Back

ⓘ ಕರೀನಾ ಕಪೂರ್ ಕರೀನಾ ಕಪೂರ್‌ ಎಂದು ಉಚ್ಚರಿಸಲಾಗುತ್ತದೆ; ೧೯೮೦ರ ಸೆಪ್ಟೆಂಬರ್‌ ೨೧ರಂದು ಜನನ,ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಭಾರತೀಯ ತಾರೆ. ಸಾಮಾನ್ಯವಾಗಿ ಬೇಬೋ ಎಂದು ಈಕೆಯನ್ನು ಕರೆಯುತ್ತಾರ ..
                                               

ಲಕ್ಮೆ

ಲಕ್ಮೆ ಸೌಂದರ್ಯವರ್ಧಕಗಳ ಒಂದು ಭಾರತೀಯ ಬ್ರಾಂಡ್. ಇದು ಹಿಂದೂಸ್ತಾನ್ ಯೂನಿಲಿವರ್ ಅವರ ಒಡೆತನದಲ್ಲಿದೆ. ಕರೀನಾ ಕಪೂರ್ ಅವರು ಈ ಬ್ರಾಂಡ್‌ನ ರಾಯಭಾರಿ. ಇದು ಭಾರತದ ಶೃಂಗಾರ ಬ್ರಾಂಡ್‍ಗಳಲ್ಲಿ ಮೊದಲನೆ ಸ್ಥಾನದಲ್ಲಿದೆ. ಟಾಟಾ ಆಯಿಲ್ ಮಿಲ್ಸ್‍ನ ೧೦೦% ಅಂಗಸಂಸ್ಥೆಯಾಗಿ ಲಕ್ಮೆಯು ಪ್ರಾರಂಭವಾಯಿತು. ಇದು ನಂತರ ಸ್ವತಂತ್ರ ಕಂಪೆನಿಯಾಯಿತು. ಲಕ್ಮೆ ಎಂಬುದು ಫ್ರೆಂಚ್ ಒಪೆರಾ ಒಂದರ ಹೆಸರು. ಇದು ಸ್ವತಃ ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾದ ಲಕ್ಷ್ಮಿಯ ಸಂಪತ್ತಿನ ದೇವತೆ ಫ್ರೆಂಚ್ ರೂಪವಾಗಿದೆ. ಇದು ೧೯೫೨ರಲ್ಲಿ ಪ್ರಾರಂಭವಾಗಿ, ಪ್ರಸಿದ್ಧಿಯಾಯಿತು. ಏಕೆಂದರೆ, ಪ್ರಧಾನಿ ಜವಾಹರಲಾಲ್ ನೆಹರೂ ಭಾರತೀಯ ಮಹಿಳೆ ಸೌಂದರ್ಯ ಉತ್ಪನ್ನಗಳ ಮೇಲೆ ಅಮೂಲ್ಯವಾದ ವಿದೇಶಿ ವಿನಿಮಯವನ್ನು ಖರ್ಚು ಮಾಡುತ್ತಿರುವುದನ್ನು ಕಂಡು, ವೈಯಕ್ತಿಕವಾಗಿ ಭಾರತದಲ್ಲಿ ತಯಾರಿಸಲು ...

ಕರೀನಾ ಕಪೂರ್
                                     

ⓘ ಕರೀನಾ ಕಪೂರ್

ಕರೀನಾ ಕಪೂರ್ ಕರೀನಾ ಕಪೂರ್‌ ಎಂದು ಉಚ್ಚರಿಸಲಾಗುತ್ತದೆ; ೧೯೮೦ರ ಸೆಪ್ಟೆಂಬರ್‌ ೨೧ರಂದು ಜನನ),ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಭಾರತೀಯ ತಾರೆ. ಸಾಮಾನ್ಯವಾಗಿ ಬೇಬೋ ಎಂದು ಈಕೆಯನ್ನು ಕರೆಯುತ್ತಾರೆ. ತನ್ನ ವೃತ್ತಿ ಬದುಕಿನಲ್ಲಿ, ಕಪೂರ್‌ ಐದು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ. ಜೊತೆಗೆ ವಿವಿಧ ಸಿನಿಮಾ ಪ್ರಕಾರಗಳಲ್ಲಿ ಅಭಿನಯಿಸಿದ್ದಾಳೆ. ಸಮಕಾಲೀನ ಪ್ರಣಯ ಸಿನಿಮಾಗಳಿಂದ ಹಿಡಿದು ಹಾಸ್ಯ ಸಿನಿಮಾಗಳು, ನಿರ್ದಿಷ್ಟಅವಧಿ ಸಿನಿಮಾಗಳಿಂದ ಪ್ರಮುಖ ಬಾಲಿವುಡ್ ಸಿನಿಮಾಗಳವರೆಗೆ ಮತ್ತು ಅಷ್ಟೇನೂ ಜನಪ್ರಿಯವಾಗದ ಸ್ವತಂತ್ರ ಸಿನಿಮಾಗಳೂ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ನಟಿಸಿದ್ದಾಳೆ.

ಅವಳು ಹುಟ್ಟಿದ ಕುಟುಂಬದಲ್ಲಿ ತಂದೆ ರಣಧೀರ್‌ ಕಪೂರ್ ಮತ್ತು ತಾಯಿ ಬಬಿತಾ ಇಬ್ಬರೂ ಮತ್ತು ಅವಳ ಅಕ್ಕ ಕರಿಷ್ಮಾ ನಟ, ನಟಿಯರಾಗಿದ್ದು, ಕರೀನಾ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮಾಧ್ಯಮದ ಪ್ರಚಾರ ಪಡೆದಿದ್ದಳು. ಆದರೆ ೨೦೦೦ದಲ್ಲಿ ಬಿಡುಗಡೆಯಾದ ಮೊದಲ ಸಿನಿಮಾ ರೆಫ್ಯೂಜಿ ಯವರೆಗೆ ಬೆಳ್ಳಿತೆರೆಯಲ್ಲಿ ನಟಿಸಿರಲಿಲ್ಲ. ಅವಳ ಭಾವಪೂರಿತ ಸಿನಿಮಾ ಕಭಿ ಖುಷಿ ಕಭಿ ಗಮ್. ವಿದೇಶೀ ಮಾರುಕಟ್ಟೆಯಲ್ಲಿ ೨೦೦೧ರಲ್ಲಿ ಅತ್ಯಂತ ಹಣಗಳಿಕೆ ಮಾಡಿದ ಸಿನಿಮಾವಾಗಿತ್ತು ಮತ್ತು ಇಂದಿನವರೆಗೂ ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾದ ಅವಳ ಸಿನಿಮಾ ಆಗಿದೆ. ಒಂದೇ ರೀತಿಯ ಪಾತ್ರಗಳನ್ನು ಒಂದಾದನಂತರ ಒಂದರಂತೆ ಮಾಡುತ್ತಿದ್ದಕ್ಕೆ ನಕಾರಾತ್ಮಕ ವಿಮರ್ಶೆ ಬಂದಿದ್ದರಿಂದ, ಕರೀನಾ ನಂತರ ಒಂದೇಮಾದರಿಟೈಪ್‌ಕಾಸ್ಟ್‌ ಪಾತ್ರಗಳನ್ನು ತಪ್ಪಿಸಲು ಹೆಚ್ಚು ಸವಾಲೆನ್ನಿಸುವ ಪಾತ್ರಗಳನ್ನು ಸ್ವೀಕರಿಸತೊಡಗಿದಳು. ನಂತರ ನಟಿಯಾಗಿ ವೈವಿಧ್ಯಮಯ ಪಾತ್ರಗಳನ್ನು ಉತ್ತಮವಾಗಿ ಮಾಡಿದ್ದಕ್ಕಾಗಿ ವಿಮರ್ಶಕರಿಂದ ಗುರುತಿಸಲ್ಪಟ್ಟಳು. ಚಮೇಲಿ ೨೦೦೪ ಸಿನಿಮಾದಲ್ಲಿ ಲೈಂಗಿಕ ಕಾರ್ಯಕರ್ತೆಯಾಗಿ ನಟಿಸಿದ ಕರೀನಾಗೆ ಆ ಸಿನಿಮಾ ವೃತ್ತಿಜೀವನದ ಮಹತ್ವದ ತಿರುವಾಗಿತ್ತು. ನಂತರ ಅವಳು ದೇವ್‌ ೨೦೦೪ ಮತ್ತು ಓಂಕಾರ ೨೦೦೬ ಸಿನಿಮಾಗಳ ನಟನೆಗೆ ಉತ್ತಮ ವಿಮರ್ಶೆ, ಪ್ರಶಂಸೆ ಗಳಿಸಿದಳು.

೨೦೦೭ರಲ್ಲಿ, ಕರೀನಾ ಜಬ್‌ ವಿ ಮೆಟ್‌ ಸಿನಿಮಾದ ಉತ್ತಮ ನಟನೆಗಾಗಿ ತನ್ನ ಮೊದಲ ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿ ಗಳಿಸಿದಳು, ಅದೊಂದು ಪ್ರಣಯ ಹಾಸ್ಯ ಸಿನಿಮಾ ಆಗಿದ್ದು, ಇಮ್ತಿಯಾಜ್ ಅಲಿ ನಿರ್ದೇಶಿಸಿದ್ದರು. ನಂತರ ಅವಳು ಪ್ರಮುಖ ಸ್ತ್ರೀಪಾತ್ರದಲ್ಲಿ ನಟನೆಯನ್ನು ಮುಂದುವರೆಸಿದಳು, ಥ್ರಿಲ್ಲರ್ ಸಿನಿಮಾ ಕುರ್ಬಾನ್ ೨೦೦೯ಗೆ ವಿಮರ್ಶಕರ ಪ್ರಶಂಸೆ ದೊರೆಯಿತು. ನಂತರ ೩ ಈಡಿಯೆಟ್ಸ್‌ ಸಿನಿಮಾ ಅತ್ಯಧಿಕ ಹಣಗಳಿಸಿದ ಸಾರ್ವಕಾಲಿಕ ಬಾಲಿವುಡ್ ೨೦೦೯ ಎಂದು ಖ್ಯಾತಿಪಡೆಯಿತು. ಇದರಲ್ಲಿ ನಟಿಸಿದ ನಂತರ, ಕರೀನಾ ಹಿಂದಿ ಸಿನಿಮಾ ಉದ್ಯಮದ ಪ್ರಮುಖ ತಾರೆಯರಲ್ಲಿ ಒಬ್ಬಳೆಂಬ ಸ್ಥಾನವನ್ನು ಸ್ಥಾಪಿಸಿಕೊಂಡಳು. ಸಿನಿಮಾದಲ್ಲಿ ನಟಿಸುವ ಜೊತೆಗೆ ಕರೀನಾ ನಿಯಮತವಾದ ಸ್ಟೇಜ್‌ ಪರ್‌ಫಾರ್ಮರ್‌ ಕೂಡ ಆಗಿದ್ದು, ಗ್ಲೋಬಸ್‌ ರಿಟೈಲ್‌ ಸರಣಿಗೆ ಬ್ರಾಂಡ್‌ ರಾಯಭಾರಿಯಾಆದ ಅವಳು ತನ್ನದೇ ಉಡುಗೆಯ ಶ್ರೇಣಿಯನ್ನು ಆರಂಭಿಸಿದಳು. ಸೈಫ್‌ ಅಲಿ ಖಾನ್ ಜೊತೆಗಿನ ಸಂಬಂಧವೂ ಸೇರಿದಂತೆ ಅವಳ ಪರದೆ ಹಿಂದಿನ ಖಾಸಗಿ ಬದುಕು ಭಾರತದ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆದ ವಿಷಯವಾಗಿದೆ.

                                     

1. ಆರಂಭಿಕ ಜೀವನ ಮತ್ತು ಹಿನ್ನೆಲೆ

ಭಾರತದ ಮುಂಬಯಿನಲ್ಲಿ ೧೯೮೦ರ ಸೆಪ್ಟೆಂಬರ್‌ ೨೧ರಂದು ಕಪೂರ್‌ ಸಿನಿಮಾ ಕುಟುಂಬದಲ್ಲಿ ಜನಿಸಿದ ಕರೀನಾ, ನಟ-ನಟಿಯರಾದ ರಣಧೀರ್‌ ಕಪೂರ್‌ ಮತ್ತು ಬಬಿತಾ ಮೊದಲ ಹೆಸರು ಶಿವದಾಸನಿ ಅವರ ಕಿರಿಯ ಮಗಳು; ಅವಳ ಅಕ್ಕ ಕರಿಷ್ಮಾ ಕಪೂರ್‌ ಕೂಡ ನಟಿ. ಅವಳು ನಟ ಮತ್ತು ಸಿನಿಮಾ ನಿರ್ಮಾಪಕ, ರಾಜ್‌ ಕಪೂರ್‌ನ ಮೊಮ್ಮಗಳು ಮತ್ತು ನಟ ಪೃಥ್ವಿರಾಜ್‌ ಕಪೂರ್‌ ಅವರ ಮರಿ-ಮೊಮ್ಮಗಳು ಮತ್ತು ಅವಳ ಚಿಕ್ಕಪ್ಪ ರಿಷಿ ಕಪೂರ್‌ ಕೂಡ ಉತ್ತಮ ನಟ. ಕರೀನಾಳ ಪ್ರಕಾರ, ಅವಳ ಹೆಸರು "ಕರೀನಾ" ಎನ್ನುವುದು ಅವಳ ತಾಯಿ ಗರ್ಭಿಣಿಯಾಗಿದ್ದಾಗ ಓದಿದ ಅನ್ನಾ ಕರೆನಿನಾ ಕೃತಿಯಿಂದ ಪ್ರೇರಣೆಗೊಂಡು ಇಟ್ಟ ಹೆಸರು. ಹೆಚ್ಚಾಗಿ ಮುದ್ದಿನಿಂದ ಬೇಬೋ ಎಂದು ಕರೆಯಲಾಗುವ ಆಕೆ ತಂದೆಯ ಕಡೆಯಿಂದ ಪಂಜಾಬಿ ಖಾತ್ರಿ ಕುಲದವಳು ಮತ್ತು ತಾಯಿಯ ಕಡೆಯಿಂದ ಸಿಂಧಿ.

ಚಿಕ್ಕವಳಾಗಿದ್ದಾಗಿನಿಂದಲೂ, ಅವಳು ನಟಿಯಾಗುವ ಕುರಿತು ತೀವ್ರ ಅಪೇಕ್ಷೆ ಹೊಂದಿದ್ದಳು ಮತ್ತು ವಿಶೇಷವಾಗಿ ಬಾಲಿವುಡ್ ನಟಿಯರಾದ ನರ್ಗಿಸ್ ಮತ್ತು ಮೀನಾಕುಮಾರಿಯರ ಸಿನಿಮಾಗಳನ್ನು ನೋಡಿ ತುಂಬ ಸ್ಫೂರ್ತಿಗೊಂಡಿದ್ದಳು. ಕರೀನಾ ತನ್ನನ್ನು ತಾನು, "ತುಂಬ ತುಂಟಿ ಮತ್ತು ಮುದ್ದಿನಿಂದ ಹಾಳಾದ ಮಗು" ಎಂದು ವರ್ಣಿಸಿಕೊಳ್ಳುತ್ತಾಳೆ. ಅವಳು ಬಾಲ್ಯದಲ್ಲಿ ತಾಯಿಯ ಉಡುಗೆಗಳನ್ನು ತೊಟ್ಟುಕೊಂಡು, ಕನ್ನಡಿ ಮುಂದೆ ಅಭಿನಯಿಸುತ್ತಿದ್ದಳು. ಕೌಟುಂಬಿಕ ಹಿನ್ನೆಲೆಯಿದ್ದರೂ, ಅವಳ ತಂದೆ ತಮ್ಮ ಕುಟುಂಬದ ಮಹಿಳೆ ನಟನಾ ವೃತ್ತಿಗೆ ಪ್ರವೇಶಿಸುವುದನ್ನು ಇಷ್ಟಪಟ್ಟಿರಲಿಲ್ಲ. ಏಕೆಂದರೆ ಅದು ಸಾಂಪ್ರದಾಯಿಕವಾಗಿ ಕುಟುಂಬದಲ್ಲಿ ಮಹಿಳೆಯ ಮಾತೃ ಕರ್ತವ್ಯ ಮತ್ತು ಜವಾಬ್ದಾರಿಗೆ ತಡೆಯೊಡ್ಡುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಇದು ಅವಳ ತಂದೆ, ತಾಯಿಯರ ನಡುವೆ ಬಿರುಕು ಮೂಡಲು ಕಾರಣವಾಯಿತು ಮತ್ತು ಬಬಿತಾ ಕೊನೆಗೆ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಕಪೂರ್ ಮನೆಯನ್ನು ಬಿಟ್ಟು ಹೊರನಡೆದರು. ತಂದೆ, ತಾಯಿ ಪ್ರತ್ಯೇಕಗೊಂಡ ನಂತರ, ಆಕೆ ತನ್ನ ತಾಯಿಯೊಂದಿಗೆ ಲೋಖಂಡ್‌ವಾಲಾದಲ್ಲಿ ಬೆಳೆದಳು. ಕರಿಷ್ಮಾ ೧೯೯೧ರಲ್ಲಿ ತನ್ನ ಮೊದಲ ಸಿನಿಮಾ ಮಾಡುವವರೆಗೆ ಬಬಿತಾ ತನ್ನಿಬ್ಬರು ಹೆಣ್ಣುಮಕ್ಕಳನ್ನು ಬೆಳೆಸಲು ಹಲವಾರು ಕೆಲಸಗಳನ್ನು ಮಾಡಿದರು. ವೀರ್‌ ಸಾಂಘ್ವಿ ಜೊತೆಗಿನ ಒಂದು ಸಂದರ್ಶನದಲ್ಲಿ ಹೀಗೆ ಮಹಿಳೆಯರೇ ಇರುವ ಒಂದು ಮನೆಯಲ್ಲಿ ತಾನು ಬೆಳೆದಿದ್ದು ತನಗೆ ಹೆಚ್ಚು ಸಬಲಳು ಮತ್ತು ಸ್ವತಂತ್ರಳಾಗಲು ಸಹಾಯಕವಾಯಿತು ಎಂದು ಕರೀನಾ ಹೇಳಿಕೊಂಡಿದ್ದಾಳೆ. ೨೦೦೭ರ ಅಕ್ಟೋಬರ್‌ನಲ್ಲಿ ತಂದೆ, ತಾಯಿ ಪುನಾ ಒಂದಾದ ನಂತರ, "ಅವರೆಂದೂ ಅಧಿಕೃತವಾಗಿ ವಿಚ್ಛೇದನಗೊಂಡಿರಲಿಲ್ಲ, ಆದರೆ ಪ್ರತ್ಯೇಕವಾಗಿ ಬಾಳ್ವೆ ನಡೆಸಿದ್ದರು ಅಷ್ಟೆ" ಎಂದು ಕರೀನಾ ವಿವರಿಸಿದ್ದಳು. ಅವಳು ತಂದೆಯೊಂದಿಗೆ ಹಂಚಿಕೊಂಡಿದ್ದ ಬಾಂಧವ್ಯದ ಕುರಿತು ಆಕೆಗೆ ಕೇಳಿದಾಗ, "ನನ್ನ ತಂದೆ ನನ್ನ ಬದುಕಿನಲ್ಲಿ ಒಂದು ಬಹಳ ಪ್ರಮುಖವಾದ ಅಂಶ. ಆರಂಭದ ವರ್ಷಗಳಲ್ಲಿ ನಾನು ಅವರನ್ನು ಅಷ್ಟಾಗಿ ಭೇಟಿಯಾಗದಿದ್ದರೂ, ನಾವೀಗ ಒಂದೇ ಕುಟುಂಬವಾಗಿದ್ದೇವೆ" ಎಂದು ಹೇಳಿದ್ದಳು.

ಕರೀನಾ ಮುಂಬಯಿನ ಜಮ್ನಾಬಾಯಿ ನಾರ್ಸಿ ಸ್ಕೂಲ್‌ನಲ್ಲಿ ಮೊದಲು ಕಲಿತು, ನಂತರ ಡೆಹ್ರಾಡೂನ್‌ನ ವೆಲ್ಹಾಮ್ ಗರ್ಲ್ಸ್ ಬೋರ್ಡಿಂಗ್‌ ಸ್ಕೂಲ್‌ಗೆ ಸೇರಿದಳು. "ನಾನು ವೆಲ್ಹಾಮ್‌ನಲ್ಲಿ ತುಂಬಾ ಕಲಿತೆ. ಅಲ್ಲಿಯ ನಾನು ಪಡೆದ ಅನುಭವವು ನನ್ನ ಬದುಕಿನಲ್ಲಿಯೇ ಅತ್ಯುತ್ತಮ ಭಾಗ" ಎಂದು ನೆನಪಿಸಿಕೊಂಡು, ವರ್ಣಿಸಿದ್ದಳು. ಕರೀನಾಳ ಪ್ರಕಾರ, ಅವಳು ಒಳ್ಳೆಯ ವಿದ್ಯಾರ್ಥಿಯಾಗಿದ್ದಳು ಮತ್ತು ಗಣಿತವೊಂದನ್ನು ಬಿಟ್ಟರೆ ಇನ್ನುಳಿದ ವಿಷಯಗಳಲ್ಲಿ ಮೊದಲ ದರ್ಜೆ ಗೌರವ ಪಡೆಯುತ್ತಿದ್ದಳು. ಬೋರ್ಡಿಂಗ್ ಶಾಲೆಯಲ್ಲಿ ಪದವಿ ಪಡೆದ ನಂತರ, ಅವಳು ಮುಂಬಯಿನ ವಿಲೆ ಪಾರ್ಲೆಯ ಮಿಥಿಬಾಯಿ ಕಾಲೇಜ್‌ನಲ್ಲಿ ಎರಡು ವರ್ಷ ವಾಣಿಜ್ಯ ವಿಷಯವನ್ನು ಅಧ್ಯಯನ ಮಾಡಿದಳು. ತಾನು ತನ್ನ ಕುಟುಂಬಕ್ಕೆ ತುಂಬ ಹತ್ತಿರದಲ್ಲಿ ಇದ್ದುದರಿಂದ ಅಲ್ಲಿಯೇ ಅಧ್ಯಯನ ಮಾಡಿದೆ ಎಂದು ತಿಳಿಸಿದ್ದಾಳೆ. ನಂತರ ಆಕೆಯು ಸಂಯುಕ್ತ ಸಂಸ್ಥಾನದ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಮೂರು ತಿಂಗಳು ಮೈಕ್ರೋಕಂಪ್ಯೂಟರ್‌ನಲ್ಲಿ ಬೇಸಿಗೆ ಕೋರ್ಸ್‌ ಮಾಡಿದಳು. ನಂತರ ಆಕೆ ಕಾನೂನು ವ್ಯಾಸಂಗದಲ್ಲಿ ಆಸಕ್ತಿ ಬೆಳೆಸಿಕೊಂಡಳು ಮತ್ತು ಚರ್ಚ್‌ ಗೇಟ್‌ನಲ್ಲಿರುವ ಸರ್ಕಾರಿ ಕಾನೂನು ಕಾಲೇಜ್‌ನಲ್ಲಿ ಹೆಸರು ನೋಂದಾಯಿಸಿದಳು; ಆ ಸಮಯದಲ್ಲಿ ಅವಳು ಕಾನೂನು ಪುಸ್ತಕಗಳ ಅಧ್ಯಯನದಲ್ಲಿ ತನ್ಮಯಳಾಗಿದ್ದಳು ಮತ್ತು ಓದುವ ನಿರಂತರ ಹವ್ಯಾಸವನ್ನು ಬೆಳೆಸಿಕೊಂಡಳು. ಆದರೆ ಚರ್ಚ್‌ಗೇಟ್ ಕಾಲೇಜಿನಲ್ಲಿ ಒಂದು ವರ್ಷ ಓದಿದ ನಂತರ ತನಗೆ ಶಿಕ್ಷಣದ ಕುರಿತು ಹೆಚ್ಚು ಒಲವಿಲ್ಲ ಎಂದು ಅವಳಿಗೆ ಅರಿವಾಯಿತು ಮತ್ತು ನಟಿಯಾಗುವ ತನ್ನ ಮೊದಲಿನ ಯೋಜನೆಗೇ ಮರಳಿದಳು. ಅಂಧೇರಿಯಲ್ಲಿರುವ ಒಂದು ನಟನಾ ಸಂಸ್ಥೆಯಲ್ಲಿ ಅವಳು ತರಬೇತಿ ಪಡೆಯಲಾರಂಭಿಸಿದಳು. ಅಲ್ಲಿ ಅವಳ ಆಸಕ್ತಿಯನ್ನು ಭಾರತದ ಸಿನಿಮಾ ಮತ್ತು ದೂರದರ್ಶನ ಸಂಸ್ಥೆ ಫಿಲ್ಮ್‌ ಆಂಡ್ ಟೆಲಿವಿಶನ್ ಇನ್‌ಸ್ಟಿಟ್ಯೂಟ್ ಆಪ್ ಇಂಡಿಯಾಎಫ್‌ಟಿಐಐಯ ಸದಸ್ಯರಾದ ಕಿಶೋರ್‌ ನಮಿತ್ ಕಪೂರ್‌ ಪೋಷಿಸಿದರು.

                                     

2.1. ನಟನಾ ವೃತ್ತಿ ಬದುಕು ಮೊದಲ ಸಿನಿಮಾ ಮತ್ತು ಪ್ರಮುಖ ಪ್ರಗತಿ೨೦೦೦–೦೩

ಕರೀನಾ ಮೊದಲು ನಿರ್ದೇಶಕ ರಾಕೇಶ್‌ ರೋಶನ್‌ ಅವರ ಕಹೋನಾ. ಪ್ಯಾರ್‌ ಹೈ ೨೦೦೦ ಸಿನಿಮಾದಲ್ಲಿ ರೋಶನ್ ಅವರ ಮಗ ಹೃತಿಕ್ ರೋಶನ್ ಎದುರಾಗಿ ನಟಿಸಲು ಆಯ್ಕೆಯಾಗಿದ್ದಳು. ಕೆಲವು ದಿನಗಳು ಸಿನಿಮಾ ಶೂಟಿಂಗ್ ಆದ ನಂತರ, ಅವಳು ಆ ಸಿನಿಮಾದ ಯೋಜನೆಯನ್ನು ಕೈಬಿಟ್ಟಳು. ನಂತರ "ಪ್ರಾಯಶಃ ನಾನು ಆ ಸಿನಿಮಾದಲ್ಲಿ ನಟಿಸುವುದು ವಿಧಿಯಲ್ಲಿ ಇರಲಿಲ್ಲ. ಎಷ್ಟೇ ಆದರೂ ಆ ಸಿನಿಮಾ ಅವರ ಮಗನಿಗಾಗಿ ನಿರ್ಮಿಸಿದ್ದಾಗಿತ್ತು. ಸಿನಿಮಾದ ಇಡೀ ಗಮನ ಆ ಹುಡುಗನ ಮೇಲೇ ಇದ್ದಿತು. ನಾನು ಆ ಸಿನಿಮಾದಲ್ಲಿ ನಟಿಸಲಿಲ್ಲ ಎಂಬುದು ಈಗ ನನಗೆ ಸಂತೋಷವೆನ್ನಿಸುತ್ತದೆ" ಎಂದು ವಿವರಿಸಿದಳು.

ಆ ವರ್ಷದ ಕೊನೆಯಲ್ಲಿ ಅವಳು ತನ್ನ ಮೊದಲ ಸಿನಿಮಾ ಜೆ.ಪಿ. ದತ್ತಾ ಅವರ ಯುದ್ಧರಂಗದ ಚಿತ್ರಕಥೆಯಿದ್ದ ರೆಫ್ಯೂಜಿ ಯಲ್ಲಿ, ಅಭಿಷೇಕ್ ಬಚ್ಚನ್‌‌‌ ಜೊತೆ ನಟಿಸಿದಳು. ೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ಕಥಾಹಂದರವಿದ್ದ ಆ ಸಿನಿಮಾವನ್ನು "ರೆಫ್ಯೂಜಿ" ಎಂದಷ್ಟೇ ಕರೆಯಲಾಗುತ್ತಿದ್ದ ವ್ಯಕ್ತಿಯೊಬ್ಬನ ಸುತ್ತ ಹೆಣೆಯಲಾಗಿತ್ತು. ಆತ ಭಾರತ-ಪಾಕಿಸ್ತಾನ ಗಡಿಯ ಆಚೆ-ಈಚೆಗೆ ಕಾನೂನುಬಾಹಿರವಾಗಿ ನಾಗರಿಕರನ್ನು ಸಾಗಿಸುತ್ತಿದ್ದ. ಈ ರೆಫ್ಯೂಜಿಯೊಂದಿಗೆ ಪ್ರೇಮದಲ್ಲಿ ಬೀಳುವ ಬಾಂಗ್ಲಾದೇಶದ ಹುಡುಗಿ ನಾಜ್‌ ಪಾತ್ರದಲ್ಲಿ ಕರೀನಾ ನಟಿಸಿದಳು, ಅವಳು ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ಕಾನೂನುಬಾಹಿರವಾಗಿ ವಲಸೆ ಬಂದಿರುತ್ತಾಳೆ. ಅವಳ ನಟನೆಯನ್ನು ಚಿತ್ರವಿಮರ್ಶಕರು ಮೆಚ್ಚಿಕೊಂಡರು; ಬಾಲಿವುಡ್ ಹಂಗಾಮದ ತರಣ್ ಆದರ್ಶ್‌ ಕರೀನಾಳ ಬಗ್ಗೆ ಬರೆಯುತ್ತ, "ಪ್ರೇಕ್ಷಕರು ಅವಳನ್ನು ನೋಡುತ್ತಿರುವಂತೆಯೇ ಇಷ್ಟಪಡಲಾರಂಭಿಸುವಂತೆ ಅವಳು ಮನಸೂರೆಗೊಳ್ಳುವ ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾಳೆ. ಅತ್ಯಂತ ಕಷ್ಟಕರ ಸನ್ನಿವೇಶಗಳನ್ನೂ ಆಕೆ ಎಷ್ಟು ಲೀಲಾಜಾಲವಾಗಿ ಅಭಿನಯಿಸುತ್ತಾಳೆ ಎಂದರೆ ನಿಮಗೆ ಅಚ್ಚರಿಯಾಗುತ್ತದೆ. ಕಥೆಯನ್ನು ಮುಂದೆ ತೆಗೆದುಕೊಂಡು ಹೋಗುವ. ನಿಜವಾದ ನಾಯಕ." ಎಂದು ಬರೆದಿತ್ತು.

ಕರೀನಾಳು ಅನುಭವ್ ಸಿನ್ಹಾ ಅವರ ಸೈನ್ಸ್‌ ಫಿಕ್ಷನ್‌ ವಿಜ್ಞಾನ ಕಾಲ್ಪನಿಕಕಥೆ ರಾ. ಒನ್‌ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಅವಳೊಂದಿಗೆ ಶಾರುಕ್ ಖಾನ್‌‌ ಮತ್ತು ಅರ್ಜುನ್‌ ರಾಮ್‌ಪಾಲ್‌ ತಾರಾಗಣದಲ್ಲಿರುವ ಈ ಸಿನಿಮಾ ಭಾರತದಲ್ಲಿ ೨೦೧೦ರ ಮಾರ್ಚ್‌ನಲ್ಲಿ ಚಿತ್ರೀಕರಣ ಆರಂಭಿಸಿತು. ಅವಳು ನಟ ಸೈಫ್‌ ಅಲಿ ಖಾನ್‌ಗೆ ಎದುರಾಗಿ ಶ್ರೀರಾಮ್ ರಾಘವನ್‌ ಅವರ ಏಜೆಂಟ್‌ ವಿನೋದ್‌ ಎಂಬ ಆಕ್ಷನ್‌-ಥ್ರಿಲ್ಲರ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾಳೆ.

                                     

3.1. ತೆರೆಯ ಹಿಂದಿನ ಕಾರ್ಯಗಳು ವೇದಿಕೆ ಪ್ರದರ್ಶನಗಳು

ಕರೀನಾ ೨೦೦೨ರಿಂದ ಹಲವಾರು ವೇದಿಕೆ ಪ್ರದರ್ಶನಗಳಲ್ಲಿ ಮತ್ತು ವಿಶ್ವ ಪ್ರವಾಸಗಳಲ್ಲಿ ಭಾಗವಹಿಸಿದ್ದಾಳೆ. ಅವಳ ಮೊದಲ ವಿಶ್ವ ಪ್ರವಾಸ, ಹಾರ್ಟ್‌ಥ್ರೋಬ್ಸ್‌: ಲಿವ್‌ ಇನ್‌ ಕಾನ್ಸರ್ಟ್‌ ಸಂಯಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ ಹೃತಿಕ್‌ ರೋಶನ್‌, ಕರಿಷ್ಮಾ ಕಪೂರ್‌, ಅರ್ಜುನ್‌ ರಾಮ್‌ಪಾಲ್‌, ಮತ್ತು ಆಫ್ತಾಬ್‌ ಶಿವ್‌ದಾಸನಿ, ಇವರೆಲ್ಲರೊಂದಿಗೆ ಭರ್ಜರಿ ಯಶಸ್ವಿಯಾಯಿತು. ಆ ವರ್ಷದ ಕೊನೆಯಲ್ಲಿ, ಅವಳು ಹಲವಾರು ಬಾಲಿವುಡ್ ತಾರೆಯರೊಂದಿಗೆ ಸೇರಿ ದಕ್ಷಿಣ ಆಫ್ರಿಕಾದ ಡರ್ಬನ್‌ನ ಕಿಂಗ್ಸ್‌ ಪಾರ್ಕ್‌ ಸ್ಟೇಡಿಯಂನಲ್ಲಿ ನಡೆದ ನೌ ಆಂಡ್ ನೆವರ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ನಾಲ್ಕು ವರ್ಷಗಳ ನಂತರ, ಕರೀನಾ ರಾಕ್‌ಸ್ಟಾರ್ಸ್‌ ಕಾನ್ಸರ್ಟ್‌ ವಿಶ್ವಪ್ರವಾಸವನ್ನು ಸಲ್ಮಾನ್‌ ಖಾನ್, ಜಯೀದ್‌ ಖಾನ್‌, ಜಾನ್‌ ಅಬ್ರಾಹಂ, ಶಾಹಿದ್‌ ಕಪೂರ್‌, ಇಷಾ ಡಯೋಲ್‌‌ ಮತ್ತು ಮಲ್ಲಿಕಾ ಶೆರಾವತ್‌ರೊಂದಿಗೆ ಸೇರಿ ಕೈಗೊಂಡಿದ್ದಳು. ಈ ಕಾರ್ಯಕ್ರಮವು ಬ್ರಿಟನ್, ಸಂಯಕ್ತ ಸಂಸ್ಥಾನ ಮತ್ತು ಕೆನಡಾಗಳ ೧೯ ನಗರಗಳಲ್ಲಿ ಪ್ರದರ್ಶನ ನೀಡಿತು ಮತ್ತು ಅಪಾರ ಯಶಸ್ಸು ಗಳಿಸಿತು. ೨೦೦೮ರಲ್ಲಿ, ಕರೀನಾಳು ಶಾರುಕ್ ಖಾನ್‌‌ನ ಟೆಂಪಪ್ಟೇಶನ್‌ ರೀಲೋಡೆಡ್‌ ೨೦೦೮, ಎಂಬ ಹಲವಾರು ದೇಶಗಳಲ್ಲಿ ಪ್ರದರ್ಶಿತವಾದ ಸರಣಿ ಪ್ರದರ್ಶನಗಳಲ್ಲಿ ಭಾಗವಹಿಸಿದಳು. ಈ ಕಾರ್ಯಕ್ರಮದಲ್ಲಿ ಅರ್ಜುನ್‌ ರಾಮ್‌ಪಾಲ್‌, ಕತ್ರೀನಾ ಕೈಫ್‌‌, ಗಣೇಶ್‌ ಹೆಗ್ಡೆ, ಜಾವೇದ್ ಅಲಿ ಮತ್ತು ಅನುಶಾ ದಾಂಡೇಕರ್‌ ಕೂಡ ಭಾಗವಹಿಸಿದ್ದು, ನೆದರ್‌ಲ್ಯಾಂಡ್ಸ್‌‌‌ನ ರೋಟರ್‌ಡಮ್‌ನಲ್ಲಿ ಅಹೊಯ್ ರೋಟರ್‌ಡಮ್‌ ಸ್ಥಳದಲ್ಲಿ ನಡೆಯಿತು. ಹಲವಾರು ತಿಂಗಳ ನಂತರ ಅವಳು ಪುನಾ ಖಾನ್, ರಾಮ್‌ಪಾಲ್ ಮತ್ತು ಕೈಫ್‌ ಜೊತೆ ಸೇರಿ ದುಬೈನ ಫೆಸ್ಟಿವಲ್ ಸಿಟಿ ಅರೀನಾದಲ್ಲಿ ೧೫,೦೦೦ ಪ್ರೇಕ್ಷಕರೆದುರು ಮನಮೋಹಕ ಕಾರ್ಯಕ್ರಮ ನೀಡಿದಳು.                                     

3.2. ತೆರೆಯ ಹಿಂದಿನ ಕಾರ್ಯಗಳು ಮಾನವೀಯತೆಯ ಕಾರ್ಯಗಳು

ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ವರ್ಷಗಳಲ್ಲಿ, ಕರೀನಾಳು ವಿವಿಧ ಮಾನವೀಯತೆಯ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಳು. ೨೦೦೩ರ ನವೆಂಬರ್‌ನಲ್ಲಿ, ಕರೀನಾಳು ಯುವ ಶಾಂತಿ ಶೃಂಗ ಕ್ಕಾಗಿ ನಿಧಿ ಕೂಡಿಸಲು ನಡೆದ ಮಾರ್ಕೋ ರಿಚಿ ಈಚ್‌ ಒನ್‌ ರೀಚ್‌ ಒನ್‌ ಬೆನಿಫಿಟ್ ಕಾನ್ಸರ್ಟ್‌ ನಲ್ಲಿ ಪ್ರದರ್ಶನ ನೀಡಿದ್ದಳು. ೨೦೦೫ರಲ್ಲಿ ಇನ್ನಿತರ ಬಾಲಿವುಡ್ ತಾರೆಯರೊಂದಿಗೆ ಸೇರಿ ಹೆಲ್ಪ್‌! ಟೆಲೆಥಾನ್ ಕಾನ್ಸರ್ಟ್‌ ಎಂಬ 2004ರ ಹಿಂದೂ ಮಹಾಸಾಗರದ ಭೂಕಂಪದಲ್ಲಿ ನೊಂದವರಿಗೆ ಹಣ ಕೂಡಿಸಲು ಸಹಾಯ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಆ ವರ್ಷದ ಕೊನೆಯಲ್ಲಿ, ರಾಜಾಸ್ತಾನದ ಮರುಭೂಮಿ ಪ್ರದೇಶಕ್ಕೆ ಭೇಟಿ ನೀಡಿ, ಎನ್‌ಡಿಟಿವಿಯ ಜೈ ಜವಾನ್ ಕಾರ್ಯಕ್ರಮದ ಹೋಳಿ ವಾರಾಂತ್ಯದ ವಿಶೇಷ ಧಾರಾವಾಹಿಯಲ್ಲಿ ಸೈನಿಕರ ನೈತಿಕತೆಯನ್ನು ಹೆಚ್ಚಿಸಲು ಭಾಗವಹಿಸಿದ್ದಳು. ಈ ಕಾರ್ಯಕ್ರಮವು ಮನೋರಂಜನೆ ನೀಡುವವ್ಯಕ್ತಿಗಳು ಮತ್ತು ತಾರೆಯರು ದೂರದ ಪ್ರದೇಶಗಳಲ್ಲಿರುವ ಭಾರತದ ಸೈನ್ಯದಳಗಳನ್ನು ಎನ್‌ಡಿಟಿವಿ ತಂಡದೊಂದಿಗೆ ಭೇಟಿ ನೀಡುವುದನ್ನು ಒಳಗೊಂಡಿತ್ತು. ಇದಾದ ನಂತರದ ವರ್ಷದಲ್ಲಿ, ಕರೀನಾಳು ಪ್ರಿಯಾಂಕಾ ಚೋಪ್ರಾಳೊಂದಿಗೆ ಸೇರಿ, ಕೌನ್‌ ಬನೇಗಾ ಕರೋರ್‌ಪತಿ, ಇದು ಹು ವಾಂಟ್ಸ್ ಟು ಬಿ ಮಿಲಿಯನೇರ್‌ ನ ಭಾರತೀಯ ಆವೃತ್ತಿಯ ತನ್ನ ಅರ್ಧಪಾಲು ಹಣವನ್ನು ದಾನ ಮಾಡಿದಳು ₹ ೫೦,೦೦,೦೦೦ ಯುಎಸ್$೧,೧೧,೦೦೦. ಅವಳು ಈ ಹಣವನ್ನು ಸೇಂಟ್ ಆಂತೋನಿ ವೃದ್ಧಾಶ್ರಮಕ್ಕೆ ಮತ್ತು ಬಾಂದ್ರಾದ ಮೌಂಟ್‌ಮೇರಿಗೆ ದಾನ ಮಾಡಿದಳು. ೨೦೦೮ರ ಜೂನ್‌ನಲ್ಲಿ, ಕರೀನಾಳು ಕ್ಯಾ ಆಪ್‌ ಪಾಂಚವಿ ಪಾಸ್‌ ಸೆ ತೇಜ್‌ ನಹೀಂ? ಎಂಬ ಆಟದ ಕಾರ್ಯಕ್ರಮದಲ್ಲಿ ಗೇಮ್ ಶೋ ಕಾಣಿಸಿಕೊಂಡಳು. ಸೈಫ್‌ ಅಲಿ ಖಾನ್‌ ಜೊತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವಳು ತಾನು ಗೆದ್ದಿದ್ದರಲ್ಲಿ ಅರ್ಧವನ್ನು ₹ ೫೦,೦೦,೦೦೦ ಯುಎಸ್$೧,೧೧,೦೦೦ ಸೇಂಟ್‌ ಆಂಥೋನಿ ವೃದ್ಧಾಶ್ರಮಕ್ಕೆ ದಾನ ಮಾಡಿದಳು. ೨೦೦೯ರಲ್ಲಿ ಅವಳು ಮತ್ತೆ ೧೦ ಕಾ ದಮ್‌ ಕಾರ್ಯಕ್ರಮದಲ್ಲಿ ಗೆದ್ದಿದ್ದನ್ನು ₹ ೧೦,೦೦,೦೦೦ ಯುಎಸ್$೨೨,೨೦೦ ವೃದ್ಧಾಶ್ರಮಕ್ಕೆ ದಾನ ಮಾಡಿದಳು.

೨೦೦೯ರ ಕೊನೆಯಲ್ಲಿ, ಕರೀನಾಳು ಸ್ವಚ್ಛತೆ ಕುರಿತು ಜಾಗೃತಿ ಹುಟ್ಟಿಸುವ ಬೃಹನ್‌ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್‌ ಬಿಎಂಸಿ ಪ್ರಯತ್ನಗಳಲ್ಲಿ ಭಾಗಿಯಾದಳು. ಈ ಯೋಜನೆಯು ನೆಹರೂನಗರದ ಅಂಗಡಿಕಾರರು ಮತ್ತು ನಿವಾಸಿಗಳೊಂದಿಗೆ ಸಂವಾದ ಮಾಡುವುದಕ್ಕೆ ಜವಾಬ್ದಾರರಾದ ಮತ್ತು ತ್ಯಾಜ್ಯ ಸಂಗ್ರಹಣೆಗೆ ಮನೆಬಾಗಿಲಿನವರೆಗೆ ಆಂದೋಲನವನ್ನು ಬೆಂಬಲಿಸುವ ಒಂದಿಷ್ಟು ಜನರ ಗುಂಪನ್ನು ಹೊಂದಿತ್ತು. ಇದಾದ ಮರುವರ್ಷ, ಕರೀನಾಳು ಎನ್‌ಡಿಟಿವಿ ಗ್ರೀನ್‌ಥಾನ್‌ ನಲ್ಲಿ ಭಾಗವಹಿಸಿದ್ದಳು. ಆ ಕಾರ್ಯಕ್ರಮದಡಿಯಲ್ಲಿ ಅವಳು ಮಧ್ಯ ಪ್ರದೇಶದ ಚಂದೇರಿ ಗ್ರಾಮವನ್ನು ದತ್ತು ತೆಗೆದುಕೊಂಡು, ಅವರಿಗೆ ವಿದ್ಯುತ್‌ಶಕ್ತಿ ಒದಗಿಸುವುದಕ್ಕೆ ಸಹಾಯ ಮಾಡಿದ್ದಳು. ಅಲ್ಲಿ ಇದರೊಂದಿಗೆ ಅವಳು ಪರಿಸರದ ಹಸಿರು ಭವಿಷ್ಯವನ್ನು ಹುಟ್ಟುಹಾಕುವ ಕುರಿತು ಜಾಗೃತಿ ಉಂಟುಮಾಡಿದಳು. "ನೀವು ಒಂದು ಸ್ವಚ್ಛ, ಹಿಂದೆ ಸರಿಯಬೇಕಾಗಿದೆ" ಎಂದು ಹೇಳಿದಳು.

                                     

4. ಮಾಧ್ಯಮಗಳಲ್ಲಿ

ಬಾಲಿವುಡ್ ಸಿನಿಮಾ ಉದ್ಯಮದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದ ಕುಟುಂಬದಿಂದ ಬಂದ ಕರೀನಾಳು ೨೦೦೦ದವರೆಗೆ ಮೊದಲ ಸಿನಿಮಾ ಮಾಡದಿದ್ದರೂ, ತುಂಬ ಚಿಕ್ಕ ವಯಸ್ಸಿನಿಂದಲೇ ಮಾಧ್ಯಮಗಳ ಕಣ್ಣನ್ನು ಸೆಳೆದಿದ್ದಳು. ಚಿಕ್ಕವಳಿದಾಗಿದ್ದಾಗ, ಅವಳು ಪ್ರಶಸ್ತಿ ಪ್ರದಾನ ಸಮಾರಂಭಗಳು ಮತ್ತು ಕಾರ್ಯಕ್ರಮಗಳಿಗೆ ನಿಯಮಿತವಾಗಿ ತನ್ನ ತಾಯಿ ಬಬಿತಾ ಮತ್ತು ಅಕ್ಕ ಕರಿಷ್ಮಾ ಕಪೂರ್‌ ಅವರೊಂದಿಗೆ ಬರುತ್ತಿದ್ದಳು ಮತ್ತು ಅಕ್ಕನ ಜೊತೆ ಸಿನಿಮಾ ಸೆಟ್‌ಗಳಲ್ಲಿಯೂ ಹಾಜರಾಗುತ್ತಿದ್ದಳು. ಫಿಲ್ಮ್‌‌ಫೇರ್‌‌ ನಲ್ಲಿ ಬಂದ ಸಂದರ್ಶನವೊಂದರಲ್ಲಿ ಅವಳು ಸಿನಿಮಾ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದು ತನ್ನ ಕೆಲಸದ ಕುರಿತು ವೃತ್ತಿಪರತೆಯ ಭಾವನೆಯನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆ, ಜೊತೆಗೆ ಮಾನವೀಯ ವ್ಯಕ್ತಿಯಾಗಿ ತಳವೂರಲು ಸಾಧ್ಯವಾಗಿದೆ ಎಂದು ಹೇಳಿದ್ದಳು. ಕರೀನಾಳ ತೆರೆಯ ಹಿಂದಿನ ಬದುಕು, ಅವಳ ತೂಕ ಮತ್ತು ಆಹಾರಕ್ರಮದ ಕುರಿತು ಆಗಾಗ ಬರುವ ಪತ್ರಿಕಾ ವರದಿಗಳೊಂದಿಗೆ ಭಾರತದಲ್ಲಿ ಮಾಧ್ಯಮಗಳ ವ್ಯಾಪಕ ಪ್ರಚಾರ ಪಡೆದಿವೆ. ಅವಳ ಶಾಹಿದ್‌ ಕಪೂರ್‌ ಜೊತೆಗಿನ ಸಂಬಂಧ ಮುರಿದು ಬಿದ್ದಿದ್ದು ಮತ್ತು ನಂತರದಲ್ಲಿ ನಟ ಸೈಫ್‌ ಅಲಿ ಖಾನ್‌ ಜೊತೆಗಿನ ಅವಳ ಸಂಬಂಧದಿಂದಾಗಿ ಹೆಡ್‌ಲೈನ್‌ಗಳಲ್ಲಿ ತಲೆಬರೆಹಗಳಲ್ಲಿ ಮಿಂಚಿದಳು. ಹೆಚ್ಚಾಗಿ ಭಾರತದ "ಬ್ರಾಂಗ್ಲಿನಾ" "ಸೈಫೀನಾ" ಎಂದು ಪತ್ರಿಕೆಗಳಿಂದ ಕರೆಯಲಾದ ಆಕೆಯ ಖಾನ್‌ ಜೊತೆಗಿನ ಸಂಬಂಧವು ೨೦೦೭ರಿಂದ ಭಾರತದಲ್ಲಿ ಅತ್ಯಂತ ಹೆಚ್ಚು ವರದಿಯಾದ ಖ್ಯಾತನಾಮರಸೆಲೆಬ್ರೆಟಿ ಸುದ್ದಿಗಳಲ್ಲಿ ಒಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಮಾಧ್ಯಮದ ಊಹಾಪೋಹಳಿಗೆ ಪ್ರತಿಕ್ರಿಯೆಯಾಗಿ, ಕರೀನಾಳು ಮಾಧ್ಯಮದೊಂದಿಗೆ ಮುಚ್ಚುಮರೆಯಿಲ್ಲದ ಬಾಂಧವ್ಯ ಬೆಳೆಸಿಕೊಂಡಿದ್ದಾಳೆ. ಯಾವುದೇ ನಿರ್ಬಂಧಗಳಿಲ್ಲದೆಯೇ ತನ್ನ ವೃತ್ತಿಯ ಅಥವಾ ಖಾಸಗಿ ಬದುಕಿನ ಕುರಿತು ಚರ್ಚಿಸುತ್ತಾಳೆ ಎಂಬ ಹೆಸರು ಪಡೆದಿದ್ದಾಳೆ.

ಅವಳ ಅತ್ಯಂತ ಭಿನ್ನ ಶಾರೀರಿಕ ಲಕ್ಷಣಗಳಲ್ಲಿ, ಕರೀನಾಳ ತುಟಿಗಳು ಅವಳ ಟ್ರೇಡ್‌ಮಾರ್ಕ್‌ ಎಂದು ಭಾರತೀಯ ಮಾಧ್ಯಮಗಳು ಉಲ್ಲೇಖಿಸಿವೆ. ಅವಳ ತೆರೆಯ ಹಿಂದಿನ ವ್ಯಕ್ತಿತ್ವ ಕೂಡ ಹೆಚ್ಚು ಚರ್ಚೆ ಮತ್ತು ಟೀಕೆಗಳಿಗೆ ಒಳಗಾಗಿದೆ. ಮಾಧ್ಯಮಗಳ ಒಂದು ವಲಯ ಅವಳನ್ನು ತುಂಬ ಸ್ನೇಹಮಯಿ ಮತ್ತು ತನ್ನ ಕುಟುಂಬಕ್ಕೆ ತುಂಬ ಹತ್ತಿರದಲ್ಲಿರುತ್ತಾಳೆ ಎಂದು ವರ್ಣಿಸಿದ್ದರೆ, ಇನ್ನಿತರರು ಅವಳು ಆಕ್ರಮಣಶೀಲ ಮತ್ತು ದುರಂಹಕಾರದ ಸ್ವಭಾವದವಳು ಎಂದು ವಿವರಿಸುತ್ತಾರೆ. ಅದು ಕಭೀ ಖುಷಿ ಕಭೀ ಗಮ್‌. ಸಿನಿಮಾದಲ್ಲಿ "ಪೂ" ಪಾತ್ರದ ಚಿತ್ರಣದ ನಂತರ ಅವಳು ಪಡೆದ ಇಮೇಜ್‌. ೨೦೦೧. ಅವಳು ನಂತರದಲ್ಲಿ ೨೦೦೨–೦೩ರಲ್ಲಿ ಅಂತಹುದೇ ಪಾತ್ರಗಳನ್ನು ಮಾಡುತ್ತ ಹೋದಳು, ಹೀಗಾಗಿ ನಟಿಯಾಗಿ ತೆರೆಯ ಮೇಲೆ ಮತ್ತು ತೆರೆಯ ಹಿಂದೇ ಅದೇ ಇಮೇಜ್‌ ಬೆಳೆಯಿತು. ಅವಳು ಲೈಂಗಿಕ ಕಾರ್ಯಕರ್ತೆಯ ಪಾತ್ರ ಮಾಡಿದ್ದ ೨೦೦೪ರ ಚಮೇಲಿ ಸಿನಿಮಾ ಬಿಡುಗಡೆಗೆ ಮುನ್ನ, ಕರೀನಾ ಮಾತನಾಡುತ್ತ, "ಜನರು ನಿಮ್ಮನ್ನು ಒಂದು ನಿರ್ದಿಷ್ಟ ಇಮೇಜ್‌ನೊಂದಿಗೆ ಗುರುತಿಸುತ್ತಾರೆ. ನೀವು ಯಾವುದೇ ಪಾತ್ರ ಮಾಡಿದರೂ ಅದು ನಿಮ್ಮನ್ನು ಹಿಂಬಾಲಿಸುತ್ತದೆ. ಈ ಇಮೇಜ್‌ಅನ್ನು ಮೀರಲು ಮತ್ತು ಹೆಚ್ಚೆಚ್ಚು ತೆರೆ-ಸ್ನೇಹಿಯಾಗಲು ನಾನು ಪ್ರಯತ್ನಿಸುತ್ತಿರುವೆ." ಎಂದಿದ್ದಳು. ಅವಳಿಗೆ ತೆರೆಯ ಮೇಲೆ ಹೊಸ ಇಮೇಜ್‌ ದಕ್ಕಿಸಿಕೊಳ್ಳಲು ಸಹಾಯಕವಾದ ಚಮೇಲಿ ಬಿಡುಗಡೆ ನಂತರ, ಕರೀನಾಳಿಗೆ ಅವಳ ತೆರೆಯ-ಹಿಂದಿನ ಇಮೇಜ್‌ ಕುರಿತು ಕೇಳಲಾಗಿತ್ತು. ಸಂದರ್ಶನವೊಂದರಲ್ಲಿ, ಅವಳು ತಾನು ಮಗುವಾಗಿದ್ದಾಗಿನಿಂದಲೂ ಆತ್ಮವಿಶ್ವಾಸದಿಂದಿರುವುದನ್ನು ಕಲಿಸಲಾಗಿತ್ತು, ಆ ಗುಣವನ್ನು ಮಾಧ್ಯಮಗಳು ಆಕ್ರಮಣಶೀಲ ಸ್ವಭಾವ ಎಂದು ತಪ್ಪಾಗಿ ಅರ್ಥೈಸಿದ್ದವು ಎಂದು ವಿವರಿಸಿದ್ದಳು.

೨೦೦೪ರಲ್ಲಿ, ಕರೀನಾಳು ರೆಡಿಫ್‌ನ "ಟಾಪ್‌ ಬಾಲಿವುಡ್ ಫೀಮೇಲ್ ಸ್ಟಾರ್‌"ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಳು. ೨೦೦೫ರಲ್ಲಿ ಏಳನೇ ಸ್ಥಾನ ಮತ್ತು ೨೦೦೬ರಲ್ಲಿ ಐದನೇ ಸ್ಥಾನ ಗಳಿಸಿದ್ದಳು ಮತ್ತು ೨೦೦೭ರಲ್ಲಿ ಪುನಾ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಳು. ಅವಳು "ಬಾಲಿವುಡ್‌ನ ಅತ್ಯಂತ ಸುಂದರ ನಟಿ", "ಬಾಲಿವುಡ್‌ನ ಅತ್ಯುತ್ತಮ ಉಡುಗೆ ತೊಡುವ ಮಹಿಳೆ" ಮತ್ತು "ಬಹುಮುಖವುಳ್ಳ ಮಹಿಳೆ" ಪಟ್ಟಿಗಳೂ ಸೇರಿದಂತೆ ರೆಡಿಫ್‌ನ ಬೇರೆ ಬೇರೆ ಪಟ್ಟಿಗಳಲ್ಲಿ ಆಗೀಗ ಕಾಣಿಸಿಕೊಳ್ಳುತ್ತಲೇ ಇದ್ದಳು. ೨೦೦೫ರಲ್ಲಿ, ಕರೀನಾ ಕರಣ್‌ ಜೋಹರ್‌ನ ಕಾಫೀ ವಿತ್ ಕರಣ್‌ ಟಾಕ್‌ ಶೋನಲ್ಲಿ ರಾಣಿ ಮುಖರ್ಜಿಯೊಂದಿಗೆ ಮೊದಲ ಬಾರಿ ಕಾಣಿಸಿಕೊಂಡಳು, ನಂತರ ಅವಳು ಶಾಹಿದ್‌ ಕಪೂರ್‌ನೊಂದಿಗೆ ಮತ್ತು ಸೈಫ್‌ ಅಲಿ ಖಾನ್‌ನೊಂದಿಗೆ ಕ್ರಮವಾಗಿ ೨೦೦೭ ಮತ್ತು ೨೦೧೦ರಲ್ಲಿ ಕಾಣಿಸಿಕೊಂಡಿದ್ದಳು. ೨೦೦೬ರಲ್ಲಿ ಅವಳು, ಮನೀಶ್‌ ಮಲ್ಹೋತ್ರಾನ ಫ್ಯಾಷನ್ ವೀಕ್‌ ೨೦೦೬ ರ ಫ್ಯಾಷನ್‌ ಪ್ರದರ್ಶನದಲ್ಲಿ ರೂಪದರ್ಶಿಯಾಗಿ ಮತ್ತು ರನ್‌ವೇ ಕ್ಯಾಟ್‌ವಾಕ್‌ಗೆ ನಟರಾದ ಶಾಹಿದ್ ಕಪೂರ್‌ ಮತ್ತು ಊರ್ಮಿಳಾ ಮಾತೋಂಡ್ಕರ್‌ ಜೊತೆ ಆಯ್ಕೆಯಾಗಿದ್ದಳು. ಮೂರು ವರ್ಷಗಳ ನಂತರ ಅವಳು ೨೦೦೯ ಇಂಡಿಯಾ ಕ್ಯೂಟ್ಯೂರ್ ವೀಕ್‌ ಭಾರತದ ಫ್ಯಾಷನ್‌ ಉಡುಗೆಗಳ ಸಪ್ತಾಹ ನಲ್ಲಿ ಮಲ್ಹೋತ್ರಾರ ಡೆಸ್ಟಿನೇಶನ್‌ ವೆಡ್ಡಿಂಗ್ ಎಂದು ಕರೆಯಲಾದ ಮದುಮಗಳ ಸಂಗ್ರಹದ ಪ್ರದರ್ಶನದಲ್ಲಿ ಕ್ಯಾಟ್‌ವಾಕ್‌ ಮಾಡಿದಳು.

ಇಂದು ಕರೀನಾಳು ಭಾರತದಲ್ಲಿ ಅತ್ಯಂತ ಜನಪ್ರಿಯ ಬಾಲಿವುಡ್ ಖ್ಯಾತನಾಮರಲ್ಲಿ ಒಬ್ಬಳೆಂದು ಪರಿಗಣಿಸಲಾಗಿದ್ದಾಳೆ. ಅವಳ ಆಕರ್ಷಕ ಮೈಮಾಟ ಮತ್ತು ಅಭಿನಯವು ಯುವತಿಯರಲ್ಲಿ ಮತ್ತು ಮಹಿಳೆಯರಲ್ಲಿ ಅವಳನ್ನು ಸ್ಟೈಲ್‌ ಐಕಾನ್‌ ಆಗಿಸಿದೆ. ೨೦೦೯ರಲ್ಲಿ ಡಿಎನ್‌ಎ ಪತ್ರಿಕೆ ನಡೆಸಿದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅವಳು ಭಾರತದ ಅತ್ಯಂತ ಜನಪ್ರಿಯ ಐಕಾನ್‌ಗಳಲ್ಲಿ ಒಬ್ಬಳೆಂದು ಜನ ಮತಹಾಕಿದ್ದರು. ಯುಕೆ ನಿಯತಕಾಲಿಕ ಈಸ್ಟರ್ನ್‌ ಐ ಪ್ರಕಾರ, ೨೦೦೯ರಲ್ಲಿ "ಏಷ್ಯಾದ ಅತ್ಯಂತ ಸೆಕ್ಸೀ ಮಹಿಳೆ" ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಳು; ಅದಕ್ಕಿಂತ ಮೊದಲು ೨೦೦೭ರಲ್ಲಿ ಎಂಟನೆಯ ಸ್ಥಾನ ಮತ್ತು ೨೦೦೮ರಲ್ಲಿ ಮೂರನೆಯ ಸ್ಥಾನ ಪಡೆದಿದ್ದಳು. ಕರೀನಾ ಸಿಎನ್‌ಎನ್‌ಜಿಒಸ್‌ "ಹು ಮ್ಯಾಟರ್ಡ್‌ ಮೋಸ್ಟ್‌ ಇಂಡಿಯಾ" ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಅಭಿನೇತ್ರಿ ಮತ್ತು "ಭಾರತದ ಅತ್ಯಂತ ಸುಂದರ ಮಹಿಳೆ" ಎಂದು ೨೦೧೦ರಲ್ಲಿ ಪೀಪಲ್ ಪತ್ರಿಕೆ ವರ್ಣಿಸಿತ್ತು. ೨೦೧೦ರ ಜುಲೈನಲ್ಲಿ, ಕರೀನಾ ಫಿಲ್ಮ್‌‌ಫೇರ್‌‌ ನಿಯತಕಾಲಿಕ ದ ವಾರ್ಷಿಕ ಶಕ್ತಿಶಾಲಿ ಮಹಿಳೆ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದು, ಹಿಂದಿನ ವರ್ಷದ ಸಾಧನೆಯನ್ನೇ ಮುಂದುವರೆಸಿದ್ದಳು. ೨೦೦೯ರಲ್ಲಿಯೂ ಅವಳು ಹತ್ತನೇ ಸ್ಥಾನದಲ್ಲಿದ್ದಳು.

                                     

5. ಪ್ರಶಸ್ತಿಗಳು

ಕಪೂರ್ ಹತ್ತು ನಾಮನಿರ್ದೇಶನಗಳಲ್ಲಿ ಆರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಿರಾಶ್ರಿತರ ಪಾತ್ರಕ್ಕಾಗಿ, ಕಪೂರ್ ೨೦೦೦ ರಲ್ಲಿ ಅತ್ಯುತ್ತಮ ಮಹಿಳಾ ಚೊಚ್ಚಲ ಪ್ರಶಸ್ತಿಗೆ ಪಾತ್ರರಾದರು. ಅವರು ಚಮೇಲಿ ೨೦೦೩ ಗಾಗಿ ವಿಶೇಷ ತೀರ್ಪುಗಾರರ ಮಾನ್ಯತೆಯನ್ನು ಪಡೆದರು ಮತ್ತು ದೇವ್ ೨೦೦೪ ಮತ್ತು ಓಂಕಾರ ೨೦೦೬ ಗಾಗಿ ಅತ್ಯುತ್ತಮ ನಟಿಗಾಗಿ ಎರಡು ವಿಮರ್ಶಕರ ಪ್ರಶಸ್ತಿ ಪಡೆದರು. ಕಪೂರ್ ನಂತರ ಕ್ರಮವಾಗಿ ಜಬ್ ವಿ ಮೆಟ್ ೨೦೦೭ ಮತ್ತು ವಿ ಆರ್ ಫ್ಯಾಮಿಲಿ ೨೦೧೦ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದರು.