಿನರಿ ಫ್ರೆಂಡ್ಸ್‌, ಸ್ಪಾಂಗೆಬಾಬ್‌ ಸ್ಕ್ವೇರ್‌ಪ್ಯಾಂಟ್ಸ್‌ನಿರ್ದಿಷ್ಟ ಸರಣಿಗಳು ಮಾತ್ರ, ಡ್ಯಾನ್ನಿ ಫ್ಯಾಂಟಮ್‌ ನಿರ್ದಿಷ್ಟ ಸಂಧರ್ಭಗಳು ಮಾತ್ರ, ದಿ ಫೇರ್‌ಲಿ ಆಡ್‌ಪೇರೆಂಟ್ಸ್ ನಿರ್ದಿಷ್ಟ ಸರಣಿಗಳು ಮಾತ್ರ, El Tigre: The Adventures of Manny Rivera

  • ಅನಲಾಗ್ ಕಂಪ್ಯೂಟರ್‌ ಅನಿಮೇಶನ್‌
  • ಪವರ‍್ಪಾಯಿಂಟ್‌ ಅನಿಮೇಶನ್‌
  • ಫ್ಯ್ಲಾಶ್‌ ಅನಿಮೇಶನ್‌
                                     

2.4. ತಂತ್ರಗಳು 3D ಅನಿಮೇಶನ್‌

3D ಅನಿಮೇಶನ್‌ನಲ್ಲಿ ಡಿಜಿಟಲ್‌ ಆಕೃತಿಗಳನ್ನು ಮಾದರಿಗಳಂತೆ ಅನಿಮೇಟರ್‌ ಪರಿವರ್ತಿಸುತ್ತಾನೆ. ಜಾಲರಿ ಅಥವಾ ಬಲೆಯನ್ನು ನಿಯಂತ್ರಿಸಲು ಬಳಸುವ ಡಿಜಿಟಲ್‌ ಮೂಲರೂಪದ ತೆಳು ರಚನೆಗಳನ್ನು ಇಲ್ಲಿ ಒದಗಿಸಲಾಗಿರುತ್ತದೆ. ಈ ಪ್ರಕ್ರಿಯೆಯನ್ನು ರಿಗ್ಗಿಂಗ್ಕಣ್ಕಟ್ಟು ಎಂದು ಕರೆಯುತ್ತಾರೆ. ಇನ್ನೂ ಹಲವು ವಿಭಿನ್ನ ತಂತ್ರಗಳನ್ನು ಇಲ್ಲಿ ಅಳವಡಿಸಲಾಗುತ್ತದೆ. ಉದಾಹರಣೆಗೆ, ಗಣಿತದ ಸಮೀಕರಣಗಳು, ಕೃತಕವಾದ ತುಪ್ಪಳ ಅಥವಾ ಕೂದಲು, ಬೆಂಕಿ ಮತ್ತು ನೀರಿನ ಪರಿಣಾಮಗಳು ಹಾಗೂ ಚಲನೆಯನ್ನು ನಿಯಂತ್ರಿಸುವ ಈ ಎಲ್ಲ ತಂತ್ರಗಳು 3D ಡೈನಾಮಿಕ್ಸ್‌ ವರ್ಗದಲ್ಲಿ ಬರುತ್ತವೆ. ಹಲವು 3D ಅನಿಮೇಶನ್‌ಗಳು ತುಂಬ ನೈಜವಾಗಿದ್ದು ನಂಬಲರ್ಹವಾಗಿರುತ್ತವೆ. ಇತ್ತೀಚಿನ ಚಲನಚಿತ್ರಗಳಲ್ಲಿ ವಿಷುಯಲ್‌ ಎಫೆಕ್ಟ್ಸ್‌ ಅಥವ ದೃಶ್ಯ ವೈಭವವಗಳಾಗಿ ಬಳಕೆಯಾಗುತ್ತಿವೆ. ಉದಾಹರಣೆಗಳು: ಟಾಯ್‌ ಸ್ಟೋರಿ, ಶ್ರೆಕ್‌, ಪೊಕೊಯೋ

                                     

2.5. ತಂತ್ರಗಳು ಪರಿಭಾಷೆಗಳು

  • ಮಾರ್ಫ್ ಟಾರ್ಗೆಟ್‌ ಅನಿಮೇಶನ್‌
  • ಮೋಶನ್‌ ಕ್ಯಾಪ್ಚರ್‌
  • ಕ್ರೌಡ್‌ ಸಿಮ್ಯುಲೇಶನ್
  • ಸ್ಕೆಲಿಟಲ್‌ ಅನಿಮೇಶನ್‌
  • ಡೀಪ್‌ ಕ್ಯಾನ್‌ವಾಸ್‌
  • ನಾನ್‌-ಪೋಟೋರಿಯಲಿಸ್ಟಿಕ್‌ ರೆಂಡರಿಂಗ್‌
  • ಸೆಲ್‌-ಶೇಡೆಡೆ ಅನಿಮೇಶನ್‌

2D ಅನಿಮೇಶನ್‌ ತಂತ್ರಗಳು ಚಿತ್ರಗಳ ಪರಿವರ್ತನೆಯ ಕಡೆ ಹೆಚ್ಚು ಗಮನ ಕೇಂದ್ರೀಕರಿಸಿದರೆ, 3D ಅನಿಮೇಶನ್‌ ತಂತ್ರಗಳು ಸಾಮಾನ್ಯವಾಗಿ ವಾಸ್ತವ ಜಗತ್ತನ್ನು ನಿರ್ಮಿಸಿ ಅದರಲ್ಲಿ ಪಾತ್ರಗಳು ಮತ್ತು ವಸ್ತುಗಳು ಚಲನೆ ಮತ್ತು ಪರಸ್ಪರ ಸಂವಹನ ನಡೆಸುವಂತೆ ಮಾಡುತ್ತವೆ. 3D ಅನಿಮೇಶನ್‌ನಲ್ಲಿ ಚಿತ್ರಗಳು ನೋಡುಗನಿಗೆ ನೈಜವಾಗಿ ಕಾಣುವಂತೆ ಸೃಷ್ಟಿಸಬಹುದು.

                                     

2.6. ತಂತ್ರಗಳು ಇತರೆ ಅನಿಮೇಶನ್‌ ತಂತ್ರಗಳು

  • ಗುಂಡು ಸೂಜಿ ಬಳಕೆ ಮಾದರಿಯ ಅನಿಮೇಶನನಲ್ಲಿ ಚಿತ್ರಗಳನ್ನು ಪಿನ್ ಗಳ ಸಹಾಯದಿಂದ ಪರದೆಯ ಮೇಲೆ ಸೃಷ್ಟಿಸಲಾಗುತ್ತದೆ ಇದರ ಚಲನೆಯನ್ನು ರಿಮೋಟ್ ಮೂಲಕ ನಿಯಂತ್ರಿಸಲಾಗುತ್ತದೆ. ಪರದೆಯ ಬದಿಯಿಂದ ಬೆಳಕು ಹಾಯಿಸಿದಾಗ ಪಿನ್‌ಗಳು ನೆರಳನ್ನು ಸೃಷ್ಟಿಸಿ ಚಲನೆಯ ಅನುಭವವನ್ನು ಉಂಟುಮಾಡುತ್ತವೆ. ಟ್ರೆಡಿಷನಲ್‌ ಸೆಲ್‌ ಅನಿಮೇಶನ್‌ನಲ್ಲಿ ಸೃಷ್ಟಿಸಲು ಕಷ್ಟಸಾಧ್ಯವಾದ ಅನಿಮೇಶನ್‌ ಪರಿಣಾಮಗಳ ಸರಣಿಯನ್ನು ಬಳಸಬಹುದು. ರೇಖಾ ನಕ್ಷೆಗಳಲ್ಲಿ ಸಾಂಪ್ರದಾಯಕ ಶೈಲಿಯನ್ನು ಬಳಸಿ ಜಟಿಲ ಚಿತ್ರಗಳ ರಚನೆಯನ್ನು ಸಾಧ್ಯಗೊಳಿಸಲಾಗುತ್ತದೆ.
  • ಫ್ಲಿಪ್‌ ಬುಕ್‌: ಫ್ಲಿಪ್‌ ಬುಕ್‌ ಇದಕ್ಕೆ ಬ್ರಿಟಿಷ್‌ ಇಂಗ್ಷಿಷ್‌ನಲ್ಲಿ ಫ್ಲಿಕ್‌ ಬುಕ್ ಎಂಬ ಹೆಸರೂ ಇದೆ.ಸರಣಿ ಚಿತ್ರಗಳ ಹೊಂದಿರುವ ಪುಸ್ತಕ. ಪುಟಗಳು ಒಂದಾದ ನಂತರ ಒಂದು ವೇಗವಾಗಿ ತೆರೆದಂತೆ ಅವು ಅನಿಮೇಟ್‌ಆದಂತೆ ಭಾಸವಾಗುತ್ತದೆ. ಅಥವ ಚಲಿಸಿದಂತಹ ಅನುಭವ ನೀಡುತ್ತವೆ.
  • ಡ್ರಾನ್‌ ಆನ್‌ ಫಿಲ್ಮ್‌ ಅನಿಮೇಶನ್‌: ಈ ತಂತ್ರದಲ್ಲಿ ದೃಶ್ಯಗಳನ್ನು ದಾಖಲಿಸಿ ಫಿಲ್ಮ್‌ಸ್ಟಾಕ್‌ನಲ್ಲಿ ಬರೆದು ಚಲನಚಿತ್ರ ನಿರ್ಮಿಸುತ್ತಾರೆ. ಉದಾಹರಣೆಗೆ, ನಾರ್ಮನ್‌ ಮ್ಯಾಕ್‌ಲಾರೆನ್‌, ಲೆನ್‌ ಲೈ ಮತ್ತು ಸ್ಯ್ಟಾನ್‌ ಬ್ರೇಕೇಜ್‌ ಇವರ ನಿರ್ಮಾಣದ ಚಿತ್ರಗಳು.
  • ಪೈಂಟ್‌-ಆನ್‌ -ಗ್ಲಾಸ್‌ ಅನಿಮೇಶನ್‌: ಗಾಜಿನ ಮೇಲೆ ಬಿಡಿಸುವ, ಬಹುಕಾಲ ಮಿರುಗುವ ಅಥವಾ ಹಸಿಯಾಗಿರುವ ತೈಲವರ್ಣ ಚಿತ್ರಗಳ ಪರಿವರ್ತನೆ ಮೂಲಕ ಅನಿಮೇಶನ್ ಚಿತ್ರಗಳ ನಿರ್ಮಿಸಲು ಈ ತಂತ್ರ ಬಳಕೆಯಾಗುತ್ತದೆ.
  • ಸ್ಯಾಂಡ್ ಅನಿಮೇಶನ್‌: ಈ ತಂತ್ರಗಾರಿಕೆಯಲ್ಲಿ ಗಾಜಿನ ಮೇಲೆ ಸಮಪ್ರಮಾಣದಲ್ಲಿ ಬೆಳಕು ಹಾಯಿಸಲಾಗುತ್ತದೆ. ಗಾಜಿನ ಆಕೃತಿಯ ಸುತ್ತ ಮರಳಿನ ಕಣಗಳ ಚಲನೆ ಗೋಚರವಾಗುವಂತೆ ಮಾಡಲಾಗುತ್ತದೆ. ಹೀಗೆ ಅನಿಮೇಶನ್‌ ಚಿತ್ರದ ಪ್ರತಿ ಚೌಕಟ್ಟುಗಳನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಬೆಳಕಿನ ವೈದೃಶ್ಯ ಏರ್ಪಡುತ್ತದೆ. ಈ ಚಿತ್ರವನ್ನು ಅನಿಮೇಟ್‌ ಮಾಡಿದಾಗ ಆಕರ್ಷಕ ಪರಿಣಾಮಗಳು ಸೃಷ್ಟಿಯಾಗುತ್ತವೆ.

ಇವನ್ನು ಸಾಮಾನ್ಯವಾಗಿ ಮಕ್ಕಳಿಗಾಗಿ ಸಚಿತ್ರ ಪುಸ್ತಕಗಳಾಗಿ ಬಳಸುತ್ತಾರೆ. ಇವುಗಳನ್ನು ವಯಸ್ಕರೂ ಗಮನಿಸಬಹುದು. ಇಲ್ಲಿ ಚಿತ್ರಗಳಿಗೆ ಬದಲಾಗಿ ಪೋಟೋ ಅಥವಾ ಛಾಯಾಚಿತ್ರಗಳಿರುತ್ತವೆ. ಫ್ಲಿಪ್‌ ಬುಕ್‌ಗಳು ಪ್ರತ್ಯೇಕ ಪುಸ್ತಕಗಳಲ್ಲ, ಒಂದು ಸಾಮಾನ್ಯ ಪುಸ್ತಕ ಅಥವಾ ನಿಯತಕಾಲಿಕದಲ್ಲೂ ಇದನ್ನೊಂದು ವಿಶೇಷವೆಂಬಂತೆ ಪುಟದ ಮೂಲೆಗಳಲ್ಲಿ ಬಳಸಬಹುದು. ಡಿಜಿಟಲ್‌ ವಿಡಿಯೋಗಳನ್ನು ಅಭಿರುಚಿಗೆ ತಕ್ಕಂತೆ ಫ್ಲಿಪ್‌ ಬುಕ್‌ಗಳಾಗಿ ಪರಿವರ್ತಿಸಲು ಹಲವು ಸಾಫ್ಟ್‌ವೇ‌ರ್‌ ಮತ್ತು ವೆಬ್‌ಸೈಟ್‌ಗಳು ಲಭ್ಯವಿವೆ.



                                     

2.7. ತಂತ್ರಗಳು ಇತರೆ ತಂತ್ರಗಳು ಮತ್ತು ಅಳವಡಿಕೆಗಳು

  • ಚುಕಿಮೇಶನ್‌
  • ಅನಿಮ್ಯಾಟ್ರಾನಿಕ್ಸ್
  • ಮಲ್ಟಿ-ಸ್ಕೆಚಿಂಗ್‌ವಿವಿಧ ಕೆತ್ತನೆ ಬರಹ
  • ಸ್ಪೆಷಲ್‌ ಎಫೆಕ್ಟ್ಸ್‌ ಅನಿಮೇಶನ್‌ ವಿಶಿಷ್ಟ ಪರಿಣಾಮ ಬೀರುವ ಅನಿಮೇಶನ್
  • ಕ್ಯಾರೆಕ್ಟರ್‌ ಅನಿಮೇಶನ್‌
  • ಸ್ಟಾಪ್‌ ಮೋಷನ್‌ ಸ್ಥಿರ ಚಲನೆಯ ಚಿತ್ರ
                                     

3. ಇದನ್ನೂ ನೋಡಿರಿ

  • ಅಂತಾರಾಷ್ಟ್ರೀಯ ಅನಿಮೇಶನ್‌ ಟೂರ್ನಿ
  • ಅನಿಮೇಶನ್‌ನ ಇತಿಹಾಸ
  • ಕಡ್ಡಿ ಚಿತ್ರಗಳು
  • ಕಲೆ
  • ಅನಿಮೇಶನ್‌ ಸಾಫ್ಟ್‌ವೇರ್‌ ಅನಿಮೇಶನ್ ತಂತ್ರಜ್ಗಾನ
  • ಚಲನಚಿತ್ರ ಪ್ರಕಾರಗಳ ಪಟ್ಟಿ
  • ಪ್ರಬುದ್ದ ಅನಿಮೇಶನ್‌
  • ಅವಾರ್‌ ಅನಿಮೇಶನ್‌ ವೇರಿಯೇಬಲ್‌ವ್ಯತ್ಯಾಸಗಳು ಅನಿಮೇಶನ್‌)
  • ಸ್ಲೈಡ್‌ಷೋ ಅನಿಮೇಶನ್‌
  • ಕಂ‌ಪ್ಯೂಟರ್‌ ಅನಿಮೇಶನ್‌ ಫಿಲ್ಮ್‌‌ಗಳ ಪಟ್ಟಿ
  • ಆಕೃತಿ ಹಾಳೆಗಳು
  • ಮೋಷನ್‌ ಗ್ರಾಫಿಕ್‌ ಡಿಸೈನ್‌
  • ಮೋಷನ್‌ ಕ್ಯಾಪ್ಚರ್‌
  • ಕಂಪ್ಯೂಟರ್‌ ನಿರ್ಮಿತ ದೃಶ್ಯಾವಳಿ
  • ಸ್ಟಾಪ್‌-ಮೋಷನ್‌ ಚಿತ್ರಗಳ ಪಟ್ಟಿ
  • ವಯರ್‌ ಫ್ರೇಮ್‌ ಆಕೃತಿ
  • ಫ್ಯ್ಲಾಷ್‌ ಅನಿಮೇಶನ್‌ ಚಿತ್ರಗಳು ಮತ್ತು ಟೈಮ್‌ಲೈನ್‌ ಸರಣಿಗಳುಗಳ ಜೊತೆ
  • ಚಲನಚಿತ್ರ ವಸ್ತುಗಳ ಪಟ್ಟಿ
  • ಅನಿಮೇಟೆಡ್‌ ಫೀಚರ್‌-ಲೆಂಥ್‌ ಫಿಲ್ಮ್‌ಗಳ ಪಟ್ಟಿ
  • DVDಗಳಲ್ಲಿ ದೊರೆಯುವ ಅನಿಮೇಶನ್‌ ಕಿರುಚಿತ್ರಗಳ ಪಟ್ಟಿ
  • ಅನಿಮೇಶನ್‌ ಕಿರುಗಥೆಗಳ ಪಟ್ಟಿ
  • ಅನಿಮೇಶನ್ ದೂರದರ್ಶನ ಸರಿಣಿಗಳ ಪಟ್ಟಿ
  • ಅನಿಮೇಶನ್‌ ಸ್ಟುಡಿಯೋಗಳ ಪಟ್ಟಿ
  • ಅನೀಮ್‌
  • ಅನಿಮೇಶನ್‌ನ 12 ಮೂಲಭೂತ ತತ್ವಗಳು
  • ಟ್ರೇಡಿಜಿಟಲ್‌ ಕಲೆ


                                     

4. ಹೆಚ್ಚಿನ ಓದಿಗಾಗಿ

  • ಲೇಬೋರ್ನ್, ಕಿಟ್‌, ದಿ ಅನಿಮೇಶನ್‌ ಬುಕ್‌
  • ವಿಲಯಮ್ಸ್‌, ರಿಚರ್ಡ್, ದಿ ಅನಿಮೇಟರ್ಸ್ ಸರ್ವೈವಲ್‌ ಕಿಟ್‌ ISBN 0-5712-0228-4
  • ವಾಲ್ಟರ್ಸ್, ಫೇಬರ್‌ ಮತ್ತು ಹೆಲೆನ್‌ Ed., ಅನಿಮೇಶನ್‌ ಅನ್‌ಲಿಮಿಟೆಡ್‌: ಇನ್ನೊವೇಟಿವ್‌ ಶಾರ್ಟ್ ಫಿಲ್ಮ್ಸ್‌ ಸಿನ್ಸ್ 1940, ಹಾರ್ಪರ್‌ಕೋಲಿನ್ಸ್‌ ಪಬ್ಲಿಷರ್ಸ್, 2004
  • ಲೆಡೋಕ್ಸ್‌, ಟ್ರಿಶ್‌, ರ್ಯಾನ್ನೀ, ಡೌಗ್‌, & ಪ್ಯಾಟರ್ನ್, ಫ್ರೆಡ್‌ Ed., ಕಂಪ್ಲೀಟ್‌ ಅನೀಮ್‌ ಗೈಡ್‌: ಜಾಪನೀಸ್ ಅನಿಮೇಶನ್‌ ಫಿಲ್ಮ್‌ ಡೈರೆಕ್ಟರಿ ಅಂಡ್‌ ರಿಸೋರ್ಸ್ ಗೈಡ್‌, ಟೈಗರ‍್ ಮೌಂಟೇನ್‌ ಪ್ರೆಸ್‌ 1997
  • ಆಂಡರ‍್ಸನ್‌, ಜೋಸೆಫ್‌ ಮತ್ತು ಬಾರ್ಬರಾ, "ದಿ ಮಿಥ್‌ ಆಫ್‌ ಪರ್‌ಸಿಸ್ಟೆನ್ಸ್‌ ಆಫ್‌ ವಿಷನ್‌ ರೀವಿಸಿಟೆಡ್‌", ಜರ್ನಲ್‌ ಆಫ್‌ ಫಿಲ್ಮ್‌ ಅಂಡ್‌ ವಿಡಿಯೋ, ಸಂಪುಟ. 45, ಸಂಖ್ಯೆ. 1 ಸ್ಪ್ರಿಂಗ್‌ 1993: 3-12
  • ಥಾಮಸ್‌, ಫ್ಯ್ರಾಂಕ್‌ ಮತ್ತು ಜಾನ್‌ಸ್ಟನ್‌, ಒಲ್ಲೀ, Disney Animation: The Illusion of Life, ಅಬ್ಬೀವಿಲ್ಲೆ 1981
  • ಬಾಬ್‌ ಗೋಡ್‌ಫ್ರೆ ಮತ್ತು ಅನ್ನ ಜಾಕ್ಸನ್‌, ದಿ ಡು-ಇಟ್‌-ಯುವರ್‌ಸೆಲ್ಫ್‌ ಫಿಲ್ಮ್‌ ಅನಿಮೇಶನ್‌ ಬುಕ್‌ BBC ಪಬ್ಲಿಕೇಷನ್ಸ್‌ 1974 ISBN 0-563-10829-0 ಇದು ಈಗ ಮಾರಾಟಕ್ಕೆ ಲಭ್ಯವಿಲ್ಲ ಆದರೆ ಅಮೆಜಾನ್‌ Uk ಯಂತಹ ಕಡೆಗಳಲ್ಲಿ ಲಭ್ಯವಿದೆ.
  • ಮ್ಯಾಸ್ಸನ್‌, ಟೆರೆನ್ಸ್‌, CG101: ಅ ಕಂಪ್ಯೂಟರ‍್ ಗ್ರಾಫಿಕ್ಸ್‌ ಇಂಡಸ್ಟ್ರಿ ರೆಫರೆನ್ಸ್‌ ಅನನ್ಯ ಮತ್ತು ಆರಂಭಿಕ ಅನಿಮೇಶನ್‌ ನಿರ್ಮಾಣದ ವೈಯಕ್ತಿಕ ಇತಿಹಾಸ, ಜೊತೆಗೆ ಎಲ್ಲ ಮಟ್ಟದ ಓದುಗ ವರ್ಗಕ್ಕೆ ಉದ್ಯಮದ ವಿಸ್ತೃತ ಅಡಿಪಾಯ. ISBN 0-9778710-0-2
  • ಲೋಯೆ, ರಿಚರ್ಡ್ & ಸ್ಕ್ನೋಟ್ಜ್‌, ವೋಲ್ಫ್‌ಗ್ಯಾಂಗ್ Eds ಲರ್ನಿಂಗ್‌ ವಿಥ್‌ ಅನಿಮೇಶನ್‌. ರಿಸರ್ಚ್‌ ಇಂಪ್ಲಿಕೇಷನ್‌ ಫಾರ್‌ ಡಿಸೈನ್‌ ಕೇಂಬ್ರಿಡ್ಜ್‌ ಯೂನಿವರ್ಸಿಟಿ ಪ್ರೆಸ್‌, 2008
  • ಕಲ್‌ಹೇನ್‌, ಶ್ಯಾಮಸ್‌, ಅನಿಮೇಶನ್‌ ಸ್ಕ್ರಿಪ್ಟ್‌ ಟು ಸ್ಕ್ರೀನ್‌


                                     

5. ಹೊರಗಿನ ಕೊಂಡಿಗಳು

  • ಹೌ‌ ಆನ್‌ ಅನಿಮೇಟೆಡ್‌ ಕಾರ್ಟೂನ್‌ ಈಸ್ ಮೇಡ್‌
  • Experimental Animation Techniques
  • "ಅನಿಮ್ಯಾಂಡೋ", ಅ 12-ನಿಮಿಷಗಳ ಚಿತ್ರವಾಗಿದ್ದು, ಇದು 10 ವಿವಿಧ ಅನಿಮೇಶನ್‌ ತಂತ್ರಗಳನ್ನು ಪ್ರದರ್ಶಿಸುತ್ತದೆ.ಈ ತಂತ್ರಗಳನ್ನು ಹೇಗೆ ಬಳಸಬೇಕೆಂಬ ಬಗ್ಗೆಯೂ ವಿವರಣೆ ಇದೆ.
  • ಅನಿಮೇಶನ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
  • ಅನಿಮೇಶನ್‌ನ ಕಾಲಸೂಚಿ