Back

ⓘ ಚಿತ್ರರಂಗ - ಪಂಜಾಬಿ ಚಿತ್ರರಂಗ, ರಮೇಶ್, ಪ್ರತಿಮಾದೇವಿ, ಬಿ.ಆರ್.ಪಂತುಲು, ತುಳು ಚಿತ್ರರಂಗ, ಉದಯಕುಮಾರ್, ವಿಜಯಲಕ್ಷ್ಮಿ, ಎ ಟಿ ರಘು, ಜಾರ್ಜ್ ಲ್ಯೂಕಾಸ್, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ..                                               

ಪಂಜಾಬಿ ಚಿತ್ರರಂಗ

ಸಾಮಾನ್ಯವಾಗಿ ಪಾಲಿವುಡ್ ಎಂದು ಗುರುತಿಸಲ್ಪಡುವ ಪಂಜಾಬಿ ಚಿತ್ರರಂಗವು ಭಾರತ ಮತ್ತು ಪಾಕಿಸ್ತಾನ ದೇಶಗಳ ಪಂಜಾಬ್ ರಾಜ್ಯಗಳಲ್ಲಿ ಕೇಂದ್ರಿತವಾಗಿದೆ. ೨೦ನೇ ಶತಮಾನದಲ್ಲಿ ಪಾಕಿಸ್ತಾನದ ಪಂಜಾಬಿ ಚಿತ್ರರಂಗ ಜನಪ್ರಿಯತೆಯ ಉತ್ತುಂಗದಲ್ಲಿದ್ದರೆ ೨೧ನೆಯ ಶತಮಾನದಲ್ಲಿ ಭಾರತೀಯ ಪಂಜಾಬಿ ಚಿತ್ರರಂಗವು ತನ್ನ ಉತ್ತಮ ಗುಣಮಟ್ಟದ ಚಿತ್ರಗಳ ತಯಾರಿಕೆಯಿಂದ ಜನಪ್ರಿಯವಾಗಿದೆ. ೭೦ರ ದಶಕದಲ್ಲಿ ವರ್ಷಂಪ್ರತಿ ಬಿಡುಗಡೆಗೊಂಡ ಪಂಜಾಬಿ ಚಲನಚಿತ್ರಗಳ ಸರಾಸರಿ ೯ರಷ್ಟಿದ್ದರೆ ೮೦ರ ದಶಕದಲ್ಲಿ ಸರಾಸರಿ ೮ಕ್ಕೆ ಕುಸಿಯಿತು. ೯೦ರ ದಶಕದಲ್ಲಂತೂ ವರ್ಷಂಪ್ರತಿ ಬಿಡುಗಡೆಗೊಂಡ ಚಲನಚಿತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವುದರ ಮೂಲಕ ಪಂಜಾಬಿ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ೨೦೦೦ದ ನಂತರ ಪಂಜಾಬ್ ಸರ್ಕಾರ ಮತ್ತು ಚಿತ್ರರಂಗದ ಪಂಡಿತರ ಸಂಘಟಿತ ಪ್ರಯತ್ನದಿಂದ ಪ ...

                                               

ರಮೇಶ್

ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲೊಬ್ಬರು. ಕೆ.ಬಾಲಚಂದರ್ ನಿರ್ದೇಶನದ ಸುಂದರ ಸ್ವಪ್ನಗಳು ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಅದಕ್ಕೆ ಮೊದಲು ಬೆಂಗಳೂರು ದೂರದರ್ಶನದಲ್ಲಿ ಪರಿಚಯ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಅನೇಕ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ, ಯಶಸ್ವಿಯಾಗಿದ್ದಾರೆ. ರಾಮ ಶಾಮ ಭಾಮ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೂಮಳೆ ಮತ್ತು ಅಮೃತಧಾರೆ ಚಿತ್ರಕಥೆಗೆ ನೆರವು ನೀಡಿದ್ದಾರೆ. ತಮಿಳು ಚಿತ್ರರಂಗದಲ್ಲಿಯೂ ರಮೇಶ್ ಅರವಿಂದ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಉತ್ತಮ ವಿಲನ್ ಚಿತ್ರದ ಮೂಲಕ ತಮಿಳು ಚಿತ್ರ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

                                               

ಪ್ರತಿಮಾದೇವಿ

ಪ್ರತಿಮಾದೇವಿ, ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ನಟಿ. ಇವರು ೧೯೪೭ರಲ್ಲಿ ಕೃಷ್ಣಲೀಲಾ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಚಿತ್ರಮಂದಿರಗಳಲ್ಲಿ ೧೦೦ ದಿನಗಳನ್ನು ಪೂರೈಸಿದ ಮೊದಲ ಕನ್ನಡ ಚಿತ್ರ ೧೯೫೧ರಲ್ಲಿ ಬಿಡುಗಡೆಯಾದ ಜಗನ್ಮೋಹಿನಿಯಲ್ಲಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದರು.

                                               

ಬಿ.ಆರ್.ಪಂತುಲು

ಬಡಗೂರು ರಾಮಕೃಷ್ಣ ಪಂತುಲು ಅವರು ಜನಿಸಿದ್ದು ೧೯೧೧ ಜುಲೈ ೨೮ರಂದು ಕರ್ನಾಟಕ-ಆಂಧ್ರಪ್ರದೇಶದ ಗಡಿಯಲ್ಲಿನ ಬಂಗಾರ ಪೇಟೆಯ ಬಳಿ ಇರುವ ಕುಪ್ಪಂನಿಂದ ಹನ್ನೊಂದು ಕಿಲೋಮೀಟರ್ ದೂರದ ಕುಗ್ರಾಮ ಬಡಗೂರಿನಲ್ಲಿ. ಗಡಿ ಪ್ರದೇಶದಲ್ಲಿರುವ ಈ ಊರಿನಲ್ಲಿ ಕನ್ನಡದಂತೆ ತೆಲುಗು,ತಮಿಳು ಕೂಡ ಮುಖ್ಯ ಭಾಷೆಗಳಾಗಿದ್ದವು.ಬಾಲ್ಯದಿಂದಲೀ ಪಂತುಲು ಅವರಿಗೆ ಮೂರು ಭಾಷೆಗಳ ಒಡನಾಟ ಬರಲು ಕಾರಣವಾಯಿತು.ಪಂತುಲು ಅವರ ತಂದೆ ವೆಂಕಟಾಚಲಯ್ಯನವರಿಗೆ ಕಿರಿಯವರಾದ ಪಂತುಲು ಸೇರಿದಂತೆ ಐವರು ಮಕ್ಕಳು,ಮೂರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು.ಪಂತುಲು ಅವರ ತಂದೆ ಸಂಗೀತ,ಸಾಹಿತ್ಯ ಮತ್ತು ನೃತ್ಯಗಳಲ್ಲಿ ಉತ್ತಮ ಅಭಿರುಚಿ ಪಡೆದಿದ್ದರು.ಆಗಾಗ ಊರಿನಲ್ಲಿ ನಾಟಕಗಳನ್ನು ಆಡಿಸುತಿದ್ದರು.ತಂದೆಯ ಜೊತೆ ಮಗನೂ ಆಗಾಗ ರಂಗ ತರಬೇತಿ ನೋಡಲು ಹೋಗುತ್ತಿದ್ದನು.ಚಂದ್ರಹಾಸನ ಪಾತ್ರ ನೀಡುವ ಮ ...

                                               

ತುಳು ಚಿತ್ರರಂಗ

ತುಳು ಚಿತ್ರರಂಗ ಭಾರತೀಯ ಸಿನಿಮಾದ ಒಂದು ಭಾಗವಾಗಿದೆ.ಇದು ತುಳು ಭಾಷೆಯಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡುತ್ತದೆ. ತುಳು ಚಲನಚಿತ್ರೋದ್ಯಮವು ವಾರ್ಷಿಕವಾಗಿ 5 ರಿಂದ 7 ಚಲನಚಿತ್ರಗಳು ಬಿಡುಗಡೆಯಾಗುತ್ತವೆ.

                                               

ಉದಯಕುಮಾರ್

"ಕಲಾ ಕೇಸರಿ" ಮತ್ತು "ನಟ ಸಾಮ್ರಾಟ್" ಎಂದು ಪ್ರಸಿದ್ಧರಾಗಿದ್ದ ಉದಯ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭೆ. ರಾಜಕುಮಾರ್, ಕಲ್ಯಾಣಕುಮಾರ್ ಮತ್ತು ಉದಯಕುಮಾರ್, ಹೀಗೆ ಕುಮಾರ ತ್ರಯರಿದ್ದ ಕಾಲ, ಕನ್ನಡ ಚಿತ್ರರಂಗದಲ್ಲಿ ಅನೇಕ ಉತ್ತಮ ಚಿತ್ರಗಳು ನಿರ್ಮಾಣವಾದವು.

ವಿಜಯಲಕ್ಷ್ಮಿ
                                               

ವಿಜಯಲಕ್ಷ್ಮಿ

ವಿಜಯಲಕ್ಷ್ಮಿ - ಕನ್ನಡ ಚಿತ್ರರಂಗದ ನಾಯಕಿಯರಲ್ಲೊಬ್ಬರು. ಕಾಲೇಜ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ವಿಜಯಲಕ್ಷ್ಮಿಯವರ ಮೊದಲ ಚಲನಚಿತ್ರ ನಾಗಾಭರಣ ನಿರ್ದೇಶನದ ನಾಗಮಂಡಲ. ಅರುಣೋದಯ, ಜೋಗುಳ, ಹಬ್ಬ, ಜೋಡಿಹಕ್ಕಿ ಮುಂತಾದ ಮೂವತ್ತು ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಉದಯ ಟಿವಿ ಕಿರುತೆರೆ ವಾಹಿನಿಯಲ್ಲಿನ ಬಂಗಾರದ ಬೇಟೆ ಧಾರಾವಾಹಿ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿದ್ದಾರೆ.

                                               

ಎ ಟಿ ರಘು

ಎ ಟಿ ರಘು ಕನ್ನಡ ಚಲನಚಿತ್ರ ನಿರ್ದೇಶಕರು. ಇವರು ನಿರ್ಮಾಪಕರೂ ನಟರೂ ಹೌದು. ೧೯೮೦ರಿಂದ ೧೯೯೮ರವರೆಗೆ ಸುಮಾರು ಇಪ್ಪತ್ತೈದಕ್ಕಿಂತಲೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ ಚಿತ್ರಗಳಲ್ಲಿ ಹೆಚ್ಚಿನವುಗಳ ನಾಯಕ ನಟ ಅಂಬರೀಷ್ ಆಗಿದ್ದಾರೆ. ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ಕಂಡಿವೆ. ಆ ದೃಷ್ಟಿಯಲ್ಲಿ ಇವರೊಬ್ಬ ಜನಪ್ರಿಯ ಹಾಗೂ ಜಯಶೀಲ ನಿರ್ದೇಶಕರು.

ಜಾರ್ಜ್ ಲ್ಯೂಕಾಸ್
                                               

ಜಾರ್ಜ್ ಲ್ಯೂಕಾಸ್

ಜಾರ್ಜ್ ಲ್ಯೂಕಾಸ್ ಅಮೇರಿಕಾ ದೇಶದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು, ಲೇಖಕರು. ಸುಪ್ರಸಿದ್ಧ ಸ್ಟಾರ್ ವಾರ್ಸ್ ಚಿತ್ರಗಳ ನಿರ್ಮಾಪಕ ನಿರ್ದೇಶಕರಾದ ಇವರು ಅಮೇರಿಕಾದ ಹಲವು ಗಣ್ಯರಲ್ಲೊಬ್ಬರು. ಲ್ಯೂಕಾಸ್ ಫಿಲ್ಮ್ಸ್ ಲಿಮಿಟೆಡ್ ಸಂಸ್ಥಾಪಕರೂ ಹೌದು.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
                                               

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ - ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ, ವಾರ್ಷಿಕ ಪ್ರಶಸ್ತಿ. ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದ ದಾದಾಸಾಹೇಬ್ ಫಾಲ್ಕೆ, ಯವರ, ಜನ್ಮ ಶತಾಬ್ದಿಯ ವರ್ಷವಾದ ೧೯೬೯ರಲ್ಲಿ ಈ ಪ್ರಶಸ್ತಿಯನ್ನು ನೀಡುವ ಪರಂಪರೆ, ಉಗಮಗೊಂಡಿತು. ಪ್ರತಿ ವರ್ಷದ ಪ್ರಶಸ್ತಿಯನ್ನು ಅದರ ಮುಂದಿನ ವರ್ಷದ ಕೊನೆಯಲ್ಲಿ ನಡೆಯುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದ ಸಂದರ್ಭದಲ್ಲಿ ನೀಡಲಾಗುತ್ತದೆ.

ಮನೋಜ್ ನೈಟ್ ಶ್ಯಾಮಲನ್
                                               

ಮನೋಜ್ ನೈಟ್ ಶ್ಯಾಮಲನ್

ಮನೋಜ್ ಶ್ಯಾಮಲನ್ ಆಂಗ್ಲ ಚಿತ್ರಗಳ ನಿರ್ದೇಶಕ, ನಟ ಮತ್ತು ನಿರ್ಮಾಪಕ. ಮನೋಜ್ ಶ್ಯಾಮಲನ್ ಭಾರತದ ಪಾಂಡಿಚೆರಿಯಲ್ಲಿ ಆಗಸ್ಟ್ ೦೬, ೧೯೭೦ರಂದು ಜನಿಸದರು. ಈಗಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ. ಇವರ ಪೂರ್ಣ ಹೆಸರು ಮನೋಜ್ ನೆಲ್ಲಿಯಟ್ಟು ಶ್ಯಾಮಲನ್. ಇವರು ನಿರ್ದೇಶಿಸಿದ ದಿ ಸಿಕ್ಸ್ತ್ ಸೆನ್ಸ್ ಆಂಗ್ಲ ಚಿತ್ರ ವಿಶ್ವದೆಲ್ಲೆಡೆ ಪ್ರದರ್ಶನ ಕಂಡು ಪ್ರಸಿದ್ಧವಾಗಿತ್ತು. ಅನ್ ಬ್ರೇಕಬಲ್, ಸೈನ್ಸ್, ದಿ ವಿಲೇಜ್, ಲೇಡಿ ಇನ್ ದಿ ವಾಟರ್ ಮನೋಜ್ ನಿರ್ದೇಶಿಸಿದ ಇತರ ಚಿತ್ರಗಳು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →