Back

ⓘ ಓಷಿಯಾನಿಯ: ಪೆಸಿಫಿಕ್ ಸಾಗರದ ದ್ವೀಪಗಳ ಪ್ರದೇಶಕ್ಕೆ ಸಾಮಾನ್ಯವಾಗಿ ಈ ಹೆಸರಿದೆ. ಏಷ್ಯ ಮತ್ತು ಅಮೆರಿಕ ಖಂಡಗಳ ನಡುವಣ ಎಲ್ಲ ಭೂಪ್ರದೇಶಗಳನ್ನೂ ಇದರ ವ್ಯಾಪ್ತಿಯೊಳಗೆ ಸೇರಿಸುವುದು ಕೆಲವು ಲೇಖಕರ ಪದ ..
                                     

ⓘ ಓಷಿಯಾನಿಯ

ಓಷಿಯಾನಿಯ: ಪೆಸಿಫಿಕ್ ಸಾಗರದ ದ್ವೀಪಗಳ ಪ್ರದೇಶಕ್ಕೆ ಸಾಮಾನ್ಯವಾಗಿ ಈ ಹೆಸರಿದೆ. ಏಷ್ಯ ಮತ್ತು ಅಮೆರಿಕ ಖಂಡಗಳ ನಡುವಣ ಎಲ್ಲ ಭೂಪ್ರದೇಶಗಳನ್ನೂ ಇದರ ವ್ಯಾಪ್ತಿಯೊಳಗೆ ಸೇರಿಸುವುದು ಕೆಲವು ಲೇಖಕರ ಪದ್ಧತಿ. ಇವರ ಪ್ರಕಾರ ಆಸ್ಟ್ರೇಲಿಯ ಮತ್ತು ನ್ಯೂಜಿûೕಲೆಂಡ್ ಕೂಡ ಇದರಲ್ಲಿ ಸೇರುತ್ತವೆ. ಉಷ್ಣವಲಯದ ಪ್ರದೇಶಗಳಲ್ಲದ ರ್ಯುಕ್ಯು ಮತ್ತು ಅಲ್ಯೂಷಿಯನ್ ದ್ವೀಪಗಳನ್ನೂ ಜಪಾನ್ ದ್ವೀಪಸ್ತೋಮವನ್ನೂ ಇದರಿಂದ ಹೊರಗು ಮಾಡುವುದು ಹೆಚ್ಚು ಸೂಕ್ತವೆನಿಸಬಹುದು. ಇಂಡೋನೇಷ್ಯ, ಫಿಲಿಪೀನ್ಸ್‌ ಮತ್ತು ಫಾರ್ಮೋಸ ದ್ವೀಪಗಳ ನಿವಾಸಿಗಳು ಏಷ್ಯನರ ನಿಕಟ ಸಂಬಂಧಿಗಳಾದ್ದರಿಂದ ಅವನ್ನೂ ಹೊರಗಿಡುವುದು ಇನ್ನೂ ನಿಷ್ಕೃಷ್ಟವೆನಿಸುತ್ತದೆ. ಹೀಗೆ ಮಾಡಿದರೆ ಪಾಲಿನೇಷ್ಯ, ಮಲನೇಷ್ಯ ಮತ್ತು ಮೈಕ್ರೊ ನೇಷ್ಯಗಳು ಓಷಿಯಾನಿಯವೆನಿಸಿಕೊಳ್ಳುತ್ತವೆ. ಈ ಪ್ರದೇಶದ ಭೂಪಟ ತಯಾರಿಸಿದ ಐರೋಪ್ಯರು ಓಷಿಯಾನಿಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ. ಆಸ್ಟ್ರೇಲಿಯವೇ ಮೊದಲನೆಯದು. ನ್ಯೂಗಿನಿಯಿಂದ ಫೀಜಿಯವರಗಿನ ಪ್ರದೇಶವಾದ ಮೆಲನೇಷ್ಯ ಎರಡನೆಯ ಭಾಗ. ಮೂರನೆಯ ಮೈಕ್ರೊನೇಷ್ಯದಲ್ಲಿ ಮೇರಿಯಾನ, ಕ್ಯಾರೊಲೈನ್, ಮಾರ್ಷಲ್ ಮತ್ತು ಗಿಲ್ಬರ್ಟ್ ದ್ವೀಪಗಳು ಸೇರಿವೆ. ನಾಲ್ಕನೆಯದು ಪಾಲಿನೇಷ್ಯ. ಇದು ಹವಾಯಿ, ನ್ಯೂಜಿûೕಲೆಂಡ್ ಮತ್ತು ಈಸ್ಟರ್ಗಳನ್ನೊಳಗೊಂಡ ಹಲವು ದ್ವೀಪಗಳ ಒಂದು ತ್ರಿಕೋಣ. ಸಾಗರಿಕ ಪ್ರದೇಶವನ್ನು ಮಾತ್ರವೇ ಓಷಿಯಾನಿಯವೆಂದು ಕರೆಯುವುದಾದರೆ ಉತ್ತರ ದಕ್ಷಿಣ ಅಕ್ಷಾಂಶ 300ಗಳ ನಡುವಣ ದ್ವೀಪಗಳನ್ನೂ ಅಗ್ನಿಶಿಲಾಭೂಯಿಷ್ಠ ಜ್ವಾಲಾಮುಖಿಗಳನ್ನೂ ಹವಳ ದ್ವೀಪಗಳನ್ನೂ ಮಾತ್ರವೇ ಪರಿಗಣಿಸಬೇಕಾಗುತ್ತದೆ. ಓಷಿಯಾನಿಯದ ನಾನಾ ವಿಭಾಗಗಳ ಭೂವಿವರಣೆ, ಇತಿಹಾಸ ಮುಂತಾದುವಕ್ಕೆ.

                                     

1. ಓಷಿಯಾನಿಯ ಪ್ರದೇಶ

ಓಷಿಯಾನಿಯ ಪ್ರದೇಶದಲ್ಲಿ ಚಿಕ್ಕ ದೊಡ್ಡ ದ್ವೀಪಗಳೂ ಜ್ವಾಲಾಮುಖಿಗಳ ಮತ್ತು ಹವಳದ ನೆಲಗಳೂ ಬೆಟ್ಟಗಳೂ ಮೈದಾನಗಳೂ ಇರುವುದಾದರೂ ಒಟ್ಟಿನಲ್ಲಿ ಇಲ್ಲಿರುವ ಜನರೆಲ್ಲರಿಗೂ ಸಮುದ್ರದ ಪ್ರಭಾವದ ಫಲವಾಗಿ ಒಂದೇ ಬಗೆಯ ಸಂಸ್ಕೃತಿಯಿದೆ. ನ್ಯೂಗಿನಿಯ ಮತ್ತು ಮೆಲನೇಷ್ಯದ ಇತರ ಪ್ರದೇಶಗಳ ಜನರ ಸಂಸ್ಕೃತಿ ಮಾತ್ರ ಭಿನ್ನ ಬಗೆಯದು. ಇಲ್ಲಿಯ ಪೊದೆವಾಸಿಗಳಿಗೂ ಸಮುದ್ರಕ್ಕೂ ಬಹಳ ದೂರ. ಸಾಗರಿಕ ಪದಾರ್ಥಗಳಿಗಾಗಿ ಇವರು ‘ಉಪ್ಪುನೀರಿನ’ ಜನರೊಂದಿಗೆ ವ್ಯಾಪಾರ ನಡೆಸುತ್ತಾರೆ. ಇವರನ್ನು ಬಿಟ್ಟರೂ ಒಟ್ಟಿನಲ್ಲಿ ಇಲ್ಲಿಯ ಮೂಲನಿವಾಸಿಗಳ ಕೆಲವು ಸಾಮಾನ್ಯ ಲಕ್ಷಣಗಳನ್ನು ಗುರುತಿಸುವುದು ಸಾಧ್ಯ.

                                     

2. ಜನತೆ

ಶÀರೀರ ಲಕ್ಷಣಗಳಿಗೆ ಅನುಗುಣವಾಗಿ ಓಷಿಯಾನಿಯದ ಜನರನ್ನು 5 ಗುಂಪುಗಳಾಗಿ ವಿಂಗಡಿಸಬಹುದು: 1. ಕಾಕಸಾಯಿಡ್ ವಿಭಾಗಕ್ಕೆ ಸೇರಿದ ಪಾಲಿನೇಷ್ಯನರು; 2. ಮಂಗೋಲಾಯಿಡರೆನ್ನಬಹುದಾದ ಮೈಕ್ರೋನೇಷ್ಯನ್ನರು; 3. ಮೆಲನೇಷ್ಯನರು; 4.ಪ್ಯಾಪವನರು ಮತ್ತು 5. ನಿಗ್ರೀಟೋಗಳು. ಇವರು ನೀಗ್ರಾಯಿಡರು, ನಿಗ್ರೀಟೋಗಳು ಸಾಗರಿಕ ಕುಬ್ಜರು; ಬಲು ಹಿಂದುಳಿದವರು. ಇವರು ಪಾಪುವನರ ಪ್ರಾಚೀನ ಶಾಖೆಯೆಂದೇ ಅನೇಕರ ಮತ. ಇವರ ಸರಾಸರಿ ಎತ್ತರ 4ದಿ 9ಶಿ ಕೂದಲು ತುಂಡ, ಉಣ್ಣೆಯ ತೆರ, ತಲೆ ದುಂಡು, ಮೂಗು ಅಗಲ, ಕಪ್ಪಿನಿಂದ ಹಳದಿ ಮಿಶ್ರಿತ ಕಂದಿನ ವರೆಗೆ ಮೈಬಣ್ಣ. ಪಾಪುವನರು ನ್ಯೂ ಗಿನಿಯ ಬಹು ಭಾಗದಲ್ಲೂ ಆಗ್ನೇಯದ ತುದಿಯಲ್ಲೂ ವಾಸವಾಗಿದ್ದಾರೆ. ಇವರದು ಮಿಶ್ರಮಾದರಿ. ಉದ್ದ ತಲೆ, ಹಿಂದೂಡಿದ ಹಣೆ, ದಪ್ಪ ಹುಬ್ಬು, ದೊಡ್ಡ ಮೂಗು, ದಟ್ಟ ಚಾಕೊಲೇಟಿನ ಮೈಬಣ್ಣ, ಉಣ್ಣೆ ಕೂದಲು, ಒತ್ತು ಗಡ್ಡ, 5ದಿ 2ಶಿ ದಿಂದ 5ದಿ 7ಶಿವರೆಗೆ ಎತ್ತರ, ನ್ಯೂಗಿನಿಯ ಆಗ್ನೇಯ ಭಾಗದಲ್ಲಿ ಫೀಜಿ ದ್ವೀಪಗಳ ವರೆಗೂ ಅಲ್ಲಿಂದ ನ್ಯೂ ಕ್ಯಾಲೆಡೊನಿಯದವರೆಗೂ ಇರುವ ಪ್ರದೇಶದ ಮೂಲನಿವಾಸಿಗಳು ಮೆಲನೇಷ್ಯನರು. ಇವರು ಬಹುಶಃ ಪಾಪುವನರಿಂದ ಬಂದವರು. ಆದರೆ ಇಲ್ಲಿಗೆ ವಲಸೆ ಬಂದ ಹಲವಾರು ಪಂಗಡಗಳೊಂದಿಗೆ ಮಿಶ್ರವಾಗಿ ವೈವಿಧ್ಯಮಯ ವಾಗಿದ್ದಾರೆ. ಇವರದೂ ಉದ್ದ ತಲೆ, ಚಿಕ್ಕದೂ ನೇರವೂ ಅಗಲವೂ ಅದ ಮೂಗು, ಮುಖ ಹೆಚ್ಚು ದುಂಡು, ತುಟಿ ದಪ್ಪ, ಸೊಟ್ಟ ಕಣ್ಣು, ಕಾಫಿಯ ಮೈಬಣ್ಣ, ಗುಂಗುರು ಕೂದಲು. ಇವರು ಸಾಧಾರಣವಾಗಿ ಕುಳ್ಳು. ನ್ಯೂಜಿûೕಲೆಂಡ್, ಹವೈಯನ್ ದ್ವೀಪಗಳು ಮತ್ತು ಈಸ್ಟರ್ ದ್ವೀಪಗಳ ತ್ರಿಭುಜ ಪ್ರದೇಶದಲ್ಲಿರುವವರು ಪಾಲಿನೇಷ್ಯನರು. ಪುರ್ವ ಪೆಸಿಫಿಕಿನಲ್ಲೂ ಮಧ್ಯ ಪೆಸಿಫಿಕಿನ ಬಹು ಭಾಗದಲ್ಲೂ ಇವರೇ ಇದ್ದಾರೆ. ಇತರರಿಗಿಂತ ಇವರಲ್ಲಿ ಸಮಾನ ಲಕ್ಷಣಗಳು ಹೆಚ್ಚು. ಅಗಲವಾದ ಎತ್ತರ ಹಣೆ, ದೊಡ್ಡ ನೀರ ಮೂಗು, ಮಾಟವಾದ ತುಟಿ, ಅಲೆ ಅಲೆ ಕೂದಲು, ಬಿಳಿಯಿಂದ ಕಂದಿನ ವರೆಗೆ ಮೈಬಣ್ಣ, ಸರಾಸರಿಯಲ್ಲಿ 5’ 9” ಎತ್ತರ. ಮೈಕ್ರೋನೇಷ್ಯನರೂ ಸ್ಥೂಲವಾಗಿ ಪಾಲಿನೇಷ್ಯನರನ್ನೇ ಹೋಲುತ್ತಾರೆ. ಪಶ್ಚಿಮದ ಕಡೆಯಲ್ಲಿರುವವರು ಮಂಗೋಲಾಯಿಡರ ಲಕ್ಷಣ ಪಡೆದಿದ್ದಾರೆ. ಸಾಮಾನ್ಯವಾಗಿ ಅವರದು ಉಬ್ಬಿದ ಉದ್ದ ಹಣೆ, ಅಗಲ ಕಪೋಲ ಮೂಳೆ, ದಪ್ಪ ಮೂಗು, ಅಗಲ ಬಾಯಿ. ನ್ಯೂ ಗಿನಿಯ ಉತ್ತರಕ್ಕೆ ಪೆಲೂ, ಕ್ಯಾರೊಲೈನ್, ಮಾರ್ಷಲ್ ಮತ್ತು ಗಿಲ್ಬರ್ಟ್ ದ್ವೀಪ, ಸಮೋವದ ಉತ್ತರದ ದ್ವೀಪಗಳು ಈ ಜನರ ವಾಸಸ್ಥಾನ.

                                     

3. ಬುಡಕಟ್ಟು ಜನಾಂಗ

ಈ ನಾನಾ ಬುಡಕಟ್ಟುಗಳ ಜನ ಎಲ್ಲಿಂದ ಬಂದರು, ಎಲ್ಲೆಲ್ಲಿ ಸಂಚರಿಸಿ ನೆಲೆಸಿದರು-ಎಂಬ ವಿಚಾರವಾಗಿ ನಾನಾ ವಾದಗಳುಂಟು. ಇಲ್ಲೊಂದು ದೊಡ್ಡ ಭೂಖಂಡ ಇತ್ತು; ಅದು ಮುಳುಗಿಹೋಯಿತು; ಅದರ ಪರ್ವತಶಿಖರಗಳು ಮಾತ್ರ ಉಳಿದಿವೆ; ಆದ್ದರಿಂದ ಈ ವಿಶಾಲ ಪ್ರದೇಶದ ದ್ವೀಪಗಳ ಜನರಲ್ಲಿ ಸಾಮಾನ್ಯ ಲಕ್ಷಣಗಳು ಇರುವುದು ಸಹಜ- ಎಂಬುದೊಂದು ವಾದ. ಆದರೆ ಈ ವಾದವನ್ನು ಸ್ಥಾಪಿಸಲು ಸಾಮಗ್ರಿಯೇನೂ ಇಲ್ಲ. ಕ್ಯಾರೊಲೈನ್ಗಳ ಪೋನಪೇ ಮತ್ತು ಕೂಸೈಯೆಗಳಲ್ಲಿರುವ ಪಳಿಯುಳಿಕೆಗಳನ್ನು ಪರೀಕ್ಷಿಸುವ ಕೆಲವರು ಇವಕ್ಕೂ ಈಜಿಪ್ಟಿನ ಪಿರಮಿಡುಗಳಿಗೂ ಸಂಬಂಧವುಂಟೆಂದೂ ಆ ಸೂರ್ಯಪುತ್ರರು ಬಲು ಹಿಂದೆ ಮುತ್ತು ಚಿನ್ನಗಳಿಗಾಗಿ ಇಲ್ಲಿಗೆ ಬಂದಿರಬಹುದೆಂದೂ ಹೇಳುತ್ತಾರೆ. ಆದರೆ ಇದೂ ಬರಿಯ ಊಹೆ ಮಾತ್ರ. ಈ ಪಳೆಯುಳಿಕೆಗಳು ಆ ಕಾಲದಿಂದ ಬಲು ಈಚೆಗಿನ ಪಾಲಿನೇಷ್ಯನ್ ಸಂಸ್ಕೃತಿವಿನ್ಯಾಸಗಳೆಂಬುದು ಹೆಚ್ಚು ಸಮಂಜಸ. ಈಸ್ಟರ್ ದ್ವೀಪದ ಲಿಪಿಗೂ ಮೊಹೆಂಜೊದಾರೊದವಕ್ಕೂ ಸಂಬಂಧ ಕಲ್ಪಿಸುವ ಪ್ರಯತ್ನವೂ ನಡೆದಿದೆ. ಆದರೆ ಈ ಸಂಬಂಧ ಕೇವಲ ಬಾಹ್ಯವಾದದ್ದು. ಇವೆರಡಕ್ಕೂ ಸಮಾನವಾದ ಅಕ್ಷರಗಳಿಗಿಂತ ಭಿನ್ನವಾದವೇ ಅಧಿಕ. ಈಸ್ಟರ್ ದ್ವೀಪದ ಲಿಪಿಗೆ ಬಹುಶಃ ಧ್ವನಿಮೌಲ್ಯವಿದ್ದಿರಲಾರದು. ಅದು ನಿರೂಪಕನಿಗೆ ಅವನ ಅನುಭವವನ್ನು ನೆನಪಿಸಿಕೊಡುವ ಭಾವದ ಸೂಚಕವಾಗಿದ್ದಿರಬೇಕು. ಪಾಲಿನೇಷ್ಯನರ ಮೂಲಪುರುಷರು ಅಮೆರಿಕದಿಂದ ಬಂದವರು ಎಂಬುದಾಗಿ ಕಾನ್-ಟಿಕಿಯ ತೆಪ್ಪದ ಮೇಲೆ ಕುಳಿತು ಟೌಮೋಟು ದ್ವೀಪಸ್ತೋಮಕ್ಕೆ ಯಾನ ಮಾಡಿದ ಹೈಯರ್ಡಾಲ್ ಸ್ಥಾಪಿಸಲೆತ್ನಿಸಿದ್ದಾನೆ. ಆದರೆ ಅಮೆರಿಕದ ಪೆರುವಿನಲ್ಲಿ ಸಾಮಾನ್ಯವಾಗಿರುವ ತೆಪ್ಪಗಳು ಪಾಲಿನೇಷ್ಯದಲ್ಲಿ ಬಲು ವಿರಳ. ಪೆರುವಿನ ಸಾಮಾನ್ಯ ಉಪಕರಣ ಕೊಡಲಿ. ಆದರೆ ಪಾಲಿನೇಷ್ಯದ್ದು ಕೈಬಾಚಿ. ಪಾಲಿನೇಷ್ಯಕ್ಕೆ ಅಮೆರಿಕದೊಂದಿಗೆ ಇರುವ ಸಾಂಸ್ಕೃತಿಕ ಸಾಮ್ಯಕ್ಕಿಂತಲೂ ಏಷ್ಯದೊಂದಿಗಿನದೇ ಅಧಿಕ. ಅಮೆರಿಕದವರು ಇಲ್ಲಿಗೆ ಆಗಿಂದಾಗ್ಗೆ ಬಂದಿರಬಹುದೇ ಹೊರತು, ಇವರ ಸಾಮೂಹಿಕ ವಲಸೆ ಆಗಿದ್ದಿರಲಾರದು-ಎಂಬುದು ಹೈಯರ್ಡಾಲನ ಊಹೆಯ ಬಗ್ಗೆ ಇರುವ ಒಂದು ಟೀಕೆ.                                     

4. ಪಾಲಿನೇಷ್ಯ

ಏಷ್ಯದೊಂದಿಗೆ ಈ ಪ್ರದೇಶದ ಸಂಬಂಧ ಹೆಚ್ಚಾಗಿದ್ದಿರಬಹುದೆಂಬುದು ಇಲ್ಲಿ ಹರಡಿರುವ ಕೆಲವು ಸಸ್ಯಗಳ ಪರಿಶೀಲನೆಯಿಂದ ಉದ್ಭವಿಸುವ ಅನುಮಾನ. ಪಾಲಿನೇಷ್ಯನರಿಗೆ ಬರೆವಣಿಗೆ ಗೊತ್ತಿರಲಿಲ್ಲ; ಆದರೆ ಅವರು ತಮ್ಮ ವಂಶವನ್ನು ನಿಖರವಾಗಿ ನೆನಪಿಟ್ಟುಕೊಂಡು ತಮ್ಮ ಇತಿಹಾಸದ ಸೂತ್ರವನ್ನು ಉಳಿಸಿಕೊಂಡಿದ್ದಾರೆ. ಪುರಾಣದಿಂದ ಆರಂಭವಾಗಿ ಇತಿಹಾಸದ ಪ್ರವಾಹವಾಗಿ ಹರಿಯುವ ಇವರ ಐತಿಹ್ಯಗಳು ನಂಬಲರ್ಹವೆಂಬುದು ನಾನಾ ಪರೀಕ್ಷೆಗಳಿಂದ ಸ್ಥಿರಪಟ್ಟಿವೆ. ಬಲು ಹಿಂದೆ ನೀಗ್ರಾಯಿಡ್ ಜನಾಂಗಗಳು ಏಷ್ಯದಲ್ಲಿನ ಒತ್ತಡದಿಂದಾಗಿ ಇಲ್ಲಿಗೆ ಬಂದಿದ್ದಿರಬಹುದು. ಮೊದಲು ಬಂದವರು ನಿಗ್ರೀಟೋ. ಆಮೇಲೆ ನೀಗ್ರಾಯಿಡರು ಬಂದು ಇವರನ್ನು ಒತ್ತರಿಸಿರಬಹುದು. ಕೆಲವರು ನ್ಯೂ ಗಿನಿಯಲ್ಲೆ ಉಳಿದು ಹೊಸಬರೊಂದಿಗೆ ರಕ್ತಸಂಬಂಧ ಬೆಳೆಸಿರುವುದೂ ಸಾಧ್ಯ. ಇತರರು ಸಾಹಸದಿಂದೆ ಮುಂದೆಮುಂದೆ ಸಾಗಿದ್ದಿರಬೇಕು. ಪಾಲಿನೇಷ್ಯನರು ಭಾರತದಿಂದ ಬಂದು, ಇಂಡೋನೇಷ್ಯದಲ್ಲಿ ಕೆಲಕಾಲ ತಂಗಿ, ಅಲ್ಲಿಯ ಭಾಷೆಯ ಕೆಲವು ಗುಣಗಳನ್ನು ಪಡೆದುಕೊಂಡು, ಮುಂದೆ ಸಾಗಿದ್ದಿರಬಹುದೆಂಬುದು ಸಕಾರಣವಾದ ಊಹೆ. ಪಾಲಿನೇಷ್ಯನರ ಅನಂತರ ಮಂಗೋಲಾಯಿಡರು ಇಲ್ಲಿಗೆ ಬಂದು, ಅವರಲ್ಲಿ ಕೆಲವರನ್ನು ಮುಂದೆ ತಳ್ಳಿ, ಕೆಲವರೊಂದಿಗೆ ವಿವಾಹಸಂಬಂಧ ಬೆಳೆಸಿದ್ದಿರಬಹುದು. ಮೈಕ್ರೋನೇಷ್ಯನರು ಹುಟ್ಟಿಕೊಂಡದ್ದು ಬಹುಶಃ ಹೀಗೆ. ಇವರಿಗೆ ಪಾಲಿನೇಷ್ಯನರ ಗುಣಲಕ್ಷಣಗಳು ಹಲವುಂಟು.

                                     

5. ಸಂಸ್ಕೃತಿ

ಈ ದ್ವೀಪಗಳ ನಡುವೆ ಬಹಳ ಮಟ್ಟಿಗೆ ಸಾಂಸ್ಕೃತಿಕ ಸಾಮ್ಯಗಳೂ ಇವೆ. ಸಮುದ್ರಕ್ಕೂ ವಾಸಸ್ಥಳಕ್ಕೂ ನಡುವಣ ದೂರ, ಸಾಧನ ಸಂಪತ್ತಿಯ ಲಭ್ಯತೆ ಇವೇ ಸಂಸ್ಕೃತಿಯ ಸ್ವರೂಪದ ನಿರ್ಣಾಯಕ ಅಂಶ. ಜನಾಂಗಗಳ ಭಿನ್ನತೆಗನುಸಾರವಾಗಿ ಇಷ್ಟಷ್ಟು ವ್ಯತ್ಯಾಸಗಳುಂಟಾದರೂ ಮೂಲಾಂಶಗಳು ಎಲ್ಲಕ್ಕೂ ಸಮಾನ. ಸಾಮಾನ್ಯವಾಗಿ ಇಲ್ಲಿಯ ಜನ ಸಣ್ಣ ಸಣ್ಣ ಸಮುದಾಯಗಳಾಗಿ ವಿಂಗಡವಾಗಿರುತ್ತಾರೆ. ದೊಡ್ಡ ದ್ವೀಪಗಳಲ್ಲಿ ಹಳ್ಳಿಗಳುಂಟು. ಪೆಲೂದ ಹಳ್ಳಿಗಳಲ್ಲಿ ಎರಡೆರಡು ಚಾವಡಿಗಳುಂಟು. ನ್ಯೂ ಗಿನಿಯ ಅನೇಕ ಹಳ್ಳಿಗಳಲ್ಲಿ ಸಮುದಾಯ ಭವನಗಳಿವೆ. ಅಡ್ಮಿರಾಲ್ಟಿ ದ್ವೀಪಗಳಲ್ಲಿಯ ಕರಾವಳಿ ಹಳ್ಳಿಗಳನ್ನು ಸಾಮಾನ್ಯವಾಗಿ ಸಮುದ್ರದೊಳಕ್ಕೆ ಚಾಚಿದ ದಿಬ್ಬಗಳ ಮೇಲೆ ನಿರ್ಮಿಸಲಾಗಿದೆ. ಸ್ವಿಸ್ ಸರೋವರ ವಸತಿಗಳನ್ನೆ ಇವು ಹೋಲುತ್ತವೆ.

                                     

6. ಪಾಲಿನೇಷ್ಯನ್ ಹಳ್ಳಿ

ಪಾಲಿನೇಷ್ಯನ್ ಹಳ್ಳಿಗಳಲ್ಲಿ ಮನೆಗಳು ಅಡ್ಡಾದಿಡ್ಡಿ, ಕುಣಿತದ ಕಣಗಳೂ ಇಲ್ಲಿರುವುದುಂಟು. ಇವು ಪವಿತ್ರ. ಇಲ್ಲಿಗೆ ಸ್ತ್ರೀಯರ ಪ್ರವೇಶ ನಿಷಿದ್ಧ. ಮನೆಗಳಿಗೆ ಮರದ ಕಂಬಗಳಿರುತ್ತವೆ. ಸಾಮಾನ್ಯವಾಗಿ ಇವುಗಳದು ಆಯುತಾಕೃತಿ. ಸಮೋವದಲ್ಲಿ ದುಂಡನೆಯ ಮನೆಗಳು ಸಾಮಾನ್ಯ. ಮೇಲಂತಸ್ತಿನವರ ಮನೆಗಳ ಕಟ್ಟುಗಾರಿಕೆ ಉತ್ತಮತರ. ಅಂತಸ್ತಿಗೆ ತಕ್ಕಂತೆ ಎತ್ತರವಾಗಿರುವ ಕಲ್ಲಿನ ಜಗಲಿಗಳ ಮೇಲೆ ಅವುಗಳ ನಿರ್ಮಾಣ. ಹವಾಯಿಯಲ್ಲಿ ಇದೇ ತೆರನಾದ ಪವಿತ್ರ ವೇದಿಕೆಗಳಿವೆ. ಧಾರ್ಮಿಕ ವಿಧಿಗಳಿಗೆ ಇವನ್ನು ಬಳಸಲಾಗುತ್ತಿತ್ತು. ಇವುಗಳ ಮೇಲೆ ಬೃಹದಾಕಾಮರದ ಪ್ರತಿಮೆಗಳನ್ನು ಸ್ಥಾಪಿಸುತ್ತಿದ್ದದ್ದೂ ಉಂಟು. ಈ ಅಂಶದಲ್ಲಿ ಇವು ಈಸ್ಟರ್ ದ್ವೀಪಗಳ ವೇದಿಕೆಗಳನ್ನು ಹೋಲುತ್ತವೆ. ಪಾಲಿನೇಷ್ಯದಲ್ಲೆಲ್ಲ ಅಲ್ಲಲ್ಲಿ ಇಂಥ ಪಾಷಾಣವೇದಿಕೆಗಳಿವೆ. ಇಂಥವು ದೂರದ ಮಾಲ್ಡೆನ್ ದ್ವೀಪಗಳಲ್ಲಿದ್ದುದೂ ಉಂಟು. ಇವುಗಳ ಪಳೆಯುಳಿಕೆಗಳಿಂದಲೇ ಈ ಪ್ರದೇಶಕ್ಕೂ ಈಜಿಪ್ಟಿಗೂ ಹಿಂದಿನ ಕಾಲದಲ್ಲಿ ಸಂಬಂಧವಿತ್ತೆಂಬುದಾಗಿ ಊಹಿಸಲಾಗಿತ್ತು. ಲೇಲೆ ಮತ್ತು ಮೆಟಲೇನಿಕ್ ದ್ವೀಪಗಳಲ್ಲಿ ಜೀರ್ಣವಾದ ನಗರಗಳೇ ಸಿಕ್ಕಿವೆ. ಇವುಗಳಲ್ಲಿ ಹಲವಾರು ಸೌಧಗಳ, ಕೋಟೆಗಳ ಮತ್ತು ಕಾಲುವೆಗಳ ಪಳೆಯುಳಿಕೆಗಳಿವೆ. ಇವನ್ನು ಕಟ್ಟಿದವರು ಯಾರೆಂಬುದು ಗೊತ್ತಿಲ್ಲ. ಇವು ಈಚಿನವೆಂದೂ ಈ ವಿಭಾಗದ ಇತರ ಕಟ್ಟಡಗಳೂ ಇವಕ್ಕೂ ಹೆಚ್ಚಿನ ವ್ಯತ್ಯಾಸಗಳಿದ್ದಿರಲಾರವೆಂದೂ ಅಭಿಪ್ರಾಯ ಪಡಲಾಗಿದೆ. ಮೆಲನೇಷ್ಯ ಮತ್ತು ಮೈಕ್ರೋನೇಷ್ಯಗಳಲ್ಲಿ ಗೋತ್ರ ಪದ್ಧತಿ ಸಾಮಾನ್ಯವಾಗಿತ್ತು. ಪ್ರತಿಯೊಂದು ಗೋತ್ರಕ್ಕೂ ಹಕ್ಕಿಯೋ ಪ್ರಾಣಿಯೋ ಮೂಲಪುರುಷ. ಅವರವರ ಕುಲದೇವತಾ ಪ್ರಾಣಿಗಳ ಮಾಂಸದ ಸೇವನೆ ಅವರವರಲ್ಲಿ ನಿಷಿದ್ಧ. ಆಯಾ ಗೋತ್ರಗಳಿಗೆ ಆಯಾ ಕುಲದೇವತಾ ಪ್ರಾಣಿಗಳೇ ಲಾಂಛನ. ಸಗೋತ್ರ ವಿವಾಹ ನಿಷಿದ್ಧ. ಆದರೆ ಆಧುನಿಕ ಪರಿಸ್ಥಿತಿಯಲ್ಲಿ ಈ ಕಟ್ಟು ಮುರಿದು ಬೀಳುತ್ತಿದೆ. ಎರಡು ಅಥವಾ ಹೆಚ್ಚು ಗೋತ್ರಗಳ ಜನ ಒಂದೇ ಹಳ್ಳಿಯಲ್ಲಿ ವಾಸಿಸುವುದೂ ಸಾಮಾನ್ಯ.                                     

7. ಸಾಮಾಜಿಕ ರಾಜಕೀಯ ವ್ಯವಸ್ಥೆ

ಎಲ್ಲ ದ್ವೀಪಗಳಿಗೂ ಸಾಮಾನ್ಯವಾದ ರೀತಿಯ ಸಾಮಾಜಿಕ ಸಂಘಟನೆಯಿಲ್ಲ. ಅಂತಸ್ತು ಮತ್ತು ಯಜಮಾನಿಕೆಗಳ ನಿಯಮಗಳಲ್ಲೂ ಗುಂಪಿನಿಂದ ಗುಂಪಿಗೆ ವ್ಯತ್ಯಾಸವುಂಟು. ಪಾಲಿನೇಷ್ಯದಲ್ಲಿ ಯಜಮಾನಿಕೆ ವಂ± Àಪಾರಂಪರ್ಯ ವಾದದ್ದು. ಮೆಲನೇಷ್ಯದ ಕೆಲಭಾಗಗಳಲ್ಲೂ ಈ ಪದ್ಧತಿಯುಂಟು. ಇನ್ನು ಕೆಲವಡೆಗಳಲ್ಲಿ ಧಾರ್ಮಿಕ ಮುಖಂಡ ಮತ್ತು ಯುದ್ಧ ನಾಯಕ ಎಂದು ಎರಡು ಸ್ಥಾನಗಳಿರುವುದುಂಟು.ಅಮೆರಿಕದ ಆಡಳಿತ ಬರುವುದಕ್ಕೆ ಮುಂಚೆ, 19ನೆಯ ಶತಮಾನದಲ್ಲಿ ಹವಾಯಿಯ ಯಜಮಾನಿಕೆಗೆ ರಾಜತ್ವದ ಮಹತ್ತ್ವ ಬಂದಿತ್ತು. ಟಾಂಗ ರಾಜ್ಯದಲ್ಲಿ ಬಲುಸಂಕೀರ್ಣವಾದ ರಾಜಪದ್ಧತಿ ಬೆಳೆಯಿತು. ಮೆಲನೇಷ್ಯದಲ್ಲಿ ದಕ್ಷ ಅನುಭವಿ ಹಿರಿಯರು ಯಜಮಾನರು, ಅಂತಸ್ತಿನ ವಿಚಾರದಲ್ಲೂ ಭಿನ್ನತೆಗಳುಂಟು. ಶ್ರೀಮಂತರು, ಸಾಮಾನ್ಯರು ಅಥವಾ ಸ್ವತಂತ್ರರು ಮತ್ತು ಗುಲಾಮರು-ಎಂಬ ಮೂರು ವಿಭಾಗಗಳು ಪಾಲಿನೇಷ್ಯದಲ್ಲೂ ಮೈಕ್ರೊನೇಷ್ಯದಲ್ಲೂ ಇದ್ದುವು. ಮೆಲನೇಷ್ಯನರದು ಭಿನ್ನಪದ್ಧತಿ. ಅಲ್ಲಿಯ ಕೆಲವು ಭಾಗಗಳಲ್ಲಿ ಹಲವು ಶ್ರೇಣಿಗಳು ವಿಕಾಸಗೊಂಡುವು.

                                     

8. ಧಾರ್ಮಿಕ ವ್ಯವಸ್ಥೆ

ಧಾರ್ಮಿಕ ವ್ಯವಸ್ಥೆಗಳೂ ನಂಬಿಕೆಗಳೂ ನಾನಾ ತೆರ. ಆದರೆ ಕೆಲವು ಲಕ್ಷಣಗಳು ಇಲ್ಲಕ್ಕೂ ಸಾಮಾನ್ಯ. ಯಜಮಾನರೂ ಶ್ರೀಮಂತರೂ ದೈವಿಕಶಕ್ತಿಸಂಪನ್ನರು. ಇವರೊಂದಿಗೆ ಇತರರ ಸಂಪರ್ಕ ವಜರ್ಯ್‌. ಪಾಲಿನೇಷ್ಯದಲ್ಲಿ ದೇವರುಗಳು ಅನೇಕ. ಇವರಲ್ಲೂ ತರತರ. ಹವಾಯಿಯ ಜ್ವಾಲಾಮುಖಿಗಳು ಅಲ್ಲಿಯ ಅಗ್ನಿದೇವತೆಯ ರೂಪ. ಪ್ರತಿಯೊಂದು ಮರಕ್ಕೂ ಒಂದು ಆಧಿದೇವತೆ. ಸತ್ತವರ ಆತ್ಮಗಳು ಪಶ್ಚಿಮಾಭಿಮುಖವಾಗಿ ಹೋಗಿ ತಮ್ಮ ಶಾಶ್ವತ ನೆಲೆ ತಲುಪುತ್ತವೆ. ಮೆಲನೇಷ್ಯದ ದೆವ್ವಗಳು ಎರಡು ತೆರ: ಸತ್ತವರ ಪ್ರೇತಗಳು ಮತ್ತು ದೇಹವನ್ನೇ ಹೋಗದವು. ಅನೇಕ ಕಡೆಗಳಲ್ಲಿ ಪ್ರತ್ಯೇಕ ಪುರೋಹಿತ ವರ್ಗವಿಲ್ಲ. ಯೋಗ್ಯತೆಯಿದ್ದವನು ಪುರೋಹಿತನಾಗ ಬಹುದು. ಆದರೆ ಪಾಲಿನೇಷ್ಯದಲ್ಲಿ ಹೀಗಲ್ಲ. ಅಲ್ಲಿ ಪ್ರತ್ಯೇಕ ಪುರೋಹಿತ ಜಾತಿ ಉಂಟು.ಪರಿಶೋಧಕರು ಈ ಪ್ರದೇಶವನ್ನು ಮೊಟ್ಟಮೊದಲು ಕಂಡಾಗ ಇಲ್ಲಿಯ ಜನರಿನ್ನೂ ನವಶಿಲಾಯುಗದಲ್ಲೇ ಇದ್ದರು. ವ್ಯವಸಾಯ ಸರಳವಾಗಿತ್ತು. ಮೆಲನೇಷ್ಯರ ಮತ್ತು ಪಾಲಿನೇಷ್ಯನರ ಇಡೀ ಅರ್ಥವ್ಯವಸ್ಥೆಗೆ ಮೀನುಗಾರಿಕೆ ಮತ್ತು ತೋಟಗಾರಿಕೆಗಳೇ ಕೇಂದ್ರಗಳಾಗಿದ್ದುವು.ಉಡುಗೆಗಳು ಸಸ್ಯಮೂಲ, ನ್ಯೂ ಗಿನಿಯ ಕೆಲವೆಡೆಗಳಲ್ಲಿ ಸಂಪುರ್ಣ ನಗ್ನತೆಯೂ ಇತ್ತು. ಅಲ್ಲಿ ಉಡುಗೆ ಕೇವಲ ಅಲಂಕಾರಕ್ಕೆ. ಹವಾಗುಣದ ಕಾರಣದಿಂದ ದಕ್ಷಿಣ ತುದಿಯ ಮಾವೊರಿ ಮೌರಿ ಜನ ಹೆಚ್ಚು ಉಡುಪು ಧರಿಸುತ್ತಿದ್ದರು. ಇನ್ನು ಕೆಲವು ಕಡೆಗಳಲ್ಲಿ ಸರಳವಾದ ನೇಯ್ಗೆಯ ವಿಧಾನವೂ ಗೊತ್ತಿತ್ತು. ಉದ್ದನೆಯ ಮರಗಳ ತೋಡುದೋಣಿಗಳೇ ಇವರು ಬಳಸುತ್ತಿದ್ದ ಸಮುದ್ರಯಾನ ಸಾಧನಗಳು.