Back

ⓘ ಕ್ಯುಆರ್ ಕೋಡ್ Quick Response Code ಎಂಬುದರ ಸಂಕ್ಷಿಪ್ತ ರೂಪ. ಇದು ಒಂದು ವಿಧದ ಮ್ಯಾಟ್ರಿಕ್ಸ್ ಬಾರ್ ಕೋಡ್ ನ ಟ್ರೇಡ್ ಮಾರ್ಕ್ ಆಗಿದೆ. ಬಾರ್ ಕೋಡ್ ಎಂಬುದು ಆಪ್ಟಿಕಲ್ ಉಪಕರನಗಳ ಮೂಲಕ ಓದಬಹುದ ..




ಕ್ಯುಆರ್ ಕೋಡ್
                                     

ⓘ ಕ್ಯುಆರ್ ಕೋಡ್

ಕ್ಯುಆರ್ ಕೋಡ್ Quick Response Code ಎಂಬುದರ ಸಂಕ್ಷಿಪ್ತ ರೂಪ. ಇದು ಒಂದು ವಿಧದ ಮ್ಯಾಟ್ರಿಕ್ಸ್ ಬಾರ್ ಕೋಡ್ ನ ಟ್ರೇಡ್ ಮಾರ್ಕ್ ಆಗಿದೆ. ಬಾರ್ ಕೋಡ್ ಎಂಬುದು ಆಪ್ಟಿಕಲ್ ಉಪಕರನಗಳ ಮೂಲಕ ಓದಬಹುದಾದಂತ ಒಂದು ಮಾಹಿತಿಪಟ್ಟಿ ಆಗಿದ್ದು ಸಂಬಂಧಿಸಿದ ವಸ್ತುವಿನ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಕ್ಯುಆರ್ ಕೋಡ್ ನಾಲ್ಕು ಬಗೆಯ ಪ್ರಮಾಣೀಕೃತ ಸಂಕೇತೀಕರಣ ಗಳನ್ನು ಬಳಸಿ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಅವೆಂದರೆ ನ್ಯೂಮೆರಿಕ್, ಆಲ್ಫಾನ್ಯೂಮೆರಿಕ್, ಬೈಟ್/ ಬೈನರಿ ಮತ್ತು ಕಾಂಜಿ. ಕ್ಯುಆರ್ ಕೋಡಿನಲ್ಲಿ ಬಿಳಿಬಣ್ಣದ ಹಿನ್ನೆಲೆಯಲ್ಲಿ ಕಪ್ಪುಬಣ್ಣದ ಚೌಕಾಕಾರದ ಚಿಕ್ಕ ಚಿಕ್ಕ ರಚನೆಗಳು ಒಂದು ಚೌಕಾಕಾರದ ಕಟ್ಟಿನಲ್ಲಿ ವ್ಯವಸ್ಥೆಗೊಂಡಿರುತ್ತವೆ. ಇದನ್ನು ಸೂಕ್ತ ತಂತ್ರಾಂಶಗಳನ್ನು ಹೊಂದಿರುವ ಸ್ಮಾರ್ಟ್ ಫೋನ್, ಕ್ಯಾಮೆರಾದಂತಹ ಉಪಕರಣಗಳ ಮೂಲಕ ಓದಬಹುದು. ಅದರಲ್ಲಿ ಸಂಗ್ರಹಗೊಂಡ ಬೇಕಾದ ಮಾಹಿತಿಯನ್ನು ತೆಗೆದುಕೊಳ್ಳಬಹುದು.

ಜಪಾನಿನಲ್ಲಿ ಮೊತ್ತಮೊದಲಬಾರಿಗೆ ಆಟೋಮೋಟಿವ್ ಕೈಗಾರಿಕೆಗೋಸ್ಕರ ಇದನ್ನು ತಯಾರಿಸಲಾಯಿತು. ಕಾಲಕ್ರಮೇಣ ಈ ಕ್ಯುಆರ್ ಕೋಡ್ ವ್ಯವಸ್ಥೆಯು ಆಟೊಮೊಟಿವ್ ಕೈಗಾರಿಕೆಯ ಹೊರಗೂ ಕೂಡ ಜನಪ್ರಿಯವಾಯಿತು. ಅದಕ್ಕೆ ಕಾರಣ ಇದರ ಸುಲಭ ಓದುವಿಕೆ ಮತ್ತು ಮಾಮೂಲಿ ಬಾರ್ ಕೋಡುಗಳಿಗಿಂತ ಒಳ್ಳೆಯರೀತಿಯಲ್ಲಿ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ. ಉತ್ಪನ್ನಗಳ ಜಾಡುಹಿಡಿಯುವಿಕೆ ಟ್ರ್ಯಾಕಿಂಗ್, ಗುರುತುಹಿಡಿಯುವಿಕೆ, ಸಮಯದ ಲೆಕ್ಕಹಾಕುವಿಕೆ, ಕಡತಗಳ ನಿರ್ವಹಣೆ ಮತ್ತು ಸಾಮಾನ್ಯ ವ್ಯಾಪಾರದಲ್ಲಿ ಇವುಗಳ ಬಳಕೆಯಾಗುತ್ತದೆ ವಾಣಿಜ್ಯ ಉದ್ದೇಶಗಳಲ್ಲಿ ಜಾಡುಹಿಡಿಯಲು ಮತ್ತು ಅನುಕೂಲತೆಗೆ ಸಂಬಂಧಪಟ್ಟ ಉದ್ದೇಶಗಳಿಗಾಗಿ ಇದು ಬಳಕೆಯಲ್ಲಿದೆ. ಸ್ಮಾರ್ಟ್ ಫೋನುಗಳಲ್ಲಿ ಪಠ್ಯವನ್ನು ತೋರಿಸಲು, ಮೊಬೈಲ್ ಟ್ಯಾಗಿಂಗ್ ಮುಂತಾದ ಸೌಲಭ್ಯಗಳಲ್ಲಿ ಬಳಕೆಯಾಗುತ್ತದೆ. ಈ ಕ್ಯುಆರ್ ಕೋಡುಗಳನ್ನು ಸೃಷ್ಟಿಸಲು ಈ ಹಲವಾರು ತಂತ್ರಾಂಶಗಳು ಹಾಗೂ ಆನ್ ಲೈನ್ ಸಲಕರಣೆಗಳು ಇವೆ. ಇದು ಈಗ ಅತಿಹೆಚ್ಚು ಬಳಸಲ್ಪಡುತ್ತಿರುವ ಎರಡು ಆಯಾಮದ ಬಾರ್ ಕೋಡ್ ವಿಧಗಳಲ್ಲಿ ಒಂದಾಗಿದೆ.

                                     

1. ಇತಿಹಾಸ

೧೯೯೪ರಲ್ಲಿ Denso Wave ಎಂಬ ಜಪಾನಿ ಕಂಪನಿಯು ಇದನ್ನು ಮೊದಲು ಆವಿಷ್ಕರಿಸಿತು. ವಾಹನಗಳ ತಯಾರಿಕೆಯಲ್ಲಿ ಅದರ ಜಾಡುಹಿಡಿಯುವುದು ಟ್ರ್ಯಾಕಿಂಗ್ ಇದರ ಉದ್ದೇಶವಾಗಿತ್ತು.ಅತಿವೇಗವಾಗಿ ಭಾಗಗಳ ಸ್ಕ್ಯಾನಿಂಗ್ ಆಗಲು ಅನುವುಮಾಡಲು ಇದನ್ನು ತಯಾರಿಸಲಾಗಿತ್ತು. ಈಗ ಕ್ಯು ಆರ್ ಕೋಡ್ ಗಳು ವಿಸ್ತಾರವಾಗಿ ಬಳಕೆಯಾಗುತ್ತಿವೆ.

                                     

2. ಪ್ರಮಾಣಗಳು ಸ್ಟ್ಯಾಂಡರ್ಡ್ಸ್

ಮಾಹಿತಿಯನ್ನು ಕ್ಯು ಆರ್ ಕೋಡ್ ನಂತೆ ಎನ್ಕೋಡ್ ಮಾಡಲು ಹಲವು ಪ್ರಮಾಣಗಳಿವೆ.:

  • ೧ ಫೆಬ್ರವರಿ ೨೦೧೫ – ISO/IEC 18004:2015 Information – Automatic identification and data capture techniques – QR Code barcode symbology specification Renames the QR Code 2005 symbol to QR Code and adds clarification to some procedures and minor corrections.
  • ಜೂನ್ ೨೦೦೦ – ISO/IEC 18004:2000 Information technology – Automatic identification and data capture techniques – Bar code symbology – QR code now withdrawn Defines QR code models 1 and 2 symbols.
  • ಜನವರಿ ೧೯೯೯ – JIS X 0510
  • ೧ ಸೆಪ್ಟೆಂಬರ್ ೨೦೦೬ – ISO/IEC 18004:2006 Information technology – Automatic identification and data capture techniques – QR code 2005 bar code symbology specification now withdrawn Defines QR code 2005 symbols, an extension of QR code model 2. Does not specify how to read QR code model 1 symbols, or require this for compliance.
  • ಅಕ್ಟೋಬರ್ ೧೯೯೭ – AIM Association for Automatic Identification and Mobility International