Back

ⓘ ಶಶಿ ಕಪೂರ್‌ ಮೂಲ ಹೆಸರು ಬಲ್ಬೀರ್ ಪ್ರಥ್ವಿರಾಜ್ ಕಪೂರ್ ಮಾರ್ಚ್ ೧೮, ೧೯೩೮ರಲ್ಲಿ ಕಲ್ಕತ್ತಾದಲ್ಲಿ ಜನಿಸಿದರು. ಇವರು ಭಾರತದಪ್ರಶಸ್ತಿ ವಿಜೇತ ನಟ ಹಾಗೂ ನಿರ್ಮಾಪಕರಾಗಿದ್ದರು. ಇವರು ಕಪೂರ್ ಕುಟುಂ ..                                               

ಕಪೂರ್ ಆ್ಯಂಡ್ ಸನ್ಸ್ (ಚಲನಚಿತ್ರ)

ಕಪೂರ್ ಆ್ಯಂಡ್ ಸನ್ಸ್ ಎಂದೂ ಕರೆಯಲ್ಪಡುವ ಕಪೂರ್ ಆ್ಯಂಡ್ ಸನ್ಸ್ ಒಂದು ಹಿಂದಿ ಕೌಟುಂಬಿಕ ನಾಟಕ ಚಲನಚಿತ್ರವಾಗಿದೆ. ಇದನ್ನು ಶಕುನ್ ಬಾತ್ರಾ ನಿರ್ದೇಶಿಸಿದ್ದು, ಕರನ್ ಜೋಹರ್, ಹೀರೂ ಯಶ್ ಜೋಹರ್ ಹಾಗೂ ಅಪೂರ್ವ ಮೆಹ್ತಾ ಧರ್ಮಾ ಪ್ರೊಡಕ್ಷನ್ಸ್ ಮತ್ತು ಫಾಕ್ಸ್ ಸ್ಟಾರ್ ಸ್ಟೂಡಿಯೋಸ್ ಲಾಂಛನಗಳ ಅಡಿಯಲ್ಲಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಫವಾದ್ ಖಾನ್, ಆಲಿಯಾ ಭಟ್, ರತ್ನಾ ಪಾಠಕ್ ಶಾ, ರಜತ್ ಕಪೂರ್, ಮತ್ತು ರಿಷಿ ಕಪೂರ್ ನಟಿಸಿರುವ ಸಮೂಹ ಪಾತ್ರವರ್ಗವಿದೆ. ಕಪೂರ್ ಆ್ಯಂಡ್ ಸನ್ಸ್ ಇಬ್ಬರು ಅಗಲಿದ ಸಹೋದರರು ತಮ್ಮ ಅಜ್ಜನು ಹೃದಯ ಸ್ತಂಭನಕ್ಕೆ ಒಳಗಾದಾಗ ತಮ್ಮ ಅಪಸಾಮಾನ್ಯ ಕುಟುಂಬಕ್ಕೆ ಮರಳುವ ಕಥೆಯನ್ನು ಹೇಳುತ್ತದೆ. ಈ ಚಿತ್ರವು ಮಾರ್ಚ್ 18, 2016 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು ಮತ್ತು ವಿಮರ್ಶಾತ್ಮಕ ಮ ...

                                               

ರಾಜಾ ಹಿಂದುಸ್ತಾನಿ (ಚಲನಚಿತ್ರ)

ರಾಜಾ ಹಿಂದುಸ್ತಾನಿ ೧೯೯೬ರ ಒಂದು ಹಿಂದಿ ಪ್ರಣಯಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಧರ್ಮೇಶ್ ದರ್ಶನ್ ನಿರ್ದೇಶಿಸಿದ್ದಾರೆ. ಇದು ಒಬ್ಬ ಶ್ರೀಮಂತ ಯುವತಿಯನ್ನು ಪ್ರೀತಿಸತೊಡಗುವ ಸಣ್ಣ ಪಟ್ಟಣದ ಒಬ್ಬ ಟ್ಯಾಕ್ಸಿ ಚಾಲಕನ ಕಥೆಯನ್ನು ಹೇಳುತ್ತದೆ. ಆಮಿರ್ ಖಾನ್‌ ಮತ್ತು ಕರಿಶ್ಮಾ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ೧೫ ನವೆಂಬರ್ ೧೯೯೬ರಂದು ಬಿಡುಗಡೆಯಾದ ಈ ಚಿತ್ರದ ಕಥಾವಸ್ತುವು ಶಶಿ ಕಪೂರ್ ಮತ್ತು ನಂದಾ ನಟಿಸಿರುವ ೧೯೬೫ರ ಚಿತ್ರ ಜಬ್ ಜಬ್ ಫೂಲ್ ಖಿಲೆ ಯಿಂದ ಸ್ಫೂರ್ತಿಪಡೆದಿದೆ. ಚಿತ್ರದ ಸಂಗೀತವನ್ನು ನದೀಮ್-ಶ್ರವಣ್ ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಸಮೀರ್ ಬರೆದಿದ್ದಾರೆ. ಈ ಚಿತ್ರವು ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಟರ ಪ್ರಶಸ್ತಿ ಸೇರಿದಂತೆ ಐದು ಫಿಲ್ಮ್‌ಫೇರ್ ಪ್ರಶಸ್ತಿಗಳು, ಮತ್ತು ಏಳು ಸ್ಕ್ರೀನ್ ...

ಶಶಿ ಕಪೂರ್
                                     

ⓘ ಶಶಿ ಕಪೂರ್

ಶಶಿ ಕಪೂರ್‌ ಮೂಲ ಹೆಸರು ಬಲ್ಬೀರ್ ಪ್ರಥ್ವಿರಾಜ್ ಕಪೂರ್ ಮಾರ್ಚ್ ೧೮, ೧೯೩೮ರಲ್ಲಿ ಕಲ್ಕತ್ತಾದಲ್ಲಿ ಜನಿಸಿದರು. ಇವರು ಭಾರತದಪ್ರಶಸ್ತಿ ವಿಜೇತ ನಟ ಹಾಗೂ ನಿರ್ಮಾಪಕರಾಗಿದ್ದರು. ಇವರು ಕಪೂರ್ ಕುಟುಂಬದ ಸದಸ್ಯರಾಗಿದ್ದು, ಭಾರತದ ಬಾಲಿವುಡ್ ಸಿನಿಮಾ ರಂಗದಲ್ಲಿ ಇವರ ವಂಶದ ಕೊಡುಗೆಯೂ ಸಾಕಷ್ಟಿದೆ.

                                     

1. ಪರಿಚಯ

 • ಇವರ ತಂದೆ ಪೃಥ್ವಿರಾಜ್ ಕಪೂರ್ ಆಗಿದ್ದು, ರಾಜ್ ಕಪೂರ್ ಹಾಗೂ ಶಮ್ಮಿ ಕಪೂರ್ ರವರ ಕಿರಿಯ ಸಹೋದರರಾಗಿದ್ದಾರೆ. ಇವರ ಪತ್ನಿ ಜೆನ್ನಿಫರ್ ಕೆಂಡಲ್ ತೀರಿಹೋಗಿದ್ದು, ಕರಣ್ ಕಪೂರ್, ಕುನಾಲ್ ಕಪೂರ್ ಹಾಗೂ ಸಂಜನಾ ಕಪೂರ್ ಎಂಬ ಮಕ್ಕಳಿದ್ದಾರೆ. ಇವರನ್ನು ಹಿಂದಿಯ ಸಾಕಷ್ಟು ಜನಪ್ರಿಯ ಸಿನಿಮಾಗಳಲ್ಲಿ ನೆನೆಸಿಕೊಳ್ಳಬಹುದು.
 • ಖ್ಯಾತ ನಟ ಅಮಿತಾಭ್ ಬಚ್ಚನ್ ಅವರೊಂದಿಗೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಅವುಗಳೆಂದರೆ ದೀವಾರ್, ದೋ ಔರ್ ದೋ ಪಾಂಚ್ ಮತ್ತು ನಮಕ್ ಹಲಾ ಲ್ ಗಳಲ್ಲಿ ನಟಿಸಿದ್ದಾರೆ. ಇದರ ಜತೆ ಇವರು ಬ್ರಿಟಿಷ್ ಸಿನಿಮಾಗಳಲ್ಲೂ ಬಹಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ಹಲವಾರು ಬ್ರಿಟೀಷ್ ಚಿತ್ರಗಳಲ್ಲೂ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಇದರಲ್ಲಿ ಮರ್ಚೆಂಟ್ ಐವರಿ ಪ್ರೊಡಕ್ಷನ್ಸ್‌ನ ಶೇಕ್ಸ್‌ಪಿಯರ್- ವಲ್ಲಾಹ್ ಸಹ ಒಂದು.
                                     

2. ವೃತ್ತಿಜೀವನ

 • ೧೯೯೧ರಲ್ಲಿ ಇವರೇ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಕಲ್ಪಿತ ಕಥಾಹಂದರದ ಸಿನಿಮಾ ಅಜೂಬಾ ವನ್ನು ತಯಾರಿಸಿದರು. ಇದರಲ್ಲಿ ಅಮಿತಾಭ್ ಬಚ್ಚನ್ ಹಾಗೂ ಸೋದರಳಿಯ ರಿಷಿ ಕಪೂರ್ ಸಹ ನಟಿಸಿದ್ದರು. ಇವರ ಕೊನೆಯ ಹಾಗೂ ಇತ್ತೀಚಿನ ಜೀವನಚಿತ್ರವಾದ ಜಿನ್ಹಾ ೧೯೯೮ದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಮಹಮ್ಮದ್ ಅಲಿ ಜಿನ್ಹಾ ಪಾತ್ರದಲ್ಲಿ ನಟಿಸಿದ್ದು, ನಿರೂಪಕರಾಗಿದ್ದರು. ಮತ್ತು ಮರ್ಚೆಂಟ್ ಐವರಿ ಪ್ರೊಡಕ್ಷನ್ ನವರ ಸೈಡ್ ಸ್ಟ್ರೀಟ್ಸ್ ೧೯೯೮ದಲ್ಲೂ ನಟಿಸಿದ್ದಾರೆ.
 • ಈಗ ಇವರು ಸಿನಿಮಾ ಕ್ಷೇತ್ರದಿಂದ ನಿವೃತ್ತರಾಗಿದ್ದು, ಪ್ರಸ್ತುತ ಯಾವುದೇ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಓಮನ್‌ನ ಮಸ್ಕಟ್‌ನಲ್ಲಿ ಸೆಪ್ಟೆಂಬರ್ ೨೦೦೭ರಲ್ಲಿ ನಡೆದ ಶಶಿ ಕಪೂರ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಪ್ರಕಾಶಮಾನವಾಗಿ ಕಾಣಿಸಿಕೊಂಡಿದ್ದರು. ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡು ಆರೋಗ್ಯವಾಗಿ ಕಾಣಿಸುತ್ತಾರೆ. ಇತ್ತೀಚೆಗೆ ನಡೆದ ೫೫ನೇ ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಶಶಿ ಕಪೂರ್ ಅವರು ಫಿಲ್ಮ್ ಫೇರ್ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ ಜೀವಮಾನ ಸಾಧನೆ ಪ್ರಶಸ್ತಿ ಪಡೆದುಕೊಂಡರು.
 • ೧೯೮೦ರಲ್ಲಿ ಇವರು ತಮ್ಮ ಸ್ವಂತ ಸಿನಿಮಾ ನಿರ್ಮಾಣವನ್ನು ವಾಲಾಸ್ ಸಿನಿಮಾ ಮೂಲಕ ಆರಂಭಿಸಿದರು. ಇವರು ತಯಾರಿಸಿದ ಜುನೂನ್ ೧೯೭೮, ಕಲಿಯುಗ್ ೧೯೮೧, ೩೬ ಚೌರಿಂಗೀ ಲೇನ್ ೧೯೮೧, ವಿಜೇತಾ ೧೯೮೨ ಮತ್ತು ಉತ್ಸವ್ ೧೯೮೪ ಸಿನಿಮಾಗಳು ವಿಮರ್ಷಕರಿಂದಲೂ ಸಾಕಷ್ಟು ಪ್ರಶಂಸೆಗೆ ಪಾತ್ರವಾಯಿತು.
 • ಶಶಿಕಪೂರ್ ತಮ್ಮ ಬಾಲ್ಯದ ದಿನಗಳಲ್ಲೇ ನಟನೆಯಲ್ಲಿ ತೊಡಗಿಸಿಕೊಂಡಿದ್ದು, ೧೯೪೦ರಲ್ಲಿ ಹಲವಾರು ಪೌರಾಣಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ೧೯೪೮ರಲ್ಲಿ ಬಂದ ಆಗ್ ಮತ್ತು ೧೯೫೧ರಲ್ಲಿ ಬಂದ ಆವಾರಾ ಸಿನಿಮಾಗಳು ಇವರ ಅತ್ಯಂತ ಉತ್ತಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿತು. ಇವರು ತಮ್ಮ ಹಿರಿಯ ಸಹೋದರ ರಾಜ್ ಕಪೂರ್ ಜತೆ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
 • ಸಿನಿಮಾ ಕ್ಷೇತ್ರದಲ್ಲಿ ಇವರು ಪ್ರಥಮವಾಗಿ ಪ್ರವೇಶ ಪಡೆದ ಸಂದರ್ಭದಲ್ಲಿ ಉನ್ನತವಾಗಿ ಬೆಳೆಯಲು ೧೯೬೧ರಲ್ಲಿ ಯಶ್ ಚೋಪ್ರಾ ನಿರ್ಮಾಣದ ಧರ್ಮಪುತ್ರ ಸಿನಿಮಾ ಸಹಾಯಕವಾಯಿತು. ಮತ್ತು ಇವರನ್ನು ಇದು ೧೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವಂತೆ ಮಾಡಿತು. ೧೯೬೦, ೧೯೭೦ ವರೆಗೆ ಹಾಗೂ ೧೯೮೦ರ ಒಳಗೆ ಇವರು ಬಾಲಿವುಡ್ ಕ್ಷೇತ್ರದಲ್ಲಿ ಬಹು ಪ್ರಖ್ಯಾತ ನಗುಮುಖದ ನಟರಾಗಿ ಹೆಸರುವಾಸಿಯಾಗಿದ್ದರು.
 • ವಕ್ತ್ ೧೯೬೫, ಜಬ್ ಜಬ್ ಫೂಲ್ ಕಿಲೆ ೧೯೬೫, ಕನ್ಯಾದಾನ್ ೧೯೬೯, ಹಸೀನಾ ಮಾನ್ ಜಾಯೇಗಿ ೧೯೬೮, ಆ ಗಲೆ ಲಾಗ್ ಜಾ ೧೯೭೩, ರೋಟಿ ಕಪಡಾ ಔರ್ ಮಕಾನ್ ೧೯೭೪, ಚೋರ್ ಮಾಚೆಯೇ ಶೋರ್ ೧೯೭೪, ದೀವಾರ್ ೧೯೭೫, ಕಭಿ ಕಭೀ ೧೯೭೬, ಫಕೀರಾ ೧೯೭೬, ತ್ರಿಶೂಲ್ ೧೯೭೮, ಸತ್ಯಮ್ ಶಿವಂ ಸುಂದರಂ ೧೯೭೮, ಕಾಲಾ ಪತ್ತಾರ್ ೧೯೭೯, ಸುಹಾಗ್ ೧೯೭೯, ಶಾನ್ ೧೯೮೦, ಕಂತ್ರಿ ೧೯೮೧ ಮತ್ತು ನಮಕ್ ಹಲಾಲ್ ೧೯೮೨ ಇವರ ಅತೀ ಜನಪ್ರಿಯ ಸಿನಿಮಾಗಳಾಗಿವೆ.
 • ಬಾಂಬೆ ಟಾಕಿ ೧೯೭೦, ಮತ್ತು ಹೀಟ್ ಆಂಡ್ ಡಸ್ಟ್ ೧೯೮೨ ಇದರಲ್ಲಿ ಇವರು ಪತ್ನಿಯಾದ ಜೆನ್ನಿಫರ್ ಕೆಂಡಾಲ್ ಜತೆ ನಟಿಸಿದ್ದರು. ಇವರು ಬ್ರಿಟಿಷ್ ಮತ್ತು ಅಮೆರಿಕಾ ಸಿನಿಮಾಗಳಲ್ಲಿ ನಟಿಸಿದ್ದು, ಅವುಗಳಾದ ಪ್ರೆಟ್ಟಿ ಪೊಲ್ಲಿ ೧೯೬೭ ಚಿತ್ರದಲ್ಲಿ ಹಾಯ್ಲೇ ಮಿಲ್ಸ್ ಜೊತೆಗೆ ನಟಿಸಿದ್ದರು. ಸಿದ್ಧಾರ್ಥ ೧೯೭೨ ಮತ್ತು ಸ್ಯಾಮ್ಮಿ ಆಂಡ್ ರೋಸಿ ಗೆಟ್ ಲೈಯ್ಡ್ ೧೯೮೭ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
 • ಇವರ ಹೆಚ್ಚಿನ ಜನಪ್ರಿಯ ಸಿನಿಮಾಗಳು ೧೯೭೦ರ ನಂತರ ಹಾಗೂ ೧೯೮೦ರ ಒಳಗಿನ ಅವಧಿಯಲ್ಲಿ ಬಿಡುಗಡೆಯಾಗಿದ್ದವು. ಈ ಸಂದರ್ಭದಲ್ಲಿ ಹೆಚ್ಚಾಗಿ ಅಮಿತಾಭ್ ಬಚ್ಚನ್ ಜತೆ ಇವರು ನಟಿಸಿದ್ದರು. ಇವರು ಹಲವಾರು ಬ್ರಿಟಿಷ್ ಹಾಗೂ ಅಮೆರಿಕಾ ಸಿನಿಮಾಗಳಲ್ಲೂ ನಟಿಸಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದಾರೆ. ಅವುಗಳೆಂದರೆ, ಮರ್ಚೆಂಟ್ ಐವರಿ ಪ್ರೊಡಕ್ಷನ್ಸ್ ನಿರ್ಮಾಣದ ಶೇಕ್ಸ್‌ಪಿಯರ್ ವಲ್ಲಾಹ್ ೧೯೬೫ ಚಿತ್ರದಲ್ಲಿ ಇವರ ಅತ್ತಿಗೆ ಫೆಲ್ಸಿಟಿ ಕೆಂಡಾಲ್ ಎದುರಿಗೆ ನಟಿಸಿದ್ದರು.
                                     

3. ವೈಯಕ್ತಿಕ ಜೀವನ

 • ಬಾಂಬೆಯ ಮತುಂಗಾದಲ್ಲಿರುವ ಡಾನ್ ಬಾಸ್ಕೋ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ. ೧೯೫೮ ಜುಲೈ ತಿಂಗಳಿನಲ್ಲಿ ಇವರು ಇಂಗ್ಲಿಷ್ ನಟಿ ಜೆನ್ನಿಫರ್ ಕೆಂಡಾಲ್ ಅವರನ್ನು ವಿವಾಹವಾದರು. ಇವರು ಹಲವಾರು ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಅವುಗಳಲ್ಲಿ ಹೆಚ್ಚು ಮರ್ಚೆಂಟ್ ಐವರಿ ಪ್ರೊಡಕ್ಷನ್ಸ್‌ನವರ ನಿರ್ಮಾಣದ ಸಿನಿಮಾಗಳಾಗಿವೆ.
 • ಶಶಿ ಕಪೂರ್ ಮತ್ತು ಕೆಂಡಾಲ್‌ರಿಗೆ ಕರಣ್ ಕಪೂರ್, ಕುನಾಲ್ ಕಪೂರ್ ಹಾಗೂ ಸಂಜನಾ ಕಪೂರ್ ಎಂಬ ಮೂರು ಮಕ್ಕಳಿದ್ದಾರೆ. ಇವರೆಲ್ಲ ನಟರಾಗಿದ್ದಾರೆ. ಕೆಂಡಾಲ್ ೧೯೮೪ರಲ್ಲಿ ಕ್ಯಾನ್ಸರ್ ನಿಂದ ಮೃತಪಟ್ಟರು. ಇಂಗ್ಲಿಷ್ ನಟಿ ಫೆಲಿಸಿಟಿ ಕೆಂಡಾಲ್ ಶಕ್ತಿ ಅವರ ಅತ್ತಿಗೆಯಾಗಬೇಕು. ಇವರ ಪುತ್ರ ಕುನಾಲ್ ನಿರ್ದೇಶಕ ರಮೇಶ್ ಸಿಪ್ಪಿ ಅವರ ಮಗಳನ್ನು ಹಾಗೂ ಮಗಳು ಸಂಜನಾ ವನ್ಯಜೀವಿ ಸಂರಕ್ಷಕ ವಾಲ್ಮಿಕ್ ಥಾಪರ್ ಎಂಬುವರನ್ನು ವಿವಾಹವಾಗಿದ್ದಾರೆ.
                                     

4. ಪ್ರಶಸ್ತಿಗಳು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

ವಿಜೇತ

 • ೨೦೧೪ - ದಾದಾಸಾಹೇಬ ಪಾಲ್ಕೆ ಪ್ರಶಸ್ತಿ
 • ೧೯೮೬ – ನ್ಯೂ ದಿಲ್ಲಿ ಟೈಮ್ಸ್‌ ನ ಉತ್ತಮ ನಟನೆಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ
 • ೧೯೯೪- ೧೯೯೩ರಲ್ಲಿ ತೆರೆಕಂಡ ಮುಹಾಫಿಜ್ ಎಂಬ ಫೀಚರ್ ಪಿಲ್ಮ್‌ಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ವಿಶೇಷ ತೀರ್ಪುಗಾರರ ಪ್ರಶಸ್ತಿ/ಸ್ಪೇಷಲ್ ಮೆನ್ಶನ್‌.

ಫಿಲ್ಮ್‌ಫೇರ್ ಪ್ರಶಸ್ತಿಗಳು

ವಿಜೇತ

 • ೧೯೭೫- ದೀವಾರ್ ಚಿತ್ರದ ನಟನೆಗೆ ಫಿಲ್ಮ್ ಫೇರ್‌ನ ಉತ್ತಮ ಪೋಷಕ ನಟ ಪ್ರಶಸ್ತಿ
 • ೧೯೮೦- ಜನೂನ್ ಸಿನಿಮಾಕ್ಕೆ ಫಿಲ್ಮ್ ಫೇರ್‌ನ ಉತ್ತಮ ಸಿನಿಮಾ ಪ್ರಶಸ್ತಿ
 • ೧೯೮೨ – ಕಲಿಯುಗ್ ಸಿನಿಮಾಕ್ಕೆ ಫಿಲ್ಮ್ ಫೇರ್‌ನ ಉತ್ತಮ ಸಿನಿಮಾ ಪ್ರಶಸ್ತಿ
 • ೨೦೧೦ - ಫಿಲ್ಮ್ ಫೇರ್‍‌ನಿಂದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ

ನಾಮನಿರ್ದೇಶನಗೊಂಡಿದ್ದು

 • ೧೯೭೭ – ಕಭೀ ಕಭೀ ಸಿನಿಮಾಕ್ಕೆ ಫಿಲ್ಮ್ ಫೇರ್‌ನಿಂದ ಉತ್ತಮ ಪೋಷಕ ನಟ ಪ್ರಶಸ್ತಿ
 • ೧೯೮೩ – ನಮಕ್ ಹಲಾಲ್ ಸಿನಿಮಾಕ್ಕೆ ಫಿಲ್ಮ್ ಫೇರ್‌ನಿಂದ ಉತ್ತಮ ಪೋಷಕ ನಟ ಪ್ರಶಸ್ತಿ

ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು

 • ೧೯೮೮ – ನ್ಯೂ ದಿಲ್ಲಿ ಟೈಮ್ಸ್ ಸಿನಿಮಾಕ್ಕೆ ಬಿಎಫ್ ಜೆಎನಿಂದ ಉತ್ತಮ ನಟ ಪ್ರಶಸ್ತಿ
 • ೧೯೬೫ – ಜಬ್ ಜಬ್ ಫೂಲ್ ಕೇಲೆ ಸಿನಿಮಾಕ್ಕೆ ಬಿಎಫ್ ಜೆಎನಿಂದ ಉತ್ತಮ ನಟ ಪ್ರಶಸ್ತಿ

ಇತರ ಪ್ರಶಸ್ತಿಗಳು

 • ೨೦೦೯ - ೭ನೇ ಪುಣೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಿಐಎಫ್ಎಫ್ ಜೀವಮಾನ ಸಾಧನೆಗಾಗಿ ಪ್ರಶಸ್ತಿ


                                     

5.1. ಆಯ್ದ ಚಲನಚಿತ್ರಗಳ ಪಟ್ಟಿ ನಟಿ

 • ರೋಟಿ ಕಪ್ಡಾ ಔರ್ ಮಕಾನ್ ೧೯೭೪ …. ಮೋಹನ್ ಬಾಬು
 • ಸತ್ಯಂ ಶಿವಂ ಸುಂದರಂ ೧೯೭೮ …. ರಾಜೀವ್
 • ಹೀಟ್ ಆ‍ಯ್‌೦ಡ್ ಡಸ್ಟ್ ೧೯೮೨ …. ದಿ ನವಾಬ್ಕತ್ಮ್ ಅರಮನೆಯಲ್ಲಿ
 • ಸುಹಾಗ್ ೧೯೭೯ …. ಕಿಶನ್ ಕಪೂರ್
 • ಸಿಲ್ಸಿಲಾ ೧೯೮೧ …. ಶೇಖರ್ ಮಲ್ಹೋತ್ರಾ
 • ಕ್ರಾಂತಿ ೧೯೮೧ …. ಶಕ್ತಿ
 • ಕಲಿಯುಗ್ ೧೯೮೦ …. ಕರನ್ ಸಿಂಘ್
 • ಇಮಾನ್ ಧರಮ್ ೧೯೭೭ ಮೋಹನ್ ಕುಮಾರ್ ಸಕ್ಸೇನಾ
 • ಇನ್ ಕಸ್ಟಡಿ ೧೯೯೩ …. ನೂರ್
 • ಜೂನುನ್ ೧೯೭೮ …. ಜಾವೇದ್ ಖಾನ್
 • ಸಮ್ಮಿ ಆ‍ಯ್‌೦ಡ್ ರೋಸಿ ಗೆಟ್ ಲೇಡ್ ೧೯೮೭ …. ರಫಿ ರೆಹ್ಮಾನ್
 • ಬಸಿರಾ ೧೯೮೧ …. ಬಲ್ರಾಜ್ ಕೋಹ್ಲಿ
 • ಆಗ್ ೧೯೪೮ ಯಂಗ್ ಕೇವಲ್
 • ಕನ್ಯಾದಾನ್ ೧೯೬೯… ಅಮರ್/ಕುಮಾರ್ ದ್ವಿಪಾತ್ರ
 • ದ ಹೌಸ್‌ಹೋಲ್ಡರ್ ೧೯೬೩ …. ಪ್ರೇಮ್‌
 • ಕ್ರೋಧಿ ೧೯೮೧ಸನ್ನಿ ಗಿಲ್ ಫ್ರಾಮ್ ವ್ಯಾಂಕೋವರ್
 • ಶರ್ಮಿಲೀ ೧೯೭೧ ಅಜಿತ್ ಕಪೂr
 • ಪ್ಯಾರ್ ಕಾ ಮೊಸಮ್ ೧೯೬೯ …. ಸುಂದರ್
 • ಗಲಿವರ್ಸ್ ಟ್ರಾವೆಲ್ಸ್ ೧೯೯೬ …. ರಾಜಾ
 • ಸಿದ್ಧರ್ಥ ೧೯೭೨ …. ಸಿದ್ಧಾರ್ಥ
 • ಅಕಯ್ಲಾ ೧೯೯೧. ಪೋಲಿಸ್ ಆಯುಕ್ತ
 • ಏಕ್ ಶ್ರೀಮಾನ್ ಏಕ್ ಶ್ರೀಮತಿ ೧೯೬೯ …. ಪ್ರೀತಮ್
 • ಇಜಾಮ್ ೧೯೮೬ …. ರಂಜಿತ್ ಸಿಂಗ್
 • ಸೈಡ್ ಸ್ಟ್ರೀಟ್ಸ್ ೧೯೯೮ …. ವಿಕ್ರಮ್ ರಾಜ್
 • ಆಮ್ನೆ ಸಾಮ್ನೆ … ೧೯೬೭
 • ಬಾಂಬೆ ಟಾಕೀ ೧೯೭೦ ವಿಕ್ರಮ್
 • ಜಿನ್ಹಾ ೧೯೯೮ …. ನಿರೂಪಕ
 • ಜಬ್ ಜಬ್ ಪೂಲ್ ಕಿಲೆ ೧೯೬೫ … ರಾಜ್‌ಕುಮಾರ್
 • ಪ್ರೆಟ್ಟಿ ಪೊಲ್ಲಿ ೧೯೬೭ …. ಅಮಾಜ್
 • ದೀವಾರ್ ೧೯೭೫ …. ರವಿ ವರ್ಮಾ
 • ತ್ರಿಶೂಲ್ ೧೯೭೮ …. ಶೇಖರ್ ಗುಪ್ತಾ
 • ದೋ ಔರ್ ದೋ ಪಾಂಚ್ ೧೯೮೦ …. ಸುನೀಲ್/ಲಕ್ಷಣ
 • ಕಭೀ ಕಭೀ ೧೯೭೬ …. ವಿಜಯ್ ಖನ್ನಾ
 • ಸವಾಲ್ ೧೯೮೨ …. ರವಿ
 • ಹಸೀನಾ ಮಾನ್ ಜಾಯೇಗಿ ೧೯೬೮ … ರಾಕೇಶ್/ಕಮಲ್ ದ್ವಿಪಾತ್ರ
 • ಇಜರತ್ ೧೯೮೭ …. ವಿಶೇಷ ಪಾತ್ರ
 • ನ್ಯೂ ಡೆಲ್ಲಿ ಟೈಮ್ಸ್ ೧೯೮೬ …. ವಿಕಾಸ್ ಪಾಂಡೆ
 • ಆವಾರಾ ೧೯೫೧ ಯಂಗ್ ರಾಜ್ಬಾಲ ಕಲಾವಿದ
 • ಶೇಕ್ಸ್‌ಪಿಯರ್-ವಲ್ಲಾಹ್ ೧೯೬೫ ಸಂಜು
 • ದ ಡಿಸಿವರ್ಸ್ ೧೯೮೮ …. ಚಂದ್ರಾ ಸಿಂಗ್‌‌
 • ವಿಜೇತಾ ೧೯೮೨ …. ಜಿಹಾಲ್
 • ಫಕೀರಾ ೧೯೭೬ ….ಫಕೀರಾ
 • ಫರಿಶ್ತಾ ಯಾ ಕಟೀಲ್ ೧೯೭೭
 • ಪ್ಯಾರ್ ಕಾ ಜೀತ್ ೧೯೮೭ …. ಡಾ ರೆಹಮಾನ್
 • ಆ ಗಲೇಅಗ್ ಜಾ ೧೯೭೩ …. ಪ್ರೇಮ್‌
 • ವಕ್ತ್ ೧೯೬೫ …. ವಿಜಯ್ ಕುಮಾರ್
 • ಏಕ್ ಮೇ ಔರ್ ಏಕ್ ತೂ" ೧೯೮೬….
 • ಶಾನ್ ೧೯೮೦ …. ರವಿ ಕುಮಾರ್
 • ನಮಕ್ ಹಲಾಲ್ ೧೯೮೨ …. ರಾಜಾ
 • ಕಾಲಾ ಪತ್ಥರ್ ೧೯೭೯ …. ರವಿ ಮಲ್ಹೋತ್ರಾ
 • ಧರಮ್‌ಪುತ್ರಾ ೧೯೬೧ …. ದಿಲೀಪ್ ರೈ
 • ಚೋರ್ ಮಚಾಯೇ ಶೋರ್ ೧೯೭೪ …. ವಿಜಯ್ ಶರ್ಮಾ
                                     

5.2. ಆಯ್ದ ಚಲನಚಿತ್ರಗಳ ಪಟ್ಟಿ ನಿರ್ಮಾಪಕ

 • ೩೬ ಚೌರಿಂಗಿ ಲೇನ್ ೧೯೮೧
 • ಅಜೂಬಾ ೧೯೯೧
 • ಕಲಿಯುಗ್ ೧೯೮೦
 • ವಿಜೇತಾ ೧೯೮೨
 • ಜೂನುನ್ ೧೯೭೮
 • ಉತ್ಸವ್ ೧೯೮೪
 • ರಮನ್ ೧೯೯೩
Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →