Back

ⓘ ತಾಂತ್ರಿಕ ಲೇಖನ ವು ಒಂದು ರೀತಿಯ ತಾಂತ್ರಿಕ ಸಂವಹನ ಕ್ರಿಯೆಯಾಗಿದೆ.ಇದನ್ನು ವಿಭಿನ್ನ ವಿಷಯಗಳನ್ನು ಪ್ರತಿಪಾದಿಸುವಲ್ಲಿ ಬಳಸಲಾಗುತ್ತದೆ.ಉದಾಹರಣೆಗೆ ಗಣಕಯಂತ್ರ ಅಥವಾ ಕಂಪ್ಯುಟರ್,ಹಾರ್ಡವೇರ್,ಮತ್ತ ..
                                               

ಜಾಹೀರಾತು ಮಾಹಿತಿ ಸಿದ್ಧತೆ (ಕಾಪಿರೈಟಿಂಗ್)

ಜಾಹೀರಾತು ಮಾಹಿತಿ ಸಿದ್ಧತೆ ಯು ವ್ಯಕ್ತಿ, ವ್ಯವಹಾರ, ಅಭಿಪ್ರಾಯ ಅಥವಾ ಕಲ್ಪನೆಯನ್ನು ಪ್ರಚಾರ ಮಾಡುವ ಪದಗಳ ಬಳಕೆಯಾಗಿದೆ. ಕಾಪಿ ಪದವನ್ನು ಮುದ್ರಣ ಮಾಡುವ ಯಾವುದೇ ವಿಷಯವನ್ನು ಸೂಚಿಸಲು ಬಳಸಲಾದರೂ, ಕಾಪಿರೈಟರ್ ಎಂಬ ಪದವು ಸಾಮಾನ್ಯವಾಗಿ ಅಂತಹ ಪ್ರಚಾರದ ಸಂದರ್ಭಗಳಿಗೆ ಮೀಸಲಾಗಿದೆ, ಮಾಧ್ಯಮವನ್ನು ಹೊರತುಪಡಿಸಿ ಉಲ್ಲೇಖಿಸಲಾಗುತ್ತದೆ. ಉದಾಹರಣೆಗಾಗಿ, ಸಮಾಚಾರ ಪತ್ರಿಕೆ ಅಥವಾ ನಿಯತಕಾಲಿಕದ ಲೇಖಕರನ್ನು ಸಾಮಾನ್ಯವಾಗಿ ವರದಿಗಾರ ಅಥವಾ ಬರಹಗಾರ ಅಥವಾ ಕಾಪಿರೈಟರ್ ಎಂದು ಕರೆಯಲಾಗುತ್ತದೆ. ಕಾಪಿರೈಟಿಂಗ್ ಪದವನ್ನು ನಾಮಪದ ಅಥವಾ ಕೃದಂತ ಭಾವನಾಮವಾಗಿ ಬಳಸಲಾಗುತ್ತದೆ.ಅಲ್ಲದೇ ಕಾಪಿರೈಟ್ ಅನ್ನು ಕೆಲವೊಮ್ಮೆ ವೃತ್ತಿನಿರತರು ಕ್ರಿಯಾಪದವಾಗಿ ಬಳಸುತ್ತಾರೆ. ಆದ್ದರಿಂದ ವ್ಯಾಪಾರೋದ್ಯಮ ಜಾಹೀರಾತಿನ ಮಾಹಿತಿಯ ಅಥವಾ ಪ್ರಚಾರದ ವಿಷಯದ ಮುಖ್ಯ ಉದ್ದೇಶವೆ ...

                                               

ಉರ್ದು ವಿಕಿಪೀಡಿಯ

ಉರ್ದು ವಿಕಿಪೀಡಿಯ, ಜನವರಿ 2004 ರಲ್ಲಿ ಪ್ರಾರಂಭವಾಯಿತು, ಇದು ವಿಕಿಪೀಡಿಯಾದ ಉರ್ದು ಭಾಷೆಯ ಆವೃತ್ತಿಯಾಗಿದೆ, ಇದು ಉಚಿತ, ಮುಕ್ತ-ವಿಷಯ ವಿಶ್ವಕೋಶವಾಗಿದೆ. ಜುಲೈ 2020 ರ ವೇಳೆಗೆ, ಇದು 155.593 ಲೇಖನಗಳನ್ನು ಹೊಂದಿದೆ, 116.274 ನೋಂದಾಯಿತ ಬಳಕೆದಾರರು, 10.555 ಫೈಲ್‌ಗಳನ್ನು ಹೊಂದಿದೆ ಮತ್ತು ವಿಕಿಪೀಡಿಯಗಳಲ್ಲಿ ಲೇಖನಗಳ ಆಳದ ದೃಷ್ಟಿಯಿಂದ 21 ನೇ ಸ್ಥಾನದಲ್ಲಿದೆ. ಲೇಖನ ಎಣಿಕೆಯ ಪ್ರಕಾರ ಇದು ವಿಕಿಪೀಡಿಯಾದ 50 ನೇ ಅತಿದೊಡ್ಡ ಆವೃತ್ತಿಯಾಗಿದೆ.

                                               

ಸೋಲಾರಿಸ್ (ಸೋಲಾರಿಸ್‌) ಕಾರ್ಯಾಚರಣಾ ವ್ಯವಸ್ಥೆ

ಸೋಲಾರಿಸ್ ಎಂಬುದು, 1992ರಲ್ಲಿ ಮರುನಾಮಕರಣವಾದ ಸನ್‌ ಮೈಕ್ರೊಸಿಸ್ಟಮ್ಸ್‌ SunOSನ Unix ಕಾರ್ಯಾಚರಣಾ ವ್ಯವಸ್ಥೆಯಾಗಿದೆ. ಜನವರಿ 2010ರಲ್ಲಿ ಒರಾಕಲ್‌ ಸನ್‌ನ್ನು ತನ್ನ ಸ್ವಾಮ್ಯಕ್ಕೆ ಪಡೆದುಕೊಂಡ ನಂತರ, ಸೋಲಾರಿಸ್‌ ಈಗ ಒರಾಕಲ್‌ ಸೋಲಾರಿಸ್ ‌ ಎಂದು ಚಿರಪರಿಚಿತವಾಗಿ, ಒರಾಕಲ್ ಕಾರ್ಪೊರೇಷನ್‌‌ನ ಸ್ವತ್ತಾಗಿದೆ. ಸೋಲಾರಿಸ್ ವಿಶಿಷ್ಟವಾಗಿ SPARC ವ್ಯವಸ್ಥೆಗಳ ಮೇಲೆ ಆರೋಹ್ಯತಾ ಲಕ್ಷಣಗಳು ಹಾಗೂ DTrace ಮತ್ತು ZFSನಂತಹ ಹಲವು ನವೀನ ಲಕ್ಷಣಗಳಿಗೆ ಮೂಲವಾಗಿರುವುದರಿಂದ ಚಿರಪರಿಚಿತವಾಗಿದೆ. ಸನ್‌ ಮತ್ತು ಇತರೆ ಪೂರೈಕೆದಾರರು ನೀಡುವ SPARC-ಆಧಾರಿತ ಹಾಗೂ x86-ಆಧಾರಿತ ಕಾರ್ಯಕ್ಷೇತ್ರ‌ಗಳು ಮತ್ತು ಕೇಂದ್ರೀಕೃತ ಸಂಪನ್ಮೂಲ ಕಂಪ್ಯೂಟರ್‌ ಸರ್ವರ್‌ಗಳನ್ನು ಸೋಲಾರಿಸ್ ಬೆಂಬಲಿಸುತ್ತದೆ. ಇದೀಗ ಇತರೆ ಹೆಚ್ಚುವರಿ ವೇದಿಕೆಗಳಿಗೆ ಸರಿಹೊಂದುವಂತೆ ...

                                               

ಪಂಚಾಯತ್ ರಾಜ್ಯ

ಕರ್ನಾಟಕದ ಬಗೆಗೆ ಹೊಸ ಪುಟ ಕರ್ನಾಟಕದಲ್ಲಿ ಪಂಚಾಯತ್ ರಾಜ್- ಆಧುನಿಕ ಪ್ರಪಂಚದಲ್ಲಿ ದೊಡ್ಡ ರಾಪ್ರ್ಟ ಗಳನ್ನು ಕಾಣುತ್ತೇವೆ. ಅವು ವಿಶಾಲವಾದ ಪ್ರದೇಶ ಮತ್ತು ಹೆಚ್ಚಾದ ಜನಸಂಖ್ಯೆಯನ್ನು ಹೊಂದಿರುತ್ತವೆ. ಉದಾ:- ಭಾರತದ ಪ್ರದೇಶವು ೩೨,೮೦೪೮೩ ಚ.ಕಿ.ಮಿ ಇದ್ದು. ಪ್ರದೇಶಕ್ಕೆ ತಕ್ಕಂತೆ ಜನಸಂಖ್ಯೆ ಕೂಡ ೭೦೦ ದಶಲಕ್ಷ ಇದೆ. ಇಂಥ ದೊಡ್ಡ ರಾಷ್ರ್ಟದ ಆಡಳಿವನ್ನು ಕೇಂದ್ರಸರಕಾ ರವೊಂದೆ ಸುಗಮವಾಗಿ ಸಾಗಿಸಲಾರದು. ಆಡಳಿತೆಯ ಅನುಕೂಲತೆಗಾಗಿ ಮತ್ತು ಆಡಳಿತೆಯ ದಕ್ಷತೆಯ ದೃಷ್ಟಿಯಿಂದ ರಾಷ್ರ್ಟವನ್ನು ಪಾತ್ರಗಳನ್ನಾಗಿ ಅಥವಾ ರಾಜ್ಯಗಳನ್ನಾಗಿ ವಿಭಜಿಸುತ್ತಾರೆ. ಉದಾ:- ಭಾರತ ರಾಷ್ರ್ಟದಲ್ಲಿ ೨೨ ರಾಜ್ಯಗಳಿವೆ ಮತ್ತು ೯ ಕೇಂದ್ರಾಡಳಿತ ಪ್ರದೇಶಗಳಿವೆ. ಪ್ರತಿಯೊಂದು ರಾಜ್ಯದಲ್ಲಿ ರಾಜ್ಯ ಸರಕಾರವಿದೆ. ರಾಜ್ಯ ಸರಕಾವು ಸಹ ಒಂದು ರಾಜಧಾನಿಯ ಸ್ಥಳದಿಂದ ಇಡಿ ರಾಜ ...

                                               

ಪ್ರವರ್ಗ್ಯ

ಐತಿಹಾಸಿಕ ವೈದಿಕ ಧರ್ಮದಲ್ಲಿ, ಪ್ರವರ್ಗ್ಯ ಅಗ್ನಿಷ್ಟೋಮ ಕ್ಕೆ ಸೋಮ ಆಹುತಿ ಪರಿಚಯಾತ್ಮಕವಾದ ಒಂದು ಸಮಾರಂಭವಾಗಿತ್ತು, ಮತ್ತು ಇದರಲ್ಲಿ ಮಹಾವೀರ ಅಥವಾ ಘರ್ಮವೆಂಬ ಬಿಸಿ ಪಾತ್ರೆಯಲ್ಲಿ ತಾಜಾ ಹಾಲನ್ನು ಸುರಿದು ಅಶ್ವಿನಿ ದೇವತೆಗಳಿಗೆ ಅರ್ಪಿಸಲಾಗುತ್ತಿತ್ತು. ಈ ಸಮಾರಂಭವನ್ನು ಸರಿಯಾದ ಕ್ರಿಯಾವಿಧಿ ಮೇಲಿನ ತಾಂತ್ರಿಕ ಪಠ್ಯಗಳು, ಬ್ರಾಹ್ಮಣಗಳು, ಆರಣ್ಯಕಗಳು ಮತ್ತು ಶ್ರೌತಸೂತ್ರಗಳಲ್ಲಿ ವಿವರವಾಗಿ ವರ್ಣಿಸಲಾಗಿದೆ. ಸಂಪೂರ್ಣ ಪ್ರವರ್ಗ್ಯ ಕ್ರಿಯಾವಿಧಿಯು ಎರಡು ಪ್ರತ್ಯೇಕ ಭಾಗಗಳನ್ನು ಹೊಂದಿದೆ: ಮಣ್ಣಿನ ಉಪಕರಣಗಳ, ವಿಶೇಷವಾಗಿ ಘರ್ಮ ಅಥವಾ ಮಹಾವೀರದ ತಯಾರಿಕೆ ಮತ್ತು ಕುಲುಮೆಯಿಂದ ಹೊರತೆಗೆದ ತಕ್ಷಣ ಇವುಗಳ ಮೇಲೆ ನಡೆಸಲಾಗುವ ವಿಧಿಗಳು.

                                               

ಕಂಪ್ಯೂಟರ್ ಗ್ರಾಫಿಕ್ಸ್

ರೇಖೆಗಳು ಹಾಗೂ ವಿವಿಧ ವರ್ಣಗಳ ಬಳಕೆಯಿಂದ ಇಂದು ಕಂಪ್ಯೂಟರ್ ನಲ್ಲಿ ರಂಗುರಂಗಿನ ಚಿತ್ರಗಳನ್ನು ಹಾಗೂ ವಿವಿಧ ದೃಶ್ಯಗಳನ್ನು ಮೂಡಿಸಬಹುದು ಈ ದೃಶ್ಯಗಳನ್ನು ಹಾಗೂ ಸ್ಥಿರ ಚಿತ್ರಗಳನ್ನು ಪಠ್ಯ ವಿವರಗಳೊಂದಿಗೆ ಕಂಪ್ಯೂಟರ್ ನಲ್ಲಿ ಅಳವಡಿಸುವ ಸೌಲಭ್ಯವಿದೆ.ದ‌‌‌‌‌‌ರ್ಶಕದಲ್ಲಿ ಮೂಡುವ ಅಕ್ಷರಗಳು ಅಥವಾ ಚಿತ್ರಗಳು ಹಲವಾರು ಬಿಂದುಗಳನ್ನೊಳಗೊಂಡಿರುತ್ತವೆ.ಈ ಬಿಂದುಗಳನ್ನು ಪಿಕ್ಸೆಲ್ ಎಂದು ಕರೆಯುತ್ತಾರೆ.ದರ್ಶಕದ ಉದ್ದ ಹಾಗೂ ಅಗಲಕ್ಕೂ ಇರುವ ಈ ಪಿಕ್ಸೆಲ್ ಗಳ ಒಂದು ಅಥವಾ ಸೊನ್ನೆಯಾಗಿರುತ್ತದೆ.ಈ ಮೌಲ್ಯವು ಒಂದಾಗಿದ್ದರೆ ದರ್ಶಕದ ಮೇಲೆ ಒಂದು ಚುಕ್ಕೆಯು ಮೂಡುತ್ತದೆ.ಅಕ್ಷರಗಳು ಅಥವಾ ಚಿತ್ರಗಳನ್ನು ದರ್ಶಕದ ಮೇಲೆ ಮೂಡಿಸಲು ಸೊನ್ನೆ ಅಥವಾ ಒಂದು ಮೌಲ್ಯದ ಪಿಕ್ಸೆಲ್ ಗಳನ್ನು ಬಳಸಲಾಗುತ್ತದೆ. ಗ್ರಾಫಿಕ್ಸ್ ನ ಮಟ್ಟ ಮೂಲತಹ ದ‌‌‌‌‌‌ರ್ಶಕವನ್ನು ಹಾಗೂ ...

                                     

ⓘ ತಾಂತ್ರಿಕ ಲೇಖನ

ತಾಂತ್ರಿಕ ಲೇಖನ ವು ಒಂದು ರೀತಿಯ ತಾಂತ್ರಿಕ ಸಂವಹನ ಕ್ರಿಯೆಯಾಗಿದೆ.ಇದನ್ನು ವಿಭಿನ್ನ ವಿಷಯಗಳನ್ನು ಪ್ರತಿಪಾದಿಸುವಲ್ಲಿ ಬಳಸಲಾಗುತ್ತದೆ.ಉದಾಹರಣೆಗೆ ಗಣಕಯಂತ್ರ ಅಥವಾ ಕಂಪ್ಯುಟರ್,ಹಾರ್ಡವೇರ್,ಮತ್ತು ಸಾಫ್ಟವೇರ್,ರಾಸಾಯನ ಶಾಸ್ತ್ರ,ಅಂತರಿಕ್ಷ ಉದ್ಯಮ,ರೊಬೊಟಿಕ್ಸ್,ಹಣಕಾಸು,ಗ್ರಾಹಕ ಸಂಬಂಧಿ ಎಲೆಕ್ಟ್ರಾನಿಕ್ಸ್ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ತಾಂತ್ರಿಕ ಮೂಲದ ಬರೆಹಗಾರರು ತಂತ್ರಜ್ಞಾನದ ಬಗ್ಗೆ ಮತ್ತು ಸಂಭಂಧಿತ ವಿಚಾರಗಳನ್ನು ಆಧುನಿಕ ತಂತ್ರಜ್ಞಾನ ಮತ್ತು ತಾಂತ್ರಿಕ ವಿಜ್ಞಾನ ಗೊತ್ತಿರದ ಎಲ್ಲಾ ಓದುಗರನ್ನು ಈ ಲೇಖನ-ಬರೆಹ ತಲುಪುವಂತೆ ಮಾಡುತ್ತಾರೆ. ಇದರ್ಥವೆಂದರೆ ಉದಾಹರಣೆಗೆ ಪ್ರೊಗ್ರಾಮ್ ರ ಒಬ್ಬನಿಗೆ ಸಾಫ್ಟ್ ವೇರ್ ಲೈಬ್ರರಿಯನ್ನು ಹೇಗೆ ಬಳಸಬೇಕು ಅಥವಾ ಗ್ರಾಹಕನೊಬ್ಬ ಹೇಗೆ ತನ್ನ ಟೀವಿ ರಿಮೊಟ್ ನಿಯಂತ್ರಿಕವನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ತಿಳಿಸುವುದೇ ಇದರ ಉದ್ದೇಶವಾಗಿದೆ.

ಈ ತಾಂತ್ರಿಕ ಮೂಲದ ಬರೆಹಗಾರರು ಅಸ್ತಿತ್ವದಲ್ಲಿರುವ ಅಗತ್ಯ ಮಾಹಿತಿಯನ್ನು ಕಲೆ ಹಾಕುತ್ತಾರೆ.ವಿಷಯಗಳನ್ನು ಸಂಗ್ರಹಿಸಲು ಪರಿಣತರನ್ನು ಸಂಭಂದಿತ ವಿದ್ವಾಂಸರನ್ನು ಅವರು ಪರಿಚಯ ಮಾಡಿಕೊಳ್ಳುತ್ತಾರೆ. ಒಂದು ವಿಷಯದ ಪರಿಣತ SMEಅವರ ಮೂಲಕ ಈ ತಾಂತ್ರಿಕ ವಿಷಯಗಳ ಬರೆಹಗಾರ ಅಗತ್ಯ ವಿವರ ಪಡೆದುಕೊಳ್ಳುತ್ತಾರೆ. ಆದರೆ ಈ ತಾಂತ್ರಿಕ ಬರೆಹಗಾರರು ತಾವೇ ವಿಷಯ ಪರಿಣತರಾಗಿರುವುದಿಲ್ಲ.ಆದರೆ ಅವರು ಉತ್ತಮ ತಾಂತ್ರಿಕ ವಿಷಯಗಳ ಬಗ್ಗೆ ಬರೆದಾಗ ತಮ್ಮದೇ ವಿಷಯ ಪಠ್ಯಿಕೆಯನ್ನು ಅಭ್ಯಸಿದಾಗ ಮಾತ್ರ ಅವರು ಸ್ವತಂತ್ರವಾಗಿ ಬರೆಯಬಹುದಾಗಿದೆ. ಕೆಲಸಗಾರರೂ ಸಹ ಹಲವು ಹಂತಗಳಲ್ಲಿ ವಿವಿಧ ಕ್ಷೇತ್ರಗಳ ಅನುಭವ ಪ್ರಕಾರ ತಮ್ಮ ತಾಂತ್ರಿಕ ಸಂವಹನಗಳಿಗೆ ಮುಂದಾಗುವ ಸಾಧ್ಯತೆಗಳಿವೆ. ಓರ್ವ ತಾಂತ್ರಿಕ ಬರೆಹಗಾರ ಉತ್ತಮ ಭಾಷಾ ಜ್ಞಾನ ಮತ್ತು ಕಲಿಸುವ ಅಥವಾ ಭೋದನಾ ಕೌಶಲಗಳನ್ನು ಹೊಂದಿರಬೇಕಾಗುತ್ತದೆ.ಅದರ ಜೊತೆಗೆ ಆಧುನಿಕ ತಾಂತ್ರಿಕ ಕ್ಷೇತ್ರದ ಸಂವಹನಗಳ ಸಮಾವೇಶಕ್ಕೂ ಆತ ಸಿದ್ದನಿರಬೇಕಾಗುತ್ತದೆ.

ಈ ತಾಂತ್ರಿಕ ಕ್ಷೇತ್ರದ ಬರೆಹಗಾರರ ತಂಡ ಅಥವಾ ವಿಭಾಗಗಳನ್ನು ಮಾಹಿತಿ ಅಭಿವೃದ್ಧಿ ಪಡಿಸುವಿಕೆ, ಉಪಯೋಗಿ ಸಹಾಯಕ, ಟೆಕ್ನಿಕಲ್ ಡಾಕ್ಯುಮೆಂಟೇಶನ್ ತಾಂತ್ರಿಕ ದಾಖಲೆ ಸಂಗ್ರಾಹಕಅಥವಾ ಟೆಕ್ನಿಕಲ್ ಪಬ್ಲಿಕೇಶನ್ಸ್ ತಾಂತ್ರಿಕ ಪ್ರಕಾಶನ ಎಂದು ಉಲ್ಲೇಖಿಸಲಾಗುತ್ತದೆ. ಈ ತಂತ್ರಜ್ಞಾನದ ಬರೆಹಗಾರರು ತಮ್ಮನ್ನು API ಬರೆಹಗಾರರು, ಮಾಹಿತಿ ಅಭಿವೃದ್ಧಿಗಾರರು, ಡಾಕ್ಯುಮೆಂಟೇಶನ್ ಪರಿಣತರು, ಡಾಕ್ಯುಮೆಂಟೇಶನ್ ಎಂಜನೀಯರಗಳು, ಅಥವಾ ತಾಂತ್ರಿಕ ವಿಷಯಗಳ ಅಭಿವೃದ್ಧಿಪಡಿಸುವವರು ಎಂದು ಕರೆದುಕೊಳ್ಳುತ್ತಾರೆ. ಮುಂದುವರಿದ ಅಥವಾ ಅತ್ಯಾಧುನಿಕ ತಾಂತ್ರಿಕ ಬರೆಹಗಾರರು ಬಹಳಷ್ಟು ಸಾರಿ ವಿವಿಧ ವಿಷಯಗಳಲ್ಲಿ ಪರಿಣತಿ ಪಡೆಯುತ್ತಾರೆ.ಉದಾಹರಣೆಗೆ API ಬರೆಹ,ಮಾಹಿತಿ ವಾಸ್ತುವಿನ್ಯಾಸ ಅಥವಾ ಡಾಕ್ಯುಮೆಂಟ್ ಮ್ಯಾನೇಜ್ ಮೆಂಟ್ ಇತ್ಯಾದಿ.

                                     

1. ಉದಾಹರಣೆ

ಆದರೆ ತಾಂತ್ರಿಕ ಲೇಖನಗಳ ಉಪಯುಕ್ತತೆಯನ್ನು ಓದುಗರು ತಮ್ಮ ಅಗತ್ಯಕ್ಕೆ ತಕ್ಕಂತೆ ಶಬ್ದದ ಡಿಕೋಡ್ ಮತ್ತು ಆಯಾ ಪಠ್ಯ ಆಧರಿಸಿ ಅದನ್ನು ಗ್ರಹಿಸಬೇಕಾಗುತ್ತದೆ. ಉತ್ತಮ ತಾಂತ್ರಿಕ ಬರೆಹಗಾರರನ ಲೇಖನವು ತಾಂತ್ರಿಕತೆಯಲ್ಲಿನ ಗೋಜಲುಗಲಳನ್ನು ಸ್ಪಷ್ಟಗೊಳಿಸುತ್ತದೆ;ಅದು ಉತ್ತಮ,ಸರಳ ಮಾಹಿತಿ ಒದಗಿಸಿ ಓದುಗನಿಗೆ ಸರಳ ಮತ್ತು ಅಗತ್ಯ ವಿವರ ನೀಡಲು ಸಾಧ್ಯವಾಗುತ್ತದೆ. ಕಳಪೆ ತಾಂತ್ರಿಕ ಬರೆಹವು ಅನಗತ್ಯ ಗೊಂದಲ ಸೃಷ್ಟಿಸುವ ಸಾಧ್ಯತೆ ಇರುತ್ತದೆ.ಅಥವಾ ಕೆಲವು ತಾಂತ್ರಿಕ ಶಬ್ದಗಳನ್ನು ಅರ್ಥನಿರೂಪಣೆ ಇಲ್ಲದೇ ಓದುಗನಿಗೆ ಬಿಡಿಸಲಾಗದ ಕಗ್ಗಂಟಾಗಬಹುದು.

ತಾಂತ್ರಿಕ ಬರೆಹಗಾರನ ಬರೆಹವು ಒಂದು ಕೇಕ್ ತಯಾರಿಕೆ ವಿಧಾನದಂತೆರಬೇಕು:

 • ಸೂಕ್ತ ರೀತಿ ವಿತರಣೆ: ಇದರಲ್ಲಿನ ವಿಷಯಗಳನ್ನು ಅಗತ್ಯಕ್ಕನುಗುಣವಾಗಿ ಸರಳ ಗದ್ಯ ರೂಪದಲ್ಲಿ ಪುಸ್ತಕದಲ್ಲಿ ಅಳವಡಿಸಲಾಗಿದೆಯೇ ಅಥವಾ ಅಂತಿಮ ವಿಷಯ ಗ್ರಹಿಕೆಗೆ ಸೂಕ್ತ ಆಕಾರಗೊಳಿಸಲಾಗಿದೆಯೇ ಇದರ ಗುರಿ ಒಂದು ಪತ್ರಿಕೆ,ಒಂದು ವೆಬ್ ಪೇಜ್ಜಾಲತಾಣ ಪುಟಅಥವಾ ಬೇರೆಯೇನಾದರೂ ಇದೆಯೇ?
 • ಮೂಲ: ಅಸ್ತಿತ್ವದಲ್ಲಿರ್ವ ದಾಖಲೆ ಸಮೂಹವು-ಒಂದು ಕಚ್ಚಾ ಬರೆಹವೇ? ಯಾರು ಈ ವಿಷಯ ಪರಿಣತರು SME?
 • ಓದುಗ ಪ್ರೇಕ್ಷಕರು: ಮನೆಯ ಅಡುಗೆ ಕೋಣೆಯಲ್ಲಿರುವವರು ಅಥವಾ ಅಡುಗೆ ಮನೆಯಲ್ಲಿನ ವೃತ್ತಿಪರ ಅಡುಗೆ ಮಾಡುವವರಿರಬಹುದು?

ತಾಂತ್ರಿಕ ಬರೆಹಗಾರನು ಇದನ್ನು ಅಗತ್ಯ ಕಾಗದ ಮೇಲೆ ಬರೆಯಲು ಯತ್ನಿಸುತ್ತಾನೆ.ಆದರೆ ಈ ದಾಖಲೆ ನಿರ್ಮಾತೃವನ್ನು ಅಂದರೆ ಇದರ ಅಡುಗೆ ತಯಾರಿಕೆ ಮಾಡುವವನ್ನು ಆತ ಸಂದರ್ಶಿಸಿ SME ವಿವರ ನೀಡುತ್ತಾನೆ.ಇದನ್ನು ಸಿದ್ದ ಮಾಡಿದ ಆತ ಅದರ ಪೂರ್ಣ ವಿವರ ನೀಡಬೇಕಾಗುತ್ತದೆ. ಮೊದಲು ತನ್ನ ಅಡುಗೆ ಮನೆಯಲ್ಲಿಯೇ ಈತ ತಯಾರಿಸಿದ ಅಡುಗೆಯನ್ನು ಮೊದಲು ಅಲ್ಲಿನ ಸದಸ್ಯರು ಅಥವಾ ಅಲ್ಲಿನ ಮೊದಲ ಪ್ರೇಕ್ಷಕರೆಂದರೆ ಅವರು ಅಲ್ಲಿನ ವಿಧಾನಗಳಿಗೆ ಹೊಂದಿಕೆಯಾಗಬೇಕು.ಇದು "ಒಳ ಮಿಶ್ರಣ" ಅಥವಾ "ಸಕಲಸಿದ್ದ ಪಾತ್ರೆ" ಎನ್ನಬಹುದು. ಇಲ್ಲಿ ಅಡುಗೆ ಮುಖ್ಯಸ್ಥನೆನಿಸಿ ಕೊಂಡವರು ಅದರ ಬರೆಹವನ್ನು ಪರಿಶೀಲಿಸುತ್ತಾರೆ.ಎ ಟೆಕ್ನಿಕಲ್ ಎಡಿಟ್ಇದಕ್ಕೆ ತಕ್ಕದಾದ ತಿದ್ದುಪಡಿಗಳನ್ನು ಅದು ಮಾಡಬೇಕಾಗುತ್ತದೆ.ಇದನ್ನು 350 ಡಿಗ್ರೀಸ್ ನಲ್ಲಿ ಬೇಯಿಸ ಬೇಕಾಗುತ್ತದೆ.ಅಂದರೆ 325 ಡಿಗ್ರೀಸ್ ನಲ್ಲಲ್ಲ. ಬರೆಹಗಾರರನು ಅಂತಿಮ ಡ್ರಾಫ್ಟ್ ನ್ನು ಸಿದ್ದಪಡಿಸಿ ಇಂಗ್ಲಿಷ್ ನಲ್ಲಿ ತಿದ್ದುಪಡಿ ಮಾಡುತ್ತಾನೆ.ಇಲ್ಲಿನ ಸೂಚನೆ-ಸಲಹೆಗಳು ವ್ಯಾಕರಣ ಶುದ್ದ ಭಾಷೆಯಲ್ಲಿರಬೇಕಾಗುತ್ತದೆ. ಈ ಡಾಕ್ಯುಮೆಂಟ್ ನ ಉತ್ತರಾಧಿಕಾರಿ ಅಥವಾ ಇನ್ನುಳಿದ ಹಕ್ಕುದಾರರಿಗೆ ಕೊನೆಯ ತಿದ್ದುಪಡಿ ಮಾಡಲು ಅವಕಾಶವಿದೆ.ಇಡೀ ಅಡುಗೆಯನ್ನು ಮುದ್ರಣಕ್ಕಾಗಿ ಕಳಿಸಲಾಗುತ್ತದೆ.ಇದು ಒಂದು ತೆರನಾದ ಸಲಹೆ-ಸೂಚನೆಗಳ ನಿಯಮ ಹೇಳುವ ಪ್ರಕ್ರಿಯೆಯಾಗಿದೆ.

                                     

2. ಪ್ರೇಕ್ಷಕರೊಂದಿಗಿನ ಸಂವಹನ-ಸಂಪರ್ಕ

ಈ ತಾಂತ್ರಿಕ ಬರೆಹದ ಉದ್ದೇಶವು ನಿಗದಿತ ಮಾಹಿತಿಯನ್ನು ನಿಗದಿತ ಗ್ರಾಹಕ-ಪ್ರೇಕ್ಷಕವರ್ಗಕ್ಕೆ ನಿಗದಿತ ಸಮಯದಲ್ಲಿ ನೀಡುವುದೇ ಆಗಿದೆ. ಇದು ಬಹುತೇಕ ವೈಜ್ಞಾನಿಕ ವಿಷಯಗಳು ಮತ್ತು ತಂತ್ರಜ್ಞಾನದ ವಿಷಯಗಳ ಒಟ್ಟುಗೂಡಿಸುವ ವಿಶಿಷ್ಟ ವಿಜ್ಞಾನಗಳಾಗಿವೆ.

ಈ ತಾಂತ್ರಿಕ ವಿಷಯಗಳ ಸಂಕೀರ್ಣತೆಯನ್ನು ಸರಳಗೊಳಿಸಿ ಅದನ್ನು ವಿವರ ಮತ್ತು ಮಾಹಿತಿ ಮೂಲಕ ವಿಶೇಷ ಆಸ್ಥೆಯಿಂದ ಓದುಗರಿಗೆ ತಲುಪಿಸುವುದೇ ಇದರ ಗುರಿಯಾಗಿದೆ.ವಿಶಿಷ್ಟ ಪರಿಕಲ್ಪನೆಗಳ ಹೆಣೆದು ಅದನ್ನು ಎಲ್ಲೆಡೆಗೂ ಪ್ರಚಾರ ಸಿಗುವಂತೆ ಮಾಡಲಾಗುತ್ತದೆ. ಸದ್ಯದ ಬರೆಹಗಾರರು ಸದ್ಯದ ಮಾಹಿತಿ ತಮ್ಮ ಪ್ರೇಕ್ಷಕರಿಗೆ ತಮ್ಮ ಗುರಿಗಳ ಬಗ್ಗೆ ಕೂಡಲೇ ವಿವರಣೆ ನೀಡುವಂತೆ ಮಾಡುವುದೇ ಇದರ ಉದ್ದೇಶವಾಗಿದೆ. ಪ್ರೇಕ್ಷಕರ ವಿಶ್ಲೇಷಣೆಯೇ ತಾಂತ್ರಿಕ ಬರೆಹಗಾರರು ಪಡೆಯುವ ಪ್ರಮುಖ ಫಲಿತಾಂಶದ ಲಕ್ಷಣವಾಗಿದೆ.

                                     

3. ಇತಿಹಾಸ

ಈ ತಾಂತ್ರಿಕ ಬರೆಹ ಅಥವಾ ತಾಂತ್ರಿಕ ವಿವರ ಲೇಖನ, ಬರೆಹ ವಿಷಯಗಳ ಕುರಿತ ಮಾಹಿತಿ ಒದಗಿಸುವಿಕೆ ಪುರಾತನ ಕಾಲದಿಂದಲೂ ಬಂದಿದೆ.ಉದಾಹರಣೆಗೆ ಭಾರತೀಯ,ಗ್ರೀಸ್,ನವಯುಗ ಮತ್ತು 19-ನೆಯ ಶತಮಾನದ ಮಧ್ಯ ಭಾಗದಿಂದಲೂ ಇದು ಪ್ರಚಲಿತದಲ್ಲಿತ್ತು. ಆದರೆ ಇದರ ಬಗೆಗಿನ ಸ್ಪಷ್ಟ ನಿರ್ದೇಶನವು ಮೊದಲ ವಿಶ್ವಯುದ್ದದ ಸಂದರ್ಭದಲ್ಲಿ ಕಂಡು ಬಂತು.ತಾಂತ್ರಿಕ-ಮೂಲದ ಡಾಕ್ಯುಮೆಂಟೇಶನ್ ನ ಮಹತ್ವ ಆಗ ಮಿಲಿಟರಿ,ಉತ್ಪಾದನೆ,ಎಲೆಕ್ಟ್ರಾನಿಕ್ಸ್ ಮತ್ತು ಅಂತರಿಕ್ಷ ಉದ್ಯಮಗಳು ಇತ್ಯಾದಿ. ಆಗ 1953 ರಲ್ಲಿ ತಾಂತ್ರಿಕ ಸಂವಹನ-ಸಂಪರ್ಕದ ಸುಧಾರಣೆಗಾಗಿಯೇ ಎರಡು ಸಂಘಟನೆಗಳು ಈಸ್ಟ್ ಕೋಸ್ಟ್ ನಲ್ಲಿ ಸ್ಥಾಪಿತವಾಗಿದ್ದವು:ಆಗಲೇ ಸೊಸೈಟಿ ಆಫ್ ಟೆಕ್ನಿಕಲ್ ರೈಟರ್ಸ್ ಮತ್ತು ದಿ ಅಸೊಶಿಯೇಶನ್ ಆಫ್ ಟೆಕ್ನಿಕಲ್ ರೈಟರ್ಸ್ ಮತ್ತು ಎಡಿಟರ್ಸ್ ಸ್ಥಾಪನೆಯಾದದ್ದಾಗಿವೆ. ಈ ಸಂಘಟನೆಗಳು 1957 ರಲ್ಲಿ ವಿಲೀನಗೊಂಡವು.ಇದರ ಮೂಲಕ ಸೊಸೈಟಿ ಆಫ್ ಟೆಕ್ನಿಕಲ್ ರೈಟರ್ಸ್ ಅಂಡ್ ಎಡಿಟರ್ಸ್ ಆಗಿದ್ದವು.ಇವು ಈಗಿನ ಸೊಸೈಟಿ ಫಾರ್ ಟೆಕ್ನಿಕಲ್ ಕಮ್ಯುನಿಕೇಶನ್ಸ್ STCಗೆ ಮೂಲಕಾರಣವಾಗಿವೆ.

                                     

4. ವಿತರಣಾ ಸಾಮರ್ಥ್ಯಗಳು

ಈ ತಾಂತ್ರಿಕ ಬರೆಹವು ಸಾಮಾನ್ಯವಾಗಿ ಆನ್ ಲೈನ್ ಸಹಾಯಕಕ್ಕಾಗಿ ಮತ್ತು ಗ್ರಾಹಕರ ಕೈಪಿಡಿಯಾಗಿ ಕೆಲಸ ಮಾಡುತ್ತವೆ. ಹೇಗೆಯಾದರೂ ಈ ತಾಂತ್ರಿಕ ಬರಹಗಾರರು ವಿನೂತನ ಪ್ರಕಾರಗಳ ತಾಂತ್ರಿಕ ವಿಷಯ ಪಠ್ಯವನ್ನು ಹೊಂದುವಂತೆ ಮಾಡುವ ಸಾಮರ್ಥ್ಯ ಪಡೆದಿರುತ್ತಾರೆ. ಈ ಉತ್ಪನ್ನಗಳು ಒಳಗೊಂಡಿದ್ದೆಂದರೆ ಬಿಡುಗಡೆ ಟಿಪ್ಪಣಿಗಳು,ಉತ್ಪನ್ನ ಪರಿಹಾರೋಪಾಯಗಳು ಮಾರ್ಗಸೂಚಿಗಳು, ಉತ್ಪನ್ನ ಗ್ರಾಹಕರ ಕೈಪಿಡಿಗಳು, ಟುಟೊರಿಯಲ್ ಗಳು, ಸಾಫ್ಟ್ ವೇರ್ ಇನ್ ಸ್ಟಾಲೇಶನ ವಿಷಯಸೂಚಿ, API ಪ್ರೊಗ್ರಾಮರ್ ಗಳ ಕೈಪಿಡಿಗಳು, ಕಾನೂನು ಹಕ್ಕು ನಿರಾಕರಣೆಗಳು, ಸೂತ್ರಗಳು ಮತ್ತು ನಿಯಮಾವಳಿಗಳು, ವಹಿವಾಟಿನ ಪ್ರಸ್ತಾವನೆಗಳು, ಮತ್ತು ಶ್ವೇತ ಪತ್ರಗಳು.

                                     

5. ಅಸೊಸಿಯೇಷನ್ಸ್

 • ಇಂಟರ್ ನ್ಯಾಶನಲ್ ಕೌನ್ಸಿಲ್ ಫಾರ್ ಟೆಕ್ನಿಕಲ್ ಕಮ್ಯುನಿಕೇಶನ್
 • ಟೆಕ್ನಿಕಲ್ ಕಮ್ಯುನಿಕೇಟರ್ಸ್ ಅಸೊಶಿಯೇಶನ್ ಆಫ್ ನಿವ್ಜಿಲೆಂಡ್ NZ-ಮೂಲದ
 • ಅಸೊಶಿಯೇಶನ್ ಆಫ್ ಟೀಚರ್ಸ್ ಆಫ್ ಟೆಕ್ನಿಕಲ್ ರೈಟಿಂಗ್
 • ಝೆಕ್ ಸೊಸೈಟಿ ಫಾರ್ ಟೆಕ್ನಿಕಲ್ ಕಮ್ಯುನಿಕೇಶನ್ Cz-ಮೂಲದ
 • ಇನ್ ಸ್ಟಿಟ್ಯುಟ್ ಆಫ್ ಸೈಂಟಿಫಿಕ್ ಅಂಡ್ ಟೆಕ್ನಿಕಲ್ ಕಮ್ಯುನಿಕೇಟರ್ಸ್ UK-ಮೂಲದ
 • ಸೊಸೈಟಿ ಫಾರ್ ಟೆಕ್ನಿಕಲ್ ಕಮ್ಯುನಿಕೇಶನ್
 • ಟೆಕೊಮ್ ಪ್ರೊಫೆಸ್ಸನಲ್ ಆರ್ಗೈನೇಜೇಶನ್ ಫಾರ್ ಟೆಕ್ನಿಕಲ್ ಕಮ್ಯುನಿಕೇಶನ್, ಜರ್ಮನಿ
 • ಯುಜ್ಬ್ಯಾಲಿಟಿ ಪ್ರೊಫೆಸನಲ್ಸ್ ಅಸೊಶಿಅಯೇಶನ್ ಆಫ್ ನ್ವ್ಜಿಲೆಂಡ್ NZ-ಮೂಲದ
 • ಅಸೊಶಿಯೇಶನ್ ಫಾರ್ ಬಿಸಿನೆಸ್ ಕಮ್ಯುನಿಕೇಶನ್
 • IEEE ಪ್ರೊಫೆಸ್ಸನಲ್ ಕಮ್ಯುನಿಕೇಶನ್ ಸೊಸೈಟಿ
 • ಎಲ್ಫಂಟ್ ಪ್ರೊಫೆಸ್ಸನಲ್ ಆರ್ಗೈನೈಜೇಶನ್ ಫಾರ್ ಟೆಕ್ನಿಕಲ್ ರೈಟರ್ಸ್, ಇಸ್ರೇಲ್