Back

ⓘ ಮರಣ ಎಂದರೆ ಜೀವಿಯ ಅಂತ್ಯವಾಗುವುದು. ಇನ್ನೊಂದು ಅರ್ಥದಲ್ಲಿ ಈ ಜಗತ್ತಿನಿಂದ ಇಲ್ಲವಾಗುವುದು.ಜನನದಂತೆ ಮರಣವೂ ನಿಸರ್ಗ ಪ್ರೇರಿತ.ಮರಣವೆಂದರೆ ದೇಹದಿಂದ ಆತ್ಮ ಸ್ವತಂತ್ರವಾಗುವುದು ಎಂಬ ಭಾವನೆ ಜಗತ್ತ ..                                               

ಪಾಂಡು

ಮೊದಲ ಮಡದಿ ಅಂಬಿಕೆಯು ಮುನಿಯ ರೂಪವನ್ನು ಕಂಡು ಭಯದಿಂದ ತನ್ನ ಕಣ್ಣುಗಳನ್ನು ಮುಚ್ಚಿಕೊಂಡುದರ ಫಲವಾಗಿ,ಧೃತರಾಷ್ಟ್ರನು ಕುರುಡನಾಗಿ ಜನಿಸಿದನು. ಹೀಗಾಗಿ ಸತ್ಯವತಿಯು ಅಂಬಾಲಿಕೆಗೆ ಕಣ್ಣುಗಳನ್ನು ತೆರೆದಿರಬೇಕೆಂದು ಅಪ್ಪಣೆ ಮಾಡಿದಳು. ಆದರೆ ಅಂಬಾಲಿಕೆಯು ತನ್ನ ಕಣ್ಣುಗಳನ್ನು ತೆರೆದುಕೊಂಡೇ ಇದ್ದರೂ ಕೂಡ, ಮುನಿಯ ರೂಪವನ್ನು ನೋಡಿ ಕಳಾಹೀನಳಾದಳು ಬಿಳಿಚಿಕೊಂಡಳು. ಆದುದರಿಂದ ಪಾಂಡುವೂ ಕೂಡ ಕಳಾಹೀನನಾಗಿಯೇ ಜನಿಸಿದನು. ವಿಚಿತ್ರವೀರ್ಯನ ಮರಣಾ ನಂತರ ಆತನ ತಾಯಿಯಾದ ಸತ್ಯವತಿಯು ಋಷಿ ವೇದವ್ಯಾಸರಿಗೆ ಬರಹೇಳಿದಳು. ತನ್ನ ತಾಯಿಯ ಆಜ್ಞೆಯಂತೆ, ನಿಯೋಗ ಪದ್ಧತಿಯಿಂದ ಮಕ್ಕಳನ್ನು ಕರುಣಿಸಲು ಇವರು ವಿಚಿತ್ರವೀರ್ಯನ ಇಬ್ಬರೂ ಮಡದಿಯರ ಬಳಿಗೆ ಹೋದರು.

                                               

ಗಾಳಿ/ವಾಯು

ಹಿಂದೂ ಪುರಾಣದಲ್ಲಿ ಗಾಳಿಯು ಅಂಜನಾದೇವಿಯ ಪತಿ. ಗಾಳಿಗೆ ವಾಯು, ಎಲರು, ಹವಾ, ಉಸಿರು, ಜೀವಧಾತು, ಸಮೀರ, ದೆವ್ವ, ಸುಳಿವು, ಮಾರುತ ಮೊದಲಾದ ಹೆಸರು ಗಳಿವೆ. ಹನುಮಂತ ಮತ್ತು ಭೀಮರನ್ನು ವಾಯುಪುತ್ರರೆಂದು ಕರೆಯಲಾಗಿದೆ. ಗಾಳಿಯಲ್ಲಿ ಹಲವಾರು ವಿಧಗಳಿವೆ. ಮಂದಮಾರುತ, ಕುಳಿರ್ಗಾಳಿ, ಬಿರುಗಾಳಿ, ಚಂಡ ಮಾರುತ, ಸುಂಟರಗಾಳಿ, ಮಲಯ ಮಾರುತ, ರಾಶಿಗಾಳಿ, ಕೋಳೂರಗಾಳಿ, ಇತ್ಯಾದಿ. ಇದಲ್ಲದೆ ಈಶಾನ್ಯ ದಿಕ್ಕಿನಿಂದ ಬೀಸುವ ಗಾಳಿಯನ್ನು ಸ್ಮಶಾನ ಗಾಳಿ ಎಂದೂ, ಆಗ್ನೇಯ ದಿಕ್ಕಿನಿಂದ ಬೀಸುವ ಗಾಳಿಗೆ ಕುಂಬಾರ ಗಾಳಿ ಎಂದೂ, ವಾಯುವ್ಯ ದಿಕ್ಕಿನಿಂದ ಬೀಸುವ ಗಾಳಿಗೆ ಗಂಗೆಗಾಳಿ ಎಂದೂ ಕರೆಯುತ್ತಾರೆ. ಪಂಚಭೂತಗಳಲ್ಲಿ ಗಾಳಿಗೆ ವಿಶಿಷ್ಟ ಸ್ಥಾನವಿದೆ.

                                               

ಹಿರಣ್ಯ ಕಶಿಪು

ಹೊನ್ನು ಮತ್ತು ಹೆಣ್ಣು ಇದರ ಆಸಕ್ತಿಯಲ್ಲಿ ಮತ್ತು ಅದನ್ನು ಭೋಗಿಸಲು ಅಮರತ್ವ ವರವನ್ನು ಕೇಳಿದ. ಬ್ರಹ್ಮನು ಕೊಡದಿದ್ದಾಗ ನನಗೆ ಮನುಷ್ಯನಿಂದ, ಪ್ರಾಣಿಗಳಿಂದ, ದೇವತೆಗಳಿಂದ, ಭೂ, ಜಲ, ವಾಯು ಮತ್ತು ಯಾವುದೇ ಆಯುಧಗಳಿಂದಲೂ ಮರಣ ಸಂಭವಿಸದಂತೆ ವರವನ್ನು ಪಡೆದನು. ಇದರಿಂದ ನನಗೆ ಮರಣ ಇಲ್ಲವೆಂದು ಮೂರ್ಖನಂತೆ ಯೋಚಿಸಿದನು. ಆಗ ಬ್ರಹ್ಮನು ಸಕಲ ಗ್ರಹಗಳ ಬೌತಿಕ ಸೃಷ್ಟಿಕರ್ತನಾದ ಸ್ವತ; ತಾನೇ ಅಮರನಾಗಿಲ್ಲದಿರುವಾಗ ತಾನು ಅಂತಹ ವರವನ್ನು ನೀಡಲು ಸಾದ್ಯವಿಲ್ಲ ಎಂದನು.ಭಗವದ್ಗೀತೆ ೮-೧೭ ರಲ್ಲಿ ಬ್ರಹ್ಮನು ಬಹು ದೀರ್ಘ ಕಾಲ ಜೀವಿಸುವವನಾದರು ಅವನು ಮರಣ ಹೊಂದದಿರುವುದಿಲ್ಲ ಎಂಬುವುದು ದೃಡಪಟ್ಟಿದೆ. ಕೊನೆಗೆ ಭಗವಂತನು ಅರ್ಧ ಮಾನವ ಅರ್ಧ ಸಿಂಹ ಹೀಗೆ ನರಸಿಂಹ ಅವತಾರದಲ್ಲಿ ಕೊಲ್ಲಲ್ಪಟ್ಟನು.ಅವನು ಕಲ್ಪನಾತೀತವಾದ ಅದ್ಭುತ ವ್ಯಕ್ತಿಯ ತೊಡೆಯಲ್ಲಿ ನಖಗಳಿಂ ...

                                               

ಪಾರ್ವತಿ

ತಾರಕಸುರ ರಕ್ಕಸರ ನಾಯಕ, ಅರಸ, ಅತುಳ ಪರಾಕ್ರಮಿ. ಸಿಂಹಾಸನವೇರುತ್ತಲೆ ಅವನು ಮಾಡಿದ ಕೆಲಸವೆಂದರೆ ತನ್ನ ರಕ್ಷಣೆಗಾಗಿ ಶಕ್ತಿವರ್ದನೆಗಾಗಿ ಪರಬ್ರಹ್ಮನನ್ನ ಕುರಿತು ಮಾಡಿದ ಕಠಿಣ ತಪಸ್ಸು.ಹಲವು ವರ್ಷ ಒಂಟಿಕಾಲಿನಲ್ಲಿ ನಿಂತು ಧ್ಯಾನ ಮಾಡಿದ ನಂತರ ಮರದಿಂದ ಕಾಲುಗಳಲ್ಲಿ ಕೊಂಬೆಹಿಡಿದು ತಲೆಕೆಳಗಾಗಿ ನೇತಾಡುತ್ತ ಕೆಲವು ವರ್ಷ ತಪಸ್ಸನ್ನು ಆಚರಿಸಿದ. ನಿರಾಹಾರನಾದ, ಕಡೆಗೆ ತನ್ನ ಪ್ರಾಣವನ್ನು ಅರ್ಪಿಸಲು ಸಿದ್ದನಾದ. ಆಗ ಬ್ರಹ್ಮನು ಬರಲೇ ಬೇಕಾಯಿತು, ಬಂದವನು ಕೇಳಿದ "ತಾರಕ ಏಕಾಗಿ ಈ ಕಠಿಣ ತಪ ನಿನಗೆ ಏನು ಬೇಕು ಹೇಳು? ತಾರಕ ಕೇಳಿದ ವರವಾದರೊ ಅಷ್ಟೆ ವಿಚಿತ್ರವಾಗಿತ್ತು "ನನಗೆ ಏಳು ವರ್ಷದ ಬಾಲಕನಿಂದ ಮಾತ್ರ ಮರಣ ಬರಲಿ, ವಿಷ್ಣು ಆದಿಯಾಗಿ ಉಳಿದ ಯಾರಿಂದಲೂ ಮರಣ ಬಾರದಿರಲಿ" ಎಂದು ಮೊದಲನೆ ವರ ಕೇಳಿದ, ಎರಡನೆಯದಾಗಿ "ಅ ಏಳು ವರ್ಷದ ಬಾಲಕ ಶಿವಪುತ ...

                                               

ಚಾರುಕೀರ್ತಿ ಭಟ್ಟಾರಕ ಸ್ವಾಮೀಜೀ

ಸ್ವಸ್ಥಿ ಶ್ರಿ ಚಾರುಕೀರ್ತಿ ಅನ್ನುವ ಬಿರುದಾಂಕಿತ ಜೈನಭಟ್ಟಾರಕ ಸ್ವಾಮೀಜಿಗಳು ಕರ್ನಾಟಕದಲ್ಲಿ ಇದ್ದಾರೆ.ಮೂಲತ ಶ್ರವಣ ಬೆಳಗೊಳದ ಜೈನ ಮಠದ ಸ್ವಾಮೀಜಿಗಳಿಗೆ ೧೩ನೆ ಶತಮಾನದಲ್ಲಿ ಹೊಯ್ಸಳ ದೊರೆ ಬಲ್ಲಾಳರಾಯನು ನೀಡಿದ ಬಿರುದು" ಚಾರುಕೀರ್ತಿ" ಆಗಿನಿಂದ ಆ ಪೀಠದ ಸ್ವಾಮೀಜಿಗಳಿಗೆ ಸ್ವಸ್ಥಿ ಶ್ರಿ ಚಾರುಕೀರ್ತಿ"ಎಂದೆ ಕರೆಯಲಾಗುತ್ತಿದೆ.ಅದೇ ಸ್ವಾಮೀಜಿಗಳು ದಕ್ಷಿಣ ಕನ್ನಡದ ನಲ್ಲೂರು ಗ್ರಾಮದಲ್ಲಿ ಜೈನಮಠ ವನ್ನು ಸ್ಥಾಪನೆ ಮಾಡುತ್ತಾರೆ.ಅಲ್ಲಿಂದ ಮುಂದೆ ಹೋಗಿ ಮುಡುಬಿದ್ರೆಯಲ್ಲಿ ಮತ್ತೆ ಒಂದು ಮಠವನ್ನು ಸ್ಥಾಪನೆ ಮಾಡುತ್ತಾರೆ.ಅವರೆ ಆಧ್ಯಶ್ರಿ ಚಾರುಕೀತಿ೯ ಭಟ್ಟಾರಕ ಪ೦ಡಿತಾಚಯ೯ವಯ೯ ಮಹಾಸ್ವಾಮೀಜಿ ಗಳವರು ಕೆಲ ಕಾಲ ನ೦ತರ ಅವರ ನಲ್ಲೂರಿ ನಲ್ಲಿ ಸಮಾಧಿ ಸಲ್ಲೇಖನ ವಾಗುತ್ತದೆ ಇದಕ್ಕೆ ಜೈನ ಪರಿ ಭಾಷೆ ಯಲ್ಲಿ ವ್ರತ ಮರಣ ಎ೦ದು ಹೇಳುತ್ತಾರೆ.ಇದು ಶಾ೦ತ ...

                                               

ಆಳ್ವಿಕೆ

ಆಳ್ವಿಕೆ ಎಂದರೆ ಒಂದು ರಾಷ್ಟ್ರದ, ಅಥವಾ ಜನರ ರಾಜನಾಗಿ/ರಾಣಿಯಾಗಿ ಅಧಿಕಾರದಲ್ಲಿ ಒಬ್ಬ ವ್ಯಕ್ತಿಯ ಅಥವಾ ರಾಜವಂಶದ ಸುಪರ್ದಿನ ಅವಧಿ. ಬಹುತೇಕ ಆನುವಂಶಿಕ ರಾಜಪ್ರಭುತ್ವಗಳಲ್ಲಿ ಮತ್ತು ಕೆಲವು ಚುನಾಯಿತ ರಾಜಪ್ರಭುತ್ವಗಳಲ್ಲಿ ಸಾರ್ವಭೌಮನ ಆಳ್ವಿಕೆಯ ಅಥವಾ ಸ್ಥಾನಿಕತ್ವದ ಅವಧಿಯ ಯಾವುದೇ ಮಿತಿಗಳಿಲ್ಲ, ಅಥವಾ ಅಧಿಕಾರಾವಧಿ ಇಲ್ಲ. ಹಾಗಾಗಿ, ಆಳ್ವಿಕೆಯು ಸಾಮಾನ್ಯವಾಗಿ ರಾಜನು/ರಾಣಿಯು ಮರಣ ಹೊಂದುವವರೆಗೆ ಇರುತ್ತದೆ. ಇದಕ್ಕೆ ಅಪವಾದವೆಂದರೆರಾಜಪ್ರಭುತ್ವವು ರದ್ದುಗೊಂಡಾಗ ಅಥವಾ ರಾಜನು/ರಾಣಿಯು ಸ್ಥಾನವನ್ನು ತೊರೆದರೆ ಅಥವಾ ಆ ಸ್ಥಾನದಿಂದ ಪದಚ್ಯುತಗೊಂಡ ಸಂದರ್ಭದಲ್ಲಿ. ಚುನಾಯಿತ ರಾಜಪ್ರಭುತ್ವಗಳಲ್ಲಿ, ಅಧಿಕಾರದಲ್ಲಿ ರಾಜನ/ರಾಣಿಯ ನಿಗದಿತ ಕಾಲಾವಧಿ ಇರಬಹುದು ಉದಾ., ಮಲೇಷ್ಯಾ. ಗಮನಾರ್ಹ ಆಳ್ವಿಕೆಗಳಲ್ಲಿ ಈ ಮುಂದಿನವು ಸೇರಿವೆ. ರಾಣಿ ವಿಕ್ಟೋ ...

ಮರಣ
                                     

ⓘ ಮರಣ

ಮರಣ ಎಂದರೆ ಜೀವಿಯ ಅಂತ್ಯವಾಗುವುದು. ಇನ್ನೊಂದು ಅರ್ಥದಲ್ಲಿ ಈ ಜಗತ್ತಿನಿಂದ ಇಲ್ಲವಾಗುವುದು.ಜನನದಂತೆ ಮರಣವೂ ನಿಸರ್ಗ ಪ್ರೇರಿತ.ಮರಣವೆಂದರೆ ದೇಹದಿಂದ ಆತ್ಮ ಸ್ವತಂತ್ರವಾಗುವುದು ಎಂಬ ಭಾವನೆ ಜಗತ್ತಿನ ಎಲ್ಲ ದೇಶಗಳಲ್ಲಿಯೂ ಇದೆ.ಎಲ್ಲಾ ಧರ್ಮಗಳಲ್ಲಿಯೂ ಮರಣ ಸಂಬಂದ ಕಲ್ಪನೆಗಳಲ್ಲಿ ಸಾದೃಶ್ಯವಿದೆ.ಮನುಷ್ಯ ಸಹಜವಾದ ಭೀತಿ,ನಿರೀಕ್ಷೆ,ಆಶೋತ್ತರಗಳನ್ನು ಮರಣದ ಕಲ್ಪನೆ ಪ್ರತಿಬಿಂಬಿಸುತ್ತದೆ.

ಸಾವು, ಜೀವಿಯೊಂದರಲ್ಲಿ ಇರುವ ಎಲ್ಲಾ ಜೈವಿಕ ಕಾರ್ಯಗಳು ಮುಕ್ತಾಯ ಆಗುತ್ತವೆ. ಸಾಮಾನ್ಯವಾಗಿ ಸಾವಿನ ಬಗ್ಗೆ ಸೆಳೆಯುವ ವಿಷಯಗಳು ಜೀವ ವಯಸ್ಸಾದಾಗ ವೃದ್ಧಾಪ್ಯ. ಭಕ್ಷಣೆ, ಅಪೌಷ್ಟಿಕತೆ, ರೋಗ, ಆತ್ಮಹತ್ಯೆ, ನರಹತ್ಯೆ, ಹಸಿವು, ನಿರ್ಜಲೀಕರಣ, ಮತ್ತು ಅಪಘಾತಗಳು ಅಥವಾ ಆಘಾತ ಟರ್ಮಿನಲ್ ಗಾಯ ಪರಿಣಾಮವಾಗಿ ಸಾವು ಬರಬಹುದು. ಸಾವು ಸಾಮಾನ್ಯವಾಗಿ ಮತ್ತು ನಿರ್ದಿಷ್ಟವಾಗಿ ಮಾನವರಿಗೆ, ಒಂದು ಕೆಟ್ಟ ಅಥವಾ ಅಹಿತಕರ ಸಂದರ್ಭವಾಗಿ ಪರಿಗಣಿಸಲಾಗುತ್ತದೆ.

                                     

1. ಇತಿವೃತ್ತ

 • ನಿಮ್ಮಿಂದ ಇನ್ನು ಯಾವತ್ತೂ ವಾಪಸ್‌ ಮನೆಗೆ ಬರುವುದಕ್ಕೆ ಆಗುವುದಿಲ್ಲ. ನಿಮ್ಮ ಜೊತೆ ನೆನಪುಗಳು ಬಿಟ್ಟರೆ ಬೇರೇನೂ ಇರುವುದಿಲ್ಲ. ಒಪ್ಪಿಕೊಳ್ಳಲೇಬೇಕಾದ ಸತ್ಯ ಇದು" ಹುಟ್ಟು ನಿಶ್ಚಿತ: ಸಾವು ಖಚಿತ. ಸಾವು ತುಂಬ ನೋವನ್ನು ತರುವಂತಹುದು. ಸಾವೆಂಬ ಅತಿಥಿ ಸಣ್ಣದೊಂದು ಮುನ್ಸೂಚನೆಯನ್ನೂ ಕೊಡದೆ ಬರುತ್ತದೆ. ಅದು ಕಾಲಾತೀತ, ಪಕ್ಷಾತೀತ ಮತ್ತು ಜಾತ್ಯಾತೀತ.
 • ಮನುಷ್ಯ ಎಷ್ಟೆಲ್ಲ ಬೆಳೆದರೂ, ಏನೆಲ್ಲ ಸಾಧಿಸಿದರೂ, ವೈಜ್ಞಾನಿಕವಾಗಿ - ವೈಚಾರಿಕವಾಗಿ ಪ್ರಕೃತಿಗೇ ಎದುರಾಗಿ ಏನೇನೆಲ್ಲ ವಿಕ್ರಮಗಳನ್ನು ತನ್ನದಾಗಿಸಿಕೊಂಡರೂ, ಇನ್ನೂ ಬೇಧಿಸಲಾಗದ ಒಂದು ವಿಸ್ಮಯವೆಂದರೆ ಸಾವು. ಸಾವನ್ನು ಬೇಧಿಸೋದಿರಲಿ ಅದಕ್ಕೊಂದು ಪರಿಪೂರ್ಣವಾದ ವ್ಯಾಖ್ಯಾನವನ್ನೂ ನಮ್ಮಿಂದ ಕೊಡಲಾಗಿಲ್ಲ ಈವರೆಗೂ." ಸಾವು ಹೇಗೆ ಅಂದರೆ, ಯಾರೋ ಬಂದು ನಿಮ್ಮ ಮನೆಗೆ ಬೀಗ ಹಾಕಿ ಬೀಗದ ಕೈಯನ್ನು ತೆಗೆದುಕೊಂಡು ಹೋದ ಹಾಗೆ.
                                     

2. ಸಾವಿನ ವಿಧಗಳು

 • "ತೃಣಮಪಿ ನ ಚಲತಿ"- ಎಂದರೆ ದೇವನ ಅನುಜ್ಞೆ ಇಲ್ಲದೆ ಏನೊಂದು ಚಲಿಸುವುದಿಲ್ಲ. ಅಂದರೆ ದೇವರಿಗೂ, ಸಾವಿಗೂ ಏನೊ ನಂಟಿರಬೇಕೆಂಬ ಗುಮಾನಿ ಎದುರಾಗುತ್ತದೆ. ಸಾವೆಂಬುದು ಸೈಕಲ್, ಸ್ಕೂಟರ್, ಕಾರು, ಬಸ್, ರೈಲು, ವಿಮಾನ ಅಪಘಾತದ ರೂಪದಲ್ಲಿ ಬರಬಹುದು. ಜ್ವರದ ನೆಪದಲ್ಲಿ ಬರಬಹುದು. ಹೃದಯಾಘಾತದ ಕಾರಣ ಹೇಳಬಹುದು.
 • ಅಷ್ಟೇ ಅಲ್ಲ, ಸಾವೆಂಬುದು ವೈದ್ಯರ ರೂಪದಲ್ಲೇ ಬಂದು, ಹಲೋ ಹೇಳಿ ಉಸಿರು ನಿಲ್ಲಿಸಬಹುದು! ಮುಪ್ಪಿನ ಸಾವು, ಅಕಾಲ ಮರಣ, ಆತ್ಮಹತ್ಯೆ, ಕೊಲೆ, ಹೃದಯಾಪಘಾತ, ಕಾಯಿಲೆಯಿಂದಾಗುವ ಮರಣಗಳು, ಅಪಘಾತಗಳಿಂದಾಗುವ ಮರಣಗಳು, ದಿಢೀರ್ ಸಾವು ಇತ್ಯಾದಿ.
                                     

3. ಸಾವಿನ ನಂತರ

 • ಮರಣವು ದೇಹಕ್ಕೆ ಮಾತ್ರ; ಪ್ರಾಣವು ಹಾರುತ್ತದೆ; ಮನವು ಜಾರುತ್ತದೆ. ದೇಹವು ಕಳಚಿದರೆ, ದೇಹಿಯು ಹೊಸದೇಹವನ್ನು ಧಾರಣ ಮಾಡುತ್ತಾನೆ. ಮರಣಕ್ಕೆ ದೇಹ ಬಿಡುವುದದು ಅನ್ನುತ್ತಾರೆ. ಅದು ನಿರ್ಯಾಣ ಮಹೋತ್ಸವವೆನಿಸುತ್ತದೆ. ಅಂತ್ಯವಿಧಿಯು ಸ್ಮಶಾನ ಯಾತ್ರೆಯೆನಿಸುತ್ತದೆ. ಬದುಕಿರುವ ವ್ಯಕ್ತಿಗಿರುವ ಬೆಲೆ ಸತ್ತ ಮೇಲೆ ಇರುವುದಿಲ್ಲ.ಸಾವು ಒಂದು ಜೀವಿಯ ನಿರ್ಗಮನಕ್ಕೆ ಕಾರಣವಾದ ಎಲ್ಲಾ ಜೈವಿಕ ಕಾರ್ಯಗಳನ್ನು ಸ್ಥಗಿತಗೊಳಿಸುವುದು.
 • ಸಾವಿನ ಮರುಕ್ಷಣವೇ ಸತ್ತ ವ್ಯಕ್ತಿಯ ದೇಹ ಕೊಳೆಯಲು ಆರಂಭಿಸಿ, ದುರ್ವಾಸನೆ ಬೀರುತ್ತದೆ. ಹಾಗಾಗಿ ಬೇಗನೆ ಶವವನ್ನೂ ಹೂಳುವ ಮಣಿನಿಂದ ಬಂದ ಕಾಯ ಮಣ್ಣಿಗೆ, ಸುಡುವ ಪಂಚಭೂತಗಳಲ್ಲಿ ಲೀನ ಪದ್ದತಿ ಬೆಳೆದು ಬಂದಿದೆ. ಸಾವಿನ ನಂತರ ಸಂಸ್ಮರಣಾ ಸಮಾರಂಭಗಳಲ್ಲಿ ವಿವಿಧ ಶೋಕಾಚರಣೆಯ ಅಥವಾ ಅಂತ್ಯಕ್ರಿಯೆ ಅಭ್ಯಾಸಗಳು ಸೇರಿವೆ.
 • ವಿಶ್ವದ ಸಂಸ್ಕೃತಿಗಳಲ್ಲಿ ಶವದ ಸಂಸ್ಕಾರ ವಿಧಾನಗಳು ವಿವಿಧ ಬಗೆಯವಾದರೂ, ಸಾಮಾನ್ಯವಾಗಿ ಶವದ ಅಂತ್ಯಕ್ರಿಯೆಯನ್ನು ಸತ್ತ ವ್ಯಕ್ತಿಯ ಹತ್ತಿರದ ಬಂಧುಗಳು ನಡೆಸುವುದು ವಾಡಿಕೆ. ಬೇರೆ ಬೇರೆ ಜನಾಂಗಳಲ್ಲಿ ಶವ ಸಂಸ್ಕಾರದ ಆಚರಣೆ ಬಹಳ ಭಿನ್ನವಾಗಿರುತ್ತದೆ. ಬುಡಕಟ್ಟು ಜನರು ಶವವನ್ನು ಹೂಳದೆ, ಸುಡದೆ, ಕಾಡಿಗೆ ತೆಗೆದುಕೊಂಡು ಹೋಗಿ ಇಟ್ಟು ಬರುತ್ತಾರೆ. ಆ ಶವ ಕಾಡು ಪ್ರಾಣಿಗಳಿಗಾದರೂ ಆಹಾರವಾಗಲಿ ಎಂಬ ಆಶಯದಿಂದ.
                                     

4. ದೇಹದಾನ

 • ದೇಹದಾನದಿಂದ ಆಗುವ ಮೂಲ ಕಾರ್ಯಗಳೆಂದರೆ ಮಾನವಕೋಟಿಗೆ ಮೃತದೇಹದ ಮೇಲೆ ಆಗುವ ಸಂಶೋಧನೆ ಫಲ ಮುಖ್ಯವಾದುದು. ಅದಕ್ಕಾಗಿಯೇ ದೇಹದಾನ ಪ್ರಮುಖವಾದುದು. ದೇಹದಾನದ ಪ್ರಕ್ರಿಯೆ ಅತ್ಯಂತ ಸರಳ ಹಾಗೂ ಸುಲಭವಾದುದು. ದೇಹದಾನ ಪಡೆಯುವ ಸಂಸ್ಥೆಯಲ್ಲಿ ನಿರ್ಧಿಷ್ಟ ಅರ್ಜಿಗಳಿದ್ದಲ್ಲಿ ಅದನ್ನು ಸಂಪೂರ್ಣವಾಗಿ ತುಂಬಿ ಮೊದಲೇ ಸಂಸ್ಥೆಗೆ ನೀಡಿ ನೊಂದಾಯಿಸಿದರೆ ಸಾಕು. ದೇಹದಾನ ಅರ್ಜಿಯೇ ದೇಹದಾನ ಸಮ್ಮತಿಯ ಉಯಿಲು.
 • ಈಗಾಗಲೇ ಸಾವಿರಾರು ಸಾರ್ವಜನಿಕರು ದೇಹದಾನಕ್ಕೆ ಮುಂದಾಗಿ ನೋಂದಣಿ ಮಾಡಿಸಿದ್ದಾರೆ. ಪ್ರಮುಖರಲ್ಲಿ ಕರ್ನಾಟಕದ ಉಚ್ಚನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಶ್ರೀ ಡಿ. ಎಂ. ಚಂದ್ರಶೇಖರಯ್ಯ, ಶ್ರೀ ಶಿಕಾರಿಪುರ ಹರಿಹರೇಶ್ವರ ಅವರುಗಳ ಮರಣಾನಂತರ ದೇಹವನ್ನು ವೈದ್ಯಕೀಯ ಸಂಶೋಧನೆಗೆ ಈಗಾಗಲೇ ನೀಡಿದ್ದಾರೆ. ಈ ದಿಶೆಯಲ್ಲಿ ಪ್ರಸಿದ್ದ ಸಿನಿಮಾ ನಟ ಲೋಕೇಶ್ ಅವರ ಸಾವಿನ ನಂತರ ಅವರ ದೇಹದಾನ ಮಾಡಲಾಯಿತು. ಸತ್ತಮೇಲೆ ಮಣ್ಣಾಗುವ, ಹಿಡಿ ಬೂದಿಯಾಗುವ ದೇಹವನ್ನು ವೈಜ್ಞಾನಿಕ ಸಂಶೋಧನೆಗೆ ನೀಡಿದ, ನೀಡುತ್ತಿರುವ, ನೀಡುವ ಎಲ್ಲರೂ ಪ್ರಮುಖರೇ, ಗಣ್ಯರೇ ಎಂಬುದರಲ್ಲಿ ಎರಡು ಮಾತಿಲ್ಲ.
 • ಅಲ್ಲದೆ ದೇಹದಾನ ಉಯಿಲು ಸಂಸ್ಥೆಯಲ್ಲಿ ಅಂಗೀಕಾರವಾದೊಡನೆಯೇ ದೇಹದಾನಿಗೆ ಲ್ಯಾಮಿನೇಟ್ ಮಾಡಿದ ಹಾಗೂ ಸಂಪೂರ್ಣ ವಿವರಗಳುಳ್ಳ ಗುರುತು ಚೀಟಿಯನ್ನು ಸಂಸ್ಥೆ ತಲುಪಿಸುವುದು. ಆ ಗುರುತು ಚೀಟಿಯನ್ನು ದೇಹದಾನ ಮಾಡಿದ ವ್ಯಕ್ತಿಯು ಯಾವಾಗಲೂ ತನ್ನ ಬಳಿ ಇಟ್ಟುಕೊಂಡಿರುವುದು ಅವಶ್ಯಕ. ಆಗ ಆತನಿಗೆ ಯಾವುದೇ ಆಕಸ್ಮಿಕ ಉಂಟಾದಾಗ ಅವರ ಅಂತಿಮ ಇಚ್ಚೆಯನ್ನು ನೆರವೇರಿಸಲು ಅನುಕೂಲವಾಗುವುದು.
 • ಮರಣ ಹೊಂದಿದ ಕೂಡಲೇ ದೇಹದಾನ ಪಡೆಯುವ ಸಂಸ್ಥೆಗೆ ತಕ್ಷಣ ದೂರವಾಣಿ ಮೂಲಕ ತಿಳಿಸಬೇಕು. ಮೃತಪಟ್ಟ ಆರು ಗಂಟೆಯೊಳಗೆ ದೇಹವನ್ನು ಸಂಸ್ಥೆಗೆ ತಲುಪಿಸಿದರೆ ದೇಹದಾನಿಯ ನೇತ್ರಗಳನ್ನು ತೆಗೆದು ಅಂಧರ ಬಾಳಿನ ನೇತ್ರಜ್ಯೋತಿಯನ್ನಾಗಿ ಮಾಡಲಾಗುವುದು. ಮೃತದೇಹವನ್ನು ಸಂಬಂಧಿಸಿದ ಸಂಸ್ಥೆಯೇ ಸುದ್ದಿ ತಲುಪಿದ ಕೂಡಲೇ ತರಿಸಿಕೊಳ್ಳುವ ವ್ಯವಸ್ಥೆ ಮಾಡುವುದು.
 • ಸಾವಿನ ನಂತರ ದೇಹದಾನ ಮಾಡುವ ಕ್ರಿಯೆಯೂ ವೈಜ್ಞಾನಿಕವಾಗಿ ಸಾಧ್ಯವಿದೆ. ಸತ್ತನಂತರ ನಮ್ಮ ದೇಹವನ್ನು ಮಣ್ಣು ಮಾಡುವ, ಸುಡುವ ಬದಲು ನಿರ್ಧಿಷ್ಟ ಅವಧಿಯಲ್ಲಿ ದಾನ ಮಾಡಿದ ದೇಹದಿಂದ ಇತರ ನೊಂದವರಿಗೆ ಉಪಯೋಗವಾಗುವ ಅಂಗಗಳನ್ನು ತೆಗೆದು, ನಂತರ ದೇಹವನ್ನು ಸಂರಕ್ಷಿಸಿಡಲಾಗುವುದು. ಆ ಮೃತದೇಹವನ್ನು ವೈದ್ಯಕೀಯ ವಿಜ್ಞಾನ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗಳಿಗೆ ಬಳಸಲಾಗುವುದು.
 • ಉಯಿಲಿನಲ್ಲಿ ದೇಹದಾನ ಮಾಡುವ ವ್ಯಕ್ತಿಯ ಎಲ್ಲ ವಿವರಗಳು, ದೇಹದಾನದಿಂದ ಹಾಗೂ ನಂತರದ ಪ್ರಕ್ರಿಯೆಗಳಿಗೆ ಒಪ್ಪಿಗೆ ನಿಬಂಧನೆ ಹಾಗೂ ವಾರಸುದಾರರ ಒಪ್ಪಿಗೆ ಇರುತ್ತದೆ. ಇದನ್ನು ಸಲ್ಲಿಸಿದ ನಂತರ ಸಂಸ್ಥೆಯು ತನ್ನ ಅನುಮೋದನೆ ಸೂಚಕವಾಗಿ ದೇಹದಾನ ಪ್ರಮಾಣ ಪತ್ರ ನೀಡುತ್ತದೆ. ಅದರಲ್ಲಿ ದೇಹದಾನ ಮಾಡಿದ ವ್ಯಕ್ತಿಯ ಪೂರ್ಣ ವಿವರ, ಮರಣಾನಂತರ ಬಂಧುಗಳು ಮಾಡಬೇಕಾದ ಕ್ರಿಯೆಗಳ ವಿವರಗಳು ಪ್ರಮಾಣ ಪತ್ರದಲ್ಲಿರುತ್ತದೆ.


                                     

5. ಶರಣರ ವಚನಗಳಲ್ಲಿ ಸಾವಿನ ಪರಿಕಲ್ಪನೆ

ಶರಣರು ಮರಣವೇ ಮಾನವಮಿ ಎಂದರು. ಹಾಗಾಗಿ ಅವರ ವಚನಗಳಲ್ಲಿ ಮರಣ ವಿಶೇಷವಾಗಿ ಬಿತ್ತರಗೊಂಡಿದೆ. ಅವರ ದೃಷ್ಟಿಯಲ್ಲಿ-" ಮರಣವೆಂದರೆ ಸರ್ವನಾಶವಲ್ಲ; ಒಂದರಿಂದ ಇನ್ನೊಂದರ ಮಾರ್ಪಾಡು. ಮರಣವು ನವಜನ್ಮದ ತಾಯಿ; ನವಜೀವನದ ಬಸಿರು; ಮುಂದುವರಿಯುವ ಜೀವನಕ್ಕೆ ಹೊಸ ಏರ್ಪಾಡು; ಮರಣದಿಂದ ಹಳೆಯ ಭೂಮಿಕೆಯ ಸೀಮೆದಾಟಿ, ಹೊಸಸೀಮೆಯಲ್ಲಿ ಕಾಲಿರಿಸಿಸುವ ಬದಲಾವಣೆ".

ಕಾನ್ವೆಂಟ್
                                               

ಕಾನ್ವೆಂಟ್

ಕಾನ್ವೆಂಟ್- ಕ್ರೈಸ್ತ ಧರ್ಮ ಸನ್ಯಾಸಿನಿಯರ ಮಠ ; ಇದೊಂದು ಧಾರ್ಮಿಕ ಸಂಸ್ಥೆ. ದೇವರ ವಿಶೇಷ ಕರೆಗೆ ಓಗೊಟ್ಟ ಬಾಲಸಂನ್ಯಾಸಿನಿಯರು ತಮ್ಮ ಸರ್ವಸ್ವವನ್ನೂ ದೇವರಿಗೆ ಅರ್ಪಿಸಿ, ಮರಣ ಪರ್ಯಂತ ಬಡತನ, ವಿಧೇಯತೆ, ಮತ್ತು ವೈರಾಗ್ಯವನ್ನು ಪಾಲಿಸುವುದಾಗಿ ವ್ರತ ತೊಟ್ಟು ಧ್ಯಾನ ಮತ್ತು ಪರೋಪಕಾರದ ಜೀವನವನ್ನು ಈ ಸಂಸ್ಥೆಗಳಲ್ಲಿದ್ದು ನಡೆಸುತ್ತಾರೆ. ದೇವಸೇವೆ ಮತ್ತು ಭ್ರಾತೃಪ್ರೇಮಗಳೇ ಇವರ ಜೀವನದುದ್ದೇಶ. ಸಾಮಾನ್ಯವಾಗಿ ಈ ಸಂಸ್ಥೆಗಳು ಮತಪ್ರಸಾರ, ಅನಾಥಪೋಷಣೆ, ವಿದ್ಯಾಭ್ಯಾಸ, ಆಸ್ಪತ್ರೆ ನಡೆಸುವುದು-ಮುಂತಾದ ಕೆಲಸಗಳನ್ನು ನಿರ್ವಹಿಸುತ್ತವೆ.

ಜನ್ಮದಿನ
                                               

ಜನ್ಮದಿನ

ಜನ್ಮದಿನ ವು ಒಬ್ಬ ವ್ಯಕ್ತಿಯು ತನ್ನ ಜನನದ ವಾರ್ಷಿಕೋತ್ಸವವನ್ನು ಆಚರಿಸುವ ದಿನ. ಜನ್ಮದಿನಗಳನ್ನು ಅನೇಕ ಸಂಸ್ಕೃತಿಗಳಲ್ಲಿ ಆಚರಿಸಲಾಗುತ್ತದೆ, ಹಲವುವೇಳೆ ಉಡುಗೊರೆ, ಪಾರ್ಟಿ, ಅಥವಾ ಪರಿವರ್ತನಾ ವಿಧಿಯೊಂದಿಗೆ. ಜನ್ಮದಿನದ ಆಚರಣೆಯು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ವಯಸ್ಸನ್ನು ಗುರುತಿಸುತ್ತದೆಂದು ಭಾವಿಸಲಾಗುತ್ತದೆ, ಮತ್ತು ಸಾಂಪ್ರದಾಯಿಕವಾಗಿ ಮರಣ ಸಂಭವಿಸಿದಾಗ ನಿಲ್ಲುತ್ತದೆ, ಮತ್ತು ಅವರು ಜೀವಂತವಾಗಿದ್ದರೆ, ಅವರಿಗೆ ಇಷ್ಟು ವಯಸ್ಸು ಎಂದು ಹೇಳುತ್ತದೆ.

                                               

ಸಿಸ್ಟರ್ ಕ್ಲೇರ್

ಸಿಸ್ಟರ್ ಕ್ಲೇರ್ ಎಸ್‌ಎಂಎಂಐ ನವರು ಒರ್ವ ಕ್ರೈಸ್ತ ಸಂನ್ಯಾಸಿನಿ ಹಾಗೂ ಕಲಾವಿದೆ, ಆಕೆಯ ಕುಂಚದಿಂದ ಸುಮಾರು ೭೫೦ ವರ್ಣಚಿತ್ರಗಳು ಜೀವ ತಳೆದಿವೆ. ಭಾರತೀಯ ಕಲಾಪ್ರಕಾರದಲ್ಲಿ ಕ್ರೈಸ್ತ ಸನ್ನಿವೇಶಗಳನ್ನು ಚಿತ್ರಿಸುವ ವೈಶಿಷ್ಟ್ಯ ಆಕೆಯ ಕೃತಿಗಳಲ್ಲಿದೆ. ಹಾಗಾಗಿ, ಸಮಕಾಲೀನ ಭಾರತೀಯ ಕ್ರೈಸ್ತ ಕಲಾವಿದರ ಪೈಕಿ ಆಕೆಯ ಹೆಸರು ಎದ್ದು ಕಾಣುತ್ತದೆ. ಸಿಸ್ಟರ್ ಕ್ಲೇರ್ ನವರ ಕಲೆಯ ಕುರಿತು ಅನೇಕ ಪುಸ್ತಕಗಳು ಹೊರಬಂದಿವೆ, ಭಿತ್ತಿಚಿತ್ರಗಳು, ಬ್ಲಾಗುಗಳು, ಅಲ್ಲದೆ ಭಾರತಾದ್ಯಂತದ ಕಥೋಲಿಕ ಪುಸ್ತಕದಂಗಡಿಗಳಲ್ಲಿ ಅವರ ಸಂದರ್ಭೋಚಿತ ದೃಶ್ಯಗಳುಳ್ಳ ಕ್ರಿಸ್ಮಸ್ ಕಾರ್ಡುಗಳು ಸಿಗುತ್ತವೆ.

ಅಖಮನಿಸ್
                                               

ಅಖಮನಿಸ್

ಅಖಮನಿಸ್ ಪ್ರ.ಶ.ಪು. ಸು. 7ನೆಯ ಶತಮಾನ. ಪರ್ಷಿಯ ರಾಜವಂಶದ ಮೂಲಪುರುಷ. ಡೇರಿಯಸ್ಸನ ಬೆಹಿಸ್ತನ್ ಶಾಸನದ ಪ್ರಕಾರ ತೆಸ್ಪಿಸ್ಸನ ತಂದೆ ಮತ್ತು ಕೈರಸ್ನ ತಾತ. ಮೀಡರಿಗೆ ಅಧೀನವಾಗಿದ್ದ ಔಷಾನ್ ಎಂಬ ಪ್ರಾಂತವನ್ನಾಳುತ್ತಿದ್ದ ಈತ ಸ್ವತಂತ್ರವಾಗಿ ಪರ್ಷಿಯ ಸಾಮ್ರಾಜ್ಯವನ್ನು ಸ್ಥಾಪಿಸಿದ. ಇವನ ವಿಷಯವಾಗಿ ಹೆಚ್ಚಿನ ವಿವರಗಳೇನೂ ತಿಳಿದುಬಂದಿಲ್ಲ. ಇವನು ಸ್ಥಾಪಿಸಿದ ಈ ಸಾಮ್ರಾಜ್ಯವನ್ನು ಇವನ ಮನೆತನದವರು ಪ್ರ.ಶ.ಪು. 330ರವರೆಗೂ ವೈಭವದಿಂದ ಆಳಿದರು.

ಸುಮತಿನಾಥ
                                               

ಸುಮತಿನಾಥ

ಸುಮತಿನಾಥ ಈ ಯುಗದ ೫ ನೇ ಜೈನ ತೀರ್ಥಂಕರ. ಜೈನರ ನಂಬಿಕೆಯಂತೆ ಇವರು ಸಿದ್ಧರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡರು. ಸುಮತಿನಾಥ,ಇಕ್ಷ್ವಾಕು ವಂಶದ ರಾಜ ಮೇಘರಾಜ ಹಾಗು ರಾಣಿ ಮಂಗಳಗೆ ಅಯೋಧ್ಯದಲ್ಲಿ ಜನಿಸಿದರು. ಇವರು ಹುಟ್ಟಿದು ವೈಶಕ ಶುಕ್ಲದ ೮ ನೇ ದಿನದಂದು.

                                               

ಹಿರೇಮಲ್ಲುರು ಈಶ್ವರನ್

ಹಿರೇಮಲ್ಲುರು ಈಶ್ವರನ್ ಅವರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲುರು ನಲ್ಲಿ ಜನಿಸಿದರು. ಸಮಾಜಶಾಸ್ತ್ರಜ್ಞ ರಾದ ಇವರು ಲಿಂಗರಾಜ ಮಹಾವಿದ್ಯಲಯದಲ್ಲಿ ಎಂ.ಎ. ಪದವಿ ಪಡೆದ್ದಿದ್ದಾರೆ. ತಾಯಿನೋಟ ಶಿವನ ಬುಟ್ಟಿ ವಲಸೆ ಹೋದ ಕನ್ನಡಿಗನ ಕಥೆ ಭಾರತದ ಹಳ್ಳಿಗಳು ಕವಿ ಕಂಡ ನಾಡು -ಪ್ರವಾಸ ಕಥನ ವಿಷ ನಿಮಿಷಗಳು ಹಾಲಹಲ

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →