Back

ⓘ ಉಮಾಶ್ರೀ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ರಂಗಭೂಮಿಯ ತಾಜಾ ಪ್ರತಿಭೆಯಾದುದರಿಂದ, ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕ ..                                               

ಎಲ್. ಜಿ. ಶಿವಕುಮಾರ್

ಬೆಳಗಿನ ಕಾಯಕ್ರಮಗಳು ನೇರಪ್ರಸಾರ ಹೊಂದಿರಲಿ ಎಂದು ದೆಹಲಿಯ ದೂರದರ್ಶನ ಕೇಂದ್ರದಿಂದ ಕಳೆದ ದಶಕದಲ್ಲಿ ಆದೇಶ ಬಂತು. ೨೦೦೧ ರ ಸೆಪ್ಟೆಂಬರ್ ೧ ರಂದು ಚಂದನ ವಾಹಿನಿಯಲ್ಲಿ ಬೆಳಗು ಕಾರ್ಯಕ್ರಮ ಆರಂಭವಾಯಿತು. ಪ್ರತಿದಿನ ಬೆಳಿಗ್ಯೆ ೭ ರಿಂದ ೭-೪೦ ರವರೆಗೆ ಈ ಕಾರ್ಯಕ್ರಮ ಸತತವಾಗಿ ನಡೆದುಕೊಂಡು ಬರುತ್ತಿದೆ. ಬೆಂಗಳೂರು ದೂರದರ್ಶನದ ಆಗಿನ ನಿರ್ದೆಶಕ ವೆಂಕಟೇಶ್ವರಲು ಕಾರ್ಯಕ್ರಮದ ಹೊಣೆಯನ್ನು ಶಿವಕುಮಾರ್ ಗೆ, ವಹಿಸಿದರು. ಹಾಗೆ ಶುರುವಾದ ಬೆಳಗು ಕಾರ್ಯಕ್ರಮದ ಪ್ರಥಮ ಅತಿಥಿ, ನಟಿ, ಶ್ರೀಮತಿ ಉಮಾಶ್ರೀ.

                                               

ಕರ್ನಾಟಕ ರಾಜ್ಯ ಮೀಸಲು ಪೋಲಿಸ್

.ಕೇಂದ್ರ ಕಾರ್ಯಸ್ಥಾನ - ಕಾರ್ನಟಕ ರಾಜ್ಯ ಫೋಲಿಸ್, ಬೆಂಗಳೂರು-೫೬೦೦೦೧.ಪಾರುಪತ್ಯ ಕಾರ್ಯನಿರ್ವಾಹಕ - ಲಾಲ್/ರೋಖುಮ ಫಚುವ - ಐ,ಪಿ.ಎಸ್ - ಡಿ.ಐ.ಜಿ, ಕಾರ್ನಾಟಕ ರಾಜ್ಯ == ವೆಬ್ ಶೈಟ್ www.ksp.gov.in

                                               

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೯೧–೨೦೦೦

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.

                                               

ವೀಕೆಂಡ್ ವಿಥ್ ರಮೇಶ್

ವೀಕೆಂಡ್ ವಿತ್ ರಮೇಶ್ ಭಾರತೀಯ ಟಾಕ್ ಶೋ ಆಗಿದ್ದು, ನಟ, ಚಲನಚಿತ್ರ ನಿರ್ದೇಶಕ ಮತ್ತು ಸ್ಪೂರ್ತಿದಾಯಕ ಮಾತುಗಾರ ರಮೇಶ್ ಅರವಿಂದ್ ಅವರು ಕನ್ನಡದಲ್ಲಿ ಆಯೋಜಿಸಿದ್ದಾರೆ. ಪ್ರದರ್ಶನದ ಮೊದಲ ಸೀಸನ್ 2 ಆಗಸ್ಟ್ 2014 ರಂದು ಪ್ರಸಾರವಾಗಲು ಪ್ರಾರಂಭವಾಯಿತು ಮತ್ತು 26 ಕಂತುಗಳನ್ನು ಪ್ರಸಾರ ಮಾಡಿದ ನಂತರ 26 ಅಕ್ಟೋಬರ್ 2014 ರಂದು ಕೊನೆಗೊಂಡಿತು. ಪ್ರದರ್ಶನದ ಎರಡನೇ ಸೀಸನ್ 26 ಡಿಸೆಂಬರ್ 2015 ರಿಂದ 16 ಏಪ್ರಿಲ್ 2016 ರವರೆಗೆ ಪ್ರಸಾರವಾಯಿತು. ಮೂರನೇ ಸೀಸನ್ 26 ಮಾರ್ಚ್ 2017 ಮತ್ತು 2 ಜುಲೈ 2017 ರಿಂದ ಪ್ರಸಾರವಾಯಿತು. ಪ್ರದ್ಯುಮ್ನ ನರಹಳ್ಳಿ ಸೀಸನ್ 2 ಮತ್ತು ಸೀಸನ್ 3 ರ ಚಿತ್ರಕಥೆ ಬರೆದಿದ್ದಾರೆ.

ಉಮಾಶ್ರೀ
                                     

ⓘ ಉಮಾಶ್ರೀ

ಉಮಾಶ್ರೀ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ರಂಗಭೂಮಿಯ ತಾಜಾ ಪ್ರತಿಭೆಯಾದುದರಿಂದ, ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಕನ್ನಡ ಚಲನಚಿತ್ರಾಸಕ್ತರ ಒಕ್ಕೊರಲಿನ ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಆಕೆ ತನ್ನ ಕಂಗಳಲ್ಲೇ ತುಂಬಿ ಕೊಡುವ ನಟನೆಯ ಪೂರ್ಣತ್ವ ಅಪ್ರತಿಮವಾದದ್ದು.

                                     

1. ಜೀವನ

ಉಮಾಶ್ರೀ ಅವರು ಮೇ ೧೦, ೧೯೫೭ರಂದು ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಜನಿಸಿದರು. ಅವರ ಜೀವನ ಬಡತನದ ಬವಣೆಯಲ್ಲಿ ಮೂಡಿ ಬಂದದ್ದು." ನಾನು ನಾಟಕಕ್ಕೆ ಸೇರಿದ್ದೇ ತಿನ್ನಲು ಚಿತ್ರಾನ್ನ ಸಿಗುತ್ತದೆ” ಎಂದು ಅವರು ತಮ್ಮ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ಕಷ್ಟಪಟ್ಟು ದುಡಿದು ತಮ್ಮಿಬ್ಬರು ಮಕ್ಕಳನ್ನು ಉತ್ತಮ ವಿದ್ಯಾವಂತರಾಗಿಸಿರುವ ಉಮಾಶ್ರೀ ತಮ್ಮ ಬದುಕಿನ ಜವಾಬ್ಧಾರಿಗಳನ್ನು ಕೂಡಾ ಸಮರ್ಥವಾಗಿ ಪೂರೈಸಿದ್ದಾರೆ.

                                     

2. ರಂಗಭೂಮಿಯಲ್ಲಿ

ವೃತ್ತಿ ರಂಗಭೂಮಿಯಲ್ಲಿ ಹಲವಾರು ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿ, ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ. ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ಅವರುಗಳ ನಿರ್ದೇಶನದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದಾಕೆ ಉಮಾಶ್ರೀ. ಅವರ ಒಡಲಾಳ ನಾಟಕದ ಸಾಕವ್ವನ ಅಭಿನಯ ಅಂದಿನ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು." ನನ್ನನ್ನು ಅತ್ಯಂತವಾಗಿ ಕಾಡಿದ ಪಾತ್ರ ಶರ್ಮಿಷ್ಠೆಯದು” ಎಂದು ಉಮಾಶ್ರೀ ಒಂದು ಕಡೆ ಹೇಳಿದ್ದಾರೆ." ಯಯಾತಿಗೆ ಕೊನೆವರೆಗೂ ಸಾಥ್ ನೀಡಿದ ಶರ್ಮಿಷ್ಠೆ ರಾಕ್ಷಸ ಕುಲದಲ್ಲಿ ಹುಟ್ಟಿದರೂ ನನಗೆ ಆದರ್ಶ ಎಂದು ತೋರುತ್ತಾಳೆ. ತನ್ನ ಲಾಭದವರೆಗೆ ಕಾದು ಕೂಡಲೇ ಹೊರಟು ಹೋದ ದೇವಯಾನಿ ಮಾನವ ಕುಲದಲ್ಲಿ ಹುಟ್ಟಿದ್ದರೂ ರಾಕ್ಷಸಳಂತೆಯೇ ವರ್ತಿಸಿದಳು”. ಹೀಗೆ ಹೇಳುವ ಉಮಾಶ್ರೀ ಗಮನಾರ್ಹ ಚಿಂತಕಿ. ಬದುಕಿಗಾಗಿ ಕಲೆಯನ್ನು ಅನಿವಾರ್ಯವಾಗಿ ಅಪ್ಪಿಕೊಂಡ ಉಮಾಶ್ರೀ ಅದಕ್ಕೆ ತೋರಿದ ನಿಷ್ಠೆ ಮಾತ್ರ ಅನನ್ಯವಾದದ್ದು.

                                     

3. ಚಲನಚಿತ್ರರಂಗದಲ್ಲಿ

‘ಅನುಭವ’ ಚಿತ್ರದಲ್ಲಿನ ಅವರ ಪಾತ್ರ ಕಾಶೀನಾಥರ ಹೊಸ ರೀತಿಯ ಒಂದು ಬೋಲ್ಡ್ ಪ್ರಯೋಗ. ಈ ಚಿತ್ರದಲ್ಲಿ ಉಮಾಶ್ರೀ ಅವರು ತೋರಿದ ಗಮನಾರ್ಹ ಅಭಿನಯ ನೆನಪಿನಲ್ಲಿ ಉಳಿಯುವಂತದ್ದು. ಆ ಪಾತ್ರದಲ್ಲಿ ಅವರ ಪಾತ್ರ ಹೇಗೇ ಇದ್ದರೂ ಅವರು ನೆನಪಲ್ಲಿ ಉಳಿದದ್ದು ಮಾತ್ರ ಆಕೆಯ ಅಭಿನಯ ಸಾಮರ್ಥ್ಯದಿಂದ. ಒಬ್ಬ ಕಲಾವಿದರು ತನಗೆ ನೀಡಿದ ಯಾವುದೇ ಪಾತ್ರದಲ್ಲೂ ತನ್ನನ್ನು ಅಡಗಿಸಿ, ತನ್ನ ಪಾತ್ರವನ್ನೂ ಅಡಗಿಸಿ ಕಲೆಯನ್ನು ಸುಗಮವಾಗಿ ಹೊರಚೆಲ್ಲುವ ವಿಶಿಷ್ಟ ಪರಿ ಇದು. ಗೋಲ್ ಮಾಲ್ ರಾಧಾಕೃಷ್ಣ; ಎಂಬ ಚಿತ್ರದಲ್ಲಿ, ಉಮೇಶ್, ಸಿಹಿ ಕಹಿ ಚಂದ್ರು, ಮೈಸೂರು ಲೋಕೇಶ್, ಮುಖ್ಯಮಂತ್ರಿ ಚಂದ್ರು, ಅನಂತನಾಗ್ ಇವರುಗಳ ಸುತ್ತ ತಿರುಗುವ ಕತೆಯಲ್ಲಿ, ಹಲವೊಮ್ಮೆ ಅಲ್ಲಿನ ಹಾಸ್ಯ ಸನ್ನಿವೇಶ ಮೇರೆ ಮೀರಿದ್ದು ಎಂದು ಭಾವ ಕೊಡುತ್ತಿದ್ದರೂ ಕೂಡ, ಉಮಾಶ್ರೀ ತಮ್ಮ ಪಾತ್ರಕ್ಕೆ ನೀಡುವ ಹೊಳಪು ನೆನಪಲ್ಲಿ ಉಳಿಯುವಂತದ್ದು. ಇವರ ಸಾಧನೆ ನಿಜವಾಗಲೂ ಕಣ್ಣೀರು ತರುವಂಥದ್ದು

                                     

4. ಶ್ರೇಷ್ಠ ಕಲಾವಿದೆ

ನಾಟಕ ರಂಗ ಕೊಡುವ ವೈವಿಧ್ಯತೆಯನ್ನು ದುರದೃಷ್ಟವಶಾತ್ ಚಿತ್ರರಂಗ ಮತ್ತು ದೂರದರ್ಶನ ನೀಡಲು ಆಶಕ್ಯವಾಗಿವೆ. ಇಲ್ಲಿ ಎಲ್ಲವೂ ಜೆರಾಕ್ಸ್ ಕಾಪಿಯಂತೆ ನಡೆದು ಬಿಡಬೇಕು. ಹೀಗಾಗಿ ಇಲ್ಲಿನ ಕಲಾವಿದರು ಅದರಲ್ಲೂ ಪೋಷಕ ಪಾತ್ರದವರು ಟೈಪ್ ಕಾಸ್ಟ್ ಆಗಿ ಸವೆದು ಹೋಗುವುದೇ ಹೆಚ್ಚು. ಅತ್ಯಂತ ಆಳವಾದ ಸಾಮರ್ಥ್ಯವುಳ್ಳವರು ಮಾತ್ರವೇ ಸಿಕ್ಕ ಒಂದೆರಡು ಮುತ್ತಿನ ಅವಕಾಶಗಳನ್ನೇ ಹಾದಿಗಳನ್ನಾಗಿ ಪರಿವರ್ತಿಸಿಕೊಳ್ಳುವ ಸಂಯಮ ತೋರುತ್ತಾರೆ. ಉಮಾಶ್ರೀ ಅಂತಹ ಶ್ರೇಷ್ಟ ಕಲಾವಿದರ ಸಾಲಿಗೆ ಸೇರುವವರು.

ಉಮಾಶ್ರೀ ಅವರ ಪಾತ್ರಗಳು

  • ಸಂಗ್ಯಾಬಾಳ್ಯ, ಕೊಟ್ರೇಶಿ ಕನಸು, ಯಾರಿಗೆ ಸಾಲುತ್ತೆ ಸಂಬಳ ಹೀಗೆ ಹಲವು ತಕ್ಷಣಕ್ಕೆ ನೆನಪಿಗೆ ಬರುವ ಪಾತ್ರಗಳು ಆಕೆಯ ವಿಶಾಲ ವ್ಯಾಪ್ತಿಯ ಕುರುಹುಗಳನ್ನು ತೋರುತ್ತವೆ.
  • ‘ಪುಟ್ನಂಜ’ ಚಿತ್ರದ ಮುದುಕಿ ಪಾತ್ರ;
  • ವಿಷ್ಣು – ಅಂಬರೀಶ್ ಇಬ್ಬರಿಗೂ ಹಿರಿಯಳಾಗಿ ಮೂಡಿದ ‘ದಿಗ್ಗಜರು’ ಚಿತ್ರದ ಪಾತ್ರ;
  • ‘ಕೋತಿಗಳು ಸಾರ್ ಕೋತಿಗಳು’ ಚಿತ್ರದಲ್ಲಿನ ಮುನಿಯಮ್ಮ ಪಾತ್ರ;
  • ಯಾವುದೇ ತಾಯಿಯ ಪಾತ್ರಕ್ಕೂ ಅವರು ಜೀವ ತುಂಬುತ್ತಿದ್ದ ಶೈಲಿ ಶ್ಲಾಘನೀಯವಾದುದಾಗಿದೆ. ತಮ್ಮೇಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಲೇ ಕನ್ನಡ ಚಿತ್ರರಸಿಕರ ಕಣ್ಮಣಿಯಾಗಿದ್ದಾರೆ. ಅವರ ಪ್ರತಿಯೊಂದು ಪಾತ್ರಗಳಲ್ಲೂ ಸ್ವಂತಿಕೆ, ಜೀವಂತಿಕೆ ಇದೆ.


                                     

5. ರಾಷ್ಟ್ರಪ್ರಶಸ್ತಿ

ಉಮಾಶ್ರೀ ಅವರಿಗೆ ‘ಗುಲಾಬಿ ಟಾಕೀಸ್’ ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟ ಮಹಾನ್ ದಿಗ್ದರ್ಶಕ ಗಿರೀಶ್ ಕಾಸರವಳ್ಳಿ, ಅವರು ಆಕೆಗೆ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ ಮತ್ತು ಓಶಿಯಾನ್ಸ್ ಅಂತರರಾಷ್ಟ್ರೀಯ ಕಲಾಭಿಮಾನಿಗಳ ಪ್ರಶಸ್ತಿ ದೊರಕುವಂತಹ ಪಾತ್ರ ಕೊಟ್ಟು ಸೊಗಸಾದ ಅಭಿನಯ ಹೊರಹೊಮ್ಮುವಂತೆ ಮಾಡಿದ್ದಾರೆ. ಕಾಸರವಳ್ಳಿಯವರ ‘ಕನಸೆಂಬ ಕುದುರೆಯನ್ನೇರಿ’ ಚಿತ್ರದಲ್ಲೂ ಉಮಾಶ್ರೀ ನಟಿಸಿದ್ದಾರೆ.

                                     

6. ಸಮಾಜಸೇವೆ ಮತ್ತು ರಾಜಕಾರಣದಲ್ಲಿ

ಸಮಾಜಸೇವೆ ಮತ್ತು ರಾಜಕೀಯದಲ್ಲೂ ತಮ್ಮ ಚಟುವಟಿಕೆಗಳನ್ನು ಹರಡಿಕೊಂಡಿರುವ ಉಮಾಶ್ರೀ, ಸಿನಿಮಾ, ದೂರದರ್ಶನಗಳಲ್ಲಿನ ಹಲವು ಪಾತ್ರಗಳಲ್ಲಿ ಎಡೆಬಿಡದೆ ಮುನ್ನಡೆಯುತ್ತಿದ್ದಾರೆ. 2013ರ ವರ್ಷದಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೆಲುವನ್ನು ಸಾಧಿಸಿದ್ದಾರೆ.

                                     

7. ದಿಟ್ಟತನ

ಚಿತ್ರರಂಗವೆಂಬ ಬಣ್ಣ ಬಣ್ಣದ ಹಿಂದಿನ ಬದುಕಿನಲ್ಲಿ ಕೆಲವೊಂದು ಜನರ ಬದುಕು ಮಾತ್ರ ಶ್ರೀಮಂತವಾಗಿ ಕಾಣುತ್ತವೆ. ಓಹೋ ಇವರು ಪ್ರಧಾನ ಕಲಾವಿದರು ಎಂದು ನಾವಂದುಕೊಳ್ಳುತ್ತಿರುವಂತೆಯೇ ಅವರ ಹಲವಾರು ಭೀಕರ ಬದುಕಿನ ಕ್ಷಣಗಳೂ ಮಾಧ್ಯಮಗಳಲ್ಲಿ ರಾಚುತ್ತಿರುತ್ತವೆ. ಅನೇಕ ಪ್ರಸಿದ್ಧ ಕಲಾವಿದರು ತಮ್ಮ ಬದುಕನ್ನು ವಿಚಿತ್ರ ರೀತಿಯಲ್ಲಿ ಕೊನೆಗಾಣಿಸಿಕೊಂಡಿರುವ ಕ್ಷೇತ್ರ ಸಿನಿಮಾ ಉದ್ಯಮ. ಕಷ್ಟಗಳ ಕೋಟಲೆಗಳಲ್ಲಿ ಬೆಳೆದು ಬಂದ ‘ಉಮಾಶ್ರೀ’ ತನ್ನ ದಿಟ್ಟತನದಿಂದ ಚಿತ್ರರಂಗದ ಬದುಕನ್ನು ಉನ್ನತ ಸಾಧನೆಯವರೆಗೆ ನಡೆಸಿರುವ ರೀತಿ ಮೆಚ್ಚುವಂತದ್ದು.

                                     

8. ಬಾಹ್ಯ ಸಂಪರ್ಕಗಳು

  • ಅವಧಿ, ನನ್ನ ಡೈವೊರ್ಸ್ ಆಯ್ತು, ಉಮಾಶ್ರೀ, ಫೆಬ್ರವರಿ, ೪, ೨೦೧೩ 2013
  • ಪಿ.ಎಚ್.ಡಿ.ಮೌಖಿಕ ಪರೀಕ್ಷೆ: ಸಚಿವೆ ಉಮಾಶ್ರಿ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಹಾಜರು….! November 2, 2013
  • ರಂಗಾಯಣ ರಗಳೆಗೆ ಉಮಾಶ್ರಿ ಇತಿಶ್ರೀ?, 21 May 2013, ಒಣ ಪ್ರತಿಷ್ಠೆಗೆ ಸೊರಗಿದ ಕಾರಂತರ ಕನಸಿನ ಕೂಸು ರಂಗಾಯಣ-ಬಸವರಾಜ ಹಿರೇಮಠ
  • ಕನ್ನಡ*ಕನ್ನಡಿಗ* ಕರ್ನಾಟಕ * ಉಮಾಶ್ರೀ ಚಿತ್ರೋತ್ಸವ: ನಟಿಯ ಆಂತರ್ಯ ಬದುಕಿನ ಯಾನ-ಶಂಕರ್ ಮಿತ್ರಾ ಶ್ರೀವಾಸ್ತವ್ November 12.2013
Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →