Back

ⓘ ಶಂಕರ್ ನಾಗ್. ಶಂಕರ್‌ನಾಗ್ ಕನ್ನಡ ಚಿತ್ರರಂಗದ ರಂಗಭೂಮಿ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ಖ್ಯಾತ ಕಾದಂಬರಿಕಾರ ಆರ್. ಕೆ ..                                               

ಪದ್ಮಪ್ರಿಯ

ಪದ್ಮಪ್ರಿಯ ೧೯೭೦ ಮತ್ತು ೧೯೮೦ರ ದಶಕದ ದಕ್ಷಿಣ ಭಾರತದ ಜನಪ್ರಿಯ ನಟಿ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಯ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಡಾ.ರಾಜ್ ಕುಮಾರ್ ಅಭಿನಯದ ಯಶಸ್ವಿ ಚಿತ್ರಗಳಾದ ಶಂಕರ್ ಗುರು, ತಾಯಿಗೆ ತಕ್ಕ ಮಗ ಮತ್ತು ಆಪರೇಶನ್ ಡೈಮಂಡ್ ರಾಕೆಟ್ ಮತ್ತು ವಿಷ್ಣುವರ್ಧನ್ ಅಭಿನಯದ ಅಸಾಧ್ಯ ಅಳಿಯ, ನನ್ನ ರೋಷ ನೂರು ವರುಷ ಮತ್ತು ಊರಿಗೆ ಉಪಕಾರಿಗಳಲ್ಲಿ ನಾಯಕಿಯಾಗಿ ನಟಿಸಿ ಅಪಾರ ಜನಮನ್ನಣೆ ಗಳಿಸಿದ್ದರು. ಅನಂತ್ ನಾಗ್ ಜೊತೆಗಿನ ಬಾಡದ ಹೂ ಚಿತ್ರದಲ್ಲಿ ಪದ್ಮಪ್ರಿಯ ಸ್ಮರಣೀಯ ಅಭಿನಯ ನೀಡಿದ್ದರು. ಶ್ರೀನಾಥ್, ಲೋಕೇಶ್, ಅಂಬರೀಶ್ ಮತ್ತು ಅಶೋಕ್ ಮುಂತಾದ ನಟರೊಂದಿಗೆ ನಟಿಸಿದ್ದರು. ತಮಿಳಿನಲ್ಲಿ ಶಿವಾಜಿ ಗಣೇಶನ್, ಮುತ್ತುರಾಮನ್, ಜೈಶಂಕರ್ ಮತ್ತು ಶಿವಕುಮಾರ್ ರಂಥ ಜನಪ್ರಿಯ ನಟರೊಂದಿಗೆ ನಾಯಕಿಯಾಗಿ ನಟಿಸಿದ್ದರು. ...

                                               

ಕಲ್ಪನಾ ನಾಗನಾಥ್

ಕಲ್ಪನಾ ನಾಗನಾಥ್, ಕಿರು-ತೆರೆ ಬೆಳ್ಳಿ-ತೆರೆ, ರಂಗಭೂಮಿಗಳಲ್ಲಿ ಸಕ್ರಿಯವಾಗಿರುವ ಕಲಾವಿದೆ. ಮೈಸೂರ್ ಬ್ಯಾಂಕ್ ನ ಉದ್ಯೋಗಿ. ನಾಟಕ ಅಕ್ಯಾಡಮಿ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಹಲವಾರು ಉತ್ಸವಗಳಲ್ಲಿ ದೇಶದುದ್ದಕ್ಕೂ ಭಾಗವಹಿಸಿದ್ದಾರೆ. ಕರ್ನಾಟಕದಾದ್ಯಂತ ರಂಗಗೀತೆ, ರಂಗ ಶಿಬಿರಗಳಲ್ಲಿ ಶಿಬಿರಾರ್ಥಿಗಳಿಗೆ ತರಬೇತಿ ನೀಡುವುದರಲ್ಲಿ ಅವರು ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ಅವರ ಕನ್ನಡಪರ ಕಾರ್ಯಚಟುವಟಿಕೆಗಳನ್ನು ಹಾಗೂ ಕನ್ನಡ ರಂಗಭೂಮಿಗೆ ಮಾಡುತ್ತಿರುವ ಸೇವೆಯನ್ನು ಗುರುತಿಸಿ, ಅವರಿಗೆ, ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಗಿದೆ. ಮಧ್ಯಪ್ರದೇಶದವರಾದ, ಕಲ್ಪನಾರವರ ಮನೆಮಾತು ಹಿಂದಿ.

                                               

ಮಾಲ್ಗುಡಿ

ಮಾಲ್ಗುಡಿ ದಕ್ಷಿಣ ಭಾರತದ ಒಂದು ಕಾಲ್ಪನಿಕ ಪಟ್ಟಣವಾಗಿದ್ದು, ಇದು ಆರ್.ಕೆ.ನಾರಾಯಣ್ ಅವರ ಕಾದಂಬರಿಗಳು ಹಾಗೂ ಸಣ್ಣ ಕಥೆಗಳಲ್ಲಿ ಕಾಣಲ್ಪಡುತ್ತದೆ. ಅವರ ಮೊದಲ ಕಾದಂಬರಿ ಸ್ವಾಮಿ ಆಂಡ್ ಫ್ರೆಂಡ್ಸ್ ನಿಂದ ಇಡಿದು ಅವರ ಹದಿನೈದು ಕಾದಂಬರಿಗಳಲ್ಲಿ ಈ ಪಟ್ಟಣದ ಉಲ್ಲೇಖಗಳಿವೆ. ನಾರಾಯಣ್ ರವರು ಯಶಸ್ವಿಯಾಗಿ ಮಾಲ್ಗುಡಿಯನ್ನು ಭಾರತದ ಅಣುರೂಪದಂತೆ ಚಿತ್ರಿಸಿದ್ದಾರೆ. ಮ್ಯಾಲ್ಗುಡಿ ಡೇಸ್ ನಲ್ಲಿ ಹೇಳಿದಂತೆ ೧೯ ನೇ ಶತಮಾನದಲ್ಲಿ ಕಾಲ್ಪನಿಕ ಬ್ರಿಟಿಷ್ ಅಧಿಕಾರಿಯಾದ ಸರ್ ಫ್ರೆಡ್ರಿಕ್ ಲಾವ್ಲೆಯವರು ಕೆಲವು ಗ್ರಾಮಗಳನ್ನು ಒಟ್ಟುಗೂಡಿಸಿ ಅಭಿವೃದ್ಧಿಪಡಿಸುವ ಮೂಲಕ ಮ್ಯಾಲ್ಗುಡಿ ರಚಿಸಲ್ಪಟ್ಟಿತು. ಸರ್ ಫ್ರೆಡ್ರಿಕ್ ಲಾಲೆಯವರ ಪಾತ್ರವು ನೈಜತೆಯಲ್ಲಿ ೧೯೦೫ ರಲ್ಲಿ ಮದ್ರಾಸ್ ಗವರ್ನರ್ ಆಗಿದ್ದ ಆರ್ಥರ್ ಲಾವ್ಲೆ ಅವರ ಮೇಲೆ ಆಧಾರಿತವಾಗಿದೆ.

                                               

ಮದನ್ ಕಾರ್ಕಿ

ಮದನ್ ಕಾರ್ಕಿ ವೈರಮುತ್ತು ಓರ್ವ ಭಾರತೀಯ ಗೀತರಚನೆಕಾರ, ಚಿತ್ರಕಥೆಗಾರ, ಸಂಶೋಧನಾ ಸಹಾಯಕ, ಸಾಫ್ಟ್ವೇರ್ ಎಂಜಿನಿಯರ್ ಮತ್ತು ಉದ್ಯಮಿ. ಕ್ವೀನ್ಸ್ಲ್ಯಾಂಡ್ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದ ಕಾರ್ಕಿ ತಮ್ಮ ವೃತ್ತಿಜೀವನವನ್ನು ಗಿಂಡಿಯ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಪ್ರಾರಂಭಿಸಿದರು. ಅವರು ತಮಿಳು ಚಲನಚಿತ್ರೋದ್ಯಮದಲ್ಲಿ ತೊಡಗಿದ ಕೂಡಲೇ, ಗೀತರಚನೆಕಾರ ಮತ್ತು ಸಂಭಾಷಣೆ ಬರಹಗಾರರಾಗಿ ಕೆಲಸ ಮಾಡಿದರು. ಅವರು 2013 ರ ಆರಂಭದಲ್ಲಿ ತಮ್ಮ ಬೋಧನಾ ವೃತ್ತಿಗೆ ರಾಜೀನಾಮೆ ನೀಡಿದರು ಮತ್ತು ಚಲನಚಿತ್ರ ಉದ್ಯಮದಲ್ಲಿ ಪೂರ್ಣ ಸಮಯ ಕೆಲಸ ಮಾಡಲು ಪ್ರಾರಂಭಿಸಿದರು. ಹಾಗೆಯೇ ಶೈಕ್ಷಣಿಕ ಸಂಶೋಧನಾ ಸಂಸ್ಥೆ ಕಾರ್ಕಿ ರಿಸರ್ಚ್ ಫೌಂಡೇಶನ್ ಕಾ ರಿ ಫೊ ಯನ್ನು ಪ್ರಾರಂಭಿಸಿದರು, ಇದು ಪ್ರಾಥಮಿಕವ ...

                                               

ಸಂತು ಸ್ಟ್ರೇಟ್ ಫಾರ್ವರ್ಡ್

ಸಂತು ಸ್ಟ್ರೇಟ್ ಫಾರ್ವರ್ಡ್ ೨೦೧೬ರ ಕನ್ನಡ ಸಿನಿಮಾ. ಇದನ್ನ ನಿರ್ದೇಶಿಸಿದ್ದು ಮಹೇಶ್ ರಾವ್ ಮತ್ತು ನಿರ್ಮಾಣದ ಹೊಣೆ ಕೆ ಮಂಜುರದ್ದು. ಈ ಚಿತ್ರದಲ್ಲಿ ಯಶ್, ರಾಧಿಕಾ ಪಂಡಿತ್ ಮತ್ತು ಶಾಮ್ ಮುಖ್ಯ ಪಾತ್ರದಲ್ಲಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಹಿಂದಿಯಲ್ಲಿ ರಾಂಬೊ ಸ್ಟ್ರೈಟ್ ಫಾರ್ವರ್ಡ್ ಮತ್ತು ತಮಿಳಿನಲ್ಲಿ ಸೂರ್ಯವಂಸಿ ಎಂದು ಕರೆಯಲಾಯಿತು. ಈ ಚಿತ್ರವು ೨೦೧೫ರಲ್ಲಿ ಸಿಲಂಬರಸನ್ ರ ತಮಿಳು ಚಲನಚಿತ್ರ ವಾಲುನಿಂದ ಸ್ಫೂರ್ತಿ ಪಡೆದಿದೆ ಎಂದು ತಯಾರಕರು ಸ್ಪಷ್ಟಪಡಿಸಿದ್ದರು. ನಿರ್ಮಾಪಕ ಮಂಜು ಈ ಮೊದಲು ತಮಿಳು ಚಿತ್ರದ ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದರು.

                                               

ಭೀಮಾಶಂಕರ ದೇವಾಲಯ

ಭೀಮಾಶಂಕರ ದೇವಾಲಯ ವು, ಭಾರತದ ಪೂನಾ ಸಮೀಪದ ಖೇಡ್ ನ ವಾಯವ್ಯ ದಿಕ್ಕಿನಲ್ಲಿ ೫೦ ಕಿಲೋಮೀಟರ್ ದೂರದಲ್ಲಿರುವ ಭೋರ್ ಗಿರಿ ಎಂಬ ಹಳ್ಳಿಯಲ್ಲಿ ಸ್ಥಾಪಿತವಾಗಿದೆ. ಈ ದೇವಾಲಯವು ಸಹ್ಯಾದ್ರಿ ಪರ್ವತಗಳ ಘಟ್ಟ ಪ್ರದೇಶದಲ್ಲಿ ಪೂನಾದಿಂದ ೧೧೦ಕಿಲೋಮೀಟರ್ ಗಳ ದೂರಕ್ಕೆ ನೆಲೆಗೊಂಡಿದೆ. ಭೀಮಾಶಂಕರ ದೇವಾಲಯದ ತಟದಲ್ಲಿ ಭೀಮಾನದಿಯ ಉಗಮವಾಗುತ್ತದೆ. ಇದು ಆಗ್ನೇಯ ದಿಕ್ಕಿನಲ್ಲಿ ಹರಿಯುವುದರ ಜೊತೆಗೆ ರಾಯಚೂರು ಸಮೀಪದ ಕೃಷ್ಣಾ ನದಿಯಲ್ಲಿ ಸಂಗಮವಾಗುತ್ತದೆ. ಮಹಾರಾಷ್ಟ್ರದಲ್ಲಿರುವ ಇತರ ಜ್ಯೋತಿರ್ಲಿಂಗ ದೇವಾಲಯಗಳೆಂದರೆ ಪಾರ್ಲಿ ತ್ರೈಯಂಬಕೇಶ್ವರ್ ಹಾಗು ಗ್ರಿಶ್ಣೆಶ್ವರ್. ಮುಂಬಯಿ ಸಮೀಪದ ಯಾತ್ರಿಗಳು ಭೀಮಾಶಂಕರ ದೇವಾಲಯಕ್ಕೆ ಖಂಡಸ್ ಮೂಲಕ ಕರ್ಜತ್ ನಿಂದ ಪ್ರಯಾಣ ಬೆಳೆಸುತ್ತಾರೆ. ಇಲ್ಲಿ ನೆಲೆಯಾಗಿರುವ ಭೀಮಾಶಂಕರ ವನ್ಯಜೀವಿ ಅಭಯರಣ್ಯವು ಮುಂಬಯಿ ಹಾಗು ಪೂನಾದ ...

                                               

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೮೧–೧೯೯೦

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.

                                               

2017ರ ಕನ್ನಡ ಚಿತ್ರಗಳ ಪಟ್ಟಿ

ANIL C T Huruli channabsappa A list of Kannada language films produced in the Kannada film industry in India in 2017. Films are generally released every Friday or Festival Day In addition films can be released on specific festival days.

ಶಂಕರ್ ನಾಗ್
                                     

ⓘ ಶಂಕರ್ ನಾಗ್

ಶಂಕರ್‌ನಾಗ್ ಕನ್ನಡ ಚಿತ್ರರಂಗದ ರಂಗಭೂಮಿ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಕಿರು ಕಥೆಗಳ ಆಧಾರದ ದೂರದರ್ಶನದ ಮಾಲ್ಗುಡಿ ಡೇಸ್ ನಿರ್ದೇಶನ ಮತ್ತು ನಟಿಸಿದ್ದಾರೆ.ಶಂಕರ್‌ನಾಗ್ ಉದ್ಘಾಟನಾ IFFI ಅತ್ಯುತ್ತಮ ನಟ ಪ್ರಶಸ್ತಿಯನ್ನು ವಿಭಾಗದಲ್ಲಿ ಪಡೆದರು: ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನು ಅವರು 7 ನೆಯ ಅಂತಾರಾಷ್ಟ್ರೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಂದಾನೊಂದು ಕಾಲದಲ್ಲಿ ಚಿತ್ರಕ್ಕಾಗಿ ಪಡೆದರು. ಅವರು ಭಾರತೀಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮರಾಠಿ ಚಿತ್ರ 22 ಜೂನ್ 1897 ರ ಸಹ-ಬರಹಗಾರರು. ಅವರು ನಟ ಅನಂತ ನಾಗ್ ಅವರ ಕಿರಿಯ ಸಹೋದರರಾಗಿದ್ದಾರೆ.

                                     

1. ಜನನ, ವೃತ್ತಿ ಜೀವನ

 • ನವೆಂಬರ್ ೯,೧೯೫೪ ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್‌ನಾಗ್ ಅವರು ಹುಟ್ಟಿದರು.ನಕ್ಷತ್ರ ನಾಮಅವಿನಾಶ.ಹೀಗೆಂದರೆ ವಿನಾಶವಿಲ್ಲದವನು ಎಂದರ್ಥ.ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಶಂಕರ್‌ನಾಗ್ ತನ್ನ ವಿದ್ಯಾಭ್ಯಾಸದ ನಂತರ ಮುಂಬೈಗೆ ತೆರಳಿದರು.
 • ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕರ್ಷಿತರಾದ ಶಂಕರ್‌ನಾಗ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ ಮರಾಠಿ ಚಿತ್ರ ’೨೨ ಜೂನ್ ೧೮೯೭’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿತ್ತು.
 • ಅಣ್ಣನಂತೆ ತಮ್ಮನು ಬ್ಯಾಂಕ್ ನೌಕರನಾದರೂ ಬ್ಯಾಂಕ್ ವೃತ್ತಿಯ ಜೊತೆಯಲ್ಲಿ ಸಂಗೀತ ಅಭಿರುಚಿ ಇದ್ದ ಕಾರಣ ತಬಲ, ಕೊಳಲು, ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸಲು ಕಲಿತರು. ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು. ಗಿರೀಶ್ ಕಾರ್ನಾಡರ ಒಂದಾನೊಂದು ಕಾಲದಲ್ಲಿ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
 • ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ "ಮಾಲ್ಗುಡಿ ಡೇಸ್ ಅಥವಾ ಮಾಲ್ಗುಡಿಯ ದಿನಗಳು" ಮತ್ತು ಸ್ವಾಮಿ ಧಾರವಾಹಿಯನ್ನು ನಿರ್ದೇಶಿಸಿದ್ದಾರೆ. ಇಂದು ಸಹ ಇದುವರೆಗೆ ಎಲ್ಲ ತರಹದ ದೂರದರ್ಶನ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಜನ ಪ್ರಿಯತೆ ಗಳಿಸಿ ಪಂಡಿತರು, ಬುದ್ಧಿ ಜೀವಿಗಳಿಂದಲೂ ಮೆಚ್ಚುಗೆ ಗಳಿಸಿದ ಮಹೋನ್ನತ ಧಾರವಾಹಿ ‘ಮಾಲ್ಗುಡಿ ಡೇಸ್’.
 • ಇದರಲ್ಲಿ "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳು ಇಳಯರಾಜ ಅವರ ಮಧುರ ಸಂಗೀತವನ್ನು ಹೊಂದಿ ಜನಮನ್ನಣೆ ಗಳಿಸಿವೆ. ನಾಟಕಗಳನ್ನು ಮತ್ತು ರಂಗಭೂಮಿಯನ್ನು ಗೌರವಿಸಿ ಶ್ರೀಮಂತಗೊಳಿಸಿದ ಶಂಕರ್ ಅವರು ಗಿರೀಶ ಕಾರ್ನಾಡ ರ "ಅಂಜು ಮಲ್ಲಿಗೆ", "ನೋಡಿ ಸ್ವಾಮಿ ನಾವಿರೋದು ಹೀಗೆ" ಮತ್ತು ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.
 • ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ನಂತರದ ೧೨ ವರ್ಷಗಳಲ್ಲಿ ಕನ್ನಡದ ಸುಮಾರು ೯೨ ಚಿತ್ರಗಳಲ್ಲಿ ನಟಿಸಿದರು.ಶಂಕರ್‌ನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ "ಗೆದ್ದ ಮಗ". ತಮ್ಮ ಸಹೋದರ ಅನಂತ ನಾಗ್ ಅವರೊಡನೆ "ಮಿಂಚಿನ ಓಟ", "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳನ್ನು ನಿರ್ಮಿಸಿದರು.
                                     

2. ದಾಂಪತ್ಯ ನಾಟಕ ಬದುಕು

ಶಂಕರ್‌ನಾಗ್ ಅವರ ಪತ್ನಿ ಅರುಂಧತಿ ನಾಗ್.ಕಲಾವಿದೆಯಾಗಿದ್ದ ಅರುಂಧತಿ ಅವರನ್ನು ಇಷ್ಟ ಪಟ್ಟ ನಂತರ ಮದುವೆಯಾದರು. ಮಗಳು ಕಾವ್ಯ. ಈ ದಂಪತಿಗಳು ‘ಸಂಕೇತ್’ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ‘ಅಂಜುಮಲ್ಲಿಗೆ’, ‘ಬ್ಯಾರಿಸ್ಟರ್’, ‘ಸಂಧ್ಯಾ ಛಾಯ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಟ ಬೊಂಬಾಟ’, ‘ನಾಗಮಂಡಲ’ ಮುಂತಾದ ಸುಂದರ ನಾಟಕಗಳ ನಿರ್ಮಾಣ, ನಿರ್ವಹಣೆಗಳಲ್ಲಿ ಸಕ್ರಿಯ ಪಾತ್ರವಹಿಸಿದರು. ನಾಟಕರಂಗದಲ್ಲಿಯೇ ಪ್ರಾರಂಭದಿಂದ ಒಡನಾಟ ಬೆಳೆಸಿಕೊಂಡಿದ್ದ ಶಂಕರ್‌ನಾಗ್ ದಂಪತಿಗಳು ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ, ನಾಟಕಗಳ ಪ್ರದರ್ಶನ ಸುಗಮವಾಗಿರುವಂತೆ ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂದಿದ್ದರು. ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರ್‌ನಾಗ್ ದುರ್ಮರಣಕ್ಕೀಡಾದರು. ಅವರ ಪತ್ನಿ ಅರುಂಧತಿನಾಗ್ ಆ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆ ತಂದಿದ್ದಾರೆ.ಆ ರಂಗಮಂದಿರಕ್ಕೆ"ರಂಗಶಂಕರ" ಎಂದು ಹೆಸರಿಟ್ಟರು."ರಂಗಶಂಕರ" ಬೆಂಗಳೂರಿನ ಪ್ರಮುಖ ಸ್ಥಳವೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ.

                                     

3. ಆಕಸ್ಮಿಕ ಅವಘಡ

 • ಸೆಪ್ಟೆಂಬರ್ ೩೦, ೧೯೯೦ ರಂದು ದಾವಣಗೆರೆಯ ಹಳ್ಳಿಯೊಂದಾದ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಂದರ್ಭವದು ಧಾರವಾಡದಿಂದ ತೆರಳುತ್ತಿದ್ದ ಶಂಕರ್‌ನಾಗ್ ಅವರು ಕಾರು ಅಪಘಾತದಿಂದ ತಮ್ಮ ಕೊನೆಯುಸಿರೆಳೆದರು. ಶಂಕರ್‌ನಾಗ್ ಪತ್ನಿ ಹಾಗೂ ಓರ್ವ ಮಗಳಾದ ಕಾವ್ಯ ಅವರನ್ನು ಅಗಲಿದರು. ಶಂಕರ್‌ನಾಗ್ ತಮ್ಮ ಪರಿವಾರವನ್ನಷ್ಟೇ ಅಲ್ಲ ಇಡೀ ಚಿತ್ರೋದ್ಯಮವನ್ನು ಅತೀ ಕಡಿಮೆ ಸಮಯದಲ್ಲಿ ತನ್ನತ್ತಾ ವಾಲುವಂತೆ ಮಾಡಿದ್ದ ಏಕೈಕ ವ್ಯಕ್ತಿಯನ್ನು ಕಳೆದುಕೊಂಡ ಕನ್ನಡ ಚಿತ್ರೋದ್ಯಮ ಅನಾಥವಾಯಿತು.
                                     

4. ಪ್ರಶಸ್ತಿ, ಗೌರವ

 • ಸುಮಾರು ೯೪ ಚಿತ್ರಗಳಲ್ಲಿ ಅಭಿನಯಿಸಿದ ಶಂಕರ್‌ನಾಗ್, ನಟನೆ ಮತ್ತು ನಿರ್ದೇಶನ ಎರಡರಲ್ಲೂ ಸೈ ಎನ್ನಿಸಿಕೊಂಡವರು. ಅವರ ಚಿತ್ರಗಳನ್ನು ಪ್ರೇಕ್ಷಕರು ಮತ್ತು ವಿಮರ್ಶಕರು ಇಬ್ಬರೂ ಮೆಚ್ಚಿಕೊಂಡದ್ದು ಶಂಕರರ ಹೆಗ್ಗಳಿಕೆ.
 • ಆಕ್ಸಿಡೆಂಟ್ ೧೯೮೪-೮೫ ರ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಎಂದು ರಾಜ್ಯ ಸರ್ಕಾರವಷ್ಟೇ ಅಲ್ಲದೆ ಪಾನನಿಷೇಧದ ಬಗೆಗಿನ ಉತ್ತಮ ಚಿತ್ರವೆಂದು ಪರಿಗಣಿತವಾಗಿ ರಜತ ಕಮಲ ಮತ್ತು ನಗದು ಬಹುಮಾನವನ್ನು ರಾಷ್ಟ್ರ ಪ್ರಶಸ್ತಿಯಾಗಿ ಪಡೆದರು.
 • ಇವರು ಹಲವಾರು ರಾಜ್ಯಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು ಉದಾಹರಣೆಗೆ ಮಿಂಚಿನ ಓಟ ಮತ್ತು ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರಗಳಿಗೆ ಕ್ರಮವಾಗಿ ದ್ವಿತೀಯ ಅತ್ಯುತ್ತಮ ಚಿತ್ರ ೧೯೭೯-೮೦ರಲ್ಲಿ ಹಾಗೂ ತೃತೀಯ ಅತ್ಯುತ್ತಮ ಚಿತ್ರ ೧೯೮೩-೮೪ರಲ್ಲಿ ಪ್ರಶಸ್ತಿಗಳನ್ನು ರಾಜ್ಯಸರ್ಕಾರದ ವತಿಯಿಂದ ತಮ್ಮದಾಗಿಸಿಕೊಂಡರು.
 • ಕನ್ನಡ ಚಿತ್ರೋದ್ಯಮಕ್ಕೆ ಕಂಪ್ಯೂಟರ್ ಚಾಲಿತ ಶಬ್ದಗ್ರಹಣ ತಂತ್ರಜ್ಞಾನವನ್ನು ಕೊಡುಗೆಯಾಗಿತ್ತ ಸಂಕೇತ್ ಸ್ಟುಡಿಯೋ ಶಂಕರ್‌ನಾಗ್ ಅವರ ಮತ್ತೊಂದು ಕಲಾ ಕೊಡುಗೆಯಾಗಿತ್ತು.

ನಿಗೂಢ ರಹಸ್ಯ ಶಂಕರ್‌ನಾಗ್ ಅಭಿನಯದ ಕೊನೆಯ ಚಿತ್ರ.

                                     

5. ಶಂಕರ್‌ನಾಗ್ ಅವರ ಕನಸುಗಳು

ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಸರ್ಕಾರದ ಮುಂದೆ ಇಟ್ಟಿದ್ದು ನಮ್ಮ ಶಂಕರ್‌ನಾಗ್.ಅಂದಿನ ಜನಪ್ರಿಯ ಮತ್ತು ಅಷ್ಟೇ ಕ್ರಿಯಾಶೀಲ ವ್ಯಕ್ತಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರಿಗೆ ಶಂಕರ್ ಆತ್ಮೀಯ ಗೆಳೆಯ, ಜೊತೆಗೆ ಅಚ್ಚುಮೆಚ್ಚಿನ ವ್ಯಕ್ತಿ.

                                     

6. ಶಂಕರ್‌ನಾಗ್ ಅವರ ನೆನಪು

ಕರಾಟೆ ಕಿಂಗ್ ಶಂಕರ್‌ನಾಗ್ ಅವರ ನೆನಪು ಇಂದಿಗೂ ಕರ್ನಾಟಕದ ಪ್ರತಿ ಕನ್ನಡಿಗರ ಹೃದಯದಲ್ಲಿ ವಿರಾಜಮಾನವಾಗಿದೆ ಕರ್ನಾಟಕ ರಾಜ್ಯ ಆಟೋ ಚಾಲಕರ ಸಂಘದ ನೆಚ್ಚಿನ ಆರಾಧ್ಯ ದೈವ ಪ್ರತಿ ಆಟೋಗಳ ಮೇಲು ಶಂಕರ್‌ನಾಗ್ ಅವರ ಭಾವಚಿತ್ರ ಇರುತ್ತದೆ ಅವರಿಗೆ ಇನ್ನು ಅಭಿಮಾನಿಗಳು ಹೆಚ್ಚುತ್ತಲೇ ಇರುವುದು ಸಂತಸದ ವಿಷಯ ಕರಾಟೆ ಕಿಂಗ್ ಶಂಕರ್‌ನಾಗ್ ಅವರು ಎಂದೆಂದಿಗೂ ಅಮರ ಅಜರಾಮರ

                                     

7. ಕರಾಟೆ ಕಿಂಗ್ ಶಂಕರ್‌ನಾಗ್ ಅವರ ರೇಡಿಯೋ ಸಂದರ್ಶನ

ಕರಾಟೆ ಕಿಂಗ್ ಶಂಕರ್‌ನಾಗ್ ಅವರು ೧೯೮೮ ಜುಲೈ ತಿಂಗಳಲ್ಲಿ ಆಕಾಶವಾಣಿಯಲ್ಲಿ ಕೊಟ್ಟ ಸಂದರ್ಶನ

ತೂರುರುರೂರು ತೂರುತುರೂರು ತು ಅರೆರೆರೆರೆ ಕ್ಷಮ್ಸಿ ನಿಮ್ಕಡೆ ಗಮನ ಹರಿಲಿಲ್ಲ ಅಂದ್ರೆ ನಿಮ್ಮ ರೇಡಿಯೋ ಟ್ರಾನ್ಸಿಸ್ಟ್ರು ಆನ್ ಆಗಿರ್ಬೋದು ಅಂತ ಯೋಚ್ನೇನೆ ಬರ್ಲಿಲ್ಲ ನೋಡಿ ಅದಕ್ಕೆ ನನ್ ಪಾಡಿಗೆ ಲಲಲಲ ಅಂತ ಬೇಸರವಾಗಿ ಹಾಡ್ತಾ ಇದ್ದೆ ತಿರ್ಗ ಕ್ಷಮ್ಸಿ ನಾನು ಇದೆಲ್ಲ ನನ್ ಪರಿಚಯ ಮಾಡ್ಕೊಳ್ದೇನೆ ಮಾತಾಡ್ತಾಯಿದ್ದೀನಿ ಈಗ ನಿಮ್ಮಲ್ ಯಾರಾದ್ರು ಹೇಳ್ವೋದು ಪರಿಚಯದಲ್ಲಿ ಏನಿದೆ ಮಹರಾಯ ಅಂತ ಇದೆ ಇದೆ ಇದೆ ಸಾರ್ ಪರಿಚಯ ಆದ್ರೆ ನಾವು ನೀವು ಪರಸ್ಪರ ಹತ್ರ ಆಗ್ತಿವಿ ಅಂದ್ರೆ ನನ್ ಮಾತ್ ಕೇಳಿದ್ರೆ ನಿಮ್ಗೆ ಅಥವಾ ನಿಮ್ ಮಾತ್ ಕೇಳಿದ್ರೆ ನನಗೆ ಒಂಥರಾ ಅನುಕಂಪ ಪೂರಿತವಾದ ವಾತಾವರಣ ನಿರ್ಮಿತವಾಗುತ್ತೆ ಅದಕ್ಕೆ ಪರಿಚಯ ನನ್ನ ಹೆಸರು ನಾಗರಕಟ್ಟೆ ಶಂಕರ ಉರುಫ್ ಶಂಕರ್‌ನಾಗ್ ಅಂತ ನಮಸ್ಕಾರ ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಬಹಳ ದಿನಗಳಾದ್ಮೇಲೆ ನಿಮ್ಮನ್ನ ಭೇಟಿ ಮಾಡ್ತಾಯಿದ್ದೀನಿ ಆದ್ರೆ ಏನ್ ಮಾಡೋದು ಪ್ರಿಯ ಅಭಿಮಾನಿಗಳೆ ಕೆಲ್ಸ ಕೆಲ್ಸ ಕೆಲ್ಸ ಅಂತ ಊರೂರು ಸುತ್ತೋದೆ ಆಯ್ತು ವಿನಾ ಆಲ್ ಇಂಡಿಯಾ ರೇಡಿಯೋ ಸ್ಟೇಷನ್ ಹತ್ರ ಬರೋಕೆ ಆಗ್ಲಿಲ್ಲ ಅಂತು ಇವತ್ ತಮ್ಮೆಲ್ಲರತ್ರ ಮಾತಾಡೋ ಯೋಗ ಇತ್ತು ಅದಕ್ಕೆ ಹಾಜರಾಗಿದ್ದೀನಿ ಮತ್ತೆ ಇಂಥ ಒಂದು ಸುವರ್ಣವಕಾಶ ದೊರಕಿದ ಮೇಲೆ ಒಂದು ಒಳ್ಳೆ ಹಾಡು ಕೇಳುಸ್ಕೊ ಬೇಕಲ್ವ ಸಿನಿಮಾ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ಅರೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನಾವ್ ಹೀಗಿರೋದಕ್ಕೆ ಕಾರಣ ಒಂದಾನೊಂದು ಕಾಲ ಅಂದ್ರೆ ಗಿರೀಶ್ ಕಾರ್ನಾಡ್ ಅವರ ಚಿತ್ರ ಒಂದಾನೊಂದು ಕಾಲದಲ್ಲಿ ಆ ಒಂದಾನೊಂದು ಕಾಲದಲ್ಲಿ ಅಂದ್ರೆ ಆ ಸಿನಿಮಾದಲ್ಲಿ ಕೆಲ್ಸ ಮಾಡೊ ಅವಕಾಶ ಸಿಗೊ ಮುಂಚೆ ನಾನು ಬಹಳಷ್ಟು ನಾಟಕಗಳಲ್ಲಿ ಕೆಲ್ಸ ಮಾಡ್ತಾಯಿದ್ದೆ ಪಾತ್ರ ನಿರ್ದೇಶನ ಲೈಟಿಂಗು ಬ್ಯಾಕ್ ಸ್ಟೇಜು ಎಲ್ಲಾ ಬ್ಯಾಂಕಲ್ಲಿ ನೌಕ್ರಿನು ಮಾಡ್ತಾಯಿದ್ದೆ ಮ್ಯಾನೇಜರ್ ಅಲ್ಲ ಅಕೌಂಟೆಂಟ್ ಅಲ್ಲ ಓಸಿಯಾಗಿ ಓಸಿ ರಿ ಓಸಿ ಅಂದ್ರೆ ಗೊತ್ತಿಲ್ವ ನಿಮ್ಗೆ ಆರ್ಡಿನರಿ ಕ್ಲರ್ಕ್ ಆ ಒಂದಾನೊಂದು ಕಾಲದಲ್ಲಿ ಸಾಯಂಕಾಲ ಬ್ಯಾಂಕ್ ನೌಕ್ರಿ ಮುಗ್ಸಿ ಒಂದು ನಾಟ್ಕದ ರಿಹರ್ಸಲ್ ಮಾಡ್ತಿರೊವಾಗ ಗಿರೀಶ್ ಕಾರ್ನಾಡ್ ಅವ್ರು ಬಂದ್ರು ನೋಡುದ್ರು ಮತ್ ಕೇಳುದ್ರು ಸಿನಿಮಾದಲ್ಲಿ ಪಾರ್ಟ್ ಮಾಡ್ತಿಯೇನೋ ಹುಡುಗ ಅಂತ ಸಿನಿಮಾ ಅಂದ್ರೆ ಸ್ವಲ್ಪ ಭಯ ಹೆದ್ರಿಕೆ ಇದ್ದೆ ಇತ್ತು ಆದ್ರು ಧೈರ್ಯ ಮಾಡಿ ಓ ಸಿನಿಮಾ ತಾನೆ ಅದ್ರಲ್ ಏನಂತೆ ಮಾಡಣ ಸಾರ್ ಅಂದೆ ಚಿತ್ರೀಕರಣ ಪ್ರಾರಂಭವಾಯಿತು ದಾಂಡೇಲಿಯ ಗಾಢವಾದ ಸುಂದರವಾದ ಅರಣ್ಯದಲ್ಲಿ ಅದೆ ಒಂದಾನೊಂದು ಕಾಲದ ಚಿತ್ರದ ಈ ಹಾಡು ಒಂದಾನೊಂದು ಕಾಲದಾಗ ಒಂದಾನೊಂದು ಕಾಲದಲ್ಲಿ ಚಿತ್ರೀಕರಣ ಮುಗಿತು ಡಬ್ಬಿಂಗು ಆಯ್ತು ಫಸ್ಟ್ ಪ್ರಿಂಟು ಆಚೆ ಬಂತು ಸುತ್ ಮುತ್ ಇರೊ ಸ್ವಲ್ಪ್ ಜನಗಳು ಅಂದ್ರೆ ಪ್ರಿವ್ಯೂ ನೋಡ್ದೋರು ಪರ್ವಾಗಿಲ್ವೆ ಹುಡ್ಗ ಸುಮಾರಾಗ್ ಅಭಿನಯ ಮಾಡ್ತಾನೆ ಅಂದ್ರು ಈ ಮಾತ್ ಕೇಳಿದ್ದೆ ಕ್ಷಣ ನನ್ನ ಈ ಹುಬ್ಬು ತಲೆಕೂದ್ಲಿಗೆ ಎಗ್ರಿ ಸಿಕ್ಕಾಕೊಬಿಡ್ತು ಇನ್ ಶಾರ್ಟ್ ಸಿನಿಮಾ ಆ್ಯಕ್ಟರ್ ಆಗ್ತಿನಿ ಅಂತ ನಾನು ಕನ್ಸಲ್ಲು ನೆನ್ಕೊಂಡಿರ್ಲಿಲ್ಲ ರಜತ ಪರದೆ ಮೇಲೆ ಮೊದಲ್ನೆ ಸಲ ನನ್ನನ್ನೆ ನಾನು ನೋಡ್ದಾಗ ಒಂತರಾ ಅನ್ನುಸ್ತು ಅಲ್ಲ ಇದ್ಯಾಕ್ ನನ್ ಮೊಗ ಹೀಗ್ ಕಾಣಿಸ್ತಾ ಇದೆ ಅದ್ಯಾಕೆ ನಡೆಯೊವಾಗ ನನ್ ಕೈ ವಂಕ್ ಪಂಕ್ ಆಗಿ ಎಲ್ಲೆಲ್ಲೋ ಹೋಗುತ್ತೆ ಎಕ್ಸೆಟ್ರಾ ಎಕ್ಸೆಟ್ರಾ ಇಂಥ ಯೋಚ್ನೆ ಇರೋವಾಗ ಅಬ್ಬಯ್ಯನಾಯ್ಡು ಅವ್ರ್ ಕಣ್ಣು ನನ್ಮೇಲೆ ಬಿತ್ತು ಮತ್ತೆ ಸೀತಾರಾಮು ಈ ಚಿತ್ರದಲ್ಲಿ ಅಭಿನಯ ಮಾಡೋಕೆ ಅವ್ರ್ ದೊಡ್ ಮನಸ್ ಮಾಡಿ ನನ್ಗೊಂದು ಅವಕಾಶ ಕೊಟ್ರು ಮೊದಲ್ನೆ ದಿನ ಚಿತ್ರೀಕರಣಕ್ ಹೋದ್ರೆ ನನ್ ಹೃದಯ ಅಲ್ಲೇ ನಿಂತ್ ಬಿಡ್ತು ಯಾಕಂದ್ರೆ ಮೊದಲ್ನೆ ದಿನವೇ ಈ ಹಾಡಿನ ಚಿತ್ರೀಕರಣ ಇತ್ತು ಒಂದೇ ಒಂದು ಆಸೆಯು ತೋಳಲಿ ಬಳಸಲು ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು ನಿನ್ನ ಮುದ್ದಾಡಲು ಒಂದೇ ಒಂದು ಆಸೆಯು ತೋಳಲಿ ಬಳಸಲು ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು ನಿನ್ನ ಮುದ್ದಾಡಲು ಈ ಹಾಡಿನ ಚಿತ್ರೀಕರಣ ಮುಗಿಯೊಷ್ಟರಲ್ಲಿ ನಿಂತೋಗಿರು ನನ್ನ ಹೃದಯ ಆಚೆನೇ ಬಂದ್ಬಿಡ್ತು ಅಂದ್ರೆ ಅತಿಶೋಯೊಕ್ತಿ ಆಗಲಾರದು ಯಾಕೆಂದ್ರೆ ಚಿತ್ರೀಕರಣ ಮುಂಚೆ ನಾನ್ ಎಲ್ಲೂ ಸ್ಕ್ರೀನ್ ಮೇಲೆ ಹಾಡಿರ್ಲಿಲ್ಲ ಡ್ಯಾನ್ಸ್ ಅಂದ್ರೆ ಏನು ಅಂತ ಅದಕ್ ಮುಂಚೆನೆ ಗೊತ್ತಿರ್ಲಿಲ್ಲ ಡೈರೆಕ್ಟರ್ ಸೋಮಶೇಖರ್ ಅವ್ರು ಡ್ಯಾನ್ಸ್ ಮಾಸ್ಟರ್ ಉಡುಪಿ ಜಯರಾಂ ಅವ್ರು ಆ್ಯಕ್ಷನ್ ಅಂದ್ರು ಧಿಗಿತ ಧಿಗಿತ ಸ್ಟೆಪ್ ಹಾಕು ಅಂದ್ರು ನಾನ್ ಪ್ರಯತ್ನ ಮಾಡ್ದೆ ರಿ ಪ್ರಯತ್ನ ಮಾಡ್ದೆ ಆದ್ರೆ ಕೈ ಬರ್ಬೆಕಾಗ್ ಜಾಗ್ ದಲ್ಲಿ ಧೀ ಬರ್ತಾಯಿತ್ತು ಕಾಲ್ ಸರಿ ಬಿದ್ರೆ ಕೈ ಎಲ್ಲೆಲ್ಲೋ ಹೋಗ್ತಾ ಇತ್ತು ಕೊನೆಗ್ ಸುಸ್ತಾಗಿ ಒಂದ್ ಮೂಲೆಲ್ ಹೋಗಿ ಸಿಗರೆಟ್ ಸೇದ್ತಾ ಕುತ್ಕೊಬಿಟ್ಟೆ ಆಗ ಆ ಚಿತ್ರದ ನಾಯಕಿ ಮಂಜುಳಾ ಬಂದ್ರು ಧೈರ್ಯ ಕೊಟ್ರು ಮೊದಲ್ನೆ ಸಲ ಹಾಗ್ ಆಗುತ್ತೆ ಬಿಡಿ ನನ್ ಜೊತೆ ಎಲ್ಲ ಸ್ಟೆಪ್ ಒಂದ್ ಸಲ ಹಾಕ್ ನೋಡಿ ಎಲ್ಲಾ ಸರಿಹೋಗುತ್ತೆ ಬನ್ನಿ ಅಂದ್ರು ಅವರ ಆ ಪ್ರೋತ್ಸಾಹ ಆ ಸಹಾಯ ನಾನೆಂದು ಮರೆಯೊ ಹಾಗಿಲ್ಲ ಆ ಚಿತ್ರ ಬಿಡುಗಡೆ ಆದ ನಂತರ ಮಂಜುಳಾ ಅವ್ರ್ ಜೊತೆಲಿ ಎಷ್ಟೋ ಚಿತ್ರಗಳಲ್ಲಿ ಅಭಿನಯಿಸೊ ಅವಕಾಶ ನನಗ್ ಸಿಕ್ತು ಆದ್ರೆ ಇವತ್ ದುಃಖ ಒಂದೇ ಈಗ್ ಒಳ್ಳೆ ಕಾಲ ಜೊತೆಯಲ್ ಕಳೆಯೋಣ ಅಂದ್ರೆ ಮಂಜುಳಾ ಅವ್ರು ನಮ್ಮ ಜೊತೆಲಿ ಇಲ್ಲ ದಿವಂಗತ ಮಂಜುಳಾ ಅವ್ರ ನೆನಪಿನಲ್ಲಿ ಈ ಹಾಡು ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ ಕೆಲವು ಸಲ ಮಂಜುಳಾ ಅಂಥ ಒಳ್ಳೆ ನಟಿ ಇವತ್ತು ಇಲ್ಲ ಅಂತ ನಂಬೋಕೆ ಆಗಲ್ಲ ಆದ್ರೆ ಜೀವನ ಇರೋದೆ ಹೀಗೆ ಅನ್ಸುತ್ತೆ ಈ ಜೀವನ ಅನ್ನೋದು ನೂರಾರು ಬಣ್ಣಗಳು ಕೂಡಿ ಎಷ್ಟು ವಿಶಾಲ ಅನ್ಸುತ್ತೆ ಅಷ್ಟೇ ಸಂಕುಚಿತ ಆಗ್ಬಿಡುತ್ತೆ ಒಮ್ಮೆ ತಂಪಾಗಿ ಉದ್ದವಾಗಿ ಕಾಣ್ಸೊ ಮೆತ್ತನೆ ಹಾಸಿಗೆ ಕ್ಷಣಗಳಲ್ಲಿ ಸುರುಳಿಯಾಗಿ ಗತಕಾಲಕ್ಕೆ ಹೋಗ್ ಕೂತ್ಬಿಡುತ್ತೆ ಹೊಸ ರೂಪ ಹೊಸ ಚೈತನ್ಯ ತಂದ್ ಕೊಟ್ಟ ಅನುಭವಗಳು ಕೇವಲ ಒಂದ್ ಸುರುಳಿ ಅಗೋಯ್ತಲ್ಲ ಅಂತ ದುಃಖನು ಆಗುತ್ತೆ ಆದ್ರೆ ಜೀವನ ಮಾತ್ರ ನಡ್ದೆ ನಡಿಯುತ್ತೆ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ದೂರ ದೇಶಕ್ಕೆ ಹೋಗೊ ಅವಕಾಶ ಒಂದು ಮುತ್ತಿನ ಕಥೆ ಈ ಚಿತ್ರದಿಂದ ದೊರೆಕ್ತು ಎರಡು ಕಾರಣಗಳಿಂದ ಸಮುದ್ರದ ಆಳಕ್ಕೆ ಹೋಗಿ ಅಂದ್ರೆ ಅಂಡರ್ ವಾಟರ್ ಹೋಗಿ ಚಿತ್ರೀಕರಣ ಮಾಡ್ಬೆಕಾಗಿತ್ತು ಎರಡ್ನೆದು ನೀರಲ್ಲಿ ಆಕ್ಸಿಜನ್ ಮಾಸ್ಕು ಅಥವಾ ಯಾವ್ ಸಹಾಯ ಇಲ್ಲದೆ ಚಿತ್ರೀಕರಣ ಮಾಡ್ಬೆಕಾಗಿತ್ತು ಸ್ವಲ್ಪ ಕಷ್ಟಾನೆ ಆಯ್ತು ಕೊನೆಗೂ ಕೆನಡಾ ಹೋಗಿ ಕ್ಯಾಮರಾ ತಂದು ಲಂಡನಿಗೆ ಹೋಗಿ ಒಂದು ಆಕ್ಟೋಪಸ್ ಮಾಡ್ಸಿ ಮಾಲ್ಡೀವ್ಸ್ ಗೆ ಹೋಗಿ ಜರ್ಮನ್ ಕ್ಯಾಮರಾ ಮ್ಯಾನ್ ಇಟ್ಕೊಂಡು ಅಂಡರ್ ವಾಟರ್ ಶೂಟಿಂಗ್ ಮಾಡಿದ್ವಿ ಹಾಡು ಮುತ್ತೊಂದ ತಂದೆ ಕಡಲಾಳದಿಂದ ಅದೆ ಅಂದ ಇಲ್ಲಿ ಕಂಡೆ ನೀನಿಲ್ಲಿ ಕಂಡ ಈ ಹಾಡಿನ ರೆಕಾರ್ಡಿಂಗು ಬೆಂಗಳೂರಿನ ನಮ್ ಸ್ಟುಡಿಯೋಲೆ ಆಯ್ತು ಅದಕ್ ಮುಂಚೆ ನಾವು ಸಿನಿಮಾ ಹಾಡುಗಳು ಅಥವಾ ಬ್ಯಾಗ್ರೌಂಡ್ ಮ್ಯೂಸಿಕ್ ರೆಕಾರ್ಡ್ ಮಾಡ್ಬೇಕು ಅಂದ್ರೆ ಮದ್ರಾಸು ಅಥವಾ ಬಾಂಬೆಗೆ ಹೋಗಿ ಮಾಡ್ಬೇಕಾಗಿತ್ತು ಯಾಕಂದ್ರೆ ಆ ರೆಕಾರ್ಡಿಂಗ್ ಸೌಲಭ್ಯಗಳು ನಮ್ಮ ಕರ್ನಾಟಕದಲ್ಲಿ ಇರ್ಲಿಲ್ಲ ಅಂತ ಅದಕ್ಕೆ ಪ್ರತಿ ಸಲ ಮದ್ರಾಸು ಅಥವಾ ಬಾಂಬೆಗೆ ಹೋಗಿ ತಿಂಗ್ಳಾಂಗಟ್ಲೆ ಲೈನಲ್ ನಿಂತ್ಕೊಂಡು ನಮಸ್ಕಾರ ಸಾರ್ ನಮಸ್ಕಾರ ಸಾರ್ ಅಂತ ಮಸ್ಕ ಹೊಡ್ದು ರೆಕಾರ್ಡಿಂಗ್ ಮಾಡ್ಬೆಕಾಗಿತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಈ ಸ್ಥಿತಿ ನೋಡಿ ಅಯ್ಯೊ ಅನ್ನುಸ್ತು ಅಂದ್ರೆ ಸಿನಿಮಾ ತೆಗೆಯೋದು ಕನ್ನಡ್ದಲ್ಲಿ ನೋಡೊ ಪ್ರೇಕ್ಷಕರು ಕನ್ನಡಿಗರು ಮತ್ತೆ ಸಂಗೀತ ರೆಕಾರ್ಡ್ ಮಾಡೋದು ಮಾತ್ರ ಮದ್ರಾಸ್ನಲ್ಲಿ ಅಂತ ಬಹಳ ಯೋಚ್ನೆ ಆಗ್ಬಿಟಿತ್ತು ಆಗ ಸಿ.ವಿ.ಎಲ್ ಶಾಸ್ತ್ರಿ, ಅನಂತ್ ನಾಗ್, ರಮೇಶ್ ಭಟ್, ಸೂರ್ಯ ರಾವ್ ಅಂತ ಸ್ನೇಹಿತರ ಹತ್ರ ಆರ್ಥಿಕ ಸಹಾಯ ಕೇಳ್ಕೊಂಡು ಬೆಂಗಳೂರಿನ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಅವರ ಬೆಂಬಲದಿಂದ ಈ ರೆಕಾರ್ಡಿಂಗ್ ಸ್ಟುಡಿಯೋ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರಿಂದ ಉದ್ಘಾಟನೆ ಆಯ್ತು ಕರ್ನಾಟಕದಲ್ಲೂ ಸಿನಿಮಾ ಸಂಗೀತ ಕೂಡ ಬಾರ್ಸೊ ಒಳ್ಳೊಳ್ಳೆ ಕಲಾವಿದರು ಮ್ಯೂಸಿಷಿಯನ್ ಇದ್ದಾರೆ ನಮ್ಮಲ್ಲೂ ಎಲ್ಲಾ ಸೌಲಭ್ಯಗಳಿವೆ ಅನ್ನೊ ಸಂಕೇತವೆ ಈ ಸ್ಟುಡಿಯೋ ಇದೇ ಸ್ಟುಡಿಯೋನಲ್ಲಿ ರೆಕಾರ್ಡ್ ಆಗಿರೋ ಇನ್ನೊಂದ್ ಹಾಡು ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ ಸ್ನೇಹಿತರೆ ಇಂಥ ಸಂದರ್ಭಗಳಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಜ್ಞಾಪಕಕ್ ಬರ್ತಾರೆ ಅತ್ಯಂತ ಪ್ರತಿಭಾಶಾಲಿ ಜೀನಿಯಸ್ ಅಂತ ಕರಿತೀವಲ್ಲ ಅಂಥ ಒಂದು ವ್ಯಕ್ತಿ ಅವ್ರ್ ಸಂಗೀತ ಜಗತ್ತೆ ಬೇರೆ ಆ ಠೇಕಾನೆ ಬೇರೆ ಆ ಲಹರಿನೆ ಬೇರೆ ಅವ್ರ್ ಜೊತೆಲಿ ಮ್ಯೂಸಿಕ್ ಕಂಪೋಸಿಗೆ ಕೂತ್ಕೊಂಡ್ರೆ ಸಮಯ ಹ್ಯಾಗ್ ಕಳಿಯುತ್ತೆ ಅಂತ ಲೆಕ್ಕಾನೆ ಇರೋದಿಲ್ಲ ಯಾವ್ದಾದ್ರು ಒಂದು ಸನ್ನಿವೇಶಕ್ಕೆ ಒಂದು ಟ್ಯೂನು ಕೇಳಿದ್ರೆ ಎಂಟೊಂಭತ್ತು ಟ್ಯೂನು ಚಿಟಿಕೆ ಹೊಡಿಯೊಷ್ಟ್ರಲ್ಲಿ ರೆಡಿ ಮಾಡ್ಬಿಡ್ತಾರೆ ಒಂದಕ್ಕಿಂತ ಒಂದು ಟ್ಯೂನು ಅಂದವಾಗಿ ಇರುತ್ತೆ ಸೊಗಸಾಗಿರುತ್ತೆ ಒಂದು ಸಣ್ಣ ಉದಾಹರಣ ಅಂದ್ರೆ ಗೀತಾ ಚಿತ್ರದ ಈ ಹಾಡು ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು ಹೊಸ ಹರುಷವ ತರುವೆನು ಇನ್ನು ಎಂದು ಓಓ ಎಂಥ ಮಾತಾಡಿದೆ ಹೌದು ಜೊತೆಯಲ್ಲೇ ಇರೋಣ ಅಭಿಮಾನಿಗಳೇ ಯಾವಾಗ್ಲೂ ಹೀಗೆ ಜೊತೆಯಲ್ಲೇ ಇರೋಣ ಆದ್ರೆ ಇದಕ್ಕೆ ನಿಮ್ಮ ಸಹಕಾರ ಸಹಯೋಗ ಅತ್ಯಗತ್ಯ ಅಂದ್ರೆ ನನ್ ಸಿನಿಮಾ ಬಿಡುಗಡೆ ಆದ್ಮೇಲೆ ದಯವಿಟ್ಟು ನನ್ಗೊಂದು ಸಣ್ಣ ಪತ್ರ ಬರಿರಿ ಅಂದ್ರೆ ಸುಮ್ನೆ ಉಪಚಾರಕ್ ಅಲ್ಲ ಏನಿಷ್ಟ ಆಯ್ತುಕಿನ್ನ ಏನಿಷ್ಟ ಆಗ್ಲಿಲ್ಲ ಅಂತ ಒತ್ತಿ ಒತ್ತಿ ಬರಿರಿ ನನ್ನನ್ನ ದಯವಿಟ್ಟು ತಿದ್ದುಪಡಿಸಿ ಈ ಕಾರ್ಯಕ್ರಮ ಕೇಳಿದ್ ನಂತರವೂ ಏನನ್ನಿಸ್ತು ಅಂತ ಎರಡ್ ಲೈನ್ ಬರಿರಿ ನಾನು ಋಣಿ ಆಗಿರ್ತಿನಿ ಮತ್ತೆ ೨೮ ಕ್ರೆಸೆಂಟ್ ರಸ್ತೆ ಬೆಂಗಳೂರು ೧ ದಯವಿಟ್ಟು ಬರಿರಿ ಅಥವಾ ಬನ್ನಿ ನನ್ನ ಬಾಗಿಲು ಸದಾ ತೆರೆದೆ ಇರುತ್ತೆ ತೆರೆದಿದೆ ಮನೆ ಓ ಬಾ ಅತಿಥಿ ಏನಪ್ಪ ಶಂಕರನಾಗ ಅವಾಗ್ಲಿಂದ ಯಾವ್ದೋ ಓಬಿರಾಯನ ಕಾಲದ ಹಳೆ ರೆಕಾರ್ಡೆ ಬಾರಿಸ್ತಾ ಇದಿಯಲ್ಲ ಅಂತ ನನ್ನ ತರುಣ ಸ್ನೇಹಿತರು ಹೇಳ್ವೋದು ಅದಕ್ಕೆ ನನ್ನ ಪುಟಾಣಿ ಸ್ನೇಹಿತನಾದ ರಾಷ್ಟ್ರಪ್ರಶಸ್ತಿ ಪಡೆದ ಮಾಸ್ಟರ್ ಮಂಜುನಾಥ್ ಮಂಜು ನೀವೆಲ್ಲರೂ ನಗ್ಸಿದ ಸ್ವಾಮಿ ಹಾಡಿರೋ ಈ ಹಾಡು ಏನ್ ಹುಡ್ಗಿರೋ ಇದ್ಯಾಂಕಿಗ್ ಆಡ್ತಿರೋ ಲವ್ವು ಲವ್ವು ಲವ್ವು ಅಂತ ಕಣ್ಣಿರಿಡ್ತಿರೊ ಅಯ್ಯಯ್ಯೊ ಕಾರ್ಯಕ್ರಮ ಮುಗಿಯೊ ಸಮಯ ಹತ್ರ ಬರ್ತಾಯಿದೆ ಅಲ್ಲ ಸಮಯ ಇಷ್ಟ್ ಬೇಗ ಕಳ್ದೋಯ್ತಲ್ಲ ಅಂತ ದುಃಖನು ಆಗ್ತಾ ಇದೆ ಆದ್ರೆ ಏನ್ ಮಾಡೋದ್ ಹೇಳಿ ಆಲ್ ಗುಡ್ ಥಿಂಕ್ ಮಸ್ಟ್ ಕಮ್ ಟು ಅಂತ ಏನೊ ಹೇಳ್ತಾರಲ್ಲ ಹಾಗೆ ಸ್ನೇಹಿತರೆ ಈ ಕಾರ್ಯಕ್ರಮ ನಿಮ್ಗೆಲ್ರಿಗೂ ಇಷ್ಟ ಆಗಿದೆ ನಿಮ್ ಸಹಕಾರ ಬೆಂಬಲ ನನ್ಮೇಲೆ ಸದಾ ಇರುತ್ತೆ ಅಂತ ನಾನು ನಂಬ್ಕೊಂಡಿದೀನಿ ಅಂದ್ರೆ ನಾನು ಹೇಗೆ ಇದ್ರು ಅಂದ್ರೆ ಕೋಪ ತಾಪ ಪ್ರೇಮ ಹೀಗೂ ಎಲ್ಲಾ ಇದೆ ನನ್ನಲ್ಲಿ ಆದ್ರೆ ದಯವಿಟ್ಟು ನನ್ನನ್ನ ಸ್ವೀಕರಿಸಿ ದಯವಿಟ್ಟು ಸ್ವೀಕರಿಸಿ ಯಾಕಂದ್ರೆ ಬೇರೆ ದಾರಿನೆ ಇಲ್ಲ ನಮಸ್ಕಾರ ಬರ್ತಿನಿ ಹಾಹಾಹಾ ಆದ್ರೆ ಬರೋಕ್ಕಿಂತ ಮುಂಚೆ ಒಂದು ಕೊನೆಯ ಪ್ರೀತಿಯ ಹಾಡು ಆಕಾಶದಿಂದ ಜಾರಿ ಭೂಮಿಗೆ ಬಂದ

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →