Back

ⓘ ರಹಿಮತಪುರ ಹಳ್ಳಿ. ಬೇಸಿಗೆಕಾಲ - ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 42°C ವರೆಗೆಎಪ್ರೀಲನಲ್ಲಿ, ಅತೀ ಕಡಿಮ ..




ರಹಿಮತಪುರ(ಹಳ್ಳಿ)
                                     

ⓘ ರಹಿಮತಪುರ(ಹಳ್ಳಿ)

ಬೇಸಿಗೆಕಾಲ - ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 42°C ವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ 9°C ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ.

  • ಬೇಸಿಗೆಕಾಲ - 35°C - 42°C
  • ಮಳೆಗಾಲ - 18°C - 32°C
  • ಚಳಿಗಾಲ - 15°C - 28°C
  • ಮಳೆ - ಪ್ರತಿ ವರ್ಷ 300 - 600ಮಿಮಿ ಗಳಸ್ಟು ಆಗಿತ್ತದೆ
                                     

1. ಆಹಾರ

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

                                     

2. ಸಂಸ್ಕೃತಿ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ಗಾಂಧಿ ಟೋಪಿ ಅಥವಾ ಬಿಳಿ/ರೇಷ್ಮೆ ರುಮಾಲುಪಟಕ ಧರಿಸುತ್ತಾರೆ. ಮಹಿಳೆಯರು ಇಲಕಲ್ಲ ಸೀರೆಯನ್ನು ಧರಿಸುತ್ತಾರೆ.

                                     

3. ನೀರಾವರಿ

ಗ್ರಾಮದಲ್ಲಿ ಬಹುಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿಈರುಳ್ಳಿ, ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾಕಡಲೆಕಾಯಿ, ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

                                     

4. ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಆಡುಮೇಕೆ ಸಾಕಾಣಿಕೆ ಮತ್ತು ಕುರಿ ಸಾಕಾಣಿಕೆ ಉಪಕಸುಬುಗಳಾಗಿವೆ.

                                     

5. ಬೆಳೆ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ ಈರುಳ್ಳಿ ಮತ್ತು ಶೇಂಗಾಕಡಲೆಕಾಯಿ ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.