Back

ⓘ ಶರಣ ಸಂಸ್ಕೃತಿ. ಹನ್ನೆರಡನೇ ಶತಮಾನ ರಾಜಕೀಯ, ಮತಧರ್ಮ, ಭಾಷೆ, ಸಾಹಿತ್ಯ, ಸಾಮಾಜಿಕ ಬದಲಾವಣೆಗಳಿಂದಾಗಿ ವಿಶೇಷ ಮಹತ್ವ ಪಡೆದಿದೆ. ಶರಣ್ಯಭಾವದಿಂದ ಶಿವನನ್ನು ಆರಾಧಿಸಿ ಕೊನೆಯಲ್ಲಿ ಶಿವನೇ ಆಗುವ ಭಕ್ ..                                               

ಶರಣ ಸೋಮನಾಳ

ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್ ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್. ಬೆಸಿಗೆ-ಚಳಿಗಾಲ ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿ ವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ. ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ ಜೂನ, ೧೯.೬ ಕಿಮಿ/ಗಂ ಜುಲೈಹಾಗೂ ೧೭.೫ ಕಿಮಿ/ಗಂ ಅಗಸ್ಟ್ ಇರುತ್ತದೆ. ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ. ಚಳಿಗಾಲ ಮತ್ತು

                                               

ದೇವರ ದಾಸಿಮಯ್ಯ

ಆದ್ಯ ವಚನಕಾರ ವಚನ ಬ್ರಹ್ಮ ದೇವರ ದಾಸಿಮಯ್ಯನವರು. ನಮ್ಮದು ಭರತ ಭೂಮಿ. ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ರಾಷ್ಟ್ರ! ಪ್ರಪಂಚದಲ್ಲಿ ಮಿಕ್ಕ ದೇಶಗಳು ಭೌತಿಕವಾಗಿ ಸಮೃದ್ಧವಾಗಿರಬಹುದು, ಆದರೆ ಭೌತಿಕವಾಗಿ ಮಾತ್ರವಲ್ಲದೆ ಆಧ್ಯಾತ್ಮಕವಾಗಿಯೂ ಅತ್ಯಂತ ಸಮುದ್ಧವಾದ ದೇಶ ಭಾರತ. ಆದಿ ಕಾಲದಿಂದಲೂ ಅನೇಕ ಋಷಿ-ಮುನಿಗಳು ತಮ್ಮ ಅಮೋಘ ತಪಸ್ಸಿ ನಿಂದ ಸಿದ್ಧಿಯನ್ನು ಪಡೆದು ಆಧ್ಯಾತ್ಮಿಕತೆಯ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಪುಣ್ಯ ಭೂಮಿಯಿದು.ಅಂತಹ ಸಾಧುಗಳಲ್ಲೊಬ್ಬರು ಶ್ರೀ ದೇವರ ದಾಸಿಮಯ್ಯ. ಈ ಪುಣ್ಯ ಪುರುಷನ ಬಗ್ಗೆ ಹಲವರಿಗೆ ಪರಿಚಯವಿಲ್ಲ. ಇವರು ಕೇವಲ ಒಬ್ಬ ಮುನಿ ಮಾತ್ರವಲ್ಲದೆ, 10 /11 ನೇ ಶತಮಾನದಲ್ಲಿದ್ದ ಮೊಟ್ಟಮೊದಲ ವಚನಕಾರರೂ ಹೌದು. ಹಾಗಾಗಿ ಈ ಮಹರ್ಷಿಯ ಒಂದು ಕಿರುಪರಿಚಯ. ದೇವರ ದಾಸಿಮಯ್ಯ ದೇವಲ ಮಹರ್ಷಿ ಸರಿ ಸುಮಾರು 10ನೇ ಶತಮಾನದವರು ...

                                               

ಕೆರೂಟಗಿ

ಹನ್ನೆರಡನೇಯ ಶತಮಾನದಲ್ಲಿ ನಡೆದ ಶರಣರ ಕಾಯಕ ಚಳುವಳಿಯ ಮುಂದುವರಿದ ಭಾಗವಾಗಿ ಮತ್ತು ಪಕ್ಕದ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರ ಮೂಲದಲ್ಲಿ ಸೊನ್ನಲಿಗಿ ಪಟ್ಟಣದ ಶರಣ ಸಿದ್ದರಾಮ ಶಿವಯೋಗಿಯ ಹೆಸರಿನ ಸಿದ್ದರಾಮೇಶ್ವರ ಮಠವನ್ನು ಕಳೆದೆರಡು ಶತಮಾನಗಳ ಆರಂಭದಲ್ಲಿ ಸ್ಥಾಪಿಸಲಾಗಿದ್ದು, ಈ ಮೊದಲು ಆಗಿ ಹೋದ ಮಠದ ಪೀಠಾಧಿಪತಿಗಳಾಗಿದ್ದ ಗುರುಲಿಂಗೇಶ್ವರರ ಪವಾಡಗಳಿಂದ ಪ್ರಸಿದ್ಧವಾಗಿದ್ದ ಮಠವು ಮುಂದೆ ಬಂದಂತಹ ಪೀಠಾಧಿಪತಿಗಳಿಂದ ಇಳಿಮುಖ ಕಂಡರೂ ಇಂದಿಗೂ ಜನರಲ್ಲಿಯ ಭಕ್ತಿಯ ಭಾವನೆ ಕಮ್ಮಿಯೇನೂ ಆಗಿಲ್ಲ. ಅದರೊಂದಿಗೆ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ದುರ್ಗಾಮರಗಮ್ಮದೇವಿ ದೇವಾಲಯ, ಶ್ರೀರಾಮಲಿಂಗೇಶ್ವರ ದೇವಾಲಯ, ಶ್ರೀ ಮಲ್ಲಿಕಾರ್ಜುನ ದೇವಾಲಯ, ಶ್ರೀ ಬಸವೇಶ್ವರ ದೇವಾಲಯ ಹಾಗೂ ಶ್ರೀ ಹಣಮಂತ ದೇವಾಲಯ ಮುಂತಾದವುಗಳನ್ನು ಆಯಾ ಕಾಲಮಾನಗಳಲ ...

                                               

ಉಪ್ಪಲದಿನ್ನಿ

ಹನ್ನೆರಡನೆಯ ಶತಮಾನ ಜ್ಞಾನದಬೆಳಕು ಮೂಡಿಸಿದ ಪರ್ವಕಾಲ‌. ಇತಿಹಾಸದಲ್ಲಿ ಎಂದೆಂದು ಮೆರೆಯುವ ಶತಮಾನವದು. ಕಲ್ಯಾಣ ಶರಣರಿಗೆ ಗುರು ಜಂಗಮ ಮೂರ್ತಿಯಾದ ಸಂಗಮೇಶ್ವರ ಉಪ್ಪಲಗಿರಿಯನ್ನು ನಡುನಾಡ ಶ್ರೀಶೈಲ ವನ್ನಾಗಿ ಪರಿವರ್ತಿಸಿದರು. ಬೀದರ ಜಿಲ್ಲೆ ಬಸವಕಲ್ಯಾಣದ ಶಿವಪುರದಲ್ಲಿ ಜನಿಸಿದ ಸಂಗಮೇಶ್ವರ ಚಿಕ್ಕಂದಿನಿಂದ ಪುರಾಣಹಳೆಂದರೆ ಅಪಾರ ಶೃದ್ಧೆ ಆಸಕ್ತಿ. ಪುರಾಣಗಳಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ಮಹಿಮೆ ಆಲಿಸಿ ತಾನು ಶ್ರೀಶೈಲಕ್ಕೆ ತೆರಳಬೇಕೆಂದು ಹಠಹಿಡಿದು ಕೊನೆಗೆ ಮಲ್ಲಿನಾಥನ ದರ್ಶನ ಪಡೆದರು. ಕಲ್ಯಾಣ ದಲ್ಲಿ ಶರಣರಿಗೆ ಗುರುಲಿಂಗಜಂಗಮ ಮೂರ್ತಿಯಾಗಿ.‌ ಮಾರ್ಗದರ್ಶನ ನೀಡುತ್ತ ಅಂಧ ಶೃದ್ಧೆ, ಮೂಡನಂಬಿಕೆ, ಮೇಲುಕೀಳು ಹಾಗೂ ಅನಿಷ್ಠ ಪದ್ಧತಿಗಳ ವಿರುದ್ದ ದ್ವನಿ ಎತ್ತಿದರು. ನಂತರ ನಾಡಿನೂದ್ದಕ್ಕೂ ಸಂಚರಿಸಿ ಮಾನವರಿಗೆ ಜಾಗ್ರತೆ ಮೂಡಿಸಿದರು. ಉಪ ...

                                               

ಕೆರುಟಗಿ

ಬೆಸಿಗೆ-ಚಳಿಗಾಲ ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43 ಡಿಗ್ರಿವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ 9 ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - 35°C-42°C ಡಿಗ್ರಿ ಸೆಲ್ಸಿಯಸ್ ಚಳಿಗಾಲ ಮತ್ತು ಮಳೆಗಾಲ - 18°C-28°C ಡಿಗ್ರಿ ಸೆಲ್ಸಿಯಸ್. ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗುತ್ತದೆ. ಗಾಳಿ - ಗಾಳಿಯ ವೇಗ 18 ಕಿಮಿ/ಗಂ ಜೂನ, 19 ಕಿಮಿ/ಗಂ ಜುಲೈಹಾಗೂ 17 ಕಿಮಿ/ಗಂ ಅಗಸ್ಟ್ ಇರುತ್ತದೆ.

                                               

ಕರ್ನಾಟಕದ ಧರ್ಮಗಳು

ಕರ್ನಾಟಕದ ಧರ್ಮಗಳು ಕರ್ನಾಟಕದ ಧರ್ಮಗಳು ಬಹುಮಟ್ಟಿಗೆ ಭಾರತದ ಎಲ್ಲ ಧರ್ಮಗಳನ್ನೂ ಒಳಗೊಂಡಿವೆ. ಭಾರತದ ಧರ್ಮ ಒಂದು ಧಾರ್ಮಿಕ ಮಹಾಸಾಗರ. ಈ ಸಾಗರಕ್ಕೆ ಭಾರತದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಭಾಗಗಳಿಂದ ಬೇರೆ ಬೇರೆ ಕಾಲಗಳಲ್ಲಿ ಧಾರ್ಮಿಕ ವಿವೇಚನೆಯ ಪ್ರವಾಹಗಳು ಹರಿದು ಬಂದು ಸೇರಿವೆ. ಭಾರತದಲ್ಲೇ ಹುಟ್ಟಿದ ಧರ್ಮಗಳಲ್ಲದೆ, ಭಾರತದ ಆಚಿನಿಂದ ಬಂದ ಧರ್ಮಗಳೂ ಅದರ ಧಾರ್ಮಿಕ ವಿವೇಚನೆಯನ್ನು ಚೇತನಗೊಳಿಸಿವೆ. ಭಾರತದಲ್ಲೇ ಹುಟ್ಟಿದ ಧರ್ಮಗಳು ವೈದಿಕ, ಶೈವ, ವೈಷ್ಣವ, ತಾಂತ್ರಿಕ, ಶಾಕ್ತೇಯ, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳು. ಹೊರಗಿನಿಂದ ಬಂದವು - ಕ್ರೈಸ್ತ, ಇಸ್ಲಾಂ ಮತ್ತು ಜರತುಷ್ಟ್ರ ಧರ್ಮಗಳು. ಭಾರತ ಅನಾದಿಕಾಲದಿಂದ ಪೋಷಿಸಿದ ಸರ್ವಮತಸಹಿಷ್ಣುತೆಯ ನೀತಿಯನ್ನು ಕರ್ನಾಟಕವೂ ಅನುಸರಿಸಿ ಪುಷ್ಟಿಗೊಳಿಸಿದೆ. ಭಾರತದ ಧರ್ಮ ಕನಿಷ್ಠಪಕ್ಷ ನಾಲ ...

                                     

ⓘ ಶರಣ ಸಂಸ್ಕೃತಿ

ಹನ್ನೆರಡನೇ ಶತಮಾನ ರಾಜಕೀಯ, ಮತಧರ್ಮ, ಭಾಷೆ, ಸಾಹಿತ್ಯ, ಸಾಮಾಜಿಕ ಬದಲಾವಣೆಗಳಿಂದಾಗಿ ವಿಶೇಷ ಮಹತ್ವ ಪಡೆದಿದೆ. ಶರಣ್ಯಭಾವದಿಂದ ಶಿವನನ್ನು ಆರಾಧಿಸಿ ಕೊನೆಯಲ್ಲಿ ಶಿವನೇ ಆಗುವ ಭಕ್ತರನ್ನು ಶಿವಶರಣರು ಎಂದು ಹೇಳಬಹುದು. ನಡೆ-ನುಡಿಗಳಲ್ಲಿ ಅಂತರವಿರದ ಇವರ ಜೀವನದ ಆದರ್ಶಗಳೇ ಶರಣ ಸಂಸ್ಕೃತಿ. ಈ ಶರಣರು ರಚಿಸಿದ ವಚನ ಸಾಹಿತ್ಯವನ್ನೇ ಇಲ್ಲಿ ಶರಣ ಸಾಹಿತ್ಯ ಎಂದು ಕರೆಯಬಹುದು. ಶರಣ ಸಾಹಿತ್ಯದಲ್ಲಿ ಶರಣ ಸಂಸ್ಕೃತಿಯನ್ನು ಕಾಣಬಹುದು.

ಶರಣ ಸಂಸ್ಕೃತಿಯ ಪ್ರಧಾನ ಲಕ್ಷಣ ಕಾಯಕ. ಕಾಯಕ ನಿಷ್ಠೆಯ ಬಗ್ಗೆ ಯಾವ ಮತಧರ್ಮವೂ ಇಷ್ಟೊಂದು ಪ್ರಾಮುಖ್ಯತೆ ಕೊಟ್ಟಿರಲಿಲ್ಲ. ಕಾಯಕವೇ ಕೈಲಾಸ ಎಂದ ಬಸವಣ್ಣ ಉದ್ಯೋಗಂ ಪುರುಷ ಲಕ್ಷಣಂ ಎಂದು ಸಾರಿದಂತಿದೆ.

ಎಂದು ಹೇಳುವ ಶರಣರ ಮಾತುಗಳು ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ ಎಂಬ ಸಾಲುಗಳು ಶರಣ ಸಂಸ್ಕೃತಿಯಲ್ಲಿ ಕಾಯಕಕ್ಕೆ ಶರಣರು ನೀಡಿದ ಪ್ರಾಶಸ್ತ್ಯವನ್ನು ಸಾರಿ ಹೇಳುತ್ತವೆ.

ಶರಣ ಸಂಸ್ಕೃತಿಯಲ್ಲಿ ಲಿಂಗಸಮಾನತೆಯನ್ನು ಕಾಣಬಹುದು. ಸತಿಪತಿಗಳೊಂದಾದ ಭಕ್ತಿ ಒಪ್ಪುವುದು ಶಿವಂಗೆ ಎನ್ನುವ ಶರಣರ ವಚನದ ಸಾಲುಗಳು ಇದಕ್ಕೆ ಪುಷ್ಠಿ ನೀಡುತ್ತವೆ. ಸತಿಪತಿಗಳಿಬ್ಬರು ವಚನಗಳನ್ನು ರಚಿಸಿದ ಉದಾಹರಣೆಗಳಿವೆ.

ಹೀಗೆ ಶರಣ ಸಂಸ್ಕೃತಿಯಲ್ಲಿ ಲಿಂಗಸಮಾನತೆಗೆ ವಚನಗಳನ್ನು ಉದಾಹರಣೆ ನೀಡಬಹುದು.

ಶರಣ ಸಂಸ್ಕೃತಿಯ ಇನ್ನೊಂದು ಲಕ್ಷಣ ಭಕ್ತಿ. ಭಕ್ತ ಮತ್ತು ದೇವರ ನಡುವಿನ ದಲ್ಲಾಳಿಗಳನ್ನು ಧಿಕ್ಕರಿಸಿದ ಶರಣರು ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ? ಎಂದು ಪ್ರಶ್ನಿಸಿದ್ದಾರೆ. ದೇವಾಲಯಗಳ ನಿರ್ಮಾಣವನ್ನು ಪ್ರಬಲವಾಗಿ ವಿರೋಧಿಸುತ್ತಾರೆ. ನರದೇಹವೇ - ಹರದೇವಾಲಯ ಎನ್ನುತ್ತಾರೆ. ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ ಎನ್ನುವ ಬಸವಣ್ಣನವರ ವಚನದ ಸಾಲುಗಳಲ್ಲಿ ಈ ವಿಚಾರ ಅನಾವರಣಗೊಂಡಿದೆ.

ಸಾಮಾಜಿಕ ಸಮಾನತೆ, ಮರ್ತ್ಯ ಲೋಕದ ಹಿರಿಮೆ, ಆತ್ಮವಿಮರ್ಶೆ, ನಡೆ-ನುಡಿಯಲ್ಲಿ ಒಂದಾಗುವಿಕೆ, ಸಂಸಾರದಲ್ಲಿ ಸಹಿಷ್ಣುತೆ, ಸಾಮಾಜಿಕ ಬದ್ಧತೆ, ವೈಚಾರಿಕತೆ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದನ್ನು ಶರಣ ಸಂಸ್ಕೃತಿ ಪ್ರತಿಪಾದಿಸುತ್ತದೆ. ಮೌಢ್ಯ, ಶ್ರೇಣೀಕೃತ ಸಮಾಜ, ವರ್ಣಬೇಧ, ಶೋಷಣೆ, ಅಸಮಾನತೆ, ವೇದಾಗಮಪುರಾಣ ಬಹುದೇವತೋಪಾಸನೆ ಮುಂತಾದವುಗಳನ್ನು ಪ್ರಬಲವಾಗಿ ವಿರೋಧಿಸುತ್ತದೆ.

ಶರಣ ಸಂಸ್ಕೃತಿಯಲ್ಲಿರುವ ಹತ್ತು ಹಲವು ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಅವಶ್ಯಕ ಎನ್ನುವುದನ್ನು ಒಪ್ಪಬಹುದಲ್ಲವೇ?

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →