Back

ⓘ ಲಾರಾ ದತ್ತಾ ಇವರು ಭಾರತೀಯ ನಟಿಯಾಗಿದ್ದು, UNFPA ಯ ಸೌಹಾರ್ದ ರಾಯಭಾರಿಯಾಗಿದ್ದರಲ್ಲದೇ, ಮಾಜಿ ಭುವನ ಸುಂದರಿಎನಿಸಿದ್ದಾರೆ. ..
                                               

ಮೀನಾಕ್ಷಿ ಚೌಧರಿ

ಮೀನಾಕ್ಷಿ ಚೌಧರಿ ಭಾರತೀಯ ರೂಪದರ್ಶಿ, ನಟಿ ಮತ್ತು ಸೌಂದರ್ಯ ಸ್ಪರ್ಧೆಯ ಶೀರ್ಷಿಕೆದಾರ. ಫೆಮಿನಾ ಮಿಸ್ ಇಂಡಿಯಾ ೨೦೧೮ ಸ್ಪರ್ಧೆಯಲ್ಲಿ ಅವರು ಹರಿಯಾಣ ರಾಜ್ಯವನ್ನು ಪ್ರತಿನಿಧಿಸಿದರು, ಅಲ್ಲಿ ಅವರು ಮಿಸ್ ಗ್ರ್ಯಾಂಡ್ ಇಂಡಿಯಾ ಎಂದು ಕಿರೀಟವನ್ನು ಪಡೆದರು. ಮ್ಯಾನ್ಮಾರ್‌ನ ಯಾಂಗೊನ್‌ನಲ್ಲಿ ನಡೆದ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್ ೨೦೧೮ ರ ಸೌಂದರ್ಯ ಸ್ಪರ್ಧೆಯಲ್ಲಿ ಚೌಧರಿ ಭಾರತವನ್ನು ಪ್ರತಿನಿಧಿಸಿದರು ಮತ್ತು ೧ ನೇ ರನ್ನರ್ ಅಪ್ ಆಗಿ ಕಿರೀಟವನ್ನು ಪಡೆದರು ಮತ್ತು ಸ್ಪರ್ಧೆಯಲ್ಲಿ ಭಾರತದ ಅತ್ಯುನ್ನತ ಸ್ಥಾನ ಪಡೆದರು.

ಲಾರಾ ದತ್ತಾ
                                     

ⓘ ಲಾರಾ ದತ್ತಾ

ಲಾರಾ ದತ್ತಾ ಇವರು ಭಾರತೀಯ ನಟಿಯಾಗಿದ್ದು, UNFPA ಯ ಸೌಹಾರ್ದ ರಾಯಭಾರಿಯಾಗಿದ್ದರಲ್ಲದೇ, ಮಾಜಿ ಭುವನ ಸುಂದರಿಎನಿಸಿದ್ದಾರೆ.

                                     

1.1. ಬಯೋಗ್ರಫಿ ಆರಂಭಿಕ ಜೀವನ

ದತ್ತಾ, ಉತ್ತರಪ್ರದೇಶದ ಗಾಜಿಯಾ ಬಾದ್ ನಲ್ಲಿ ಪಂಜಾಬೀ ತಂದೆ ಮತ್ತು ಆಂಗ್ಲೋ-ಇಂಡಿಯನ್‌ ತಾಯಿಯ ಪುತ್ರಿಯಾಗಿ ಜನಿಸಿದರು. ಇವರ ತಂದೆ ವಿಂಗ್ ಕಮಾಂಡರ್ L.K. ದತ್ತಾ ನಿವೃತ್ತ, ತಾಯಿ ಜೆನಿಫರ್ ದತ್ತಾರವರಾಗಿದ್ದಾರೆ. ಇವರು ಇಬ್ಬರು ಹಿರಿಯ ಸಹೋದರಿಯರನ್ನು ಹೊಂದಿದ್ದು, ಅವರಲ್ಲಿ ಒಬ್ಬರು ಭಾರತೀಯ ವಾಯುಪಡೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಎರಡನೆಯವರು ಕೂಡ ಪ್ರಸಿದ್ಧರಾಗಿದ್ದಾರೆ. ಪ್ರಸಿದ್ಧ ಸಂಗೀತಕಾರ DJ ನಿತಿನ್ ಸಾನಿ ದತ್ತಾರವರ ಸೋದರ ಸಂಬಂಧಿಯಾಗಿದ್ದಾರೆ. 1981 ರಲ್ಲಿ ದತ್ತಾ ಕುಟುಂಬವು ಬೆಂಗಳೂರಿಗೆ ತೆರಳಿತು. ಅಲ್ಲಿ ಅವರು ತಮ್ಮ ಪ್ರೌಢ ಶಿಕ್ಷಣವನ್ನು, ಸೆಂಟ್ ಫ್ರಾನ್ಸಿಸ್ ಝೇವಿಯರ್ ಮಹಿಳಾ ಪ್ರೌಢ ಶಾಲೆಯಲ್ಲಿ ಮತ್ತು ಫ್ರ್ಯಾಂಕ್ ಅಂತೋನಿ ಪಬ್ಲಿಕ್ ಶಾಲೆಯಲ್ಲಿ ಮುಗಿಸಿದರು. ಲಾರಾ ಮುಂಬಯಿ ವಿಶ್ವವಿದ್ಯಾನಿಲಯದಿಂದ ಮೈನರ್ ಇನ್ ಕಮ್ಯುನಿಕೇಷನ್ ನೊಂದಿಗೆ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಅಲ್ಲದೇ 2000 ನೆಯ ಇಸವಿಯಲ್ಲಿ ಭುವನ ಸುಂದರಿ ಕಿರೀಟ ಧರಿಸಿದರು, ಇದು ಅವರನ್ನು UNFPA ಯ ಸೌಹಾರ್ದ ರಾಯಭಾರಿಯನ್ನಾಗಿಸಿತು.

                                     

1.2. ಬಯೋಗ್ರಫಿ ಮಾಡೆಲಿಂಗ್ರೂಪದರ್ಶಿ ವೃತ್ತಿಜೀವನ

ದತ್ತಾ ವಾರ್ಷಿಕ ಗ್ಲ್ಯಾಡ್ಸ್ ರಾಗ್ಸ್ ಮಾಡೆಲಿಂಗ್ ಸ್ಪರ್ಧೆಯನ್ನು ತನ್ನ ತಾಯ್ನಾಡಾದ ಭಾರತದಲ್ಲಿ ಗೆದ್ದುಕೊಂಡರು. ಈ ಮೂಲಕ 1997 ರ ಮಿಸ್ ಇಂಟರ್ ಕಾಂಟಿನೆಂಟಲ್ ಖಂಡಾಂತರ ಸುಂದರಿ ಸ್ಪರ್ಧೆಯಲ್ಲಿ ಪ್ರಥಮ ಭಾರತೀಯ ಪ್ರತಿನಿಧಿಯಾಗುವ ಹಕ್ಕನ್ನು ಪಡೆದುಕೊಂಡರು, ಹಾಗು ಮೊದಲನೆಯ ಸ್ಥಾನ ಗಳಿಸಿದರು. ಅನಂತರ, ಅವರು ಫೆಮಿನಾ ಮಿಸ್ ಇಂಡಿಯಾ ಯುನಿವರ್ಸ್ಫೆಮಿನಾ ಭಾರತದ ಭುವನ ಸುಂದರಿಕಿರೀಟ ಧರಿಸಿದರಲ್ಲದೇ, 2000 ಇಸವಿಯಲ್ಲಿ ಭುವನ ಸುಂದರಿಯಾದರು.

ಸೈಪ್ರಸ್ ನಲ್ಲಿ ನಡೆದ ಭುವನ ಸುಂದರಿ 2000 ದಲ್ಲಿ ವೆನಿಜುಲಾ, ಸ್ಪ್ಯೇನ್, USA ಮತ್ತು ಕೆನಡಾ ದಿಂದ ನೀಡಲಾದ ಅತ್ಯಂತ ಕಠಿಣವಾದ ಸ್ಪರ್ಧೆಯಲ್ಲಿ ದತ್ತಾ ನಿರೀಕ್ಷಿತ ವಿಜೇತೆಯಾದರು. ಈಜುಡುಪು ಸ್ಪರ್ಧೆಯಲ್ಲಿ ಅವರು ಅತ್ಯಂತ ಅಧಿಕ ಅಂಕಗಳನ್ನು ಗಳಿಸಿದರು. ಅಲ್ಲದೇ ಅವರ ಅಂತಿಮ ಸ್ಪರ್ಧಿ ಸಂದರ್ಶನದಲ್ಲಿ ಗಳಿಸಿರುವ ಅಂಕ ಭುವನ ಸುಂದರಿ ಸ್ಪರ್ಧೆಯ ಯಾವುದೇ ವಿಭಾಗದ ಇತಿಹಾಸದಲ್ಲೆ ಅತ್ಯಂತ ಹೆಚ್ಚು ಅಂಕಗಳಾಗಿವೆ. ಅವರ ಪರಿಪೂರ್ಣ ಸಂದರ್ಶನ ಬಹುಪಾಲು ತೀರ್ಪುಗಾರರು ಗರಿಷ್ಠ 9.99 ಅಂಕಗಳನ್ನು ಕೊಡುವಂತೆ ಮಾಡಿತು. ಅವರ ಅಂತಿಮ ಪ್ರಶ್ನೆಗೆ ಭುವನಸುಂದರಿ ಸ್ಪರ್ಧೆಯಮತ್ತು ಇತರ ಸೌಂದರ್ಯ ಪ್ರದರ್ಶನಗಳುಭಾವನಾತ್ಮಕ ಸಮರ್ಥನೆಯನ್ನು ನೀಡಿದ ನಂತರ, ದತ್ತಾ ಎರಡನೆಯ ಭಾರತೀಯ ಭುವನ ಸುಂದರಿಯಾದರು.

ಇದೇ ವರ್ಷದಲ್ಲಿ, ಪ್ರಿಯಾಂಕ ಚೋಪ್ರಾ ಮತ್ತು ದಿಯಾ ಮಿರ್ಜಾ ಅನುಕ್ರಮವಾಗಿ ಅವರ ವಿಶ್ವಸುಂದರಿ ಮತ್ತು ಮಿಸ್ ಏಷಿಯಾ ಫೆಸಿಫಿಕ್ ಕಿರೀಟವನ್ನು ಗೆದ್ದುಕೊಂಡರು. ಇದರಿಂದಾಗಿ ಪ್ರಪಂಚದಲ್ಲಿನ ಸೌಂದರ್ಯ ಪ್ರದರ್ಶನಗಳಲ್ಲಿ ಭಾರತಕ್ಕೆ ಅತ್ಯಂತ ಅಪರೂಪದ ಮೂರು ಜಯಗಳು ಲಭ್ಯವಾದವು.

                                     

1.3. ಬಯೋಗ್ರಫಿ ನಟನಾ ವೃತ್ತಿಜೀವನ

ಲಾರಾ ದತ್ತಾ ಆರಂಭದಲ್ಲಿ ಅರಸಚ್ಚಿ ಎಂಬ ತಮಿಳುಚಲನಚಿತ್ರಕ್ಕೆ 2002 ರಲ್ಲಿ ಸಹಿಹಾಕಿದರು. ಆದರೆ ಹಣಕಾಸಿನ ತೊಂದರೆಗಳಿಂದಾಗಿ ಈ ಚಲನಚಿತ್ರ 2004 ರ ಮಧ್ಯಾವಧಿಯಲ್ಲಿ ತೆರೆಕಂಡಿತು. 2003 ರಲ್ಲಿ ಅಂದಾಜ್ ಎಂಬ ಹಿಂದಿ ಚಲನಚಿತ್ರದಲ್ಲಿ ನಟಿಸುವ ಮೂಲಕ ಹಿಂದಿ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತಲ್ಲದೇ, ಅವರಿಗೆ ಫಿಲ್ಮ್ ಫೇರ್ ಅತ್ಯುತ್ತಮ ಆರಂಭಿಕ ನಟಿ ಪ್ರಶಸ್ತಿಯನ್ನು ತಂದುಕೊಟ್ಟಿತು. ಅನಂತರ ಅವರು ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಅವುಗಳಲ್ಲಿ ಕೆಲವು ಗಲ್ಲಾ ಪೆಟ್ಟಿಗೆಯಲ್ಲಿ ಸೋತರೆ, ಕೆಲವು ಸಾಧಾರಣ ಯಶಸ್ಸನ್ನು ಕಂಡಿವೆ. ಗಲ್ಲಾ ಪೆಟ್ಟಿಗೆಯಲ್ಲಿ "ಯಶಸ್ವಿಯಾದ" ಅವರ ಚಲನಚಿತ್ರಗಳು ಕೆಳಕಂಡಂತಿವೆ: ಮಸ್ತಿ 2004, ನೋ ಎಂಟ್ರಿ 2005, ಪಾರ್ಟನರ್ 2007 ಮತ್ತು ಹೌಸ್ ಫುಲ್ಸಿನಿಮಾ 2010.

2006 ರಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಹಾಸ್ಯ ಪ್ರಧಾನ ಭಾಗಂ ಬಾಗ್ ಚಲನಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಚೆನ್ನಾಗಿ ಹಣ ಗಳಿಸಿತು.

2007 ರಲ್ಲಿ ಸಾನಿಯಾ ಮಿರ್ಜಾ ಮತ್ತು ದತ್ತಾ 2007 ರ ನವೆಂಬರ್ 13 ರಂದು ನಡೆದ ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶಾದ್ ಅಲಿಯವರ ಜೂಮ್ ಬರಾಬರ್ ಜೂಮ್, 2007 ರಲ್ಲಿ ತೆರೆಕಂಡ ದತ್ತಾರವರ ಮೊದಲ ಚಲನಚಿತ್ರವಾಗಿದೆ. ಈ ಚಲನಚಿತ್ರವು ಭಾರತದಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಸೋತರೂ ಕೂಡ, ಹೊರದೇಶಗಳಲ್ಲಿ ವಿಶೇಷವಾಗಿ U.K. ಯಲ್ಲಿ ಉತ್ತಮ ಸಾಧನೆಯನ್ನು ಕಂಡಿತು. ಈ ಚಲನಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದರು. ಅನಂತರ ತೆರೆಕಂಡ ಅವರ ಪಾರ್ಟನರ್ ಚಲನಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತಲ್ಲದೇ, ಯಶಸ್ವಿಯಾಯಿತು.

ಇತ್ತೀಚೆಗೆ ತೆರೆಕಂಡ ಅವರ ಬ್ಲೂ ಚಲನಚಿತ್ರವು ಅತ್ಯಂತ ದುಬಾರಿ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ. ಆದರೆ ದತ್ತಾ ಈ ಯೋಜನೆಯನ್ನು ಕೈಬಿಟ್ಟಿದ್ದರು, ಏಕೆಂದರೆ ದತ್ತಾರವರಿಗೆ ಈಜು ಬರುತ್ತಿರಲಿಲ್ಲ. ಈ ಸಿನಿಮಾವನ್ನು ಸಂಪೂರ್ಣವಾಗಿ ಸಮುದ್ರದಲ್ಲಿ ಚಿತ್ರಿಸಲಾಗಿದೆ. ಆರಂಭದಲ್ಲಿ ಈ ಚಲನಚಿತ್ರಕ್ಕೆ ಸಹಿಹಾಕಲು ಅವರು ನಿರಾಕರಿಸಿದರು, ಆದರೆ ನಾಯಕ ನಟ ಅಕ್ಷಯ್ ಕುಮಾರ್, ಈಜುವುದನ್ನು ಕಲಿಯುವಲ್ಲಿ ಅವರಿಗೆ ಪ್ರೋತ್ಸಾಹಿಸಿದರು. ಇದರಿಂದಾಗಿ ತಕ್ಷಣವೇ ದತ್ತಾ ವಿಶೇಷ ತರಬೇತುದಾರನಿಂದ ಈಜನ್ನು ಕಲಿಯಲು ಪ್ರಾರಂಭಿಸಿದರು. ಬ್ಲೂ 2009 ರ ಅಕ್ಟೋಬರ್ 16 ರಂದು ತೆರೆಕಂಡಿತು. ದತ್ತಾ, "ಈ ಯೋಜನೆಯ ಬಗ್ಗೆ ನನಗೆ ತಿಳಿದಾಗ, ನಾನು ಅಕ್ಷಯ್ ಯವರನ್ನು ಕರೆಯಿಸಿ, ಈ ಯೋಜನೆಯನ್ನು ಒಪ್ಪಿಕೊಳ್ಳಲಾಗುವುದಿಲ್ಲವೆಂದು ಅವರಿಗೆ ಹೇಳಿದೆ. ನನ್ನ ನಿರ್ಧಾರಕ್ಕೆ ಕಾರಣ ಏನೆಂಬುದು ಅವರಿಗೆ ತಿಳಿದಿತ್ತು. ಅಂದಾಜ್ ಚಲನಚಿತ್ರದ ಸಮಯದಲ್ಲಿ ನಾನು ಬಹುಪಾಲು ನೀರು ಪಾಲಾಗಿದ್ದೆ ಎಂಬುದು ಕೇವಲ ಕೆಲವರಿಗೆ ಮಾತ್ರ ಗೊತ್ತು. ಇದರಿಂದ ಅಕ್ಷಯ್ ನನ್ನನ್ನು ಪಾರುಮಾಡಿದ್ದರು, ಎಂದು ಹೇಳಿದ್ದಾರೆ. ನನಗೆ ಈಜು ಬರುವುದಿಲ್ಲ ಎಂದು ಅವರಿಗೆ ನೆನಪಿಸಿದಾಗ, ಅಕ್ಷಯ್ ಭಯವನ್ನು ಮರೆತು ತಕ್ಷಣವೇ ಈಜುವುದನ್ನು ಕಲಿ ಎಂದು ಹೇಳಿದ್ದರು" ಎಂದು ದತ್ತಾ ನೆನಪಿಸುತ್ತಾರೆ. "ಇಂದು, ಬ್ಲೂ ಕೇವಲ ನನ್ನ ಭಯವನ್ನು ಮೆಟ್ಟಿನಿಲ್ಲುವಂತೆ ಮಾಡಿತಲ್ಲದೇ, ನಾನು ಬದುಕಿರುವವರೆಗೂ ನನ್ನ ಜೊತೆಯಲ್ಲಿ ಉಳಿಯುವುದನ್ನು ನನಗೆ ಕಲಿಸಿಕೊಟ್ಟಿದೆ, ಎಂದು ನನಗನಿಸುತ್ತದೆ" ಎಂದು ಹೇಳುತ್ತಾರೆ.

ಇತ್ತೀಚೆಗೆ ತೆರೆಕಂಡ ಅವರ ಹೌಸ್ ಫುಲ್ಸಿನಿಮಾ ಭಾರತದಲ್ಲೆಲ್ಲಾ ಯಶಸ್ವಿ ಸಾಧನೆ ಮಾಡಿತು. ಈ ಚಲನಚಿತ್ರದಲ್ಲಿ ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ ಮತ್ತು ರಿತೇಶ್ ದೇಶ್ ಮುಖ್ ಪ್ರಮುಖ ಪಾತ್ರದಲ್ಲಿದ್ದಾರೆ.                                     

1.4. ಬಯೋಗ್ರಫಿ ವೈಯಕ್ತಿಕ ಜೀವನ

ದತ್ತಾ ನ್ಯೂಯಾರ್ಕ್ ನಗರದಲ್ಲಿ ವಾಸವಾಗಿದ್ದಾಗ ನ್ಯೂಯಾರ್ಕ್ ಯಾಂಕೀಸ್ ಎಂಬ ಬೇಸ್ ಬಾಲ್ ತಂಡದ ನಾಯಕರಾದ ಡೆರೆಕ್ ಜೆಟರ್ ರವರೊಂದಿಗೆ ಮುಕ್ತ ವಿಹಾರ ಮಾಡಿದ್ದರು. ಅಲ್ಲಿ ಯಾಂಕೀಸ್ ಮೈದಾನದಲ್ಲಿ ನಡೆಯುತ್ತಿದ್ದ ಬೇಸ್ ಬಾಲ್ ಆಟದ ಸಂದರ್ಭದಲ್ಲಿ ದತ್ತಾ ಕಾಣಿಸಿಕೊಂಡಿದ್ದರು, ಹಾಗು ESPN ಈ ಸುದ್ದಿಯನ್ನು ವರದಿಮಾಡಿತ್ತು.

2010 ರ ಸೆಪ್ಟೆಂಬರ್ ನಲ್ಲಿ, ಭಾರತೀಯ ಟೆನಿಸ್ ಆಟಗಾರರಾದ ಮಹೇಶ್ ಭೂಪತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.

                                     

2. ಪ್ರಶಸ್ತಿಗಳು

  • 2004: ಅಂದಾಜ್ ಚಿತ್ರಕ್ಕಾಗಿ, ಪ್ರಿಯಾಂಕ ಚೋಪ್ರಾ ರವರೊಂದಿಗೆ ಒಟ್ಟಿಗೆ ಗೆದ್ದುಕೊಂಡದ್ದು ಫಿಲ್ಮ್ ಫೇರ್ ಅತ್ಯುತ್ತಮ ಚೊಚ್ಚಿಲ ನಟಿ ಪ್ರಶಸ್ತಿ,
  • 2004: ಅಂದಾಜ್ ಚಲನಚಿತ್ರಕ್ಕಾಗಿ, ಸ್ಟಾರ್ ಸ್ಕ್ರೀನ್ ಅತ್ಯುತ್ತಮ ಭರವಸೆ ಮೂಡಿಸಬಲ್ಲ ನಟಿ ಪ್ರಶಸ್ತಿ - ನಟಿ,
  • 2008: ರಾಜೀವ್ ಗಾಂಧಿ ಪ್ರಶಸ್ತಿಚಲನಚಿತ್ರರಂಗಕ್ಕೆ ಮಹಿಳಾ ಕ್ಷೇತ್ರದಿಂದ ಸಲ್ಲಿಸಿರುವ ಸೇವೆಗಾಗಿ