Back

ⓘ ಚಲನಚಿತ್ರ ನಟಿಯರು - ಮಾಧುರಿ ದೀಕ್ಷಿತ್, ಲೀಲಾ ಚಿಟ್ನಿಸ್, ಶಬಾನ ಆಜ್ಮಿ, ಬೆಳ್ಳಿತೆರೆ ಬೆಳಗಿದವರು, ಕೇಟ್‌ ವಿನ್ಸ್ಲೆಟ್‌, ರಾಣಿ ಮುಖರ್ಜಿ, ಉದಯಚಂದ್ರಿಕಾ, ಎಂ.ಎನ್.ಲಕ್ಶ್ಮಿದೇವಿ, ಖುಷ್ಬೂ ..                                               

ಮಾಧುರಿ ದೀಕ್ಷಿತ್

ಮಾಧುರಿ ದೀಕ್ಷಿತ್ ಒಬ್ಬ ಬಾಲಿವುಡ್ ನಟಿ. ೧೯೮೦ರ ದಶಕದ ಕೊನೆಯಲ್ಲಿ ಮತ್ತು ೧೯೯೦ರ ದಶಕದಾದ್ಯಂತ ಅವರು ಹಿಂದಿ ಚಿತ್ರರಂಗದ ಅಗ್ರ ನಟಿಯರು ಮತ್ತು ನಿಪುಣ ನರ್ತಕಿಯರ ಪೈಕಿ ಒಬ್ಬರೆಂದು ಪರಿಗಣಿತರಾಗಿದ್ದರು. ಅವರು ಅನೇಕ ಯಶಸ್ವಿ ಚಲನಚಿತ್ರಗಳಲ್ಲಿ ಅಭಿನಯಿಸಿದರು ಮತ್ತು ಹಲವಾರು ಪ್ರದರ್ಶನಗಳು ಹಾಗೂ ವಿವಿಧ ಚಲನಚಿತ್ರಗಳಲ್ಲಿನ ನೃತ್ಯಗಳಿಗಾಗಿ ಗುರುತಿಸಲ್ಪಟ್ಟರು. ಮಾಧ್ಯಮಗಳು ಹಲವುವೇಳೆ ಮಾಧುರಿಯವರನ್ನು ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಚಿತ್ರನಟಿಯರ ಪೈಕಿ ಒಬ್ಬರೆಂದು ಉಲ್ಲೇಖಿಸುತ್ತವೆ. ಮಾಧುರಿ, ನಾಲ್ಕು ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಒಂದು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಹಿತ ಐದು ಫ಼ಿಲ್ಮ್‌ಫ಼ೇರ್ ಪ್ರಶಸ್ತಿ ಗೆದ್ದಿದ್ದಾರೆ. ಅವರು ಅತಿ ಹೆಚ್ಚು ಸಂಖ್ಯೆಯ ಫ಼ಿಲ್ಮ್‌ಫ಼ೇರ್ ಅತ್ಯುತ್ತಮ ನಟಿ ಪ್ರಶಸ್ತಿ ನಾಮನಿರ್ದೇಶನಗಳ ದಾಖಲ ...

                                               

ಲೀಲಾ ಚಿಟ್ನಿಸ್

ಅವರು ಕರ್ನಾಟಕದ ಧಾರವಾಡದ ಒಬ್ಬ ಇಂಗ್ಲೀಷ್ ಪ್ರಾಧ್ಯಾಪಕರ ಮಗಳಾಗಿ ಹುಟ್ಟಿದರು. ಮೊದಲ ವಿದ್ಯಾವಂತ ಚಲನಚಿತ್ರ ನಟಿಯರಲ್ಲಿ ಒಬ್ಬರು. ಆಕೆಯ ತಂದೆ ನಾಟ್ಯಮನ್ವಂತರ್ ಎಂಬ ಮರಾಠಿ ನಾಟಕ ಕಂಪೆನಿಯ ಭಾಗವಾಗಿದ್ದರು.

                                               

ಶಬಾನ ಆಜ್ಮಿ

ಶಬಾನ ಆಜ್ಮಿ ೧೮ ಸೆಪ್ಟಂಬರ್ ೧೯೫೦ರಂದು ದೆಹಲಿಯಲ್ಲಿ ಜನಿಸಿದರು. ಇವರು ಚಲನಚಿತ್ರ ಕಲಾವಿದೆ ಹಾಗು ಸಾಮಾಜಿಕ ಕಾರ್ಯಕರ್ತೆ. ೧೯೯೮ರಲ್ಲಿ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಗೆ ಸೌಹಾರ್ದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.೧೯೮೯ರಲ್ಲಿ ಸಾ್ವಮಿ ಅಗ್ನಿವೇಶ್ ಹಾಗು ಅಸ್ಗರ್ ಅಲಿ ಎಂಜಿನಿಯರ್ ಒಡಗೂಡಿ ಕೋಮುವಾದ ವಿರೋಧಿ ಪಾದಯಾತ್ರೆ ನಡೆಸಿದ್ದರು.

                                               

ಬೆಳ್ಳಿತೆರೆ ಬೆಳಗಿದವರು

ಬೆಳ್ಳಿತೆರೆ ಬೆಳಗಿದವರು ಅ.ನಾ.ಪ್ರಹ್ಲಾದ ರಾವ್ ಬರೆದಿರುವ ೨೦೦೭ರಲ್ಲಿ ಬಿಡುಗಡೆ ಆದ ೨೨೦ ಪುಟಗಳ ಪುಸ್ತಕ. ಇದು ಕನ್ನಡ ಚಲನಚಿತ್ರ ರಂಗದ ಸರ್ವತೋಮುಖ ಅಭಿವೃದ್ಡಿಗೆ ಕೊಡುಗೆ ನೀಡಿದ ೧೧೫ ಮಂದಿ ಮಹಾನುಭಾವರ ಬಗ್ಗೆ ಈ ಪುಸ್ತಕದಲ್ಲಿ ಲೇಖನಗಳಿವೆ.ಕನ್ನಡ ಚಲನಚಿತ್ರರಂಗದ ಆದ್ಯ ಪಿತಾಮಹ ಗುಬ್ಬಿ ವೀರಣ್ಣ, ಕನ್ನಡದ ಮೊದಲ ಚಲನಚಿತ್ರ ಸತಿ ಸುಲೋಚನ ನಾಯಕ ಸುಬ್ಬಯ್ಯ ನಾಯ್ಡು, ಮೇರು ನಟ ಡಾ.ರಾಜ್‌ಕುಮಾರ್ ಸೇರಿದಂತೆ ಹಿರಿಯ ನಟ ನಟಿಯರು, ಸಂಗೀತ ನಿರ್ದೇಶಕರು, ತಂತ್ರಜ್ಙರು, ಹಿನ್ನೆಲೆ ಗಾಯಕರೇ ಮುಂತಾದವರ ಬಗ್ಗೆ ಪರಿಚಯ ಲೇಖನಗಳನ್ನು ಈ ಪುಸ್ತಕ ಒಳಗೊಂಡಿದೆ. ಖ್ಯಾತ ನಿದೇ೯ಶಕ ಗಿರೀಶ್ ಕಾಸರವಳ್ಳಿ ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಪುಸ್ತಕವನ್ನು ಹಿರಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಬಿಡುಗಡೆ ಮಾಡಿದರು. "ಯಾವುದೇ ಉತ್ಪ್ರೇಕ್ಷೆ ಇಲ್ ...

                                               

ಕೇಟ್‌ ವಿನ್ಸ್ಲೆಟ್‌

ಕೇಟ್‌ ಎಲಿಜಬೆತ್ ವಿನ್ಸ್ಲೆಟ್‌ ಒಬ್ಬ ಇಂಗ್ಲಿಷ್‌ ನಟಿ ಮತ್ತು ಸಾಂದರ್ಭಿಕ ಗಾಯಕಿ. ಕೇಟ್‌ ವಿನ್ಸ್ಲೆಟ್‌ ಅವರು ತಮ್ಮ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಪೀಟರ್‌ ಜ್ಯಾಕ್ಸನ್‌ರವರ ಹೆವೆನ್ಲಿ ಕ್ರಿಯೇಚರ್ಸ್‌ ನಲ್ಲಿ ನಟಿಸುವುದರೊಂದಿಗೆ ಚಿತ್ರರಂಗಕ್ಕೆ ಕಾಲಿರಿಸಿದರು. ಆಂಗ್‌ ಲೀ ನಿರ್ದೇಶನದ, 1995ಲ್ಲಿ ತೆರೆಕಂಡ ಸೆನ್ಸ್‌ ಅಂಡ್‌ ಸೆನ್ಸಿಬಿಲಿಟಿ ಕಾದಂಬರಿ ಆಧರಿತ ಚಲನಚಿತ್ರದಲ್ಲಿ ಪೋಷಕ ಪಾತ್ರ; ಹಾಗೂ 1997ರಲ್ಲಿ ತೆರೆಕಂಡ ಟೈಟಾನಿಕ್‌ ಚಲನಚಿತ್ರದಲ್ಲಿ ರೋಸ್‌ ಡಿವಿಟ್‌ ಬಕೇಟರ್‌ ಪಾತ್ರ ನಿರ್ವಹಿಸಿ ಕೇಟ್‌ ವಿನ್ಸ್ಲೆಟ್‌ ಖ್ಯಾತಿಯನ್ನು ಪಡೆದರು. ಐರಿಷ್‌ ಮರ್ಡಾಕ್‌ರ ಜೀವನಾಧಾರಿತ ಐರಿಸ್‌ 2001, ನವ್ಯ-ಅತಿವಾಸ್ತವಿಕತೆಯ ನಿಯೊಸರ್ರಿಯಲ್‌ ಕುರಿತಾದ ಇಟರ್ನಲ್‌ ಸನ್‌ಷೈನ್‌ ಆಫ್ ದಿ ಸ್ಪಾಟ್ಲೆಸ್‌ ಮೈಂಡ್‌ 2003, ಟಾಡ್‌ ಫೀಲ್ಡ್‌ರ 2006ರ ...

                                               

ರಾಣಿ ಮುಖರ್ಜಿ

ರಾಣಿ ಮುಖರ್ಜಿ ಜನನ 21 ಮಾರ್ಚ್ 1978; ರಾಣಿ ಮುಖರ್ಜಿ ಯು ಹಿಂದಿ ಚಲನಚಿತ್ರಗಳಲ್ಲಿ ನಿರತರಾಗಿರುವ ಭಾರತದ ಚಿತ್ರನಟಿ. ರಾಜಾ ಕಿ ಆಯೇಗಿ ಬಾರಾತ್ 1997 ರಲ್ಲಿ ತಮ್ಮ ನಟನೆಯ ಪ್ರಥಮ ಪ್ರವೇಶ ಮಾಡಿದ, ಮುಖರ್ಜಿಯವರು ಇಲ್ಲಿಯವರೆಗೂ ತಮ್ಮ ಅತ್ಯಂತ ದೋಡ್ಡ ವಾಣಿಜ್ಯದ ಯಶಸ್ಸನ್ನು ಕರಣ್ ಜೋಹರ್ ರವರ ಪ್ರೇಮ ಪ್ರಕರಣದ ಕುಚ್ ಕುಚ್ ಹೋತಾ ಹೈ ನಲ್ಲಿ 1990 ತಮ್ಮ ನಟನೆಯ ಮೊದಲ ಅಧ್ಬುತ ಜಯವನ್ನು ಕಂಡರು, ಹಾಗೂ ಆ ಚಿತ್ರದಲ್ಲಿ ತಮ್ಮ ಅಭಿನಯಕ್ಕಾಗಿ ಫಿಲ್ಮ್ ಫೇರ್ ನ ಅತ್ಯಂತ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಪಡೆದರು. ಅವರು ನಂತರ ಅನೇಕ ಚಲನಚಿತ್ರಗಳಲ್ಲಿ ನಟಿಸಿದರು, ಆದರೆ ಅವುಗಳಲ್ಲಿ ಹೆಚ್ಚು ನಿರೀಕ್ಷೆಯ ಮಟ್ಟವನ್ನು ಮುಟ್ಟಲಿಲ್ಲ. ಆದರೆ 2002 ರಲ್ಲಿ ಚಲನಚಿತ್ರ ವಿಮರ್ಶಕರಿಂದ ವಿಮರ್ಶಾತ್ಮಕವಾಗಿ ಜಯಶಾಲಿಯಾದ ಚಿತ್ರ ಸಾಥಿಯಾ ದಲ್ಲಿ ತಮ್ಮ ನಟ ...

                                               

ಉದಯಚಂದ್ರಿಕಾ

೧೯೬೬ರಲ್ಲಿ ತೆರೆಕಂಡ ವೈ.ಆರ್.ಸ್ವಾಮಿ ನಿರ್ದೇಶನದ ಯಶಸ್ವೀ ಜನಪದ ಚಿತ್ರವಾದ ಕಠಾರಿವೀರದಲ್ಲಿ ರಾಜ್ ಕುಮಾರ್‍ ಗೆ ನಾಯಕಿಯಾಗಿ ವೃತ್ತಿ ಆರಂಭಿಸಿದ ಉದಯಚಂದ್ರಿಕಾ ಸುಮಾರು ಒಂದೂವರೆ ದಶಕಗಳ ಕಾಲ ನಾಯಕಿ, ಪೋಷಕ ನಟಿ, ನೃತ್ಯಗಾರ್ತಿ, ನಿರ್ಮಾಪಕಿ ಹೀಗೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.

                                               

ಎಂ.ಎನ್.ಲಕ್ಶ್ಮಿದೇವಿ

ಎಂ.ಎನ್.ಲಕ್ಷ್ಮಿದೇವಿ ಕನ್ನಡ ಚಿತ್ರರಂಗ ಕಂಡ ಅದ್ಬುತ ಹಾಸ್ಯ ನಟಿ. ಹಾಸ್ಯ ಚಕ್ರವರ್ತಿ ನರಸಿಂಹ ರಾಜು, ಬಾಲಕೃಷ್ಣರಂತ ಮಹಾನ್ ಕಲಾವಿದರೊಂದಿಗೆ ಸರಿಸಾಟಿಯಾಗಿ ನಟಿಸಿ ಜನಮನ್ನನೆ ಪಡೆದ ನಟಿ.

ಖುಷ್ಬೂ
                                               

ಖುಷ್ಬೂ

ಖುಷ್ಬೂ ಸುಂದರ್ ಭಾರತದ ಒಬ್ಬ ನಟಿ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

                                               

ಪದ್ಮಾ ಕುಮಟಾ

ಪದ್ಮಾ ಕುಮಟಾ ರವರು ಚಲನಚಿತ್ರ ಮತ್ತು ಕಿರುತೆರೆ ಯಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಬಿ.ವಿ.ಕಾರಂತರ ೧೯೭೫ ರಲ್ಲಿ ತೆರೆಕಂಡಿದ್ದ ಚೋಮನದುಡಿ ಚಿತ್ರದಲ್ಲಿ ಅದ್ಬುತವಾಗಿ ನಟಿಸಿದ್ದಾರೆ. ಪದ್ಮಾ ಕುಮುಟಾ ನಿರ್ಮಿಸಿದ ಮಕ್ಕಳ ಚಿತ್ರ "ಅರಿವು" ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗಳು ಲಭಿಸಿದವು.

                                               

ಪದ್ಮಾ ವಾಸಂತಿ

ಕನ್ನಡ ಚಿತ್ರರಂಗದ ನಾಯಕಿಯರಲ್ಲಿ ಒಬ್ಬರು.ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಾನಸ ಸರೋವರ ಚಲನಚಿತ್ರದಲ್ಲಿ ಇವರ ನಟನೆ ಜನಮೆಚ್ಚುಗೆ ಪಡೆಯಿತು. ಈಗ ಕಿರುತೆರೆಯಲ್ಲಿ ಹೆಚ್ಚಾಗಿ ಅಭಿನಯಿಸುತ್ತಿದ್ದಾರೆ. ಕನ್ಯಾದಾನ ಇವರ ಜನಪ್ರಿಯ ಕಿರುತೆರೆಯ ಧಾರಾವಾಹಿಗಳಲ್ಲಿ ಒಂದಾಗಿದೆ.

                                               

ಭಾರ್ಗವಿ ನಾರಾಯಣ್

ಭಾರ್ಗವಿ ನಾರಾಯಣ್ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ಚಲನಚಿತ್ರದ ನಟಿ ಮತ್ತು ಕರ್ನಾಟಕದ, ರಂಗಭೂಮಿಯ ಕಲಾವಿದೆ. ಭಾರ್ಗವಿ ನಾರಾಯಣ್ ಅವರ ಕೆಲವು ಪ್ರಸಿದ್ಧ ಚಿತ್ರಗಳು ನಟಿಸಿದ್ದಾರೆ.ಎರಡು ಕನಸು, ಪಲ್ಲವಿ ಅನುಪಲ್ಲವಿ ಮತ್ತು ಬಾ ನಲ್ಲೆ ಮಧುಚಂದ್ರಕೆ ಹಾಗೂ ಮು೦ತಾದವು. ಅ೦ತಿಮ ಘಟ್ಟ ೧೯೮೭ ಜ೦ಬೂ ಸವಾರಿ ೧೯೯೩ ಕಾದ ಬೆಳದಿ೦ಗಳು ೨೦೦೩ ಪಲ್ಲವಿ ೧೯೭೬ ಮುಯ್ಯಿ ೧೯೭೯ ಇದೊಳ್ಳೆ ರಾಮಾಯಣ ೨೦೧೬

                                               

ಮಹಾಲಕ್ಷ್ಮಿ (ನಟಿ)

ಮಹಾಲಕ್ಷ್ಮಿ ೧೯೮೦ ಮತ್ತು ೧೯೯೦ರ ದಶಕದ ಕನ್ನಡ ಚಿತ್ರರಂಗದ ಹೆಸರಾಂತ ನಟಿ. ಇವರು ತಮಿಳು ಚಿತ್ರರಂಗದ ತಾರಾ ಜೋಡಿ ಎ.ವಿ.ಎಂ.ರಾಜನ್ ಮತ್ತು ಪುಷ್ಪಲತಾ ಅವರ ಮಗಳು. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲು ಈಕೆ ನಟಿಸಿದ್ದಾರೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್, ಟೈಗರ್ ಪ್ರಭಾಕರ್, ರವಿಚಂದ್ರನ್, ಶಶಿಕುಮಾರ್ ಮುಂತಾದವರೊಂದಿಗೆ ನಾಯಕಿಯಾಗಿ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಪ್ರಮುಖ ಚಿತ್ರಗಳೆಂದರೆ ಸ್ವರ್ಣ ಸಂಸಾರ, ದುರ್ಗಾಷ್ಟಮಿ, ಹೆಂಡ್ತಿಗೇಳ್ಬೇಡಿ, ಸಂಸಾರ ನೌಕೆ, ಸ್ವಾಭಿಮಾನ, ಜಯಸಿಂಹ ಮತ್ತು ಬಾರೆ ನನ್ನ ಮುದ್ದಿನ ರಾಣಿ.

ಮಿನ್ನಿ ಡ್ರೈವರ್
                                               

ಮಿನ್ನಿ ಡ್ರೈವರ್

ಮಿನ್ನಿ ಡ್ರೈವರ್: ಬ್ರಿಟಿಷ್ ಚಿತ್ರನಟಿಯರಲ್ಲೊಬ್ಬರು. ಗುಡ್‍ವಿಲ್ ಹಂಟಿಂಗ್ ಎಂಬ ಚಲನಚಿತ್ರದ ನಟನೆಗೆ ೧೯೯೭ರಲ್ಲಿ ಅಕಾಡೆಮಿ ಪ್ರಶಸ್ತಿಗೆ ಈಕೆ ನೇಮಕವಾಗಿದ್ದರು.

                                               

ರೂಪಾದೇವಿ

ರೂಪಾದೇವಿ ೮೦ರ ದಶಕದ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ಇವರು ೫೦ರ ದಶಕದ ಜನಪ್ರಿಯ ತಾರೆ ಆದವಾನಿ ಲಕ್ಷ್ಮಿದೇವಿ ಯವರ ಪುತ್ರಿ. ಕನ್ನಡದಲ್ಲಿ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಅನಂತ್ ನಾಗ್, ಶಂಕರ್ ನಾಗ್ ಮುಂತಾದ ಎಲ್ಲ ನಾಯಕರೊಂದಿಗೆ ನಟಿಸಿರುವ ಇವರ ಪ್ರಮುಖ ಚಿತ್ರಗಳೆಂದರೆ ಕಮಲ, ಅವಳ ಅಂತರಂಗ, ಸಮಯದ ಗೊಂಬೆ, ಹಾಲುಜೇನು, ತ್ರಿಶೂಲ, ಮರಳಿ ಗೂಡಿಗೆ ಮತ್ತು ಬಂಧನ.

                                               

ವಿಜಯಲಲಿತ

ವಿಜಯಲಲಿತ ೧೯೬೦ ಮತ್ತು ೧೯೭೦ರ ದಶಕದ ದಕ್ಶಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮಾತ್ರವಲ್ಲದೆ ಕೆಲವು ಹಿಂದಿ ಚಿತ್ರಗಳಲ್ಲು ನಟಿಸಿದ್ದಾರೆ. ದಕ್ಷಿಣ ಭಾರತದ ಪ್ರಖ್ಯಾತ ನಟಿ ವಿಜಯಶಾಂತಿ ಗೆ ಇವರು ಚಿಕ್ಕಮ್ಮ.

                                               

ಶಿವರಂಜಿನಿ

ಶಿವರಂಜಿನಿ ೧೯೯೦ರ ದಶಕದ ಕನ್ನಡದ ಜನಪ್ರಿಯ ಸಿನಿಮಾ ನಟಿ. ಕೆ.ಆರ್.ಶಾಂತಾರಮ್ ನಿರ್ದೇಶನದ ಹೃದಯ ಸಾಮ್ರಾಜ್ಯ ಚಿತ್ರದ ಮೂಲಕ ಕನ್ನಡದ ಬೆಳ್ಳಿತೆರೆಗೆ ಪರಿಚಿತರಾದ್ ಇವರು ಸುಂದರಕಾಂಡ, ಇದುವೇ ಜೀವನ, ಕೆರಳಿದ ಕೇಸರಿ ಮತ್ತು ಸಂಘರ್ಷ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ವಿಷ್ಣುವರ್ಧನ್, ಶಂಕರ್ ನಾಗ್, ಶಶಿಕುಮಾರ್, ದೇವರಾಜ್‌ ಮುಂತಾದ ನಟರೊಂದಿಗೆ ಅಭಿನಯಿಸಿದ್ದಾರೆ.

                                               

ಸಿತಾರ

ಸಿತಾರ ೧೯೯೦ರ ದಶಕದ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ಕನ್ನಡ ಮತ್ತು ಮಲಯಾಳಂ ಭಾಷೆಯ ಅನೇಕ ಯಶಸ್ವೀ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಇವರು ತಮಿಳು ಮತ್ತು ತೆಲುಗಿನ ಕೆಲವು ಚಿತ್ರಗಳಲ್ಲು ನಟಿಸಿದ್ದಾರೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →