Back

ⓘ ಭೂಗೋಳ - ಪ್ರದೇಶ, ಎತ್ತರ, ಟೋಕ್ಯೊ, ದಡ, ದಕ್ಷಿಣ ಅಮೇರಿಕ, ಗೌರಿಬಿದನೂರು, ಭಾರತೀಯ ಉಪಖಂಡ, ಅಲೆಕ್ಸಾಂಡರ್ ದ್ವೀಪಗಳು, ಅಸೂನ್‌ಸಿಯಾನ್, ಆನೆಮುಡಿ ಶಿಖರ, ಉತ್ತರ ಆಫ್ರಿಕಾ, ಉತ್ತರ ಧ್ರುವ ..                                               

ಪ್ರದೇಶ

ಭೂಗೋಳ ಶಾಸ್ತ್ರದಲ್ಲಿ, ಪ್ರದೇಶಗಳು ಎಂದರೆ ಸ್ಥೂಲವಾಗಿ ಭೌತಿಕ ಲಕ್ಷಣಗಳು, ಮಾನವ ಪ್ರಭಾವದ ಗುಣಲಕ್ಷಣಗಳು, ಮತ್ತು ಮಾನವರು ಹಾಗೂ ಪರಿಸರದ ನಡುವಿನ ಪಾರಸ್ಪರಿಕ ಕ್ರಿಯೆಯ ಪ್ರಕಾರ ವಿಭಜಿಸಲಾದ ಕ್ಷೇತ್ರಗಳು. ಭೌಗೋಳಿಕ ಪ್ರದೇಶಗಳು ಮತ್ತು ಉಪ ಪ್ರದೇಶಗಳನ್ನು ಬಹುತೇಕವಾಗಿ ಅವುಗಳ ನಿಖರವಲ್ಲದ ವ್ಯಾಖ್ಯಾನರೀತ್ಯ, ಮತ್ತು ಕೆಲವೊಮ್ಮೆ ಅಸ್ಥಿರ ಸೀಮೆಗಳ ಪ್ರಕಾರ ವರ್ಣಿಸಲಾಗುತ್ತದೆ. ರಾಷ್ಟ್ರೀಯ ಗಡಿರೇಖೆಗಳಂತಹ ಮಾನವ ಭೂಗೋಳದಲ್ಲಿನ ಅಧಿಕಾರವ್ಯಾಪ್ತಿಯ ಪ್ರದೇಶಗಳು ಇದಕ್ಕೆ ಹೊರತಾದದ್ದು, ಇವುಗಳನ್ನು ಕಾನೂನಿನಲ್ಲಿ ವ್ಯಾಖ್ಯಾನಿಸಲಾಗುತ್ತದೆ.

                                               

ಎತ್ತರ

ಎತ್ತರ ಎಂದರೆ ಲಂಬ ದೂರದ ಅಳತೆ, ಈ ವಸ್ತು ಅಥವಾ ಈ ವ್ಯಕ್ತಿ ಎಷ್ಟು ಎತ್ತರವಿದೆ/ಎತ್ತರವಿದ್ದಾನೆ ಎಂದು, ಅಥವಾ ಈ ಸ್ಥಾನ ಎಷ್ಟು ಎತ್ತರವಿದೆ ಎಂದು. ಉದಾಹರಣೆಗೆ, "ಆ ಕಟ್ಟಡದ ಎತ್ತರ ೫೦ ಮೀ. ಇದೆ" ಅಥವಾ "ಒಂದು ವಿಮಾನದ ಎತ್ತರ ಸುಮಾರು ೧೦,೦೦೦ ಮೀ. ಇರುತ್ತದೆ". ಕಾರ್ಟೇಸಿಯನ್ ಪ್ರದೇಶದಲ್ಲಿ, ಒಂದು ನಿರ್ದಿಷ್ಟ ಬಿಂದು ಮತ್ತು ಸಮಾನವಾದ ವೈ-ಮೌಲ್ಯವನ್ನು ಹೊಂದಿರದ ಮತ್ತೊಂದು ಬಿಂದು ನಡುವಿನ ಎತ್ತರವನ್ನು ಲಂಬ ಅಕ್ಷದ ವೈ ಉದ್ದಕ್ಕೆ ಅಳೆಯಲಾಗುತ್ತದೆ. ಎರಡೂ ಬಿಂದುಗಳು ಸಮಾನ ವೈ-ಮೌಲ್ಯವನ್ನು ಹೊಂದಿದ್ದರೆ, ಅವುಗಳ ನಡುವಿನ ತುಲನಾತ್ಮಕ ಎತ್ತರ ಶೂನ್ಯವಿರುತ್ತದೆ. ಎತ್ತರವು ಒಂದು ಉಲ್ಲೇಖ ಸಮತಲಕ್ಕೆ ಸಾಪೇಕ್ಷವಾಗಿರುತ್ತದಾದರೂ, ಭೌತಿಕ ಪ್ರಪಂಚದಲ್ಲಿನ ಎತ್ತರದ ಬಹುತೇಕ ಅಳತೆಗಳು ಸಮುದ್ರ ಮಟ್ಟ ಎಂದು ಕರೆಯಲ್ಪಡುವ ಒಂದು ಶೂನ್ಯ ಮೇಲ್ಮೈಯನ್ ...

                                               

ಟೋಕ್ಯೊ

ಟೋಕ್ಯೊ, ಅಧಿಕೃತವಾಗಿ ಟೋಕ್ಯೊ ಮಹಾನಗರ, ಜಪಾನ್ ದೇಶದ ರಾಜಧಾನಿ ಮತ್ತು ಜಪಾನಿನ ೪೭ ರಾಜ್ಯ ಗಳಲ್ಲಿ ಅತೀದೊಡ್ಡದಾದದ್ದು. ಜಪಾನಿನ ಮುಖ್ಯ ದ್ವೀಪವಾಗಿರವ ಹೋಂಶು ವಿನ ಪೂರ್ವಭಗದಲ್ಲಿರುವ ಕಾನ್ತೋ ಉಪರಾಜ್ಯದಲ್ಲಿ ಟೋಕ್ಯೊ ಸ್ಥಿತವಾಗಿದೆ. ಟೋಕ್ಯೊ ನಗರದ ೨೩ ವಿಶೇಷ ವಾರ್ಡ್ ಗಳಲ್ಲಿ ೧೪ ದಶಲಕ್ಷಕಿಂತಲೂ ಹೆಚ್ಚು ಜನರು ವಾಸವಾಗಿದ್ದು, ನಗರದ ಹೊರಭಾಗಗಳನ್ನು ಸೇರಿಸಿ ಒಟ್ಟು ೩೮ ದಶಲಕ್ಷಕಿಂತಲೂ ಹೆಚ್ಚು ಜನರು ಟೋಕ್ಯೋ ರಾಜ್ಯದಲ್ಲಿ ವಾಸವಾಗಿದ್ದಾರೆ.

                                               

ದಡ

ಭೂಗೋಳ ಶಾಸ್ತ್ರದಲ್ಲಿ, ಸಾಮಾನ್ಯವಾಗಿ ದಡ ಶಬ್ದವು ಒಂದು ಜಲಸಮೂಹದ ಪಕ್ಕದಲ್ಲಿರುವ ನೆಲವನ್ನು ಸೂಚಿಸುತ್ತದೆ. ಕೆಳಗೆ ಹೇಳಿದಂತೆ, ಭೂಗೋಳ ಶಾಸ್ತ್ರದ ಭಿನ್ನ ಕ್ಷೇತ್ರಗಳಲ್ಲಿ ಭಿನ್ನ ರಚನೆಗಳನ್ನು ದಡಗಳೆಂದು ಸೂಚಿಸಲಾಗುತ್ತದೆ. ಸರೋವರ ವಿಜ್ಞಾನದಲ್ಲಿ, ಹೊಳೆಯ ದಡ ಅಥವಾ ನದಿಯ ದಡ ಎಂದರೆ ಒಂದು ನದಿ, ಹಳ್ಳ, ಅಥವಾ ಹೊಳೆಯ ಪಕ್ಕದಲ್ಲಿರುವ ಭೂಭಾಗ. ದಡವು ಜಲಮಾರ್ಗದ ತಟಗಳನ್ನು ಒಳಗೊಂಡಿರುತ್ತದೆ, ಈ ತಟಗಳ ನಡುವೆ ಹರಿವು ಸೀಮಿತವಾಗಿರುತ್ತದೆ. ನದಿ ಸಂಬಂಧಿ ಭೂಗೋಳ ಶಾಸ್ತ್ರದಲ್ಲಿ, ಹೊಳೆಯ ದಡಗಳು ವಿಶೇಷ ಆಸಕ್ತಿಯ ವಿಷಯವಾಗಿವೆ. ಇದು ನದಿಗಳು ಮತ್ತು ಹೊಳೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಮತ್ತು ಅವುಗಳಿಂದ ಸೃಷ್ಟಿಯಾದ ನಿಕ್ಷೇಪಗಳು ಹಾಗೂ ಭೂರೂಪಗಳನ್ನು ಅಧ್ಯಯನಿಸುತ್ತದೆ. ವಿವರಣಾತ್ಮಕ ಪದಗಳಾದ ಎಡ ದಡ ಮತ್ತು ಬಲ ದಡ ಪದಗಳು ನದಿಯ ದಿಕ್ ...

                                               

ದಕ್ಷಿಣ ಅಮೇರಿಕ

ದಕ್ಷಿಣ ಅಮೇರಿಕ - ಪೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ, ಮತ್ತು ಅಟ್ಲಾಂಟಿಕ್ ಸಾಗರದ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಖಂಡ. ಇದರ ಉತ್ತರ ಭಾಗಕ್ಕೆ ಉತ್ತರ ಅಮೇರಿಕ ಖಂಡ ಮತ್ತು ಕೆರಿಬ್ಬಿಯನ್ ಸಮುದ್ರವು ಇವೆ. ಅಮೆರಿಗೊ ವೆಸ್ಪುಚಿ ಎಂಬ ಯೂರೋಪಿಯನ್ ನಾವಿಕ ಮೊದಲ ಬಾರಿಗೆ ಅಮೆರಿಕ ಖಂಡಗಳು "ಪೂರ್ವ ಇಂಡೀಸ್" ಅಲ್ಲ, ಒಂದು ವಿಶಿಷ್ಟ ಖಂಡ ಎಂದು ತಿಳಿಸಿಕೊಟ್ಟನು. ಈ ಕಾರಣದಿಂದ ಈ ಖಂಡಗಳನ್ನು ಇವನ ಹೆಸರನ್ನು ಆಧರಿಸಿ "ಅಮೆರಿಕ" ಎಂದು ಕರೆಯಲಾಗಿದೆ. ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣ ೧,೭೮,೪೦,೦೦೦ ಚದರ ಕಿ.ಮಿ. ಅಥವಾ ಭೂಮಿಯ ಶೇಕಡಾ ೩.೫% ರಷ್ಟು. ೨೦೦೫ರಲ್ಲಿ ಇದರ ಜನಸಂಖ್ಯೆ ಸುಮಾರು ೩೭,೧೦,೦೦,೦೦೦. ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣವು ಏಷ್ಯಾ, ಆಫ್ರಿಕಾ, ಮತ್ತು ಉತ್ತರ ಅಮೆರಿಕ ಖಂಡಗಳ ನಂತರ ನಾಲ್ಕನೇ ಅತಿದೊಡ್ಡದಾಗಿದೆ. ಜನಸಂಖ್ಯೆ ...

                                               

ಗೌರಿಬಿದನೂರು

ಗೌರಿಬಿದನೂರು ಒಂದು ತಾಲ್ಲೂಕು ಕೇಂದ್ರವಾಗಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿದೆ. ಇದು ಬೆಂಗಳೂರಿನಿಂದ ಸುಮಾರು ೭೫ km ದೂರದಲ್ಲಿ ಹಾಗು ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮ ಸ್ಥಳವಾದ ಮುದ್ದೇನಹಳ್ಳಿಯಿಂದ ೨೫ km ದೂರದಲ್ಲಿದೆ. ಆಂದ್ರಪ್ರದೇಶದ ಗಡಿಯಲ್ಲಿರುವುದರಿಂದ ಕನ್ನಡದ ಜೊತೆಯಲ್ಲಿ ತೆಲುಗೂ ಕೂಡ ಹೆಚ್ಚಿನ ಬಳಕೆಯಲ್ಲಿದೆ. ಟಿಪ್ಪುವಿನ ಕಾಲದಲ್ಲಿ ಅವನ ಕೆಲವು ಯೋಧರ ಘೋರಿಗಳನ್ನು ಇಲ್ಲಿ ಕಟ್ಟಲಾಗಿದುದರಿಂದ, ಇದಕ್ಕೆ ಗೌರಿಬಿದನೂರು ಎಂಬ ಹೆಸರು ಬರಲು ಕಾರಣವಾಯಿತೆಂದು ಹೇಳುತ್ತಾರೆ. ಜೊತೆಗೆ ಇಲ್ಲಿ ಹಿಂದೂ ದೇವತೆಯಾದಿ ಗೌರಿಯ ದೇವಾಲಯವಿದ್ದುದರಿಂದಲೂ ಈ ಹೆಸರು ಬಂತೆಂದು ಹೇಳುತ್ತಾರೆ. ಡಾ. ಹೆಚ್ ನರಸಿಂಹಯ್ಯರವರ ಹುಟ್ಟೂರಾದ ಹೊಸೂರು ಇದೇ ತಾಲ್ಲೂಕಿನಲ್ಲಿದೆ. ಸ್ವತಿಗ್ರಾಮ ಯೋಜನೆಯಡಿ ಪ್ರಥಮಬಾರಿಗೆ ಕರ್ನಾಟಕ ರ ...

ಭಾರತೀಯ ಉಪಖಂಡ
                                               

ಭಾರತೀಯ ಉಪಖಂಡ

ಭಾರತೀಯ ಉಪಖಂಡ ವು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ಭೂತಾನ್ ದೇಶಗಳನ್ನೊಳಗೊಂಡಿರುವ ಒಂದು ಪರ್ಯಾಯ ದ್ವೀಪ. ಭೂಗೋಳ ಶಾಸ್ತ್ರದ ಪ್ರಕಾರ ಈ ಕ್ಷೇತ್ರವು ಉತ್ತರ ಮತ್ತು ಪೂರ್ವದಲ್ಲಿಹಿಮಾಲಯ ಪರ್ವತಶ್ರೇಣಿಯಿಂದ, ದಕ್ಷಿಣದಲ್ಲಿಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಿಂದ ಸುತ್ತುವರಿದಿದೆ.

ಅಲೆಕ್ಸಾಂಡರ್ ದ್ವೀಪಗಳು
                                               

ಅಲೆಕ್ಸಾಂಡರ್ ದ್ವೀಪಗಳು

ಅಲೆಕ್ಸಾಂಡರ್ ದ್ವೀಪಗಳು ದಕ್ಷಿಣ ಅಂಟಾರ್ಕ್‌ಟಿಕ್‌ ಪ್ರದೇಶದಲ್ಲಿರುವ ಈ ದ್ವೀಪಗಳಲ್ಲಿನ ಮುಖ್ಯ ಭೂಭಾಗ ಗ್ರಹ್ಯಾಮ್‌ಲ್ಯಾಂಡ್‌ ಪರ್ಯಾಯ ದ್ವೀಪದ ಪಶ್ಚಿಮಕ್ಕಿದೆ. ಬೆಲಿಂಗ್‌ಹೌಸನ್‌ ಇವನ್ನು ಕಂಡುಹಿಡಿದು ಅಲೆಕ್ಸಾಂಡರ್ ಭೂ ಪ್ರದೇಶ ಎಂಬುದಾಗಿ ಹೆಸರಿಟ್ಟ. ಫಾಕ್‌ಲೆಂಡ್‌ ದ್ವೀಪಗಳ ವಿಸ್ತೃತ ಭಾಗವಾಗಿರುವ ಈ ದ್ವೀಪಗಳಲ್ಲಿ ಮೀನುಗಾರಿಕೆ ವಿಶೇಷ. ತಿಮಿಂಗಿಲಗಳನ್ನು ಹಿಡಿವ ತಂಡಗಳು ಈ ದ್ವೀಪಗಳಿಗೆ ಆಗಾಗ್ಗೆ ಬರುತ್ತಿರುತ್ತವೆ.

ಅಸೂನ್‌ಸಿಯಾನ್
                                               

ಅಸೂನ್‌ಸಿಯಾನ್

{{#if:| ಅಸೂನ್‌ಸಿಯಾನ್ ದಕ್ಷಿಣ ಅಮೇರಿಕ ಖಂಡದ ಪೆರಗ್ವೆ ದೇಶದ ರಾಜಧಾನಿ. ನಗರದಲ್ಲಿ ವಾಸಿಸುವ ಜನರ ಸಂಖ್ಯೆ ೫,೩೯,೦೦೦ವಾದರೂ ಸುತ್ತಲಿನ ನಗರಗಳನ್ನು ಸೇರಿ ಅಸೂನ್‌ಸಿಯಾನ್ ಮಹಾನಗರದ ಜನಸಂಖ್ಯೆ ೧೬,೩೯,೦೦೦. ಸರಕಾರದ ಕೇಂದ್ರವಾಗಿರುವ ಇದು ಪ್ರಧಾನ ಬಂದರು ಮತ್ತು ಕೈಗಾರಿಕಾ ಮತ್ತು ಸಾಂಸ್ಕೃತಿಕ ಕೇಂದ್ರವೂ ಆಗಿದೆ. ದಕ್ಷಿಣ ಅಮೆರಿಕದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ಇದನ್ನು ಅಗಸ್ಟ್ ೧೫, ೧೫೩೭ರಲ್ಲಿ ಸ್ಪಾನಿಷ್ ವಸಾಹತುಶಾಹಿಗಳು ಕಂಡು ಹಿಡಿದು, ದಕ್ಷಿಣ ಅಮೆರಿಕದ ಸ್ಪಾನಿಷ್ ವಸಾಹತುಗಳ ಕೇಂದ್ರವನ್ನಾಗಿ ಮಾಡಿದರು.

ಆನೆಮುಡಿ ಶಿಖರ
                                               

ಆನೆಮುಡಿ ಶಿಖರ

ಆನೆಮುಡಿ ಶಿಖರ ಇದು ಪಶ್ಚಿಮ ಘಟ್ಟ ದ ಅಣ್ಣಾಮಲೈ ಪರ್ವತ ಶ್ರೇಣಿಯಲ್ಲಿರುವ ಒಂದು ಶಿಖರ. ಸಮುದ್ರ ಮಟ್ಟದಿಂದ ೮೮೪೨ ಅಡಿಗಳಷ್ಟು ಎತ್ತರವಿದ್ದು ದಕ್ಷಿಣ ಭಾರತದಲ್ಲೇ ಅತ್ಯಂತ ಎತ್ತರವಾದ ಶಿಖರವಾಗಿದೆ.ಇದು ಕೇರಳ ರಾಜ್ಯದಲ್ಲಿದೆ.

ಉತ್ತರ ಆಫ್ರಿಕಾ
                                               

ಉತ್ತರ ಆಫ್ರಿಕಾ

ಉತ್ತರ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಆಫ್ರಿಕಾ ಖಂಡದ ಉತ್ತರ ಭಾಗದಲ್ಲಿರುವ ೭ ದೇಶಗಳನ್ನು ಒಳಗೊಂಡಿದೆ. ಟುನೀಸಿಯ ಪಶ್ಚಿಮ ಸಹಾರ ವಿವಾದಿತ ಪ್ರದೇಶ ಲಿಬ್ಯಾ ಮೊರಾಕೊ ಸುಡಾನ್ ಈಜಿಪ್ಟ್ ಆಲ್ಜೀರಿಯ

ಉತ್ತರ ಧ್ರುವ
                                               

ಉತ್ತರ ಧ್ರುವ

ಉತ್ತರ ಧ್ರುವ, ಭೂಮಿಯ ಅತಿ ಉತ್ತರದ ಬಿಂದು. ಭೂಮಿಯ ಭ್ರಮಣೆಯ ಅಕ್ಷರೇಖೆ ಎಲ್ಲಿ ಭೂಮಿಯನ್ನು ಸಂಧಿಸುತ್ತದೆಯೊ, ಆ ಸ್ಥಳವೇ ಉತ್ತರ ಧ್ರುವ. ಇದು ಉತ್ತರ ಆಯಸ್ಕಾಂತ ಧ್ರುವಕ್ಕಿಂತ ಭಿನ್ನ.

ಉತ್ತರ ಭಾರತ
                                               

ಉತ್ತರ ಭಾರತ

ಉತ್ತರ ಭಾರತ ಭಾರತದ ಉತ್ತರ ಭಾಗವನ್ನು ಒಳಗೊಂಡ ಒಂದು ಸಡಿಲವಾಗಿ ವ್ಯಾಖ್ಯಾನಿಸಲಾದ ಪ್ರದೇಶ. ಹರ್ಷವರ್ಧನ ಉತ್ತರ ಭಾರತವನ್ನು ಆಳಿದ ಒಬ್ಬ ಭೌದ್ಧ ಸಾಮ್ರಾಟ. ಗುಪ್ತ ಸಾಮ್ರಾಜ್ಯದ ಪತನದ ನಂತರ ಅನೇಕ ಚಿಕ್ಕ ಚಿಕ್ಕ ರಾಜ್ಯಗಳಾಗಿ ಒಡೆದಿದ್ದ ಉತ್ತರ ಭಾರತವನ್ನು ಈತ ಮತ್ತೆ ಒಂದು ಸಾಮ್ರಾಜ್ಯದ ಅಡಿಯಲ್ಲಿ ತಂದವನು.

ಏಂಜೆಲ್ ಜಲಪಾತ
                                               

ಏಂಜೆಲ್ ಜಲಪಾತ

ಏಂಜೆಲ್ ಜಲಪಾತ ಜಗತ್ತಿನ ಅತಿ ಎತ್ತರದ ಜಲಪಾತವಾಗಿದೆ. ವೆನೆಜುವೆಲಾದ ಬೊಲಿವಾರ್ ಪ್ರಾಂತ್ಯದಲ್ಲಿರುವ ಏಂಜೆಲ್ ಜಲಪಾತದ ಎತ್ತರ ೯೭೯ ಮೀಟರ್‌ಗಳು ಅಥವಾ ೩೨೧೨ ಅಡಿಗಳು. ಇದರಲ್ಲಿ ನೀರು ೮೦೭ ಮೀ. ಗಳಷ್ಟು ದಾರಿಯಲ್ಲಿ ಯಾವುದೇ ಬಂಡೆ ಯಾ ಗೋಡೆಗೆ ಆತುಕೊಳ್ಳದೆ ನೇರ ಗಾಳಿಯಲ್ಲಿ ಧುಮುಕುತ್ತದೆ. ಈ ಅಗಾಧ ಎತ್ತರದ ಕಾರಣದಿಂದಾಗಿ ಮೇಲಿನಿಂದ ಧುಮುಕುವ ನೀರಿನ ಬಹ್ವಂಶ ಕೆಳಗಿನ ನೆಲ ತಲುಪದೆ ಬಲವಾದ ಗಾಳಿಯಿಂದಾಗಿ ತುಂತುರು ಮತ್ತು ನೀರಾವಿಯಾಗಿ ಮಾರ್ಪಡುತ್ತದೆ.

ಏಷ್ಯಾ
                                               

ಏಷ್ಯಾ

ಏಷ್ಯಾ ಪ್ರಪಂಚದ ಅತಿ ದೊಡ್ಡ ಹಾಗೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಖಂಡವಾಗಿದೆ. ಭೂಗೋಳದ ಸುಮಾರು ೮.೭% ಪ್ರದೇಶವನ್ನು ಈ ಖಂಡ ಆವರಿಸಿದೆ ಮತ್ತು ಪ್ರಪಂಚದ ಸುಮಾರು ೬೦% ಜನಸಂಖ್ಯೆಯನ್ನು ಹೊಂದಿದೆ. ಪಾರಂಪರಿಕವಾಗಿ ಏಷ್ಯಾದ ಪಶ್ಚಿಮದ ಪರಿಮಿತಿಯು ಸುಯೆಜ್ ಕಾಲುವೆ, ಯೂರಲ್ ಪರ್ವತ ಶ್ರೇಣಿಯೆಂದು ಹಾಗು ಉತ್ತರ ಪರಿಮಿತಿಯು ಕಾವ್ಕಸಸ್ ಪರ್ವತ ಶ್ರೇಣಿ ಹಾಗು ಕ್ಯಾಸ್ಪಿಯನ್ ಸಮುದ್ರ ಮತ್ತು ಕಪ್ಪು ಸಮುದ್ರಗಳೆಂದು ಪರಿಗಣಿಸಲ್ಪಡುತ್ತದೆ. ಸಂಯುಕ್ತ ರಾಷ್ಟ್ರ ಸಂಸ್ಥಯು ಏಷ್ಯಾ ಖಂಡವನ್ನು ಈ ಪ್ರಕಾರ ವಿಭಜಿಸುತ್ತದೆ. ದಕ್ಷಿಣ ಏಷ್ಯಾ ಪಶ್ಚಿಮ ಏಷ್ಯಾ ಪೂರ್ವ ಏಷ್ಯಾ ಮಧ್ಯ ಏಷ್ಯಾ ಆಗ್ನೇಯ ಏಷ್ಯಾ ಉತ್ತರ ಏಷ್ಯಾ

ಒಷ್ಯಾನಿಯ
                                               

ಒಷ್ಯಾನಿಯ

ಒಷ್ಯಾನಿಯ ಭೂಮಿಯ ದಕ್ಷಿಣ ಅರ್ಧವಲಯದಲ್ಲಿರುವ ಕೆಲವು ಪ್ರದೇಶಗಳ ಭೌಗೋಳಿಕ ವಿಂಗಡಣೆ. ಆಸ್ಟ್ರೇಲಿಯ ದೇಶವನ್ನು ಹೊರೆತು ಈ ವಿಂಗಡಣೆಯಲ್ಲಿ ಸೇರುವ ಪ್ರದೇಶಗಳು ಸುನಿರ್ದಿಷ್ಟವಾಗಿಲ್ಲ. ಆದರೆ ಮುಖ್ಯವಾಗಿ ನ್ಯೂ ಜೀಲ್ಯಾಂಡ್, ನ್ಯೂ ಗಿನಿ ಹಾಗು ಮಲಯ ದ್ವೀಪಸಮೂಹದ ಕೆಲವು ದ್ವೀಪಗಳು ಇದರಲ್ಲಿ ಸೇರ್ಪಡೆಯಾಗುತ್ತವೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →