Back

ⓘ ಸಾಗರ. {{#if:| ಸಾಗರ ಅಥವಾ ಸಾಗರ ಜಂಬಗಾರು ಭಾರತ ದೇಶದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಒಂದು ನಗರ ಮತ್ತು ಅದೇ ಹೆಸರಿನ ಉಪವಿಭಾಗೀಯ ಮತ್ತು ತಾಲೂಕು ಆಡಳಿತ ಕೇಂದ್ರ. ಬೆಂಗಳೂರು ನಗರದಿಂದ ೩ ..                                               

ಬಿ.ಎಸ್.ಚಂದ್ರಶೇಖರ-ಸಾಗರ

ಬಿ.ಎಸ್. ಚಂದ್ರಶೇಖರ ಇವರು ಸಾಗರದಲ್ಲಿ ವಾಸಿಸುತ್ತಿದ್ದಾರೆ. ಶಿಕ್ಷಕ ವೃತ್ತಿಯಲ್ಲಿ ಅನೇಕ ಕಡೆ ಕೆಲಸ ಮಾಡಿ ಕೊನೆಯ 20 ವರ್ಷ ಸಾಗರದಲ್ಲಿ ಸಾಮಾಜಿಕ ಕಾರ್ಯಗಳ ಹೊಣೆಗಳನ್ನು ಹೊತ್ತು ಸೇವೆ ಮಾಡುತ್ತಿದ್ದಾರೆ. ಕುತೂಹಲಕ್ಕಾಗಿ 2008 ರಲ್ಲಿ ಕಂಪ್ಯೂಟರ್ ಕೊಂಡ ಇವರು ತಮ್ಮ ಏಳು ವರ್ಷದ ಮೊಮ್ಮಗನಿಂದ ಅದನ್ನು ಚಾಲೂ ಮಾಡುವುದನ್ನು ಕಲಿತು, ಒಂದು ತಿಂಗಳು ಅದರಲ್ಲಿ ಪ್ರಾಥಮಿಕ ತರಬೇತಿ ಪಡೆದು ಇಂಟರ್`ನೆಟ್ ಸೌಲಭ್ಯ ದೊರಕಿದ ನಂತರ ‘ಸಹಾಯ’ ವಿಭಾಗ ನೋಡಿ ವಿಕಿಪೀಡಿಯಾಕ್ಕೆ ಸದಸ್ಯರಾಗಿ, ಅದಕ್ಕೆ ವೈವಿಧ್ಯಮಯ ಲೇಖನಗಳನ್ನು ತುಂಬುವ ಕೆಲಸ ಮಾಡಿದ್ದಾರೆ.

                                               

ಮಾರತಹಳ್ಳಿ

ಮಾರತಹಳ್ಳಿ ಅಥವಾ ಮಾರತ್‌ಹಳ್ಳಿ ಬೆಂಗಳೂರಿನ ಪೂರ್ವ ಭಾಗದಲ್ಲಿರುವ ಒಂದು ಸ್ಥಳ. ಇದು ಅನೇಕ ವ್ಯಾಪರ ಮಳಿಗೆಗಳನ್ನೂ, ಬಹುಮಹಡಿ ವಸತಿ ಸಂಕೀರ್ಣಗಳನ್ನೂ ಹೊಂದಿದೆ. ಭಾರತೀಯ ವಾಯುಸೇನೆಯ ಮಾರುತ್ ಎಂಬ ಒಂದು ಯುದ್ಧ ವಿಮಾನ ಇಲ್ಲಿ ಅಪಘಾತಕ್ಕೊಳಗಾಗಿದ್ದರಿಂದ ಈ ಸ್ಥಳಕ್ಕೆ ಮಾರುತ್‌ಹಳ್ಳಿ ಎಂಬ ಹೆಸರು ಬಂದಿತು. ಕಾಲಾನುಕ್ರಮದಲ್ಲಿ ಅದು ಮಾರತ್‌ಹಳ್ಳಿ ಅಥವಾ ಮಾರತಹಳ್ಳಿ ಎಂದು ಬದಲಾಗಿದೆ.

                                               

ಚಿತ್ರದುರ್ಗ ಜಿಲ್ಲೆ

ಚಿತ್ರದುರ್ಗ - ಕರ್ನಾಟಕದ ಒಂದು ಜಿಲ್ಲೆ. ಐತಿಹಾಸಿಕ ಸ್ಥಳವೂ ಹೌದು. ಹಿಂದೊಮ್ಮೆ ದಾವಣಗೆರೆ ಜಿಲ್ಲೆಯೂ ಈ ಜಿಲ್ಲೆಗೇ ಸೇರಿತ್ತು. ಚಿತ್ರದುರ್ಗ ನಗರವು ಪುರಾಣದ ಪ್ರಕಾರ ಶ್ರೀಕೃಷ್ಣ ಜಾಂಬವತಿಯ ಪುತ್ರನಾದ ಚಿತ್ರಕೇತು ಆಳ್ವಿಕೆ ಮಾಡಿದ ಪ್ರದೇಶ. ಆ ಕಾರಣದಿಂದಲೇ ಚಿತ್ರದುರ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರಕೇತು ಅಥವಾ ಚಿತ್ರಲಿಂಗನ ವಂಶದವರು ಎಂದು ಹೇಳಿಕೊಳ್ಳುವ ಕಾಡುಗೊಲ್ಲ ಜನಾಂಗ ಈ ಭಾಗದಲ್ಲಿ ಹೆಚ್ಚಾಗಿದೆ. ಈ ಪ್ರದೇಶ ಕಲ್ಲುಬೆಟ್ಟಗಳಿಂದ ಹಾಗೂ ಹುಲ್ಲುಗಾವಲು ಗಳಿಂದ ಕೂಡಿದ ದುರ್ಗಮ ಪ್ರದೇಶವಾಗಿತ್ತು. ಅಂತಹ ದುರ್ಗಮ ಪ್ರದೇಶವನ್ನು ಚಿತ್ರಕೇತು ಆಳ್ವಿಕೆ ಮಾಡಿದ ಕಾರಣದಿಂದ ಚಿತ್ರದುರ್ಗ ಎಂದು ಹೆಸರು ಬರಲು ಕಾರಣವಾಗಿದೆ. ಬ್ರಿಟೀಷರ ಕಾಲದಲ್ಲಿ ಚಿತ್ತಲ್‍ದ್ರಗ್ ಅಧಿಕೃತ ಹೆಸರಾಗಿತ್ತು. ಎಂದು ಕರೆದದ್ದುಂಟು.ಚಿತ್ರದುರ್ಗ ಐತಿಹ ...

                                               

ಸಮುದ್ರ ಮಂಥನ

ಹಿಂದೂ ಧರ್ಮದಲ್ಲಿ, ಸಮುದ್ರಮಂಥನ ಅಥವಾ ಕ್ಷೀರಸಮುದ್ರವನ್ನು ಕಡೆದ ಘಟನೆ ಪುರಾಣಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ ಕುಂಭಮೇಳ ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು ಭಾಗವತಪುರಾಣ, ಮಹಾಭಾರತ ಹಾಗೂ ವಿಷ್ಣು ಪುರಾಣದಲ್ಲಿ ಕಂಡುಬರುತ್ತದೆ. ಸಮುದ್ರಮಂಥನದ ಇತರ ಹೆಸರುಗಳು - ಸಾಗರ ಮಂಥನ - ಸಾಗರ ಸಮುದ್ರ ಕ್ಕೆ ಇನ್ನೊಂದು ಹೆಸರು. ಕ್ಷೀರಸಾಗರ ಮಂಥನ - ಕ್ಷೀರಸಾಗರ ಎಂದರೆ ಹಾಲಿನ ಸಮುದ್ರವೆಂದು. ಕ್ಷೀರಸಾಗರ = ಕ್ಷೀರ ಹಾಲು + ಸಾಗರ ಸಮುದ್ರ. ಸಮುದ್ರಮಂಥನಂ - ಮಂಥನಂ ಎಂದರೆ ಸಂಸ್ಕೃತದಲ್ಲಿ ಮಂಥನ ಅಥವಾ ಕಡೆಯುವುದು ಎಂದರ್ಥ.

                                               

ಕಾರ್ಕಳ

ಕಾರ್ಕಳ ಉಡುಪಿ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಕಾರ್ಕಳವು ಬೆಂಗಳೂರಿನಿಂದ ಸುಮಾರು ೩೬೦ ಕಿ. ಮೀ ದೂರದಲ್ಲಿದೆ. ಪಶ್ಚಿಮ ಘಟ್ಟದ ಬುಡದಲ್ಲಿರುವ ಈ ಊರು ಹಲವು ಶತಮಾನಗಳ ಹಿಂದೆ ಜೈನ ರಾಜರ ಆಳ್ವಿಕೆಯ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿಧ್ದಿ ಪಡೆದಿತ್ತು. ಕಾಲಕ್ರಮೇಣ ಇಲ್ಲಿರುವ ಕರಿ ಬಂಡೆಗಳಿಂದ "ಕರಿಕಲ್ಲು" ಎಂದು ಪ್ರಸಿದ್ಧವಾಗಿತ್ತು. ಮುಂದೆ ಕರಿಕಲ್ಲು ತುಳುವಿನಲ್ಲಿ ಕಾರ್ಲವೆಂದು ಮಾರ್ಪಟ್ಟು ಕನ್ನಡದಲ್ಲಿ ಕಾರ್ಕಳ ಎಂದು ಹೆಸರಾಗಿದೆ. ೪೨ ಅಡಿ ಎತ್ತರದ ಏಕಶಿಲಾ ಗೊಮ್ಮಟೇಶ್ವರ ಮೂರ್ತಿ, ಚತುರ್ಮುಖ ಬಸದಿ ಮತ್ತು ಇತರ ಧಾರ್ಮಿಕ ಕ್ಷೇತ್ರಗಳ ಮೂಲಕ ಕಾರ್ಕಳವು ಪ್ರವಾಸಿ ಸ್ಥಳವಾಗಿ ಛಾಪು ಮೂಡಿಸಿದೆ.

                                               

ಕಾಗೋಡು ಸತ್ಯಾಗ್ರಹ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾಗೋಡು ಗ್ರಾಮದಲ್ಲಿ ೧೯೫೧ ರಲ್ಲಿ ನಡೆದ ಗೇಣಿ ರೈತರ ಸತ್ಯಾಗ್ರಹ. ಈ ರೈತ ಹೋರಾಟ ಕರ್ನಾಟಕದ ರೈತ ಚಳವಳಿಯ ಇತಿಹಾಸದಲ್ಲಿ ಮೈಲಿಗಲ್ಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ರಾಜಕೀಯ ಅಧಿಕಾರ ಜನರಿಗೆ ಪ್ರಾಪ್ತವಾಗಿದ್ದರೂ ಆರ್ಥಿಕ ಶೋಷಣೆಯಿಂದ ಜನರು ಮುಕ್ತವಾಗಿರಲಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಜಮೀನ್ದಾರಿಕೆ ವ್ಯವಸ್ಥೆಯ ಮೂಲದಿಂದ ಬಂದ ಗೇಣಿ ಪದ್ಧತಿಯೂ ಅಂತಹ ಶೋಷಣೆಗೆ ಹೆಚ್ಚಿನ ಅವಕಾಶ ನೀಡಿತ್ತು. ಆಗ ಇಂಥ ವ್ಯವಸ್ಥೆಯ ವಿರುದ್ಧ ಈ ರೈತ ಹೋರಾಟ ನಡೆಯಿತು.

ಸಾಗರ
                                     

ⓘ ಸಾಗರ

{{#if:|

ಸಾಗರ ಅಥವಾ ಸಾಗರ ಜಂಬಗಾರು ಭಾರತ ದೇಶದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಒಂದು ನಗರ ಮತ್ತು ಅದೇ ಹೆಸರಿನ ಉಪವಿಭಾಗೀಯ ಮತ್ತು ತಾಲೂಕು ಆಡಳಿತ ಕೇಂದ್ರ. ಬೆಂಗಳೂರು ನಗರದಿಂದ ೩೬೦ ಕಿ.ಮೀ ದೂರದಲ್ಲಿರುವ ಸಾಗರ ನಗರವು ಮಲೆನಾಡು ಪ್ರದೇಶದ ವ್ಯಾಪ್ತಿಗೊಳಪಟ್ಟಿದೆ. ಮಳೆ ಹೆಚ್ಚಾಗಿ ಬೀಳುವ ಸಾಗರ ತಾಲೂಕು ಸಹಜವಾಗಿ ದಟ್ಟವಾದ ಕಾಡು ಮತ್ತು ವಿವಿಧ ರೀತಿಯ ಪ್ರಾಣಿಸಂಕುಲಗಳಿಗೆ ತವರಾಗಿದೆ. ಪ್ರಕೃತಿಪ್ರಿಯರಿಗೆ ಮತ್ತು ಚಾರಣಪ್ರಿಯರಿಗೆ ಸಾಗರ ಸ್ವರ್ಗ. ಶ್ರೀಗಂಧ ಕೆತ್ತನೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸಾಗರವನ್ನು ಶ್ರೀಗಂಧದ ಗುಡಿ ಎಂದೂ ಕರೆಯಲಾಗುತ್ತದೆ.ಸಾಗರವು ಜನರ ಒಗ್ಗಟ್ಟಿನಲ್ಲಿ ಪ್ರಸಿದ್ಧವಾಗಿದೆ.ಇಲ್ಲಿನ ಗಣೇಶ ಚತುರ್ಥಿ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ.ಇಲ್ಲಿನ ಹುಡುಗರು ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಸ್ನೇಹ ಪ್ರೀತಿಗೆ ಇನ್ನೊಂದು ಹೆಸರೇ ಮಲೆನಾಡ ಹೆಬ್ಬಾಗಿಲು ಶ್ರೀ ಗಂಧದ ಗುಡಿ ಸಾಗರ.

ಇಕ್ಕೇರಿ ದೇವಸ್ಥಾನ

                                     

1. ಇತಿಹಾಸ

ಸಾಗರ ನಗರಕ್ಕೆ ನಾಲ್ಕುನೂರು ವರ್ಷಗಳ ಇತಿಹಾಸವಿದೆಯೆಂದು ತಿಳಿದು ಬಂದಿದೆ. ಕೆಳದಿ ವಂಶಸ್ಥರ ಕಾಲದಿಂದಲೂ ಈ ನಗರ ಇದ್ದಿತು. ಸಾಗರದ ಸಮೀಪವಿರುವ ಕೆರೆ ಅಂದು ಅತ್ಯಂತ ವಿಶಾಲವಾಗಿ ಇದ್ದು, ಅದು ಸಾಗರದಂತೆ ಸಮುದ್ರದಂತೆ ಕಾಣಿಸುತ್ತಿತ್ತಂತೆ. ಆ ಕೆರೆಗೆ "ಸದಾಶಿವ ಸಾಗರ" ಎಂಬ ಹೆಸರು ಇತ್ತು. ನಂತರ ಸದಾಶಿವ ಹೊರಟು ಹೋಗಿ ಸಾಗರ ಮಾತ್ರ ಉಳಿದು ಅದುವೇ ಈ ನಗರದ ಹೆಸರಾಯಿತು ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಸಾಗರದ ಜನಸಂಖ್ಯೆ ಹೆಚ್ಚಾದ ಕಾರಣ ಇದನ್ನು ನಗರಸಭೆಯನ್ನಾಗಿ ಘೋಷಿಸಿದ್ದಾರೆ.

                                     

2. ಪ್ರೇಕ್ಷಣೀಯ ಸ್ಥಳಗಳು

ಇಕ್ಕೇರಿ

ಹೊಯ್ಸಳ ಶೈಲಿಯ ಸುಂದರವಾದ ಕೆತ್ತನೆಗಳಿರುವ ಕೆಳದಿ ಸಂಸ್ಥಾನಕ್ಕೆ ಸೇರಿದ ದೇವಸ್ಥಾನವಿರುವ ಇಕ್ಕೇರಿ ಸಾಗರ ಪೇಟೆಯಿಂದ ೪ ಕಿ.ಮೀ. ದೂರದಲ್ಲಿದೆ. ಬಸ್ಸು, ಟ್ಯಾಕ್ಸಿ ಅಥವ ಆಟೋಗಳಿಂದ ಸುಲಭವಾಗಿ ಇಕ್ಕೇರಿಯನ್ನು ತಲುಪಬಹುದು.

ಕೆಳದಿ

ಕೆಳದಿ ರಾಜವಂಶದಿಂದ ಪ್ರಸಿದ್ಧವಾದ ಕೆಳದಿ ಪಟ್ಟಣವು ಸಾಗರದಿಂದ ೮ ಕಿ.ಮೀ ದೂರದಲ್ಲಿದೆ. ಕೆಳದಿ ಸಂಸ್ಥಾನದ ಅರಮನೆ, ಸುಂದರ ಕೆತ್ತನೆಗಳಿರುವ ದೇವಸ್ಥಾನ ಮತ್ತು ಐತಿಹಾಸಿಕ ವಸ್ತುಸಂಗ್ರಹಾಲಯ ಈ ಊರಿನ ಆಕರ್ಷಣೆಗಳು.

ಸಿಗಂಧೂರು

ಚೌಡೇಶ್ವರಿ ಅಮ್ಮನವರ ದೇವಾಲಯ ಇಲ್ಲಿದೆ. ಸಾಗರದಿಂದ ೩೨ ಕಿ.ಮಿ. ದೂರದಲ್ಲಿದೆ. ಇಲ್ಲಿಗೆ ಹೋಗಲು ಶರಾವತಿ ಹಿನ್ನೀರನ್ನು ಲಿಂಗನಮಕ್ಕಿ ಜಲಾಶಯ ಲಾಂಚ್ ಮುಖಾಂತರ ದಾಟಿ ಹೋಗಬೇಕು.

ನಾಡಕಲಸಿ

ಸಾಗರದಿಂದ ೧೦ ಕಿ.ಮೀ ದೂರದಲ್ಲಿದೆ.ಈ ದೇವಸ್ಥಾನದ ಮೂಲ ದೇವರು ಶಿವನಾಗಿದ್ದು,ಪೂರ್ಣ ಕಲ್ಲಿನಿಂದ ನಿರ್ಮಿತವಾಗಿದೆ.

ಹೊಸಗುಂದ

ಸಾಗರದಿಂದ ೧೬ ಕಿ.ಮೀ ದೂರದಲ್ಲಿದೆ. ೧೦ನೇ ಶತಮಾನದಲ್ಲಿ ಸಂತರಸರಿಂದ ನಿರ್ಮಾಣಗೊಂಡ ಉಮಾಮಹೇಶ್ವರ ದೇಗುಲ ಇಲ್ಲಿನ ಆಕರ್ಷಣೆ.

ವರದಾಮೂಲ

ವರದಾ ನದಿಯ ಉಗಮ ಸ್ಥಳ. ಇಲ್ಲಿ ವರದಾಂಬ ದೇವಿಯ ದೇವಸ್ಥಾನವೂ ಇದೆ. ಅಗ್ನಿ, ವರದಾ ಮತ್ತು ಲಕ್ಷ್ಮಿಯೆಂಬ ೩ ನದಿಗಳನ್ನು ಒಳಗೊಂಡಿದೆ. ಪ್ರತೀ ವರ್ಷದ ಎಳ್ಳುಅಮವಾಸ್ಯೆಯಂದು ಜಾತ್ರೆ ನೆಡೆಯುತ್ತದೆ.

                                     

2.1. ಪ್ರೇಕ್ಷಣೀಯ ಸ್ಥಳಗಳು ಜೋಗ

ಭಾರತದಲ್ಲೇ ಅತ್ಯಂತ ಎತ್ತರವಾದ ಮತ್ತು ಜಗತ್ತಿನಲ್ಲಿ ೨ನೆಯ ಸ್ಥಾನದಲ್ಲಿರುವ ವಿಶ್ವ ಪ್ರಸಿದ್ಧ ಜೋಗ ಜಲಪಾತವು ಸಾಗರದಿಂದ ೨೯ ಕಿ.ಮೀ ಅಂತರದಲ್ಲಿದೆ. ಶರಾವತಿ ನದಿಯು ರಾಜ, ರೋರರ್, ರಾಕೆಟ್ ಮತ್ತು ರಾಣಿ ಎಂಬ ನಾಲ್ಕು ಕವಲುಗಳಾಗಿ ೨೭೩ ಮೀ ಎತ್ತರದಿಂದ ಧುಮುಕುವ ಜೋಗ ಜಲಪಾತಕ್ಕೆ ಸಾಗರದಿಂದ ಪ್ರತೀ ೫ ನಿಮಿಷಕ್ಕೆ ಒಂದರಂತೆ ಬಸ್ಸಿನ ವ್ಯವಸ್ಥೆ ಇದೆ.

                                     

2.2. ಪ್ರೇಕ್ಷಣೀಯ ಸ್ಥಳಗಳು ಕೆಳದಿ

ಕೆಳದಿ ರಾಜವಂಶದಿಂದ ಪ್ರಸಿದ್ಧವಾದ ಕೆಳದಿ ಪಟ್ಟಣವು ಸಾಗರದಿಂದ ೮ ಕಿ.ಮೀ ದೂರದಲ್ಲಿದೆ. ಕೆಳದಿ ಸಂಸ್ಥಾನದ ಅರಮನೆ, ಸುಂದರ ಕೆತ್ತನೆಗಳಿರುವ ದೇವಸ್ಥಾನ ಮತ್ತು ಐತಿಹಾಸಿಕ ವಸ್ತುಸಂಗ್ರಹಾಲಯ ಈ ಊರಿನ ಆಕರ್ಷಣೆಗಳು.

                                     

2.3. ಪ್ರೇಕ್ಷಣೀಯ ಸ್ಥಳಗಳು ಹೊನ್ನೇಮರಡು

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಹೊನ್ನೇಮರಡು ಶರಾವತಿ ಹಿನ್ನೀರಿನಿಂದ ಆವೃತವಾದ, ಸಾಹಸಪ್ರಿಯರನ್ನು ಆಹ್ವಾನಿಸುವ ಸುಂದರವಾದ ಪ್ರದೇಶ. ಜೋಗಕ್ಕೆ ಹೋಗುವ ದಾರಿಯಲ್ಲಿ ಸಾಗರದಿಂದ ೨೫ ಕಿ.ಮೀ ಗಳ ದೂರದಲ್ಲಿರುವ ಹೊನ್ನೇಮರಡು ನೀರಿನ ಸಾಹಸಕ್ರೀಡೆಗಳಿಗೆ ಪ್ರಶಸ್ತವಾದ ಸ್ಥಳ.

                                     

2.4. ಪ್ರೇಕ್ಷಣೀಯ ಸ್ಥಳಗಳು ಮಾರಿಕಾಂಬಾ ದೇವಸ್ಥಾನ ಮತ್ತು ಜಾತ್ರೆ

ಸಾಗರ ಪೇಟೆಯ ಮಧ್ಯದಲ್ಲಿರುವ ಮಾರಿಕಾಂಬ ದೇವಸ್ಥಾನ ಸಾಗರದ ಜನಜೀವನ ಮತ್ತು ಇತಿಹಾಸದ ಜೊತೆಗೆ ಬಹುವಾಗಿ ಬೆಸೆದುಕೊಂಡಿದೆ. ೩ ವರ್ಷಗಳಿಗೊಮ್ಮೆ ನಡೆಯುವ ಸಾಗರ ಮಾರಿಕಾಂಬ ಜಾತ್ರೆ ರಾಜ್ಯದಾದ್ಯಂತ ಜನರನ್ನು ಸಾಗರದೆಡೆಗೆ ಆಕರ್ಷಿಸುತ್ತದೆ.

                                     

2.5. ಪ್ರೇಕ್ಷಣೀಯ ಸ್ಥಳಗಳು ವರದಹಳ್ಳಿ

ಶ್ರೀಧರ ಸ್ವಾಮಿಗಳ ಸಮಾಧಿ ಮತ್ತು ಆಶ್ರಮವಿರುವ ಯಾತ್ರಾಸ್ಥಳವಾದ ವರದಹಳ್ಳಿ ಸಾಗರದಿಂದ ೭ ಕಿ.ಮೀ ದೂರದಲ್ಲಿದೆ. ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ಹೆಚ್ಚಿನ ಭಕ್ತರನ್ನು ಹೊಂದಿರುವ ವರದಹಳ್ಳಿ ನಿಸರ್ಗದ ಮಧ್ಯೆ ಪ್ರಶಾಂತವಾಗಿ ನೆಲೆಸಿರುವ, ಆಧ್ಯಾತ್ಮಿಕ ಚಿಂತನೆಗೆ ಪ್ರಶಸ್ಥವಾದ ಸ್ಥಳ.

                                     

2.6. ಪ್ರೇಕ್ಷಣೀಯ ಸ್ಥಳಗಳು ವರದಹಳ್ಳಿಯ ಶ್ರೀ ದುರ್ಗಾಂಬಾ

ಶಿವಮೊಗ್ಗ ಜಿಲ್ಲೆಯ ತಾಲೂಕು ಕೇಂದ್ರವಾದ ಸಾಗರದಿಂದ ಕೇವಲ ೮ ಕಿಲೋಮೀಟರ್ ದೂರದಲ್ಲಿ ಪಶ್ಚಿಮ ಘಟ್ಟದ ವನಸಿರಿಯ ಮಡಿಲಲ್ಲಿ ಇರುವ ಪರಮ ಪಾವನ ಕ್ಷೇತ್ರವೇ ವರದಹಳ್ಳಿ ಆಡು ಭಾಷೆಯಲ್ಲಿ ವದ್ದಳ್ಳಿ. ಇಲ್ಲೇ ಶ್ರೀ ದುರ್ಗಾಂಬಾ ದೇವಿಯ ಸನ್ನಿಧಿ. ಈ ಸ್ಥಳಕ್ಕೆ ವರದಹಳ್ಳಿ ಅಥವ ವರದಪುರ ಎಂಬುದಾಗಿಯೂ ಕರೆಯುತ್ತಾರೆ.

                                     

2.7. ಪ್ರೇಕ್ಷಣೀಯ ಸ್ಥಳಗಳು ಸಿಗಂಧೂರು

ಚೌಡೇಶ್ವರಿ ಅಮ್ಮನವರ ದೇವಾಲಯ ಇಲ್ಲಿದೆ. ಸಾಗರದಿಂದ ೩೨ ಕಿ.ಮಿ. ದೂರದಲ್ಲಿದೆ. ಇಲ್ಲಿಗೆ ಹೋಗಲು ಶರಾವತಿ ಹಿನ್ನೀರನ್ನು ಲಿಂಗನಮಕ್ಕಿ ಜಲಾಶಯ ಲಾಂಚ್ ಮುಖಾಂತರ ದಾಟಿ ಹೋಗಬೇಕು.

                                     

2.8. ಪ್ರೇಕ್ಷಣೀಯ ಸ್ಥಳಗಳು ನಾಡಕಲಸಿ

ಸಾಗರದಿಂದ ೧೦ ಕಿ.ಮೀ ದೂರದಲ್ಲಿದೆ.ಈ ದೇವಸ್ಥಾನದ ಮೂಲ ದೇವರು ಶಿವನಾಗಿದ್ದು,ಪೂರ್ಣ ಕಲ್ಲಿನಿಂದ ನಿರ್ಮಿತವಾಗಿದೆ.

                                     

2.9. ಪ್ರೇಕ್ಷಣೀಯ ಸ್ಥಳಗಳು ಹೊಸಗುಂದ

ಸಾಗರದಿಂದ ೧೬ ಕಿ.ಮೀ ದೂರದಲ್ಲಿದೆ. ೧೦ನೇ ಶತಮಾನದಲ್ಲಿ ಸಂತರಸರಿಂದ ನಿರ್ಮಾಣಗೊಂಡ ಉಮಾಮಹೇಶ್ವರ ದೇಗುಲ ಇಲ್ಲಿನ ಆಕರ್ಷಣೆ.

                                     

2.10. ಪ್ರೇಕ್ಷಣೀಯ ಸ್ಥಳಗಳು ವರದಾಮೂಲ

ವರದಾ ನದಿಯ ಉಗಮ ಸ್ಥಳ. ಇಲ್ಲಿ ವರದಾಂಬ ದೇವಿಯ ದೇವಸ್ಥಾನವೂ ಇದೆ. ಅಗ್ನಿ, ವರದಾ ಮತ್ತು ಲಕ್ಷ್ಮಿಯೆಂಬ ೩ ನದಿಗಳನ್ನು ಒಳಗೊಂಡಿದೆ. ಪ್ರತೀ ವರ್ಷದ ಎಳ್ಳುಅಮವಾಸ್ಯೆಯಂದು ಜಾತ್ರೆ ನೆಡೆಯುತ್ತದೆ.

                                     

2.11. ಪ್ರೇಕ್ಷಣೀಯ ಸ್ಥಳಗಳು ಲಿಂಗನಮಕ್ಕಿ ಜಲಾಶಯ

ಕರ್ನಾಟಕದ ಸಾಗರ ತಾಲೂಕಿನಲ್ಲಿ ಶರಾವತಿ ನದಿಗೆ ಅಡ್ಡವಾಗಿ ೧೯೬೪ರಲ್ಲಿ ನಿರ್ಮಿತವಾದ ಒಂದು ಅಣೆಕಟ್ಟು. ಸಮುದ್ರ ಮಟ್ಟದಿಂದ ೧೮೧೯ ಅಡಿ ಏತ್ತರದಲ್ಲಿದೆ. ಆಣೆಕ‌ಟ್ಟಯ ಕೆಳಭಾಗದಲ್ಲಿ ಶರಾವತಿ ಜಲವಿದ್ಯುದಾಗಾರ ಯೋಜನೆಯು ಕಾರ್ಯನಿರ್ವಹಿಸುತ್ತಿದೆ ಇದು ಜೋಗದಿಂದ ಕೇವಲ ೬ ಕಿ.ಮೀ. ದೂರದಲ್ಲಿದೆ.

                                     

2.12. ಪ್ರೇಕ್ಷಣೀಯ ಸ್ಥಳಗಳು ಬಿಲಗುಂಜಿ ಕಮಲೇಶ್ವರ

ಬಿಲಗುಂಜಿ ಕಮಲೇಶ್ವರ ದೇಗುಲದಲ್ಲಿ ಪರಶಿವ ಗಂಗೆಯ ಶಿರದ ಮೇಲೆ ನೆಲೆಸಿದ್ದು ಭಕ್ತರ ಇಷ್ಟಾರ್ಥ ನೆರವೇರಿಸುತ್ತಾ ಕೀರ್ತಿಗಳಿಸಿದ್ದಾನೆ. ಇಲ್ಲಿ ಶಿವನ ಪದತಳದಲ್ಲಿ ಗಂಗೆ ತೀರ್ಥರೂಪದಲ್ಲಿ ನೆಲೆಸಿದ್ದು ಸದಾ ಹರಿಯುತ್ತಿರುತ್ತಾಳೆ.

                                     

2.13. ಪ್ರೇಕ್ಷಣೀಯ ಸ್ಥಳಗಳು ಶ್ರೀ ಕ್ಷೇತ್ರ ವಡನ್ ಬೈಲ್:

ವಿಶ್ವವಿಖ್ಯಾತ ಜೋಗಕ್ಕೆ ಸಮೀಪದಲ್ಲಿ ಬರುವ ಶ್ರೀ ಕ್ಷೇತ್ರ ವಡನ್ ಬೈಲ್ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ವಿಶೇಷವಾಗಿ ಇಲ್ಲಿರುವ ಮಹಾಮಾತೆ ಪದ್ಮಾವತಿ ಹಾಗೂ ಭಗವಾನ್ ಪಾರ್ಶ್ವನಾಥ ಸ್ವಾಮಿ ಬಸದಿಯು ವಿಶೇಷ ಆಕರ್ಷಕವಾಗಿದೆ ಇಲ್ಲಿಗೆ ಬರುವ ಭಕ್ತಾಧಿಗಳ ಸಂಖ್ಯೆ ಹೆಚ್ಚುತ್ತಿದೆ ಕ್ಷೇತ್ರದ ಧರ್ಮದರ್ಶಿಗಳಾದ ಹೆಚ್.ಎಂ.ವೀರರಾಜಯ್ಯನವರ ಪರಿಶ್ರಮ ಸಾಕಷ್ಟಿದೆ

                                     

3. ಸಾಹಿತ್ಯ, ಕಲೆ, ಸಂಸ್ಕೃತಿ

ಸಾಗರ ತಾಲೂಕಿಜನ ಉಚ್ಚ ಕಲಾರಸಿಕರು ಮತ್ತು ಸಾಹಿತ್ಯಾರಾಧಕರು. ಬಹಳ ಜನ ಕಲಾವಿದರನ್ನು, ಸಾಹಿತಿಗಳನ್ನು ರಾಜ್ಯಕ್ಕೆ ಸಾಗರ ತಾಲೂಕು ನೀಡಿದೆ. ಸಾಗರದ ೭ ಕಿ.ಮೀ ದೂರದಲ್ಲಿ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಕೆ.ವಿ.ಸುಬ್ಬಣ್ಣ ಕಟ್ಟಿ ಬೆಳೆಸಿದ ನೀನಾಸಂ ನೀಲಕಂಠೇಶ್ವರ ನಾಟ್ಯ ಸಂಘ ತನ್ನ ತಿರುಗಾಟಗಳಿಂದಾಗಿ ಬಹು ಪ್ರಸಿದ್ಧ. ವಿವರಗಳಿಗಾಗಿ - ನೀನಾಸಂ. ಖ್ಯಾತ ಸಾಹಿತಿ ನಾ. ಡಿಸೋಜ ಇದೇ ಊರಿನವರು.

 • ದೀವರ ಮದುವೆ ಹಾಡುಗಳು, ಹಬ್ಬದ ಹಾಡುಗಳು ಹಾಗು ಹಸೆ ಚಿತ್ರ ಕಲೆ ಇಲ್ಲಿ ಬಹಳ ಪ್ರಾಮುಖ್ಯತೆ ಪಡೆದಿವೆ.
 • ಯಕ್ಷಗಾನ ಸಾಗರ ತಾಲೂಕಿನಲ್ಲಿ ಬಹಳ ಪ್ರಸಿದ್ಧವಾದ ಕಲಾಪ್ರಕಾರ. ಬೇಸಿಗೆಯ ಕಾಲದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಯಕ್ಷಗಾನ ಮೇಳದ ಪ್ರದರ್ಶನ ಏರ್ಪಾಡಾಗಿರುವುದನ್ನು ಕಾಣಬಹುದು.
 • ದೀಪಾವಳಿಯ ಸಮಯದಲ್ಲಿ ಗ್ರಾಮದವರು ರಾತ್ರಿ ಒಂದು ದೀಪವನ್ನು ಉರಿಸಿಕೊಂಡು ಮನೆ ಮನೆಗೆ ಹಾಡು ಹೇಳುತ್ತಾ ಬರುವ ಸಂಪ್ರದಾಯ ಕೂಡಾ ಇಲ್ಲಿದೆ. ಇದನ್ನು ಹಬ್ಬಾಡುವ ಪದ, ಅಂಟಿಗೆಪಿಂಟಿಗೆ ಎಂದು ಕರೆಯುತ್ತಾರೆ.
 • ಮಂಡಗಳಲೆ; ಇದು ಸಾಗರದಿಂದ ೧೬ ಕಿ ಮಿ ದೂರದಲ್ಲಿ ಇದೆ. ಮಳೆಗಾಲದ ನೆರೆಗೆ ಪ್ರಸಿದ್ಧಿ, ದೀವರ ಹಾಡುಗಾರರು, ಹಸೆ ಚಿತ್ರಗಾರರು ಇಲ್ಲಿ ಇರುವರು.
                                     

4. ಸಾಹಿತ್ಯ-ಕಲೆ ಸೇವಾ ಸಂಸ್ಥೆಗಳು

 • ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆರಿ.ಸಾಗರ ಈ ಎರಡು ಸಂಸ್ಥೆಗಳು ಪ್ರತಿ ತಿಂಗಳಿಗೊಂದು ಹಾಗೂ ವಿಶೇಷ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.
 • ಸಹೃದಯ ಬಳಗ ರಿ. ಸಾಗರ ಸಂಸ್ಕೃತಸಾಗರ, ಶಿವಪ್ಪನಾಯಕ ನಗರ ಯುವಕ ಸಂಘ; ವಿನೋಬಾನಗರ ಯುವಕ ಸಂಘ ಮೊದಲಾದವು ಕಲೆ ಮತ್ತು ಸಾಹಿತ್ಯ ಸೇವೆಮಾಡುತ್ತಿವೆ.ಮಲೆನಾಡು ಗಮಕ ಕಲಾಸಂಘ ವು ಗಮಕ ಕಲೆಯ ಮೂಲಕ ಸತತ ೩೦ ವರ್ಷಗಳಿಂದ ಪ್ರಾಚೀನ ಕಾವ್ಯಗಳ ಪ್ರಸಾರ ಮಾಡುತ್ತಿದೆ.
 • ಶ್ರೀಬಿ.ಎಸ್.ಚಂದ್ರಶೇಖರಇವರು ಕನ್ನಡ ವಿಕಿಪೀಡಿಯಾಕ್ಕೂ ಮಾಹಿತಿ ಮತ್ತು ಮಾಹಿತಿ-ಲೇಖನಗಳನ್ನು ೨೦೧೦ ರಿಂದ ಹಾಕುತ್ತಿದ್ದಾರೆ.
 • ಕನ್ನಡ ಸಾಹಿತ್ಯ ಪರಿಷತ್ತು, ಒಡನಾಟ, ಸಂಗೀತ ಸಾಗರ, ಮಲೆನಾಡು ಗಮಕ ಕಲಾಸಂಘ
 • ಈಗ ಪ್ರತಿ ತಿಂಗಳೂ ಕಾರ್ಯಕ್ರಮ ನಡೆಸುತ್ತಿದೆ.ಅದಕ್ಕೆ ಶ್ರೀ ಕೆ.ಆರ್. ಕೃಷ್ಣಯ್ಯನವರು ಕಾರ್ಯಾಧ್ಯಕ್ಷರಾಗಿದ್ದು ಹೊಸಬಾಳೆ ಸೀತಾರಾಮ ರಾವ್ ಗೌರಾವಾಧ್ಯಕ್ಷರಾಗಿದ್ದಾರೆ. ಶ್ರೀ ಬಿ.ಎಸ್.ಚಂದ್ರಶೇಖರ-ಸಾಗರ ಇವರು ಕೋಶಾಧ್ಯಕ್ಷರಾಗಿದ್ದಾರೆ, ಶ್ರೀ ಕೆ.ರವೀಂದ್ರ ಮತ್ತು ಮನೆಘಟ್ಟದ ಶ್ರೀ ಎಂ.ಎಸ್.ನಾಗರಾಜ ಇವರು ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.ಶ್ರೀಎಂ.ಎಸ್.ನಾಗರಾಜ ಉತ್ತಮ ಗಮಕಿ-೬೭ವರ್ಷ-ದಿ.೧೨-೧೦-೨೦೧೪ದೈವಾಧೀನ.
                                     

5. ಜನ, ಮನ, ಭಾಷೆ

ಸಾಗರದ ಜನ ಸಾಮಾನ್ಯವಾಗಿ ಶಾಂತಿಪ್ರಿಯರು ಮತ್ತು ಸ್ನೇಹಪ್ರಿಯರು ಹಾಗೂ ಯುದ್ಧಪ್ರಿಯರು. ಹೆಚ್ಚಿನ ಜನರು ಜೀವನಕ್ಕೆ ವ್ಯವಸಾಯವನ್ನು ಅವಲಂಬಿಸಿದ್ದಾರೆ. ಅಡಿಕೆ ಸಾಗರದ ಪ್ರಮುಖ ಬೆಳೆ. ಭತ್ತ, ಕಬ್ಬು, ವೆನಿಲ್ಲಾ, ರಬ್ಬರ್ ಮತ್ತಿತರ ಬೆಳೆಗಳು ಕೂಡ ಪ್ರಚಲಿತದಲ್ಲಿವೆ. ಬಹಳ ಹವ್ಯಕರು ಸಾಗರದಲ್ಲಿ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ವಾಸಿಸುವುದರಿಂದ ಸಹಜವಾಗಿ ಸಾಗರದಲ್ಲಿ ಹವ್ಯಕ ಕನ್ನಡವೂ ಚಾಲ್ತಿಯಲ್ಲಿದೆ. ಹವ್ಯಕರು, ದೀವರು ಜನಾಂಗ ಇಲ್ಲಿ ಪ್ರಮುಖವಾದ ಪಂಗಡ. ಹೆಚ್ಚಿಜನ ಇಲ್ಲಿ ಶಿಕಾರಿ ಬೇಟೆ ಮಾಡುತ್ತಾರೆ.

                                     

6. ಪರಿಸರ

 • ಸಾಗರವು ಗುಡ್ಡ, ಕಾಡು, ಮೇಡುಗಳಿಂದ ಕೂಡಿದ ಪ್ರದೇಶ. ಸಾಗರದ ಬಹುಭಾಗ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಆವೃತವಾಗಿದೆ ಎನ್ನಬಹುದು. ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಜೊತೆಗೆ ಭತ್ತ, ತೆಂಗು, ಬಾಳೆ ಮುಂತಾದ ಬೆಳೆಗಳನ್ನೂ ಬೆಳೆಯುತ್ತಾ ರೆ. ಈ ತಾಲ್ಲೂಕು ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವುದರಿಂದ ಯಥೇಚ್ಚ ಕಾಡನ್ನೂ ಸಹ ಹೊಂದಿದೆ. ಈ ಕಾಡಿನಲ್ಲಿ ಕಾಳಿಂಗ ಸರ್ಪ, ಹುಲಿ, ಕಾಡೆಮ್ಮೆ, ಜಿಂಕೆ, ಕಾಡು ಕುರಿ, ಉಡ, ಕಾಡು ಹಂದಿ, ಕಡವೆ, ನವಿಲು, ಕೆಂದಳಿಲು ಮುಂತಾದ ವಿಶೇಷ ಪ್ರಾಣಿ ಪಕ್ಷಿಗಳನ್ನು ಕಾಣಬಹುದಾಗಿದೆ.
                                     

7. ಸಾಗರ ಜಿಲ್ಲೆಯ ಒತ್ತಾಯ

 • ಸಾಗರ ನಗರವನ್ನು ಕೇಂದ್ರವಾಗಿಟ್ಟುಕೊಂಡು ಸಾಗರ ಜಿಲ್ಲೆಯನ್ನು ರಚಿಸುವುದು ಅತ್ಯಂತ ಸೂಕ್ತ. ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳನ್ನು ಬಿಟ್ಟರೆ ಸಾಗರ ನಗರವು ಪ್ರಸ್ತುತ ಜಿಲ್ಲೆಯಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಎರಡನೇ ಅತಿದೊಡ್ಡ ನಗರ. ಮತ್ತು ರಾಷ್ಟ್ರೀಯ ಹೆದ್ದಾರಿ 206ರ ಮದ್ಯದಲ್ಲಿದ್ದು, ರೆವಿನ್ಯೂ ಉಪವಿಭಾಗದ ಕೇಂದ್ರವಾಗಿರುತ್ತದೆ.
 • ಈ ಉಪ ವಿಭಾಗಕ್ಕೆ ಸಾಗರ, ಸೊರಬ, ಹೊಸನಗರ, ಶಿಕಾರಿಪುರ ತಾಲ್ಲೂಕುಗಳು ಸೇರ್ಪಡೆಯಾಗಿರುತ್ತವೆ. ಸಾಗರ ನಗರದಲ್ಲಿ ಡಿಗ್ರಿ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜು, ಕಾನೂನು ಕಾಲೇಜು, ರಂಗಮಂದಿರ, ಆಧುನಿಕ ಶೈಲಿಯ ರೈಲ್ವೆ ನಿಲ್ದಾಣ, ಜಿಲ್ಲಾಮಟ್ಟದ ಮಾದರಿಯಲ್ಲಿ ಕಂದಾಯ ಉಪವಿಭಾಗದ ಕಚೇರಿ, ವಿಭಾಗಮಟ್ಟದ ಮೆಸ್ಕಾಂ, ಜಿಲ್ಲಾ ಪಂಚಾಯತ್ ಎಂಜನಿಯರಿಂಗ್, ಅರಣ್ಯ ವಿಭಾಗದ ಕಚೇರಿಗಳು, RTO ಕಚೇರಿ, ಕ್ರೀಡಾಂಗಣ, ಭವ್ಯವಾದ ಪ್ರವಾಸಿ ಮಂದಿರಗಳು ತಲೆ ಎತ್ತಿ ನಿಂತು ಸಾಗರ ನಗರವನ್ನು ಸುಂದರವಾದ ನಗರವನ್ನಾಗಿ ಮಾಡಿವೆ.
 • ವಿಶ್ವವಿಖ್ಯಾತ ಜೋಗ್‌ಫಾಲ್ಸ್, ಸಿಗಂದೂರು, ವರದಹಳ್ಳಿ. ಇಕ್ಕೇರಿ, ಕೆಳದಿ, ಮುಂತಾದ ಪ್ರೇಕ್ಷಣೀಯ ಸ್ಥಳಗಳ ನೆಲೆವೀಡಾಗಿದ್ದು, ಪ್ರವಾಸಿಗರ ಮನಸೆಳೆಯುವ ಅತ್ಯಾಕರ್ಷಕ ಹಸಿರು ಹೊದಿಕೆಯ ಮಲೆನಾಡಿನ ಕೇಂದ್ರವಾಗಿದೆ. ಮಾರುಕಟ್ಟೆ ಕೇಂದ್ರ ಕೂಡ. ಕಾಗೋಡು ಸತ್ಯಾಗ್ರಹ, ಉಳುವವನೇ ಭೂಮಿಯ ಒಡೆಯ ಮುಂತಾದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಹೋರಾಟದ ಭೂಮಿಯಾದ ಸಾಗರವು ಇತಿಹಾಸ ಪ್ರಸಿದ್ಧವಾಗಿದೆ. ಶಿವಮೊಗ್ಗ ಜಿಲ್ಲೆ ವಿಭಜಿಸಿ ಸಾಗರ, ಸೊರಬ, ಹೊಸನಗರ,ಶಿಕಾರಿಪುರ ತಾಲ್ಲೂಕುಗಳನ್ನೊಳಗೊಂಡ ಸಾಗರ ಜಿಲ್ಲೆಯನ್ನು ರಚಿಸುವ ಒತ್ತಾಯವೂ ಇದೆ.


                                     

8. ತಲುಪುವುದು ಹೇಗೆ

ಬೆಂಗಳೂರು ನಗರದಿಂದ ನೇರವಾಗಿ ಬಸ್ಸು ಮತ್ತು ರೈಲಿನ ಸಂಪರ್ಕವಿದೆ. ರಾ.ಹೆ.೨೦೬ರಲ್ಲಿ ಚಲಿಸುವ ಖಾಸಗಿ ಮತ್ತು ಸರ್ಕಾರಿ ಹವಾನಿಯಂತ್ರಿತ ಬಸ್ಸುಗಳಲ್ಲಿ ೮ ಗಂಟೆಗಳ ಅವಧಿಯಲ್ಲಿ ಸಾಗರ ತಲುಪಬಹುದು. ಇದಲ್ಲದೆ ರಾಜ್ಯದ ಇತರ ಪ್ರಮುಖ ಪಟ್ಟಣಗಳು ಮತ್ತು ತಿರುಪತಿ,ಚನ್ನೈ,ಮುಂಬಯಿ ಮುಂತಾದ ಪಟ್ಟಣಗಳೊಂದಿಗೆ ನೇರವಾದ ಬಸ್ಸಿನ ಸಂಪರ್ಕವಿದೆ.

                                     

9. ೨೦೧೩ ರ ಮೇ ೫ ನೇ ತಾರೀಕು ನಡೆದ ಚುನಾವಣೆ ಮತ್ತು ಫಲಿತಾಂಶ

ಸಾಗರ ವಿಧಾನಸಭೆ ಚುನಾವಣೆ 2೦13 ಕಾಗೋಡು ತಿಮ್ಮಪ್ಪ -ಲೀಡು-ಮತ್ತು ಪಡೆದ ಓಟು- lead 41248 ; ಕಾಂಗ್ರಸ್- 71.960; 0.53%ಚಲಾವಣೆ ಓಟಿನಲ್ಲಿ ;40 %ಒಟ್ಟು ಓಟಿನಲ್ಲಿ ಬಿ.ಆರ್. ಜಯಂತ್ Runner up:ಕೆಜೆಪಿ ಕರ್ನಾಟಕ ಜನತಾಪಾರ್ಟಿ 30712:23 %ಚಲಾವಣೆ ಓಟಿನಲ್ಲಿ ಬೇಳೂರು ಗೋಪಾಲ ಕೃಷ್ಣ ಜೆಡಿಎಸ್ JDS 23217:17%ಚಲಾವಣೆ ಓಟಿನಲ್ಲಿ ಶರಾವತಿ ಪಿ.ರಾವ್ ಬಿಜೆಪಿ BJP 5355 4% ಪಿಆರ್. ಕೃಷ್ಣಪ್ಪ ಲೋಕ ಸತ್ತಾ ಪಾರ್ಟಿ, 2302 2.%ಚಲಾವಣೆ ಓಟಿನಲ್ಲಿ ಕೆ.ಎನ್ ವೆಂಕಟೇಶ್ ಬಿಎಸ್.ಪಿ. BSP 549:0.039934%ಚಲಾವಣೆ ಓಟಿನಲ್ಲಿ ಗಣೇಶ್ ಬಿ. ಬೆಳ್ಳಿ BSR 42 ದಿನೇಶ ಬರದವಳ್ಳಿ. JDU 378೦.002%ಚಲಾವಣೆ ಓಟಿನಲ್ಲಿ
                                     

9.1. ೨೦೧೩ ರ ಮೇ ೫ ನೇ ತಾರೀಕು ನಡೆದ ಚುನಾವಣೆ ಮತ್ತು ಫಲಿತಾಂಶ ಸಾಗರ ತಾಲ್ಲೂಕಿನ ಮತದಾರರ ವಿವರ ಮತ್ತು ಫಲಿತಾಂಶ

 • ಕರ್ನಾಟಕದ ವಿಧಾನಸಭೆಯ ಸ್ಪೀಕರ್ / ಅಧ್ಯಕ್ಷರಾಗಿ ಸಾಗರ ತಾಲ್ಲೂಕಿನ ಕಾಗೋಡು ತಿಮ್ಮಪ್ಪನವರು ಸರ್ವಾನುಮತದಿಂದ ದಿ ೩೧-೫-೨೦೧೩ ಶುಕ್ರವಾರ ಆಯ್ಕೆಯಾದರು.
 • ಪೂರ್ಣ ಮಟ್ಟದ ಮಂತ್ರಿ ಮಂಡಲ ರಚನೆ ;ಕ್ಯಾಬಿನೆಟ್ ದರ್ಜೆ ೨೧ ಜನ; ರಾಜ್ಯ ಸಚಿವರು ೮ ಜನ- - ೧೮-೫-೨೦೧೩
 • ಮತದಾರರು - ಸಾಗರ -ಗಂಡಸರು - ೮೮೭೪೦; ಹೆಂಗಸರು- ೮೯೭೪೦೪ ; ಒಟ್ಟು - ೧೭೯೬೮೩
 • ಎಣಿಕೆ ೮-೫-೨೦೧೩, ಮುಖ್ಯಮಂತ್ರಿ ಸಿದ್ದ ರಾಮಯ್ಯ ನವರ ಪ್ರಮಾಣ ವಚನ ೧೩-೫-೨೦೧೩ ಸೋಮವಾರ;
 • ಮತ ಚಲಾಯಿಸಿದವರು -೧,೩೪,೫೧೫ - ಶೇಕಡ ೭೪.೮೬ ;
 • ೨೦೧೩ ರ ಮೇ ೫ ನೇ ತಾರೀಕು ನಡೆದ ಚುನಾವಣೆ.
                                     

10. ಸಾನಗರ ಸಭೆ

 • ಸಾನಗರ ಸಭೆ ಮತ್ತು ಫಲಿತಾಂಶ-3ಮಾರ್ಚಿ/2013
 • ೨೦೧೪ ಮಾರ್ಚಿಯಲ್ಲಿ ಮೀಸಲಾತಿ ನಿಯಮದಲ್ಲಿ ಶ್ರೀಮತಿ ಲಲಿತಮ್ಮ.ಎನ್ ಕಾಂಗ್ರೆಸ್ ಇವರು ಅವಿರೋಧವಾಗಿ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು.
                                     

11. ಕಾಲೇಜುಗಳು:

 • ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್.
 • ಕೆ.ಹೆಚ್.ಶ್ರೀನಿವಾಸ ಸ್ನಾತಕೋತ್ತರ ಅಧ್ಯಯನ ಸಂಸ್ಥೆ.
 • ಇಂದಿರಾಗಾಂಧಿ ಮಹಿಳಾ ಕಾಲೇಜು.
 • ಎಂ.ಡಿ.ಎಫ್. ಸ್ವತಂತ್ರ ಪದವಿ ಪೂರ್ವ ಕಾಲೇಜು
 • ಲಾಲ್ ಬಹಾದ್ದೂರ್ ಕಲಾ ಮತ್ತು ವಿಜ್ಞಾನ ಹಾಗೂ ಎಸ್ ಬಿ ಸೊಲಬಣ ಶೆಟ್ಟಿ ವಾಣಿಜ್ಯ ಕಾಲೇಜು.

ಸಾಹಿತಿಗಳು/ಲೇಖಕರು

                                               

ನಾರಾಯಣಪುರ ಜಲಾಶಯ

ನಾರಾಯಣಪುರ ಜಲಾಶಯವು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ರಾಜ್ಯದ ಮೂರನೇ ದೊಡ್ಡ ಆಣೆಕಟ್ಟು ಎಂದು ಪ್ರಸಿದ್ಧಿ ಪಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಾರಾಯಣಪುರ ಎಂಬಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ವಿಜಯಪುರ, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ನೀರಾವರಿ ಉದ್ದೇಶಗಳಿಗಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಇದರ ಜಲಾಶಯವನ್ನು ಬಸವ ಸಾಗರ ಜಲಾಶಯ ಎಂಬ ಇನ್ನೂಂದು ಹೆಸರಿನಿಂದ ಕರೆಯಲಾಗುತ್ತದೆ.

ಲಾಲ ಬಹದ್ದೂರ ಶಾಸ್ತ್ರಿ ಸಾಗರ
                                               

ಲಾಲ ಬಹದ್ದೂರ ಶಾಸ್ತ್ರಿ ಸಾಗರ

ಆಲಮಟ್ಟಿಯಿಂದ ೨ ಕಿ.ಮೀ. ಲಾಲ ಬಹದ್ದೂರ ಶಾಸ್ತ್ರಿ ಸಾಗರ ಇದೆ. ಜಲಾಶಯದ ಗರಿಷ್ಠ ಮಟ್ಟ ೨೮೫೮.೬೫ ಅಡಿ. ಕೃಷ್ಣಾ ನದಿವೆ ಕಟ್ಟಲಾಗಿದೆ. ಇದನ್ನು ೨೦೧೦ರಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ಎ.ಪಿ.ಜೆ.ಅಬ್ದುಲ್ ಕಲಾಮ್ ರವರು ಉದ್ಘಾಟಿಸಿದರು.ಆಲಮಟ್ಟಿ ಆಣೆಕಟ್ಟನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಎಂದು ನಾಮಕರಣ ಮಾಡಲಾಗಿದೆ.ಶಾಸ್ತ್ರೀಯವರು ಆಣೆಕಟ್ಟಿನ ಅಡಿಗಲ್ಲು ಸಮಾರಂಭವನ್ನು ೧೯೬೪ರಲ್ಲಿ ಮಾಡಿದ್ದರು. ಅಣೆಕಟ್ಟೆಯ ಕೆಲಸ ಮುಗಿದ ವರ್ಷ ಜುಲೈ ೨೦೦೫. ಅಣೆಕಟ್ಟೆಯ ಎತ್ತರ - ೫೨.೨೫ ಮಿ., ಉದ್ದ - ೧೫೬೫.೧೫ ಮಿ.

ತಿಪ್ಪಗೊಂಡನಹಳ್ಳಿ ಜಲಾಶಯ
                                               

ತಿಪ್ಪಗೊಂಡನಹಳ್ಳಿ ಜಲಾಶಯ

ತಿಪ್ಪಗೊಂಡನಹಳ್ಳಿ ಜಲಾಶಯ ಅಥವಾ ಟಿ.ಜಿ. ಹಳ್ಳಿ ಜಲಾಶಯ ಅಥವಾ ಚಾಮರಾಜ ಸಾಗರ ಅರ್ಕಾವತಿ ನದಿ ಹಾಗು ಕುಮುದಾವತಿ ನದಿ ಕೂಡುವ ಸ್ಥಳದಲ್ಲಿ ಅಡ್ಡವಾಗಿ ನಿರ್ಮಿಸಿರುವ ಒಂದು ಜಲಾಶಯ. ಇದು ಬೆಂಗಳೂರು ಮಾಗಡಿ ಮುಖ್ಯ ರಸ್ತೆಯಲ್ಲಿ ಬೆಂಗಳೂರಿನಿಂದ ಸುಮಾರು ೩೫ ಕಿ.ಮೀ ದೂರದಲ್ಲಿದೆ. ಇದನ್ನು ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡಲು ೧೯೩೩ ನಿರ್ಮಿಸಲಾಯಿತು. ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ನವರ ಮೇಲುಸ್ತುವಾರಿಯಲ್ಲಿ ಇದರ ನಿರ್ಮಾಣವಾಯಿತು.

ಹೆಗ್ಗೋಡು
                                               

ಹೆಗ್ಗೋಡು

ಹೆಗ್ಗೋಡು ಕರ್ನಾಟಕದ ಸಾಗರ ತಾಲ್ಲೂಕಿನ ಒಂದು ಹಳ್ಳಿ. ಇಲ್ಲಿನ ಸಂಸ್ಥೆಗಳ ಕಾರಣದಿಂದಾಗಿ, ಇದು ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಮುಖ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ. ಈ ಸ್ಥಳವು ಸಾಗರಕ್ಕೆ ಸಮೀಪ ಇರುವುದರಿಂದ, ರೈಲು ಮತ್ತು ರಸ್ತೆಗಳಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ಸ್ಥಳವು ಸಾಗರ, ಹೊಸನಗರ ಮುಂತಾದ ಹತ್ತಿರದ ಸ್ಥಳಗಳಿಗೆ ಪ್ರಯಾಣಿಸಲು ಸ್ಥಳೀಯ ಬಸ್ ಸೌಲಭ್ಯಗಳನ್ನು ಹೊಂದಿದೆ.

                                               

ಚೀಲನೂರು

ಚೀಲನೂರು ಶಿವಮೊಗ್ಗ ಜಿಲ್ಲೆ ಯಲ್ಲಿನ ಸೊರಬ ತಾಲುಕಿನ ಒಂದು ಚಿಕ್ಕ ಹಳ್ಳಿ ಇದು ಸೊರಬದಿಂದ ಸಾಗರ ರಸ್ತೆಯಲ್ಲಿ ಬರುತ್ತದೆ.ದಂಡಾವತಿಯ ತೀರದಲ್ಲಿರುವ ಇದು ಸಮುದ್ರಮಟ್ಟದಿಂದ ಅಂದಾಜು ೫೮೦ ಮೀಟರ್ ಎತ್ತರದಲ್ಲಿದೆ. ಈ ಊರಿನಲ್ಲಿ ಕಲ್ಲೆಶ್ವರ ದೇವಸ್ಥಾನವು ಪ್ರಸಿದ್ದ ವಾಗಿದೆ.ಹಾಗು ಇಲ್ಲಿ ಮನೆಘಟ್ಟದವರ ಮನೆತನವು ಅತೀ ಪ್ರಸಿದ್ದ ವಾಗಿದೆ. ಇಲ್ಲಿನ ಜನರ ಮುಖ್ಯ ಕಸುಬು ವ್ಯವಸಾಯ.

ಶಿರಾಳಕೊಪ್ಪ
                                               

ಶಿರಾಳಕೊಪ್ಪ

ಶಿರಾಳಕೋಪ್ಪ ಪಟ್ಟಣ ಶಿಕಾರಿಪುರ ತಾಲ್ಲೂಕಿನ ಪ್ರಮುಖ ಪಟ್ಟಣ. ಇತಿಹಾಸದಲ್ಲಿ ಬರುವ ಭಕ್ತ ಸಿರಿಯಾಳನಿಂದ ಇದಕ್ಕೆ ಈ ಹೆಸರು ಬಂತೆಂದು ಪ್ರತೀತಿ. ಆದರೆ ಇಲ್ಲಿ ಆಗಿನ ಕಾಲದ ಯಾವುದೆ ದಾಖಲೆಗಳಿಲ್ಲ. ಇದು ಶಿಕಾರಿಪುರದಿಂದ ಸುಮಾರು 19 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಸೊರಬ ಸುಮಾರು 18 ಕಿ.ಮೀ, ಸಾಗರ ಸುಮಾರು 40 ಕಿ.ಮೀ ಹಾಗೂ ಹಿರೆಕೆರೂರು ಸುಮಾರು 20 ಕಿ.ಮೀ ದೂರದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಶಿರಾಳಕೊಪ್ಪ ವಾಣಿಜ್ಯ ನಗರಿಯಾಗಿ ಬದಲಾಗುತ್ತಿದೆ.

                                               

ಬಾಪಟ್

ಬಾಪಟ್ ಕುಟುಂಬದ ಮೂಲವು ಮಹಾರಾಷ್ಟ್ರದ ಕರಾವಳಿಯೆಂಬ ಪ್ರತೀತಿ ಇದೆ. ಅಲ್ಲಿಂದ ಕಾಲಾಂತರದಲ್ಲಿ ಜಗತ್ತಿನೆಲ್ಲೆಡೆ ಹರಡಿದ ಬಾಪಟ್ ಬಾಂಧವರು ಇಂದು ಮುಖ್ಯವಾಗಿ, ಕರ್ನಾಟಕ ಸೊರಬ,ಸಾಗರ, ಬೆಂಗಳೂರು, ಮಹರಾಷ್ಟ್ರದಲ್ಲಿ ಮುಂಬಯಿ, ಪೂಣೆ, ರತ್ನಾಗಿರಿ, ಮತ್ತಿತರ ಭಾಗಗಳಳಲ್ಲಿ ಕಂಡುಬರುತ್ತಾರೆ.

ಯುಟಿಸಿ+5:30
                                               

ಯುಟಿಸಿ+5:30

UTC+05:30 UTC ದ +05:30 ಸಮಯದ ಅಂತರವನ್ನು ಗುರುತಾಗಿದೆ. ಈ ಸಮಯವನ್ನು ಭಾರತ ಮತು ಶ್ರೀಲಂಕಾ ದಲ್ಲಿ ಬಳಸುತ್ತಾರೆ. ಇದು ಗ್ರೀನ್‌ವಿಚ್ ಸರಾಸರಿ ಕಾಲಮಾನ ಅಥವಾ GMT ಗಿಂತ ೫ಗಂಟೆ ೩೦ ನಿಮಿಷಗಳಿಂದ ಮುಂದಿದೆ. ಇದನ್ನು ಕುನ್ಲುನ್ ಸಮಯವಲಯಕ್ಕೆ ಬಳಸಲಾಗಿದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →