Back

ⓘ ದಕ್ಷಿಣ ಅಮೇರಿಕ - ಪೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ, ಮತ್ತು ಅಟ್ಲಾಂಟಿಕ್ ಸಾಗರದ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಖಂಡ. ಇದರ ಉತ್ತರ ಭಾಗಕ್ಕೆ ಉತ್ತರ ಅಮೇರಿಕ ಖಂಡ ಮತ್ತು ಕೆರಿಬ್ಬಿಯನ್ ಸಮು ..                                               

ಹಿಟ್ಟು

ಹಿಟ್ಟು ಎಂದರೆ ಕಚ್ಚಾ ಧಾನ್ಯಗಳು, ಬೇರುಗಳು, ಅವರೆಗಳು, ಕರಟಕಾಯಿಗಳು ಅಥವಾ ಬೀಜಗಳನ್ನು ಬೀಸಿ ತಯಾರಿಸಲಾದ ಪುಡಿ. ಇದನ್ನು ಅನೇಕ ವಿಭಿನ್ನ ಆಹಾರಗಳನ್ನು ತಯಾರಿಸಲು ಬಳಸಲಾಗುತ್ತದೆ. ಧಾನ್ಯದ ಹಿಟ್ಟು ಅನೇಕ ಸಂಸ್ಕೃತಿಗಳಲ್ಲಿ ಪ್ರಧಾನ ಆಹಾರವಾದ ಬ್ರೆಡ್‍ನ ಮುಖ್ಯ ಘಟಕಾಂಶವಾಗಿದೆ. ಐರೋಪ್ಯ, ಉತ್ತರ ಅಮೇರಿಕ, ಮಧ್ಯಪ್ರಾಚ್ಯ, ದಕ್ಷಿಣ ಅಮೇರಿಕ, ಉತ್ತರ ಭಾರತ, ಮತ್ತು ಉತ್ತರ ಆಫ್ರಿಕಾದ ಸಂಸ್ಕೃತಿಗಳಲ್ಲಿ, ಗೋಧಿಹಿಟ್ಟು ಅತ್ಯಂತ ಪ್ರಮುಖ ಘಟಕಾಂಶಗಳಲ್ಲಿ ಒಂದು, ಮತ್ತು ಅವರ ಶೈಲಿಗಳ ಬ್ರೆಡ್ ಹಾಗೂ ಪೇಸ್ಟ್ರಿಗಳಲ್ಲಿ ಲಾಕ್ಷಣಿಕ ಮಿಶ್ರಣಾಂಶವಾಗಿದೆ. ಗೋಧಿಯು ಹಿಟ್ಟಿನ ಅತ್ಯಂತ ಸಾಮಾನ್ಯ ಆಧಾರವಾಗಿದೆ. ಪ್ರಾಚೀನಕಾಲದಿಂದ ಮೀಸೋಅಮೆರಿಕನ್ ಪಾಕಶೈಲಿಯಲ್ಲಿ ಮೆಕ್ಕೆ ಜೋಳದ ಹಿಟ್ಟು ಮಹತ್ವದ್ದಾಗಿದೆ ಮತ್ತು ಅಮೆರಿಕಾ ಖಂಡಗಳಲ್ಲಿ ಪ್ರಧಾನ ಆಹಾರವಾಗಿ ಉ ...

                                               

ಚಿಪೋಟ್ಲೆ

ಚಿಪೋಟ್ಲೆ ಒಂದು ಹೊಗೆಯಾಡಿಸಿ ಒಣಗಿಸಿದ ಹಾಲಪೇನ್ಯೊ. ಅದು ಮುಖ್ಯವಾಗಿ ಮೆಕ್ಸಿಕನ್ ಮತ್ತು ಮೆಕ್ಸಿಕನ್-ಅಮೇರಿಕನ್, ಟೆಕ್ಸ್-ಮೆಕ್ಸ್, ಹಾಗೂ ನೈಋತ್ಯ ತಿನಿಸುಗಳಂತಹ ಮೆಕ್ಸಿಕನ್-ಪ್ರೇರಿತ ಪಾಕಪದ್ಧತಿಗಳಲ್ಲಿ ಬಳಸಲಾದ ಒಂದು ಮೆಣಸಿನಕಾಯಿ. ಇತ್ತೀಚಿನವರೆಗೆ, ಚಿಪೋಟ್ಲೆಗಳು ಹೆಚ್ಚಾಗಿ ಮಧ್ಯ ಹಾಗೂ ದಕ್ಷಿಣ ಮೆಕ್ಸಿಕೋದ ಮಾರುಕಟ್ಟೆಗಳಲ್ಲಿ ಕಂಡುಬರುತ್ತಿದ್ದವು. ಮೆಕ್ಸಿಕನ್ ಆಹಾರ ಹೊರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿತ್ತಿದ್ದಂತೆ, ವಿಶೇಷವಾಗಿ ಅಮೇರಿಕ ಮತ್ತು ಕ್ಯಾನಡಾದಲ್ಲಿ, ಹಾಲಪೇನ್ಯೊ ಉತ್ಪಾದನೆ ಮತ್ತು ಸಂಸ್ಕರಣೆ ಉತ್ತರ ಮೆಕ್ಸಿಕೊಗೆ ವಿಸ್ತರಿಸಲು ಪ್ರಾರಂಭಿಸಿತು, ಮತ್ತು ಅಂತಿಮವಾಗಿ ಸಂಸ್ಕರಣೆ ಅಮೇರಿಕ ಮತ್ತು ಚೀನಾದಂತಹ ಇತರ ಸ್ಥಳಗಳಲ್ಲಿ ಪ್ರಾರಂಭವಾಯಿತು.

                                               

ಅಲಘನಿ ಪರ್ವತಗಳು

ಈ ಪರ್ವತವು ಉತ್ತರ ಅಮೇರಿಕ ಖಂಡದ ಉನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ ದೇಶದಲ್ಲಿದೆ. ಪೆನ್ಸಿಲ್ವೇನಿಯ, ವರ್ಜಿನಿಯ ಸಂಸ್ಥಾನಗಳಲ್ಲಿ ಮತ್ತು ನ್ಯೂಯಾರ್ಕ್ ಸಂಸ್ಥಾನದ ಕೆಲವು ಭಾಗಗಳಲ್ಲಿ ಹಬ್ಬಿವೆ. ಹಡ್ಸನ್ ನದಿಯ ದಕ್ಷಿಣ ಮತ್ತು ಪಶ್ಚಿಮಕ್ಕೆ ಬರುತ್ತವೆ. ಸರಾಸರಿ ಎತ್ತರ 1460 ಮೀ. ಪ್ರಮುಖವಾಗಿ ಅಪಲೇಷಿಯನ್ ಪರ್ವತಗಳ ಭಾಗ. ಹಿಮಯುಗದಲ್ಲಿ ಹಿಮಭರಿತವಾಗಿದ್ದುವು. ಹಿಮನದಿಗಳ ಪ್ರವಾಹ ತಂದ ಮೆಕ್ಕಲು ಮಣ್ಣಿನಿಂದಾಗಿ ಅನೇಕ ಆಳವಾದ ಕಣಿವೆಗಳು ಫಲವತ್ತಾಗಿವೆ. ಪ್ರಸ್ಥಭೂಮಿ ಪ್ರದೇಶ ಬಹು ಒರಟಾಗಿದೆ. ಆದ್ದರಿಂದ ಈ ಭಾಗದಲ್ಲಿನ ಅಲಘನಿ ಮುಂತಾದ ಅನೇಕ ನದೀಪಾತ್ರಗಳಲ್ಲಿ ಹಲವು ಜಲಪಾತಗಳಿವೆ. ಪ್ರಸ್ಥಭೂಮಿಯ ಅನೇಕ ಕಡೆಗಳಲ್ಲಿ ವ್ಯವಸಾಯಕ್ಕೆ ಅನುಕೂಲವಾಗಿದೆ. ತರಕಾರಿಗಳನ್ನು ಬೆಳೆಯುವುದು ಇಲ್ಲಿನ ಅತಿ ಮುಖ್ಯ, ಲಾಭದಾಯಕ ಉದ್ಯಮ.

                                               

ಹೂಸ್ಟನ್

ಹೂಸ್ಟನ್‌ ನಗರವು ಟೆಕ್ಸಸ್‌ ರಾಜ್ಯದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಜನಸಂಖ್ಯೆ ಆಧಾರದ ಮೇಲೆ ಇದು ಯುಎಸ್ ನ ನಾಲ್ಕನೇ ಅತಿ ದೊಡ್ಡ ನಗರ ಮತ್ತು ಉತ್ತರ ಅಮೇರಿಕ ಖಂಡದ ಆರನೇ ಅತಿ ದೊಡ್ಡ ನಗರವಾಗಿದೆ. ವಿಸ್ತೀರ್ಣದ ಆಧಾರದ ಮೇಲೆ ಇದು ಯುಎಸ್ ಅತಿ ದೊಡ್ಡ ನಗರ ಇದು ಹ್ಯಾರಿಸ್‌ ಕೌಂಟಿಗೆ ಸೇರುತ್ತದೆ ಮತ್ತು ಟೆಕ್ಸಸ್ ನ ದಕ್ಷಿಣ ಪೂರ್ವ ದಿಕ್ಕಿನಲ್ಲಿ ಬರುತ್ತದೆ ಹೂಸ್ಟನ್‌ ನಗರವು ಟೆಕ್ಸಸ್‌ ರಾಜಧಾನಿಯಾದ ಆಸ್ಟಿನ್ ನಗರದಿಂದ ೧೬೫ ಮೈಲಿ ದೂರದಲ್ಲಿದೆ ಮತ್ತು ಇನ್ನೊಂದು ಪ್ರಮುಖ ನಗರವಾದ ಡಲ್ಲಾಸ್ ನಿಂದ ೨೫೦ ಮೈಲಿ ದೂರದಲ್ಲಿದೆ ನಾಸ ಸಂಸ್ಥೆಯ ಜಾನ್ಸನ್ ಸ್ಪೇನ್ ಸೆಂಟರ್ ಹೂಸ್ಟನ್ ನ ಪ್ರಮುಖ ಪ್ರವಾಸಿ ತಾಣ. ಇದು ಕ್ಲಿಯರ್‌ ಲೇಕ್‌ ಪ್ರದೇಶದಲ್ಲಿದೆ

                                               

ರಾತ್ರಿರಾಣಿ

ರಾತ್ರಿರಾಣಿ ಸೊಲನೇಸಿಯೀ ಸಸ್ಯ ಕುಟುಂಬದಲ್ಲಿನ ಸೆಸ್ಟ್ರಮ್‍ ನ ಒಂದು ಪ್ರಜಾತಿ. ಇದು ವೆಸ್ಟ್ ಇಂಡೀಸ್‍ಗೆ ಸ್ಥಳೀಯವಾಗಿದೆ, ಆದರೆ ದಕ್ಷಿಣ ಏಷ್ಯಾದಲ್ಲಿ ದೇಶೀಕರಿಸಲ್ಪಟ್ಟಿದೆ.

                                               

ಕೆ೨

ಕೆ2 ಭೂಮಿಯ ಮೇಲೆ ಮೌಂಟ್ ಎವರೆಸ್ಟ್‌ನ ನಂತರ ಎರಡನೇ ಅತಿ ಎತ್ತರದ ಪರ್ವತ. ಇದರ ಮೇಲ್ಮೈ ಶಿಖರ 8.611 metres ನಷ್ಟಿದ್ದು, ಕಾರಕೋರಂ ಶ್ರೇಣಿಯ ಭಾಗವಾಗಿದೆ, ಮತ್ತು ಕ್ಸಿನ್‌ಜಿಯಾಂಗ್, ಚೀನಾದ ಕ್ಸಿನ್‌ಜಿಯಾಂಗ್‌‌ದ ಟಾಕ್ಸ್‌ಕೊರ್ಗನ್ ಟಜಿಕ್‌ ಸ್ವಯಾಧಿಕಾರದ ಕೌಂಟಿ ಮತ್ತು ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿರುವ ಗಿಲ್ಗಿಟ್ ಪ್ರದೇಶಗಳ ಸೀಮೆಯಲ್ಲಿದೆ. ಪಾಕ್ ಆಕ್ರಮಿತ ಕಾಶ್ಮೀರವು ತನ್ನ ಭೂಪ್ರದೇಶವೆಂದು ಭಾರತದ ನಿಲುವಾದ್ದರಿಂದ ಆ ದೃಷ್ಟಿಯಲ್ಲಿ ಕೆ-೨ ಭಾರತದ ಅತ್ಯುನ್ನತ ಶಿಖರವೆನಿಸಲ್ಪಡುವುದು. ಕೆ2 ಪರ್ವತದ ಕ್ಲಿಷ್ಟಕರವಾದ ಅರೋಹಣದಿಂದ ಇದನ್ನು ಉಗ್ರ ಪರ್ವತ ವೆಂದು ಕರೆಯುತ್ತಾರೆ ಮತ್ತು ಹತ್ತುವ "ಎಂಟು ಸಾವಿರದವರಲ್ಲಿ" 2ನೇ ಅತಿ ಪ್ರಾಣಾಂತಿಕ ದರ್ಜೆಯಲ್ಲಿದೆ. ಶಿಖರವನ್ನು ಸೇರಿರುವ ಪ್ರತಿ ನಾಲ್ಕು ಜನರಲ್ಲಿ, ಒಬ್ಬನು ಯತ್ ...

ದಕ್ಷಿಣ ಅಮೇರಿಕ
                                     

ⓘ ದಕ್ಷಿಣ ಅಮೇರಿಕ

ದಕ್ಷಿಣ ಅಮೇರಿಕ - ಪೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ, ಮತ್ತು ಅಟ್ಲಾಂಟಿಕ್ ಸಾಗರದ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಖಂಡ. ಇದರ ಉತ್ತರ ಭಾಗಕ್ಕೆ ಉತ್ತರ ಅಮೇರಿಕ ಖಂಡ ಮತ್ತು ಕೆರಿಬ್ಬಿಯನ್ ಸಮುದ್ರವು ಇವೆ.

ಅಮೆರಿಗೊ ವೆಸ್ಪುಚಿ ಎಂಬ ಯೂರೋಪಿಯನ್ ನಾವಿಕ ಮೊದಲ ಬಾರಿಗೆ ಅಮೆರಿಕ ಖಂಡಗಳು "ಪೂರ್ವ ಇಂಡೀಸ್" ಅಲ್ಲ, ಒಂದು ವಿಶಿಷ್ಟ ಖಂಡ ಎಂದು ತಿಳಿಸಿಕೊಟ್ಟನು. ಈ ಕಾರಣದಿಂದ ಈ ಖಂಡಗಳನ್ನು ಇವನ ಹೆಸರನ್ನು ಆಧರಿಸಿ "ಅಮೆರಿಕ" ಎಂದು ಕರೆಯಲಾಗಿದೆ.

ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣ ೧,೭೮,೪೦,೦೦೦ ಚದರ ಕಿ.ಮಿ. ಅಥವಾ ಭೂಮಿಯ ಶೇಕಡಾ ೩.೫% ರಷ್ಟು. ೨೦೦೫ರಲ್ಲಿ ಇದರ ಜನಸಂಖ್ಯೆ ಸುಮಾರು ೩೭,೧೦,೦೦,೦೦೦. ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣವು ಏಷ್ಯಾ, ಆಫ್ರಿಕಾ, ಮತ್ತು ಉತ್ತರ ಅಮೆರಿಕ ಖಂಡಗಳ ನಂತರ ನಾಲ್ಕನೇ ಅತಿದೊಡ್ಡದಾಗಿದೆ. ಜನಸಂಖ್ಯೆ ದೃಷ್ಟಿಯಿಂದ ಇದಕ್ಕೆ ಐದನೆಯ ಸ್ಥಾನವಿದೆ.

                                     

1. ವಿವರಣೆ

ದಕ್ಷಿಣ ಅಮೆರಿಕಾದಲ್ಲಿ ಭೂಗೋಳದಲ್ಲೇ ಅತಿ ಎತ್ತರದ ಜಲಪಾತ ಏಂಜೆಲ್ ಜಲಪಾತ, ನೀರಿನ ಪರಿಮಾಣದ ದೃಷ್ಟಿಯಿಂದ ಅತಿ ದೊಡ್ಡ ನದಿ ಅಮೆಜಾನ್ ನದಿ, ಅತಿ ಉದ್ದದ ಪರ್ವತ ಶ್ರೇಣಿ ಆಂಡೀಸ್ ಶ್ರೇಣಿ, ಅತಿ ಹೆಚ್ಚು ಆರ್ದ್ರವಾಗಿರುವ ಮರುಭೂಮಿ ಅಟಕಾಮ, ಅತಿ ದೊಡ್ಡ ದಟ್ಟ ಕಾಡು ಅಮೆಜಾನ್ ಕಾಡು, ಅತಿ ಎತ್ತರದ ರಾಜಧಾನಿ ಲಾ ಪಾಜ್, ಬೊಲಿವಿಯಾದ ರಾಜಧಾನಿ, ವಾಣಿಜ್ಯ ಹಡಗುಗಳನ್ನು ಸಾಗಿಸಬಹುದಾದಂಥ ಅತಿ ಎತ್ತರದ ಸರೋವರ ಟಿಟಿಕಾಕಾ ಸರೋವರ, ಮತ್ತು ಭೂಮಿಯಲ್ಲೇ ಅತಿ ದಕ್ಷಿಣದಲ್ಲಿರುವ ನಗರ ಪ್ಯೂರ್ತೋ ತೋರೋ, ಚಿಲಿ ದೇಶದ ಗರ, ಇವುಗಳು ಕಂಡುಬರುತ್ತವೆ.

ಕೊಲಂಬಿಯ
                                               

ಕೊಲಂಬಿಯ

ಕೊಲಂಬಿಯ ಅಮೇರಿಕ ಸಂಯುಕ್ತ ಸಂಸ್ಥಾನವನ್ನು ಸೂಚಿಸಲು ಜನಪ್ರಿಯ ಕವನ ಸಾಹಿತ್ಯದಲ್ಲಿ ಉಪಯೋಗಿಸಲಾಗುತ್ತಿದ್ದ ಪದ. ಇದರಿಂದ ಪ್ರೇರಿತವಾಗಿ ಪ್ರಸಕ್ತವಾಗಿ ಅಮೇರಿಕ ದೇಶದ ಹಲವಾರು ವಸ್ತು ಮತ್ತು ಸ್ಥಳಗಳಿಗೆ ಇದೇ ಹೆಸರನ್ನು ನೀಡಲಾಗಿದೆ. ಕೊಲಂಬಿಯ ವಿಶ್ವವಿದ್ಯಾನಿಲಯ. ಕೊಲಂಬಿಯ, ದಕ್ಷಿಣ ಕೆರೊಲಿನ - ದಕ್ಷಿಣ ಕೆರೊಲಿನ ರಾಜ್ಯದ ರಾಜಧಾನಿ. ಬ್ರಿಟಿಷ್ ಕೊಲಂಬಿಯ - ಕೆನಡಾದ ಒಂದು ರಾಜ್ಯ. ಕೊಲಂಬಿಯ ನದಿ - ಉತ್ತರ ಅಮೇರಿಕ ಖಂಡ ಪಶ್ಚಿಮ ಭಾಗದಲ್ಲಿ ಹರಿಯುವ ನದಿ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →