Back

ⓘ ಗೌರಿಬಿದನೂರು ಒಂದು ತಾಲ್ಲೂಕು ಕೇಂದ್ರವಾಗಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿದೆ. ಇದು ಬೆಂಗಳೂರಿನಿಂದ ಸುಮಾರು ೭೫ km ದೂರದಲ್ಲಿ ಹಾಗು ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮ ..                                               

ಕಾದಲವೇಣಿ

ಕಾದಲವೇಣಿ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಒಂದು ಹಳ್ಳಿ ಪ್ರದೇಶ. ಇದು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿದೆ. ಕಾದಲವೇಣಿಯು ಉಪ ಜಿಲ್ಲೆಯ ಕೇಂದ್ರ ಕಾರ್ಯಾಲಯ ಗೌರಿಬಿದನೂರಿನಿಂದ ಸುಮಾರು ೬ ಕಿ.ಮೀ ದೂರದಲ್ಲಿದೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಧಾನ ಕಛೇರಿಯಿಂದ ೪೪ ಕಿ.ಮೀ ದೂರದಲ್ಲಿದೆ.

                                               

ಎ.ವೆಂಕಟಾಪುರ

ಎ.ವೆಂಕಟಾಪುರ ಇದು ತುಮಕೂರುಜಿಲ್ಲೆಯಕೊರಟಗೆರೆ ತಾಲೂಕಿನಲ್ಲಿ ೩೯೯ ಹೆಕ್ಟೇರ ಕ್ಷೇತ್ರದ ಒಂದು ಗ್ರಾಮವಾಗಿದೆ. ೨೦೧೧ರ ಜನಗಣತಿ ಪ್ರಕಾರ ಈ ಗ್ರಾಮದಲ್ಲಿ ೨೯೯ ಕುಟುಂಬಗಳು ಮತ್ತು ಒಟ್ಟು ಜನಸಂಖ್ಯೆ ೧೨೫೩ ಇವೆ. ಇದರ ಅತ್ಯಂತ ಹತ್ತಿರದ ಪಟ್ಟಣ ಕೊರಟಗೆರೆ ೯ ಕಿಲೋಮೀಟರ ಅಂತರದಲ್ಲಿದೆ. ಇಲ್ಲಿ ೬೩೨ ಪುರುಷರು ಮತ್ತು ೬೨೧ ಮಹಿಳೆಯರು ಇದ್ದಾರೆ. ಇಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ೩೦೧ ಇದ್ದು ಪರಿಶಿಷ್ಟ ಪಂಗಡ ಜನಸಂಖ್ಯೆ ೧೨೦ ಇವೆ. ಈ ಗ್ರಾಮದ ಜನಗಣತಿ ಸ್ಥಳ ನಿರ್ದೇಶನ ಸಂಖ್ಯೆ ೬೧೧೧೬೧ ಆಗಿದೆ. 2011 ಜನಗಣತಿ ಪಟ್ಟಿ ಎತ್ತರ=841 ಮೀಟರುಗಳು ಸಮುದ್ರ ಮಟ್ತಕ್ಕಿಂತ

                                               

ಭಾರತೀಯ ಖಭೌತಶಾಸ್ತ್ರ ಸಂಸ್ಥೆ

ಭಾರತೀಯ ಖಭೌತಶಾಸ್ತ್ರ ಸಂಸ್ಥೆ), ಪ್ರಾಥಮಿಕವಾಗಿ ಖಗೋಳಶಾಸ್ತ್ರ, ಖಗೋಳ ವಿಜ್ಞಾನ ಮತ್ತು ಸಂಬಂಧಿತ ವಿಷಯಗಳ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತದೆ. ಇದು ಭಾರತದಲ್ಲಿ ಖಗೋಳವಿಜ್ಞಾನದ ಪ್ರಮುಖ ಸಂಶೋಧನಾ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ತನ್ನ ಪ್ರಧಾನ ಕಚೇರಿಯನ್ನು ಕರ್ನಾಟಕದ ಬೆಂಗಳೂರು ನಗರದಲ್ಲಿ ಹೊಂದಿದೆ, ಇದು ಭಾರತದ ಪ್ರಮುಖ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯಾಗಿದೆ. ಸಂಸ್ಥೆಯು ಭಾರತದಲ್ಲಿ ಪ್ರಯೋಗಾಲಯಗಳು ಮತ್ತು ವೀಕ್ಷಣಾಲಯಗಳ ಜಾಲವನ್ನು ಕೊಡೈಕೆನಾಲ್ ಕೊಡೈಕೆನಾಲ್ ಸೌರ ವೀಕ್ಷಣಾಲಯ, ಕವಲೂರು ವೈನು ಬಾಪು ವೀಕ್ಷಣಾಲಯ, ಗೌರಿಬಿದನೂರು, ಹಾನ್ಲೆ ಭಾರತೀಯ ಖಗೋಳ ವೀಕ್ಷಣಾಲಯ ಮತ್ತು ಹೊಸಕೋಟೆಗಳಲ್ಲಿ ಹೊಂದಿದೆ. ಈ ಸಂಸ್ಥೆಯು ಭಾರತದ ಮೊದಲ ಮೀಸಲಾಗಿರುವ ಬಹು-ತರಂಗಾಂತರ ಬಾಹ್ಯಾಕಾಶ ವೀಕ್ಷಣಾಲಯವಾದ ಆಸ್ಟ್ರೋಸಾಟ್‍ಗೆ ಕೊಡುಗೆ ನೀಡಿತು. ಆ ...

                                               

ಅಚೆನಹಳ್ಳಿ

ಅಚೆನಹಳ್ಳಿಅಚೆನಹಳ್ಳಿ ಇದು ತುಮಕೂರುಜಿಲ್ಲೆಯಮಧುಗಿರಿ ತಾಲೂಕಿನಲ್ಲಿ ೧೦೧.೭೬ ಹೆಕ್ಟೇರ ಕ್ಷೇತ್ರದ ಒಂದು ಗ್ರಾಮವಾಗಿದೆ. ೨೦೧೧ರ ಜನಗಣತಿ ಪ್ರಕಾರ ಈ ಗ್ರಾಮದಲ್ಲಿ ೧೬೧ ಕುಟುಂಬಗಳು ಮತ್ತು ಒಟ್ಟು ಜನಸಂಖ್ಯೆ ೭೪೦ ಇವೆ. ಇದರ ಅತ್ಯಂತ ಹತ್ತಿರದ ಪಟ್ಟಣ ಮಧುಗಿರಿ ೮ ಕಿಲೋಮೀಟರ ಅಂತರದಲ್ಲಿದೆ. ಇಲ್ಲಿ ೩೮೭ ಪುರುಷರು ಮತ್ತು ೩೫೩ ಮಹಿಳೆಯರು ಇದ್ದಾರೆ. ಇಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ೨೬೫ ಇದ್ದು ಪರಿಶಿಷ್ಟ ಪಂಗಡ ಜನಸಂಖ್ಯೆ ೦ ಇವೆ. ಈ ಗ್ರಾಮದ ಜನಗಣತಿ ಸ್ಥಳ ನಿರ್ದೇಶನ ಸಂಖ್ಯೆ ೬೧೦೮೦೨ ಆಗಿದೆ. 2011 ಜನಗಣತಿ ಪಟ್ಟಿ ಎತ್ತರ:678 ಮೀಟರುಗಳು,ಸಮುದ್ರಮಟ್ಟದಿಂದ

                                               

ಅಲಂಕಾರ ಶಿಲೆಗಳು

ಅಲಂಕರಣ ಶಿಲೆಗಳು ವಿಶಿಷ್ಟವಾದ ರಚನೆ, ಬಣ್ಣ ಇರುವ ಉತ್ತಮ ಕೆತ್ತನೆ ಕೆಲಸಕ್ಕೆ ಒಳಗಾಗಿ ಕಟ್ಟಡದ ಸೌಂದರ್ಯ ವರ್ಧಿಸುವ ಕಲ್ಲುಗಳು. ಸುಂದರ ವಿಗ್ರಹಗಳು ಮತ್ತು ಇತರ ಅಲಂಕಾರ ಸಾಧನಗಳನ್ನು ಕಡೆಯುವುದರಲ್ಲಿಯೂ ಬಳಸುವರು. ಭಾರತದಲ್ಲೂ ಕರ್ನಾಟಕದಲ್ಲೂ ಈ ವರ್ಗದ ಅನೇಕ ಮನಮೋಹಕ ಶಿಲೆಗಳು ಸಿಗುತ್ತವೆ.

ಗೌರಿಬಿದನೂರು
                                     

ⓘ ಗೌರಿಬಿದನೂರು

ಗೌರಿಬಿದನೂರು ಒಂದು ತಾಲ್ಲೂಕು ಕೇಂದ್ರವಾಗಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿದೆ. ಇದು ಬೆಂಗಳೂರಿನಿಂದ ಸುಮಾರು ೭೫ km ದೂರದಲ್ಲಿ ಹಾಗು ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮ ಸ್ಥಳವಾದ ಮುದ್ದೇನಹಳ್ಳಿಯಿಂದ ೨೫ km ದೂರದಲ್ಲಿದೆ. ಆಂದ್ರಪ್ರದೇಶದ ಗಡಿಯಲ್ಲಿರುವುದರಿಂದ ಕನ್ನಡದ ಜೊತೆಯಲ್ಲಿ ತೆಲುಗೂ ಕೂಡ ಹೆಚ್ಚಿನ ಬಳಕೆಯಲ್ಲಿದೆ. ಟಿಪ್ಪುವಿನ ಕಾಲದಲ್ಲಿ ಅವನ ಕೆಲವು ಯೋಧರ ಘೋರಿಗಳನ್ನು ಇಲ್ಲಿ ಕಟ್ಟಲಾಗಿದುದರಿಂದ, ಇದಕ್ಕೆ ಗೌರಿಬಿದನೂರು ಎಂಬ ಹೆಸರು ಬರಲು ಕಾರಣವಾಯಿತೆಂದು ಹೇಳುತ್ತಾರೆ. ಜೊತೆಗೆ ಇಲ್ಲಿ ಹಿಂದೂ ದೇವತೆಯಾದಿ ಗೌರಿಯ ದೇವಾಲಯವಿದ್ದುದರಿಂದಲೂ ಈ ಹೆಸರು ಬಂತೆಂದು ಹೇಳುತ್ತಾರೆ.

ಡಾ. ಹೆಚ್ ನರಸಿಂಹಯ್ಯರವರ ಹುಟ್ಟೂರಾದ ಹೊಸೂರು ಇದೇ ತಾಲ್ಲೂಕಿನಲ್ಲಿದೆ. ಸ್ವತಿಗ್ರಾಮ ಯೋಜನೆಯಡಿ ಪ್ರಥಮಬಾರಿಗೆ ಕರ್ನಾಟಕ ರಾಜ್ಯ ಸರ್ಕಾರವು ಮೂಲ ಸೌಲಭ್ಯಗಳನ್ನೂ ಹೊಸೂರಿಗೆ ಒದಗಿಸಿತು.

ಮುಂಚೆ ಕಬ್ಬು ಮತ್ತು ಭತ್ತ ಇಲ್ಲಿನ ಮುಖ್ಯ ಬೆಳೆಗಳಾಗಿದ್ದವು. ಇತ್ತೀಚಿನ ದಿನಗಳಲ್ಲಿ, ಮಳೆ ಹಾಗು ಅಂತರ್ಜಲ ಕಡಿಮೆಯಾಗುತ್ತಿರುವುದರಿಂದ ರೇಷ್ಮೆ, ನೆಲಗಡಲೆ, ಜೋಳ ಮತ್ತು ಸೂರ್ಯಕಾಂತಿಯನ್ನು ಪ್ರಮುಕವಾಗಿ ಬೆಳೆಯಲಾಗುತ್ತಿದೆ. ಇಲ್ಲಿನ ಮುಖ್ಯ ನದಿಯಾದ ಉತ್ತರ ಪಿನಾಕಿನಿ ಮಳೆಗಾಳದಲ್ಲಷ್ಟೇ ಹರಿಯುತ್ತದೆ.

"ಕರ್ನಾಟಕದ ಜಲಿಯನ್‌ವಾಲಾ‍ಭಾಗ್" ಎಂದು ಪ್ರಸಿದ್ಧವಾಗಿರುವ ವಿದುರಾಶ್ವಥ, ನಗರದಿಂದ ಸುಮಾರು ೬ ಕಿಮೀ ದೂರದಲ್ಲಿದೆ. ಇದು ಬೆಂಗಳೂರು-ಹೈದರಾಬಾದ್ ರೈಲು ಮಾರ್ಗದಲ್ಲಿ ಸಿಗುವ ಕರ್ನಾಟಕದ ಕೊನೆಯ ನಿಲ್ದಾಣ. ಇಲ್ಲಿನ ಭೂಗೋಳ ಹಾಗು ನೆಲ ಸಂಪನ್ಮೂಲದ ಅನುಕೂಲತೆಯಿಂದ BARC ಹಾಗು TIFR ತಮ್ಮ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿವೆ.

                                               

ಕರ್ನಾಟಕದ ತಾಲೂಕುಗಳು

ಕರ್ನಾಟಕದ ತಾಲೂಕುಗಳು ಕರ್ನಾಟಕದ ಜಿಲ್ಲೆಗಳ ವಿಂಗಡನೆಗಳು. ಪ್ರಸಕ್ತವಾಗಿ ಕರ್ನಾಟಕದಲ್ಲಿ 31 ಜಿಲ್ಲೆಗಳಿದ್ದು, ಅವುಗಳು ಸುಮಾರು 236 ತಾಲೂಕುಗಳಾಗಿ ವಿಂಗಡಿತವಾಗಿವೆ.

                                               

ಕರ್ನಾಟಕದ ಹೋಬಳಿಗಳು

ಜಿಲ್ಲಾನುಸಾರ ತಾಲೂಕು ಮತ್ತು ಹೋಬಳಿಗಳ ವಿಂಗಡನೆ ಕೆಳಗಿನಂತಿದೆ: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯು ವಿಸ್ತೀರ್ಣದಲ್ಲಿ ಚಿಕ್ಕದಾಗಿರುವ ಕಾರಣ ಒಂದು ಜಿಲ್ಲೆಯಾಗಿ ಮಾಡಲಾಗಿದೆ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಏರಡು ಜಿಲ್ಲಾ ಕೇಂದ್ರಗಳನ್ನೂ ಒಳಗೊಂಡಿದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →