Back

ⓘ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. ಜನಸಾಮಾನ್ಯರತ್ತ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕೊಂಡೊಯ್ಯಲು ಹಾಗೂ ವಿಜ್ಞಾನವನ್ನು ಜನಪ್ರಿಯಗೊಳಿಸುವ ಸಲುವಾಗಿ ಕರ್ನಾಟಕ ವಿಜ್ಞಾನ ಮತ್ತು ..                                     

ⓘ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ಜನಸಾಮಾನ್ಯರತ್ತ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕೊಂಡೊಯ್ಯಲು ಹಾಗೂ ವಿಜ್ಞಾನವನ್ನು ಜನಪ್ರಿಯಗೊಳಿಸುವ ಸಲುವಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯನ್ನು ಕರ್ನಾಟಕ ಸರ್ಕಾರವು ಜುಲೈ 30, 2005 ರಂದು ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ದಿವಂಗತ ಪ್ರೊ. ಯು. ಆರ್. ರಾವ್‍ರವರ ಅಧ್ಯಕ್ಷತೆಯಲ್ಲಿ ಸ್ಥಾಪನೆ ಮಾಡಿದೆ. ಪ್ರಸ್ತುತ ಡಾ. ಎಸ್. ಕೆ. ಶಿವಕುಮಾರ್, ನಿವೃತ್ತ ನಿರ್ದೇಶಕರು, ಇಸ್ರೊ ಉಪಗ್ರಹ ಕೇಂದ್ರ, ಬೆಂಗಳೂರು ಇವರು ಅಕಾಡೆಮಿಯ ಅಧ್ಯಕ್ಷರಾಗಿದ್ದು, ಪ್ರಮುಖ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪರಿಣತರನ್ನೊಳಗೊಂಡ ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 21 ಸದಸ್ಯರನ್ನು ಹೊಂದಿದೆ. ಸರ್ಕಾರವು ಅಕಾಡೆಮಿಯನ್ನು ಕರ್ನಾಟಕ ಸಂಘ ನೊಂದಾವಣಿ ಕಾಯಿದೆ 1960 ರಡಿಯಲ್ಲಿ ಏಪ್ರಿಲ್ 06, 2009 ರಂದು ನೊಂದಾಯಿಸಿರುತ್ತದೆ.

                                     

1. ಕಾರ್ಯಕ್ರಮಗಳು

ಅಕಾಡೆಮಿಯು, ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಜನಪ್ರಿಯಗೊಳಿಸುವ ಮತ್ತು ಈ ಕ್ಷೇತ್ರಗಳಲ್ಲಾದ ಪ್ರಗತಿಯ ಬಗ್ಗೆ ತಿಳುವಳಿಕೆ ನೀಡುವ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.

                                     

2. ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನವನ್ನು 2007 ರಿಂದ ಆಯೋಜಿಸಿಕೊಂಡು ಬರುತ್ತಿದೆ. ಪ್ರತಿ ವರ್ಷ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು, ಶ್ರೇಷ್ಠ ವಿಜ್ಞಾನಿಗಳು, ಪರಿಣತರು ಮತ್ತು ತಂತ್ರಜ್ಞರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಅಧ್ಯಾಪಕರು, ವಿಜ್ಞಾನಿಗಳು, ವಿಜ್ಞಾನಾಸಕ್ತರು ಹಾಗೂ ಸ್ವಾಯುತ್ತ ಸಂಸ್ಥೆಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.

                                     

3. ಅಧ್ಯಕ್ಷರು ಹಾಗೂ ಸದಸ್ಯರು

೧. ಪ್ರೊ.ಯು.ಆರ್.ರಾವ್, ಮಾಜಿ ಅಧ್ಯಕ್ಷರು, ಇಸ್ರೋ, ಬೆಂಗಳೂರು: ಅಧ್ಯಕ್ಷರು

೨. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ: ಪದನಿಮಿತ್ತ ಸದಸ್ಯರು

೩. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ: ಪದನಿಮಿತ್ತ ಸದಸ್ಯರು

 • ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

೪. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ: ಪದನಿಮಿತ್ತ ಸದಸ್ಯರು

೫. ನಿರ್ದೇಶಕರು ತಾಂತ್ರಿಕ: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

 • ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

೬. ಪ್ರೊ.ಎಂ.ಆರ್.ಗಜೇಂದ್ರಗಡ: ಸದಸ್ಯರು

 • ವಿಶ್ರಾಂತ ಕುಲಪತಿಗಳು, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ

೭. ಪ್ರೊ.ಜಯಗೋಪಾಲ ಉಚ್ಚಿಲ: ಸದಸ್ಯರು

 • ನಿರ್ದೇಶಕರು, ಜೈನ್ ವಿಶ್ವವಿದ್ಯಾಲಯ, ಬೆಂಗಳೂರು
 • ವಿಶ್ರಾಂತ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು, ವಸ್ತು ವಿಜ್ಞಾನ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ

೮. ಪ್ರೊ.ಪಿ.ಎಸ್.ಶಂಕರ್: ಸದಸ್ಯರು

 • ನಿರ್ದೇಶಕರು, ಎಂ.ಆರ್.ವೈದ್ಯಕೀಯ ಮಹಾವಿದ್ಯಾಲಯ, ಗುಲ್ಬರ್ಗಾ

೯. ಪ್ರೊ.ರಾಮಲಿಂಗಯ್ಯ: ಸದಸ್ಯರು

 • ನಿರ್ದೇಶಕರು, ಪಿ.ಇ.ಟಿ.ಶಿಕ್ಷಣ ಸಂಸ್ಥೆ, ಮಂಡ್ಯ

೧೦. ಪ್ರೊ.ಕೆ.ಚಿದಾನಂದ ಗೌಡ: ಸದಸ್ಯರು

 • ವಿಶ್ರಾಂತ ಕುಲಪತಿಗಳು, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ

೧೧. ಪ್ರೊ.ಗೀತಾ ಬಾಲಿ: ಸದಸ್ಯರು

 • ವಿಶ್ರಾಂತ ಕುಲಪತಿಗಳು, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಬಿಜಾಪುರ

೧೨. ಡಾ.ಹೆಚ್.ಎಸ್.ನಾಗರಾಜ್: ಸದಸ್ಯರು

 • ಪ್ರಾಧ್ಯಾಪಕರು ಹಾಗೂ ನಿರ್ದೇಶಕರು, ಬೇಸ್, ಬೆಂಗಳೂರು

೧೩. ಪ್ರೊ.ಹಾಲ್ದೊಡ್ಡೇರಿ ಸುಧೀಂದ್ರ: ಸದಸ್ಯರು

 • ಮಾಜಿ ವಿಜ್ಞಾನಿ, ಡಿ.ಆರ್.ಡಿ.ಓ. ಹಾಗೂ
 • ನಿರ್ದೇಶಕರು, ಎಂಜಿನಿಯರಿಂಗ್ ಕಾಲೇಜು, ಅಲಯನ್ಸ್ ವಿಶ್ವವಿದ್ಯಾಲಯ

೧೪. ಪ್ರೊ.ಕೆ.ಎಂ.ಕಾವೇರಿಯಪ್ಪ: ಸದಸ್ಯರು

 • ವಿಶ್ರಾಂತ ಕುಲಪತಿಗಳು, ಮಂಗಳೂರು ವಿಶ್ವವಿದ್ಯಾಲಯ ಹಾಗೂ
 • ಸದಸ್ಯ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಮಂಡಳಿ, ಕರ್ನಾಟಕ ಸರ್ಕಾರ


                                     

4. ಅಕಾಡೆಮಿ ಪ್ರಶಸ್ತಿಗಳು

ಶ್ರೇಷ್ಠ ಲೇಖಕ ಪ್ರಶಸ್ತಿ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳಲ್ಲಿ ಕನ್ನಡದಲ್ಲಿ ಕೃತಿಗಳನ್ನು ಪ್ರಕಟಿಸಿರುವ ಲೇಖಕರಿಗೆ ಶ್ರೇಷ್ಠ ಲೇಖಕ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಪ್ರಶಸ್ತಿರು ೨೫,೦೦೦ ರೂ.ಗಳ ನಗದು ಹಾಗೂ ಪ್ರಶಸ್ತಿಯನ್ನು ಒಳಗೊಂಡಿರುತ್ತದೆ.

೨೦೧೪ ಮತ್ತು ೨೦೧೫15ನೇ ಸಾಲಿನ ಶ್ರೇಷ್ಠ ಲೇಖಕ ಪ್ರಶಸ್ತಿ ಪಡೆದವರು

೨೦೧೪ ಮತ್ತು ೨೦೧೫15ನೇ ಸಾಲಿನ ಶ್ರೇಷ್ಠ ಲೇಖಕ ಪ್ರಶಸ್ತಿ ಪಡೆದವರ ಪಟ್ಟಿ ಇಂತಿದೆ.

                                     

5. ವಿಳಾಸ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವಿಜ್ಙಾನ ಮತ್ತು ತಂತ್ರಜ್ಞಾನ ಇಲಾಖೆ ವಿಜ್ಞಾನ ಭವನ, ೨೪/೨, ೨೧ನೇ ಮುಖ್ಯರಸ್ತೆ, ಬಿ.ಡಿ.ಎ. ಕಾಂಪ್ಲೆಕ್ಸ್ ಹತ್ತಿರ, ಬನಶಂಕರಿ ೨ನೇ ಹಂತ ಬೆಂಗಳೂರು-೫೬೦೦೭೦

                                     

6. ಕರ್ನಾಟಕದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರೋತ್ಸಾಹಿಸುವ ಇತರ ಸಂಸ್ಥೆಗಳು

 • ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಕೂಟ Vision Group on Science & Technology
 • ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
 • ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿKarnataka State Council for Science & Technology
Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →