Back

ⓘ ನಿಡಗುಂದಿ ತಾಲ್ಲೂಕು. ನಿಡಗುಂದಿ ಪಟ್ಟಣವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ನಿಡಗುಂದಿ ನಗರವು ವಿಜಯಪುರ - ಸೋಲ್ಲಾಪೂರ ರಾಷ್ಟ್ರಿಯ ಹೆದ್ದಾರಿ - 13ರಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜ ..




ನಿಡಗುಂದಿ ತಾಲ್ಲೂಕು
                                     

ⓘ ನಿಡಗುಂದಿ ತಾಲ್ಲೂಕು

ನಿಡಗುಂದಿ ಪಟ್ಟಣವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ನಿಡಗುಂದಿ ನಗರವು ವಿಜಯಪುರ - ಸೋಲ್ಲಾಪೂರ ರಾಷ್ಟ್ರಿಯ ಹೆದ್ದಾರಿ - 13ರಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 60 ಕಿ. ಮಿ. ಇದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ನಿಡಗುಂದಿ ನಗರವನ್ನು ಹೊಸ ತಾಲ್ಲೂಕೆಂದು ಘೋಷಿಸಲಾಗಿದೆ.

                                     

1. ಚರಿತ್ರೆ

ನಿಡಗುಂದಿಯಲ್ಲಿ ಒಳ್ಳೆಯ ಶಿಕ್ಷಣ, ವ್ಯಾಪಾರ, ಹಣಕಾಸು, ಸಾರಿಗೆ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕ್ ಹಾಗೂ ಇತರೆ ಕಚೇರಿಗಳಿವೆ.

                                     

2. ಹವಾಮಾನ

  • ಬೆಸಿಗೆ-ಚಳಿಗಾಲ ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ ಜೂನ, ೧೯.೬ ಕಿಮಿ/ಗಂ ಜುಲೈಹಾಗೂ ೧೭.೫ ಕಿಮಿ/ಗಂ ಅಗಸ್ಟ್ ಇರುತ್ತದೆ.
                                     

3. ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ ಹಾಗೂ ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

                                     

4. ಕಲೆ ಮತ್ತು ಸಂಸ್ಕೃತಿ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲುಪಟಕ ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

                                     

5. ದೇವಾಲಯಗಳು

  • ಶ್ರೀ ಮುಧ್ಘಲ ಪ್ರಭು ದೇವಸ್ಥಾನ
  • ಶ್ರೀ ಕರಭಾದೇವಿ ದೇವಸ್ಥಾನ
  • ಶ್ರೀ ಸಿದ್ರಾಮೇಶ್ವರ ದೇವಸ್ಥಾನ
  • ಶ್ರೀ ಗೌರೀಶ್ವರ ದೇವಸ್ಥಾನ
  • ಶ್ರೀ ಗಣಪತಿ ದೇವಸ್ಥಾನ
  • ಶ್ರೀ ಯಲ್ಲಮ್ಮನ ದೇವಸ್ಥಾನ
  • ಶ್ರೀ ಹಣಮಂತ ದೇವಸ್ಥಾನ
  • ಶ್ರೀ ವೀರಭದ್ರೇಶ್ವರ ದೇವಸ್ಥಾನ
  • ಶ್ರೀ ಮಹಾಲಕ್ಷ್ಮಿ ದೇವಸ್ಥಾನ
  • ಶ್ರೀ ಬನಶಂಕರಿ ದೇವಸ್ಥಾನ
  • ಶ್ರೀ ದ್ಯಾಮವ್ವನ ದೇವಸ್ಥಾನ
  • ಶ್ರೀ ಭೀಮಾಶಂಕರ ದೇವಸ್ಥಾನ
  • ಶ್ರೀ ಪಾವಡ ಬಸವೇಶ್ವರ ದೇವಸ್ಥಾನ
  • ಶ್ರೀ ಪಾಂಡುರಂಗ - ವಿಠ್ಠಲ ದೇವಸ್ಥಾನ
  • ಶ್ರೀ ಮಹಾದೇವಪ್ಪನ ದೇವಸ್ಥಾನ
  • ಶ್ರೀ ರಾಮಲಿಂಗೇಶ್ವರ ದೇವಸ್ಥಾನ
  • ಶ್ರೀ ದುಗಾ೯ದೇವಿ ದೇವಸ್ಥಾನ
                                     

6. ನೀರಾವರಿ

ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ ಈರುಳ್ಳಿ, ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾಕಡಲೆಕಾಯಿ, ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

                                     

7. ಉದ್ಯೋಗ

ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

                                     

8. ಬೆಳೆ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ ಈರುಳ್ಳಿ ಮತ್ತು ಶೇಂಗಾಕಡಲೆಕಾಯಿ ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

                                     

9. ಶಿಕ್ಷಣ

  • ಜಿ.ವಿ.ವಿ.ಎಸ್. ಕಿರಿಯ ಪ್ರಾಥಮಿಕ ಶಾಲೆ, ನಿಡಗುಂದಿ
  • ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ನಿಡಗುಂದಿ
  • ಶ್ರೀ ರುದ್ರೇಶ್ವರ ಕಿರಿಯ ಪ್ರಾಥಮಿಕ ಶಾಲೆ, ನಿಡಗುಂದಿ
  • ಬಿ.ಎಮ್.ಎಸ್. ಕಿರಿಯ ಪ್ರಾಥಮಿಕ ಶಾಲೆ, ನಿಡಗುಂದಿ
  • ಜ್ಯೋತಿ ಕಿರಿಯ ಪ್ರಾಥಮಿಕ ಶಾಲೆ, ನಿಡಗುಂದಿ
  • ಬಸವ ಜ್ಯೋತಿ ಕಿರಿಯ ಪ್ರಾಥಮಿಕ ಶಾಲೆ, ನಿಡಗುಂದಿ
  • ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ನಿಡಗುಂದಿ
  • ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ನಿಡಗುಂದಿ
  • ಜಿ.ವಿ.ವಿ.ಎಸ್. ಹಿರಿಯ ಪ್ರಾಥಮಿಕ ಶಾಲೆ, ನಿಡಗುಂದಿ
  • ನ್ಯೂ ಇಂಗ್ಲೀಷ ಪ್ರೌಡ ಶಾಲೆ, ನಿಡಗುಂದಿ
  • ಜಿ.ವಿ.ವಿ.ಎಸ್. ಪ್ರೌಡ ಶಾಲೆ, ನಿಡಗುಂದಿ
  • ನ್ಯೂ ಇಂಗ್ಲೀಷ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನಿಡಗುಂದಿ
  • ಜಿ.ವಿ.ವಿ.ಎಸ್ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನಿಡಗುಂದಿ
  • ಜಿ.ವಿ.ವಿ.ಎಸ್. ಪ್ರೌಡ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ನಿಡಗುಂದಿ
  • ಜಿ.ವಿ.ವಿ.ಎಸ್. ಮಹಿಳಾ ಪ್ರೌಡ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ನಿಡಗುಂದಿ
  • ಜಿ.ವಿ.ವಿ.ಎಸ್. ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ನಿಡಗುಂದಿ
  • ಶ್ರೀ ಎಮ್.ವಿ.ನಾಗಠಾಣ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನಿಡಗುಂದಿ
  • ಗ್ರಾಮೀಣ ಕೈಗಾರಿಕಾ ತರಬೇತಿ ಕೇಂದ್ರ, ನಿಡಗುಂದಿ
  • ಸಂಗಪ್ಪ ಗೋನಾಳ ಸ್ಮಾರಕ ಕೈಗಾರಿಕಾ ತರಬೇತಿ ಕೇಂದ್ರ, ನಿಡಗುಂದಿ
  • ಎಸ್.ವಿ.ಪಾಟೀಲ ಸ್ಮಾರಕ ಕೈಗಾರಿಕಾ ತರಬೇತಿ ಕೇಂದ್ರ, ನಿಡಗುಂದಿ
  • ಅಮರ ಶಿಲ್ಪಿ ಜಕಣಾಚಾರಿ ಚಿತ್ರಕಲಾ ಶಾಲೆ, ನಿಡಗುಂದಿ, ಬಸವನ ಬಾಗೇವಾಡಿ
  • ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ, ನಿಡಗುಂದಿ


                                     

10. ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳು

  • ನ್ಯೂ ಸೂರ್ಯ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ನಿಡಗುಂದಿ, ಬಸವನಬಾಗೇವಾಡಿ, ಬಿಜಾಪುರ
  • ಎಸ್.ವಾಯ್. ಇನ್ಪೋಟೇಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ನಿಡಗುಂದಿ, ಬಸವನಬಾಗೇವಾಡಿ, ಬಿಜಾಪುರ
                                     

11. ಬ್ಯಾಂಕಗಳು

  • ಲಕ್ಮೀ ಪತ್ತಿನ ಸಹಕಾರಿ ಬ್ಯಾಂಕ್, ನಿಡಗುಂದಿ.
  • ರುದ್ರೇಶ್ವರ ಪತ್ತಿನ ಸಹಕಾರಿ ಬ್ಯಾಂಕ್, ನಿಡಗುಂದಿ.
  • ದಿ ನಿಡಗುಂದಿ ಕೋ ಆಪರೇಟಿವ್ ಸೊಸಯಟಿ ನಿಡಗುಂದಿ.
  • ಎಸ್.ಬಿ.ಐ.ಬ್ಯಾಂಕ್, ನಿಡಗುಂದಿ.
  • ಕನಾ೯ಟಕ ಕೋ ಆಪರೇಟಿವ್ ಬ್ಯಾಂಕ್, ನಿಡಗುಂದಿ.
  • ಕಾರ್ಪೊರೇಶನ್ ಬ್ಯಾಂಕ್, ನಿಡಗುಂದಿ.
  • ಸಿದ್ದಸಿರಿ ಸೌಹಾಧ೯ ಪತ್ತಿನ ಸಹಕಾರಿ ಬ್ಯಾಂಕ್, ನಿಡಗುಂದಿ.
  • ವೀರಮಹೇಶ್ವರ ಪತ್ತಿನ ಸಹಕಾರಿ ಬ್ಯಾಂಕ್, ನಿಡಗುಂದಿ.
  • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ನಿಡಗುಂದಿ.
  • ಶಾಕಾಂಬರಿ ಮಹಿಳಾ ಪತ್ತನ ಸಹಕಾರಿ ಬ್ಯಾಂಕ್, ನಿಡಗುಂದಿ.
  • ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್, ನಿಡಗುಂದಿ
  • ಬಾಪೂಜಿ ಪತ್ತಿನ ಸಹಕಾರಿ ಬ್ಯಾಂಕ್, ನಿಡಗುಂದಿ.
  • ಮೀನುಗಾರರ ಪತ್ತಿನ ಸಹಕಾರಿ ಸಂಘ, ನಿಡಗುಂದಿ.
  • ಬಸವೇಶ್ವರ ಪತ್ತಿನ ಸಹಕಾರಿ ಬ್ಯಾಂಕ್, ನಿಡಗುಂದಿ.
  • ಕೃಷ್ಣಾ ಕಬ್ಬು ಬೆಳೆಗಾರರ ವಿವಿದ್ದೋದ್ದೇಶಗಳ ಸಹಕಾರಿ ಸಂಘ, ನಿಡಗುಂದಿ.