Back

ⓘ ಮೃದು ಶಕ್ತಿ ಒತ್ತಾಯದ ಬದಲು ಆಕರ್ಷಿಸುವ ಮತ್ತು ಸಹಯೋಜಿಸುವ ಸಾಮರ್ಥ್ಯವನ್ನು ವಿವರಿಸಲು ಹಾರ್ವರ್ಡ್ ವಿಶ್ವವಿದ್ಯಾಲಯದ ಜೋಸಫ಼್ ನೈರಿಂದ ಅಭಿವೃದ್ಧಿಪಡಿಸಲಾದ ಒಂದು ಪರಿಕಲ್ಪನೆ. ಒತ್ತಾಯದಲ್ಲಿ ಮನವ ..
                                     

ⓘ ಮೃದು ಶಕ್ತಿ

ಮೃದು ಶಕ್ತಿ ಒತ್ತಾಯದ ಬದಲು ಆಕರ್ಷಿಸುವ ಮತ್ತು ಸಹಯೋಜಿಸುವ ಸಾಮರ್ಥ್ಯವನ್ನು ವಿವರಿಸಲು ಹಾರ್ವರ್ಡ್ ವಿಶ್ವವಿದ್ಯಾಲಯದ ಜೋಸಫ಼್ ನೈರಿಂದ ಅಭಿವೃದ್ಧಿಪಡಿಸಲಾದ ಒಂದು ಪರಿಕಲ್ಪನೆ. ಒತ್ತಾಯದಲ್ಲಿ ಮನವೊಲಿಕೆಯ ವಿಧಾನವಾಗಿ ಬಲವಂತ ಅಥವಾ ಹಣ ಕೊಡುವಿಕೆಯನ್ನು ಬಳಸಲಾಗುತ್ತದೆ. ಮೃದು ಶಕ್ತಿಯು ಇತರರ ಆದ್ಯತೆಗಳಿಗೆ ರಂಜನೆ ಮತ್ತು ಆಕರ್ಷಣೆಯ ಮೂಲಕ ಆಕಾರ ಕೊಡುವ ಸಾಮರ್ಥ್ಯ. ಬಲವಂತ ಅಥವಾ ದಬ್ಬಾಳಿಕೆಯದಲ್ಲದ್ದು ಮೃದು ಶಕ್ತಿಯ ಒಂದು ನಿರ್ಧಾರಕ ವೈಶಿಷ್ಟ್ಯ; ಸಂಸ್ಕೃತಿ, ರಾಜಕೀಯ ಮೌಲ್ಯಗಳು, ಮತ್ತು ವಿದೇಶಾಂಗ ನೀತಿಗಳು ಮೃದು ಶಕ್ತಿಯ ಗುರುತಾಗಿರುತ್ತದೆ. ಇತ್ತೀಚೆಗೆ, ಈ ಪದವನ್ನು ತುಲನಾತ್ಮಕವಾಗಿ ಕಡಿಮೆ ಪಾರದರ್ಶಕ ಮಾರ್ಗಗಳ ಮೂಲಕ ಮತ್ತು ಪ್ರಬಲ ರಾಜಕೀಯ ಹಾಗೂ ರಾಜಕೀಯೇತರ ಸಂಸ್ಥೆಗಳ ಮೂಲಕ ಪ್ರಭಾವ ಬೀರುವ ಸಾಮಾಜಿಕ ಹಾಗೂ ಸಾರ್ವಜನಿಕ ಅಭಿಪ್ರಾಯವನ್ನು ಬದಲಾಯಿಸಲು ಮತ್ತು ಅದರ ಮೇಲೆ ಪ್ರಭಾವ ಬೀರಲು ಬಳಸಲಾಗಿದೆ. ೨೦೧೨ರಲ್ಲಿ, ಮೃದು ಶಕ್ತಿಯಿಂದ "ಅತ್ಯುತ್ತಮ ಪ್ರಚಾರ ಪ್ರಚಾರವಲ್ಲ" ಎಂದು ನೈ ಸ್ಪಷ್ಟಪಡಿಸಿದರು.

ನೈ ಈ ಪದವನ್ನು ತಮ್ಮ ೧೯೯೦ ರ ಪುಸ್ತಕ ಬೌಂಡ್ ಟು ಲೀಡ್: ದ ಚೇಂಜಿಂಗ್ ನೇಚರ್ ಆಫ಼್ ಅಮೇರಿಕನ ಪಾವರ್ ನಲ್ಲಿ ಸೃಷ್ಟಿಸಿದರು. ತಮ್ಮ ೨೦೦೪ರ ಪುಸ್ತಕ ಸಾಫ಼್ಟ್ ಪವರ್: ದ ಮೀನ್ಸ್ ಟು ಸಕ್ಸೆಸ್ ಇನ್ ವರ್ಲ್ಡ್ ಪಾಲಿಟಿಕ್ಸ್ ನಲ್ಲಿ ಈ ಪರಿಕಲ್ಪನೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿದರು. ಈ ಪದವನ್ನು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ವಿಶ್ಲೇಷಕರು ಮತ್ತು ಮುತ್ಸದ್ದಿಗಳು ಈಗ ವ್ಯಾಪಕವಾಗಿ ಬಳಸುತ್ತಾರೆ. ಉದಾಹರಣೆಗೆ, ಅಮೇರಿಕಾದ ರಕ್ಷಣಾ ಸಚಿವರಾದ ರಾಬರ್ಟ್ ಗೇಟ್ಸ್, ರಾಷ್ಟ್ರೀಯ ಭದ್ರತೆಯ ನಾಗರಿಕ ಉಪಕರಣಗಳಾದ ರಾಜತಂತ್ರ, ಕಾರ್ಯತಂತ್ರೀಯ ಸಂವಹನಗಳು, ವಿದೇಶಿ ನೆರವು, ಪೌರ ಕ್ರಿಯೆ ಮತ್ತು ಆರ್ಥಿಕ ಪುನರ್ನಿರ್ಮಾಣ ಹಾಗು ಅಭಿವೃದ್ಧಿ ಮೇಲಿನ ಖರ್ಚಿನಲ್ಲಿ ಗಣನೀಯ ಹೆಚ್ಚಳದಿಂದ ಅಮೇರಿಕಾದ ಮೃದು ಶಕ್ತಿಯನ್ನು ಹೆಚ್ಚಿಸುವ ಅಗತ್ಯದ ಬಗ್ಗೆ ಮಾತಾಡಿದರು. ೨೦೧೧ರಲ್ಲಿ ಶೀ ಜಿನ್‍ಪಿಂಗ್, ಚೀನಾದ ಅಧ್ಯಕ್ಷ ಗದ್ದುಗೆ ಏರುವ ಸಂದರ್ಭದಲ್ಲಿ, ಚೀನಾದ ಕಮ್ಯುನಿಸ್ಟ್ ಪಕ್ಷ ಒಂದು ಪೂರ್ಣ ಅಧಿವೇಶನವನ್ನು ಸಂಸ್ಕೃತಿಯ ವಿಷಯಕ್ಕೆ ಮೀಸಲಿಟ್ಟಿತು. ನಮ್ಮ ದೇಶವನ್ನು ಸಮಾಜವಾದಿ ಸಾಂಸ್ಕೃತಿಕ ಮಹಾಶಕ್ತಿಯಾಗಿ ಕಟ್ಟುವುದು ಒಂದು ರಾಷ್ಟ್ರೀಯ ಗುರಿ ಎಂದು ಅಂತಿಮ ಅಧಿಕೃತ ಹೇಳಿಕೆಯು ಘೋಷಿಸಿತು.

೨೦೧೫ರ ಮೃದು ಶಕ್ತಿ ವಿಶ್ವ ರ‍್ಯಾಂಕಿಂಗ್ ವರದಿಯಲ್ಲಿ, ಯುನೈಟಡ್ ಕಿಂಗ್ಡಮ್ ಮೃದು ಶಕ್ತಿಯಲ್ಲಿ ಪ್ರಥಮ ಸ್ಥಾನ ಹೊಂದಿತ್ತು, ನಂತರದ ಸ್ಥಾನಗಳಲ್ಲಿ ಜರ್ಮನಿ, ಅಮೇರಿಕಾ, ಫ಼್ರಾನ್ಸ್, ಕೆನಡಾ, ಆಸ್ಟ್ರೇಲಿಯಾ, ಸ್ವಿಟ್‍ಜ಼ರ್ಲಂಡ್, ಜಪಾನ್, ಸ್ವೀಡನ್ ಮತ್ತು ನೆದರ್ಲಂಡ್ಸ್ ಇದ್ದವು.