Back

ⓘ ಜೆಸ್ಸಿಕಾ ಸಿಂಪ್ಸನ್. ಜೆಸ್ಸಿಕಾ ಆನ್ ಸಿಂಪ್ಸನ್ ಜನನ ಜುಲೈ ೧೦, ೧೯೮೦ 1990ರ ಅಂತ್ಯದಲ್ಲಿ ಖ್ಯಾತಿಯ ಸೋಪಾನಗಳನ್ನೇರಿದ ಒಬ್ಬ ಅಮೆರಿಕದ ಹಾಡುಗಾರ್ತಿ, ನಟಿ ಮತ್ತು ಕಿರುತೆರೆಯ ಕಲಾವಿದೆ. ಅವರ ಆಲ್ ..
ಜೆಸ್ಸಿಕಾ ಸಿಂಪ್ಸನ್
                                     

ⓘ ಜೆಸ್ಸಿಕಾ ಸಿಂಪ್ಸನ್

ಜೆಸ್ಸಿಕಾ ಆನ್ ಸಿಂಪ್ಸನ್ ಜನನ ಜುಲೈ ೧೦, ೧೯೮೦ 1990ರ ಅಂತ್ಯದಲ್ಲಿ ಖ್ಯಾತಿಯ ಸೋಪಾನಗಳನ್ನೇರಿದ ಒಬ್ಬ ಅಮೆರಿಕದ ಹಾಡುಗಾರ್ತಿ, ನಟಿ ಮತ್ತು ಕಿರುತೆರೆಯ ಕಲಾವಿದೆ. ಅವರ ಆಲ್ಬಂಗಳು ಬಿಲ್ ಬೋರ್ಡ್ನ ಶ್ರೇಷ್ಠ 40ಹಿಟ್ಸ್ ನಲ್ಲಿ ಏಳು ಬಾರಿ ತಮ್ಮ ಹೆಸರನ್ನು ದಾಖಲಿಸಿರುವುದಲ್ಲದೆ ಮೂರು ಸುವರ್ಣ ಮತ್ತು ಎರಡು ವಿವಿಧ-ಪ್ಲಾಟಿನಂ RIAA-ಪ್ರಮಾಣೀಕೃತ ಆಲ್ಬಂಗಳನ್ನೂ ಅವರು ಹೊರತಂದಿದ್ದಾರೆ. ಸಿಂಪ್ಸನ್ ತನ್ನ ಆಗಿನ ಪತಿ ನಿಕ್ ಲ್ಯಾಚೀಯವರೊಂದಿಗೆ MTVರಿಯಾಲಿಟಿ ಷೋನಲ್ಲಿ ನಟಿಸಿದ್ದರು. Newlyweds: Nick and Jessica 2008ರಲ್ಲಿ ಕಂಟ್ರಿ ಸಂಗೀತದ ಮಾರುಕಟ್ಟೆಗೂ ಲಗ್ಗೆ ಹಾಕಿದ ಿವರು ಡೂ ಯೂ ನೋ ಎಂಬ ಆಲ್ಬಂ ಬಿಡುಗಡೆ ಮಾಡಿದರು.

                                     

1. ಬಾಲ್ಯ ಮತ್ತು ಬದುಕು

ಸಿಂಪ್ಸನ್ ಟೆಕ್ಸಾಸ್ ನ ಏಬಿಲೀನ್ನಲ್ಲಿ ಟೀನಾ ಮತ್ತು ಜೋ ಟ್ರುಯೆಟ್ ಸಿಂಪ್ಸನ್ ಎಂಬ ಪಾದ್ರಿ ಮತ್ತು ಮಾನಸಿಕತಜ್ಞರ ಮಗಳಾಗಿ ಜನಿಸಿದರು. ಹುಡುಗಿಯಾಗಿದ್ದಾಗಲೇ ಈಕೆ ಸ್ಥಳೀಯ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ಹಾಡತೊಡಗಿದರು. ತಮ್ಮ 12ನೆಯ ಹರೆಯದಲ್ಲಿ ಸಿಂಪ್ಸನ್ ದ ಮಿಕಿ ಮೌಸ್ ಕ್ಲಬ್ ನಡೆಸಿದ ಧ್ವನಿಪರೀಕ್ಷೆಆಡಿಷನ್ನಲ್ಲಿ ವಿಫಲರಾದರು. ಕೊಲಂಬಿಯಾ ರೆಕಾರ್ಡ್ಸ್ ನ ನಿರ್ದೇಶಕ ಟಾಮಿ ಮೊಟ್ಟೋಲಾರವರು "ಜೆಸ್ಸಿಕಾ" ಕೇಳಿದ ನಂತರ ಆ ಕಂಪನಿಯ ಲಾಂಛನದಡಿಯಲ್ಲಿ ಗಾಯಕರಾಗಿ ನಿಯಮಿತರಾದರು.

                                     

2.1. ಸಂಗೀತ ಜೀವನ 1999–2001: ಸ್ವೀಟ್ ಕಿಸಸ್ ಮತ್ತು ಇರ್ರೆಸಿಸ್ಟೆಬಲ್ ಯುಗ

1999ರಲ್ಲಿ ಸಿಂಪ್ಸನ್ ಬಿಡುಗಡೆ ಮಾಡಿದ ಚೊಚ್ಚಲ ಸಿಂಗಲ್ "ಐ ವಾನ್ನಾ ಲವ್ ಯೂ ಫಾರ್ ಎವರ್" ಬಿಲ್ ಬೋರ್ಡ್ ಹಾಟ್ 100ರಲ್ಲಿ #3 ಸ್ಥಾನದಲ್ಲಿ ದಾಖಲಾಯಿತು. ಕೆಲವೇ ದಿನಗಳಲ್ಲಿ ಅವರ ಪ್ರಮುಖ ಲಾಂಛನದಡಿಯ ಆಲ್ಬಂ ಸ್ವೀಟ್ ಕಿಸಸ್ ಬಿಡುಗಡೆಯಾಯಿತು. ಆ ಆಲ್ಬಮ್ಮನ್ನು ಬೆಂಬಲಿಸಲು ಸಿಂಪ್ಸನ್ ರಿಕಿ ಮಾರ್ಟಿನ್ ಮತ್ತು ಬಾಯ್ ಬ್ಯಾಂಡ್ 98 ಡಿಗ್ರೀಸ್ ನೊಂದಿಗೆ ಪ್ರವಾಸ ಕೈಗೊಂಡಳು ಮತ್ತು ಆಕೆ ಮತ್ತು 98 ಡಿಗ್ರೀಸ್ ತಂಡದ ಸದಸ್ಯರಾದ ನಿಕ್ ಲಾಚೇ ಕೆಲವೇ ದಿನಗಳಲ್ಲಿ ಜೊತೆಗೂಡಿ ತಿರುಗಾಡತೊಡಗಿದರು. ಎರಡು ವರ್ಷಗಳ ಒಡನಾಟದ ನಂತರ ಈರ್ವರೂ ತಮ್ಮ ಸಂಬಂಧದಲ್ಲಿ ಶೀತಲತೆಗೆ ಎಡೆಗೊಟ್ಟರು. ಸೆಪ್ಟೆಂಬರ್ 11ರ ಧಾಳಿಯ ನಂತರ ಈರ್ವರೂ ಮತ್ತೆ ಒಂದಾದರು. "9/11ನ ನಂತರ ನಾನು ನಿಕ್ ನಿಂದ ಎಂದಿಗೂ ದೂರವಿರಬಾರದೆಂದು ತಿಳಿಯಿತು, ಇಡೀ ಜೀವಮಾನ ಒಟ್ಟಿಗೆ ಇರಬೇಕೆಂದು ಅರಿತೆನು" ಎಂದರು ಸಿಂಪ್ಸನ್.

ಏತನ್ಮಧ್ಯೆ ಸಿಂಪ್ಸನ್ ರ ಆಲ್ಬಂ ಸ್ವೀಟ್ ಕಿಸಸ್ ಡಬಲ್ ಪ್ಲಾಟಿನಂ ಮಟ್ಟಕ್ಕೆ ಏರಿದ್ದು, ಅದಕ್ಕೆ ಸೇರಿಸಲ್ಪಟ್ಟ ಸಿಂಗಲ್ಸ್ ಆದ "ವೇರ್ ಯೂ ಆರ್" ಮತ್ತು "ಐ ಥಿಂಕ್ ಐ ಆಮ್ ಇನ್ ಲವ್ ವಿತ್ ಯೂ"ಗಳ ವತಿಯಿಂದ ಆ ಮಟ್ಟ ಮುಟ್ಟಿದ್ದು, ಈ ಎರಡೂ ಸಿಂಗಲ್ಸ್ ಗಳನ್ನು 2000ದಲ್ಲಿ ಬಿಡುಗಡೆ ಮಾಡಲಾಯಿತು. ಎರಡನೆಯ ಸಿಂಗಲ್ಸ್ ಹಾಡಂತೂ ಸಿಂಪ್ಸನ್ ರ ಆ ಕಾಲಘಟ್ಟದ ಬೃಹತ್ ರೇಡಿಯೋ ಯಶಸ್ಸಾಗಿ ಪರಿಣಮಿಸಿತು ಮತ್ತು ಅವರ ಮೊದಲ ಅಪ್ ಟೆಂಪೋತಾರಕಗತಿ ಸಿಂಗಲ್ ಆಗಿ ಬಿಡುಗಡೆಯಾಯಿತು. ಸಿಂಪ್ಸನ್ ರ ಚೊಚ್ಚಲ ಆಲ್ಬಂನ 2 ಮಿಲಿಯನ್ ಗೂ ಹೆಚ್ಚು ಪ್ರತಿಗಳು ಅಮೆರಿಕದಲ್ಲೂ ಮತ್ತು ಒಟ್ಟಾರೆ 4 ಮಿಲಿಯನ್ ಗೂ ಹೆಚ್ಚು ಪ್ರತಿಗಳು ಜಗದಾದ್ಯಂತ ಮಾರಾಟಗೊಂಡರೂ, ಬ್ರಿಟ್ನಿ ಸ್ಪಿಯರ್ಸ್ ಮತ್ತು ಕ್ರಿಸ್ಟೀನಾ ಆಗಿಲೆರಾರ ಗಾಯನದ ಪ್ರತಿಗಳ ಮಾರಾಟದ ಸಂಖ್ಯೆಗಿಂತಲೂ ಬಹಳ ಕಡಿಮೆಯೇ ಆಯಿತು ಮತ್ತು ಆ ಇಬ್ಬರು ಪಾಪ್ ರಾಜಕುವರಿಯರಂತೆ ಸಿಂಪ್ಸನ್ ಇನ್ನೂ ಜಗದಾದ್ಯಂತ ಮನೆಮಾತಾಗಿರಲಿಲ್ಲ. ಕೊಲಂಬಿಯಾ ರೆಕಾರ್ಡ್ಸ್ ನ ಅಧಿಕಾರಿಗಳು ಸಿಂಪ್ಸನ್ ರ ಎರಡನೆಯ ಆಲ್ಬಂನಲ್ಲಿ ಸಿಂಪ್ಸನ್ ರಲ್ಲಿ ಬದಲಾವಣೆ ಇರಬೇಕೆಂದು ನಿರ್ಣಯಿಸಿದರೆಂಬ ವರದಿಯಿದೆ. ಮರುವರ್ಷ, ಜೆಸ್ಸಿಕಾ ತನ್ನ ಎರಡನೆಯ ಆಲ್ಬಂ ರೆಕಾರ್ಡ್ ಮಾಡಲು ಬಂದಾಗ, ಅಲ್ಲಿನ ಕಾರ್ಯಕಾರಿ ಅಧಿಕಾರಿಗಳು ಸಿಂಪ್ಸನ್ ಮತ್ತಷ್ಟು ಸೆಕ್ಸಿಯಾಗಿ ಗೋಚರಿಸಬೇಕೆಂದು ಒತ್ತಾಯಿಸಿದರು.

2001ರಲ್ಲಿ ಸಿಂಪ್ಸನ್ ರೆಕಾರ್ಡ್ ಮಾಡಿದ ಮೊದಲ ಆಲ್ಬಂನ ಸೇರ್ಪಡೆಯ ಆಲ್ಬಂಫಾಲೋ-ಅಪ್ ಆಲ್ಬಂಅನ್ನು ಕೊಲಂಬಿಯಾ ರೇಡಿಯೋಗೆ ಹೆಚ್ಚು ಸೂಕ್ತ ಮತ್ತು ಅಪ್-ಟೆಂಪೋ ತೀವ್ರ-ಗತಿ ಹಾಡುಗಾರಿಕೆ ಎಂದು ಅಭಿಪ್ರಾಯಪಟ್ಟರು. ಇದರಿಂದಾದ ಪರಿಣಾಮವೆಂದರೆ, ಶೀರ್ಷಿಕಾಗೀತೆಯಾದ ಮೊದಲ ಸಿಂಗಲ್ಸ್ ನ ನೆರಳಿನಲ್ಲೇ 2001ರ ಮಧ್ಯಭಾಗದಲ್ಲಿ ಬಿಡುಗಡೆಯಾದ ಇರ್ರೆಸಿಸ್ಟೆಬಲ್. "ಇರ್ರೆಸಿಸ್ಟೆಬಲ್" ಸಿಂಪ್ಸನ್ ರ ಜೀವನದ ಮಹತ್ತರ ಯಶಸ್ಸುಗಳಲ್ಲೊಂದಾಯಿತು;ಹಾಟ್ 100ನ ಪಟ್ಟಿಯಲ್ಲಿ 15ನೆಯ ಕ್ರಮಾಂಕವನ್ನು ಏರಿದ ಈ ಸಿಂಗಲ್ ಆ ಪಟ್ಟಿಯಲ್ಲಿ 20 ವಾರಗಳವರೆಗೆ ರಾರಾಜಿಸಿತ್ತು. ಈ ಸಿಂಗಲ್ ಬೆಲ್ಜಿಯಮ್ ನಲ್ಲಿ 2ನೆಯ ಸ್ಥಾನವನ್ನೂ ಮತ್ತು ಟಾಪ್ 20 ಸ್ಥಾನವನ್ನು ಯುಕೆ, ಮೆಕ್ಸಿಕೋ, ಅರ್ಜೆಂಟೀನಾ, ಕೆನಡಾ, ನಾರ್ವೇ, ಸ್ವೀಡನ್, ಐರ್ಲೆಂಡ್, ಸ್ವಿಟ್ಝರ್ಲ್ಯಾಂಡ್, ಫಿಲಿಫೈನ್ಸ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಪಡೆಯಿತು.

ಇರ್ರೆಸಿಸ್ಟೆಬಲ್ ಜೂನ್ 2001ರಲ್ಲಿ ಬಿಲ್ ಬೋರ್ಡ್ 200 ಆಲ್ಬಂ ಪಟ್ಟಿಯಲ್ಲಿ 6ನೆಯ ಕ್ರಮಾಂಕದಲ್ಲಿ ಸ್ಥಾನ ಪಡೆದು, ಮೊದಲ ವಾರದಲ್ಲಿ 127.000ಪ್ರತಿಗಳು ಮಾರಾಟವಾಗಿ, ಐದನೆಯ ವಾರದಲ್ಲಿ 500.000 ಪ್ರತಿಗಳ ಮಾರಾಟವಾಗುವುದರ ಮೂಲಕ ಗೋಲ್ಡ್ ಎಂದು ಪುರಸ್ಕೃತವಾಯಿತು. ಇಂದಿನವರೆಗೂ ಇರ್ರೆಸಿಸ್ಟೆಬಲ್ ನ 825.000 ಪ್ರತಿಗಳು ಯು.ಎಸ್.ನಲ್ಲಿ, 3.2 ಮಿಲಿಯನ್ ಪ್ರತಿಗಳು ಜಗದಾದ್ಯಂತ ಮಾರಾಟವಾಗಿದೆ. "ಎ ಲಿಟಲ್ ಬಿಟ್" ಎಂಬ ಹಾಡನ್ನು ಈ ಆಲ್ಬಂನಿಂದ ತೆಗೆದ ಎರಡನೆಯ ಸಿಂಗಲ್ ಆಗಿ ಬಿಡುಗಡೆ ಮಾಡಲಾಯಿತು; ಆದರೆ ಅದು ಪಟ್ಟಿಯಲ್ಲಿ ಸ್ಥಾನ ಪಡೆಯಲಿಲ್ಲ.

ಈ ಆಲ್ಬಮ್ಮನ್ನು ಬೆಂಬಲಿಸಲು ಸಿಂಪ್ಸನ್ ಆಗಸ್ಟ್ ನ ಮಧ್ಯಭಾಗದಲ್ಲಿ ಪ್ರವಾಸ ಕೈಗೊಂಡರು, ಆ ಪ್ರವಾಸವನ್ನು ಡ್ರೀಮ್ ಚೇಸರ್ ಟೂರ್ ಎಂದು ಕರೆದರು; ಆದರೆ ಸೆಪ್ಟೆಂಬರ್ 11ರ ಧಾಳಿಯ ಕಾರಣ ಅವರು ನಿಯೋಜಿತ ದಿನಾಂಕಗಳ ಕಾರ್ಯಕ್ರಮಗಳನ್ನು ಪೂರೈಸಲಾಗಲಿಲ್ಲ.

                                     

2.2. ಸಂಗೀತ ಜೀವನ 2002–2005: ಬ್ರೇಕ್ ಥ್ರೂ ಮತ್ತು ಇನ್ ದಿಸ್ ಸ್ಕಿನ್

ಇನ್ ದಿಸ್ ಸ್ಕಿನ್ ಬಿಲ್ ಬೋರ್ಡ್ 200 ಆಲ್ಬಂ ಪಟ್ಟಿಯಲ್ಲಿ 10ನೆಯ ಕ್ರಮಾಂಕದಲ್ಲಿ ಸ್ಥಾನ ಪಡೆದು,ಮೊದಲ ವಾರದಲ್ಲಿ 64.000ಪ್ರತಿಗಳು ಮಾರಾಟವಾದವು. ಏಪ್ರಿಲ್ 2004ರಲ್ಲಿ ವಿಶೇಷ ಸಂಗ್ರಾಹಕರ ಸಂಚಿಕೆಯನ್ನು ಹೊರತಂದಾಗ ಈ ಆಲ್ಬಂ ಪುಟಿದೆದ್ದಿತು ಮತ್ತು ಕ್ರಮೇಣ 2ನೆಯ ಸ್ಥಾನವನ್ನು ತಲುಪಿ, ಆ ವಾರ 157.000 ಪ್ರತಿಗಳ ಮಾರಾಟವಾಯಿತು. ಅದರಲ್ಲಿನ "ಸ್ವೀಟೆಸ್ಟ್ ಸಿನ್" ಬಬ್ಲಿಂಗ್ ಅಂಡರ್ ಹಾಟ್ 100ರ ಮೇಲೆ ಕನಿಷ್ಠವಾದ ಪರಿಣಾಮವನ್ನು ಬೀರಲು ಮಾತ್ರ ಸಮರ್ಥವಾಯಿತು. ಆದರೆ ಈ ಆಲ್ಬಂನಲ್ಲಿ ಜನಪ್ರಿಯ ಸಿಂಗಲ್ಸ್ ಆದ "ವಿತ್ ಯೂ"#14, 2004 ಮತ್ತು ಬರ್ಲಿನ್ ಹಾಡಿನ ಕವಚದ ಮೇಲಿನ ಗೀತೆ "ಟೇಕ್ ಮೈ ಬ್ರೆತ್ ಎವೇ"#20, 2004, ಮತ್ತು ಕೊಂಚ ಕಡಿಮೆ ಜನಪ್ರಿಯವಾದ ರಾಬೀ ವಿಲಿಯಮ್ಸ್ ನ ಕವಚದ ಮೇಲಿನ ಗೀತೆ "ಏಂಜಲ್ಸ್" ಎಂಬ ಬಿಲ್ ಬೋರ್ಡ್ 100ರ ಆಸುಪಾಸಿನಲ್ಲಿ ಸ್ಥಾನಗಳಿಸಿದ್ದ ಹಾಡುಗಳಿದ್ದವು. ಡಿಸೆಂಬರ್ 2004ರಲ್ಲಿ ಈ ಆಲ್ಬಮ್ಮನ್ನು RIAA 3x ಮಲ್ಟಿ-ಪ್ಲಾಟಿನಮ್ ಎಂದು ದಾಖಲಿಸಿದರು.

ಸಿಂಪ್ಸನ್ 2004ರ ಅಂತ್ಯದಲ್ಲಿ Rejoyce: The Christmas Album ಅನ್ನೂ ಬಿಡುಗಡೆ ಮಾಡಿದರು ಮತ್ತು ಅದು ಆಲ್ಬಂ ಪಟ್ಟಿಯಲ್ಲಿ 4ನೆಯ ಸ್ಥಾನದವರೆಗೂ ಏರಿ ನಂತರ ಗೋಲ್ಡ್ ಎಂದು ದಾಖಲಿಸಲ್ಪಟ್ಟಿತು. ಸಿಂಪ್ಸನ್ ದ ಡ್ಯೂಕ್ಸ್ ಆಫ್ ಹೆಝಾರ್ಡ್ ನ ಧ್ವನಿಮುದ್ರಿಕೆಯಲ್ಲಿ ಪಾತ್ರವಹಿಸಿ "ದೀಸ್ ಬೂಟ್ಸ್ ಆರ್ ಮೇಡ್ ಫಾರ್ ವಾಕಿಂಗ್" ಎಂಬ 1966ರ ನ್ಯಾನ್ಸೀ ಸಿನಾತ್ರಾರ ಜನಪ್ರಿಯ ಹೊರಹೊದಿಕೆಯ ಹಾಡಿನ ಗಾಯನಮುದ್ರಿಕೆಯನ್ನು ಬಿಡುಗಡೆ ಮಾಡಿದರು. ಈ ಹಾಡು ಬಿಲ್ ಬೋರ್ಡ್ ಹಾಟ್ 100ನಲ್ಲಿ 4ನೆಯ ಸ್ಥಾನವನ್ನು ಅಲಂಕರಿಸಿದುದೇ ಅಲ್ಲದೆ ಪೀಪಲ್ಸ್ ಚಾಯ್ಸ್ ಅವಾರ್ಡ್ ಎಂಬ ಚಲನಚಿತ್ರದಿಂದ ಆಯ್ದ ಮೆಚ್ಚಿನ ಗೀತೆಗೆ ನೀಡುವ ಪ್ರಶಸ್ತಿಯನ್ನೂ 2006ರಲ್ಲಿ ತನ್ನದಾಗಿಸಿಕೊಂಡಿತು. ಈ ಹಾಡಿನ ವಿಡಿಯೋದಲ್ಲಿ ಸಿಂಪ್ಸನ್ ಡೈಸಿ ಡ್ಯೂಕ್ ಆಗಿ ಕಾಣಿಸಿಕೊಂಡರು. ಆ ವಿಡಿಯೋ ಸಿಂಪ್ಸನ್ ಚೆಲ್ಲಾಟವಾಡುವುದು ಮತ್ತು ಬಾರ್ ಒಂದರಲ್ಲಿ ಹಾಡುವುದು ಹಾಗೂ ನಂತರ ಜನರಲ್ ಲೀ ಯವರ ಕಾರನ್ನು ಮೈಗಂಟಿದಂತಹ, ಮೈದೋರುವಂತಹ ಗುಲಾಬಿ ಬಣ್ಣದ ಬಿಕಿನಿಯನ್ನು ಮಾತ್ರ ಧರಿಸಿ ತೊಳೆಯುವ ದೃಶ್ಯಗಳನ್ನು ಹೊಂದಿದೆ. ಕೆಲವು ದೇಶಗಳು ಈ ವಿಡಿಯೋದಲ್ಲಿನ ದೃಶ್ಯಗಳು ಕಾಮೋದ್ರೇಕಕರವೆಂಬ ಕಾರಣದಿಂದ ಇದನ್ನು ಬಹಿಷ್ಕರಿಸಿದವು.                                     

2.3. ಸಂಗೀತ ಜೀವನ 2006–2007: ಎ ಪಬ್ಲಿಕ್ ಅಫೇರ್

2006ರಲ್ಲಿ ಸಿಂಪ್ಸನ್ ರೆಕಾರ್ಡಿಂಗ್ ಸ್ಟುಡಿಯೋಗೆ ಮರಳಿ ಬಂದರು, ಆದರೆ ತಮ್ಮ ಲಾಂಛನದ ನಿಷ್ಠೆಯನ್ನು ಕೊಲಂಬಿಯಾದಿಂದ ಎಪಿಕ್ ರೆಕಾರ್ಡ್ಸ್ಗೆ ಬದಲಾಯಿಸಿಕೊಂಡರು. ಆಗಸ್ಟ್ 29, 2006ರಂದು ಸಿಂಪ್ಸನ್ ತಮ್ಮ ನಾಲ್ಕನೆಯ ಆಲ್ಬಂ ಆದ ಎ ಪಬ್ಲಿಕ್ ಅಫೇರ್ ಅನ್ನು ಲೋಕಾರ್ಪಣೆ ಮಾಡಿದರು ಮತ್ತು ಮೊದಲನೆಯ ವಾರವೇ 101.000 ಪ್ರತಿಗಳ ಮಾರಾಟ ಕಂಡ ಆ ಆಲ್ಬಂ ಬಿಲ್ ಬೋರ್ಡ್ 200ರಲ್ಲಿ 5ನೆಯ ಸ್ಥಾನವನ್ನು ಪಡೆಯಿತು ಮತ್ತು ಬಿಲ್ ಬೋರ್ಡ್ ನಲ್ಲಿ 10 ವಾರಗಳ ಕಾಲ ವಿಜೃಂಭಿಸಿತು.

"ಎ ಪಬ್ಲಿಕ್ ಅಫೇರ್" ಎಂಬ ಶೀರ್ಷಿಕೆಯನ್ನೇ ಹೊಂದಿದ್ದ, ಇದೇ ಆಲ್ಬಂನಿಂದ ಕೃಷ್ಟವಾದ ಸಿಂಗಲ್ ಬಿಡುಗಡೆ ಹೊಂದಿದ ದಿನವೇ 39ನೆಯ ಸ್ಥಾನ ಪಡೆದು, "ದೀಸ್ ಬೂಟ್ಸ್ ಆರ್ ಮೇಡ್ ಫಾರ್ ವಾಕಿಂಗ್" ನಂತರದ ಅವರ ಜನಪ್ರಿಯ ರೆಕಾರ್ಡ್ ಆಯಿತು; ಹಾಟ್ 100ನಲ್ಲಿ 14ನೆಯ ಸ್ಥಳವನ್ನು ಗಳಿಸಿದ ನಂತರ ಈ ಸಿಂಗಲ್ ಹಾಟ್ ಡ್ಯಾನ್ಸ್ ಕ್ಲಬ್ ಪ್ಲೇ ಯಲ್ಲಿ ಮೊದಲ ಸ್ಥಾನ ಪಡೆಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಅದು ಕೆನಡಾ, ಐರ್ಲ್ಯಾಂಡ್ ಮತ್ತು ಫಿಲಿಫೈನ್ಸ್ ಗಳಲ್ಲಿ ಟಾಪ್ 10ರ ಮಟ್ಟ ಮುಟ್ಟಿತು ಈ ವಿಡಿಯೋದಲ್ಲಿ ಇವಾ ಲೋಂಗೋರಿಯಾ, ಕ್ರಿಸ್ಟೀನಾ ಆಪಲ್ಗೇಟ್, ಕ್ರಿಸ್ಟೀನಾ ಮಿಲಿಯನ್, ಮಾರಿಯಾ ಮೆನೌನಾಸ್, ಆಂಡೀ ಡಿಕ್, ಮತ್ತು ರಿಯಾನ್ ಸೀಕ್ರೆಸ್ಟ್ ಪಾತ್ರವಹಿಸಿದ್ದಾರೆ. ಇದು TRLನಲ್ಲಿನ ಸಿಂಪ್ಸನ್ ರ ಅತ್ಯಂತ ಯಶಸ್ವಿ ವಿಡಿಯೋ ಆಯಿತು ಮತ್ತು 28 ದಿನಗಳ ಕಾಲ 2ನೆಯ ಸ್ಥಾನದಲ್ಲಿ ರಾರಾಜಿಸಿತು. ಈ ಆಲ್ಬಂನಿಂದ ಹೊರಬಂದ ಎರಡನೆಯ ಮತ್ತು ಕೊನೆಯ ಸಿಂಗಲ್ ಆದ "ಐ ಬಿಲಾಂಗ್ ಟು ಮಿ" ಅದರ ವೆಬ್ ಸೈಟ್ ನಲ್ಲಿನ ಸಮೀಕ್ಷೆಯಲ್ಲಿ ಜಯ ಪಡೆಯಿತು. ಆ ಸಿಂಗಲ್ ಸೆಪ್ಟೆಂಬರ್ 26ರಂದು ಬಿಡುಗಡೆ ಹೊಂದಿ ಯು.ಎಸ್.ನಲ್ಲಿ 110ನೆಯ ಸ್ಥಾನದಲ್ಲಿ ನಿಂತಿತು. ಈ ಸಿಂಗಲ್ ನ ವಿಡಿಯೋ TRL ಕೌಂಟ್ ಡೌನ್ಸ್ ನಲ್ಲಿ ಕಾಣಿಸಿಕೊಂಡಿತಾದರೂ, ಬೇಗ ಅಲ್ಲಿಂದ ನಿರ್ಗಮಿಸಿತು.

ಈ ಆಲ್ಬಂನ 300.000 ಪ್ರತಿಗಳು ಯು.ಎಸ್.ನಲ್ಲಿ ಮತ್ತು 800.000 ಪ್ರತಿಗಳು ಜಗದಾದ್ಯಂತ ಮಾರಾಟವಾದವಾದರೂ ಸಿಂಪ್ಸನ್ ರ ಹಿಂದಿನ ಆಲ್ಬಂಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆಯಾಯಿತು.

ಡಿಸೆಂಬರ್ 2006ರಲ್ಲಿ, ಕೆನೆಡಿ ಸೆಂಟರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಡಾಲಿ ಪಾರ್ಟನ್ ರಿಗೆ ಗೌರವ ಸಮರ್ಪಿಸಲು ನೀಡಿದ ಪ್ರದರ್ಶನದಲ್ಲಿ ಸಿಂಪ್ಸನ್ ಹಾಡಿನ ಸಾಲುಗಳನ್ನು ತಪ್ಪುತಪ್ಪಾಗಿ ಹೇಳಿ, ಸ್ಟೀವನ್ ಸ್ಪೀಲ್ ಬರ್ಗ್, ಶಾನಿಯಾ ಟ್ವೈನ್ ಮತ್ತು ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ರಂತಹ ಗಣ್ಯ ವ್ಯಕ್ತಿಗಳಿಂದ ತುಂಬಿದ ಸಭೆಯ ಮುಂದೆ ತಡಬಡಾಯಿಸಿದರು. ಸಿಂಪ್ಸನ್ ರಿಗೆ ಆ ಹಾಡನ್ನು ಕ್ಯಾಮರಾಗಳಿಗಾಗಿ ಮರುಪ್ರದರ್ಶಿಸುವ ಅವಕಾಶವಿತ್ತರೂ ಸಹ,ಸಿಂಪ್ಸನ್ ರ ಪ್ರದರ್ಶನದ ಭಾಗವನ್ನು, CBS ಪ್ರಸಾರ ಮಾಡುವ ಹೊತ್ತಿಗೆ, ತೆಗೆದುಕಾಕಿಬಿಡಲಾಗಿತ್ತು.

                                     

2.4. ಸಂಗೀತ ಜೀವನ 2008–2009: ಮೂವ್ ಟು ಕಂಟ್ರಿ ಮತ್ತು ಡೂ ಯೂ ನೋ

ಸೆಪ್ಟೆಂಬರ್ 2007ರಲ್ಲಿ ಸಿಂಪ್ಸನ್ ರ ತಂದೆ ಜೋ ಸಿಂಪ್ಸನ್ ಪೀಪಲ್ ಮ್ಯಾಗಝೈನ್ನಲ್ಲಿ ಸಿಂಪ್ಸನ್ ಒಂದು ಕಂಟ್ರಿ ಆಲ್ಬಂಜನಪದ ಗೀತೆಗಳ ಆಲ್ಬಂ ಮಾಡುವ ಆಲೋಚನೆಯಲ್ಲಿರುವರೆಂದು ಹೇಳಿದರು. ಜೋ ಸಿಂಪ್ಸನ್ ಪೀಪಲ್ ಗೆ ಇಂತೆಂದರು"ಕಂಟ್ರಿ ರೆಕಾರ್ಡ್ ಒಂದನ್ನು ಮಾಡುವ ಬಗ್ಗೆ ಸಿಂಪ್ಸನ್ ಮಾತನಾಡುತ್ತಿರುವಳು ಮತ್ತು ತನ್ಮೂಲಕ ತನ್ನ ಬೇರುಗಳಿಗೆ ಹಿಂದಿರುಗುವ ಮಾತಾನಾಡಿದಳು, ಟೆಕ್ಸಾಸ್ ನವಳೇ ಅಲ್ಲವೇ."

"ಕಮ್ ಆನ್ ಓವರ್", ಮೊದಲು ಇಂಟರ್ ನೆಟ್ ಗೆ ನುಸುಳಿದ್ದು ಮೇ 27, 2008ರಂದು. ಕೆಲವೇ ಸಮಯದಲ್ಲಿ ದೇಶಾದ್ಯಂತ ಕಂಟ್ರಿ ರೇಡಿಯೋ ಕೇಂದ್ರಗಳು ಈ ಸಿಂಗಲ್ ಅನ್ನು ತಮ್ಮ ಬಾನುಲಿಗಳಲ್ಲಿ ಪ್ರಸಾರ ಮಾಡಲಾರಂಭಿಸಿದರು. ಯುನೈಟೆಡ್ ಸ್ಟೇಟ್ಸ್ ನಲ್ಲಿ "ಕಮ್ ಆನ್ ಓವರ್" ಕಂಟ್ರಿ ರೇಡಿಯೋಗೆ ಜೂನ್ 6, 2008ರ ವಾರಕ್ಕೆ ಬಹಳವಾಗಿ ಸೇರಿಸಲ್ಪಟ್ಟ ಹಾಡಾಗಿದ್ದು, ತನ್ನ ಚೊಚ್ಚಲ ಆಗಮನದಲ್ಲೇ ಬಿಲ್ ಬೋರ್ಡ್ ಹಾಟ್ ಕಂಟ್ರಿ ಸಾಂಗ್ಸ್ ಚಾರ್ಟ್ ನಲ್ಲಿ 41ನೆಯ ಸ್ಥಾನ ಪಡೆಯಿತು. ಇದು ಹಿಂದೆ ಮಿರಾಂಡಾ ಲ್ಯಾಂಬರ್ಟ್"ಮೀ ಎಂಡ್ ಚಾರ್ಲೀ ಟಾಕಿಂಗ್" ಮತ್ತು ಬ್ರ್ಯಾಡ್ ಕಾಟರ್"ಐ ಮೀನ್ ಟು"ಗಳು ಸಾಧಿಸಿದ್ದ ಹಾಡುಗಾರನೊಬ್ಬ ಚೊಚ್ಚಲ ಸಿಂಗಲ್ ಗೆ ಸದರಿ ಚಾರ್ಟ್ ನಲ್ಲಿ ಗಳಿಸಿದ ಅತ್ಯುನ್ನತ ಮಟ್ಟದ ದಾಖಲೆಯನ್ನು ಹಿಂದಿಕ್ಕಿತು;ಆ ಇಬ್ಬರು ಕಲಾವಿದರೂ ಚೊಚ್ಚಲ ಆಗಮನದಲ್ಲಿ ಅದೇ ಚಾರ್ಟ್ ನಲ್ಲಿ 42ನೆಯ ಸ್ಥಾನವನ್ನು ಪಡೆದಿದ್ದರು. ಮೊದಲ ಸಿಂಗಲ್ ನ ವೀಡಿಯೋ "ಕಮ್ ಆನ್ ಓವರ್" ಪ್ರಥಮವಾಗಿ ಸಿಂಪ್ಸನ್ ರ ಅಧಿಕೃತ ವೆಬ್ ಸೈಟ್ ನಲ್ಲಿ ಜುಲೈ 2008ರಲ್ಲಿ ಪ್ರದರ್ಶಿತವಾಯಿತು. ಈ ಸಿಂಗಲ್ ಬಿಲ್ ಬೋರ್ಡ್ ಹಾಟ್ ಕಂಟ್ರಿ ಸಾಂಗ್ಸ್ ನ ಪಟ್ಟಿಯಲ್ಲಿ 18ನೆಯ ಸ್ಥಾನವನ್ನು ಅಲಂಕರಿಸಿತು. ಈ ಆಲ್ಬಂಗಳ ಬಿಡುಗಡೆಗೆ ಮುನ್ನ, ಈ ಆಲ್ಬಂಗೆ ಪ್ರಚಾರ ನೀಡುವ ಸಲುವಾಗಿ, ಸಿಂಪ್ಸನ್ ರಾಜ್ಯದ ಆಯ್ದ ಜಾತ್ರೆಗಳಲ್ಲಿ ಪ್ರದರ್ಶನ ನೀಡಿದರು ಮತ್ತು ಹಲವಾರು ಕಂಟ್ರಿ ಸಂಗೀತ ಜನಪದ ಸಂಗೀತದ ರೇಡಿಯೋ ಕೇಂದ್ರಗಳಿಗೆ ಭೇಟಿ ನೀಡಿದರು. ಡೂ ಯೂ ನೋ ಎಂಬ ಹೆಸರಿನ ಜನಪದಗೀತೆಗಳ ಆಲ್ಬಂ ಸೆಪ್ಟೆಂಬರ್ 9, 2008ರಂದು ಬಿಡುಗಡೆಹೊಂದಿ, ಇಡೀ ಆಲ್ಬಂ ಇಂಟರ್ ನೆಟ್ ನಲ್ಲಿ ಆಗಸ್ಟ್ ೨೮, 2008ರಂದು ನುಸುಳಿಬಂದು ಪ್ರಸಾರವಾಗಿಬಿಟ್ಟಿತು. ಈ ಆಲ್ಬಂ ಬಿಲ್ ಬೋರ್ಡ್ ಟಾಪ್ ಕಂಟ್ರಿ ಆಲ್ಬಂಸ್ ಚಾರ್ಟ್ ನಲ್ಲಿ, ಯುಎಸ್ ಮತ್ತು ಕೆನಡಾ ಎರಡೂ ದೇಶಗಳಲ್ಲೂ, ಮೊದಲ ಸ್ಥಾನವನ್ನು ಪಡೆಯಿತು. ಇದು ಸಿಂಪ್ಸನ್ ರ ವೃತ್ತಿಜೀವನದ ಮೊದಲ ನಂಬರ್ 1 ಆಲ್ಬಂ. ರಾಸ್ಕಲ್ ಫ್ಲಾಟ್ಟ್ಸ್ ರವರ ಜನವರಿ 17ರಿಂದ ಮಾರ್ಚ್ 14, 2009ರವರೆಗಿನ "ಬಾಬ್ ದಟ್ ಹೆಡ್ ಟೂರ್"ಗಾಗಿ ಮೊದಲ ಪ್ರದರ್ಶನವನ್ನು ಸಿಂಪ್ಸನ್ ನೀಡಿದರು. ಆ ಆಲ್ಬಂನ ಎರಡನೆಯ ಸಿಂಗಲ್ "ರಿಮೆಂಬರ್ ದಟ್" ಅನ್ನು ಕಂಟ್ರಿ ರೇಡಿಯೋಗೆ ಸೆಪ್ಟೆಂಬರ್ 29, 2008ರಂದು ಬಿಡುಗಡೆ ಮಾಡಲಾಯಿತು. ಈ ಸಿಂಗಲ್ ಬಿಲ್ ಬೋರ್ಡ್ ಹಾಟ್ ಕಂಟ್ರಿ ಸಾಂಗ್ಸ್ ಪಟ್ಟಿಯಲ್ಲಿ 42ನೆಯ ಸ್ಥಾನವನ್ನು ಗಳಿಸಿ, ಡಿಸೆಂಬರ್ 2008ರ ಕೊನೆಯ ವೇಳೆಗೆ ಪಟ್ಟಿಯಿಂದ ನಿರ್ಗಮಿಸಿತು. ಆಲ್ಬಂನ ಮೂರನೆಯ ಸಿಂಗಲ್ "ಪ್ರೇ ಔಟ್ ಲೌಡ್" ಎಂಬುದಾಗಿದ್ದು, ಇದು ಪಟ್ಟಿಯನ್ನು ಸೇರಲು ಸಾಧ್ಯವಾಗಲಿಲ್ಲ. ಏಪ್ರಿಲ್ ೭, 2009ರಂದು ಸಿಂಪ್ಸನ್ ರ ಪ್ರತಿನಿಧಿಯು ಯುಎಸ್ ವೀಕ್ಲಿಗೆ ಹೇಳಿಕೆ ನೀಡುತ್ತಾ ಸಿಂಪ್ಸನ್ ಮತ್ತು ಲಾಂಛನವಾದ ಸೋನಿ ನ್ಯಾಷ್ ವಿಲ್ಲೆ ಬೇರೆಬೇರೆಯಾಗುತ್ತಿರುವುದನ್ನು ದೃಢಪಡಿಸಿದರು.

                                     

2.5. ಸಂಗೀತ ಜೀವನ ಹೊಸ ಆಲ್ಬಂ

ಮಾರ್ಚ್ 2010ರ ಆಲ್ಯೂರ್ ಮ್ಯಾಗಝೈನ್ ಗೆ ನೀಡಿದ ಸಂದರ್ಶನದಲ್ಲಿ ಸಿಂಪ್ಸನ್ ತಾನು ಹೊಸ ಆಲ್ಬಂ ಹೊರತರುವುದರಲ್ಲಿ ಮಗ್ನವಾಗಿರುವುದಾಗಿಯೂ,ಆ ಆಲ್ಬಂ ತನ್ನ ಲಾಂಛನಸಂಸ್ಥೆಯೊಂದಿಗಿನ ಕರಾರನ್ನು ಪೂರೈಸಿ, ಅಂತ್ಯಗೊಳಿಸವುದಾಗಿಯೂ, ಇನ್ನುಮುಂದೆ ಅದೇ ಸಂಸ್ಥೆಯೊಂದಿಗೆ ಮುಂದುವರೆಯುವಿದೋ ಅಥವಾ ಬೇರೆ ಲಾಂಛನದಡಿ ಮುಂದಿನ ಆಲ್ಬಂಗಳನ್ನು ತರುವುದೋ ನಿರ್ಧಾರವಾಗಿಲ್ಲವೆಂದು ನುಡಿದರು. ಆ ಆಲ್ಬಂನಲ್ಲಿನ ಕೆಲವು ಹಾಡುಗಳಿಗೆ ತಾವೇ ನಿರ್ಮಾಪಕಿಯೂ ಆಗುವುದಾಗಿ ಸಿಂಪ್ಸನ್ ನುಡಿದರು.

                                     

3. ಚಲನಚಿತ್ರ ಮತ್ತು ಕಿರುತೆರೆ

ಮುಂದಿನ ಯೋಜನೆಗಳು

2010ರ ಮಾರ್ಚ್ ನಲ್ಲಿ ಆಲ್ಯೂರ್ ಮ್ಯಾಗಝೈನ್ ಗೆ ನೀಡಿದ ಸಂದರ್ಶನದಲ್ಲಿ ಸಿಂಪ್ಸನ್ ತಾನು ಮತ್ತೂ ಗಟ್ಟಿಯಾದ, ಹರಿತವಾದ ಹಾಗೂ ಬುದ್ಧಿಮತ್ತೆಯಲ್ಲಿ ಶ್ರೀಮಂತಿಕೆ ಬೇಡುವ ಪಾತ್ರಗಳ ಶೋಧನೆಯಲ್ಲಿರುವುದಾಗಿ ಹೇಳಿದರು.

                                     

3.1. ಚಲನಚಿತ್ರ ಮತ್ತು ಕಿರುತೆರೆ 2002–2004: ನ್ಯೂಲೀ ವೆಡ್ಸ್

2003ರ ಬೇಸಿಗೆಯಲ್ಲಿ ಸಿಂಪ್ಸನ್ ಮತ್ತು ಆಗಿನ ಆಕೆಯ ಪತಿ ನಿಕ್ ಲಾಚೇ ಪಾತ್ರವಹಿಸಿದ ರಿಯಾಲಿಟಿ ಷೋ, Newlyweds: Nick and Jessica MTVಯಲ್ಲಿ ಪ್ರಸಾರವಾಗತೊಡಗಿತು. ಸಿಂಪ್ಸನ್ ರ ಮೂರನೆಯ ಆಲ್ಬಂ ಆದ ಇನ್ ದಿಸ್ ಸ್ಕಿನ್ ಆಗಸ್ಟ್ 2003ರಲ್ಲಿ ನ್ಯೂಲೀ ವೆಡ್ಸ್ ನ ಪ್ರಥಮ ಪ್ರದರ್ಶನದ ಜೊತೆಜೊತೆಯಲ್ಲೇ ಬಿಡುಗಡೆಯನ್ನು ಕಂಡಿತು.

ಈ ಪ್ರದರ್ಶನವು ಬೇಗನೆ ಪಾಪ್ ಸಂಸ್ಕೃತಿಯಲ್ಲಿಯೇ ಅದ್ಭುತವೆಂದೆನಿಸಲ್ಪಟ್ಟಿತು ಮತ್ತು ಸಿಂಪ್ಸನ್ ರ ಹೆಸರು ಮನೆಮಾತಾಗುವಂತಾಗಲು ಇದುವೇ ಕಾರಣವೆಂದು ಹೇಳಲಾಗಿದೆ; ಪಾಪ್ ಸಂಗೀತ ತಿಳಿಯದವರಷ್ಟೇ ಅಲ್ಲದೆ ಮ್ತ್ವ್ ಬಗ್ಗೆ ತಿಳಿಯದವರಿಗೂ ಸಹ ಸಿಂಪ್ಸನ್ ರ ಹೆಸರು ತಿಳಿಯುವಂತಾಗಿದ್ದು ಈ ಪ್ರದರ್ಶನದಿಂದಲೇ."ಬರಿದೇ ಈ ಪ್ರದರ್ಶನವನ್ನು ನೀಡುವುದರಿಂದ ನನಗೆ ಯಶದ ಸೋಪಾನಗಳು ತೆರೆಯುವುವೆಂದು ತಿಳಿದಿರಲಿಲ್ಲ" ಎಂದು ಸಿಂಪ್ಸನ್ ಬ್ಲೆಂಡರ್ ಮ್ಯಾಗಝೈನ್ ಗೆ ಮಾರ್ಚ್ 2004ರ ವ್ಯಕ್ತಿಚಿತ್ರಣಲೇಖನ ಸಮಯದಲ್ಲಿ ಹೇಳಿದರು.

ಸಿಂಪ್ಸನ್ ದಂಪತಿಗಳು ಟೆಲಿವಿಷನ್ ವಿಶೇಷ ಕಾರ್ಯಕ್ರಮವಾದ ನಿಕ್ ಎಂಡ್ ಜೆಸ್ಸಿಕಾ ವರೈಟಿ ಅವರ್ ನಲ್ಲಿ ಪಾತ್ರವಹಿಸಿದ್ದು, ಆ ಕಾರ್ಯಕ್ರಮವು 2004ರಲ್ಲಿ ಪ್ರಸಾರಗೊಂಡು ದ ಸನ್ನಿ & ಚೆರ್ ಷೋ ಗೆ ಹೋಲಿಸಲ್ಪಟ್ಟಿತು. 2005ರಲ್ಲಿ ನ್ಯೂಲೀ ವೆಡ್ಸ್ ಅಚ್ಚುಮೆಚ್ಚಿನ ರಿಯಾಲಿಟಿ ಷೋಗಾಗಿ ನೀಡುವ ಪೀಪಲ್ಸ್ ಚಾಯ್ಸ್ ಅವಾರ್ಡ್ ಗೆದ್ದುಕೊಂಡಿತು ಮತ್ತು ತದನಂತರ ಕೆಲವು ದಿನಗಳಲ್ಲಿ ಆ ಕಾರ್ಯಕ್ರಮವು ಸ್ಥಗಿತವಾಯಿತು.                                     

3.2. ಚಲನಚಿತ್ರ ಮತ್ತು ಕಿರುತೆರೆ 2005–2008: ಚಲನಚಿತ್ರ

2005ರ ಬೇಸಿಗೆಯಲ್ಲಿ ಸಿಂಪ್ಸನ್ ಕಿರುತೆರೆಯ ಧಾರವಾಹಿ ದ ಡ್ಯೂಕ್ಸ್ ಆಫ್ ಹೆಝಾರ್ಡ್ ನ ಚಲನಚಿತ್ರದ ಅವತರಣಿಕೆಯಲ್ಲಿ ಡೈಸಿ ಡ್ಯೂಕ್ ಆಗಿ ಅಭಿನಯಿಸುವುದರ ಮೂಲಕ ಚಲಮಚಿತ್ರ ಜಗತ್ತಿಗೆ ಪಾದಾರ್ಪಣೆ ಮಾಡಿದರು. ಆ ಚಿತ್ರವು ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ಸ್ಥಾನ ಗಳಿಸಿತು, ಆ ವಾರ ಆ ಚಿತ್ರಕ್ಕೆ ಕೊಂಚ ಮಾತ್ರ ಪೈಪೋಟಿ ಇತ್ತು ಅಥವಾ ಯಾವುದೇ ಪೈಪೋಟಿ ಇರಲಿಲ್ಲ ಎಂಬ ಮಾತು ಅಂತಿರಲಿಆ ವಾರಾಂತ್ಯ ಬಿಡುಗಡೆಯಾದ ಇನ್ನೊಂದೇ ಚಿತ್ರವು ಕಡಿಮೆ ಖರ್ಚಿನಲ್ಲಿ ತಯಾರಿಸಲ್ಪಟ್ಟ ಸ್ವತಂತ್ರ ಚಿತ್ರವಾಗಿತ್ತು,ಮತ್ತು 3.785 ಪ್ರದರ್ಶನಗಳಿಂದ ನಿವ್ವಳ $30.7 ಮಿಲಿಯನ್ ಗಳಿಸಿತು. ಡಾಲರ್-ಸಮಕ್ಷಮ ಆಗಸ್ಟ್ ನಲ್ಲಿ ಸರ್ವಕಾಲಿಕವಾಗಿ ಬಿಡುಗಡೆಯಾದ ಎಲ್ಲಾ ಚಿತ್ರಗಳ ಪೈಕಿ 14ನೆಯ ಸ್ಥಾನವನ್ನೂ ಈ ಚಿತ್ರ ಗಿಟ್ಟಿಸಿಕೊಂಡಿತು. ಯು.ಎಸ್.ನ ಹೊರಗೆ ಆರ್ಥಿಕವಾಗಿ ಕಡಿಮೆ ಯಶಸ್ಸನ್ನು ಪಡೆದರೂ ಸಹ, ಈ ಚಿತ್ರವು ಅಂತಿಮವಾಗಿ ಜಗದಾದ್ಯಂತ $110.5 ಮಿಲಿಯನ್ ಗಳಿಸಿತು.

ಸಿಂಪ್ಸನ್ ರ ಎರಡನೆಯ ಚಿತ್ರವಾದ ಎಂಪ್ಲಾಯೀ ಆಫ್ ದ ಮಂತ್ ಅಕ್ಟೋಬರ್ 6, 2006ರಂದು ಬಿಡುಗಡೆಯಾಯಿತು. ವಿಮರ್ಶೆಗಳು ಬಹಳ ಕೆಟ್ಟದಾಗಿದ್ದುದರ ಕಾರಣ ಈ ಚಿತ್ರವು ಬಿಡುಗಡೆಯಾದ ವಾರಾಂತ್ಯದಲ್ಲಿ ೧೧.8ಮಿಲಿಯನ್ ಸಂಪಾದಿಸಿ, ಓಪನ್ ಸೀಸನ್ ಗಿಂತ ಕೊಂಚ ಹಿಂದಿನ ಸ್ಥಾನವಾದ 4ನೆಯ ಸ್ಥಳವನ್ನು ತನ್ನ ಚೊಚ್ಚಲ ವಾರದಲ್ಲಿ ಗಿಟ್ಟಿಸಿಕೊಂಡಿತು. ಸಿಂಪ್ಸನ್ ಅಕ್ವಾಮೆರೀನ್, ಕ್ಯಾಸಿನೋ ರಾಯೇಲ್, ದ ಡೆವಿಲ್ ವೇರ್ಸ್ ಪ್ರಡಾ ಮತ್ತು ಸಿನ್ ಸಿಟಿ ಗಳಲ್ಲಿ ಪಾತ್ರ ಮಾಡಲು ಬಂದ ಆಹ್ವಾನಗಳನ್ನು ತಿರಸ್ಕರಿಸಿದರೆಂಬ ವರದಿಯಿದೆ.

2007ರಲ್ಲಿ ಲ್ಯೂಕ್ ವಿಲ್ಸನ್ ಸಿಂಪ್ಸನ್ ರೊಡನೆ ಅವರ ಮೂರನೆಯ ಚಿತ್ರವಾದ ಬ್ಲಾಂಡ್ ಆಂಬಿಷನ್ ಚಿತ್ರದಲ್ಲಿ ಸಹನಟನಾಗಿ ನಟಿಸಿದರು. ಈ ಚಿತ್ರವು ಟೆಕ್ಸಾಸ್ಸಿಂಪ್ಸನ್ ಮತ್ತು ವಿಲ್ಸನ್ ಇಬ್ಬರೂ ಇದೇ ರಾಜ್ಯದವರುನ ಎಂಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು US$6.422ಗಳನ್ನು ಗಳಿಸಿತು. ಈ ಚಿತ್ರವನ್ನು DVDಯಾಗಿ ಜನವರಿ 2008ರಲ್ಲಿ ಬಿಡುಗಡೆ ಮಾಡಲಾಯಿತು. ಬ್ಲಾಂಡ್ ಆಂಬಿಷನ್ ಹೊರನಾಡಿನಲ್ಲಿ ತವರಿಗಿಂತಲೂ ಉತ್ತಮ ಸಂಪಾದನೆ ಮಾಡಲಾಯಿತು ಮತ್ತು ನಿವ್ವಳ $253.008ಗಳನ್ನು ಯೂಕ್ರೇನ್ ನಲ್ಲಿನ ಮೊದಲ ವಾರಾಂತ್ಯದ ಪ್ರದರ್ಶನಗಳಲ್ಲೇ ಸಂಪಾದಿಸಿತು. ಸಿಂಪ್ಸನ್ ರ ಮುಂದಿನ ಚಿತ್ರವಾದ ಮೇಜರ್ ಮೂವೀ ಸ್ಟಾರ್ ನಂತರ ಮರುನಾಮಕರಣಗೊಂಡು ಪ್ರೈವೇಟ್ ವ್ಯಾಲೆಂಟೈನ್: ಬ್ಲಾಂಡ್ ಎಂಡ್ ಡೇಂಜರಸ್ ಎಂದಾಯಿತುನೇರವಾಗಿ DVDಗೇ ಫೆಬ್ರವರಿ 3, 2009ರಂದು ಬಿಡುಗಡೆ ಕಂಡಿತು.

                                     

3.3. ಚಲನಚಿತ್ರ ಮತ್ತು ಕಿರುತೆರೆ ಮುಂದಿನ ಯೋಜನೆಗಳು

2010ರ ಮಾರ್ಚ್ ನಲ್ಲಿ ಆಲ್ಯೂರ್ ಮ್ಯಾಗಝೈನ್ ಗೆ ನೀಡಿದ ಸಂದರ್ಶನದಲ್ಲಿ ಸಿಂಪ್ಸನ್ ತಾನು ಮತ್ತೂ ಗಟ್ಟಿಯಾದ, ಹರಿತವಾದ ಹಾಗೂ ಬುದ್ಧಿಮತ್ತೆಯಲ್ಲಿ ಶ್ರೀಮಂತಿಕೆ ಬೇಡುವ ಪಾತ್ರಗಳ ಶೋಧನೆಯಲ್ಲಿರುವುದಾಗಿ ಹೇಳಿದರು.

                                     

4. ಇತರ ಯೋಜನೆಗಳು

ಚೆರ್ ಮತ್ತು ಪತ್ತೀ ಲಾಬೆಲ್ಲೇಯವರಂತಹ ಇತರ ಮಹಿಳಾ ಗಾಯಕಿಯರ ಪಥದಲ್ಲೇ ಸಾಗಿದ ಸಿಂಪ್ಸನ್ ಶೈಲಿರೂಪಕ ಕೆನ್ ಪೇವ್ಸ್ ರ ಜೊತೆಗೂಡಿ ಹೋಂ ಶಾಪಿಂಗ್ ನೆಟ್ ವರ್ಕ್ ಎಂಬ ಕೇಶ ಮತ್ತು ಸೌಂದರ್ಯಸಾಧನಗಳ ವಹಿವಾಟನ್ನು ಆರಂಭಿಸಿದರು. ಸಿಂಪ್ಸನ್ ಕೈಚೀಲಗಳು ಮತ್ತು ಹೆಚ್ಚಾಗೆ ಹೈ-ಹೀಲ್ ಇರುವ ಷೂಗಳು ಮತ್ತು ಬೂಟ್ಸ್ ಗಳನ್ನು ತಾವೇ ವಿನ್ಯಾಸಗೊಳಿಸಿ, ವಿತರಣೆ ಮಾಡುತ್ತಾರೆ. ಬ್ರಾ, ಪ್ಯಾಂಟೀಸ್, ಶಯನವಸ್ತ್ರಗಳು ಮತ್ತು ದೈನಂದಿನ ವಸ್ತ್ರಗಳನ್ನೊಳಗೊಂಡಂತೆ ಲಿಂಗೇರೀಯ ವಿನ್ಯಾಸದಲ್ಲಿ ಸಹ ತೊಡಗಿಕೊಳ್ಳುವ ಸನ್ನಾಹದಲ್ಲಿದ್ದಾರೆ. 2009ರ ವಸಂತಲಾಲಕ್ಕೆಂದೇ ಬಿಡುಗಡೆಯಾಗಬೇಕಿದ್ದ ಸಿಂಪ್ಸನ್ ರ ಇಂಟಿಮೇಟ್ಸ್ ಪ್ರಮುಖ ಡಿಪಾರ್ಟ್ ಮೆಂಟಲ್ ಮಳಿಗೆಗಳಲ್ಲಿ ಮತ್ತು ಆನ್-ಲೈನ್ ಮಾರಾಟ ಸೈಟ್ ಗಳಲ್ಲಿ ಇನ್ನೂ ಲಭ್ಯವಿಲ್ಲ.

ಸಿಂಪ್ಸನ್ ಹಲವಾರು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದು, ಅವುಗಳಲ್ಲಿ ಪಿಟ್ಝಾ ಹಟ್ ಮತ್ತು ಪ್ರೊ ಆಕ್ಟಿವ್ ಸಲ್ಯೂಷನ್ ಗಳು ಪ್ರಮುಖವಾದವು. ತನ್ನ ಸಹೋದರಿ ಆಶ್ಲೀಯೊಡನೆ ಐಸ್ ಬ್ರೇಕರ್ಸ್ ನ ಜಾಹಿರಾತುಗಳಲ್ಲೂ ಭಾಗವಹಿಸಿದ್ದಾರೆ. ಅವರು ಮೂರು ಪೀಟ್ಝಾ ಹಟ್ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದು, 2004ರಲ್ಲಿ ಮೊದಲನೆಯ ಜಾಹಿರಾತಿನಲ್ಲಿ ನೂತನ ಬಫೆಲೋ ರೆಕ್ಕೆಗಳ ಪಿಟ್ಝಾದ ಬಗ್ಗೆ ಜಾಹಿರಾತು ನೀಡಿದ್ದರುಇದರಲ್ಲಿ ಅವರು ದ ಮಪೆಟ್ಸ್ ರೊಡನೆ ನಟಿಸಿದ್ದರು. 2005ರಲ್ಲಿ ಅವರು ಪ್ರೊಆಕ್ಟಿವ್ ಸಲ್ಯೂಷನ್ ನ ಎಂಬ ನೇರವಾಗಿ ಮಾರಲ್ಪಡುವ ಮೊಡವೆಗಳ ಔಷಧಗಳಿಗೆ ಜಾಹಿರಾತು ನೀಡಲಾರಂಭಿಸಿದರು. 2006ರಲ್ಲಿ ಅವರು ಸೂಪರ್ ಬೌಲ್ XL ಪ್ರಸಾರಕ್ಕೆಂದು ಮತ್ತೊಂದು ಪಿಟ್ಝಾ ಹಟ್ ಜಾಹಿರಾತಿನ ಮೊದಲ ಪ್ರದರ್ಶನದಲ್ಲಿ ಪಾಲ್ಗೊಂಡರು. "ದೀಸ್ ಬೂಟ್ಸ್ ಆರ್ ಮೇಡ್ ಫಾರ್ ವಾಕಿಂಗ್" ಹಾಡಿನ ಅಣಕವಾಡಾದ "ದೀಸ್ ಬೈಟ್ಸ್ ಆರ್ ಮೇಡ್ ಫಾರ್ ಪಾಪಿಂಗ್" ಎಂಬುದನ್ನು ಚೀಸ್ ಬೈಟ್ಸ್ ಪಿಟ್ಝಾದ ಜಾಹಿರಾತಿಗಾಗಿ ಸಿಂಪ್ಸನ್ ಹಾಡಿದರು. 2007ರಲ್ಲಿ ಸೂಪರ್ ಬೌಲ್ ಸಿಂಪ್ಸನ್ ರನ್ನು ತಮ್ಮ ಮೂರನೆಯ ಪಿಟ್ಝಾ ಹಟ್ ಜಾಹಿರಾತಿನಲ್ಲಿ ಬರಮಾಡಿಕೊಂಡು ಮತ್ತೊಮ್ಮೆ ಚೀಸಿ ಬೈಟ್ಸ್ ಪಿಟ್ಝಾಗಾಗಿ ಪ್ರಚಾರ ಮಾಡಿದರು. ಸಿಂಪ್ಸನ್ ಡೈಸಿ ಡ್ಯೂಕ್ ಪಾತ್ರದಲ್ಲಿ ಡೈರೆಕ್TV ಗಾಗಿಯೂ ಜಾಹಿರಾತು ನೀಡುವಲ್ಲಿ ಪಾಲ್ಗೊಂಡರು.

ಸಿಂಪ್ಸನ್ ಸುಗಂಧದ್ರವ್ಯಗಳ ಪಂಕ್ತಿಯೊಂದನ್ನು ಆರಂಭಿಸಿದ್ದಾರೆ. ಅವರ ಸುಗಂಧದ್ರವ್ಯವನ್ನು ತಯಾರಿಸಿದವರು ಪಾರ್ಲಕ್ಸ್ ಫ್ರಾಗ್ರೆನ್ಸಸ್. ಅವರ ಚೊಚ್ಚಲ ಸುಗಂಧ, ಫ್ಯಾನ್ಸಿ, 2008ರಲ್ಲಿ ಮಾರುಕಟ್ಟೆಗೆ ಪರಿಚಯಿಸಲ್ಪಟ್ಟಿತು.

ಯಕ್ಷಿಣಿಜಾದೂಯ ದೊಡ್ಡ ಅಭಿಮಾನಿಯಾದ ಸಿಂಪ್ಸನ್ ಜಾದೂಗಾರನ ಸಹಾಯಕಿಯಾಗಿ ಹಲವಾರು ಇಲ್ಯೂಷನ್ ಕಣ್ಕಟ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ದ ಡ್ಯೂಕ್ಸ್ ಆಫ್ ಹೆಝಾರ್ಡ್ "ನ ಪ್ರಚಾರಕ್ಕೆಂದು ಡವ್ ಟಿವಿಯಲ್ಲಿ ಟಾಕ್ ಷೋ ನೀಡಲು ಯೂರೋಪ್ ಗೆ ಹೋಗಿದ್ದ ಸಿಂಪ್ಸನ್, ಕಾರ್ಯಕ್ರಮದ ಕೊನೆಯಲ್ಲಿ ಜಾದೂಗಾರ ಹ್ಯಾನ್ಸ್ ಕ್ಲಾಕ್ ಪ್ರದರ್ಶಿಸಿದ ಕ್ಲಿಯರ್ಲಿ ಇಂಪಾಸಿಬಲ್ ಎಂಬ ಹೆಸರಿನ "ಹೆಣ್ಣನ್ನು ಅರ್ಧಕ್ಕೆ ಕತ್ತರಿಸುವ" ವಿಧವನ್ನೊಳಗೊಂಡ ಜಾದೂಪ್ರದರ್ಶನದಲ್ಲಿ ಸಹಾಯಕಿಯಾಗಿ ಭಾಗವಹಿಸಿದರು.                                     

5. ಆಡಳಿತ

ಜೆಸ್ಸಿಕಾರ ಸಕಲ ವ್ಯವಸ್ಥೆಗಳನ್ನೂ ಅವರ ತಂದೆ, ಜೋ ಟ್ರುಯೆಟ್ ಸಿಂಪ್ಸನ್ ರೇ ನೋಡಿಕೊಳ್ಳುತ್ತಾರೆ, ಮತ್ತು ಅದಕ್ಕೆ ಅವರು ಮಗಳ ಆದಾಯದ 10ರಿಂದ 20 ಪ್ರತಿಶತವನ್ನು ತಮ್ಮ ಶುಲ್ಕವಾಗಿ ಪಡೆಯುತ್ತಾರೆಂಬ ವರದಿಯಿದೆ. ಆದರೆ, ಜೋ ತಮ್ಮ ಮಗಳ ಹಣಕಾಸಿನ ವ್ಯವಹಾರದಿಂದ ದೂರವಿರುವುದಲ್ಲದೆ, ಮಗಳ ಬ್ಯಾಂಕ್ ಖಾತೆಯನ್ನು ಮುಟ್ಟುವ ಗೋಜಿಗೂ ಹೋಗದೆ, ತಮ್ಮಿಬ್ಬರ ದೀರ್ಘಕಾಲದ ವ್ಯವಹಾರ ವ್ಯವಸ್ಥಾಪಕರಾದ ಡೇವಿಡ್ ಲೆವಿನ್ ರ ಸುಪರ್ದಿಗೇ ಎಲ್ಲವನ್ನೂ ಬಿಟ್ಟಿದ್ದಾರೆ. ಜೋ ಸಿಂಪ್ಸನ್ "ಡ್ಯಾಡಿ ಎಂದಿಗೂ ನಮ್ಮ ವಸ್ತುಗಳನ್ನು ಮುಟ್ಟಲಿಲ್ಲ"ವೆಂದು ಮಕ್ಕಳು ತಮ್ಮ ಮಕ್ಕಳು ಅರಿತಿರುವುದು ಮುಖ್ಯವೆಂದರು. "ನನ್ನನ್ನು ಎಂದೂ ಅವರು ಗೌರವದಿಂದ ಕಾಣುವುದೇ ನನಗೆ ಮುಖ್ಯ" ಎಂದು ನುಡಿದರು ಜೋ ಸಿಂಪ್ಸನ್.

                                     

6. ವಿಮರ್ಶೆ ಮತ್ತು ವಿವಾದ

"ರೆಸಿಸ್ಟೆನ್ಸ್" ಎಂದು ಕರೆದುಕೊಳ್ಳುವ ಕ್ರಿಶ್ಚಿಯನ್ ತಂಡವೊಂದು ಸಿಂಪ್ಸನ್ "ದೀಸ್ ಬೂಟ್ಸ್ ಆರ್ ಮೇಡ್ ಫಾರ್ ವಾಕಿಂಗ್" ಸಂಗೀತ ವಿಡಿಯೋದಲ್ಲಿ ಕಾಮೋದ್ದೀಪಕತೆಯನ್ನು ಬಿಂಬಿಸುವ ಪಾತ್ರ ವಹಿಸಿದ್ದುದನ್ನು ಖಂಡಿಸಿ ಟೀಕಾಪ್ರಹಾರ ಮಾಡಿತು. ಅದಕ್ಕೆ ಉತ್ತರವಾಗಿ ಸಿಂಪ್ಸನ್ "ನನಗೆ ಅದೇನೂ ಅಚ್ಚರಿಯೆನಿಸಲಿಲ್ಲ, ಏಕೆಂದರೆ ಅಂತಹ ಟೀಕೆಗಳನ್ನು ಎದುರಿಸುತ್ತಲೇ ನಾನು ಬೆಳೆದದ್ದು೭. ಇಂತಹ ಟೀಕೆಗಳ ಕಾರಣಗಳಿಂದಲೇ ನಾನು ಕ್ರಿಶ್ಚಿಯನ್ ಸಂಗೀತೋದ್ಯಮದತ್ತ ಸಾಗಲಿಲ್ಲ.

PETAದ ಮುಖವಾಣಿಯಾದ ಪಮೇಲಾ ಆಂಡರ್ಸನ್ ಸಹ ಟೀಕೆ ಮಾಡಿದರು.

ಜುಲೈ 19, 2008ರಂದು ಸಿಂಪ್ಸನ್ ವಿಸ್ಕಾನ್ಸಿನ್ ನ ಕಂಟ್ರಿ ಥಂಡರ್ ಹಬ್ಬದಲ್ಲಿ ಪ್ರದರ್ಶನ ನೀಡಿದರು.ಅಲ್ಲಿನ ಜನಜಂಗುಳಿ ಅವರ ವಿರುದ್ಧ ಪ್ರತಿಭಟಿಸಿತು ಮತ್ತು ಕಂಟ್ರಿ ಹಾಡಿನ ನಜಪದ ಗೀತೆಯ ವಿಮರ್ಶಕರಿಂದ ಕಳಪೆ ಸ್ವಾಗತ ದೊರೆಯಿತು. "ನಿಮಗೆ ಜೆಸ್ಸಿಕಾ ಎಂದರೆ ಯಾರು, ಏನು ಎಂದು ತಿಳಿದಿದೆಯೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ.ನೀವು ಯಾವ ಪತ್ರಿಕೆ ಓದುವಿರೆಂದೂ ನನಗೆ ಅರಿವಿಲ್ಲ. ಆದರೆ ನಾನು ನಿಮಗೆ ಹೇಳಬೇಕೆಂದಿರುವುದು ಇಷ್ಟೇ - ನಾನು ಟೆಕ್ಸಾಸ್ ನ ಹುಡುಗಿ. ನಾನೂ ನಿಮ್ಮವರಲ್ಲೊಬ್ಬಳಷ್ಟೇ. ನಾನು ಬಯಸಿದುದನ್ನು ಮಾಡುತ್ತಿದ್ದೇನೆ ಮತ್ತು ಒಬ್ಬ ಹುಡುಗನೊಡನೆ ಓಡಾಡುತ್ತಿದ್ದೇನೆ." ಎಂದು ಪ್ರತಿಕ್ರಿಯೆ ನೀಡುತ್ತಾ ನುಡಿದರು.

                                     

7.1. ವೈಯಕ್ತಿಕ ಜೀವನ ನಿಕ್ ಲಾಚೇಯೊಂದಿಗೆ ವಿವಾಹ

ಅಕ್ಟೋಬರ್ 26, 2002ರಂದು, ತಮ್ಮ 22ನೆಯ ವಯಸ್ಸಿನಲ್ಲಿ, ಸಿಂಪ್ಸನ್ ನಿಕ್ ಲಾಚೇಯನ್ನು ವಿವಾಹವಾದರು. ಸಿಂಪ್ಸನ್ ತಾನು ಮದುವೆಯಾಗುವವರೆಗೂ ಕನ್ಯೆಯಾಗಿಯೇ ಇದ್ದುದಾಗಿ ಹೇಳಿದುದು ಜನಜನಿತವಾಯಿತು. ನವೆಂಬರ್ 2005ರಲ್ಲಿ, ತಿಂಗಳುಗಟ್ಟಲೆ ಪತ್ರಿಕೆಗಳ ಊಹಾಪೋಹದ ನಂತರ, ಸಿಂಪ್ಸನ್ ಮತ್ತು ಲಾಚೇ ತಾವು ಬೇರೆಯಾಗುತ್ತಿರುವುದಾಗಿ ಘೋಷಿಸಿದರು. ಸಿಂಪ್ಸನ್ ಡಿಸೆಂಬರ್ 16, 2005ರಂದು, "ಹೊಂದಿಕೊಳ್ಳಲಾಗದಂತಹ ಭಿನ್ನಾಭಿಪ್ರಾಯಗಳು" ಕಾರಣವೆನ್ನುತ್ತಾ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ಈ ದಂಪತಿಗಳ ವಿವಾಹ ವಿಚ್ಛೇದನವನ್ನು ಜಗದಾದ್ಯಂತ ಪ್ರಚಾರ ಮಾಡಲಾಯಿತು ಮತ್ತು ಈ ವಿಚ್ಛೇದವು ಜೂನ್ 30, 2006ರಂದು ತೀರ್ಮಾನಗೊಂಡಿತೆಂದು ವರದಿಯಾಯಿತು.

ಅಕ್ಟೋಬರ್ 2006ರಲ್ಲಿ ಜೇನ್ ಪತ್ರಿಕೆಯೊಂದಿಗೆ ಮಾತನಾಡುತ್ತಾ ಸಿಂಪ್ಸನ್ ಲಾಚೇಯು ತನ್ನೊಡನೆ ಆಫ್ರಿಕಾಗೆ ಸಹಾಯಾರ್ಥ ಪ್ರವಾಸಕ್ಕೆ ಬರಲು, ಅಂದು ತಮ್ಮ ಮೂರನೆಯ ವಿವಾಹ ವಾರ್ಷಿಕೋತ್ಸವವಾಗಿದ್ದರೂ ಸಹ, ನಿರಾಕರಿಸಿದಾಗಲೇ, ತಮ್ಮ ಮದುವೆಯ ಇತಿಶ್ರೀಯಾಯಿತೆಂದು ನುಡಿದರು.

ಸಿಂಪ್ಸನ್ ದಂಪತಿಗಳು ನ್ಯೂಲೀ ವೆಡ್ಸ್ ಚಿತ್ರೀಕರಣ ನಡೆದಿದ್ದ ತಮ್ಮ ಕಲಬಾಸಾಸ್ ಮ್ಯಾನ್ಷನ್ ಅನ್ನು ಮ್ಯಾಲ್ಕಮ್ ಇನ್ ದ ಮಿಡಲ್ ಚಿತ್ರದ ತಾರೆ ಜಸ್ಟಿನ್ ಬೆರ್ಫೀಲ್ಡ್ ಗೆ ಒಂದು ಗುಪ್ತವಾದ ಬೆಲೆಗೆ ಮಾರಿದರು. ವಿಚ್ಛೇದನಾನಂತರ ಸಿಂಪ್ಸನ್ ಎಂಪ್ಲಾಯೀ ಆಫ್ ದ ಮಂತ್ ನ ಸಹನಟ ಡೇನ್ ಕುಕ್ ನೊಂದಿಗೆ ಹಾಗೂ ಮರೂನ್ 5 ಫ್ರಂಟ್ ಮನ್ ಆಡಮ್ ಲೆವೀನ್ರೊಡನೆ ಪ್ರಣಯದಲ್ಲಿ ತೊಡಗಿರುವರೆಂಬ ವರದಿಗಳ ಮೂಲಕ, ಹೆಚ್ಚಿನ ಪ್ರಚಾರವನ್ನು ಗಿಟ್ಟಿಸಿಕೊಂಡರು, ಸಿಂಪ್ಸನ್ ಳ ಮಾಜಿ ಪತಿಯು ಅವರ ಶ್ರೇಷ್ಠ-ರೂಪದ ವಿಚ್ಛೇದನದ ನಂತರ ಹುಡುಗಿಯರೊಡನೆ ಅಲೆಯಲು ಆರಂಭಿಸಿದ್ದು ತನಗೆ ನೋವನ್ನುಂಟು ಮಾಡಿತೆಂದು ಸಿಂಪ್ಸನ್ ಹೇಳಿದರೆಂದು ಅಸೋಸಿಯೇಟೆಡ್ ಪ್ರೆಸ್ ಫೆಬ್ರವರಿ 6, 2007ರಂದು ವರದಿ ಮಾಡಿತು. ಎಲ್ಲೇ ಯ ಮಾರ್ಚ್ ಸಂಚಿಕೆಗೆ ಸಂದರ್ಶನ ನೀಡುತ್ತಾ "ಓಹ್, ಅದು ನನಗೆ ನೋವನ್ನುಂಟುಮಾಡಿತು," ಎಂದರು 26ರ ಹರೆಯದ ಗಾಯಕಿ-ನಟಿ. "ಎರಡು ಅಥವಾ ಮೂರು ವಾರಗಳ ನಂತರ? ಹೌದು, ಅದು ಒಂದು ವಿಧವಾಗಿ ನನ್ನನ್ನು ನೋಯಿಸಿತೆಂದೇ ಹೇಳುವೆನು."

                                     

7.2. ವೈಯಕ್ತಿಕ ಜೀವನ ಇತರೆ ಸಂಬಂಧಗಳು

ತನ್ನ ವಿಚ್ಛೇದನದ ನಂತರ ಸಿಂಪ್ಸನ್ ಸಂಗೀತಗಾರ ಜಾನ್ ಮೇಯರ್ ರೊಡನೆ ಇತ್ತೋ ಇಲ್ಲವೋ ಎನ್ನುವ ರೀತಿಯ ಸಂಬಂಧ ಹೊಂದಿದ್ದರು. ಪೀಪಲ್ ಮ್ಯಾಗಝೈನ್ ನಲ್ಲಿ ಪ್ರಕಟವಾದ ಒಂದು ಲೇಖನದ ಮೂಲಕ ಆಗಸ್ಟ್ 2006ರಲ್ಲಿ ಸಿಂಪ್ಸನ್ ಯಾರನ್ನೋ ನೋಡುತ್ತಿದ್ದಾರೆ ಎಂಬ ವದಂತಿ ಹಬ್ಬತೊಡಗಿ, ಸಿಂಪ್ಸನ್ ಮತ್ತು ಮೇಯರ್ ನ್ಯೂ ಯಾರ್ಕ್ ನ ರಜಾದಿನಗಳನ್ನು ಒಟ್ಟಿಗೆ ನ್ಯೂ ಯಾರ್ಕ್ ನಗರದಲ್ಲಿ ಕಳೆದಾಗ, ಇಬ್ಬರೂ ಕ್ರಿಸ್ಟೀನಾ ಆಗಿಲೆರಾರ 2006ರ ಹೊಸವರ್ಷದ ಹಿಂದಿನ ದಿನದ ಸಂತೋಷಕೂಟಕ್ಕೆ ಒಟ್ಟಿಗೆ ಹೋದಾಗ ಆ ವದಂತಿಯು ವೇಗವಾಗಿ, ಗಾಢವಾಗಿ ಹಬ್ಬತೊಡಗಿತು. ಈರ್ವರೂ ಮೇ 2007ರಲ್ಲಿ ತಮ್ಮ ತಮ್ಮ ದಾರಿ ಹಿಡಿದರು.

ನವೆಂಬರ್ 2007ರಲ್ಲಿ ಸಿಂಪ್ಸನ್ ಡಲ್ಲಾಸ್ ಕೌಬಾಯ್ಸ್ ನ ಕ್ವಾರ್ಟರ್ ಬ್ಯಾಕ್ ಟೋನಿ ರೋಮೋರೊಡನೆ ಓಡಾಡಲಾರಂಭಿಸಿದರು. ರೋಮೋ ಫುಟ್ ಬಾಲ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದಾಗಲೆಲ್ಲಾ ಅದಕ್ಕೆಲ್ಲಾ ಸಿಂಪ್ಸನ್ ರೇ ಕಾರಣ ಎಂದು ಡಲ್ಲಾಸ್ ಕೌಬಾಯ್ಸ್ ಅಭಿಮಾನಿಗಳು ಆಪಾದಿಸುತ್ತಿದ್ದುದು ಇವರ ಸಂಬಂಧದಲ್ಲಿ ವಿವಾದಗಳನ್ನು ಉಂಟುಮಾಡಲು ಸಹಕಾರಿಯಾಯಿತು. ಬೀಟಲ್ಸ್ ನ ಜಾನ್ ಲೆನನ್ ರನ್ನು ಯೋಕೋ ಓನೋ "ಹಾಳು" ಮಾಡಿದರೆಂದು ಬೀಟಲ್ಸ್ ತಂಡದ ಅಭಿಮಾನಿಗಳು ಹೇಳುವ ರೀತಿಯಲ್ಲಿಯೇ ಸಿಂಪ್ಸನ್ ಕೌಬಾಯ್ಸ್ ತಂಡಕ್ಕೆ ಮುಳುವಾಗುವಳೆಂದು ಹೋಲಿಸಿ ನುಡಿದ ಆ ತಂಡದ ಕೆಲವು ಅಭಿಮಾನಿಗಳು ಸಿಂಪ್ಸನ್ ಗೆ ಯೋಕೋ ರೋಮೋ ಎಂಬ ಅಡ್ಡಹೆಸರನ್ನು ಇಟ್ಟರು. ರೋಮೋ ಮತ್ತು ಸಿಂಪ್ಸನ್ ಕೌಬಾಯ್ಸ್ ನ ಬಿಡುವಿನ ವಾರದಲ್ಲಿ ಪ್ರವಾಸ ಹೋಗಿಬಂದಾಗ ಕೌಬಾಯ್ಸ್ ತಂಡವು ಜಯಂಟ್ಸ್ ತಂಡದಿಂದ ಒಂದು ವಿಭಾಗೀಯ ಮಂದ್ಯದಲ್ಲಿ ಪರಾಭವಗೊಂಡದ್ದು ಈ ವಿಷಯಕ್ಕೆ ಮತ್ತಷ್ಟು ಕಾವೇರಲು ಕಾರಣವಾಯಿತು. FOX ಪ್ರಸರಣಕಾರ ಟೆರಿ ಬ್ರಾಡ್ ಷಾ ಮೆಕ್ಸಿಕೋದಲ್ಲಿ ರೋಮೋ ಮತ್ತು ಸಿಂಪ್ಸನ್ ರಜೆ ಕಳೆದುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

"ಟೋನಿ ನನಗೆ ಕರೆ ನೀಡಿ ಟೆರಿ, ಜೆಸ್ಸಿಕಾಸಿಂಪ್ಸನ್ ಮತ್ತು ನಾನು ಮೆಕ್ಸಿಕೋಗೆ ಹೋಗುತ್ತಿದ್ದೇವೆ ಎಂದು ಹೇಳಿದ್ದಿದ್ದರೆ ನಾನು ಅವರಿಗೆ:ನಿಮಗೆ ಹುಚ್ಚು ಹಿಡಿದಿದೆಯೇಜು? ಹಾಗೆ ಮಾಡಬೇಡಿ! ಪತ್ರಕರ್ತರು ನಿಮ್ಮನ್ನು ಹಿಡಿದೇ ಹಿಡಿಯುತ್ತಾರೆ ಮ್ಯಾನ್. ನೀವು ಒಬ್ಬ ತಾರೆ. ಅವರೂ ಒಬ್ಬ ತಾರೆ. ಅದು ಆಗಿಯೇ ತೀರುತ್ತದೆ.ಅವರು ನಿಮ್ಮನ್ನು ಹಿಡಿದೇ ಹಿಡಿಯುತ್ತಾರೆ" ಎನ್ನುತ್ತಿದ್ದೆ ಎಂದು ಬ್ರಾಡ್ ಷಾ ತಾವು ಫೋರ್ಟ್ ವರ್ತ್ ಸ್ಟಾರ್-ಟೆಲಿಗ್ರಾಂಗೆ ನೀಡಿದ ಸಂದರ್ಶನದಲ್ಲಿ ನುಡಿದರು.

2008ರಲ್ಲಿ ಜಯಂಟ್ಸ್ ತಂಡವು ಸೂಪರ್ ಬೌಲ್ ಅನ್ನು ಗೆದ್ದನಂತರ ಅಧ್ಯಕ್ಷ ಬುಷ್ ಸಹ ವಿನೋದವಾಗಿ "ಜೆಸ್ಸಿಕಾ ಲತ್ತೆ"ಯ ಬಗ್ಗೆ ಮಾತನಾಡಿದರು. ಗೆದ್ದ ತಂಡಕ್ಕೆ ಸಾಂಪ್ರದಾಯಿಕವಾಗಿ ವೈಟ್ ಹೌಸ್ ನಲ್ಲಿ ನೀಡುವ ಸ್ವಾಗತಕೂಟದಲ್ಲಿ ಅಧ್ಯಕ್ಷರು ಮಾತನಾಡುತ್ತಾ "ನಾವು ಸಿಂಪ್ಸನ್ ರನ್ನು ಡೆಮೋಕ್ರಾಟ್ ನ್ಯಾಷನಲ್ ಕಂವೆನ್ಷನ್ ಗೆ ಕಳುಹಿಸಲಿದ್ದೇವೆ." ಎಂದು ನುಡಿದರು.

ಜುಲೈ ೧೨, 2009ರಂದು ಪೀಪಲ್ ಪತ್ರಿಕೆಯು ರೋಮೋ ಮತ್ತು ಸಿಂಪ್ಸನ್ ತಮ್ಮ ಸಂಬಂಧಕ್ಕೆ ಮಂಗಳ ಹಾಡಿರುವರೆಂದು ವರದಿ ಮಾಡಿತು. ಪಾಪ್ ತಾರೆಯ ನಿಕಟವರ್ತಿಯೊಬ್ಬರು ರೋಮೋ ಸಿಂಪ್ಸನ್ ರಿಂದ ಜುಲೈ 9ರಂದು- ಜೆಸ್ಸಿಕಾರ 29ನೆಯ ಜನ್ಮದಿನದ ಹಿಂದಿನ ದಿನ - ದೂರವಾದರೆಂದು ಹೇಳಿಕೆ ನೀಡಿದರು. "ಸಿಂಪ್ಸನ್ ಭಗ್ನಹೃದಯಿಯಾಗಿದ್ದಾರೆ" ಎಂದರಾ ನಿಕಟವರ್ತಿ. "ಅವರು ಟೋನಿಯನ್ನು ಪ್ರೀತಿಸುತ್ತಾರೆ. ಆದರೆ ಇತ್ತೀಚೆಗೆ ಬಹಳವೇ ತೊಂದರೆಗಳಾಗುತ್ತಿದ್ದವು. ರೋಮೋ ತಮ್ಮ ಜೀವನಮಾರ್ಗದಲ್ಲಿ ತೊಡಗಿಕೊಂಡು ಬಿಡುವಿಲ್ಲದವರಾಗಿದ್ದಾರೆ ಮತ್ತು ಆಕೆ ತಮ್ಮ ಷೋದ ಪ್ರೈಸ್ ಆಫ್ ಬ್ಯೂಟಿ ಚಿತ್ರೀಕರಣ ಮಾಡಲು ತಯಾರಾಗಿದ್ದಾರೆ. ಅವರಿಬ್ಬರೂ ದೂರವಾಗಲು ನಿರ್ಧರಿಸಿದರು."

                                     

8. ಲೋಕೋಪಕಾರ

ಸಿಂಪ್ಸನ್ ಆಪರೇಷನ್ ಸ್ಮೈಲ್ ನ ಅಂತರರಾಷ್ಟ್ರೀಯ ಯುವ ರಾಯಭಾರಿಯಾಗಿದ್ದಾರೆ.

2007ರ ಮಾರ್ಚ್ ನಲ್ಲಿ ಸಿಂಪ್ಸನ್ ಒಂದು ಹೊಸ ಕ್ರಿಸ್ಲರ್ ಮಿನಿವ್ಯಾನ್ ಅನ್ನು ನ್ಯೂಯೆವೋ ಲಾರೆಡೋದಲ್ಲಿನ ಎಲಿಮ್ ಅನಾಥಾಲಯಕ್ಕೆ ದಾನವಾಗಿ ಇತ್ತರು. ಸಿಂಪ್ಸನ್ 2006ರ ಎಂ ಟಿ ವಿ ವಿಡಿಯೋ ಸಂಗೀತ ಪ್ರಶಸ್ತಿ ಸಮಾರಂಭದಲ್ಲಿ ಗೆದ್ದಿದ್ದ $50.000 ಬೆಲೆ ಬಾಳುವ ಐಷಾರಾಮಿ ಕ್ರಿಸ್ಲರ್ ಕ್ರಾಸ್ ಫೈರ್ ಸ್ಪೋರ್ಟ್ಸ್ ಕಾರ್ ನ ಬದಲಿಗೆ ಅನಾಥಾಲಯದವರಿಗೆ ಸಹಾಯವಾಗುವಂತಹ ಮಿನಿವ್ಯಾನ್ ಅನ್ನು ಪಡೆದಳು.

                                     

9. ಧ್ವನಿಮುದ್ರಿಕೆ ಪಟ್ಟಿ

ಸ್ಟುಡಿಯೋ ಆಲ್ಬಮ್‌ಗಳು

 • ಸ್ವೀಟ್ ಕಿಸಸ್ 1999
 • ಇರ್ರೆಸಿಸ್ಟೆಬಲ್ 2001
 • ಡಿಡ್ ಯೂ ನೋ 2008
 • ದಿಸ್ ಸ್ಕಿನ್ 2003
 • ಎ ಪಬ್ಲಿಕ್ ಅಫೇರ್ 2006

ಇತರೆ ಆಲ್ಬಮ್‌ಗಳು

 • Rejoyce: The Christmas Album 2004
 • ದಿಸ್ ಈಸ್ ದ ರೀಮಿಕ್ಸ್ 2002
                                     

10. ಪ್ರವಾಸಗಳು

 • ಬಾಬ್ ದಟ್ ಹೆಡ್ ಪ್ರವಾಸ 2009ರಾಸ್ಕಲ್ ಫ್ಲಾಟ್ಟ್ಸ್ ನ ಮೊದಲ ಅಂಕಕ್ಕಾಗಿ
 • ಡ್ರೀಮ್ ಚೇಸರ್ ಪ್ರವಾಸ 2001
 • ಟೂರ್ ಆಫ್ ಡ್ಯೂಟಿ 2005
 • MTV TRL ಪ್ರವಾಸ - ಅವರ ಶೀರ್ಷಿಕೆ ಗಳಿಸುವ ಪ್ರವಾಸದ ಮೊದಲಿನ ಆಯ್ದ ದಿನಾಂಕಗಳು 2001
 • ರಿಯಾಲಿಟಿ ಪ್ರವಾಸ 2004
 • ಹೀಟ್ ಇಟ್ ಅಪ್ ಪ್ರವಾಸ 2000

== ಚಲನಚಿತ್ರಗಳ ಪಟ್ಟಿ

==